ಶ್ರೀನಗರ: ಪಲಹ್ಗಾಮ್‌ನಲ್ಲಿ ಉಗ್ರರ ಗುಂಡಿನ ದಾಳಿ (Pahalgam Terror Attack) ಸಂಬಂಧ ಮತ್ತೊಂದು ವೀಡಿಯೋ ರಿಲೀಸ್ ಆಗಿದ್ದು, ಸೆಲ್ಫಿ ವೀಡಿಯೋ ಮಾಡುತ್ತಾ ಜಿಪ್‌ಲೈನ್‌ನಲ್ಲಿ ತೆರಳುತ್ತಿದ್ದ ಪ್ರವಾಸಿಗರೊಬ್ಬರ (Tourist) ಮೊಬೈಲ್‌ನಲ್ಲಿ ಉಗ್ರರ ದಾಳಿಯ ಭೀಕರ ದೃಶ್ಯಗಳು ಸೆರೆಯಾಗಿವೆ.
ಅಹಮದಾಬಾದ್‌ನ ರಿಷಿ ಭಟ್ ಅವರ ಮೊಬೈಲ್‌ನಲ್ಲಿ ಈ ವೀಡಿಯೋ ರೆಕಾರ್ಡ್ ಆಗಿದೆ. ಸೆಲ್ಫಿ ವೀಡಿಯೋ ಮಾಡುತ್ತಾ ಜಿಪ್‌ಲೈನ್‌ನಲ್ಲಿ ಹೋಗುವಾಗಲೇ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ಸದ್ದೂ ಕೇಳಿದೆ. ಆದರೆ ಪ್ರವಾಸಿಗ ರಿಷಿ ಭಟ್‌ಗೆ ಇದರ ಅರಿವೇ ಇರಲಿಲ್ಲ. ತಮಗೆ ಅರಿವೇ ಇಲ್ಲದೇ ದಾಳಿಯ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿವೆ. ಇದನ್ನೂ ಓದಿ: ಭಾರತ ಯಾವುದೇ ಸಮಯದಲ್ಲಿ ಯುದ್ಧ ಮಾಡಬಹುದು, ನಮ್ಮ ಪಡೆಗಳನ್ನೂ ಬಲಪಡಿಸಿದ್ದೇವೆ: ಪಾಕ್ ಸಚಿವ
ರಿಷಿ ಜಿಪ್‌ಲೈನ್‌ನಲ್ಲಿ ಹೋಗುತ್ತಿದ್ದ ಸಂದರ್ಭ ಕೆಳಗಡೆ ಪ್ರವಾಸಿಗರು ಏಕಾಏಕಿ ಓಡಲು ಶುರುಮಾಡುತ್ತಾರೆ. ಬಳಿಕ ಉಗ್ರನೊಬ್ಬ ಪ್ರವಾಸಿಗನ ತಲೆಗೆ ಗುಂಡು ಹೊಡೆಯುತ್ತಾನೆ. ಆ ಪ್ರವಾಸಿಗ ಅಲ್ಲೇ ಕುಸಿದು ಬಿದ್ದು ಉಸಿರು ಚೆಲ್ಲುತ್ತಾನೆ. ಈ ವೇಳೆ ದಾಳಿಯ ಅರಿವಾಗಿ ಜಿಪ್‌ಲೈನ್‌ನಲ್ಲಿದ್ದ ರಿಷಿ ಭಟ್ 15 ಫೀಟ್ ಎತ್ತರದಿಂದ ಕೆಳಗೆ ಹಾರಿ ಪತ್ನಿ ಮತ್ತು ಮಗುವಿನೊಂದಿಗೆ ಓಡುತ್ತಾರೆ. ಇದಕ್ಕೂ ಮುನ್ನ ರಿಷಿ ಭಟ್ ಅವರ ಪತ್ನಿ ಜೊತೆ ಇನ್ನೂ ಒಂದು ದಂಪತಿ ಇದ್ದರು. ಅವರ ಬಳಿ ಬಂದ ಉಗ್ರ ಅವರ ಧರ್ಮ ಕೇಳಿ ಅವರನ್ನು ಗುಂಡಿಕ್ಕಿ ಸಾಯಿಸುತ್ತಾನೆ. ಈ ವೇಳೆ ಜಿಪ್‌ಲೈನಲ್ಲಿದ್ದ ಕಾರಣ ನಾನು ಜೀವಂತವಾಗಿ ಉಳಿದಿದ್ದೇನೆ. ನನ್ನ ಕಣ್ಣಮುಂದೆಯೇ 16ರಿಂದ 18 ಜನ ಪ್ರವಾಸಿಗರನ್ನು ಉಗ್ರರು ಗುಂಡಿಕ್ಕಿ ಸಾಯಿಸುವುದನ್ನು ನೋಡಿದ್ದೇನೆ ಎಂದು ಸ್ವತಃ ರಿಷಿ ಭಟ್ ಹೇಳಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಸ್ಕೂಟರ್ ಡಿಕ್ಕಿಯಿಂದ 13 ಲಕ್ಷ ಎಗರಿಸಿದ ಖದೀಮರು
ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಮೃಗಾಲಯದಲ್ಲಿ (Zoo) ಹುಲಿ ಇರುವ ಆವರಣಕ್ಕೆ ವ್ಯಕ್ತಿಯೊಬ್ಬ ಬಿದ್ದು ಹುಲಿಗೆ ಆಹಾರವಾಗಿರುವ ಘಟನೆ ನಡೆದಿದೆ.
ಪಾಕಿಸ್ತಾನದ ಪಂಜಾಬ್‌ನ ಪೂರ್ವ ಪ್ರಾಂತ್ಯದ ಬಹವಾಲ್‌ಪುರದ ಶೇರ್‌ಬಾಗ್ ಮೃಗಾಲಯದಲ್ಲಿ ಬುಧವಾರದಂದು ಎಂದಿನಂತೆ ಸಿಬ್ಬಂದಿ ಶುಚಿಗೊಳಿಸುತ್ತಿದ್ದ ಸಂದರ್ಭ ಹುಲಿಯ ಬಾಯಲ್ಲಿ ಶೂ ಕಾಣಿಸಿಕೊಂಡಿತ್ತು. ಈ ಶೂ ಎಲ್ಲಿಂದ ಬಂತು ಎಂದು ಪರಿಶೀಲಿಸಿದಾಗ ಹುಲಿ ಇರುವ ಆವರಣದ ಒಳಗಡೆಯೇ ವ್ಯಕ್ತಿಯ ಶವ ಪತ್ತೆಯಾಗಿದೆ.
ಹುಲಿಯ ಬಾಯಲ್ಲಿ ಶೂ ಕಾಣಿಸಿಕೊಳ್ಳುತ್ತಲೇ ಅನುಮಾನಗೊಂಡ ಸಿಬ್ಬಂದಿ ಗುಹೆಯೊಳಗೆ ಪರಿಶೀಲಿಸಿದಾಗ ವ್ಯಕ್ತಿಯ ಶವ ಕಂಡುಬಂದಿದೆ. ಆದರೆ ಪ್ರವಾಸಿಗರು ಆಕಸ್ಮಿಕವಾಗಿ ಹುಲಿ ಇರುವ ಆವರಣದೊಳಗೆ ಬೀಳಲು ಸಾಧ್ಯವೇ ಇಲ್ಲ. ಅದರ ಗೇಟ್‌ಗಳು ಭದ್ರವಾಗಿದೆ. ಹೀಗಾಗಿ ವ್ಯಕ್ತಿ ತಾನಾಗಿಯೇ ಹುಲಿಯ ಆವರಣದೊಳಗೆ ಹೋಗಿರುವ ಶಂಕೆ ವ್ಯಕ್ತಗಿರುವುದಾಗಿ ಬಹವಾಲ್ಪುರದ ಹಿರಿಯ ಸರ್ಕಾರಿ ಅಧಿಕಾರಿ ಜಹೀರ್ ಅನ್ವರ್ ತಿಳಿಸಿದ್ದಾರೆ. ಇದನ್ನೂ ಓದಿ: ಮದುವೆಗೆ ಬಂದ ಅತಿಥಿಗಳ ಮೇಲೆ ಬಿತ್ತು ಮುಸುರೆ ತಟ್ಟೆ – ವೈಟರ್‌ನನ್ನೇ ಹೊಡೆದು ಕೊಂದ್ರು
ಹುಲಿ ಇರುವ ಆವರಣ ಭದ್ರವಾಗಿದೆ. ಗುಹೆಯ ಹಿಂದೆ ಮೆಟ್ಟಿಲುಗಳಿವೆ. ಬಹುಶಃ ವ್ಯಕ್ತಿ ಅಲ್ಲಿಂದ ಜಿಗಿದಿರಬಹುದು. ಆದರೆ ಆತ ಯಾರು ಹಾಗೂ ಹೇಗೆ ಬಂದ ಎಂಬುದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. ಆತನ ಕಾಲು ಛಿದ್ರವಾಗಿದೆ. ಆತ ಸಾವನ್ನಪ್ಪಿ ಹಲವು ಗಂಟೆಗಳೇ ಆಗಿವೆ. ವಿಧಿವಿಜ್ಞಾನ ತಜ್ಞರು ಮೃತದೇಹವನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಪಂಜಾಬ್‌ನ ವನ್ಯಜೀವಿ ವಿಭಾಗವು ಮೃಗಾಲಯವನ್ನು ನಡೆಸುತ್ತಿದೆ. ಒಬ್ಬ ವ್ಯಕ್ತಿ ಮೃಗಾಲಯದೊಳಗೆ ಪ್ರವೇಶಿಸಲು 50 ರೂ. ಟಿಕೆಟ್ ಖರೀದಿಸಬೇಕು. ಆದರೆ ಪಾಕಿಸ್ತಾನದ ಮೃಗಾಲಯಗಳಲ್ಲಿ ಪ್ರಾಣಿಗಳ ಕ್ಷೇಮವನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಆಗಾಗ ಕೇಳಿಬಂದಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಪೊಲೀಸರ ದಾಳಿ – ಉಗ್ರರಿಗೆ ನೆರವು ನೀಡುತ್ತಿದ್ದ ಇಬ್ಬರು ಅರೆಸ್ಟ್
