Tag: ಪ್ರವೀಣ್ ತಾಂಬೆ

  • ಐಪಿಎಲ್ 13ನೇ ಆವೃತ್ತಿ ಆರಂಭಕ್ಕೂ ಮುನ್ನವೇ ಕೆಕೆಆರ್‌ಗೆ ಶಾಕ್ ಕೊಟ್ಟ ಬಿಸಿಸಿಐ

    ಐಪಿಎಲ್ 13ನೇ ಆವೃತ್ತಿ ಆರಂಭಕ್ಕೂ ಮುನ್ನವೇ ಕೆಕೆಆರ್‌ಗೆ ಶಾಕ್ ಕೊಟ್ಟ ಬಿಸಿಸಿಐ

    ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿ ಆರಂಭಕ್ಕೂ ಮುನ್ನವೇ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಬಿಸಿಸಿಐ ಶಾಕ್ ನೀಡಿದೆ.

    ಈ ಬಾರಿಯ ಹರಾಜಿನಲ್ಲಿ ಕೆಕೆಆರ್ ತಂಡ ಸೇರಿದ್ದ ಅತ್ಯಂತ ಹಿರಿಯ ಆಟಗಾರ ಪ್ರವೀಣ್ ತಾಂಬೆ (48) ಅವರನ್ನು ಅನರ್ಹಗೊಳಿಸಲಾಗಿದೆ. ಪ್ರವೀಣ್ ತಾಂಬೆ ಅವರನ್ನು ಕೆಕೆಆರ್ ಹರಾಜಿನಲ್ಲಿ ಮೂಲ ಬೆಲೆ 20 ಲಕ್ಷ ರೂ. ಖರೀದಿಸಿತ್ತು. ಇದನ್ನೂ ಓದಿ: ‘ಈ ಸಲ ಕಪ್ ನಮ್ದೆ’- ಮಾದಪ್ಪನ ಮೊರೆ ಹೋದ ಆರ್‌ಸಿಬಿ ಅಭಿಮಾನಿ

    2018ರಲ್ಲಿ ನಿವೃತ್ತಿ ಪಡೆದಿದ್ದ ತಾಂಬೆ ಸಿಂಥಿನ್ ಟಿ-10 ಟೂರ್ನಿಯಲ್ಲಿ ಆಡಿದ್ದರು. ಇದಲ್ಲದೆ, ಅವರು ಕೆಲವು ವಿದೇಶಿ ಟಿ20 ಲೀಗ್‍ಗಳನ್ನು ಸಹ ಆಡಿದ್ದರು. ಇದಕ್ಕಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ತಾಂಬೆ ತಮ್ಮ ರಾಜೀನಾಮೆಯನ್ನು ಹಿಂತೆಗೆದುಕೊಂಡಿದ್ದರು. ಬಿಸಿಸಿಐ ನಿಯಮಗಳ ಅನ್ವಯ ಯಾವುದೇ ಕ್ರಿಕೆಟ್ ಆಟಗಾರ ಟೀಂ ಇಂಡಿಯಾ ಅಥವಾ ಐಪಿಎಲ್ ಆಡಬೇಕು ಎಂದರೆ ವಿದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸುವಂತಿಲ್ಲ.

    ಬಲಗೈ ಸ್ಪಿನ್ನರ್ ತಂಬೆ ಕೊನೆಯ ಬಾರಿಗೆ 2016ರಲ್ಲಿ ಐಪಿಎಲ್ ಆಡಿದ್ದರು. ತಾಂಬೆ ವಿರುದ್ಧ ಕ್ರಮ ಕೈಗೊಂಡ ಬಗ್ಗೆ ಕೆಕೆಆರ್‌ ಫ್ರ್ಯಾಂಚೈಸ್ ಗೆ ತಿಳಿಸಲಾಗಿದೆ. ಐಪಿಎಲ್‍ನಲ್ಲಿ ತಾಂಬೆ ಅವರಿಗೆ ಆಡಲು ಅನುಮತಿ ನೀಡುವುದಿಲ್ಲ. ಅವರೊಬ್ಬರಿಗೆ ಆಡಲು ಅವಕಾಶ ನೀಡಿದರೆ ಉಳಿದವರಿಗೂ ಅನುಮತಿ ನೀಡಬೇಕಾಗುತ್ತದೆ ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.

