Tag: ಪ್ರಲ್ಲಾದ್ ಜೋಶಿ

  • ವಿಜಯ ಸಂಕಲ್ಪ ಯಾತ್ರೆ ಬದಲು CD ಯಾತ್ರೆ ಮಾಡಿ: HDK

    ವಿಜಯ ಸಂಕಲ್ಪ ಯಾತ್ರೆ ಬದಲು CD ಯಾತ್ರೆ ಮಾಡಿ: HDK

    ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ (Karnataka Assembly Election 2023) ಸಿಡಿಗಳೇ ಬ್ರಹ್ಮಾಸ್ತ್ರಗಳಾಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗುತ್ತಿದೆ.

    ಪ್ರಹ್ಲಾದ್ ಜೋಶಿ (Pralhad Joshi)  ವಿರುದ್ಧ ವಾಗ್ದಾಳಿ ನಡೆಸಿರುವ ಕುಮಾರಸ್ವಾಮಿಗೆ (H.D Kumaraswamy)  ಟಕ್ಕರ್ ಕೊಡುವ ಭರದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ (N.Ravikumar) ಅವರು ಹೆಚ್‍ಡಿಕೆ ಮೇಲೆ ಮತ್ತೊಂದು ಸಿಡಿ ಬಾಂಬ್ ಸಿಡಿಸಿದ್ದಾರೆ. ಹೆಚ್‍ಡಿಕೆ ತಾಜ್ ವೆಸ್ಟೆಂಡ್ ಹೊಟೇಲ್, ಅವರ ಮನೆ, ತೋಟದ ಮನೆ, ಇವೆಲ್ಲ ಪ್ರಕರಣಗಳ ಬಗ್ಗೆ ನಮಗೂ ಗೊತ್ತಿದೆ. ಅವರು ಮಾತಾಡಲಿ, ಅವರು ಇದೇ ರೀತಿ ಮುಂದುವರಿದರೆ ನಾವೂ ಮಾತಾಡ್ತೀವಿ. ನಾವೂ ರಾಜಕಾರಣ ಮಾಡಲು ಬಂದವರು. ಅವರೇನು ಹರಿಶ್ಚಂದ್ರ ಅಲ್ಲ, ನಾವೂ ಮಾತಾಡ್ತೇವೆ ಅಂತ ಗುಡುಗಿದ್ದಾರೆ.

