Tag: ಪ್ರಶಾಂತ್

  • ರೈತನಿಗೆ ಅಪಮಾನ ಪ್ರಕರಣ – ಬೆಂಗಳೂರಿನ ಜಿ.ಟಿ ಮಾಲ್ ಬಂದ್!

    ರೈತನಿಗೆ ಅಪಮಾನ ಪ್ರಕರಣ – ಬೆಂಗಳೂರಿನ ಜಿ.ಟಿ ಮಾಲ್ ಬಂದ್!

    – 1.70 ಕೋಟಿ ರೂ. ತೆರಿಗೆ ಬಾಕಿ – ಬಿಬಿಎಂಪಿ ನೋಟಿಸ್‌ ಬಗ್ಗೆ ಮಾಲೀಕರು ಹೇಳಿದ್ದೇನು?
    – ಇದರಲ್ಲಿ ರಾಜಕೀಯವಿಲ್ಲ: ಮಾಲೀಕ ಪ್ರಶಾಂತ್‌

    ಬೆಂಗಳೂರು: ರೈತರೊಬ್ಬರಿಗೆ (Farmer) ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸ್ವಯಂ ಪ್ರೇರಿತವಾಗಿ ಜಿ.ಟಿ ಮಾಲ್ (GT Mall) ಬಂದ್ ಮಾಡುವ ನಿರ್ಧಾರವನ್ನು ಮಾಲೀಕ ಪ್ರಶಾಂತ್ ಕೈಗೊಂಡಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆಯಷ್ಟೇ ಹಾವೇರಿ ಮೂಲದ ರೈತ ಫಕೀರಪ್ಪ ಅವರಿಗೆ ಅಪಮಾನ ಮಾಡಿರುವ ಘಟನೆ ಬೆಳಕಿಗೆ ಬಂದಿತ್ತು. ಪಂಚೆ ಧರಿಸಿ ಬಂದಿದ್ದಕ್ಕೆ ಸಿಬ್ಬಂದಿ ಮಾಲ್ ಒಳಗೇ ಬಿಡದೇ ಅಪಮಾನ ಮಾಡಿದ್ದರು. ಈ ಪ್ರಕರಣ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ವಿಧಾನಸಭೆಯ ಅಧಿವೇಶನದಲ್ಲೂ ಸಚಿವ ಬೈರತಿ ಸುರೇಶ್ ಅವರು ಮಾಲ್ ಮುಚ್ಚಿಸುತ್ತೇವೆ ಎಂದು ಪ್ರಸ್ತಾಪಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಮಾಲೀಕರು ಸ್ವಯಂಪ್ರೇರಿತವಾಗಿ ಮಾಲ್ ಬಂದ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಇದನ್ನೂ ಓದಿ: ಮದ್ಯದ ಅಂಗಡಿಗೆ ಪರವಾನಗಿ ನೀಡಲು ಅಧಿಕಾರಿಗಳು ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದಾರೆ – ಕಾಂಗ್ರೆಸ್‌ ಸದಸ್ಯ ಬಾಂಬ್‌!

    ಈ ಕುರಿತು `ಪಬ್ಲಿಕ್ ಟಿವಿ’ (Public TV) ಜೊತೆಗೆ ಮಾತನಾಡಿದ ಜಿ.ಟಿ ಮಾಲ್ ಮಾಲೀಕ ಪ್ರಶಾಂತ್ (Prashanth), ನಮ್ಮ ಮಾಲ್‌ನಲ್ಲಿ ಆಗಬಾರದಂತಹ ಘಟನೆ ಆಗಿದೆ. ಅದು ಹೊಸ ಸಿಬ್ಬಂದಿಯಿಂದ ಆಗಿದೆ. ನಾನು ಮಾಲ್ ಮಾಲೀಕನಾಗಿ ಆ ಘಟನೆ ಬಗ್ಗೆ ಕ್ಷಮೆ ಕೇಳುತ್ತೇನೆ. ಇದನ್ನ 2 ದಿನಗಳ ಹಿಂದೆಯೇ ಕ್ಷಮೆ ಕೇಳಬೇಕಾಗಿತ್ತು. ನಮ್ಮ ತಂದೆ ಅನಾರೋಗ್ಯದ ವಿಚಾರವಾಗಿ ಸ್ಪಲ್ವ ಆಸ್ಪತ್ರೆಯಲ್ಲಿದ್ದೆವು. ರೈತ ಫಕೀರಪ್ಪ ಅವ್ರಿಗೆ ನಮ್ಮಿಂದ ಆಗಿರೋದ ತಪ್ಪು. ನನ್ನ ತಂದೆ ಕೂಡ ಫಕೀರಪ್ಪ ಜೊತೆಗೆ ಫೋನ್ ಕಾಲ್ ಮಾಡಿ ಕ್ಷಮೆ ಕೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: 7 ದಿನಗಳ ಕಾಲ ಜಿ.ಟಿ ಮಾಲ್ ಮುಚ್ಚಿಸುತ್ತೇವೆ: ವಿಧಾನಸಭೆಯಲ್ಲಿ ಸಚಿವ ಬೈರತಿ ಸುರೇಶ್ ಘೋಷಣೆ

    1.70 ಕೋಟಿ ತೆರಿಗೆ ಬಾಕಿ:
    ಮುಂದುವರಿದು ಮಾತನಾಡಿದ ಅವರು, ಬಿಬಿಎಂಪಿಯಿಂದ (BBMP) ನೋಟಿಸ್ ಬಂದಿದೆ. ಆದ್ರೆ ಮಾಲ್ ಬಂದ್ ಮಾಡುವಂತೆ ಹೇಳಿಲ್ಲ. ಘಟನೆ ಬಗ್ಗೆ ವರದಿ ನೀಡಿ ಎಂದು ನೀಡಿದ್ದಾರೆ ಎಂದರು. ಇದೇ ವೇಳೆ ಮಾಲ್ ತೆರಿಗೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 1 ವರ್ಷದ ತೆರಿಗೆ ಬಾಕಿಯಿದೆ. 1.70 ಕೋಟಿ ರೂ. ಬಾಕಿ ಇದೆ. ಆದ್ರೆ ತೆರಿಗೆ ವಿಚಾರಕ್ಕೂ ಮಾಲ್ ಬಂದ್ ಮಾಡುತ್ತಿಲ್ಲ. ನಮ್ಮ ಕಡೆಯಿಂದ ತಪ್ಪಾಗಿದೆ, ಹಾಗಾಗಿ ನಾವು ಮಾಲ್ ಕ್ಲೋಸ್ ಮಾಡ್ತಿದ್ದೇವೆ. 24 ಗಂಟೆಗಳಲ್ಲಿ ಉತ್ತರ ನೀಡುವಂತೆ ಹೇಳಿದ್ದಾರೆ. ನಾವು ಇನ್ನೂ ಎರಡ್ಮೂರು ದಿನ ಮಾಲ್ ಕ್ಲೋಸ್ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ನಟ ದರ್ಶನ್ & ಗ್ಯಾಂಗ್‌ಗೆ ಆ.1ರ ವರೆಗೆ ಜೈಲೇ ಗತಿ – ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ

    ಇದರಲ್ಲಿ ರಾಜಕೀಯ ಇಲ್ಲ:
    ಮಾಲ್ ಬಂದ್ ಮಾಡುವ ವಿಚಾರದಲ್ಲಿ ಯಾವುದೇ ರಾಜಕೀಯ ನಡೆದಿಲ್ಲ. ನಮ್ಮ ಕಡೆಯಿಂದ ತಪ್ಪಾಗಿದೆ. ಫಕೀರಪ್ಪ ಅವ್ರಿಗೆ ಆಗಿರೋದಕ್ಕೆ ನೈತಿಕ ಹೊಣೆ ನಮ್ಮದೇ. ಮಾಲ್ ಎಷ್ಟು ದಿನ ಬಂದ್ ಆಗುತ್ತೆ ಗೊತ್ತಿಲ್ಲ. ಸೆಷನ್‌ನಲ್ಲಿ 7 ದಿನ ಬಂದ್ ಮಾಡುತ್ತೇವೆ ಅಂತ ಹೇಳಿದ್ದಾರೆ. ಗುರುವಾರ ಮಧ್ಯಾಹ್ನದ ಬಳಿಕವೇ ನಾವು ಈ ನಿರ್ಧಾರ ಕೈಗೊಂಡಿರೋದು, ಮಾಲ್ 7 ದಿನ ಬಂದ್ ಆಗಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Valmiki Corporation Scam | ಮಾಜಿ ಸಚಿವ ನಾಗೇಂದ್ರಗೆ ಮತ್ತೆ 5 ದಿನ ಇಡಿ ಕಸ್ಟಡಿ – ಕೋರ್ಟ್ ಆದೇಶ

  • ಜಿಮ್ ಟ್ರೈನರ್ ಪ್ರಶಾಂತ್ ಮೇಲಿನ ಹಲ್ಲೆ ಬಗ್ಗೆ ಧ್ರುವ ಸರ್ಜಾ ರಿಯಾಕ್ಷನ್

    ಜಿಮ್ ಟ್ರೈನರ್ ಪ್ರಶಾಂತ್ ಮೇಲಿನ ಹಲ್ಲೆ ಬಗ್ಗೆ ಧ್ರುವ ಸರ್ಜಾ ರಿಯಾಕ್ಷನ್

    ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ (Dhruva Sarja) ಜಿಮ್ ಟ್ರೈನರ್ ಪ್ರಶಾಂತ್ (Gym Trainer Prashanth) ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಮೇ 26ರ ರಾತ್ರಿ ಬೆಂಗಳೂರಿನ ಕೆ.ಆರ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಪ್ರಶಾಂತ್ ಮೇಲಿನ ಹಲ್ಲೆ ಬಗ್ಗೆ ಧ್ರುವ ಸರ್ಜಾ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:ತಮಿಳು ನಟ ಸಿಂಬುಗೆ ಜಾನ್ವಿ ಕಪೂರ್ ನಾಯಕಿ

    ಪ್ರಶಾಂತ್ ಪರ್ಸನಲ್ ಏನಿದೆ ಎಂಬುದು ಗೊತ್ತಿಲ್ಲ. ಅವರಿಗೆ ಯಾರೋ ಮಚ್‌ನಲ್ಲಿ ಬಂದು ಹೊಡೆದಿದ್ದಾರೆ. ಯಾರು ಅಂತ ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ಅಕ್ಷಯ್‌ ಆಸ್ಪತ್ರೆಯಲ್ಲಿ ಪ್ರಶಾಂತ್ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಷ್ಕರ್ಮಿ ಮೇಲೆ ಎಫ್‌ಐಆರ್ ಆಗಿದೆ. ಕಾನೂನು ರೀತಿಯಲ್ಲಿ ತನಿಖೆ ನಡೆಯುತ್ತಿದೆ ಎಂದಿದ್ದಾರೆ ಧ್ರುವ. ಇತ್ತೀಚೆಗೆ ಮಂತ್ರಾಲಯಕ್ಕೆ ಹೋಗಿ ಬರುತ್ತೇನೆ ಅಂದ ಕಳಿಸಿಕೊಟ್ಟಿದ್ದೆ, ಮುಡಿನೂ ಕೊಟ್ಟಿದ್ದಾರೆ. ನಿನ್ನೆ ನನ್ನ ಜೊತೆನೇ ಇದ್ದರು ಎಂದಿದ್ದಾರೆ. ಇಂದು ಸಂಜೆಯೊಳಗೆ ಪ್ರಶಾಂತ್ ಡಿಸ್ಜಾರ್ಜ್ ಆಗುತ್ತಾರೆ ಎಂದು ಧ್ರುವ ಸರ್ಜಾ ತಿಳಿಸಿದ್ದಾರೆ.

    ಪ್ರಶಾಂತ್ ನಮ್ ಹುಡುಗ. ಅವರ ಜೊತೆಗಿರುತ್ತೇನೆ. ಸದ್ಯ ಅವರು ಔಟ್ ಆಫ್ ಡೇಂಜರ್ ಎಂದು ಧ್ರುವ ತಿಳಿಸಿದ್ದಾರೆ. ಬೆಂಗಳೂರಲ್ಲಿ ಮಚ್ಚು ಹಿಡ್ಕೊಂಡು ಆರಾಮವಾಗಿ ಓಡಾಡುತ್ತಿದ್ದಾರೆ. ಒಬ್ಬ ಸಿಟಿಜನ್ ಆಗಿ ಹೇಳೋದಾದ್ರೆ ನಮ್ ಫ್ರೆಂಡ್ ಅಷ್ಟೇ ಅಲ್ಲ, ಬೇರೆ ಯಾರಿಗೂ ಹೀಗೆ ಆಗಬಾರದು ಎಂದು ಧ್ರುವ ಸರ್ಜಾ ಮಾತನಾಡಿದ್ದಾರೆ.

    ಅಂದಹಾಗೆ, ಧ್ರುವ ಸರ್ಜಾ ಮನೆಯ ಪಕ್ಕದ ರೋಡ್‌ನಲ್ಲಿ ನಡೆದ ಘಟನೆ ಇದಾಗಿದ್ದು,‌ ಭಾನುವಾರ ರಾತ್ರಿ (ಮೇ 26) ನಂಬರ್ ಪ್ಲೇಟ್ ಇಲ್ಲದ ಗಾಡಿಯಲ್ಲಿ ಮುಖ ಮುಚ್ಚಿಕೊಂಡು ಪ್ರಶಾಂತ್ ಮೇಲೆ ಇಬ್ಬರು ಅಪರಿಚಿತರು ಬೈಕ್ ಮೇಲೆ ಬಂದು ದಾಳಿ ನಡೆಸಿದ್ದಾರೆ.

