ಮಂಗಳೂರು: ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಪ್ರಮುಖ ಆರೋಪಿಗಳ ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹತ್ಯೆ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ತಲ್ವಾರ್ ಮತ್ತು ಬೈಕ್ ರಿಕವರಿಗೆ ಹುಡುಕಾಟ ನಡೆಸಲಾಗುತ್ತಿದೆ. ಇನ್ನೂ ನಾಲ್ವರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಕೇಸ್ ಟ್ರೇಸ್ ಆಗಿದೆ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಈಗಾಗಲೇ ಬಂಧಿತನಾಗಿರುವ ಶಫೀಕ್ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ನೌಷನ್ ಬಗ್ಗೆ ಶಫೀಕ್ ಬಾಯಿಬಿಟ್ಟಿದ್ದ. ಬಳಿಕ ಸಿಸಿಟಿವಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಸಹಾಯ ಮಾಡಿದ ಇನ್ನೂ ನಾಲ್ವರು ಆರೋಪಿಗಳು ಸಿಗಬೇಕಿದೆ. ಇದನ್ನೂ ಓದಿ: ಫಾಝಿಲ್ ಹತ್ಯೆ ಪ್ರಕರಣ – ನಾಲ್ವರು ಹಂತಕರು ಅರೆಸ್ಟ್
ನೌಷನ್ ಪ್ರಕರಣದ ಮಾಸ್ಟರ್ ಮೈಂಡ್ ಎಂಬ ಶಂಕೆ ವ್ಯಕ್ತವಾಗಿದ್ದು, ಇಂದು ಮಧ್ಯಾಹ್ನದ ಒಳಗೆ ಪೊಲೀಸರು ಸುದ್ದಿಗೋಷ್ಠಿ ನಡೆಸಿ ಕೇಸ್ ನ ಸಂಪೂರ್ಣ ಮಾಹಿತಿ ಬಹಿರಂಗಪಡಿಸುವ ಸಾಧ್ಯತೆಗಳಿವೆ.
Live Tv
[brid partner=56869869 player=32851 video=960834 autoplay=true]
ಮಂಗಳೂರು: ಸಾಲುಸಾಲು ಹಿಂದೂಗಳ ಹತ್ಯೆಯ ನಂತರ ಧಾರ್ಮಿಕ ಹೋರಾಟಗಾರರು ಸ್ವಾಮೀಜಿಗಳು ಅಸಮಾಧಾನಗೊಂಡಿದ್ದಾರೆ. ಬಿಜೆಪಿಯ ಕಾರ್ಯಕರ್ತರು ತನ್ನದೇ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ನಡುವೆ ಮುಂದಿನ ಚುನಾವಣೆಯ ಹೊತ್ತಿಗೆ ಹೊಸ ಹಿಂದೂ ಪಕ್ಷದ ಉದಯವಾಗುತ್ತದೆ ಎಂಬ ನೇರ ಎಚ್ಚರಿಕೆ ನೀಡಲಾಗಿದೆ.
ಪ್ರವೀಣ್ ಮನೆಗೆ ಭೇಟಿ ಕೊಟ್ಟು ಸಾಂತ್ವಾನ ಹೇಳಲು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ತಡೆಯೊಡ್ಡಿತ್ತು. ಟೋಲ್ ಬಳಿ ನಿಂತು ಪ್ರಮೋದ್ ಮುತಾಲಿಕ್ ಹಿಂದೂ ಪಕ್ಷ ಕಟ್ಟುವ ಘೋಷಣೆಯನ್ನು ಮಾಡಿಬಿಟ್ಟಿದ್ದಾರೆ. ಇತ್ತ ಪ್ರವೀಣ್ ಮನೆಗೆ ಭೇಟಿ ಕೊಟ್ಟ ಸಂತೋಷ್ ಗುರೂಜಿ ಬೆಳವಣಿಗೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಹಿಂದುಗಳಿಗೆ ಸರ್ಕಾರದಿಂದ ಯಾವುದೇ ರಕ್ಷಣೆ ಇಲ್ಲ ನಮ್ಮ ರಕ್ಷಣೆಗೆ ನಾವು ಆಯುಧಗಳನ್ನು ಹಿಡಿದುಕೊಳ್ಳೋಣ ಎಂದು ಕರೆ ನೀಡಿದರು. ಇದನ್ನೂ ಓದಿ: ಆ.4 ರಂದು ರಾಜ್ಯಕ್ಕೆ ಬರಲಿದ್ದಾರೆ ಅಮಿತ್ ಶಾ
ಒಟ್ಟಿನಲ್ಲಿ ಕರಾವಳಿಯಲ್ಲಿ ಹರಿದ ಬಿಜೆಪಿ ಮುಖಂಡ ಪ್ರವೀಣ್ ನೆತ್ತರು ಕಾರ್ಯಕರ್ತರಿಗೆ ಸಹಿಸಿಕೊಳ್ಳೋಕೆ ಆಗ್ತಿಲ್ಲ. ಕಾರ್ಯಕರ್ತರು ಬೆಂಕಿ ಮಾತುಗಳ ಮೂಲಕ ಮಂಗಳಾರತಿ ಮಾಡ್ತಿದ್ದಾರೆ. ಇಷ್ಟಕ್ಕೇ ಇದು ಮುಗಿದಿಲ್ಲ. ಈ ಮಧ್ಯೆ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಸಿಡಿಸಿದ ಬೆಂಕಿ ಬಾಂಬ್ ಬಿಜೆಪಿಯ ವಿರುದ್ಧ ರೋಷಾಗ್ನಿಗೆ ತುಪ್ಪ ಸುರಿದಂತೆ ಆಗಿದೆ. ಅಕ್ಷರಶಃ ಥಂಡಾ ಹೊಡೆದಂತೆ ಆಗಿದೆ ಬಿಜೆಪಿ ಪರಿಸ್ಥಿತಿ. ಚಕ್ರವರ್ತಿ ಸೂಲಿಬೆಲೆ ಬಿಜೆಪಿ ವಿರುದ್ಧ ಹಲವು ಚಾರ್ಜ್‍ಶೀಟ್ ಮಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆಗಳು ನಡೆದಿರುವ ಹಿನ್ನೆಲೆಯಲ್ಲಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಇದೀಗ ನಗರಕ್ಕೆ ಭೇಟಿ ನೀಡಿದ್ದಾರೆ.
ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಪ್ರವೀಣ್ ಸೂದ್ ಅವರು ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಪ್ರವೀಣ್ ಕುಮಾರ್ ನೆಟ್ಟಾರು ಹಾಗೂ ಫಾಝಿಲ್ ಹತ್ಯೆ ತನಿಖೆಯ ಪ್ರಗತಿ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಇದೇ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಬಂದೋಬಸ್ತ್ ವಿಚಾರಗಳ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ- ಮತ್ತಿಬ್ಬರು ಪೊಲೀಸರ ವಶಕ್ಕೆ
ಪಶ್ಚಿಮ ವಲಯ ಐಜಿಪಿ, ಕಮೀಷನರ್ ಹಾಗೂ ಎಸ್‍ಪಿಯವರು ಮಹಾ ನಿರ್ದೇಶಕರಿಗೆ ವರದಿ ನೀಡುತ್ತಿದ್ದಾರೆ. ಸರ್ಕ್ಯೂಟ್ ಹೌಸ್ ನಲ್ಲಿ ಉಪಹಾರ ಮುಗಿಸಿ ಕಮೀಷನರ್ ಕಚೇರಿ ಹಾಗೂ ಎಸ್‍ಪಿ ಕಚೇರಿಗೆ ಪ್ರವೀಣ್ ಸೂದ್ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ಸುರತ್ಕಲ್ ಫಾಜಿಲ್ ಹತ್ಯೆ ಕೇಸಲ್ಲಿ ನಾಲ್ವರು ಭಾಗಿ ಶಂಕೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ದಿನಗಳ ಅಂತರದಲ್ಲಿ ಮೂರು ಕೊಲೆಗಳು ನಡೆದಿದೆ. ಮಸೂದ್ ಬಳಿಕ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ನಂತರ ಫಾಝಿಲ್ ಹತ್ಯೆ ನಡೆದಿದೆ.
Live Tv
[brid partner=56869869 player=32851 video=960834 autoplay=true]
ಮಂಗಳೂರು: ಮಸೂದ್ ಕೊಲೆಯಾಗಿ 10 ದಿನಗಳೇ ಕಳೆದರೂ ನಮ್ಮನ್ನು ಕೇಳಲು ಯಾರೂ ಬಂದಿಲ್ಲ ಎಂದು ಕಳಂಜದಲ್ಲಿ ಮಸೂದ್ ಸಂಬಂಧಿ ಮೊಹಮ್ಮದ್ ಹ್ಯಾರೀಸ್ ಆರೋಪ ಮಾಡಿದರು.
ಇಂದು ಕಳಂಜದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸೂದ್ ಕುಟುಂಬಕ್ಕೆ ನ್ಯಾಯ ಸಿಗಬೇಕು. ನಮ್ಮ ಕ್ಷೇತ್ರದ ಶಾಸಕರಾದ ಅಂಗಾರ ಅವರು ಬರಲಿಲ್ಲ. ಪ್ರವೀಣ್ ಮನೆಗೆ ಸಿಎಂ ಬೊಮ್ಮಾಯಿ ಬಂದ್ರು. ಯಾರೇ ಕೊಲೆಯಾದರು ನಾವು ಖಂಡಿಸುತ್ತೇವೆ ಎಂದು ಸಿಎಂ ಹೇಳಿದರು. ಆದರೆ ಪ್ರವೀಣ್ ಮನೆಗೆ ಬಂದ ಸಿಎಂ ಮಸೂದ್ ಮನೆಗೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಆರೋಪಿಗಳೊಂದಿಗೆ ಅಜಿತ್‍ಗೆ ಸಂಪರ್ಕವಿದೆ – ಆದಷ್ಟು ಬೇಗ ಇತರ ಆರೋಪಿಗಳನ್ನು ಬಂಧಿಸುತ್ತೇವೆ: ಶಶಿಕುಮಾರ್
ಮಸೂದ್ ಧಾರ್ಮಿಕ ರಾಜಕೀಯ ಸಂಘಟನೆಗಳ ಸದಸ್ಯ ಅಲ್ಲ. ನಮ್ಮ ಕುಟುಂಬಕ್ಕೆ ನ್ಯಾಯ ಕೊಡಿ ಎಂದು ಹ್ಯಾರಿಸ್ ಮನವಿ ಮಾಡಿಕೊಂಡರು.
