Tag: ಪ್ರಶಸ್ತಿಗಳು

  • ನಿರೂಪಕನಾಗಿ ಸಂಗೀತ ಪ್ರತಿಭೆಗಳನ್ನು ಬೆಳಕಿಗೆ ತಂದ ಎಸ್‍ಪಿಬಿ

    ನಿರೂಪಕನಾಗಿ ಸಂಗೀತ ಪ್ರತಿಭೆಗಳನ್ನು ಬೆಳಕಿಗೆ ತಂದ ಎಸ್‍ಪಿಬಿ

    ಬೆಂಗಳೂರು: ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾಯಕ ಮಾತ್ರವಲ್ಲದೆ ನಟ, ಡಬ್ಬಿಂಗ್ ಆರ್ಟಿಸ್ಟ್ ಹೀಗೆ ಬೆಳ್ಳಿ ತೆರೆಯಲ್ಲಿ ಮಿಂಚಿ ನಂತರ ಕಿರುತೆರೆಗೂ ಕಾಲಿಟ್ಟು ಪ್ರಸಿದ್ಧಿ ಪಡೆದಿದ್ದರು. ಎದೆ ತುಂಬಿ ಹಾಡಿದೆನು ಮೂಲಕ ಕನ್ನಡಿಗರ ಮನೆ ಮಾತಾಗಿದ್ದರು.

    90ರ ದಶಕದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕಿರುತೆರೆಗೂ ಎಂಟ್ರಿ ಕೊಟ್ಟರು. ತೆಲುಗಿನ ಪಾಡುತಾ ತಿಯಗಾ ಕಾರ್ಯಕ್ರಮದಲ್ಲಿ ನಿರೂಪಕನಾಗಿ ಮನೆಮಾತಾದರು. ಕನ್ನಡದಲ್ಲಿ ಸಹ ಎದೆ ತುಂಬಿ ಹಾಡುವೆನು ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಆಗಿ ನಿರೂಪಕನಾಗಿ ಗಮನ ಸೆಳೆದರು. ಈ ಕಾರ್ಯಕ್ರಮಗಳಿಂದ ಅದೆಷ್ಟೋ ಸಂಗೀತ ಪ್ರತಿಭೆಗಳು ಬೆಳಕಿಗೆ ಬಂದವು. ಅಲ್ಲದೆ ಈ ಕಾರ್ಯಕ್ರಮದಿಂದ ಎಸ್‍ಪಿಬಿ ಕನ್ನಡಿಗರ ಮನೆ ಮಾತಾದರು.

    ಬಾಲು ಗಾನಕ್ಕೆ ಪ್ರಶಸ್ತಿಗಳ ಸುರಿಮಳೆ
    ಎಸ್‍ಪಿಬಿ ಗಾನಕ್ಕೆ ಮಂತ್ರಮುಗ್ಧರಾಗದೆ ಇರುವವರೇ ಇಲ್ಲ ಎನ್ನಬಹುದು. ಬಾಲು ಗಾಯನಕ್ಕೆ ಪ್ರಶಸ್ತಿಗಳ ಸುರಿಮಳೆಯೇ ಆಗಿದೆ. ಪದ್ಮ ಭೂಷಣ, ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದರು. ಶಂಕರಾಭರಣಂ ಸಿನಿಮಾಗೆ ಮೊದಲ ಬಾರಿಗೆ ರಾಷ್ಟ್ರೀಯ ಪ್ರಶಸ್ತಿ ಬಂದಿತು.್ತ ಹಿಂದಿಯ ಏಕ್ ದುಜೆ ಕೇಲಿಯೇ ಸಿನಿಮಾ, ಕನ್ನಡದ ಪಂಚಾಕ್ಷರಿ ಗವಾಯಿ, ತೆಲುಗಿನ ರುದ್ರವೀಣ, ತಮಿಳಿನ ಮಿನ್ನರ ಕನ್ನವು ಸಿನಿಮಾಗಳಿಗೂ ರಾಷ್ಟ್ರೀಯ ಪ್ರಶಸ್ತಿ ಅರಸಿ ಬಂದಿತ್ತು. ಮೈನೇ ಪ್ಯಾರ್ ಕಿಯಾ ಚಿತ್ರಕ್ಕೆ ಮೊದಲ ಬಾರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿತ್ತು. ಎನ್‍ಟಿಆರ್ ಪ್ರಶಸ್ತಿ, 8 ನಂದಿ ಪ್ರಶಸ್ತಿಗಳು ದಕ್ಕಿದ್ದವು. ಆದರೆ ಕರ್ನಾಟಕ ರಾಜ್ಯ ಸರ್ಕಾರ ಮಾತ್ರ ಅದೇಕೋ ಬಾಲು ಹೆಸರನ್ನು ಪ್ರಶಸ್ತಿಗಳಿಗೆ ಪರಿಗಣಿಸಲೇ ಇಲ್ಲ ಎನ್ನುವುದು ಬೇಸರದ ಸಂಗತಿ.