    ಕೆಕೆಆರ್ ವಿರುದ್ಧ ತಾಂಬೆ ಹ್ಯಾಟ್ರಿಕ್:
    ಐಪಿಎಲ್ 7ನೇ ಆವೃತ್ತಿಯಲ್ಲಿ ಕೆಕೆಆರ್ ವಿರುದ್ಧ ತಾಂಬೆ ಹ್ಯಾಟ್ರಿಕ್ ಸಾಧನೆ ಪಡೆದಿದ್ದರು. ಪಂದ್ಯದ 16ನೇ ಓವರಿನ ಮೊದಲ ಎಸೆತದಲ್ಲಿ ತಾಂಬೆ ವೈಡ್ ಬಾಲ್ ಎಸೆದಿದ್ದರು, ಆಗ ವಿಕೆಟ್‍ ಕೀಪರ್ ಮನೀಶ್ ಪಾಂಡೆ ಬ್ಯಾಟ್ಸ್‌‌ಮನ್‌‌ನನ್ನು ಸ್ಟಂಪ್ ಮಾಡಿದ್ದರು. ಅವರ ಮುಂದಿನ ಎಸೆತದಲ್ಲಿ ತಾಂಬೆ ಯೂಸುಫ್ ಪಠಾಣ್ ಅವರನ್ನು ಪೆವಿಲಿಯನ್‍ಗೆ ಕಳುಹಿಸಿದ್ದರು. ಬಳಿಕ ರಿಯಾನ್ ಟೆನ್ ಡಾಸ್ಚೇಟ್ ಅವರು ಎಲ್‍ಬಿಡಬ್ಲ್ಯೂಗೆ ಒಳಗಾಗಿ ವಿಕೆಟ್ ಕಳೆದುಕೊಂಡಿದ್ದರು.

    ತಾಂಬೆ 2018ರಲ್ಲಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ)ಗೆ ರಾಜೀನಾಮೆ ನೀಡಿ, ನಿವೃತ್ತಿ ಘೋಷಿಸಿದ್ದರು. ಆದರೆ ವಿದೇಶಿ ಲೀಗ್ ಆಡಿದ ನಂತರ, ಅವರು ತಮ್ಮ ರಾಜೀನಾಮೆಯನ್ನು ಹಿಂತೆಗೆದುಕೊಳ್ಳುವ ಮೂಲಕ ಮುಂಬೈ ಲೀಗ್ ಆಡಿದ್ದರು.

  • ಕೆಕೆಆರ್ ಆಟಗಾರನಿಗೆ ಶಾಕ್‍ ಕೊಟ್ಟ ಬಿಸಿಸಿಐ

    ಕೆಕೆಆರ್ ಆಟಗಾರನಿಗೆ ಶಾಕ್‍ ಕೊಟ್ಟ ಬಿಸಿಸಿಐ

    – ಪ್ರವೀಣ್ ತಾಂಬೆ ಐಪಿಎಲ್‍ಗೆ ಅನರ್ಹ

    ಮುಂಬೈ: ಐಪಿಎಲ್ ಕ್ರಿಕೆಟ್ ಲೀಗ್ 2020ಕ್ಕೆ ಮುಂಬೈ ಮೂಲದ ಅನುಭವಿ ಸ್ಪಿನ್ ಆಟಗಾರ ಪ್ರವೀಣ್ ತಾಂಬೆರನ್ನು ಅನರ್ಹಗೊಳಿಸಿ ಬಿಸಿಸಿಐ ಆದೇಶ ಪ್ರಕಟಿಸಿದೆ.

