Tag: ಪ್ರವಾಸೋದ್ಯಮ ಇಲಾಖೆ

  • ಅನಧಿಕೃತ ಹೋಮ್ ಸ್ಟೇ ಮೇಲೆ ದಾಳಿ- ಮಾಲೀಕನ ವಿರುದ್ಧ ಪ್ರಕರಣ ದಾಖಲು

    ಅನಧಿಕೃತ ಹೋಮ್ ಸ್ಟೇ ಮೇಲೆ ದಾಳಿ- ಮಾಲೀಕನ ವಿರುದ್ಧ ಪ್ರಕರಣ ದಾಖಲು

    – ಬೆಂಗಳೂರು ಮೂಲದ ಐವರು ವಿದ್ಯಾರ್ಥಿಗಳು ವಾಸ್ತವ್ಯ

    ಮಡಿಕೇರಿ: ಅನಧಿಕೃತ ಹೋಮ್ ಸ್ಟೇಗಳನ್ನು ತೆರೆಯದಂತೆ ಆದೇಶವಿದ್ದರೂ, ನಿಯಮ ಉಲ್ಲಂಘಿಸಿ ಹೋಮ್ ಸ್ಟೇ ತೆರೆದು ಪ್ರವಾಸಿಗರಿಗೆ ಆಶ್ರಯ ನೀಡಿದ್ದ ಹೋಮ್ ಸ್ಟೇ ಮೇಲೆ ಪ್ರವಾಸೋದ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ವಶಪಡಿಸಿಕೊಂಡಿದ್ದಾರೆ.

    ನಗರದ ಚಾಮುಂಡೇಶ್ವರಿ ನಗರದಲ್ಲಿರುವ ಹೋಮ್ ಸ್ಟೇ ಮೇಲೆ ದಾಳಿ ನಡೆಸಿದ್ದು, ಬೆಂಗಳೂರು ಮೂಲದ ಐವರು ವಿದ್ಯಾರ್ಥಿಗಳು ಹೋಮ್ ಸ್ಟೇಯಲ್ಲಿ ಆಶ್ರಯ ಪಡೆದಿದ್ದು, ಗುರುವಾರ ಜಿಲ್ಲೆಗೆ ಆಗಮಿಸಿದ್ದರು ಎನ್ನಲಾಗಿದೆ. ಹರೀಶ್ ಅವರಿಗೆ ಸೇರಿದ ಮನೆಯನ್ನು ಕಲಂದರ್ ಪಡೆದು ಹೋಮ್ ಸ್ಟೇ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

    ಜೂ.8ರಿಂದ ಪ್ರವಾಸೋದ್ಯಮ ಪೂರಕ ಚಟುವಟಿಕೆಗಳಿಗೆ ಷರತ್ತುಬದ್ಧ ವಿನಾಯಿತಿ ನೀಡಲಾಗಿದೆ. ಕೇವಲ ನೋಂದಾಯಿತ 800 ಹೋಮ್ ಸ್ಟೇಗಳನ್ನು ಮಾತ್ರ ತೆರೆಯುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಈ ಆದೇಶ ಉಲ್ಲಂಘಿಸಿ ನೋಂದಾಯಿಸದ ಹೋಮ್ ಸ್ಟೇಯಲ್ಲಿ ಪ್ರವಾಸಿಗರಿಗೆ ಆಶ್ರಯ ಕಲ್ಪಿಸಿದ್ದರು. ಜೊತೆಗೆ ಯಾವುದೇ ರೀತಿಯ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಹೋಮ್ ಸ್ಟೇಯನ್ನು ಸೀಜ್ ಮಾಡಿದ್ದಾರೆ.

    ಈ ಸಂಬಂಧ ಮಡಿಕೇರಿ ನಗರ ಠಾಣೆಗೆ ಪ್ರವಾಸೋದ್ಯಮ ಇಲಾಖೆಯಿಂದ ದೂರು ದಾಖಲಿಸಲಾಗಿದೆ. ವಿಚಾರಣೆ ನಡೆಸಲಾಗುತ್ತಿದ್ದು, ಹೋಮ್ ಸ್ಟೇ ಮಾಲೀಕನ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

    ಅನಧಿಕೃತ ಹೋಮ್ ಸ್ಟೇ ಬಂದ್ ಮಾಡಿ
    ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಅನಧಿಕೃತ ಹೋಮ್ ಸ್ಟೇ ಮೇಲೆ ದಾಳಿ ನಡೆಸಿದ್ದನ್ನು ಕೊಡಗು ಜಿಲ್ಲಾ ಹೋಮ್ ಸ್ಟೇ ಅಸೋಸಿಯೇಶನ್ ಸ್ವಾಗತಿಸಿದೆ. ರಾಜಾ ಸೀಟ್ ಸುತ್ತಮುತ್ತ ಹಾಗೂ ಹಲವೆಡೆ, ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಅನಧಿಕೃತ ಹೋಮ್ ಸ್ಟೇಗಳು ರಾಜಾರೋಷವಾಗಿ ವ್ಯವಹಾರ ನಡೆಸುತ್ತಿದ್ದು, ಎಲ್ಲವನ್ನೂ ಮುಚ್ಚಿಸುವಂತೆ ಅಸೋಸಿಯೇಶನ್ ಅಧ್ಯಕ್ಷ ಬಿ.ಜಿ.ಅನಂತಶಯನ ಒತ್ತಾಯಿಸಿದ್ದಾರೆ. ಕೊರೊನಾ ಹರಡದಂತೆ ಮುಂಜಾಗೃತೆ ವಹಿಸದ ಎಲ್ಲರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

  • ಕೆಆರ್‌ಎಸ್‌ನಲ್ಲಿ ಹೆಚ್ಚಿರುವ ಟೋಲ್, ಪಾರ್ಕಿಂಗ್ ದರ – ಪ್ರವಾಸಿಗರ ಆಕ್ರೋಶ

    ಕೆಆರ್‌ಎಸ್‌ನಲ್ಲಿ ಹೆಚ್ಚಿರುವ ಟೋಲ್, ಪಾರ್ಕಿಂಗ್ ದರ – ಪ್ರವಾಸಿಗರ ಆಕ್ರೋಶ

    ಮಂಡ್ಯ: ಹಳೆ ಮೈಸೂರು ಭಾಗದಲ್ಲಿ ಪ್ರಮುಖ ಪ್ರವಾಸಿ ಸ್ಥಳದಲ್ಲಿ ಒಂದಾದ  ಕೆಆರ್‌ಎಸ್‌ ಅಣೆಕಟ್ಟೆಯ ಬೃಂದಾವನಕ್ಕೆ ಪ್ರತಿ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಕ್ಕೆಂದು ಆಗಮಿಸುವ ಪ್ರವಾಸಿಗರಿಗೆ ಮಾತ್ರವಲ್ಲದೇ ಸ್ಥಳೀಯರಿಗೂ ಇದೀಗ ಒಂದು ಕಿರಿಕಿರಿ ಎದುರಾಗಿದೆ.

    ಪ್ರತಿ ನಿತ್ಯವೂ ಕೆಆರ್‌ಎಸ್‌ಗೆ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದರಿಂದ ಕಾವೇರಿ ನೀರಾವರಿ ನಿಗಮಕ್ಕೆ ಮತ್ತು ಪ್ರವಾಸೋದ್ಯಮ ಇಲಾಖೆಗೆ ಸಾಕಷ್ಟು ಹಣ ಹರಿದು ಬರುತ್ತಿದೆ. ಇದೀಗ ಟೋಲ್ ಮೂಲಕ ಪ್ರವಾಸಿಗರಲ್ಲಿ ಮತ್ತು ಸ್ಥಳೀಯರಲ್ಲಿ ಮತ್ತಷ್ಟು ಹಣ ವಸೂಲಿ ಮಾಡಲು ಕಾವೇರಿ ನೀರಾವರಿ ನಿಗಮಕ್ಕೆ ಮತ್ತು ಪ್ರವಾಸೋದ್ಯಮ ಇಲಾಖೆ ಮುಂದಾಗಿರುವುದು ಪ್ರವಾಸಿಗರ ಕೆಂಗಣ್ಣಿಗೆ ಗುರಿಯಾಗಿದೆ.

    ಬೃಂದಾವನಕ್ಕೆ ಹೋಗುವ ವಾಹನಗಳ ಶುಲ್ಕ
    ತ್ರಿಚಕ್ರ ವಾಹನ – 40 ರೂ.
    ಕಾರು – 100 ರೂ.
    ಮಿನಿ ಬಸ್ – 140 ರೂ.
    ಬಸ್ – 200 ರೂ

    ಸೇತುವೆ ಮೇಲೆ ಹೋಗುವ ವಾಹನಗಳ ಶುಲ್ಕ
    ತ್ರಿಚಕ್ರ ವಾಹನ – 20 ರೂ.
    ಕಾರು – 50 ರೂ.
    ಮಿನಿ ಬಸ್ – 70 ರೂ.
    ಬಸ್ – 100 ರೂ.
    ಲಾರಿ – 200 ರೂ.

    ಪಾರ್ಕಿಂಗ್ ಗೆ ಮಾತ್ರವಲ್ಲದೇ ಕೆಆರ್‌ಎಸ್‌ ಅಣೆಕಟ್ಟೆ ಎದುರು ಇರುವ ಸೇತುವೆಯ ಮೇಲೆ ಹೋಗಲು ಸಹ ಹಣವನ್ನು ನಿಗದಿ ಮಾಡಲಾಗಿದೆ. ಈ ಹಿಂದೆ ಬೃಂದಾವನಕ್ಕೆ ಹೋಗುವ ಕಾರುಗಳಿಗೆ ಪಾರ್ಕಿಂಗ್ ಸೇರಿ 50 ರೂಪಾಯಿಯನ್ನು ಪಡೆಯಲಾಗುತಿತ್ತು ಮತ್ತು ಸೇತುವೆಯ ಮೇಲೆ ಹೋಗುವ ವಾಹನಗಳಿಂದ ಹಣ ಪಡೆಯುತ್ತಿರಲಿಲ್ಲ. ಆದರೆ ಈಗ ಸೇತುವೆಯ ಮೇಲೆ ಹೋಗುವ ಕಾರುಗಳಿಗೆ 50 ರೂ., ಬೃಂದಾವನಕ್ಕೆ ಹೋಗುವ ಕಾರುಗಳಿಗೆ 100 ರೂ. ನಿಗದಿ ಮಾಡಲಾಗಿದೆ. ಇದಲ್ಲದೇ ಬೃಂದಾವನದ ಒಳಗೆ ಹೋಗುವ ಟಿಕೆಟ್ ದರವನ್ನು 50 ರೂ.ಗೆ ಏರಿಕೆ ಮಾಡಲಾಗಿದೆ. ಈ ಎಲ್ಲಾ ಹಣವನ್ನು ವಸೂಲಿ ಮಾಡುವ ಟೆಂಡರ್ ಅನ್ನು ಕೆಸಿಐಸಿ ಪ್ರವೈಟ್ ಲಿಮಿಟೆಡ್‍ಗೆ 13 ಕೋಟಿ ರೂಪಾಯಿಗೆ ನೀಡಲಾಗಿದೆ.