ಜುಲೈ 26 ರಂದು ಪ್ರವಿಣ್ ಕುಮಾರ್ ನೆಟ್ಟಾರು ಹತ್ಯೆಯಾಗಿತ್ತು. ಈ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಪ್ರವೀಣ್ ಅಂತಿಮ ದರ್ಶನ ಪಡೆಯಲು ತೆರಳಿದ್ದು ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಕಾರನ್ನೇ ಪಲ್ಟಿ ಮಾಡಲು ಯತ್ನಿಸಿದ್ದರು. ಇದಾದ ಬಳಿಕ ಸಿಎಂ ಅವರು ಪ್ರವೀಣ್ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಂತ್ವಾನ ಹೇಳಿದ್ದರು. ಇದನ್ನೂ ಓದಿ: ಕೊಲೆ ಮಾಡಿ ಮನೆಗೆ ಬರಲು ಸಾಧ್ಯವೇ..?: ಬಂಧಿತ ಝಾಕೀರ್ ತಾಯಿ
Live Tv
[brid partner=56869869 player=32851 video=960834 autoplay=true]
ಮಂಗಳೂರು: ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಹಿಂದೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೈವಾಡ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶಂಕೆ ವ್ಯಕ್ತಪಡಿಸಿದರು.
ಪ್ರವೀಣ್ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರೀತಿಯಿಂದ ಬದುಕುತ್ತಿದ್ದ ಪ್ರವೀಣ್ ಇಂದು ನಮ್ಮೊಂದಿಗೆ ಇಲ್ಲ. ಕೇರಳ ಮಾದರಿಯಲ್ಲಿ ಪ್ರವೀಣ್ ಕೊಲೆಯಾಗಿದೆ. ಕುತ್ತಿಗೆಯಿಂದ ಮೇಲೆ ತಲೆ ಕಡಿದು ಕೊಲೆ ಮಾಡಿದ್ದಾರೆ. ಪಾಪ್ಯುಲರ್ ಫ್ರಂಟ್ ಇಂಡಿಯಾ ಕೊಲೆ ಮಾಡುವ ರೀತಿಯಲ್ಲಿ ಇದೆ ಎಂದು ಆರೋಪಿಸಿದರು.
ಸಿರಿಯಾದಲ್ಲಿ ಟ್ರೈನಿಂಗ್ ಪಡೆದು ಕೊಲೆ ಮಾಡುತ್ತಾರೆ. ರುದ್ರೇಶ್ ಕೊಲೆ ಕೂಡ ಇದೇ ರೀತಿಯಲ್ಲಿ ಮಾಡಿದ್ದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೈವಾಡ ಶಂಕೆಯಿದೆ. ಪ್ರಕರಣವನ್ನು ಎನ್‍ಐಎ ತನಿಖೆಗೆ ನೀಡಿದ್ದೇವೆ. ಆದಷ್ಟು ಬೇಗ ಪ್ರವೀಣ್ ಸಾವಿಗೆ ನ್ಯಾಯ ಸಿಗಬೇಕು. ನನ್ನ ಮನೆಯಿಂದ 8 ಕಿ.ಮೀ ದೂರದಲ್ಲಿ ಕೊಲೆ ನಡೆದಿದೆ ಎಂದರು.
ಇದೇ ವೇಳೆ ರಾಜ್ಯದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ಆಕ್ರೋಶ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಂತಹ ಘಟನೆ ಆದಾಗ ಆಕ್ರೋಶ ಆಗುವುದು ಸಹಜ. ನನಗೂ ಆಕ್ರೋಶ, ಸಿಟ್ಟು ಬಂದಿದೆ. ಕಾನೂನು ರೀತಿಯಲ್ಲಿ ಇದನ್ನು ಬಗ್ಗು ಬಡಿಯಬೇಕು. ಭಯೋತ್ಪಾದನೆ ದೂರ ಮಾಡಬೇಕು. ಮಸೂದ್ ಕೊಲೆಯ ಬಗ್ಗೆಯೂ ತನಿಖೆ ಆಗಬೇಕು. ಆರೋಪಿಗಳ ಬಂಧನವಾಗಿದೆ ಪೂರ್ಣ ತನಿಖೆಯಾಗಬೇಕು ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು.