  • ನಿಶ್ಚಿತಾರ್ಥ ಮಾಡಿಕೊಂಡ ‘ಮಿಲನ’ ಸೀರಿಯಲ್ ನಟ ಪ್ರಶಾಂತ್ ಭಾರದ್ವಾಜ್

    ನಿಶ್ಚಿತಾರ್ಥ ಮಾಡಿಕೊಂಡ ‘ಮಿಲನ’ ಸೀರಿಯಲ್ ನಟ ಪ್ರಶಾಂತ್ ಭಾರದ್ವಾಜ್

    ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಒಬ್ಬೊಬ್ಬರೇ ಕಲಾವಿದರು ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಸರದಿ ‘ಮಿಲನ’ (Milana) ಸೀರಿಯಲ್ ನ ಹೀರೋ ಪ್ರಶಾಂತ್ ಭಾರದ್ವಾಜ್ (Prashant) ಅವರದ್ದು. ಈ ನಟ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದು, ವೈಷ್ಣವಿ (Vaishnavi) ಜೊತೆ ಪ್ರಶಾಂತ್ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಹ್ಯಾಪಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾಗಿದ್ದಾರೆ.

    ಪ್ರಶಾಂತ್ ಭಾರದ್ವಾಜ್ ಅವರು ವೈಷ್ಣವಿ ಮಧುಸೂದನ್ ಅವರ ಜೊತೆ ನಿಶ್ಚಿತಾರ್ಥ (Engaged) ಮಾಡಿಕೊಂಡಿದ್ದು, ವೈಷ್ಣವಿ ಯಾರು ಎಂಬುದು ರಿವೀಲ್ ಆಗಬೇಕಿದೆ. ಅಷ್ಟೇ ಅಲ್ಲದೆ ಇದು ಅರೇಂಜ್ ಮ್ಯಾರೇಜ್? ಅಥವಾ ಲವ್ ಎನ್ನುವ ಬಗ್ಗೆ ಕೂಡ ಮಾಹಿತಿ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಗೆ ಎಲ್ಲರೂ ಶುಭಕೋರುತ್ತಿದ್ದಾರೆ. ಪ್ರಶಾಂತ್ ಜೊತೆ ಮದುವೆ ಆಗುತ್ತಿರುವ ಹುಡುಗಿಯ ಪರಿಚಯವನ್ನು ಕೇಳಿದ್ದಾರೆ. ಇದನ್ನೂ ಓದಿ:Bigg Boss Kannada 10 ಆರಂಭ- ಈ 3 ಸೀರಿಯಲ್‌ಗೆ ಗೇಟ್ ಪಾಸ್

    ಒಲವೇ ಜೀವನ ಸಾಕ್ಷಾತ್ಕಾರ’, ‘ಆತ್ಮ ಬಂಧನ’, ‘ಯಜಮಾನಿ’ ಧಾರಾವಾಹಿ ಸೇರಿದಂತೆ ಸಾಕಷ್ಟು ಟಿವಿ ಕಾರ್ಯಕ್ರಮಗಳಲ್ಲೂ ಪ್ರಶಾಂತ್ ಕಾಣಿಸಿಕೊಂಡಿದ್ದಾರೆ. ತಮ್ಮದೇ ಆದ ಅಭಿಮಾನಿ ವರ್ಗವನ್ನೂ ಅವರು ಹೊಂದಿದ್ದಾರೆ. ಪ್ರಶಾಂತ್ ಅವರಿಗೆ ಈಗ ಪರಭಾಷೆಯಲ್ಲಿ ಕೂಡ ಬೇಡಿಕೆ ಇದ್ದು, ಅಲ್ಲೂ ಆ್ಯಕ್ಟಿವ್ ಆಗಿದ್ದಾರೆ.

    ಮಿಲನ‌ ಸೀರಿಯಲ್ ಮೂಲ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟ ಇದೀಗ ಹೊಸ ಬಾಳಿಗೆ ಕಾಲಿಡಲು ತಯಾರಿ ನಡೆಸಿದ್ದಾರೆ. ಸದ್ಯಕ್ಕೆ ನಿಶ್ಚಿತಾರ್ಥ ನೆರವೇರಿದ್ದು, ಸದ್ಯದಲ್ಲೇ ಮದುವೆ ಬಗ್ಗೆ ಅಪ್ ಡೇಟ್ ಹಂಚಿಕೊಳ್ಳಲಿದ್ದಾರೆ. ನೆಚ್ಚಿನ ನಟನೆ ಹೊಸ ಬದುಕಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಸೂರ್ಯ’ನ ಹೋರಾಟಕ್ಕೆ ಬೆಂಬಲಿಸಿದ ಟೀಸರ್: ಇದು ಸಾಗರ್ ನಿರ್ದೇಶನದ ಸಿನಿಮಾ

    ‘ಸೂರ್ಯ’ನ ಹೋರಾಟಕ್ಕೆ ಬೆಂಬಲಿಸಿದ ಟೀಸರ್: ಇದು ಸಾಗರ್ ನಿರ್ದೇಶನದ ಸಿನಿಮಾ

    ಗಿನ ಕಾಲದ ಯುವಕ, ಯುವತಿಯರು ಪ್ರೀತಿಗಾಗಿ ಏನೆಲ್ಲ ಸಾಹಸಗಳನ್ನು ಮಾಡಬಹುದು ಎಂದು ಈಗಾಗಲೇ ಸಾಕಷ್ಟು ಚಲನಚಿತ್ರಗಳ ಮೂಲಕ ನಿರ್ದೇಶಕರು ಹೇಳಿದ್ದಾರೆ. ಅದೆಲ್ಲಕ್ಕಿಂತ ವಿಭಿನ್ನವಾದ, ಹೊಸ ತರಹದ ಕಥೆಯೊಂದನ್ನು ಯುವ ನಿರ್ದೇಶಕ ಸಾಗರ್ ಅವರು ಸೂರ್ಯ ಚಿತ್ರದ ಮೂಲಕ ಹೇಳುತಿದ್ದಾರೆ. ಖ್ಯಾತ ನಿರ್ದೇಶಕ ಬಿ.ಸುರೇಶ ಅವರ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಸಾಗರ್, ಮಾಸ್ ಲವ್‌ಸ್ಟೋರಿ ಇಟ್ಟುಕೊಂಡು ಸೂರ್ಯ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಚಿತ್ರೀಕರಣದ ಕೊನೆಯಹಂತ ತಲುಪಿರುವ ಈ ಸಿನಿಮಾದಲ್ಲಿ ಯುವನಟ ಪ್ರಶಾಂತ್ ನಾಯಕನಾಗಿ ನಟಿಸಿದ್ದು, ಹರ್ಷಿತಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಂದಿ ಸಿನಿಮಾಸ್ ಮೂಲಕ ಬಸವರಾಜ್ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರು ಈ ಚಿತ್ರವನ್ನು  ನಿರ್ಮಾಣ  ಮಾಡುತ್ತಿದ್ದಾರೆ.

