Tag: ಪ್ರಮೋದ ಮುತಾಲಿಕ್

  • ಪ್ರೇಮಿಗಳ ದಿನ ಅನ್ನೋದು ವಿಕೃತಿ, ಆಚರಣೆ ಹಿಂದೆ ದೊಡ್ಡ ಷಡ್ಯಂತ್ರವಿದೆ: ಪ್ರಮೋದ್ ಮುತಾಲಿಕ್

    ಪ್ರೇಮಿಗಳ ದಿನ ಅನ್ನೋದು ವಿಕೃತಿ, ಆಚರಣೆ ಹಿಂದೆ ದೊಡ್ಡ ಷಡ್ಯಂತ್ರವಿದೆ: ಪ್ರಮೋದ್ ಮುತಾಲಿಕ್

    ಧಾರವಾಡ: ಪ್ರೇಮಿಗಳ ದಿನ ಅನ್ನೋದು ವಿಕೃತಿಯಾಗಿದೆ. ಈ ಆಚರಣೆ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

     

    ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಾಗಿ ಪ್ರಮೋದ್ ಮುತಾಲಿಕ್ ವೀಡಿಯೋ ಸಂದೇಶ ಹರಿಬಿಟ್ಟಿದ್ದಾರೆ. ನಮ್ಮ ದೇಶದಲ್ಲಿ ಶೇ.40 ರಷ್ಟು ಯುವಶಕ್ತಿ ಇದೆ, ಅದು ನಮ್ಮ ದೇಶದ ತಾಕತ್ತು, ಈ ಶಕ್ತಿಯನ್ನು ನಿಷ್ಕ್ರಿಯ ಮಾಡುವ ಕುತಂತ್ರ ನಡೆದಿದೆ ಎಂದು ಹೇಳಿದ್ದಾರೆ.

     

    ಪ್ರೇಮಿಗಳ ದಿನಾಚರಣೆ ಮಾಡುವ ಮೂಲಕ ದೇಶವನ್ನು ದುರ್ಬಲ ಮಾಡುವ ಪ್ರಯತ್ನ ನಡೆದಿದೆ. ಈ ಆಚರಣೆಯ ಹಿಂದೆ ವಿದೇಶಿ ಶಕ್ತಿ ಕೈವಾಡ ಇದೆ. ನಾನಾ ಡೇ ಆಚರಣೆಗಳ ಮೂಲಕ ಯುವಶಕ್ತಿ ಹಾಳು ಮಾಡುವ ಷಡ್ಯಂತ್ರ ನಡೆದಿದೆ. ಸರರ್ಕಾರ ವ್ಯಾಲೆಂಟೈನ್ಸ್ ಡೇ ನಿಬರ್ಂಧಿಸಬೇಕು. ಇದರ ಹಿಂದೆ ಸೆಕ್ಸ್, ಡ್ರಗ್ಸ್ ಮಾಫಿಯಾ ಇದೆ. ನಮ್ಮ ಸಂಪ್ರದಾಯವನ್ನು ಹಾಳು ಮಾಡುವ ಸಂಚು ಈ ದಿನಾಚರಣೆ ಹಿಂದಿದೆ. ಫೆಬ್ರವರಿ 14 ರಂದು ಎಲ್ಲರೂ ಮಾತಾ-ಪಿತಾ ಪೂಜೆ ಮಾಡೋಣ ಎಂದು ಕರೆ ಕೊಟ್ಟಿದ್ದಾರೆ.

  • ದೇಶದಲ್ಲಿ ಕೇಸರಿ ಭಯೋತ್ಪಾದನೆ ನಡೆಯುತ್ತಿದೆ- ಬಸವರಾಜ ಸುಳಿಬಾಯಿ

    ದೇಶದಲ್ಲಿ ಕೇಸರಿ ಭಯೋತ್ಪಾದನೆ ನಡೆಯುತ್ತಿದೆ- ಬಸವರಾಜ ಸುಳಿಬಾಯಿ

    ಗದಗ: ದೇಶದಲ್ಲಿ ಕೇಸರಿ ಭಯೋತ್ಪಾದನೆ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೇಸರಿ ಭಯೋತ್ಪಾದನೆ ಒಪ್ಪಿಕೊಂಡು ಅಧಿಕೃತವಾಗಿ ಘೋಷಿಸಬೇಕು ಎಂದು ವಿಚಾರವಾದಿಗಳ ಹತ್ಯಾ ವಿರೋಧಿ ಸಮಿತಿಯ ಮುಖಂಡ ಬಸವರಾಜ ಸುಳಿಬಾಯಿ ಗಂಭೀರ ಆರೋಪ ಮಾಡಿದ್ದಾರೆ.

    ಗೌರಿ ಲಂಕೇಶ್, ಕಲ್ಬುರ್ಗಿ, ಧಾಬೋಲ್ಕರ್, ಪನ್ಸಾರೆ ಹತ್ಯಾ ವಿರೋಧಿ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೇಸರಿ ಭಯೋತ್ಪಾದನೆ ಒಪ್ಪಿಕೊಂಡು ಅಧಿಕೃತವಾಗಿ ಘೋಷಿಸಬೇಕು. ನಕ್ಸಲ್ ನಿಗ್ರಹಪಡೆ ಮಾದರಿಯಲ್ಲಿ, ಕೇಸರಿ ಭಯೋತ್ಪಾದನೆ ನಿಗ್ರಹ ಪಡೆ ರಚನೆ ಮಾಡಬೇಕು ಎಂದು ಆಗ್ರಹಿಸಿದರು.

    ಹಿಂದೂಪರ ಸಂಘಟನೆಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು ಪ್ರಮೋದ್ ಮುತಾಲಿಕ್ ಧಾರ್ಮಿಕ ಅಂಧತ್ವ ತುಂಬಿಕೊಂಡಿರುವ ವ್ಯಕ್ತಿ. ಕ್ರೌರ್ಯವನ್ನು ವಿಸ್ತರಿಸುತ್ತಿರುವ ಮುತಾಲಿಕ್ ರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

    ಗೌರಿಲಂಕೇಶ್ ಹತ್ಯೆ ಕುರಿತು ಶಂಕಿತ ಆರೋಪಿಯ ಬಂಧನ ಹಿನ್ನಲೆಯಲ್ಲಿ ಎಸ್‍ಐಟಿ ತಂಡ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಕಲಬುರ್ಗಿ ಹತ್ಯೆ ಪ್ರಕರಣವನ್ನು ಸಿಐಡಿ ಬದಲು ಎಸ್‍ಐಟಿಗೆ ನೀಡಬೇಕು. ಬಂಧಿತ ಶಂಕಿತ ಹಂತಕರ ಹಿಂದಿರು ಸಂಘಟನೆ ಯಾವುದು ಎಂಬುದನ್ನು ದೃಢಪಡಿಸಬೇಕು. ಹತ್ಯೆಗೆ ಪ್ರಚೋದನೆ ನೀಡಿದ ವ್ಯಕ್ತಿಗಳು ಹಾಗೂ ಸಂಘಟನೆಗಳ ಹೆಸರನ್ನು ಬಹಿರಂಗ ಪಡಿಸಬೇಕು. ಆರ್ ಎಸ್‍ಎಸ್, ಶ್ರೀರಾಮಸೇನೆ ಸೇರಿದಂತೆ ಹಿಂದೂಪರ ಸಂಘಟನೆಗಳನ್ನ ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಹೇಳಿದರು.

  • ಅಮಿತ್ ಶಾ, ರಾಹುಲ್ ಗಾಂಧಿ ಪ್ರವಾಸದ ವಿರುದ್ಧ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದು ಹೀಗೆ

    ಅಮಿತ್ ಶಾ, ರಾಹುಲ್ ಗಾಂಧಿ ಪ್ರವಾಸದ ವಿರುದ್ಧ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದು ಹೀಗೆ

    ಧಾರವಾಡ: ರಾಷ್ಟ್ರೀಯ ಪಕ್ಷಗಳ ಮುಖಂಡರಾದ ಅಮಿತ್ ಶಾ ಹಾಗೂ ರಾಹುಲ್ ಗಾಂಧಿ ಪಕ್ಷ ಬೆಳವಣಿಗೆ ಬಗ್ಗೆ ಮಾತ್ರ ಪ್ರವಾಸ ಮಾಡುತ್ತಿದ್ದು, ಮಹದಾಯಿ ಬಗ್ಗೆ ಚಕಾರ ಎತ್ತಿಲ್ಲ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ

    ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಬಂದಿದೆ. ರೈತರಿಗೆ ನೀರಿನ ಹಾಹಾಕಾರ ಎದುರಾಗಿದೆ. ಮಹದಾಯಿ ನೀರಿನ ಸಮಸ್ಯೆ ಇದ್ದರೂ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಅಧಿಕಾರ ಮುಖ್ಯವಾಗಿದೆ ಎಂದರು.