    ಹೆಚ್‍ಡಿಕೆ ಸ್ವಜಾತಿ ಕೂಪಿಷ್ಟ ಅಂತ ಜರಿದಿದ್ದಾರೆ. ಇದಕ್ಕೆ ತಿರುಗೇಟು ಕೊಟ್ಟಿರುವ ಕುಮಾರಸ್ವಾಮಿ, ಸಿಡಿಯಲ್ಲಿ ರವಿಕುಮಾರ್ ಎಕ್ಸ್‌ಪರ್ಟ್‌ ಇದ್ದಾರೆ. ವಿಜಯ ಸಂಕಲ್ಪ ಯಾತ್ರೆ ಬದಲು ಸಿಡಿ ಯಾತ್ರೆ ಮಾಡಿ. ಅದನ್ನು ತೋರಿಸಿಕೊಂಡು ಓಡಾಡಿ. ನಾಲ್ಕು ವರ್ಷದ ಹಿಂದಿನ ಸಿಡಿ ಯಾತ್ರೆ ಮಾಡಿ. ಬಿಜೆಪಿಯವರು ಈ ರಾಜ್ಯ ಲೂಟಿ ಮಾಡಿದ್ದಾರೆ. ಬಿಜೆಪಿಯನ್ನು (BJP) ರಾಜ್ಯದಿಂದ ಜನ ಹೊರಗೆ ಕಳುಹಿಸಲಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ಈ ಬಗ್ಗೆ ವಾಗ್ದಾಳಿ ಮುಂದುವರಿಸಿದ ಎನ್. ರವಿಕುಮಾರ್, ರಾಜ್ಯದ ಅತ್ಯಂತ ಸ್ವಾರ್ಥ ರಾಜಕಾರಣಿ ಹೆಚ್‍ಡಿಕೆ. ನಮ್ಮನೆ ಬಾಗಿಲಿಗೆ ಎಲ್ರೂ ಬರಬೇಕು ಅನ್ಕೊಂಡಿರೋರು. ಪ್ರಹ್ಲಾದ್ ಜೋಶಿ ಅವರು ಸರಿಯಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಸ್ಮಾರ್ಥ ಬ್ರಾಹ್ಮಣರು, ಪೇಶ್ವೆ ಬ್ರಾಹ್ಮಣರು ಅಂತ ಇಲ್ಲ. ಮಹಾರಾಷ್ಟ್ರದಲ್ಲಿ ಇರೋದು. ಕುಮಾರಸ್ವಾಮಿ ಪಿಎಚ್‍ಡಿ ಮಾಡಿದ್ದಾರಾ? ಕುಮಾರಸ್ವಾಮಿ ಕಿರುಕುಳಕ್ಕೆ ಬ್ರಾಹ್ಮಣ ವೈಎಸ್‍ವಿ ದತ್ತಾ ಪಕ್ಷ ಬಿಟ್ ಹೋಗಿದ್ದಾರೆ. ಬ್ರಾಹ್ಮಣರು ಸಿಎಂ, 8 ಜನ ಡಿಸಿಎಂ ಮಾಡೋ ಬಗ್ಗೆ ಚರ್ಚೆ ಆಗಿಲ್ಲ, ಆ ರೀತಿ ಏನೂ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಹೆಚ್‍ಡಿಕೆ ಭಯದಿಂದ ಚಡಪಡಿಸ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 1200 ರೂಪಾಯಿಗೆ ಡಿಎಪಿ ಗೊಬ್ಬರ – ಜೋಶಿ ಮನವಿಗೆ ಸ್ಪಂದಿಸಿದ ಸರ್ಕಾರ

    1200 ರೂಪಾಯಿಗೆ ಡಿಎಪಿ ಗೊಬ್ಬರ – ಜೋಶಿ ಮನವಿಗೆ ಸ್ಪಂದಿಸಿದ ಸರ್ಕಾರ

    ಹುಬ್ಬಳ್ಳಿ: ಡಿಎಪಿ ಗೊಬ್ಬರವನ್ನು 1413.25 ರೂಪಾಯಿ ಬದಲಿಗೆ 1200 ರೂಪಾಯಿಗೆ ರೈತರಿಗೆ ಒದಗಿಸಿ, ಹೆಚ್ಚುವರಿ ಹಣವನ್ನು ಸರ್ಕಾರದಿಂದ ಮಾರಾಟ ಮಂಡಳಿ ಬರಿಸುತ್ತದೆ.

    ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮೇರೆಗೆ ಸಿಎಂ ಬಿಎಸ್ ಯಡಿಯೂರಪ್ಪ, ಡಿಎಪಿ ಗೊಬ್ಬರವನ್ನು 1413.25 ರೂಪಾಯಿ ಬದಲಿಗೆ 1200 ರೂಪಾಯಿಗೆ ರೈತರಿಗೆ ಒದಗಿಸಿ, ಹೆಚ್ಚುವರಿ ಹಣವನ್ನು ಸರ್ಕಾರದಿಂದ ಮಾರಾಟ ಮಂಡಳಿಗೆ ಭರಿಸಲು ಆದೇಶಿಸಿದ್ದಾರೆ. ರಾಜ್ಯದಲ್ಲಿ ಈ ಹಿಂದಿನ ದರದಲ್ಲಿ ಖರೀದಿಸಿದ ಡಿಎಪಿ ರಸಗೊಬ್ಬರ ಒಟ್ಟು, 46474.15 ಮೆಟ್ರಿಕ್ ಟನ್ ಸಂಗ್ರಹವಿದೆ. ಕ್ಟಿಂಟಲ್ ಗೊಬ್ಬರಕ್ಕೆ 1413.25 ರೂಪಾಯಿ ರೈತರಿಗೆ ಹೊರೆಯಾಗಲಿದೆ. ಆದರೆ ಕೇಂದ್ರ ಸರ್ಕಾರ ಪ್ರಕಟಿಸಿದ ಸಬ್ಸಿಡಿಯಿಂದ ಡಿಪಿಎ ದರ ಪ್ರಸಕ್ತ ಮಾರುಕಟ್ಟೆಯಲ್ಲಿ 1200 ರೂಪಾಯಿಗೆ ದೊರೆಯುತ್ತಿದೆ.