    ಪ್ರವಾಸಿಗರನ್ನು ತನ್ನತ್ತ ಆಕರ್ಷಣೆ ಮಾಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಹೊಸ ಯೋಜನೆಗಳನ್ನು ಜಾರಿಗೆ ತರುವ ಬದಲು ಈ ರೀತಿ ಟೋಲ್ ಹಾಗೂ ಪಾರ್ಕಿಂಗ್ ಶುಲ್ಕವನ್ನು ಹೆಚ್ಚಿಸಿರೋದು ಎಲ್ಲರ ಆಕ್ರೋಶಕ್ಕೆ ಗುರಿಯಾಗಿದೆ. ಈಗಲಾದರೂ ಈ ಶುಲ್ಕಗಳನ್ನು ಕಡಿಮೆಗೊಳಿಸಿ ಎಲ್ಲರಿಗೂ ಅನುಕೂಲವಾಗುವ ಕೆಲಸವನ್ನು ಪ್ರವಾಸೋದ್ಯಮ ಇಲಾಖೆ ಮಾಡಬೇಕಿದೆ ಎಂದು ಪ್ರವಾಸಿಗರು ನೋವನ್ನು ತೋಡಿಕೊಂಡಿದ್ದಾರೆ.

  • ಹೊಟ್ಟೆಗೆ ಏನು ತಿಂತೀರಿ, ಹಣ ಎಲ್ಲಿ ಹೋಯ್ತು – ಅಧಿಕಾರಿಗೆ ಸಚಿವ ಸಿ.ಟಿ.ರವಿ ಕ್ಲಾಸ್

    ಹೊಟ್ಟೆಗೆ ಏನು ತಿಂತೀರಿ, ಹಣ ಎಲ್ಲಿ ಹೋಯ್ತು – ಅಧಿಕಾರಿಗೆ ಸಚಿವ ಸಿ.ಟಿ.ರವಿ ಕ್ಲಾಸ್

    ಬೀದರ್: ಹೊಟ್ಟೆಗೆ ಏನು ತಿಂತೀರಿ ಎಂದು ಅಧಿಕಾರಿಯೊಬ್ಬರಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಬೀದರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಪ್ರಸಂಗ ನಡೆದಿದ್ದು, ಸಿ.ಟಿ.ರವಿ ಅಧಿಕಾರಿಗೆ ಫುಲ್ ತರಾಟೆ ತಗೆದುಕೊಂಡಿದ್ದಾರೆ. ನಿರ್ಮಿತಿ ಕೇಂದ್ರದ ಕಾಮಗಾರಿ ಸ್ಥಗಿತವಾಗಿರುವುದು ನಿನಗೆ ಗೋತ್ತಿದೆಯೋ ಇಲ್ವಾ? ನೀವು ಹಾಗೂ ನಿರ್ಮಿತಿ ಕೇಂದ್ರದವರು ಸೇರಿ ಇಲಾಖೆ ಮುಳುಗಿಸಬೇಕು ಎಂದು ಮಾಡಿದ್ದೀರಾ ಎಂದು ಪ್ರಶ್ನಿಸಿ ಬೆವರಿಳಿಸಿದ್ದಾರೆ.

    ಹಣ ವಾಪಸ್ ತರಸಿ ಹಾಗೂ ಅಧಿಕಾರಿ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಮೇಲಧಿಕಾರಿಗೆ ಸಚಿವರು ಸೂಚನೆ ನೀಡಿದರು. ನಿರ್ಮಿತಿ ಕೇಂದ್ರದ ಕಾಮಗಾರಿ ಸ್ಥಗಿತವಾಗಿದ್ದರೂ ಒಂದು ಕೋಟಿ ರೂ. ಬಿಡುಗಡೆ ಮಾಡುವಂತೆ ನಿರ್ಮಿತಿ ಕೇಂದ್ರ ಅಧಿಕಾರಿಗಳಿಗೆ ಪತ್ರ ಬರೆಯುತ್ತೀರಿ. ದುಡ್ಡು ತೆಗೆದುಕೊಂಡು ಏನು ಮಾಡುತ್ತೀರಿ? ನಿಮಗೇನು ತಿಳಿಯುವುದಿಲ್ಲವೇ? ಹಿಂದೆ ಬಿಡುಗಡೆ ಮಾಡಿದ ಆ ಒಂದು ಕೋಟಿ ರೂ. ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ.

    ಪತ್ರ ಬರೆದಿದ್ದರಿಂದ ಕೆಂಡಾಮಂಡಲರಾದ ಸಚಿವರು ಅಧಿಕಾರಿಗೆ ಫುಲ್ ತರಾಟೆ ತೆಗೆದುಕೊಂಡು ಒಂದು ಕೋಟಿ ಹಣ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು. ಈ ಹಣ ನಿನ್ನ ಸಂಬಳದಲ್ಲಿ ಕಡತಗೊಳಿಸಬೇಕೇ ಎಂದು ಅಧಿಕಾರಿ ವಿರುದ್ಧ ಗರಂ ಆದರು. ಒಂದು ಕೋಟಿ ರೂ. ಹಣ ಎಲ್ಲಿ ಹೋಗಿದೆ? ಪರಿಶೀಲನೆ ನಡೆಸಿ ಈ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

    ಸಚಿವರು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದರೂ ಅಧಿಕಾರಿಗಳು ಮಾತ್ರ ತುಟಿ ಪಿಟಿಕ್ ಎನ್ನದೆ ಮೌನಕ್ಕೆ ಶರಣಾಗಿದ್ದರು.

  • ಕಾಶ್ಮೀರದಲ್ಲಿ ರಾಜ್ಯದ ಸಾಂಸ್ಕೃತಿಕ ಕೇಂದ್ರ, ಹೋಟೆಲ್ ತೆರೆಯಲು ಚಿಂತನೆ- ಸಿ.ಟಿ.ರವಿ

    ಕಾಶ್ಮೀರದಲ್ಲಿ ರಾಜ್ಯದ ಸಾಂಸ್ಕೃತಿಕ ಕೇಂದ್ರ, ಹೋಟೆಲ್ ತೆರೆಯಲು ಚಿಂತನೆ- ಸಿ.ಟಿ.ರವಿ

    ಬೆಂಗಳೂರು: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ಕಾಶ್ಮೀರದಲ್ಲಿ ಸಾಂಸ್ಕೃತಿಕ ಕೇಂದ್ರ ಹಾಗೂ ಹೋಟೆಲ್ ತೆರೆಯುವ ಯೋಚನೆ ಇದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

    ನಗರದ ಜಂಗಲ್ ಲಾಡ್ಜ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾಂಸ್ಕೃತಿಕ ಕೇಂದ್ರ ಹಾಗೂ ಹೋಟೆಲ್ ತೆರೆಯಲು ಈಗಾಗಲೇ ಜಮ್ಮು ಕಾಶ್ಮೀರ ರಾಜ್ಯಪಾಲರಿಗೆ ಪತ್ರ ಬರೆದಿದ್ದೇವೆ. ಈ ವರೆಗೆ ರಾಜ್ಯಪಾಲರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಜಮ್ಮು ಕಾಶ್ಮೀರದ ರಾಜ್ಯಪಾಲು ಒಪ್ಪಿಗೆ ಸೂಚಿಸಿದ ಬಳಿಕ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ, ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

    ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತಿದೆ. ಪ್ರವಾಸೋದ್ಯಮ ಹಾಗೂ ಉದ್ಯೋಗ ಎಂಬ ಘೋಷ ವಾಕ್ಯದೊಂದಿದೆ ಈ ಬಾರಿ ಪ್ರವಾಸೋದ್ಯಮ ಆಚರಿಸಲಾಗುತ್ತಿದೆ. ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ತಲಾ 30 ಸಾವಿರ ರೂ. ಹಣ ಬಿಡುಗಡೆ ಮಾಡಲಾಗುತ್ತಿದೆ. ಬೆಂಗಳೂರು, ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ ಮಾಡಲಾಗುವುದು. ರಾಮನಗರದಲ್ಲಿ ಸ್ಥಳೀಯ ಆಹಾರವನ್ನು ದಸರೆಯ ಪ್ರವಾಸಿಗರಿಗೆ ಪರಿಚಯಿಸಲು, ರಾಮನಗರ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡಲು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗುತ್ತದೆ. ಹೆದ್ದಾರಿ ಪಕ್ಕದಲ್ಲಿ ತಟ್ಟೆ ಇಡ್ಲಿಯಿಂದ ಹಿಡಿದು ನಾನ್ ವೆಜ್ ಆಹಾರದ ಪರಿಚಯ ಮಾಡಿಸುತ್ತೇವೆ ಎಂದು ತಿಳಿಸಿದರು.

    ಮಂಡ್ಯದಲ್ಲಿ ಕೃಷಿ ಸಂಸ್ಕೃತಿಯನ್ನು ಪರಿಚಯಿಸಲು ಹಲವು ವ್ಯವಸ್ಥೆ ಮಾಡಲಾಗಿದೆ. ಕಬ್ಬು ಜಗಿದು ತಿನ್ನುವ, ಬೇಸಾಯದ ಅನುಭವ ಮಾಡಿಸುವುದು, ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟದಂತಹ ವಿನೂತನ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಇದಕ್ಕಾಗಿ ಮಂಡ್ಯ, ರಾಮನಗರ ಜಿಲ್ಲೆಗಳಿಗೆ ತಲಾ 15 ಲಕ್ಷ ರೂ. ಬಿಡುಗಡೆ ಮಾಡಿದ್ದೇವೆ. ಮೈಸೂರಿನಲ್ಲಿ ತ್ರೀಡಿ ಮ್ಯಾಪಿಂಗ್ ಶೋ, ಹಸಿರು ಸಂತೆ, ಪಾರಂಪರಿಕ ಕ್ರೀಡೆಗಳು, ಮಕ್ಕಳ ಸಾಹಸ ಕೇಂದ್ರ, ಲೇಸರ್ ಶೋಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

    ಹೊರ ರಾಜ್ಯದ ವಾಹನಗಳಿಗೆ ಪ್ರವೇಶ ತೆರಿಗೆ ಇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಈಗ ದಸರೆಗಾಗಿ ಮೈಸೂರು, ಮಂಡ್ಯಗಳಿಗೆ ಭೇಟಿ ನೀಡಲು ಪ್ರವಾಸಿ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ಮುಂದೆ ಪ್ರವೇಶ ತೆರಿಗೆ ಕುರಿತು ಚರ್ಚಿಯಾಗಲಿ. ಒಂದು ದೇಶ, ಒಂದು ತೆರಿಗೆ ಪ್ರವಾಸಿ ವಾಹನಗಳ ಪ್ರವೇಶ ತೆರಿಗೆಗೂ ತರುವ ಬಗ್ಗೆ ಚರ್ಚೆ ಆಗಲಿ ಎಂದು ತಿಳಿಸಿದರು.