Live Tv
[brid partner=56869869 player=32851 video=960834 autoplay=true]
ಮಂಗಳೂರು: ಇತ್ತೀಚೆಗೆ ದುಷ್ಕರ್ಮಿಗಳ ದಾಳಿಗೆ ಮೃತಪಟ್ಟ ಬಿಜೆಪಿ ಯುವಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಮನೆಗೆ ಇಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಈ ವೇಳೆ ಸಚಿವೆ ಕುಟುಂಬಕ್ಕೆ 5 ಲಕ್ಷ ರೂ. ನಗದು ಪರಿಹಾರ ನೀಡಿದರು. ಅಲ್ಲದೆ ಒಂದು ತಿಂಗಳ ಸಂಬಳ ನೀಡುವುದಾಗಿ ಘೋಷಣೆ ಮಾಡಿದರು. ಇದೇ ವೇಳೆ ಹಲವಾರು ಕಾರ್ಯಕರ್ತರ ಚೆಕ್ ವಿತರಣೆಯನ್ನು ಕೂಡ ಶೋಭಾ ಕರಂದ್ಲಾಜೆ ಮಾಡಿದರು. ಪ್ರವೀಣ್ ಸಾವಿಗೆ ನ್ಯಾಯ ಒದಗಿಸಬೇಕೆಂದು ಈ ಸಂದರ್ಭದಲ್ಲಿ ಅಚಿವೆ ಮುಂದೆ ಕುಟುಂಬಸ್ಥರು ಕಣ್ಣೀರಿಟ್ಟರು. ಇದನ್ನೂ ಓದಿ: ಕೊಲೆ ಮಾಡಿ ಮನೆಗೆ ಬರಲು ಸಾಧ್ಯವೇ..?: ಬಂಧಿತ ಝಾಕೀರ್ ತಾಯಿ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು (31), ಜುಲೈ 26 ರಂದು ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು. ಇದನ್ನೂ ಓದಿ: ಹಲಾಲ್, ಜಟ್ಕಾ ಜಟಾಪಟಿಯೇ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಗೆ ಕಾರಣವಾಯ್ತಾ..?
ಪ್ರವೀಣ್ ಹತ್ಯೆಯ ಬಳಿಕ ಕರಾವಳಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿ ಇಬ್ಬರು ಪ್ರಮುಖ ಆರೋಪಿಗಳಾದ ಸವಣೂರು ಮೂಲದ ಝಕೀರ್ ಮತ್ತು ಶಫೀಕ್ ಬೆಳ್ಳಾರೆಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇದೀಗ ಮತ್ತೊಬ್ಬ ಆರೋಪಿಯನ್ನು ಕೇರಳದಲ್ಲಿ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಕೂಡ ದೊರೆತಿದೆ.
Live Tv
[brid partner=56869869 player=32851 video=960834 autoplay=true]
ಮಂಗಳೂರು: ನನ್ನ ಮಗ ಕಷ್ಟಪಟ್ಟು ಸ್ಕೀಮ್ ಬ್ಯುಸಿನೆಸ್ ಅನ್ನು ಶುರುಮಾಡಿದ್ದ. ಕೊಲೆ ಮಾಡಿ ಮನೆಗೆ ಬರಲು ಸಾಧ್ಯವೇ? ಎಂದು ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಸಂಬಂಧ ಬಂಧಿತನಾಗಿರುವ ಝಾಕೀರ್ ತಾಯಿ ಮೈಮುನಾ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮೈಮುನಾ, ನನ್ನ ಮಗ ನಿರಪರಾಧಿಯಾದಿ ಕೊಲೆ ಮಾಡಿಲ್ಲ. ನಮ್ಮ ಮನೆಗೆ ಅಂದು ನೆಂಟರು ಬಂದಿದ್ದರು. ಕೋಳಿ ತೆಗೆದುಕೊಂಡು ಬರಲು ಝಾಕೀರ್ ಅಂಗಡಿಗೆ ಹೋಗಿದ್ದ. ನಮ್ಮ ಪರಿಚಯದ ಪೊಲೀಸರೇ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಫಾಜಿಲ್ ಹತ್ಯೆ ಪ್ರಕರಣ – ಓರ್ವ ಆರೋಪಿ ವಶಕ್ಕೆ
ಪೊಲೀಸ್ ಠಾಣೆ ಯಿಂದಲೂ ಒಂದು ಬಾರಿ ಫೋನ್ ಮಾಡಿದ್ದಾನೆ. ನಾನು ತಪ್ಪು ಮಾಡಿಲ್ಲ ಎಂದು ನಮಗೆ ಧೈರ್ಯ ಹೇಳಿ ಹೋಗಿದ್ದಾನೆ. ಅವನೇ ಆರೋಪಿ ಎಂದು ಹೇಳುವುದು ನಮಗೆ ಬೇಸರವಾಗಿದೆ ಎಂದು ಹೇಳುತ್ತಾ ಬೇಸರ ವ್ಯಕ್ತಪಡಿಸಿದರು.
ಈ ಹಿಂದೆ ಮಾತನಾಡಿದ್ದ ಝಾಕೀರ್ ಪತ್ನಿ, ನನ್ನ ಪತಿಯನ್ನು ಬಿಟ್ಟು ಬಿಡಿ. ನನ್ನ ಗಂಡ ಯಾವುದೇ ತಪ್ಪು ಮಾಡಿಲ್ಲ. ನನ್ನ ಗಂಡ ಝಾಕೀರ್ ನಿರಪರಾಧಿ. ನನ್ನ ಗಂಡನನ್ನು ನನಗೆ ಬಿಟ್ಟುಕೊಡಿ. ನನ್ನ ಗಂಡನನ್ನು ಯಾಕೆ ಜೈಲಿನಲ್ಲಿ ಇಟ್ಟಿದ್ದೀರಿ. ನನ್ನ ಗಂಡ ಏನು ತಪ್ಪು ಮಾಡಿದ್ದಾರೆ ಎಂದು ಪ್ರೂಫ್ ಕೊಡಿ. ಪ್ರೂಫ್ ಕೊಟ್ಟು ನನ್ನ ಗಂಡನನ್ನು ಅರೆಸ್ಟ್ ಮಾಡಿ ಎಂದು ಕಿಡಿಕಾರಿದ್ದರು.