ಲಕ್ನೋ: ಆಗ್ರಾದ ತಾಜ್ ಮಹಲ್ (Taj Mahal ) ನೋಡಲೆಂದು ರಿಕ್ಷಾ ಹತ್ತಿದ 25 ವರ್ಷದ ಬೆಲ್ಜಿಯಂ ಪ್ರವಾಸಿಗ (Belgian tourist) ಬಳಿ ಆಟೋ ಚಾಲಕ(Auto Driver) ಮತ್ತು ಆತನ ಇಬ್ಬರು ಸಹಚರರು ದರೋಡೆ ಮಾಡಿದ್ದಾರೆ.
ಪ್ರವಾಸಿಗನ ಬಳಿಯಿಂದ 8000 ಯುರೋ ನಗದು, ಒಂದು ಲ್ಯಾಪ್‍ಟಾಪ್ (Laptop), ಒಂದು ಕ್ಯಾಮೆರಾ (Camera), ಒಂದು ಮೊಬೈಲ್ ಫೋನ್ (Mobile Phone) ಮತ್ತು ಒಂದು ಜೊತೆ ಶೂಗಳನ್ನು (Shoes) ಲಪಟಾಯಿಸಿದ್ದಾರೆ. ಇದೀಗ ಮೂವರು ಆರೋಪಿಗಳ ವಿರುದ್ಧ ಆಗ್ರಾದ ಪ್ರವಾಸೋದ್ಯಮ ಪೊಲೀಸ್ ಠಾಣೆಯಲ್ಲಿ (Tourism Police Station) ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹರಿಯುವ ನೀರಿನಲ್ಲಿ ಸಿಲುಕಿದ ತಾಯಿ, ಮಗ – ಗುಜುರಿ ವ್ಯಾಪಾರಿಯಿಂದ ರಕ್ಷಣೆ
ಪ್ರವಾಸಿಗನನ್ನು ಸೇವಿ ಎಂದು ಗುರುತಿಸಲಾಗಿದ್ದು, ಆಗ್ರಾ ಕ್ಯಾಂಟ್ ರೈಲ್ವೇ ನಿಲ್ದಾಣದ (Agra Cantt Railway Station) ಬಳಿಯ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಆಟೋ ಚಾಲಕ ಮತ್ತು ಆತನ ಇಬ್ಬರು ಸಹಚರರು (Two Associates) ತನ್ನ ಬಳಿ ದರೋಡೆ ಮಾಡಿದ್ದಾರೆ ಎಂದು ದೂರಿನಲ್ಲಿ ಸೇವಿ ಉಲ್ಲೇಖಿಸಿರುವುದಾಗಿ ಪ್ರವಾಸೋದ್ಯಮ ಪೊಲೀಸ್ ಠಾಣೆಯ ಉಸ್ತುವಾರಿ ಜೈ ಸಿಂಗ್ ಪರಿಹಾರ್ (Jai Singh Parihar) ತಿಳಿಸಿದ್ದು, ಇದೀಗ ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ ಆರೋಗ್ಯದಲ್ಲಿ ಏರುಪೇರು – ಆಸ್ಪತ್ರೆಗೆ ದಾಖಲು