    ಅನರ್ಹರು ರಾಜೀನಾಮೆ ನೀಡಿದ್ದರಿಂದಲೇ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದು. ಅವರಿಗೆ ನಾವು ಕೃತಜ್ಞರಾಗಿರುತ್ತೇವೆ, ಅವರನ್ನು ಮರೆಯುವ ಕೃತಜ್ಞರು ನಾವಲ್ಲ ಎಂದರು. ಅನರ್ಹ ಶಾಸಕರ ಕುಟುಂಬ ರಾಜಕಾರಣ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲ ಸಂದರ್ಭಗಳಲ್ಲಿ ಕೆಲ ವಿಚಾರಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ರಾಜಕಾರಣವನ್ನು ಹಂಗೆ ಮಾಡಬೇಕು. ವಾತಾವರಣಕ್ಕೆ ತಕ್ಕಂತೆ ನಮ್ಮ ಪಕ್ಷದ ನಿಲುವು ಬದಲಾಗುತ್ತೆ ಎಂದರು.

  • ಇಂದಿನಿಂದ 3 ದಿನ ಮಂಜಿನ ನಗರಿಯಲ್ಲಿ ಪ್ರವಾಸಿ ಉತ್ಸವ- ಕಿರುತೆರೆ ಕಲಾವಿದರು ಭಾಗಿ

    ಇಂದಿನಿಂದ 3 ದಿನ ಮಂಜಿನ ನಗರಿಯಲ್ಲಿ ಪ್ರವಾಸಿ ಉತ್ಸವ- ಕಿರುತೆರೆ ಕಲಾವಿದರು ಭಾಗಿ

    ಮಡಿಕೇರಿ: ಪ್ರವಾಸಿಗರ ಸ್ವರ್ಗ, ದಕ್ಷಿಣ ಕಾಶ್ಮೀರ ಎಂದೇ ಖ್ಯಾತಿ ಪಡೆದಿರುವ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಪ್ರವಾಸೋದ್ಯಮ ಕುಸಿದು ಬಿದ್ದಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಕೊಡಗು ಜಿಲ್ಲಾಡಳಿತ ಮುಂದಾಗಿದೆ.

    ಪ್ರವಾಸೋದ್ಯಮ ಇಲಾಖೆ, ತೋಟಗಾರಿಕೆ ಹಾಗೂ ಪಶುಸಂಗೋಪನಾ ಇಲಾಖೆ ಆಶ್ರಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರವಾಸಿ ಉತ್ಸವ ನಡೆಯಲಿದೆ. ಆಗಸ್ಟ್ ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಕಹಿ ನೆನಪಿನಿಂದ ಜಿಲ್ಲೆಯ ಜನತೆಯನ್ನು ಹೊರತರಲು ಹಾಗೂ ಕುಸಿದು ಬಿದ್ದಿರುವ ಪ್ರವಾಸೋದ್ಯಮವನ್ನು ಪುನಶ್ಚೇತನಗೊಳಿಸಲು ಕೊಡಗು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರವಾಸಿ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

    ಪ್ರವಾಸಿಗರ ಹಾಟ್ ಸ್ಪಾಟ್ ರಾಜಾಸೀಟ್ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಅಲ್ಲದೇ ನಗರದ ಗಾಂಧಿ ಮೈದಾನದಲ್ಲಿ ಇಂದು ಸಂಜೆ 5 ರಿಂದ 10 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಗಾಯಕಿ ಎಂಡಿ ಪಲ್ಲವಿ, ಸರಿಗಮಪ ಖ್ಯಾತಿಯ ಸುನೀಲ್, ಶ್ರೀ ಹರ್ಷ, ಸೇರಿದಂತೆ ಕಿರುತೆರೆಯ ನಟ-ನಟಿಯರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಮಾಡುವ ಮೂಲಕ ಆಕರ್ಷಿಸಲಿದ್ದಾರೆ.

    ಉತ್ಸವದ ಕೊನೆ ದಿನದಂದು ಸಂಜೆ 6.30ರಿಂದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದವರಿಂದ ಸಂಗೀತ ರಸ ಸಂಜೆ ನಡೆಯಲಿದ್ದು, ಹಿನ್ನೆಲೆ ಗಾಯಕರಾದ ವ್ಯಾಸರಾಜ್, ಅನುರಾಧ ಭಟ್, ಇಂದು ನಾಗರಾಜ್, ಲಕ್ಷ್ಮೀ ನಾಗರಾಜ್, ಸಂಜಿತ್ ಹೆಗ್ಡೆ, ಶ್ರೀನಿವಾಸ್ ಭಾಗವಹಿಸುತ್ತಿರುವುದು ಈ ಉತ್ಸವದ ಕೇಂದ್ರ ಬಿಂದುವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪರಿಹಾರ ಕೇಂದ್ರದಲ್ಲಿ ಆಹಾರ ದುರುಪಯೋಗವಾಗಿರುವುದು ನಿಜ: ಸಾ.ರಾ ಮಹೇಶ್

    ಪರಿಹಾರ ಕೇಂದ್ರದಲ್ಲಿ ಆಹಾರ ದುರುಪಯೋಗವಾಗಿರುವುದು ನಿಜ: ಸಾ.ರಾ ಮಹೇಶ್

    ಮಡಿಕೇರಿ: ಪರಿಹಾರ ಕೇಂದ್ರಗಳಲ್ಲಿ ಆಹಾರ ಹಾಗೂ ಇತರೆ ಪದಾರ್ಥಗಳು ದುರಪಯೋಗವಾಗುತ್ತಿರುವುದು ಸತ್ಯವೆಂದು ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿಕೆ ನೀಡಿದ್ದಾರೆ.

