Tag: ಪ್ರವೀಣ್ ತೊಗಡಿಯಾ

  • ಪ್ರಧಾನಿ ಮೋದಿ ಚಹಾ ಮಾರಿಲ್ಲ: ಪ್ರವೀಣ್ ತೊಗಡಿಯಾ

    ಪ್ರಧಾನಿ ಮೋದಿ ಚಹಾ ಮಾರಿಲ್ಲ: ಪ್ರವೀಣ್ ತೊಗಡಿಯಾ

    – ಇದೊಂದು ಕೇವಲ ಪ್ರಚಾರದ ಗಿಮಿಕ್

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಚಹಾ ಮಾರಿಲ್ಲ ಎಂದು ಅಂತರಾಷ್ಟ್ರೀಯ ಹಿಂದೂ ಪರಿಷತ್ ಅಧ್ಯಕ್ಷ ಪ್ರವೀಣ್ ತೊಗಡಿಯಾ ಹೇಳಿದ್ದಾರೆ.

    ಈ ಹಿಂದೆ ಒಂದೇ ಸ್ಕೂಟರ್ ನಲ್ಲಿ ಆರ್ ಎಸ್‍ಎಸ್ ಪರೇಡ್ ಗೆ ತೆರಳುತ್ತಿದ್ದ ಮೋದಿ ಮತ್ತು ಪ್ರವೀಣ್ ತೊಗಡಿಯಾ ನಡುವೆ ಎಲ್ಲವೂ ಸರಿಯಿಲ್ಲ. ಕಳೆದೆರಡು ವರ್ಷಗಳಿಂದ ಕೇಂದ್ರ ಸರ್ಕಾರವನ್ನು ಟೀಕಿಸುತ್ತಾ ಬಂದಿರುವ ಪ್ರವೀಣ್ ತೊಗಡಿಯಾ ಮತ್ತೊಮ್ಮೆ ಬಿಜೆಪಿ ಹಾಗೂ ಸಂಘ ಪರಿವಾರವನ್ನು ಟೀಕಿಸಿದ್ದಾರೆ.

    ನಾನು ನರೇಂದ್ರ ಮೋದಿ ಅವರನ್ನು 43 ವರ್ಷಗಳಿಂದ ಬಲ್ಲೆ. ಇಷ್ಟು ವರ್ಷದಲ್ಲಿ ಒಮ್ಮೆಯೂ ಮೋದಿ ಅವರು ಚಹಾ ಮಾರಿರುವುದನ್ನು ನೋಡಿಲ್ಲ. ಪ್ರಚಾರಕ್ಕಾಗಿ ಪ್ರಧಾನಿಗಳು ಚಹಾ ಮಾರುತ್ತಿದ್ದರು ಎಂಬ ಅಸ್ತ್ರವನ್ನು ಬಿಜೆಪಿ ಬಳಸುತ್ತಿದೆ. ನಾನೊಬ್ಬ ವೈದ್ಯನಾಗಿದ್ದು, ಪರಿಚಯಸ್ಥರಲ್ಲಿ ಈ ಬಗ್ಗೆ ವಿಚಾರಿಸಿದ್ರೆ ಯಾರ ಬಳಿಯೂ ಸ್ಪಷ್ಟವಾದ ಉತ್ತರವಿಲ್ಲ. ಮೋದಿ ಚಹಾ ಮಾರಿರುವುದನ್ನು ಇದೂವರೆಗೂ ಯಾರು ಸಾಬೀತು ಮಾಡಿಲ್ಲ ಎಂದು ಪ್ರವೀಣ್ ತೊಗಡಿಯಾ ಹೇಳಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಹಿಂದೂ ಪರಿಷತ್ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ನಮ್ಮ ನೇತೃತ್ವದ ಸರ್ಕಾರ ರಚನೆಯಾದರೆ ಒಂದೇ ವಾರದಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗುವುದು. ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ರಾಮ ಮಂದಿರ ನಿರ್ಮಾಣ ಮಾಡುವ ಉದ್ದೇಶವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ್ರೂ ಮುಂದಿನ ಐದು ವರ್ಷ ಅವರು ರಾಮ ಮಂದಿರ ನಿರ್ಮಾಣ ಮಾಡಲಾರರು. ನರೇಂದ್ರ ಮೋದಿ ಮತ್ತು ಬೈಯಾಜಿ ಜೋಶಿ ಅವರು ದೇಶವನ್ನು ಕತ್ತಲಿನಲ್ಲಿ ಇರಿಸಿದ್ದಾರೆ. ತ್ರಿವಳಿ ತಲಾಖ್ ಗಾಗಿ ಮಧ್ಯರಾತ್ರಿ ಕಾನೂನು ರಚಿಸುವ ಇವ್ರು ರಾಮ ಮಂದಿರ ನಿರ್ಮಾಣ ಮಾಡುತ್ತಿಲ್ಲವೇಕೆ ಎಂದು ಪ್ರವೀಣ್ ತೊಗಡಿಯಾ ಪ್ರಶ್ನೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿಷ್ಣು ಸದಾಶಿವ ಕೊಕ್ಜೆ ವಿಹೆಚ್‍ಪಿಯ ಅಂತರಾಷ್ಟ್ರೀಯ ನೂತನ ಅಧ್ಯಕ್ಷರಾಗಿ ಆಯ್ಕೆ