    ಸೂರ್ಯ ಚಿತ್ರದ ಟೀಸರ್ ಅನಾವರಣ ಸಮಾರಂಭ ಇತ್ತೀಚೆಗೆ ನೆರವೇರಿತು. ನಿರ್ದೇಶಕ ಬಹದ್ದೂರ್ ಚೇತನ್ ಅವರು ಟೀಸರ್ ಬಿಡುಗಡೆಮಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಸಾಗರ್, ಸೂರ್ಯ ನಾಯಕನ ಹೆಸರು. ಆತ ತನ್ನ ಪ್ರೀತಿಗೋಸ್ಕರ ಯುದ್ದದ ರೀತಿಯಲ್ಲಿ ಸಮರ ಸಾರಿ ಅದನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಕಾನ್ಸೆಪ್ಟ್. ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಲೇ ನಾನೊಂದು ಕಥೆ ಮಾಡಿಕೊಂಡಿದ್ದೆ, ಆ ಕಥೆಯನ್ನು ಇಷ್ಟಪಟ್ಟ ನನ್ನ ಸ್ನೇಹಿತ, ಈ ನಿರ್ಮಾಪಕರ ಬಳಿ ಮಾತನಾಡಿ ಅವರನ್ನು ಒಪ್ಪಿಸಿದರು. ಬೆಂಗಳೂರು ಸುತ್ತಮುತ್ತ ಹಾಗೂ ಪೂನಾದಲ್ಲಿ ಮಾತಿನ ಭಾಗದ ಚಿತ್ರೀಕರಣ ನಡೆಸಿದ್ದೇವೆ, ಈಗಾಗಲೇ 3 ಹಾಡುಗಳನ್ನು ಚಿತ್ರೀಕರಿಸಿದ್ದು, ಉಳಿದ 2 ಸೆಟ್ ಸಾಂಗ್ ಹಾಗೂ ಹೆಚ್‌ಎಂಟಿಯಲ್ಲಿ ಮಾಡಬೇಕೆಂದಿರುವ ಸಾಹಸ ದೃಶ್ಯದ ಚಿತ್ರೀಕರಣವಷ್ಟೇ ಬಾಕಿಯಿದೆ. ಆರ್ಮುಗಂ ರವಿಶಂಕರ್ ಅವರನ್ನು ಈವರೆಗೆ ನೋಡಿರದಂಥ ಪಾತ್ರದಲ್ಲಿ ಕಾಣಬಹುದು. ಅಲ್ಲದೆ ನಟಿ ಶ್ರುತಿ ಅವರು ಒಬ್ಬ ಡಾಕ್ಟರ್ ಜೊತೆಗೆ ಈಗಿನ ಕಾಲದ ಅಮ್ಮನಾಗೂ ಕಾಣಿಸಿಕೊಂಡಿದ್ದಾರೆ, ಕಾಂತಾರ ಖ್ಯಾತಿಯ ಪ್ರಮೋದ್ ಶೆಟ್ಟಿ ಅವರಿಲ್ಲಿ ಉತ್ತರ ಕರ್ನಾಟಕ ಭಾಗದ ವಿಲನ್ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದ 5 ಹಾಡುಗಳಿಗೆ ಶ್ರೀಶಾಸ್ತ ಸಂಗೀತ ಸಂಯೋಜನೆ ಮಾಡಿದ್ದು, ಬಹದ್ದೂರ್ ಚೇತನ್, ಯೋಗರಾಜ ಭಟ್ ಸಾಹಿತ್ಯ ರಚಿಸಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ:ನಟಿ ಮಹಾಲಕ್ಷ್ಮಿ ಪತಿ ರವೀಂದ್ರ ಬಂಧನ

    ನಾಯಕ ಪ್ರಶಾಂತ್ ಮಾತನಾಡುತ್ತ ಪೂನಾ ಫಿಲಂ ಇನ್ ಸ್ಟಿಟ್ಯೂಟ್‌ನಲ್ಲಿ ಅಭಿನಯ ಕಲಿತ ನಂತರ ಸೀರಿಯಲ್‌ಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿಕೊಂಡಿದ್ದೆ. ಸಾಗರ್ ಅವರು ಕರೆದು ನನಗೀ  ಅವಕಾಶ ಕೊಟ್ಟಿದ್ದಾರೆ. ಈ ಚಿತ್ರದ ಮೂಲಕ ಮೊದಲಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದೇನೆ. ಒಬ್ಬ ಮಿಡಲ್ ಕ್ಲಾಸ್ ಹುಡುಗ, ಲವರ್ ಬಾಯ್, ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಆತ ಹೇಗೆಲ್ಲ ಹೋರಾಡುತ್ತಾನೆಂದು ನನ್ನ ಪಾತ್ರದ ಮೂಲಕ ತೋರಿಸಿದ್ದಾರೆ ಎಂದು ಹೇಳಿದರು. ನಾಯಕಿ ಹರ್ಷಿತಾ ಮಾತನಾಡಿ ನನ್ನದು ತುಂಬಾ ವೇರಿಯೇಶನ್ಸ್ ಇರುವ ಪಾತ್ರ, ಪ್ರೀತಿಯ ವಿಷಯದಲ್ಲಿ ಆಕೆ ಯಾವ ನಿರ್ಧಾರ ತಗೋತಾಳೆ ಅನ್ನುವುದೇ ಈ ಚಿತ್ರದ ಕಥೆ ಎಂದು ವಿವರಿಸಿದರು.