    ರಾಜ್ಯದ ಜನತೆ ಸಂತ್ರಸ್ತರಿಗಾಗಿ ಕಳುಹಿಸಿದ್ದ ಅಪಾರ ಪ್ರಮಾಣದ ವಸ್ತುಗಳನ್ನು ದುರುಪಯೋಗವಾಗುತ್ತಿರುವ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಬೇಕಾದವರಿಗೆ ಪದಾರ್ಥಗಳನ್ನು ಹಂಚುತ್ತಿದ್ದಾರೆ. ಪರಿಹಾರ ಕೇಂದ್ರಗಳಲ್ಲಿ ಆಹಾರ ಪದಾರ್ಥ ಹಾಗೂ ಇತರೆ ವಸ್ತುಗಳು ದುರಪಯೋಗವಾಗುತ್ತಿರುವುದು ಸತ್ಯವೆಂದು ಮಾಹಿತಿ ನೀಡಿದ್ದಾರೆ.

    ಈ ಕುರಿತು ಜಿಲ್ಲಾಧಿಕಾರಿಗಳಿಗೆ ಜೊತೆ ಈಗಾಗಲೇ ಚರ್ಚಿಸಿದ್ದು, ಸಂತ್ರಸ್ತರಿಗೆ ತಲುಪಬೇಕಾದ ಯಾವುದೇ ವಸ್ತುಗಳು ದುರಪಯೋಗವಾಗದಂತೆ ನೋಡಿಕೊಳ್ಳಬೇಕೆಂದು ಸೂಚಿಸಿದ್ದೇನೆ. ಅಲ್ಲದೇ ಈ ಬಗ್ಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಿದ್ದೇನೆ. ರಾಜ್ಯದ ಜನತೆ ತಮ್ಮ ಸಹಾಯಹಸ್ತ ಚಾಚಿ ಸಂತ್ರಸ್ತರಿಗೆ ಕಳುಹಿಸಿರುವ ಪರಿಹಾರ ಸಾಮಗ್ರಿಗಳು ಉಳ್ಳವರ ಪಾಲಾಗದಂತೆ ಎಚ್ಚರವಹಿಸುತ್ತೇನೆಂದು ಭರವಸೆ ನೀಡಿದ್ದಾರೆ.

    ಪ್ರವಾಹದಿಂದಾಗಿ ಜಿಲ್ಲೆ ಸಂಪೂರ್ಣವಾಗಿ ನಾಶಹೊಂದಿದ್ದು, ಕೊಡಗನ್ನು ಪುನಃ ಸಹಜ ಸ್ಥಿತಿಗೆ ಮರಳಿಸಲು ಯತ್ನಿಸುತ್ತೇವೆ. ಇದಕ್ಕಾಗಿ ಸುಮಾರು 2 ಸಾವಿರ ಕೋಟಿ ರೂಪಾಯಿ ಖರ್ಚಾದರೂ ತೊಂದರೆಯಿಲ್ಲ. ನಾನು ಸಹ ನನ್ನ ಒಂದು ತಿಂಗಳ ಸಂಬಳವನ್ನು ಮಡಿಕೇರಿ ನಿರಾಶ್ರಿರಿಗಾಗಿ ನೀಡಿದ್ದೇನೆಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯುವಕ-ಯುವತಿಯರೇ ಗೈಡ್‍ಗಳಾಗಿ: ಟೂರಿಸಂ ಅಭಿವೃದ್ಧಿಗೆ ಬಜೆಟ್‍ನಲ್ಲಿ ಸಿಕ್ಕಿದ್ದು ಏನು?

    ಯುವಕ-ಯುವತಿಯರೇ ಗೈಡ್‍ಗಳಾಗಿ: ಟೂರಿಸಂ ಅಭಿವೃದ್ಧಿಗೆ ಬಜೆಟ್‍ನಲ್ಲಿ ಸಿಕ್ಕಿದ್ದು ಏನು?

    ಬೆಂಗಳೂರು: ರಾಜ್ಯದಲ್ಲಿ ಪ್ರವಾಸೋದ್ಯಮ ಮೂಲಕ ಉದ್ಯೋಗ ಸೃಷ್ಟಿ ಮಾಡಲು ವಿಫುಲವಾದ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗಾಗಿ ನಮ್ಮ ಪ್ರವಾಸೋದ್ಯಮ ವ್ಯವಸ್ಥೆಯಲ್ಲಿ ಕೆಲವು ಅಂಶಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಅನೇಕ ಪ್ರವಾಸಿ ಸ್ಥಳಗಳಿಗಲ್ಲಿ ಪ್ರವಾಸಿಗರಿಗೆ ಸ್ಥಳದ ವಿವರಣೆಯನ್ನು ನೀಡುವ ಮಾರ್ಗದರ್ಶಿಗಳು ಇರುವುದಿಲ್ಲ. ಕೆಲೆವೆಡೆ ಇರುವ ಪ್ರವಾಸಿ ಮಾರ್ಗದರ್ಶಿಗಳು ಕನ್ನಡ ಹೊರತುಪಡಿಸಿ ಇತರೆ ಭಾರತೀಯ ಭಾಷೆಗಳಲ್ಲಿ ಪ್ರವಾಸಿ ಸ್ಥಳಗಳ ಬಗ್ಗೆ ವಿವರಿಸುವ ಸಾಮಥ್ರ್ಯ ಹೊಂದಿರುವುದಿಲ್ಲ. ವಿದೇಶಿ ಪ್ರವಾಸಿಗಳಿಗೆ ಅವರ ಭಾಷೆಯಲ್ಲಿ ವಿವರಗಳನ್ನು ತಿಳಿಸಲು ಆಯಾ ಭಾಷೆಗಳಲ್ಲಿ ಪಾಂಡಿತ್ಯವಿರುವ ಮಾರ್ಗದರ್ಶಿಗಳು ಲಭ್ಯವಿಲ್ಲ. ಅನೇಕ ಪ್ರವಾಸಿ ಸ್ಥಳಗಳಲ್ಲಿ ಸಂಜೆಯಾದ ನಂತರ ನೋಡುವಂತಹ ಹಾಗೂ ನಮ್ಮ ಸ್ಕೃತಿ ಸಂಸ್ಕೃತಿಯನ್ನು ಬಿಂಬಿಸುವಂತಹ ಯಾವುದೇ ಸಾಂಸ್ಕೃತಿಕ ಪ್ರದರ್ಶನಗಳು ಸಹ ಇರುವುದಿಲ್ಲ. ರಾಜ್ಯದ ಹಲವಾರು ಪ್ರವಾಸಿ ತಾಣಗಳಲ್ಲಿ ಮತ್ತಷ್ಟು ಉತ್ತಮ ಗುಣಮಟ್ಟದ ಹೊಟೇಲ್ ಒದಗಿಸುವ ಅವಕಾಶವಿದೆ ಎಂದು ಭಾಷಣದಲ್ಲಿ ತಿಳಿಸಿದರು.