ಪ್ರವಾಸಿಗ ಗೋವಾ(Goa) ಮೂಲದವರಾಗಿದ್ದು, ಬೆಲ್ಜಿಯಂನಲ್ಲಿ (Belgium) ಕೆಲಸ ಮಾಡುತ್ತಿದ್ದಾರೆ. ನಾನು ಭಾರತದ ನಿವಾಸಿ ಮತ್ತು ಗೋವಾದಲ್ಲಿ ಹುಟ್ಟಿದ್ದೇನೆ. ಆಗ್ರಾ ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇದೆ. ಏಕೆಂದರೆ ಅವರು ನನಗೆ ತುಂಬಾ ಸಹಾಯ ಮಾಡುತ್ತಿದ್ದಾರೆ. ಅವರು ಇಷ್ಟೊಂದು ಸಹಾಯ ಮಾಡುತ್ತಾರೆ ಎಂದು ನನಗೆ ತಿಳಿದಿರಲಿಲ್ಲ. ನಾನು ಬೆಳಗ್ಗೆಯಿಂದ ಹಸಿದಿದ್ದೇನೆ ಮತ್ತು ಅವರು ನನಗೆ ಊಟ ಮತ್ತು ಹೋಟೆಲ್ ವ್ಯವಸ್ಥೆ ಮಾಡಿಕೊಟ್ಟರು. ಅವರು ನನ್ನನ್ನು ಅತಿಥಿಯಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಸೇವಿ ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ಕಾರವಾರ: ಸಮುದ್ರದ ಅಲೆಗಳ ಮಧ್ಯೆ ಕಲ್ಲುಬಂಡೆಯ ಮೇಲೆ ಧ್ಯಾನದಲ್ಲಿ ಕುಳಿತಂತೆ ಫೋಟೊಗೆ ಪೋಸ್ ಕೊಡಲು ಹೋಗಿ ಪ್ರವಾಸಿಗನೋರ್ವ ಸಮುದ್ರ ಪಾಲಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾದ ವನ್ನಳ್ಳಿ ಕಡಲ ತೀರದಲ್ಲಿ ದುರಂತ ನಡೆದಿದೆ. ಶಿರಸಿಯ ನಿವಾಸಿ 42 ವರ್ಷದ ಸುಬ್ಬುಗೌಡ ಮೃತ ಪ್ರವಾಸಿಗ. ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಿದ್ದ ಸುಬ್ಬುಗೌಡ, ಕಡಲ ತೀರದ ಬಂಡೆ ಮೇಲೆ ಕುಳಿತು ಫೋಟೋಗೆ ಪೋಸ್ ಕೊಡುತ್ತಿದ್ದರು. ಈ ವೇಳೆ ರಭಸವಾಗಿ ಬಂದ ಅಲೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆಯಿಂದ ಜನ ಕಷ್ಟ ಪಡುವುದನ್ನೇ ಅಚ್ಚೇ ದಿನ್ ಅನ್ನೋದಾ: ಸಿದ್ದರಾಮಯ್ಯ
ಮಳೆ ಹೆಚ್ಚಾಗುತ್ತಿರುವುದರಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಬೃಹತ್ ಗಾತ್ರದ ಅಲೆಗಳು ಕಡಲಿಗೆ ಅಪ್ಪಳಿಸುತ್ತಿವೆ. ಇದಾವುದನ್ನೂ ಅರಿಯದ ಪ್ರವಾಸಿಗರು, ಸಮುದ್ರದ ತಟದಲ್ಲಿ ಫೋಟೋಗೆ ಪೋಸ್ ಕೊಡಲು ಮುಂದಾಗುತ್ತಾರೆ. ಅದೇ ರೀತಿ ಪೋಸ್ ಕೊಡಲು ಹೋಗಿ ವ್ಯಕ್ತಿ ಇದೀಗ ಸಮುದ್ರದ ಪಾಲಾಗಿದ್ದಾರೆ. ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಬೈ: ಮಹಾಮಾರಿ ಕೊರೊನಾ ವೈರಸ್‍ಗೆ ದೇಶದಲ್ಲಿ ಮತ್ತೊಬ್ಬರು ಬಲಿಯಾಗಿದ್ದು, ಈವರೆಗೆ ಒಟ್ಟು 8 ಜನರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೆ ಕೊರೊನಾ ಪೀಡಿತರ ಸಂಖ್ಯೆಯೂ 415ಕ್ಕೆ ಏರಿಕೆಯಾಗಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಮುಂಬೈನಲ್ಲಿ 68 ವರ್ಷದ ಫಿಲಿಪೈನ್ಸ್ ಪ್ರಜೆ ಸಾವನ್ನಪ್ಪಿದ್ದು, ಅವರಿಗೆ ಕೊರೊನಾ ಸೋಂಕು ತಗುಲಿತ್ತು.ಅವರನ್ನು ಮುಂಬೈನ ಕಸ್ತೂರಬಾ ಆಸ್ಪತ್ರೆಯಿಂದ ಪ್ರೈವೇಟ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ವಿದೇಶಿ ಪ್ರವಾಸಿಗ ಮೂತ್ರಪಿಂಡ ವೈಫಲ್ಯ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ.
ಈ ಮೂಲಕ ಮಹಾರಾಷ್ಟ್ರದಲ್ಲಿ ಕೊರೊನಾಗೆ ಮೂರನೇ ಬಲಿಯಾಗಿದ್ದು, ದೇಶದಲ್ಲಿ ಈವರೆಗೂ 8 ಜನರು ಮೃತಪಟ್ಟಿದ್ದಾರೆ.
The total number of positive Coronavirus cases in Maharashtra rises to 89: Maharashtra Health Department pic.twitter.com/XeETk5sTXf
ಚಿಕ್ಕಮಗಳೂರು: ನನಗೆ ಯಾವುದೇ ಕೊರೊನಾ ವೈರಸ್ ಇಲ್ಲ. ನನಗೆ ರೂಂ ನೀಡಿ ಎಂದು ಚೀನಾ ಪ್ರವಾಸಿಗನೋರ್ವ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ತಿರುಗಾಡುತ್ತಿದ್ದಾರೆ. ಕೊನೆಗೆ ರೂಂ ಸಿಗದಕ್ಕೆ ಟೆಂಟ್ ಹಾಕಿ ವಿಶ್ರಾಂತಿ ಪಡೆದುಕೊಂಡಿದ್ದಾರೆ.
ಚೀನಾದ ಪುಂಗೀಮ್ ಕರ್ನಾಟಕದ ಪ್ರವಾಸ ಕೈಗೊಂಡಿದ್ದಾರೆ. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬುಲೆಟ್ ನಲ್ಲಿ ಬಂದಿದ್ದರು. ಪುಂಗೀಮ್ ಮಾಸ್ಕ್ ಧರಿಸದೇ ಓಡಾಡುತ್ತಿದ್ದನ್ನು ಕಂಡು ಸ್ಥಳೀಯರು ಆತಂಕಕ್ಕೊಳಗಾಗಿದ್ದರು. ಸ್ಥಳೀಯರು ಮಾಸ್ಕ್ ನೀಡಿ ಧರಿಸುವಂತೆ ಸಲಹೆ ನೀಡಿದ್ದಾರೆ.