     

    ನಿರ್ಮಾಪಕ ಬಸವರಾಜ್ ಬೆಣ್ಣೆ ಮಾತನಾಡಿ ರವಿಬೆಣ್ಣೆ ಹಾಗೂ ನಾನು ಇಬ್ಬರೂ ಸಹೋದರರು. ಬೆಳಗಾವಿಯ ರೈತ ಕುಟುಂಬದಿಂದ ಬಂದವರು. ಪೂನಾದಲ್ಲಿ ಇಂಡಸ್ಟ್ರಿ ನಡೆಸುತ್ತಿದ್ದೇವೆ. ಸಾಗರ್ ನಮ್ಮನ್ನು ಭೇಟಿಯಾಗಿ ಈ ಕಥೆ ಹೇಳಿದರು. ಹೊಸಬರಿಗೆ ಅವಕಾಶ ಕೊಡಬೇಕೆಂದು ಈ ಸಿನಿಮಾ ನಿರ್ಮಾಣ ಮಾಡಿದ್ದೇವೆ ಎಂದು ಹೇಳಿದರು. ವಿಲನ್ ರೋಲ್ ಮಾಡಿರುವ ಪ್ರಶಾಂತ್ ಶೆಟ್ಟಿ ಮಾತನಾಡಿ ನನ್ನ ಪಾತ್ರ ರವಿಶಂಕರ್ ಅವರಜೊತೆ ಬರುತ್ತದೆ ಎಂದರು. ಛಾಯಾಗ್ರಾಹಕ ಮನುರಾಜ್ ಮಾತನಾಡಿ ಈ ಹಿಂದೆ ಮೆಲೋಡಿ ಡ್ರಾಮಾ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದೆ, ಇದು ಎರಡನೇ ಚಿತ್ರ. ಬೆಂಗಳೂರು ಸುತ್ತಮುತ್ತ ಈವರೆಗೆ 35 ದಿನಗಳ ಕಾಲ ಚಿತ್ರದ ಶೂಟಿಂಗ್  ನಡೆಸಿದ್ದೇವೆ ಎಂದರು. ಟಿ.ಎಸ್. ನಾಗಾಭರಣ, ಬಲ ರಾಜವಾಡಿ, ಪ್ರಸನ್ನ ಉಳಿದ ಪಾತ್ರ ವರ್ಗದಲ್ಲಿದ್ದಾರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಂದು ಪ್ರಶಾಂತ್ ಮಿಸ್.. ಪ್ರವೀಣ್ ನೆಟ್ಟಾರು ಮರ್ಡರ್..!

    ಅಂದು ಪ್ರಶಾಂತ್ ಮಿಸ್.. ಪ್ರವೀಣ್ ನೆಟ್ಟಾರು ಮರ್ಡರ್..!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಳ್ಳಿ ಪರದೆ ಮೇಲೆ ‘ಸೂರ್ಯ’ನ ಮಾಸ್ ಲವ್ ಸ್ಟೋರಿ

    ಬೆಳ್ಳಿ ಪರದೆ ಮೇಲೆ ‘ಸೂರ್ಯ’ನ ಮಾಸ್ ಲವ್ ಸ್ಟೋರಿ

    ಬಿ.ಸುರೇಶ್ ಅವರ ಬಹುತೇಕ ಚಿತ್ರಗಳಿಗೆ  ಸಹನಿರ್ದೇಶಕರಾಗಿ  ಕೆಲಸ ಮಾಡಿರುವ  ಸಾಗರ್ ಈಗ ನಿರ್ದೇಶಕರಾಗಿದ್ದಾರೆ. ವಿಭಿನ್ನವಾದ ಮಾಸ್ ಲವ್ ಸ್ಟೋರಿ ಒಳಗೊಂಡ “ಸೂರ್ಯ” ಎಂಬ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು  ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಸಮಾರಂಬ ಕಳೆದ ಸೋಮವಾರ ಮಹಾಲಕ್ಷ್ಮಿ ಲೇಔಟ್ ನ ಶ್ರೀ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಹೊಸ ಪ್ರತಿಭೆ ಪ್ರಶಾಂತ್ ಈ ಚಿತ್ರದ ನಾಯಕನಾಗಿದ್ದು, ಹರ್ಷಿತಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಮುಹೂರ್ತದ ನಂತರ ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ಸಾಗರ್, ಸೂರ್ಯ ನಮ್ಮ ಚಿತ್ರದ ನಾಯಕನ ಹೆಸರು. ನಾಯಕ ಪ್ರೀತಿಗೋಸ್ಕರ ಯುದ್ದವನ್ನೇ ಮಾಡಿ ಹೇಗೆ ತನ್ನ ಪ್ರೀತಿಯನ್ನು ಉಳಿಸಿಕೊಳ್ಳುತ್ತಾನೆ ಎನ್ನುವುದೇ ಸೂರ್ಯ ಚಿತ್ರದ ಕಾನ್ಸೆಪ್ಟ್. ಬೆಂಗಳೂರು ಸುತ್ತಮುತ್ತ ಮಾತಿನ ಭಾಗದ ಚಿತ್ರೀಕರಣ ನಡೆಸಿ ಹಾಡುಗಳಿಗೆ ಮಡಿಕೇರಿ, ಮೈಸೂರು, ಪೂನಾಗೆ ಹೋಗುವ ಯೋಜನೆಯಿದೆ. ಇದನ್ನೂ ಓದಿ:ಏಕಾಂಗಿಯಾಗಿ ಹನಿಮೂನ್ ಸ್ಪಾಟ್, ಬಾಲಿಗೆ ಹಾರಿದ ನಿವೇದಿತಾ ಗೌಡ

    ಆರ್ಮುಗಂ ರವಿಶಂಕರ್ ಅವರನ್ನು ಈವರೆಗೆ ನೋಡಿರದಂಥ ಪಾತ್ರದಲ್ಲಿ ನೋಡಬಹುದು. ಅಲ್ಲದೆ ಶೃತಿ  ಅವರು ಒಬ್ಬ ಡಾಕ್ಟರ್ ಅಗಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಈಗಿನ ಕಾಲದ ಅಮ್ಮನೂ ಹೌದು ಕಾಂತಾರ ಖ್ಯಾತಿಯ ಪ್ರಮೋದ್ ಶೆಟ್ಟಿ ಅವರು ಉತ್ತರ ಕರ್ನಾಟಕ ಶೈಲಿಯ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಮ್ಮ ಚಿತ್ರದಲ್ಲಿ ೫ ಹಾಡುಗಳಿದ್ದು ಶ್ರೀಶಾಸ್ತ  ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಬಹದ್ದೂರ್ ಚೇತನ್, ನಾನು ಯೋಗರಾಜ ಭಟ್ ಸಾಹಿತ್ಯ ರಚಿಸಿದ್ದೇವೆ. ಮುಂದಿನ ವಾರದಿಂದ ಶೂಟಿಂಗ್ ಹೊರಡಲಿದ್ದೇವೆ ಎಂದು ಹೇಳಿದರು.  ನಂದಿ ಸಿನಿಮಾಸ್ ಮೂಲಕ ಬಸವರಾಜ್ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಮನುರಾಜ್ ಈ ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೊಸ ಹುಡುಗರ ಸಾಹಸಕ್ಕೆ ಸಾಥ್ ನೀಡಿದ ಡಾಲಿ ಧನಂಜಯ್: ಸ್ಯಾಂಡಲ್ ವುಡ್ ಗೆ ನವ ‘ಸೂರ್ಯ’

    ಹೊಸ ಹುಡುಗರ ಸಾಹಸಕ್ಕೆ ಸಾಥ್ ನೀಡಿದ ಡಾಲಿ ಧನಂಜಯ್: ಸ್ಯಾಂಡಲ್ ವುಡ್ ಗೆ ನವ ‘ಸೂರ್ಯ’