    ನಮ್ಮ ಸರ್ಕಾರವು ಈ ವರ್ಷ ಬೇಲೂರು, ಹಂಪಿ ಮತ್ತು ವಿಜಯಪುರದಲ್ಲಿ ವಿವಿಧ ಭಾಷೆಗಳಲ್ಲಿ ಪ್ರವಾಸಿ ಮಾರ್ಗದರ್ಶಿಗಳಾಗಿ ಕೆಲಸ ಮಾಡಲು ಮುಂದೆ ಬರುವ ಯುವಕ-ಯುವತಿಯರಿಗೆ ತರಬೇತಿ ನೀಡಲು ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಕ್ರಮ ಕೈಗೊಳ್ಳಲಿದೆ. ಎರಡು ವರ್ಷದ ಡಿಪ್ಲೆಮೋ ತರಬೇತಿ ನೀಡಲು ಈ ಮೂರು ಸ್ಥಳಗಳಲ್ಲಿ ಮುಂದೆ ಬರುವ ಖಾಸಗಿ ತರಬೇತಿ ಸಂಸ್ಥೆಗಳಿಗೆ ತಲಾ 60 ಲಕ್ಷ ರೂಪಾಯಿಗಳನ್ನು ಷೇರು ಬಂಡಾವಾಳದ ರೂಪದಲ್ಲಿ ನೀಡಲಾಗುವುದು.

    ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟಂತಹ ವಿಷಯಗಳಲ್ಲಿ ಎರಡು ವರ್ಷಗಳ ಡಿಪ್ಲೊಮಾವನ್ನು ಆರಂಭಿಸಲು ಉದ್ದೇಶಿಸಿದೆ. ಈ ಮೇಲೆ ಹೇಳಿದ ಮೂರು ಪ್ರವಾಸಿ ಕೇಂದ್ರಗಳಲ್ಲಿ ಪರಿಸರ ಹಾಗೂ ಆಹಾರದ ಶುದ್ಧತೆಯನ್ನು ಕಾಪಾಡುವ ಸಲುವಾಗಿ ಅಗತ್ಯ ಸರ್ಕಾರಿ ಸ್ಥಳೀಯ ಸಂಸ್ಥೆಗಳಿಗೆ ನೆರವಾಗಲು 20 ಕೋಟಿ ರೂಪಾಯಿಗಳನ್ನು ನಿಗಧಿಪಡಿಸಲಾಗಿದೆ.

    500 ಕೊಠಡಿಗಳ ಸೌಲಭ್ಯವಿರುವ `3 ಸ್ಟಾರ್ ಹೋಟೆಲ್’ಗಳನ್ನು ತೆರೆಯಲು ಮುಂದೆ ಬರುವ ಖಾಸಗಿ ಕಂಪನಿಗಳಿಗೆ 3 ಕೋಟಿ ರೂಪಾಯಿಗಳ ಷೇರು ಬಂಡವಾಳವನ್ನು ಕೊಡಲಾಗುವುದು. ಸರ್ವಿಸ್ ಅಪಾರ್ಟ್‍ಮೆಂಟ್ ಗಳನ್ನು ಕಟ್ಟಲು ಮುಂದೆ ಬಂದಲ್ಲಿ ಆ ಸಂಸ್ಥೆಗಳಿಗೆ ಶೇ.30ರಷ್ಟು ಷೇರು ಬಂಡವಾಳವನ್ನು ಟೆರ್ಮ್ ಶೀಟ್ ಆಧಾರದ ಮೇಲೆ ನೀಡಲಾಗುವುದು.

    `ಅಮ್ಯೂಸ್‍ಮೆಂಟ್ ಪಾರ್ಕ್’, `ಜಲಕ್ರೀಡೆ’ ರೀತಿಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ಕಂಪನಿಗಳಿಗೆ ಶೇ. 30ರಷ್ಟು ಷೇರು ಬಂಡವಾಳ ಹೂಡಲಾಗುವುದು. ಪ್ರವಾಸಿ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಈ ವರ್ಷ 80 ಕೋಟಿ ರೂಪಾಯಿಯನ್ನು ನಿಗದಿಪಡಿಸಲಾಗಿದೆ. ಎಲ್ಲಾ ಹೂಡಿಕೆಗಳನ್ನು 4 ವರ್ಷದ ನಂತರ ಹಿಂತೆಗೆದುಕೊಂಡು ಮತ್ತೆ ಸರ್ಕಾರಕ್ಕೆ ಜಮಾ ಮಾಡಲಾಗುತ್ತದೆ.