ಏನಿದು ಘಟನೆ:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು (31), ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು.
ಪ್ರವೀಣ್ ಹತ್ಯೆಯ ಬಳಿಕ ಕರಾವಳಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿ ಇಬ್ಬರು ಪ್ರಮುಖ ಆರೋಪಿಗಳಾದ ಸವಣೂರು ಮೂಲದ ಝಕೀರ್ ಮತ್ತು ಶಫೀಕ್ ಬೆಳ್ಳಾರೆಯನ್ನು ಬಂಧಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಸಮರ್ಥ ಅಧಿಕಾರಿಗಳನ್ನು ನಂಬದೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಎನ್‍ಐಎಗೆ ವಹಿಸುವ ನಾಟಕವಾಡಿ ಕಗ್ಗೊಲೆಗಳ ತನಿಖೆಗೆ ‘ಸಮಾಧಿ’ ಕಟ್ಟಲು ಹೊರಟಿದೆ. ಎರಡು ಕೊಲೆಗಳು ನಡೆದ ಬೆಳ್ಳಾರೆ ಗ್ರಾಮದಲ್ಲಾದರೂ ಬೊಮ್ಮಾಯಿ ಅವರು ಮುಖ್ಯಮಂತ್ರಿ ಹೊಣೆಯ ಘನತೆಗೆ ತಕ್ಕಂತೆ ಶಾಂತಿ ರಕ್ಷಣೆ ಬಗ್ಗೆ ಒಂದು ಮಾತನ್ನಾದರೂ ಹೇಳಿದಿರಾ? ಇಲ್ಲ, ಚುನಾವಣೆ ವರ್ಷವಲ್ಲ. ಕೊಲೆಗಳೇ ಹೆಚ್ಚೆಚ್ಚು ಆಗಬೇಕು, ಅವರ ಮತಪೆಟ್ಟಿಗೆ ಕೊಬ್ಬಬೇಕು. ನೆತ್ತರಧಾರೆ ಹರಿದಷ್ಟೂ ಭರ್ಜರಿ ಮತಧಾರೆ ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಸರ್ಕಾರವನ್ನು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಟ್ವೀಟ್‍ನಲ್ಲಿ ಏನಿದೆ:
ನಾಡಿನ ಜನರನ್ನಷ್ಟೇ ಅಲ್ಲ, ತನ್ನ ಕಾರ್ಯಕರ್ತರನ್ನೇ ರಕ್ಷಣೆ ಮಾಡಿಕೊಳ್ಳಲಾಗದ ಅಸಮರ್ಥ, ಅಸಹಾಯಕ ಬಿಜೆಪಿ ಸರ್ಕಾರ, ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಎನ್‍ಐಎ ತನಿಖೆಗೆ ಒಪ್ಪಿಸಿದೆ. ಆದರೆ, ಕರಾವಳಿಯಲ್ಲಿ ನಡೆದ ಎಲ್ಲ ಹತ್ಯೆಗಳನ್ನೂ ಎನ್‍ಐಎ ತನಿಖೆಗೆ ವಹಿಸಲು ಹಿಂಜರಿಯುತ್ತಿದೆ! ಏಕೆ? ಕರಾವಳಿ ಭಾಗದಲ್ಲಿ ಪ್ರತಿ ಕೊಲೆ ಬಗ್ಗೆಯೂ ಸರ್ಕಾರಕ್ಕೆ ಮಾಹಿತಿ ಇದೆ. ಆ ಕೊಲೆಗಳು ಏಕಾಗುತ್ತಿವೆ ಎನ್ನುವುದೂ ಗೊತ್ತಿದೆ. ಆದರೆ, ‘ಡಬಲ್ ಎಂಜಿನ್ ಸರ್ಕಾರ ಡಬಲ್ ಗೇಮ್’ ಆಡುತ್ತಿದೆ. ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷ ಎಂದು ಬೀಗುವ ಬಿಜೆಪಿ ಪಕ್ಷ, ತನಗೆ ಅಧಿಕಾರ ತಂದುಕೊಟ್ಟ ಯುವಕರ ಜೀವಗಳಿಗೇ ಗ್ಯಾರಂಟಿ ಕೊಡದಷ್ಟು ದುರ್ಬಲವಾಗಿದೆ. ಇದನ್ನೂ ಓದಿ: ದ.ಕ ಜಿಲ್ಲೆಯಲ್ಲಿ 3 ದಿನಗಳ ಕಾಲ ಕಟ್ಟೆಚ್ಚರ – ಗುಪ್ತಚರ ಇಲಾಖೆಯಿಂದ ಸ್ಫೋಟಕ ಮಾಹಿತಿ