  • ಮಾಜಿ ಪ್ರಧಾನಿಗೆ ಸಿಕ್ಕಿದೆ 7 ಟಾಪ್ ಗೌರವಗಳು- ನಿಭಾಯಿಸಿದ ಹುದ್ದೆಗಳು ಎಷ್ಟು ಗೊತ್ತೆ?

    ಮಾಜಿ ಪ್ರಧಾನಿಗೆ ಸಿಕ್ಕಿದೆ 7 ಟಾಪ್ ಗೌರವಗಳು- ನಿಭಾಯಿಸಿದ ಹುದ್ದೆಗಳು ಎಷ್ಟು ಗೊತ್ತೆ?

    ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯರಾಗಿದ್ದ ವಾಜಪೇಯಿ ಅವರಿಗೆ ಹಲವು ಪ್ರಶಸ್ತಿಗಳು ಸಿಕ್ಕಿವೆ. ಅಷ್ಟೇ ಅಲ್ಲದೇ ಅವರು ಹಲವು ಹುದ್ದೆಗಳುನ್ನು ಅವರು ನಿಭಾಯಿಸಿದ್ದಾರೆ. ಹೀಗಾಗಿ ಇಲ್ಲಿ ವಾಜಪೇಯಿ ಅವರಿಗೆ ಸಿಕ್ಕಿದ ಹುದ್ದೆಗಳು ಮತ್ತು ಪ್ರಶಸ್ತಿಗಳ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಪ್ರಶಸ್ತಿಗಳು:
    * 1992: ಪದ್ಮವಿಭೂಷಣ
    * 1993: ಕಾನ್ಪುರ ವಿವಿಯಿಂದ ಗೌರವ ಡಾಕ್ಟರೇಟ್
    * 1994: ಲೋಕಮಾನ್ಯ ತಿಲಕ್ ಪ್ರಶಸ್ತಿ
    * 1994: ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ
    * 1994: ಭಾರತ ರತ್ನ ಪಂಡಿತ್ ಗೋವಿಂದ ವಲ್ಲಭ ಪಂತ್ ಪ್ರಶಸ್ತಿ
    * 2015: ಭಾರತ ರತ್ನ ಗೌರವ
    * 2015: ಬಾಂಗ್ಲಾ ಸರ್ಕಾರದಿಂದ ‘ಲಿಬರೇಶನ್ ಆಫ್ ವಾರ್ ಪ್ರಶಸ್ತಿ ( ಬಾಂಗ್ಲಾದೇಶ ಸರ್ಕಾರ ನೀಡುವ ಅತ್ಯುತ್ತನ ನಾಗರಿಕ ಗೌರವ)

    ನಿಭಾಯಿಸಿದ ಹುದ್ದೆಗಳು

    * 1951: ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯ
    * 1957: ಲೋಕಸಭೆಗೆ ಮೊದಲ ಬಾರಿಗೆ ಆಯ್ಕೆ(ಮೂರು ಕಡೆ ಸ್ಪರ್ಧೆ, ಮಥುರಾ, ಲಕ್ನೋದಲ್ಲಿ ಸೋಲು. ಉತ್ತರ ಪ್ರದೇಶದ ಬಲ್‍ರಂಪುರ ಕ್ಷೇತ್ರದಿಂದ ಆಯ್ಕೆ ಆಯ್ಕೆ, ಜನಸಂಘ ಪಕ್ಷ)
    * 1957-77: ಭಾರತೀಯ ಜನಸಂಘದ ಸಂಸದೀಯ ಸಮಿತಿಯ ನಾಯಕ
    * 1962: ಲೋಕಸಭಾ ಚುನಾವಣೆಯಲ್ಲಿ ಸೋಲು
    * 1962: ರಾಜ್ಯಸಭೆಯ ಸದಸ್ಯನಾಗಿ ಆಯ್ಕೆ
    * 1966: ಸರ್ಕಾರದ ಭರವಸೆಗಳ ಕುರಿತಾದ ಸಮಿತಿಯ ಅಧ್ಯಕ್ಷ