    ನ್ನಡ ಸಿನಿಮಾ ರಂಗದ ಖ್ಯಾತ ನಿರ್ದೇಶಕ, ನಟ ಬಿ.ಸುರೇಶ ಬಳಿ ಕೆಲಸ ಮಾಡಿದ ಸಾಗರ್ (Sagar), ಇದೀಗ ಸಿನಿಮಾ ರಂಗಕ್ಕೆ ನಿರ್ದೇಶಕರಾಗಿ ಪ್ರವೇಶ ಮಾಡುತ್ತಿದ್ದಾರೆ. ಇವರ ನಿರ್ದೇಶನದಲ್ಲಿ ಬರುತ್ತಿರುವ ಚಿತ್ರಕ್ಕೆ ‘ಸೂರ್ಯ’ (Surya) ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಮತ್ತೋರ್ವ ನಾಯಕ ನಟನ ಎಂಟ್ರಿ ಆಗುತ್ತಿದ್ದು, ಸೂರ್ಯ ಚಿತ್ರದ ಮೂಲಕ ಪ್ರಶಾಂತ್ (Prashant) ಚಿತ್ರ ರಂಗಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಇಂದು ಪ್ರಶಾಂತ್ ಅವರ ಹುಟ್ಟು ಹಬ್ಬವಾಗಿದ್ದು, ಈ ದಿನದಂದು ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಡಾಲಿ ಧನಂಜಯ್ (Dhananjay) ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ತಂಡಕ್ಕೆ ಸಾಥ್ ನೀಡಿದ್ದಾರೆ.

    ನಿರ್ದೇಶಕ ಸಾಗರ್ ಈ ಹಿಂದೆ ಕಿರುತೆರೆ ಜಗತ್ತಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದು, ಇದೀಗ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದಾರೆ. ಮೊದಲ ಸಿನಿಮಾದಲ್ಲೇ ಲವ್ ಸ್ಟೋರಿ ಜೊತೆಗೆ ಸಾಹಸ ಪ್ರಧಾನ ಅಂಶಗಳನ್ನು ಬೆರೆಸಿ, ಪಕ್ಕಾ ಕಮರ್ಷಿಯಲ್ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರಶಾಂತ್ ಅವರನ್ನು ಪರಿಚಯಿಸುತ್ತಿದ್ದು, ಪ್ರಶಾಂತ್ ಕೂಡ ಪಾತ್ರಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡು ಕ್ಯಾಮೆರಾ ಮುಂದೆ ನಿಲ್ಲುತ್ತಿದ್ದಾರೆ. ಇದನ್ನೂ ಓದಿ:ಸೋಮಣ್ಣ – ಗುರೂಜಿ ಗೆಲುವು ನೋಡಿ, ಗಳಗಳನೆ ಅತ್ತ ಸಾನ್ಯ ಅಯ್ಯರ್

    ಪಕ್ಕಾ ತಯಾರಿಯೊಂದಿಗೆ ಸಿನಿಮಾ ಶುರು ಮಾಡಿರುವ ತಂಡ, ಈ ತಿಂಗಳು ಚಿತ್ರಕ್ಕೆ ಮುಹೂರ್ತ ಸಮಾರಂಭ ನಡೆಯುತ್ತಿದ್ದು, ಅಕ್ಟೋಬರ್ ನಿಂದ ಚಿತ್ರೀಕರಣ ಆರಂಭಿಸಲಿದೆ. ಚಿತ್ರದ ಟ್ಯಾಗ್ ಲೈನ್ ‘ದಿ ಪವರ್ ಆಫ್ ಲವ್’ ಹೇಳುವಂತೆ, ಅದ್ಭುತವಾದ ಲವ್ ಸ್ಟೋರಿಯನ್ನು ಈ ಸಿನಿಮಾದಲ್ಲಿ ಹೇಳಲಿದ್ದಾರಂತೆ ನಿರ್ದೇಶಕರು. ರವಿಶಂಕರ್ (Ravi Shankar), ಶ್ರುತಿ, ಪ್ರಮೋದ್ ಶೆಟ್ಟಿ ಸೇರಿದಂತೆ ಪ್ರತಿಭಾವಂತ ಕಲಾವಿದರ ತಂಡವೇ ಸಿನಿಮಾದಲ್ಲಿದೆ.

    ತಾಂತ್ರಿಕ ವರ್ಗವೂ ಇದಕ್ಕೆ ಹೊರತಾಗಿಲ್ಲ. ಕೆಜಿಎಫ್ ಸಿನಿಮಾದ ಸಿನಿಮಾಟೋಗ್ರಾಫರ್ ಭುವನ್ ಜೊತೆ ಕೆಲಸ ಮಾಡಿರುವ ಮನುರಾಜ್ ಕ್ಯಾಮೆರಾಮೆನ್ ಆಗಿದ್ದು, ಖ್ಯಾತ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜ್ ಬಳಿ ಕೆಲಸ ಮಾಡಿರುವ ಶ್ರೀಸಸ್ತ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿರಲಿದೆ. ನಂದಿ ಸಿನಿಮಾಸ್ ಬ್ಯಾನರ್ ಅಡಿ ಬಸವರಾಜ್ ಬೆಣ್ಣಿ (Basavaraj Benni) ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರಶಾಂತ್ ಕೊಲೆಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ: ಹೆಚ್.ಡಿ. ರೇವಣ್ಣ

    ಪ್ರಶಾಂತ್ ಕೊಲೆಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ: ಹೆಚ್.ಡಿ. ರೇವಣ್ಣ

    ಹಾಸನ: ನಗರಸಭೆ ಸದಸ್ಯ ಪ್ರಶಾಂತ್ ಕೊಲೆಗೆ ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ನೇರವಾಗಿ ಆರೋಪಿಸಿದ್ದಾರೆ.