ಪ್ರವೀಣ್ ಹತ್ಯೆ ಪ್ರಕರಣವನ್ನು ಎನ್‍ಐಎ ತನಿಖೆಗೆ ಒಪ್ಪಿಸಿ ವೀರಾವೇಶ ಮೆರೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರಿನಲ್ಲಿ ಜನರಿಗೆ ಕೊಟ್ಟ ಸಂದೇಶವೇನು? ಅವರ ನಾಲಿಗೆಯ ಮೇಲೆ ಒಮ್ಮೆಯಾದರೂ “ಶಾಂತಿ ಕಾಪಾಡಿ” ಎನ್ನುವ ಮಾತು ಬಂತಾ? ಬರಲಿಲ್ಲ! ನೆಮ್ಮದಿಗಾಗಿ ಕಿಂಚಿತ್ತು ಕ್ರಮ ವಹಿಸಿದ್ದೀರಾ? ಅದೂ ಇಲ್ಲ. ಹಿಂಸೆಗೆ ಇನ್ನಷ್ಟು ತುಪ್ಪಾ ಸುರಿದು ಬಂದರು. ಎನ್‍ಐಎ ತನಿಖೆಗೆ ವಹಿಸಿದ ಎಷ್ಟು ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಸಿಕ್ಕಿದೆ? ಒಂದೂ ಇಲ್ಲ. ಎನ್‍ಐಎಗೆ ಒಪ್ಪಿಸಿದ ಮೇಲೆ ತನಿಖೆಯಲ್ಲಿ ಮುಂದೆ ಸಾಗುತ್ತಿದ್ದ ರಾಜ್ಯ ಪೊಲೀಸರಿಗೆ ಮುಖ್ಯಮಂತ್ರಿಗಳು ಕೊಟ್ಟ ಸಂದೇಶವೇನು? ಸ್ವತಃ ಗೃಹ ಸಚಿವರಾಗಿದ್ದ ಅವರು, ಸಿಎಂ ಆದ ಮೇಲೆ ತಮ್ಮ ಅಧೀನದ ಪೊಲೀಸ್ ವ್ಯವಸ್ಥೆಯನ್ನೇ ನಂಬುತ್ತಿಲ್ಲ! ಇದಲ್ಲವೇ ವಿಪರ್ಯಾಸ! ರಾಜ್ಯದಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳು ಇಲ್ಲವೆ? ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ಕೊಟ್ಟರೆ ಕರಾವಳಿ ಹಿಂಸಾಕಾಂಡವನ್ನು ಮೂಲೋತ್ಪಾಟನೆ ಮಾಡಬಲ್ಲರು. ಬೊಮ್ಮಾಯಿ ಸರ್ಕಾರಕ್ಕೆ ಅದು ಬೇಕಿಲ್ಲ. ಇದನ್ನೂ ಓದಿ: ಈಗ ಲೋಕಸಭಾ ಚುನಾವಣೆ ನಡೆದರೆ ಎನ್‍ಡಿಎಗೆ 362 ಸ್ಥಾನ!
ಕರಾವಳಿ ಭಾಗದಲ್ಲಿ ಪ್ರತಿ ಕೊಲೆ ಬಗ್ಗೆಯೂ ಸರಕಾರಕ್ಕೆ ಮಾಹಿತಿ ಇದೆ. ಆ ಕೊಲೆಗಳು ಏಕಾಗುತ್ತಿವೆ ಎನ್ನುವುದೂ ಗೊತ್ತಿದೆ. ಆದರೆ, ʼಡಬಲ್ ಎಂಜಿನ್ ಸರಕಾರ ಡಬಲ್ ಗೇಮ್ʼ ಆಡುತ್ತಿದೆ. ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷ ಎಂದು ಬೀಗುವ @bjp ಪಕ್ಷ, ತನಗೆ ಅಧಿಕಾರ ತಂದುಕೊಟ್ಟ ಯುವಕರ ಜೀವಗಳಿಗೇ ಗ್ಯಾರಂಟಿ ಕೊಡದಷ್ಟು ದುರ್ಬಲವಾಗಿದೆ!! 2/7
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) July 30, 2022
ಸಮರ್ಥ ಅಧಿಕಾರಿಗಳನ್ನು ನಂಬದೆ ಎನ್‍ಐಎಗೆ ವಹಿಸುವ ನಾಟಕವಾಡಿ ಕಗ್ಗೊಲೆಗಳ ತನಿಖೆಗೆ ‘ಸಮಾಧಿ’ ಕಟ್ಟಲು ಹೊರಟಿದೆ. ಎರಡು ಕೊಲೆಗಳು ನಡೆದ ಬೆಳ್ಳಾರೆ ಗ್ರಾಮದಲ್ಲಾದರೂ ಬೊಮ್ಮಾಯಿ ಅವರು ಮುಖ್ಯಮಂತ್ರಿ ಹೊಣೆಯ ಘನತೆಗೆ ತಕ್ಕಂತೆ ಶಾಂತಿ ರಕ್ಷಣೆ ಬಗ್ಗೆ ಒಂದು ಮಾತನ್ನಾದರೂ ಹೇಳಿದಿರಾ? ಇಲ್ಲ, ಚುನಾವಣೆ ವರ್ಷವಲ್ಲ. ಕೊಲೆಗಳೇ ಹೆಚ್ಚೆಚ್ಚು ಆಗಬೇಕು, ಅವರ ಮತಪೆಟ್ಟಿಗೆ ಕೊಬ್ಬಬೇಕು. ನೆತ್ತರಧಾರೆ ಹರಿದಷ್ಟೂ ಭರ್ಜರಿ ಮತಧಾರೆ. ಇದನ್ನೂ ಓದಿ: ಅಂಬುಲೆನ್ಸ್ ಟಯರ್ ಬದಲಿಸಲು ಸಹಾಯ ಮಾಡಿದ ರೇಣುಕಾಚಾರ್ಯ