    ವಿಷ್ಣು ಸದಾಶಿವ ಕೊಕ್ಜೆ ವಿಹೆಚ್‍ಪಿಯ ಅಂತರಾಷ್ಟ್ರೀಯ ನೂತನ ಅಧ್ಯಕ್ಷರಾಗಿ ಆಯ್ಕೆ

    ನವದೆಹಲಿ: ವಿಹೆಚ್‍ಪಿಯ 52 ವರ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದ ಅಂತರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಚುನವಣೆಯಲ್ಲಿ ವಿಷ್ಣು ಸದಾಶಿವ ಕೊಕ್ಜೆ ಅವರು ಜಯಗಳಿಸಿದ್ದಾರೆ.

    273 ಮತದಾರರಲ್ಲಿ 192 ಜನರು ಮಾತ್ರ ವಿಶ್ವ ಹಿಂದೂ ಪರಿಷತ್ ಚುನಾವಣೆಯಲ್ಲಿ ವೋಟ್ ಮಾಡಿದ್ದರು. ಕೊಕ್ಜೆ 131 ಮತಗಳನ್ನು ಗಳಿಸಿದ್ರೆ ಎದುರಾಳಿ ರಾಘವ್ ರೆಡ್ಡಿ 60 ಮತಗಳನ್ನು ಪಡೆದಿದ್ದಾರೆ. 1964ರಲ್ಲಿ ಸ್ಥಾಪನೆಯಾದ ವಿಶ್ವ ಹಿಂದೂ ಪರಿಷತ್‍ಗೆ ಮೊದಲ ಬಾರಿ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆದಿದೆ.

    ಸದ್ಯದ ಪರಿಸ್ಥಿತಿಯಲ್ಲಿ ಪ್ರವೀಣ್ ತೊಗಡಿಯಾ ಮತ್ತು ಪ್ರಧಾನಿ ಮೋದಿ ಮಧ್ಯೆ ಎಲ್ಲವೂ ಸರಿಯಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಮೂಲಕ ಪ್ರವೀಣ್ ತೊಗಡಿಯಾರನ್ನು ಕುಗ್ಗಿಸುವ ರಣತಂತ್ರಗಳು ಅಡಗಿವೆ ಅಂತಾ ವಿಶ್ಲೇಷಣೆ ಮಾಡಲಾಗ್ತಿದೆ.

    ಕೊಕ್ಜೆ ಅವರು ಈ ಮೊದಲು ಮಧ್ಯ ಪ್ರದೇಶ ಹೈಕೋರ್ಟ್ ನ ನ್ಯಾಯಾಧೀಶರಾಗಿ ಸೇವೆಸಲ್ಲಿಸಿದ್ದಾರೆ. ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.

    1939, ಡಿಸೆಂಬರ್ 6 ರಂದು ಮಧ್ಯಪ್ರದೇಶದಲ್ಲಿ ಕೊಕ್ಜೆ ಅವರು ಜನಿಸಿದ್ದಾರೆ. ಇಂಧೋರ್ ನಲ್ಲಿ ಎಲ್ ಎಲ್ ಬಿ ಮುಗಿಸಿದ ಬಳಿಕ 1964 ರಲ್ಲಿ ಕಾನೂನು ಅಭ್ಯಾಸ ಶುರು ಮಾಡಿದ್ದಾರೆ. ಹಾಗಾಗಿ ಹಿಂದುತ್ವಕ್ಕೂ ಕೊಕ್ಜೆ ಅವರಿಗೂ ಏನೂ ಸಂಬಂಧ ಇಲ್ಲ ಎಂದು ಪ್ರವೀಣ್ ತೊಗಾಡಿಯ ಆರೋಪ ಮಾಡಿದ್ದಾರೆ. ಈ ವಿಜಯದ ನಂತರ ತೊಗಾಡಿಯ ಅವರು ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಾರಾ ಎಂದು ನೋಡಬೇಕಿದೆ.