    ರೈತರಿಗೆ ಬೇಕಾದ ನೀರಿನ ವಿಷಯ ಎತ್ತುತ್ತಿಲ್ಲ. ಮಹದಾಯಿ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಗೋವಾ ಸಿಎಂ ನಿರ್ಲಜ್ಜ ಸಿಎಂ ಎಂದು ಕಿಡಿಕಾರಿದರು. ಚುನಾವಣೆಯಲ್ಲಿ ರಾಜಕೀಯ ಮಾಡದೇ, ರಾಜ್ಯದ ರೈತರ ಹಾಹಾಕಾರ ಇದೆ. ಅದಕ್ಕೆ ಪರಿಹಾರ ಕೊಡುವ ಕೆಲಸವನ್ನು ಅಮಿತ್ ಶಾ ಮಾಡಬೇಕು ಎಂದು ತಿಳಿಸಿದರು.

    ನಾನೀಗಾಗಲೇ ಅಮಿತ್ ಶಾ ಅವರಿಗೆ ಪತ್ರ ಬರೆದು ಮಹದಾಯಿ ಬಗ್ಗೆ ಉಲ್ಲೇಖ ಮಾಡಿದ್ದೇನೆ. ಕಾಂಗ್ರೆಸ್‍ನ ರಾಹುಲ್ ಗಾಂಧಿ ಕೂಡಾ ರಾಜ್ಯದ ಜನರಿಗೆ ದ್ರೋಹ ಮಾಡುತ್ತಿದ್ದಾರೆ. ಎರಡು ವರ್ಷದಿಂದ ಪ್ರತಿಭಟನೆ ನಡೆಯುತ್ತಿದ್ದರೂ ಯಾವುದೇ ಪ್ರತಿಕ್ರಿಯೇ ಇಲ್ಲ. ರೈತರ ಮೇಲೆ ಕೇಸ್ ಹಾಕಿದ್ರೂ ಜನ ಛೀ.. ಥೂ.. ಅಂದರೂ ಸಮಸ್ಯೆ ಮಾತ್ರ ಸರಿಯಾಗುತ್ತಿಲ್ಲ. ಸೋನಿಯಾ ಗಾಂಧಿ ಅವರು ಕೂಡಾ ಮಹದಾಯಿ ಜೋಡಿಸುವ ವಿಚಾರದಲ್ಲಿ ಮೌನವಾಗಿದ್ದಾರೆ. ಬಿಜೆಪಿಗೆ ಜನರು ಅಧಿಕಾರ ಕೊಟ್ಟಿದ್ದಾರೆ. ಆದರೆ ಪರಿಸ್ಥಿತಿ ಹೀಗೆಯೇ ಮುಂದುವರೆಸಿದರೆ ಕೇಂದ್ರ ಸರ್ಕಾರದಲ್ಲಿ ಸೋನಿಯಾ ಗಾಂಧಿಗೆ ಆದ ಸ್ಥಿತಿ ನಿಮಗೂ ಆಗುತ್ತೆ ಎಂದು ಎಚ್ಚರಿಕೆ ನೀಡಿದರು.

    ನಾಲ್ಕು ಜಿಲ್ಲೆಯ ಜನರು ಚುನಾವಣೆಗೆ ಬಹಿಷ್ಕಾರ ಹಾಕಬೇಕು. ನೀರು ತಂದು ಕೊಟ್ಟವರಿಗೆ ಓಟು ಹಾಕುವ ಕೆಲಸ ಆಗಬೇಕು. ನಿರ್ಗಮಿತ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ದೇಶದಲ್ಲಿ ಮುಸ್ಲಿಮರು ಅಸುರಕ್ಷಿತ ಎಂದು ಹೇಳಿದ್ದಾರೆ. ಎರಡು ಬಾರಿ ನೀವು ಹಿಂದೂ ಸುರಕ್ಷತೆಯಲ್ಲಿ ಉಪರಾಷ್ಟ್ರಪತಿಯಾಗಿದ್ದೀರಿ. ಹೀಗಾಗಿ ಈ ರೀತಿ ಹೇಳಿಕೆ ನೀಡಿರುವುದು ಮೂರ್ಖತನವಾಗಿದೆ ಎಂದು ಹೇಳಿದರು.