ಪುಂಗೀಮ್ ತಾನು ಚೀನಾದ ಪ್ರಜೆ ಎಂದು ಪರಿಚಯಿಸಿಕೊಳ್ಳುತ್ತಿದ್ದಂತೆ ಹೋಟೆಲ್ ಮಾಲೀಕರು ಹಿಂದೇಟು ಹಾಕಿದ್ದಾರೆ. ಮೂಡಿಗೆರೆ ಪರಿಸರದಲ್ಲಿ ರೂಮ್ ಹುಡುಕಾಡಿ ಬೇಸತ್ತ ಖಾಲಿ ಸ್ಥಳದಲ್ಲಿ ಟೆಂಟ್ ಹಾಕಿಕೊಂಡು ಮಲಗಿದ್ದಾರೆ. ಡೆಡ್ಲಿ ಕೊರೊನಾ ವೈರಸ್ ಮೊದಲಿಗೆ ಚೀನಾದಲ್ಲಿ ಕಾಣಿಸಿಕೊಂಡಿತ್ತು. ಸದ್ಯ ಕೊರೊನಾ ವೈರಸ್ ಭಾರತದಲ್ಲಿ ಮೂವರನ್ನು ಬಲಿ ಪಡೆದುಕೊಂಡಿದೆ.
ಮೈಸೂರು: ಮೈಸೂರು ಅರಮನೆ ಆವರಣದಲ್ಲಿನ ಕಂಚಿನ ಸಿಂಹದ ಮೇಲೆ ಪ್ರವಾಸಿಗನೊಬ್ಬ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದಕ್ಕೆ ಪ್ರವಾಸಿಗನ ಮೇಲೆ ರಾಜವಂಶಸ್ಥರು ಗರಂ ಆಗಿದ್ದಾರೆ.
ಕಂಚಿನ ಸಿಂಹದ ಮೇಲೆ ಕುಳಿತು ಪ್ರವಾಸಿಗ ಪ್ರಜ್ವಲ್ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆ. ಪ್ರವಾಸಿಗ ಪ್ರಜ್ವಲ್‍ನ ಈ ಪೋಸ್ಟ್ ಗೆ ರಾಜವಂಶಸ್ಥ ವರ್ಚಸ್ಸ್ ಸಿದ್ದಲಿಂಗರಾಜೇ ಅರಸ್ ಅವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೋಸ್ಟ್ ನಲ್ಲಿ, ಇಂತಹ ವ್ಯಕ್ತಿಗಳಿಗೆ ಪಾಠ ಕಲಿಸಬೇಕಿದೆ. ಪಾರಂಪರಿಕ ಸ್ಮಾರಕಗಳನ್ನು ಈ ರೀತಿ ಬಳಕೆ ಮಾಡಬಾರದು. ಈ ಬಗ್ಗೆ ಅರಮನೆ ಮಂಡಳಿ ಹಾಗೂ ಪೊಲೀಸರು ಪ್ರವಾಸಿಗನ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ಪ್ರವಾಸಿಗರಿಗೆ ಜಾಗೃತಿ ಮೂಡಿಸಬೇಕಿದೆ. ಈ ರೀತಿ ದುರ್ಬಳಕೆ ಮಾಡದಂತೆ ಅರಮನೆ ಮಂಡಳಿ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಿ ಎಂದು ತಮ್ಮ ಪೋಸ್ಟ್‍ನಲ್ಲಿ ಬರೆದುಕೊಂಡಿದ್ದಾರೆ.