    ಈ ಪ್ರದೇಶದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಹೂಡಿಕೆ ಮಾಡಲು ಮುಂದರೆ ಬರುವ ಉದ್ದಿಮೆದಾರರು ಸ್ಥಳೀಯ ಕಾನೂನುಗಳು ಹಾಗೂ ಎಲ್ಲಾ ಪ್ರಾಧಿಕಾರಿಗಳ ಅನುಮೋದನೆ ಪಡೆಯುವುದು ಅವಶ್ಯಕ. ಕರ್ನಾಟಕ ಸರ್ಕಾರವು ಈಗಾಗಲೇ (KITVEN) ಫಂಡ್ ಮ್ಯಾನೇಜರ್ ಗಳನ್ನು ಹೂಡಿಕೆಗೆ ನೆರವು ನೀಡಲು ನೇಮಕಾತಿ ಮಾಡಿರುವುದರಿಂದ ಅವುಗಳನ್ನು ಹೂಡಿಕೆದಾರರು ಉಪಯೋಗಿಸಿಕೊಳ್ಳಬಹುದು. ಹಾಗೆಯೇ ಕೆ.ಎಸ್.ಟಿ.ಡಿ.ಸಿ. ಸಂಸ್ಥೆಗೆ ಹೋಟೆಲ್ ಸೌಲಭ್ಯ ಕಲ್ಪಿಸಲು 80 ಕೋಟಿ ರೂಪಾಯಿ ನೀಡಲು ಆಯೋಜಿಸಿದೆ.

    ಪ್ರಮುಖ ಹೆದ್ದಾರಿಗಳಲ್ಲಿ ಪ್ರವಾಸಿಗರು ವಿಶ್ರಾಂತಿ ಪಡೆದು ಊಟ ತಿಂಡಿ ಮಾಡಿಕೊಂಡು ಪ್ರಯಾಣ ಮುಂದುವರೆಸಲು ಅನುಕೂಲವಾಗುವ ರೀತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಮೂರು ಮಾದರಿ ರಸ್ತೆ ಬದಿ ಸೌಲಭ್ಯಗಳನ್ನು (Model way side facilities) ನಿರ್ಮಿಸಲು ಉದ್ದೇಶಿದೆ.

    ಪ್ರವಾಸೋದ್ಯಮ ವಲಯದ ಆತಿಥ್ಯ ಕ್ಷೇತ್ರದಲ್ಲಿ ಉದ್ಯೋಗವಕಾಶಗಳನ್ನು ಸೃಜಿಸಲು ಕೌಶಲ್ಯಾಭಿವೃದ್ಧಿ, ಪ್ರವಾಸಿ ಮಾರ್ಗದರ್ಶಿ ತರಬೇತಿ ಕಾರ್ಯಕ್ರಮ ಹಾಗೂ ಪ್ರವಾಸಿ ಟ್ಯಾಕ್ಸಿ ಚಾಲಕರಿಗೆ `ರಿಫ್ರೆಷರ್ ಕೋರ್ಸ್’ಗಳ ಮೂಲಕ ತರಬೇತಿ ನೀಡಲು ಉದ್ದೇಶಿಸಿದೆ.

    ಚಾಮರಾಜನಗರ ಜಿಲ್ಲೆಯಲ್ಲಿರುವ ಭರಚುಕ್ಕಿ ಜಲಪಾತ ಮತ್ತು ಮಂಡ್ಯ ಜಿಲ್ಲೆಯಲ್ಲಿರುವ ಗಗನಚುಕ್ಕಿ ಜಲಪಾತಗಳು ಪ್ರವಾಸಿಗರ ಆಕರ್ಷಣೀಯ ತಾಣಗಳಾಗಿರುತ್ತವೆ. ಈ ತಾಣಗಳಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುವರು. ಆದ್ದರಿಂದ ಪ್ರವಾಸಿಗರಿಗೆ ಅನುಕೂಲವಾಗುವ ಹೆಚ್ಚುವರಿ ಪ್ರವಾಸಿ ಸೌಲಭ್ಯಗಳನ್ನು ಗಗನಚುಕ್ಕಿ ಮತ್ತು ಭರಚುಕ್ಕಿ ಪ್ರದೇಶಗಳಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲು ಯೋಜನೆ ಸಿದ್ದಪಡಿಸಿದೆ.

    ರಾಮನಗರ ಜಿಲ್ಲೆಯಲ್ಲಿ ಪ್ರವಾಸಿ ಚಟುವಟಿಕೆಗಳನ್ನು ಮತ್ತಷ್ಟು ಸಧೃಢಗೊಳಿಸಲು ರಾಮನಗರದ ಬಳಿ `ಆಟ್ಸ್ ಅಂಡ್ ಕ್ರಾಫ್ಟ್ ವಿಲೇಜ್’ ಅನ್ನು ಮತ್ತು ಕಣ್ವ ಜಲಾಶಯದ ಪ್ರದೇಶದಲ್ಲಿ `ಚಿಲ್ಡ್ರನ್ಸ್ ವಲ್ರ್ಡ್’ ಯೋಜನೆಯನ್ನು ಖಾಸಗೀ ಸಹಭಾಗಿತ್ವದೊಂದಿಗೆ ಅಭಿವೃದ್ಧಿಪಡಿಸಲು ಉದ್ದೇಶೀಸಲಾಗಿದೆ.