    48 ವರ್ಷದ ಪ್ರವೀಣ್ ತಾಂಬೆ ಅವರನ್ನು ಈ ಬಾರಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಖರೀದಿ ಮಾಡಿತ್ತು. ಮೂಲ ಬೆಲೆ 20 ಲಕ್ಷ ರೂ.ಗಳನ್ನು ಹೊಂದಿದ್ದ ಪ್ರವೀಣ್ ಅವರನ್ನು ಬೇರೆ ಯಾವುದೇ ತಂಡದ ಮಾಲೀಕರು ಖರೀದಿ ಮಾಡಲು ಮುಂದಾಗದ ಕಾರಣ ಕೋಲ್ಕತ್ತಾ ತಂಡದ ಸುಲಭವಾಗಿ ಪ್ರವೀಣ್‍ರನ್ನು ಪಡೆದಿತ್ತು.

    ಪ್ರವೀಣ್ ಕಳೆದ ವರ್ಷ ನಡೆದ ಅಬುಧಾಬಿಯಲ್ಲಿ ನಡೆದ ಸಿಂಥಿನ್ ಟಿ10 ಟೂರ್ನಿಯಲ್ಲಿ ಭಾಗಿಯಾಗಿದ್ದರು. ಬಿಸಿಸಿಐ ನಿಯಮಗಳ ಅನ್ವಯ ಯಾವುದೇ ಕ್ರಿಕೆಟ್ ಆಟಗಾರ ಟೀಂ ಇಂಡಿಯಾ ಅಥವಾ ಐಪಿಎಲ್ ಆಡಬೇಕು ಎಂದರೆ ವಿದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಭಾಗವಹಿಸುವಂತಿಲ್ಲ. ಒಂದೊಮ್ಮೆ ಭಾಗವಹಿಸಿದ್ದರೂ ಬಿಸಿಸಿಐನಿಂದ ಎನ್‍ಒಸಿ ಪಡೆದುಕೊಳ್ಳಬೇಕೆಂಬ ಷರತ್ತು ವಿಧಿಸಲಾಗಿದೆ. ಆದರೆ ಪ್ರವೀಣ್ ತಾಂಬೆ ಬಿಸಿಸಿಐ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಕಾರಣ ಸದ್ಯ ಐಪಿಎಲ್‍ಗೆ ದೂರವಾಗಿದ್ದಾರೆ.

    ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದು, ಭಾರತೀಯ ಕ್ರಿಕೆಟ್ ಆಟಗಾರರು ಐಪಿಎಲ್ ಆಡಲು ಇಷ್ಟಪಟ್ಟರೆ ವಿದೇಶಿ ಟೂರ್ನಿಗಳಲ್ಲಿ ಆಡುವಂತಿಲ್ಲ. ಐಪಿಎಲ್ ಬೇಡ ಎಂದರೆ ಅವರು ಯಾವ ಟೂರ್ನಿ ಬೇಕಾದರೂ ಆಡಬಹುದು. ಪ್ರವೀಣ್ ಅಬುಧಾಬಿಯಲ್ಲಿ ನಡೆದ ಟಿ10 ಲೀಗ್‍ಗೆ ಆಟಗಾರರ ಡ್ರಾಫ್ಟ್ ಲಿಸ್ಟ್ ನಲ್ಲಿ ಹೆಸರು ಕಳುಹಿಸಿದ್ದರು. ಇದೇ ವೇಳೆ ಐಪಿಎಲ್ ಟೂರ್ನಿಗೂ ಹೆಸರು ನೀಡಿದ್ದರು. ಆದ್ದರಿಂದ ಅವರನ್ನು ಐಪಿಎಲ್‍ನಿಂದ ದೂರ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಪ್ರವೀಣ್ ತಾಂಬೆ ರಾಜಸ್ಥಾನ್ ರಾಯಲ್ಸ್, ಗುಜರಾತ್ ಲಯನ್ಸ್, ಹೈದರಾಬಾದ್ ತಂಡಗಳ ಪರ ಆಡಿದ್ದರು. 2013ರಲ್ಲಿ ಐಪಿಎಲ್‍ನಲ್ಲಿ ಪಾದಾರ್ಪಣೆ ಮಾಡಿರುವ ಪ್ರವೀಣ್ ಇದುವರೆಗೂ 33 ಪಂದ್ಯಗಳಿಂದ 28 ವಿಕೆಟ್ ಪಡೆದಿದ್ದಾರೆ.