ಸದ್ಯ ಯುವಕನ ಪೋಸ್ಟ್ ನೋಡಿ ನೆಟ್ಟಿಗರು ಆತನ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಕಾರವಾರ: ಸರ್ಫಿಂಗ್ ಮಾಡುವ ವೇಳೆ ಸಮುದ್ರ ಸುಳಿಗೆ ಸಿಕ್ಕಿ ಬಿದ್ದಿದ್ದ ಪ್ರವಾಸಿಗನನ್ನು ಪ್ರವಾಸೋದ್ಯಮ ಇಲಾಖೆಯ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕುಡ್ಲೆ ಬೀಚ್ ನಲ್ಲಿ ಈ ಘಟನೆ ನಡೆದಿದ್ದು, ಅಖಿಲೇಶ್ (30) ರನ್ನು ರಕ್ಷಣೆ ಮಾಡಲಾಗಿದೆ. ಅಖಿಲೇಶ್ ಸಮುದ್ರದಲ್ಲಿ ಸರ್ಫಿಂಗ್ ಮಾಡಲು ತೆರಳಿದ್ದ ವೇಳೆ ಅವಘಡ ಸಂಭವಿಸಿದೆ. ಲೈಫ್ ಗಾರ್ಡ್ ಗಳ ಕಾರ್ಯ ವಿಡಿಯೋದಲ್ಲಿ ಸೆರೆಯಾಗಿದ್ದು, ಅವರ ಕಾರ್ಯವನ್ನು ನೋಡಿದ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಖಿಲೇಶ್ ಡೆಹ್ರಾಡೂನ್ ಮೂಲದರಾಗಿದ್ದು, ಇಂದು ಕುಡ್ಲೆ ಬೀಚ್‍ನಲ್ಲಿ ಸರ್ಫಿಂಗ್ ಮಾಡಲು ತೆರಳಿದ್ದರು. ಈ ವೇಳೆ ಸಮುದ್ರದಲ್ಲಿ ನೀರಿನ ಸುಳಿ ನಿರ್ಮಾಣವಾಗಿದ್ದು, ಸರ್ಫಿಂಗ್ ಮಾಡುವ ವೇಳೆ ಆಯಾ ತಪ್ಪಿ ಅಖಿಲೇಶ್ ಸುಳಿಯಲ್ಲಿ ಸಿಲುಕಿದ್ದರು. ಅಪಾಯದಲ್ಲಿ ಸಿಲುಕಿದ ಅವರು ರಕ್ಷಣೆಗಾಗಿ ಮೊರೆ ಇಟ್ಟಿದ್ದು, ಇದನ್ನು ಗಮನಿಸಿದ ಪ್ರವಾಸೋದ್ಯಮ ಇಲಾಖೆಯ ಲೈಫ್ ಗಾರ್ಡ್ ಸಿಬ್ಬಂದಿ ಸಂಜೀವ್ ಹೋಸ್ಕಟ್ಟಾ, ನಿತ್ಯಾನಂದ ಹರಿಕಂತ್ರ ಸಮುದ್ರಕ್ಕೆ ಇಳಿದು ಅಖಿಲೇಶ್ ಅವರನ್ನು ರಕ್ಷಣೆ ಮಾಡಿದ್ದಾರೆ.
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಬೃಂದಾವನದಲ್ಲಿ ಮಳೆ-ಗಾಳಿಗೆ ಮರ ಉರುಳಿಬಿದ್ದ ಪರಿಣಾಮ ಮೂವರು ಪ್ರವಾಸಿಗರು ಸಾವನ್ನಪ್ಪಿದ್ದು ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೇರಳ ಮೂಲದ ವಿನೋದ್, ಹಿಲರ್ ಮತ್ತು ತಮಿಳುನಾಡು ಮೂಲದ ರಾಜಶೇಖರ್ ಮೃತ ದುರ್ದೈವಿಗಳು. ಬಿರುಗಾಳಿಗೆ ಮೂವತ್ತಕ್ಕೂ ಹೆಚ್ಚು ಮರಗಳು ಉಳಿಬಿದ್ದಿವೆ. ಮಂಗಳವಾರ ರಾತ್ರಿ ಸುಮಾರು ಏಳೂವರೆ ಸುಮಾರಿಗೆ ವಿಶ್ವವಿಖ್ಯಾತ ಕೆಆರ್‍ಎಸ್ ಬೃಂದಾವನ ಸೇರಿದಂತೆ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದೆ. ಪರಿಣಾಮ ಬೃಂದಾವನದ ಎಂಡಿಎಫ್ ಮತ್ತು ಬೋಟಿಂಗ್ ಪಾಯಿಂಟ್ ಬಳಿ ಎರಡು ಮರಗಳು ಉರುಳಿಬಿದ್ದಿವೆ.
ಮರದ ಕೆಳಗೆ ನಾಲ್ವರು ಸಿಲುಕಿಕೊಂಡಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ. ತಕ್ಷಣ ಮರದಡಿ ಸಿಲುಕಿದವರನ್ನು ರಕ್ಷಿಸುವ ಯತ್ನ ನಡೆದಿದೆ. ಆದ್ರೆ ಅವರಲ್ಲಿ ಮೂವರು ಪ್ರವಾಸಿಗರು ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಉಳಿದ ಓರ್ವನಿಗೆ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೆಆರ್‍ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.