    ನಗರಸಭೆ ಸದಸ್ಯ ಪ್ರಶಾಂತ್ ಕೊಲೆ ಹಿನ್ನೆಲೆ ಸಂಸದರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಲ್ ಇನ್ಸ್‌ಪೆಕ್ಟರ್‌ ರೇಣುಕಾ ಪ್ರಸಾದ್ ಮೂರು ಕೋಟಿ ಮನೆ ಕಟ್ಟಿದ್ದಾರೆ ಅಂತಾರೆ. ಅವರಿಗೆ ಹಣ ಎಲ್ಲಿಂದ ಬಂತು? ರೌಡಿಗಳ ಹೆಗಲ ಮೇಲೆ ಕೈಹಾಕಿ ಫೋಸ್ ಕೊಡುತ್ತಾರೆ. ಒಂದು ಲಾರಿಗೆ ತಿಂಗಳಿಗೆ 40 ಸಾವಿರದಂತೆ ಕಮಿಷನ್ ತೆಗೆದುಕೊಳ್ಳುತ್ತಾರೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯುವ ನಂಬಿಕೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    JDS LEADER

    ರಾತ್ರಿ ಅರಸೀಕೆರೆ ಸರ್ಕಲ್ ಇನ್ಸ್‌ಪೆಕ್ಟರ್‌ನನ್ನು ವಿಚಾರಣಾ ಆಫೀಸರ್ ಆಗಿ ನೇಮಕ ಮಾಡುತ್ತಾರೆ. ಅವರೇ ಹೋಗಿ ಸ್ಟೇಟ್ ಮೆಂಟ್ ಮಾಡಿಸಿಕೊಂಡು ಬರುತ್ತಾರೆ. ಈ ಗಿರಾಕಿ ಉದಯ ಭಾಸ್ಕರ್ ಹಿಂಗೇ ಬರೆದು ಕೊಡಿ ಅಂತಾರೆ. ಅವರದ್ದೇ ಸರ್ಕಲ್ ಇನ್ಸ್‌ಪೆಕ್ಟರ್‌, ಅವರು ಹೇಗೆ ಬರೆಸಿಕೊಂಡಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಹಾಸನ ಕಟ್ಟಿನಕೆರೆ ಮಾರುಕಟ್ಟೆ ಬಂದ್ – 500ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್

    ಹಾಸನ ನಗರ ಹಾಗೂ ಗ್ರಾಮೀಣ ಎರಡೂ ಠಾಣೆ ಇವೆರಡು ರೌಡಿ ಎಲಿಮೆಂಟ್ಸ್ ಇದ್ದಂಗೆ. ಬೆಳಗ್ಗೆ ಎದ್ದರೆ ಊಟ-ತಿಂಡಿ, ದಿನಕ್ಕೆ ಒಂದರಿಂದ ಎರಡು ಲಕ್ಷ ಕಲೆಕ್ಟ್ ಮಾಡುತ್ತಾರೆ. ಮರಳು ದಂಧೆ ಇತರೆ ದಂಧೆಗಳಿಂದ ಹಣ ವಸೂಲಿ ಮಾಡುತ್ತಾರೆ. ಯಾವುದಾದರೂ ಖಾಲಿ ಸೈಟ್‍ಗೆ ಬೇಲಿ ಹಾಕಿಸುವುದು ನಂತರ ಅವರನ್ನು ರಾಜಿಗೆ ಕರೆಸುವುದು. ಒಂದೆರಡು ಲಕ್ಷ ಪಡೆದು ಇಬ್ಬರು ಹಂಚಿ ಕೊಳ್ಳುವುದು ಮಾಡುತ್ತಾರೆ ಎಂದು ಹಾಸನ ಡಿವೈಎಸ್‍ಪಿ ಹಾಗೂ ಪಿಐ ರೇಣುಕಾ ಪ್ರಸಾದ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಮುಖಂಡನ ಭೀಕರ ಹತ್ಯೆ – ಹಾಸನದಲ್ಲಿ ಪೊಲೀಸ್ ಸರ್ಪಗಾವಲು

    ಹಾಸನದ ಎರಡು ಠಾಣೆಗಳು ದಂಧೆ ಕೋರರ ಕೈಗೆ ಸೇರಿದೆ. ಅವರು ಇಲ್ಲಿಗೆ ಪೋಸ್ಟಿಂಗ್ ಬರುವಾಗಲೇ ಹೇಗೆ ಬಂದಿದ್ದಾರೆ ಎನ್ನುವುದಕ್ಕೆ ಆಡಿಯೋ ಇದೆ. ಓರ್ವ ಪೊಲೀಸ್ ಅಧಿಕಾರಿಯಾಗಿ 18 ಕೇಸ್ ಮುಚ್ಚಿಹಾಕಿದ್ದೇನೆ ಇಂತದೇ ಪೋಸ್ಟಿಂಗ್ ಕೊಡಿ ಎಂದು ಮಾತನಾಡಿದ್ದಾರೆ. ರೇಣುಕಾ ಪ್ರಸಾದ್ ನಾಲ್ಕು ಕೋಟಿ ಮನೆ ಕಟ್ಟಿದ್ದಾರೆ ಅಷ್ಟು ಹಣ ಎಲ್ಲಿಂದ ಬರುತ್ತದೆ? ಇವರಿಬ್ಬರೂ ಕೂಡ ನಾಲ್ಕು ಐದು ಕೋಟಿ ಹಣ ಖರ್ಚುಮಾಡಿ ಮನೆ ಕಟ್ಟಿದ್ದಾರೆ. ಇದು ಹಾಸನ ಜಿಲ್ಲೆಯ ಜನರ ದುಡ್ಡು, ಮರಳಿನ ಹಾಗೂ ಮಟ್ಕ ದುಡ್ಡು ಎಂದು ಕಿಡಿಕಾರಿದ್ದಾರೆ.

    ಪಿಐ ಅರೋಕಿಯಪ್ಪ, ಪಿಐ ರೇಣುಕಾ ಪ್ರಸಾದ್, ಡಿವೈಎಸ್ಪಿ ಉದಯ ಭಾಸ್ಕರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿರುವುದಾಗಿ ಎಸ್‍ಪಿ ಹೇಳಿದ್ದಾರೆ. ಈ ಸಂಬಂಧ ಏನು ಕ್ರಮ ಕೈಗೊಳ್ಳುತ್ತಾರೆ ನೋಡುತ್ತೇವೆ. ನಂತರ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

  • ಹಾಸನ ಕಟ್ಟಿನಕೆರೆ ಮಾರುಕಟ್ಟೆ ಬಂದ್ – 500ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್

    ಹಾಸನ ಕಟ್ಟಿನಕೆರೆ ಮಾರುಕಟ್ಟೆ ಬಂದ್ – 500ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್

    ಹಾಸನ: ಜೆಡಿಎಸ್ ಮುಖಂಡ ಪ್ರಶಾಂತ್ ಹತ್ಯೆಯ ಬಳಿಕ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಭದ್ರತೆಗಾಗಿ ನಗರದಲ್ಲಿ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

    ಪ್ರಸ್ತುತ ಪ್ರಶಾಂತ್ ಮೃತದೇಹ ಹಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿದೆ. ಈ ಹಿನ್ನೆಲೆ ಆಸ್ಪತ್ರೆ ಮತ್ತು ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಆಸ್ಪತ್ರೆ ಬಳಿ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗುವುದು.