ಬೆಳ್ಳಾರೆ ಬೇಗೆ ಇಡೀ ಕರಾವಳಿಯನ್ನು ವ್ಯಾಪಿಸಿದೆ. ಆದರೆ, ಜೀವ ಭಯದಲ್ಲಿರುವ ಎರಡು ಕೋಮುಗಳ ಜನರು ನೆಮ್ಮದಿಯಿಂದ ಬದುಕಲು ಏನು ಮಾಡಿದ್ದೀರಿ ಬೊಮ್ಮಾಯಿ ಅವರೇ? ಅವರ ಜೀವಕ್ಕೆ ಏನು ಖಾತರಿ ಕೊಟ್ಟಿದ್ದೀರಿ? ಪ್ರತಿ ಕೊಲೆ ಆದಾಗಲೂ ಈ ಕೊಲೆಪಾತಕ ರಾಜಕಾರಣ ನಮ್ಮ ಕುಟುಂಬಕ್ಕೇ ಕೊನೆಯಾಗಲಿ ಎನ್ನುವ ತಾಯಂದಿರ ಆರ್ತನಾದಕ್ಕೆ ನಿಮ್ಮ ಉತ್ತರವೇನು? ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ. ಇದನ್ನು ಸರ್ವಶನಾಶ ಮಾಡಿದ್ದೀರಿ. ಹಿಂಸೆಯ ಎಂಬ ವಿಷಸರ್ಪದ ಹೆಡೆಯಡಿ ಕಟ್ಟಿರುವ ನಿಮ್ಮ ಸಾಮ್ರಾಜ್ಯ ಹಿಂಸೆಗೇ ಬಲಿ ಆಗುವುದು ಖಚಿತ. ಕಾರ್ಯಕರ್ತರ ನೆತ್ತರಿನ ಮೇಲಿನ ಅಧಿಕಾರದ ಸುಖಕ್ಕೆ ಅದೇ ಕಾರ್ಯಕರ್ತರ ಆಕ್ರೋಶವೇ ಚರಮಗೀತೆ ಬರೆಯಲಿದೆ. ಕರಾವಳಿ ಕೆರಳಿದೆ, ಕರ್ನಾಟಕ ಕೆರಳುವುದು ಬಾಕಿ ಇದೆ ಎಂದು ಕಿಡಿಕಾರಿದ್ದಾರೆ.
Live Tv
[brid partner=56869869 player=32851 video=960834 autoplay=true]
ಮಂಗಳೂರು: ದಕ್ಷಿಣ ಕ್ನನಡ ಜಿಲ್ಲೆಯಲ್ಲಿ ಸಾಲು ಸಾಲು ಹತ್ಯೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುತ್ತಿದ್ದು, ನಾಳೆ ಶಾಂತಿ ಸಭೆ ನಡೆಯಲಿದೆ.
ಈ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ಮಾತನಾಡಿ, ಗುಪ್ತಚರ ಇಲಾಖೆಯ ಮಾಹಿತಿ ಪ್ರಕಾರ ಮುಂದಿನ ಮೂರು ದಿನ ಕಠಿಣ ಪರಿಸ್ಥಿತಿ ಇದೆ. ಹೀಗಾಗಿ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆ ತನಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗುತ್ತದೆ. ನಗರ ವ್ಯಾಪ್ತಿಗೂ ಬಂದ್ ಆದೇಶ ಅನ್ವಯವಾಗಲಿದೆ ಎಂದರು.
ಇದು ನೈಟ್ ಕರ್ಫ್ಯೂ ಅಲ್ಲ, ಬದಲಾಗಿ ಜನ ಕಡಿಮೆ ಮಾಡಿ ಪೊಲೀಸರಿಗೆ ಶಾಂತಿ ಸುವ್ಯವಸ್ಥಿತೆ ಕಾಪಾಡುವ ಉದ್ದೇಶವಾಗಿದೆ. ಅಗತ್ಯ ವಾಹನ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ರಾತ್ರಿ ಸಿನಿಮಾ ಶೋ ಬಂದ್ ಮಾಡಲು ಸೂಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಪ್ರವೀಣ್ ಕುಟುಂಬಕ್ಕೆ ಬಿಜೆಪಿ ಮನೆ ಕಟ್ಟಿಸಿ ಕೊಡುತ್ತದೆ: ತೇಜಸ್ವಿ ಸೂರ್ಯ
ದ.ಕ ಜಿಲ್ಲೆಯಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ಸಭೆ ನಡೆಸಲಾಗುತ್ತದೆ. ಪೊಲೀಸ್ ಹಿರಿಯ ಅಧಿಕಾರಿಗಳು, ವಿವಿಧ ಧರ್ಮದ ಮುಖಂಡರು ಹಾಗೂ ರಾಜಕೀಯ ಪಕ್ಷದ ಮುಖಂಡರು ಭಾಗಿಯಾಗಲಿದ್ದಾರೆ. ಸಲಹೆ ಸೂಚನೆಗಳನ್ನು ಎಲ್ಲರಿಂದ ಪಡೆಯಲಾಗುತ್ತದೆ. ಜಿಲ್ಲಾಡಳಿತದ ಮುಂದಿನ ನಿಯಮ, ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಹೇಳಿದರು.