    ಹೀಗಾಗಿ ಹಲವು ಜಿಲ್ಲೆಗಳಲ್ಲಿ ಗೊಬ್ಬರ ದಾಸ್ತಾನು ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ ಎಲ್ಲ ರೈತರಿಗೂ ರಸಗೊಬ್ಬರ ಒಂದೇ ದರದಲ್ಲಿ ಸಿಗುತ್ತಿರಲಿಲ್ಲ. ಎಲ್ಲ ಜಿಲ್ಲೆಗಳ ಉಗ್ರಾಣಗಳಲ್ಲಿರುವ ಡಿಎಪಿ ದರವನ್ನ ತಕ್ಷಣ ಕಡಿಮೆ ದರಕ್ಕೆ ದೊರೆಯುವಂತೆ ಮಾಡಲು ರಾಜ್ಯ ಸರ್ಕಾರ ಮಾರಾಟ ಮಂಡಳಿಗೆ 213.25 ರೂಪಾಯಿ ಮೊತ್ತವನ್ನ ಪಾವತಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ಬಿಎಸ್‍ವೈಗೆ ಫೋನ್ ಮೂಲಕ ಮನವಿ ಮಾಡಿದ್ದರು. ಇದನ್ನೂ ಓದಿ: ಡಿಎಪಿ ಗೊಬ್ಬರ ಸಬ್ಸಿಡಿ ಪ್ರಮಾಣ ಶೇ.140 ಏರಿಕೆ – ಕೇಂದ್ರದಿಂದ ಐತಿಹಾಸಿಕ ನಿರ್ಧಾರ

    ಪ್ರಹ್ಲಾದ್ ಜೋಶಿ ಮನವಿ ಮೇರೆಗೆ ಸಿಎಂ ಬಿಎಸ್‍ವೈ ತಕ್ಷಣವೇ ಡಿಎಪಿ ಗೊಬ್ಬರದ ಬೆಲೆಯನ್ನ 1413.25 ರೂಪಾಯಿ ಬದಲಿಗೆ 1200 ರೂಪಾಯಿಗೆ ಸಿಗುವಂತೆ ಆದೇಶ ಮಾಡಿದ್ದು, ಹೆಚ್ಚುವರಿ ಹಣವನ್ನು ಸರ್ಕಾರದಿಂದ ಮಾರಾಟ ಮಂಡಳಿಗೆ ಭರಿಸುವಂತೆ ಆದೇಶ ಮಾಡಿದ್ದಾರೆ. ತಮ್ಮ ಮನವಿಗೆ ಸ್ಪಂದಿಸಿ ಡಿಎಪಿ ರಸಗೊಬ್ಬರದ ಬೆಲೆಯನ್ನ ಕಡಿತಗೊಳಿಸಿದಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ಸಿಎಂ ಬಿಎಸ್ ವೈ ಹಾಗೂ ಕೃಷಿ ಸಚಿವ ಬಿಸಿ ಪಾಟೀಲಗೆ ಅಭಿನಂದನೆ ಸಲ್ಲಿಸಿದ್ದಾರೆ.