    ಸೂಕ್ತ ಬಂದೋಬಸ್ತ್‌ಗೆ ಹೊರ ಜಿಲ್ಲೆಯಿಂದಲೂ ಪೊಲೀಸರು ಆಗಮಿಸಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿದೆ. ಈಗಾಗಲೇ ಆರೋಪಿಗಳಿಗಾಗಿ ಚುರುಕಿನಿಂದ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚಿನ್ನಿದಾಂಡು ಆಟದಿಂದ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯ

    ಪ್ರಶಾಂತ್ ಅವರು ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರಿಯಾಗಿದ್ದರು. ಈ ಹಿನ್ನೆಲೆ ಪ್ರಶಾಂತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಹಾಸನ ಕಟ್ಟಿನಕೆರೆ ಮಾರುಕಟ್ಟೆ ಬಂದ್ ಮಾಡಲಾಗಿದೆ.

  • ದಿವ್ಯಾ ಉರುಡುಗ ಹೇರ್ ಕಟ್ ಮಾಡಿದ ಅರವಿಂದ್

    ದಿವ್ಯಾ ಉರುಡುಗ ಹೇರ್ ಕಟ್ ಮಾಡಿದ ಅರವಿಂದ್

    ಳೆದ ವಾರ ಕಿಚ್ಚ ಸುದೀಪ್ ಅರವಿಂದ್‍ಗೆ ದಿವ್ಯಾ ಉರುಡುಗ ಹೇರ್ ಕಟ್ ಮಾಡುವಂತೆ ಟಾಸ್ಕ್ ನೀಡಿದ್ದರು. ಅದರಂತೆ ಅರವಿಂದ್ ದಿವ್ಯಾ ಉರುಡುಗಗೆ ಹೇರ್ ಕಟ್ ಮಾಡಿದ್ದಾರೆ.

    ದಿವ್ಯಾ ಉರುಡುಗಗೆ ಹೇರ್ ಕಟ್ ಮಾಡಲು ಬೇಕಾದ ಸಾಮಾಗ್ರಿಗಳನ್ನು ಬಿಗ್‍ಬಾಸ್ ಅರವಿಂದ್‍ಗೆ ಕಳುಹಿಸಿಕೊಟ್ಟಿದ್ದಾರೆ. ಈ ವೇಳೆ ದಿವ್ಯಾ ಉರುಡುಗ ಬಿಗ್‍ಬಾಸ್ ಎಂದು ಗೋಳಾಡುತ್ತಾ ಬಾತ್ ರೂಂ ಏರಿಯಾಗೆ ಹೋಗುತ್ತಾರೆ. ನಂತರ ಅರವಿಂದ್ ಡಿಯುಗೆ ಕ್ರಾಫ್ ತೆಗೆದು ತಲೆ ಬಾಚಲು ಶುರು ಮಾಡುತ್ತಾರೆ. ಈ ಮಧ್ಯೆ ದಿವ್ಯಾ ಉರುಡುಗ ನನಗೆ ಯಾವ ಭಯ ಕೂಡ ಇಲ್ಲ. ನೀವು ಚೆನ್ನಾಗಿ ಹೇರ್ ಕಟ್ ಮಾಡುತ್ತೀರಾ ಎಂಬ ನಂಬಿಕೆ ಇದೆ ಎಂದು ಧೈರ್ಯ ತುಂಬುತ್ತಾರೆ.

    ಈ ನಡುವೆ ಹೇರ್ ಕಟ್ ಮಾಡುವ ವೇಳೆ ಜೊತೆಗಿದ್ದು, ರೇಗಿಸುತ್ತಿದ್ದರೆ ಮಜಾವಾಗಿರುತ್ತಿತ್ತು ಎಂದು ಮಂಜು ಪ್ರಶಾಂತ್ ಬಳಿ ಮಾತನಾಡುತ್ತಿರುವಾಗವಾಗ, ನಾನು ಸಹಜವಾಗಿ ನಾವೆಲ್ಲರೂ ಜೊತೆಯಾಗಿದ್ದರೆ, ಡಿಸ್ಟರ್ಬ್ ಆಗಿ ಬಿಡುತ್ತೀರಾ ಎಂದು ಹೇಳಿದೆ. ಅದನ್ನೇ ಅವರು ಗಂಭೀರವಾಗಿ ತೆಗೆದುಕೊಂಡು ನಾವಿಬ್ಬರೇ ಹೇರ್ ಕಟ್ ಮಾಡಿಕೊಂಡು ಬರುತ್ತೇವೆ ಯಾರು ಇರಬೇಡಿ ಅಂತ ಹೇಳಿದ್ರು ಎಂದು ಹೇಳಿದ್ದಾರೆ.

    ಬಳಿಕ ಅರವಿಂದ್‍ಗೆ ಕೂದಲನ್ನು ಹೇಗೆ ಕ್ರಾಫ್ ತೆಗೆದು, ಹೇಗೆ ಕಟ್ ಮಾಡಬೇಕು ಎಂದು ದಿವ್ಯಾ ಉರುಡುಗ ಗೈಡ್ ಮಾಡುತ್ತಾ ಹೋಗುತ್ತಾರೆ, ಅದರಂತೆ ಅರವಿಂದ್ ಮಿರರ್ ಮುಂದೆ ಹೇರ್ ಕಟ್ ಮಾಡಲು ಆರಂಭಿಸುತ್ತಾರೆ. ಈ ವೇಳೆ ಕೂದಲು ಕಟ್ ಮಾಡುವ ಎಕ್ಸ್ ಪಿರಿಯನ್ಸ್ ಹೇಗಿದೆ ಎಂಬ ದಿವ್ಯಾ ಪ್ರಶ್ನೆಗೆ ಅರವಿಂದ್ ಒಂದು ರೀತಿ ಭಯ ಆಗುತ್ತಿದೆ. ನಮ್ಮದಾದರೆ ಹೆಚ್ಚು ಕಡಿಮೆಯಾದರೆ ಒಂದೇ ಬಾರಿ ಎಲ್ಲಾ ಹೇರ್‍ನನ್ನು ಸುಲಭವಾಗಿ ಕಟ್ ಮಾಡಿಬಿಡಬಹುದು. ಆದರೆ ನಿಮ್ಮದು ಆ ರೀತಿಯಲ್ಲ ಎಂದು ಫ್ರಂಟ್ ಕಟ್ ಹಾಗೂ ವೀ ಶೆಪ್ ಹೇರ್ ಕಟ್ ಮಾಡಿದ್ದಾರೆ.

    ಕೊನೆಗೆ ಅರವಿಂದ್ ಮಾಡಿದ ಹೇರ್ ಕಟ್‍ನನ್ನು ಡಿಯು ಮನೆಯ ಇತರ ಸ್ಪರ್ಧಿಗಳಿಗೆ ತೋರಿಸಿದ್ದಾರೆ. ಈ ವೇಳೆ ಎಲ್ಲರೂ ಹೇರ್ ಕಟ್ ಬಹಳ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ:ಅರವಿಂದ್‍ಗೆ ಹೇರ್ ಕಟ್ ಚಾಲೆಂಜ್ ಕೊಟ್ಟ ಸುದೀಪ್ – ಡಿಯು ಕೂದಲ ಗತಿಯೇನು?