    * 1967-71 ಎರಡನೇ ಬಾರಿಗೆ ಲೋಕಸಭೆಗೆ ಆಯ್ಕೆ (ಬಲ್‍ರಂಪುರ ಕ್ಷೇತ,ಜನಸಂಘ ಪಕ್ಷ್ರ)
    * 1967-70: ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ
    * 1968-73: ಭಾರತೀಯ ಜನಸಂಘದ ಅಧ್ಯಕ್ಷ
    * 1971-77 ಲೋಕಸಭೆಗೆ ಮೂರನೇ ಬಾರಿ ಆಯ್ಕೆ(ಗ್ವಾಲಿಯರ್ ಮಧ್ಯಪ್ರದೇಶ ಜನಸಂಘ ಪಕ್ಷ)
    * 1977-80: ಲೋಕಸಭೆಗೆ ನಾಲ್ಕನೇಯ ಬಾರಿ ಆಯ್ಕೆ(ದೆಹಲಿ, ಜನತಾ ಪಕ್ಷದಿಂದ ಆಯ್ಕೆ)

    * 1977-79: ಮೋರಾರ್ಜಿ ದೇಸಾಯಿ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ಆಯ್ಕೆ
    * 1977-80: ಜನತಾ ಪಕ್ಷದ ಸಂಸ್ಥಾಪಕ ಸದಸ್ಯ
    * 1980-84: ಲೋಕಸಭೆಗೆ ಐದನೇ ಬಾರಿ ಆಯ್ಕೆ(ದೆಹಲಿ, ಬಿಜೆಪಿಯಿಂದ ಆಯ್ಕೆ)
    * 1980-86: ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ನೇಮಕ
    * 1986 : ರಾಜ್ಯಸಭೆ ಸದಸ್ಯರಾಗಿ ನೇಮಕ

    * 1991: ಆರನೇ ಬಾರಿ ಲೋಕಸಭೆಗೆ ಆಯ್ಕೆ(ಲಕ್ನೋ ಕ್ಷೇತ್ರ. ಉತ್ತರಪ್ರದೇಶ)
    * 1991-93: ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ
    * 1993-96: ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ, ಲೋಕಸಭೆಯ ವಿರೋಧ ಪಕ್ಷದ ನಾಯಕ
    * 1996: ಏಳನೇ ಬಾರಿ ಲೋಕಸಭೆಗೆ ಆಯ್ಕೆ(ಲಕ್ನೋ ಕ್ಷೇತ್ರ. ಉತ್ತರಪ್ರದೇಶ)
    * 1996 ಮೇ.16: ಪ್ರ್ರಧಾನಿಯಾಗಿ ನೇಮಕ. 13 ದಿನಗಳಲ್ಲಿ ಸರ್ಕಾರ ಪತನ

    * 1996-97: ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ನಿರ್ವಹಣೆ* 1998: ಎಂಟನೇ ಬಾರಿಗೆ ಲೋಕಸಭೆ ಆಯ್ಕೆ(ಲಕ್ನೋ ಕ್ಷೇತ್ರ. ಉತ್ತರಪ್ರದೇಶ)
    * 1998-99: ಎರಡನೇ ಬಾರಿ ಪ್ರಧಾನಿಯಾಗಿ ನೇಮಕ
    * 1999: ಒಂಭತ್ತನೆ ಬಾರಿ ಲೋಕಭೆಗೆ ಆಯ್ಕೆ (ಲಕ್ನೋ ಕ್ಷೇತ್ರ. ಉತ್ತರಪ್ರದೇಶ)
    * 1999 ಅಕ್ಟೋಬರ್ 13 ರಿಂದ 2004 ಮೇ 13ರವರೆಗೆ ಅಧಿಕಾರ
    * 2004: ಹತ್ತನೇ ಬಾರಿ ಲೋಕಸಭೆಗೆ ಆಯ್ಕೆ(ಲಕ್ನೋ ಕ್ಷೇತ್ರ. ಉತ್ತರಪ್ರದೇಶ)
    * 2005: ರಾಜಕೀಯದಿಂದ ನಿವೃತ್ತಿ

    https://youtu.be/RuoTJWHKNDY

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv