Tag: ಪ್ರಮೋದ್‌ ಮರವಂತೆ

  • ಹಸೆಮಣೆ ಏರಿದ ‘ಸಿಂಗಾರ ಸಿರಿಯೇ’ ಖ್ಯಾತಿಯ ಪ್ರಮೋದ್ ಮರವಂತೆ

    ಹಸೆಮಣೆ ಏರಿದ ‘ಸಿಂಗಾರ ಸಿರಿಯೇ’ ಖ್ಯಾತಿಯ ಪ್ರಮೋದ್ ಮರವಂತೆ

    ‘ಕಾಂತಾರ’ ಸಿನಿಮಾದಲ್ಲಿ ‘ಸಿಂಗಾರ ಸಿರಿಯೇ’ ಸಾಹಿತಿ ಪ್ರಮೋದ್ ಮರವಂತೆ (Pramod Maravante) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ‘ಕೆಜಿಎಫ್ 2’ (KGF 2) ಸಿಂಗರ್ ಸುಚೇತ (Suchetha Basrur) ಜೊತೆ ಹೊಸ ಬಾಳಿಗೆ ಪ್ರಮೋದ್ ಕಾಲಿಟ್ಟಿದ್ದಾರೆ. ಇದನ್ನೂ ಓದಿ:ರಿಲೇಷನ್‌ಶಿಪ್ ವದಂತಿ ನಡುವೆ ವಿಜಯ್ ದೇವರಕೊಂಡ ಫ್ಯಾಮಿಲಿಗೆ ‘ಪುಷ್ಪ 2’ ತೋರಿಸಿದ ರಶ್ಮಿಕಾ ಮಂದಣ್ಣ

    ಡಿ.5ರಂದು ಕುಂದಾಪುರದಲ್ಲಿ ಸಿಂಗರ್ ಸುಚೇತ ಜೊತೆ ಪ್ರಮೋದ್ ಮರವಂತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಇನ್ನೂ ಇತ್ತೀಚೆಗೆ ನಿಶ್ಚಿತಾರ್ಥದ ಸಂಭ್ರಮದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ‘ರಾಗಕ್ಕೆ ಪದ ಸೇರಿದೆ ಬದುಕೊಂದು ಹಾಡಾಗಿದೆ’ ಎಂದು ಸಾಲುಗಳನ್ನು ಬರೆದು ಭಾವಿ ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡಿದ್ದರು.

    ಪ್ರಮೋದ್ ಭಾವಿ ಪತ್ನಿಯ ಹೆಸರು ಸುಚೇತ ಬಸ್ರೂರು, ಕೆಜಿಎಫ್ 2 ಚಿತ್ರದಲ್ಲಿ ‘ಗಗನ ನೀ ಭುವನ ನೀ’ ಎಂಬ ಹಾಡನ್ನು ಸೊಗಸಾಗಿ ಹಾಡುವ ಮೂಲಕ ಸದ್ದು ಮಾಡಿದ್ದರು. ಇವರು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸೊಸೆಯಾಗಿದ್ದಾರೆ. ಅವರ ರವಿ ಬಸ್ರೂರು ಅವರ ಅಕ್ಕನ ಮಗಳು ಸುಚೇತ.

    ಅಂದಹಾಗೆ, ಸಿಂಗಾರ ಸಿರಿಯೇ, ಚೆಂದ ಚೆಂದ ನನ್ನ ಹೆಂಡ್ತಿ, ಮತ್ತು ‘ಸೀತಾರಾಮ’ ಸೀರಿಯಲ್‌ನ ಟೈಟಲ್ ಟ್ರ‍್ಯಾಕ್‌ಗೆ ಪ್ರಮೋದ್ ಸಾಹಿತ್ಯ ಬರೆದಿದ್ದಾರೆ. ಸಾಕಷ್ಟು ಸಿನಿಮಾಗಳ ಹಾಡಿಗೆ ಲಿರಿಕ್ಸ್ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.

  • ‘ಕೆಜಿಎಫ್‌ 2’ ಸಿಂಗರ್‌ ಜೊತೆ ಎಂಗೇಜ್‌ ಆದ ‘ಸಿಂಗಾರ ಸಿರಿಯೇ’ ಖ್ಯಾತಿಯ ಪ್ರಮೋದ್‌ ಮರವಂತೆ

    ‘ಕೆಜಿಎಫ್‌ 2’ ಸಿಂಗರ್‌ ಜೊತೆ ಎಂಗೇಜ್‌ ಆದ ‘ಸಿಂಗಾರ ಸಿರಿಯೇ’ ಖ್ಯಾತಿಯ ಪ್ರಮೋದ್‌ ಮರವಂತೆ

    ‘ಕಾಂತಾರ’ ಸಿನಿಮಾದಲ್ಲಿನ ‘ಸಿಂಗಾರ ಸಿರಿಯೇ’ ಖ್ಯಾತಿಯ ಲಿರಿಕ್ಸ್ ರೈಟರ್ ಪ್ರಮೋದ್ ಮರವಂತೆ (Pramod Maravante) ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಕೆಜಿಎಫ್ 2’ ಚಿತ್ರದ ಸಿಂಗರ್ ಸುಚೇತ (Suchetha Basrur) ಜೊತೆ ಪ್ರಮೋದ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಕಿರುತೆರೆ ನಟ ವರುಣ್ ಆರಾಧ್ಯ ವಿರುದ್ಧ FIR ದಾಖಲು

    ನಿಶ್ಚಿತಾರ್ಥದ (Engagement) ಸಂಭ್ರಮದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ‘ರಾಗಕ್ಕೆ ಪದ ಸೇರಿದೆ ಬದುಕೊಂದು ಹಾಡಾಗಿದೆ’ ಎಂದು ಸಾಲುಗಳನ್ನು ಬರೆದು ಭಾವಿ ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

    ಪ್ರಮೋದ್ ಭಾವಿ ಪತ್ನಿಯ ಹೆಸರು ಸುಚೇತ ಬಸ್ರೂರು, ಕೆಜಿಎಫ್ 2 ಚಿತ್ರದಲ್ಲಿ ‘ಗಗನ ನೀ ಭುವನ ನೀ’ ಎಂಬ ಹಾಡನ್ನು ಸೊಗಸಾಗಿ ಹಾಡುವ ಮೂಲಕ ಸದ್ದು ಮಾಡಿದ್ದರು. ಇವರು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸೊಸೆಯಾಗಿದ್ದಾರೆ. ಅವರ ಅಕ್ಕನ ಮಗಳು ಸುಚೇತ ಜೊತೆ ಪ್ರಮೋದ್ ಉಂಗುರದ ಮುದ್ರೆ ಒತ್ತಿದ್ದಾರೆ. ಸದ್ಯದಲ್ಲೇ ಮದುವೆ ಕುರಿತು ಅಪ್‌ಡೇಟ್‌ ಹಂಚಿಕೊಳ್ಳಲಿದ್ದಾರೆ.

    ಅಂದಹಾಗೆ, ಸಿಂಗಾರ ಸಿರಿಯೇ, ಚೆಂದ ಚೆಂದ ನನ್ನ ಹೆಂಡ್ತಿ, ಮತ್ತು ‘ಸೀತಾರಾಮ’ ಸೀರಿಯಲ್‌ನ ಟೈಟಲ್ ಟ್ರ್ಯಾಕ್‌ಗೆ ಪ್ರಮೋದ್ ಸಾಹಿತ್ಯ ಬರೆದಿದ್ದಾರೆ. ಸಾಕಷ್ಟು ಸಿನಿಮಾಗಳ ಹಾಡಿಗೆ ಲಿರಿಕ್ಸ್ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.

  • ಜಾಗೃತಿಗಾಗಿ ‘ಬೆಳಕೆ’ ಅಂತ ಹಾಡು ಬರೆದ ಪ್ರಮೋದ್ ಮರವಂತೆ

    ಜಾಗೃತಿಗಾಗಿ ‘ಬೆಳಕೆ’ ಅಂತ ಹಾಡು ಬರೆದ ಪ್ರಮೋದ್ ಮರವಂತೆ

    ಗಷ್ಟೇ ಬೇಸಿಗೆ ಆರಂಭ. ಆಗಲೇ ಎಲ್ಲೆಡೆ ನೀರಿಗೆ ಹಾಹಾಕಾರ.‌ ಇದಕ್ಕೆ ಕಾರಣ ಪರಿಸರ ನಾಶ ಹಾಗೂ ಜಾಗತಿಕ ತಾಪಮಾನದ ಏರಿಕೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ  ‘ಬೆಳಕೆ’ (Belake) ಹಾಡು (Song) ಬಿಡುಗಡೆಯಾಗಿದೆ. ಹೊಂಬಣ್ಣ ಚಿತ್ರದ ಖ್ಯಾತಿಯ ರಕ್ಷಿತ್ ತೀರ್ಥಹಳ್ಳಿ (Rakshit Theerthahalli) ನಿರ್ದೇಶಿಸಿರುವ ಈ ಹಾಡಿಗೆ ಆದರ್ಶ ಅಯ್ಯಂಗಾರ್, ದನಿಯಾಗುವುದರ ಜೊತೆಗೆ ನಟನೆಯನ್ನು ಮಾಡಿದ್ದಾರೆ.

    ನಮ್ಮ ಶ್ರೀಕೃಷ್ಣ ಪ್ರೊಡಕ್ಷನ್ಸ್ ಮೂಲಕ ಈಗಾಗಲೇ ಜನರಿಗೆ ಉತ್ತಮ ಸಂದೇಶ ನೀಡುವ ವಿಡಿಯೋ ಹಾಡುಗಳನ್ನು ಬಿಡುಗಡೆ ಮಾಡಿದ್ದೇವೆ‌. ತಿಮ್ಮನ ಮೊಟ್ಟೆಗಳು ಚಿತ್ರ ಸಹ ನಿರ್ಮಾಣವಾಗಿ, ಬಿಡುಗಡೆ ಹಂತದಲ್ಲಿದೆ. ಮತ್ತೊಂದು ಉತ್ತಮ ಸಂದೇಶವುಳ್ಳ ಹಾಡನ್ನು ನಿರ್ಮಿಸುವ ಸಲುವಾಗಿ ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಅವರ ಜೊತೆ ಚರ್ಚಿಸಿದಾಗ ಅವರು ಜಾಗತಿಕ ತಾಪಮಾನದ ಕುರಿತು ಜನರಿಗೆ ಜಾಗೃತಿ ಮೂಡಿಸುವ ಈ ಹಾಡನ್ನು ಮಡೋಣ ಎಂದು ಸಲಹೆ ನೀಡಿದರು. ಜನರಿಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ಬೆಳಕೆ ಹಾಡನ್ನು ನಿರ್ಮಾಣ ಮಾಡಿದ್ದೇವೆ. ನಾನು ಹಾಡುವುದರೊಟ್ಟಿಗೆ ಅಭಿನಯವನ್ನು ಮಾಡಿದ್ದೇನೆ. ರಕ್ಷಿತ್ ತೀರ್ಥಹಳ್ಳಿ ನಿರ್ದೇಶಿಸಿದ್ದಾರೆ. ಪ್ರಮೋದ್ ಮರವಂತೆ ಬರೆದಿರುವ ಈ ಹಾಡಿಗೆ ಹೇಮಂತ್ ಜೋಯಿಸ್ ಸಂಗೀತ ನೀಡಿದ್ದಾರೆ.  ಗುರುಪ್ರಸಾದ್ ನಾರ್ನಾಡ್ ಅವರ ಛಾಯಾಗ್ರಹಣದಲ್ಲಿ ಹಾಡು ಸುಂದರವಾಗಿ ಮೂಡಿಬಂದಿದೆ. ಸುಧೀರ್ ಎಸ್ ಜೆ ಈ ಹಾಡಿನ ಸಂಕಲನಕಾರರು  ಎಂದರು ಗಾಯಕ ಹಾಗೂ ನಾಯಕ ಆದರ್ಶ ಅಯ್ಯಂಗಾರ್.

    ಮುಂಚೆ ಬೆಂಗಳೂರಿನಲ್ಲಿ ತಾಪಮಾನ ಕಡಿಮೆ ಇರುತ್ತಿತ್ತು. ಈಗ ಗಮಿನಿಸಿದರೆ ಬೆಂಗಳೂರು, ಮಲೆನಾಡು ಹಾಗೂ ಉತ್ತರ ಕರ್ನಾಟಕ ಎಲ್ಲಾ ಕಡೆ ಹೆಚ್ಚು ಕಡಿಮೆ ಒಂದೇ ತಾಪಮಾನವಿರುತ್ತದೆ‌. ಇದಕ್ಕೆ ಕಾರಣ ಪರಿಸರ ನಾಶ. ಗಿಡ ಬೆಳಸುವುದು ಹಾಗೂ ಈಗಿರುವ ಗಿಡಗಳನ್ನು ಉಳಿಸುವುದೆ ಇದಕ್ಕೆ ಪರಿಹಾರ. ಇಲ್ಲದಿದ್ದರೆ ಮುಂದೆ ಇನ್ನೂ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಇಂತಹ ವಿಷಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಹಾಡೊಂದನ್ನು ಮಾಡೋಣ ಎಂದು ನಾನು, ಆದರ್ಶ ಅಯ್ಯಂಗಾರ್ ಅವರಿಗೆ ಹೇಳಿದಾಗ ಸಂತೋಷದಿಂದ ಒಪ್ಪಿದರು.  ಈ ಹಾಡು ಈಗ ನಿಮ್ಮ ಮುಂದೆ ಇದೆ. ಎಲ್ಲರೂ ನೋಡಿ ಎಂದು ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ತಿಳಿಸಿದರು.

    ನಾನು ಸಾಕಷ್ಟು ಚಿತ್ರಗಳಿಗೆ ಹಾಡು ಬರೆಯುತ್ತಿದ್ದೇನೆ‌. ಆದರೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಈ ಹಾಡನ್ನು ಬರೆಯಲು ತುಂಬಾ ಸಂತೋಷವಾಯಿತು. ತುಂಬಾ ಬಿಸಿಲಿದೆ‌‌.‌ ದಯವಿಟ್ಟು ಎಲ್ಲರೂ ತಮ್ಮ ಮನೆಯ ಮಹಡಿಯಲ್ಲಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ಎಂದರು ಗೀತರಚನೆಕಾರ ಪ್ರಮೋದ್ ಮರವಂತೆ (Pramod Maravante). ಛಾಯಾಗ್ರಾಹಕ ಗುರುಪ್ರಸಾದ್ ನಾರ್ನಾಡ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

  • ʻಕಾಂತಾರʼ ಸಿಂಗಾರ ಸಿರಿಯೇ ಲಿರಿಕ್ಸ್ ರೈಟರ್ ಬರೆದಿರುವ `ದೂರದರ್ಶನ’ ಚಿತ್ರದ ನ್ಯೂ ಸಾಂಗ್ ಔಟ್

    ʻಕಾಂತಾರʼ ಸಿಂಗಾರ ಸಿರಿಯೇ ಲಿರಿಕ್ಸ್ ರೈಟರ್ ಬರೆದಿರುವ `ದೂರದರ್ಶನ’ ಚಿತ್ರದ ನ್ಯೂ ಸಾಂಗ್ ಔಟ್

    ಟೈಟಲ್ ಮೂಲಕ ಸಖತ್ ಸುದ್ದಿ ಮಾಡಿರುವ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಾಯಕ ನಟನಾಗಿ ಅಭಿನಯಿಸಿರುವ ಚಿತ್ರ ʻದೂರದರ್ಶನʼ ಸುಕೇಶ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಚಿತ್ರೀಕರಣ ಮುಗಿಸಿ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ವಿಭಿನ್ನ ಪೋಸ್ಟರ್ ಹಾಗೂ ಟೀಸರ್ ಮೂಲಕ ಎಲ್ಲರ ಗಮನ ಸೆಳೆದ ಈ ಚಿತ್ರತಂಡ ಬಿಡುಗಡೆಗೆ ಎದುರು ನೋಡುತ್ತಿದ್ದು ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಸದ್ಯ ಈ ಚಿತ್ರದ ಬಹು ನಿರೀಕ್ಷಿತ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

    `ಸಿಂಗಾರ ಸಿರಿಯೇ’ ಸಾಂಗ್ ಖ್ಯಾತಿಯ ಪ್ರಮೋದ್ ಮರವಂತೆ ಸಾಹಿತ್ಯ ಕೃಷಿಯಲ್ಲಿ ಅರಳಿರುವ ಚಿತ್ರದ ಮೊದಲ ಹಾಡು ಕಣ್ಣು ಕಣ್ಣು ಕಾದಾಡುತ ಇರಲಿ ವೀಡಿಯೋ ಸಾಂಗ್ ಬಿಡುಗಡೆಯಾಗಿದೆ. ಸಂಗೀತ ನಿರ್ದೇಶಕ ವಾಸುಕಿ ವೈಭವ್ ಸಂಗೀತ ಸಂಯೋಜನೆ ಜೊತೆಗೆ ಈ ಹಾಡಿಗೆ ದನಿಯಾಗಿದ್ದಾರೆ. 80, 90ರ ದಶಕದ ಪ್ರೀತಿ, ಪ್ರೇಮವನ್ನು ನೆನಪಿಸುವ ಹಾಡು ಇದಾಗಿದ್ದು, ಅದರ ಮರುಸೃಷ್ಟಿ ಮಾಡುವ ಕೆಲಸವನ್ನು ಈ ಹಾಡಿನಲ್ಲಿ ಮಾಡಲಾಗಿದೆ. ಅದಕ್ಕೆ ತಕ್ಕಂತೆ ಛಾಯಾಗ್ರಾಹಕ ಅರುಣ್ ಸುರೇಶ್ ಈ ಹಾಡನ್ನು ಸೆರೆ ಹಿಡಿದಿದ್ದು, ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ಮೆಚ್ಚುಗೆ ಜೊತೆಗೆ ಒಂದು ಲಕ್ಷಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದೆ.

     

    View this post on Instagram

     

    A post shared by Sukesh Shetty (@sukeshetty)

    ಸುಕೇಶ್ ಶೆಟ್ಟಿ ಕಥೆ ಚಿತ್ರಕಥೆ ಬರೆದು ದೂರದರ್ಶನ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇದು ಇವರ ಮೊದಲ ಸಿನಿಮಾ. ದೂರದರ್ಶನ 80, 90ರ ದಶಕದಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದ್ದು, ಹಳ್ಳಿಯೊಂದಕ್ಕೆ ಟಿವಿ ಎಂಟ್ರಿ ಕೊಟ್ಟಾಗ ಏನೆಲ್ಲ ಆಗುತ್ತೆ ಅನ್ನೋದು ಈ ಚಿತ್ರದ ಒನ್ ಲೈನ್ ಕಹಾನಿ. ಚಿತ್ರದಲ್ಲಿ ಪೃಥ್ವಿ ಅಂಬರ್ ನಾಯಕಿಯಾಗಿ ಅಯಾನ ನಟಿಸಿದ್ದಾರೆ. ಇದನ್ನೂ ಓದಿ: ವ್ಯಾಯಾಮ ಮಾಡುತ್ತಿದ್ದಾಗ ಜಿಮ್ ನಲ್ಲಿ ಕುಸಿದು ಬಿದ್ದು ನಟ ಸಿದ್ಧಾಂತ್ ನಿಧನ

    ಉಗ್ರಂ ಮಂಜು, ಸುಂದರ್ ವೀಣಾ, ಹರಿಣಿ, ದೀಪಕ್ ರೈ ಪಾಣಾಜೆ, ರಘು ರಮಣಕೊಪ್ಪ, ಹುಲಿ ಕಾರ್ತಿಕ್, ಸೂರಜ್ ಮಂಗಳೂರು, ಸೂರ್ಯ ಕುಂದಾಪುರ ಒಳಗೊಂಡ ತಾರಾಗಣ ಸಿನಿಮಾದಲ್ಲಿದೆ. ಚಿತ್ರೀಕರಣ ಮುಗಿಸಿ, ಡಬ್ಬಿಂಗ್ ಪೂರ್ಣಗೊಳಿಸಿರುವ ಸಿನಿಮಾ ತಂಡ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದ್ದು ಸದ್ಯದಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ ಚಿತ್ರತಂಡ.

    Live Tv
    [brid partner=56869869 player=32851 video=960834 autoplay=true]