Live Tv
[brid partner=56869869 player=32851 video=960834 autoplay=true]
– ಹಿಂದೂರಾಷ್ಟ್ರ ಕಟ್ಟಲು ಹೊರಟ ಬಿಜೆಪಿಯವರು ಮುತಾಲಿಕ್ ಗೆ ಬ್ಯಾನ್ ಮಾಡ್ತಾರೆ
– ತೇಜಸ್ವಿ ಸೂರ್ಯ ಯಾಕೆ ಪ್ರವೀಣ್ ಮನೆಗೆ ಬರ್ಬೇಕು..?
ಮಂಗಳೂರು: ವಿಶ್ವಗುರು ಅಲ್ಲ, ವಿಶ್ವನಾಶ ಆಗುತ್ತೆ, ಇಡೀ ಬಿಜೆಪಿ ಪಕ್ಷ ಹಾಳಾಗಿ ಹೋಗುತ್ತೆ, ಅಣ್ಣಪ್ಪನ ಶಾಪ ಇದೆ ಎಂದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ತಿಮರೋಡಿ ಮಹೇಶ್ ಶೆಟ್ಟಿ ಕಿಡಿಕಾರಿದ್ದಾರೆ.
ಇಂದು ಮೃತ ಪ್ರವೀಣ್ ಕುಮಾರ್ ನೆಟ್ಟಾರು ಮನೆಗೆ ಭೇಟಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ಯೆ ಮಾಮೂಲಿ ಅಗಿದೆ, ಚುನಾವಣೆಗೆ ಎಂಟು ತಿಂಗಳು ಇದೆ. ವೋಟ್ ಹಾಕ್ಬೇಕಲ್ಲ ಅದಕ್ಕಂತಲೇ ಕೊಲೆ ಆಗುತ್ತದೆ. ಇದುವೇ ಕರಾವಳಿಯ ವೋಟ್ ಬ್ಯಾಂಕ್ ರಾಜಕೀಯ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ NIA ಹೆಗಲಿಗೆ
ನಮ್ಮನ್ನು ಒಡೆದು ಹಾಳುಮಾಡಿ ಆಡಳಿತ ಮಾಡ್ತಾರೆ. ಈ ಕೊಲೆಯಿಂದ ರಾಜಕೀಯದವರ ನಾಟಕ ಬಯಲಾಯ್ತು. ಯುವಕರು ಈ ಹೋರಾಟ ನಿಲ್ಲಿಸಬೇಡಿ, ರಾಜಕಾರಣಿಗಳಿಗೆ ಚಪ್ಪಲಿಯಲ್ಲಿ ಹೊಡೀರಿ. ಇವರನ್ನು ಮನೆ ಒಳಗೆ ಬಿಡಬೇಡಿ. ಅಮಾಯಕರು ಬಲಿಯಾಗ್ತಿದ್ದಾರೆ. ಹಿಜಬ್ ಪ್ರಾರಂಭದಲ್ಲೇ ಹೇಳಿದ್ದೆ ಮರ್ಡರ್ ಆಗುತ್ತೆ ಅಂತ. ಹರ್ಷ ಕೊಲೆ ಆಯ್ತು, ಅರೋಪಿಗಳು ಬಿರಿಯಾನಿ ತಿಂತಾರೆ. ಹರ್ಷ ಮನೆ ಹೆಣ್ಣುಮಕ್ಕಳು ಹೋಂ ಮಿನಿಸ್ಟರ್ ಹತ್ರ ಹೋದ್ರೆ ಹೊರಗೆ ಹಾಕ್ತಾರೆ ಎಂದು ಗರಂ ಆದರು.
ಮಸೂದ್ ಹತ್ಯೆ ಗಾಂಜಾ ವಹಿವಾಟಿನಿಂದ ಆಗಿದೆ. ಪೊಲೀಸರ ತಪ್ಪಿಲ್ಲ, ರಾಜ್ಯ ಸರ್ಕಾರ ಸತ್ತು ಹೋಗಿದೆ. ಇದು ಚೌ ಚೌ ಸರ್ಕಾರ. ಪ್ರತೀಕಾರದ ಹತ್ಯೆ ಮಾಡಿದ್ರೆ ಎಚ್ಚರ. ನಾವು ಹಿಂದೂಗಳು 80% ಇದ್ದೇವೆ. ಸೌಜನ್ಯ ಹತ್ಯೆ ಪ್ರಕರಣವನ್ನು ಬಿಜೆಪಿ ಸರ್ಕಾರ ಮುಚ್ಚಿಹಾಕಿದೆ. ಸೌಜನ್ಯಗೂ ನ್ಯಾಯ ಸಿಗಲಿಲ್ಲ, ಯಾರ ಬಳಿ ಕೇಳೋದು..? ಹಿಂದೂರಾಷ್ಟ್ರ ಕಟ್ಟಲು ಹೊರಟ ಬಿಜೆಪಿಯವರು ಮುತಾಲಿಕ್ ಗೆ ಬ್ಯಾನ್ ಮಾಡ್ತಾರೆ. ಭಯೋತ್ಪಾದಕರು ರಾಜ್ಯಾದ್ಯಂತ ತಿರುಗಾಡ್ತಾರೆ, ಮುತಾಲಿಕ್ ನ್ನು ಬಂಧಿಸ್ತಾರೆ. ಏನು ದ್ರೋಹ ಮಾಡಿದ್ರು ಮುತಾಲಿಕ್ ಎಂದು ತಿಮರೋಡಿ ಪ್ರಶ್ನಿಸಿದರು.