Tag: ಪ್ರವಾಸಿಗರ

  • ಮುರುಡೇಶ್ವರದ ಕಡಲಲ್ಲಿ ಅಲೆಗಳಿಗೆ ಸಿಲುಕಿದ್ದ ಮೂವರ ರಕ್ಷಣೆ

    ಮುರುಡೇಶ್ವರದ ಕಡಲಲ್ಲಿ ಅಲೆಗಳಿಗೆ ಸಿಲುಕಿದ್ದ ಮೂವರ ರಕ್ಷಣೆ

    ಕಾರವಾರ: ಸಮುದ್ರದಲ್ಲಿ ಈಜಲು ತೆರಳಿ ಅಲೆಗಳಿಗೆ ಸಿಲುಕಿದ್ದ ಮೂರು ಜನರನ್ನು ಲೈಫ್ ಗಾರ್ಡ್‍ಗಳು (Life Guard) ರಕ್ಷಣೆ ಮಾಡಿದ್ದಾರೆ.

    ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದ (Murudeshwara) ಕಡಲ ತೀರದಲ್ಲಿ ನಡೆದಿದೆ. ಹಾವೇರಿ ಮೂಲದ ಹಂಸಬಾವಿಯ ಸಿದ್ದಾರ್ಥ್ (24), ದೀಕ್ಷಿತ್ (20), ಸಂತೋಷ್ (24) ರಕ್ಷಣೆಗೊಳಗಾದವರು.

    ಲೈಫ್ ಗಾರ್ಡ್‍ಗಳಾದ ಚಂದ್ರಶೇಖರ್ ದೇವಾಡಿಗ, ಜಯರಾಮ್, ಪಾಂಡು, ಹನುಮಂತು ರಕ್ಷಣೆ ಮಾಡಿದ ಲೈಫ್ ಗಾರ್ಡ್‍ಗಳಾಗಿದ್ದಾರೆ. ಐದು ಜನರ ತಂಡ ಧರ್ಮಸ್ಥಳಕ್ಕೆ (Dharmasthala) ಹೋಗಿ ಮುರುಡೇಶ್ವರಕ್ಕೆ ಇಂದು ಆಗಮಿಸಿದ್ದರು. ಅಂತೆಯೇ ಅವರು ಸಮುದ್ರಕ್ಕೆ ಇಳಿದಿದ್ದು, ಈ ವೇಳೆ ಅಲೆಗಳಿಗೆ ಕೊಚ್ಚಿಹೋಗಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರೇಕ್ಷಣೀಯ ಸ್ಥಳಗಳ ನಿರ್ಬಂಧ ತೆರವುಗೊಳಿಸಿ ಡಿಸಿ ಎಂ.ಆರ್ ರವಿ ಆದೇಶ

    ಪ್ರೇಕ್ಷಣೀಯ ಸ್ಥಳಗಳ ನಿರ್ಬಂಧ ತೆರವುಗೊಳಿಸಿ ಡಿಸಿ ಎಂ.ಆರ್ ರವಿ ಆದೇಶ

    ಚಾಮರಾಜನಗರ: ಜಿಲ್ಲೆಯ ಪ್ರೇಕ್ಷಣೀಯ ತಾಣಗಳಿಗೆ ಸಾರ್ವಜನಿಕರ ಹಾಗೂ ಪ್ರವಾಸಿಗರ ಪ್ರವೇಶಕ್ಕೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಆದೇಶ ಹೊರಡಿಸಿದ್ದಾರೆ.

    ಕೊರೊನಾ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಜುಲೈ 2ರಿಂದ ಜಿಲ್ಲೆಯ ಪ್ರವಾಸಿತಾಣಗಳು ಮತ್ತು ಈ ವ್ಯಾಪ್ತಿಯ ಹೊಟೇಲ್, ರೆಸಾರ್ಟ್ ಹಾಗೂ ಹೋಂಸ್ಟೇಗಳನ್ನು ಮುಚ್ಚುವಂತೆ ಆದೇಶಿಸಲಾಗಿತ್ತು. ಇದೀಗ ಆರ್ಥಿಕ ಚಟುವಟಿಕೆಗಳಿಗೆ ಪುನಶ್ಚೇತನ ಕೊಡುವ ನಿಟ್ಟಿನಲ್ಲಿ ನಿಷೇಧ ತೆರವುಗೊಳಿಸಲಾಗಿದೆ. ಆದರೆ ಜಿಲ್ಲೆಯಾದ್ಯಂತ ಆಗಸ್ಟ್ 2ವರೆಗೆ ಎಲ್ಲಾ ಭಾನವಾರುಗಳು ಸಂಪೂರ್ಣ ಲಾಕ್ ಡೌನ್ ಮುಂದುರಿಯಲಿದೆ ಎಂದು ಜಿಲ್ಲಾಧಿಕಾರಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

    ಇನ್ನೊಂದೆಡೆ ಜಿಲ್ಲೆಯ ವಿವಿಧೆಡೆ ಸ್ಥಾಪಿಸಲಾಗಿದ್ದ ಆರು ಅಂತರ್ ಜಿಲ್ಲಾ ಚೆಕ್‍ಪೋಸ್ಟ್ ಗಳನ್ನು ಸಹ ತೆರವುಗೊಳಿಸಲಾಗಿದೆ. ಕೊರೊನಾ ಹರಡುವುದುನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದತೆ ಹೊರ ಜಿಲ್ಲೆಗಳಿಂದ ಬರುವವರ ಮಾಹಿತಿ ಸಂಗ್ರಹಣೆ ಹಾಗೂ ತಪಾಸಣೆಗಾಗಿ ಈ ಚೆಕ್  ಪೋಸ್ಟ್ ಗಳನ್ನು ತೆರೆಯಾಲಾಗಿತ್ತು. ಇದೀಗ ಚೆಕ್‍ ಪೋಸ್ಟ್ ಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದೆ.