Tag: ಪ್ರಯತಮೆ

  • ಲವ್‍ಗೆ ಮನೆಯವರು ವಿರೋಧ- ಶಾಲಾ ಸಮವಸ್ತ್ರದಲ್ಲಿಯೇ ಅಪ್ರಾಪ್ತೆ ನೇಣಿಗೆ ಶರಣು

    ಲವ್‍ಗೆ ಮನೆಯವರು ವಿರೋಧ- ಶಾಲಾ ಸಮವಸ್ತ್ರದಲ್ಲಿಯೇ ಅಪ್ರಾಪ್ತೆ ನೇಣಿಗೆ ಶರಣು

    ಕೋಲಾರ: ಮನೆಯಲ್ಲಿ ಪ್ರೀತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವ ಪ್ರೇಮಿಗಳಿಬ್ಬರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಶ್ರೀನಿವಾಸಪುರ ಪಟ್ಟಣದ ಪಾತಪೇಟೆ ನಿವಾಸಿಗಳಾದ ಲಿಖಿತಾ ಹಾಗೂ ಗಂಗಾಧರ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಇವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಲವಳ್ಳಿ ಬಳಿ ಇರುವ ರಾಮಪ್ಪ ಎಂಬವರ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: 3ನೇ ತರಗತಿ ಬಾಲಕಿಯ ಬಟ್ಟೆ ಬಿಚ್ಚಿ ಅತ್ಯಾಚಾರಗೈದ ಪ್ರಿನ್ಸಿಪಾಲ್!

    ಕೋಲಾರ ತಾಲೂಕಿನ ಮದ್ದೇರಿ ಪ್ರೌಢ ಶಾಲೆಯಲ್ಲಿ 9ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಅಪ್ರಾಪ್ತ ಬಾಲಕಿ ಲಿಖಿತಾ ತನ್ನ ಶಾಲಾ ಸಮವಸ್ತ್ರದಲ್ಲೆ ನೇಣಿಗೆ ಶರಣಾಗಿದ್ದಾಳೆ. ಮನೆಯಲ್ಲಿ ಪ್ರೀತಿ ನಿರಾಕರಿಸಿದ ಹಿನ್ನೆಲೆ ಇಂದು ಶಾಲೆಗೆ ತೆರಳಿದ್ದ ಲಿಖಿತಾಳನ್ನ ಕರೆದುಕೊಂಡು ಬಂದು ಗಂಗಾಧರ್ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಕ್ಕು ಕಚ್ಚಿದ್ದರಿಂದ ಇಬ್ಬರು ಮಹಿಳೆಯರು ಸಾವು

    ಗಂಗಾಧರ್ ಜೇಬಿನಲ್ಲಿ ಮೊಬೈಲ್ ಪತ್ತೆಯಾಗಿದ್ದು, ಆ ಮೂಲಕ ಇಬ್ಬರು ಸಹ ಶ್ರೀನಿವಾಸಪುರ ಪಟ್ಟಣದ ಪಾತಪೇಟೆ ನಿವಾಸಿಗಳೆಂದು ತಿಳಿದು ಬಂದಿದೆ. ಸ್ಥಳಕ್ಕೆ ಬಂದ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ಇಬ್ಬರಿಗೂ ಪ್ರೇಮ ವ್ಯವಹಾರ ನಡೆದಿತ್ತು. ಮನೆಯವರು ನಿರಾಕರಿಸಿದ್ರು. ಪರಿಣಾಮ ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಸ್ಥಳೀಯ ಮಾತಾಗಿತ್ತು. ಇನ್ನೂ ಶ್ರೀನಿವಾಸಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.