Tag: ಪ್ರಮೋದಾ ದೇವಿ ಒಡೆಯರ್

  • ಪ್ರಮೋದಾ ದೇವಿ ಒಡೆಯರ್‌ಗೆ ದಸರಾಗೆ ಅಧಿಕೃತ ಆಹ್ವಾನ ನೀಡಿದ ಹೆಚ್‌.ಸಿ ಮಹದೇವಪ್ಪ

    ಪ್ರಮೋದಾ ದೇವಿ ಒಡೆಯರ್‌ಗೆ ದಸರಾಗೆ ಅಧಿಕೃತ ಆಹ್ವಾನ ನೀಡಿದ ಹೆಚ್‌.ಸಿ ಮಹದೇವಪ್ಪ

    – ಯದುವಂಶದಿಂದ ಕಿರಿಕಿರಿ ಆಗಿಲ್ಲ ಎಂದ ಸಚಿವ

    ಮೈಸೂರು: ವಿಶ್ವವಿಖ್ಯಾತ ಮೈಸೂರು (Mysuru) ದಸರಾದ (Dasara) ಅಧಿಕೃತ ಆಹ್ವಾನವನ್ನು ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌.ಸಿ ಮಹದೇವಪ್ಪ (H C Mahadevappa) ಅವರು ಯದುವಂಶದ ಪ್ರಮೋದಾ ದೇವಿ ಒಡೆಯರ್ ಅವರಿಗೆ ನೀಡಿದ್ದಾರೆ.

    ಸೆ.22 ರಂದು ಪ್ರಾರಂಭವಾಗಲಿರುವ ನಾಡಹಬ್ಬ ದಸರಾಗೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ಗೆ (Pramoda Devi Wadiyar) ಯದುವಂಶದ ಪ್ರಮೋದಾ ದೇವಿ ಒಡೆಯರ್ ಅವರಿಗೆ ಗೌರವ ಧನ ನೀಡಿ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ: ಹಾಸನ ದುರಂತ – ಮೃತ ಎಂಜಿನಿಯರಿಂಗ್‌ ವಿದ್ಯಾರ್ಥಿ ಕುಟುಂಬಕ್ಕೆ ನೆರವಾದ ಹೆಚ್‌ಡಿಡಿ

    ಈ ವೇಳೆ ಮಾತನಾಡಿ ಸಚಿವರು, ದಸರಾಗೆ ಯಾವತ್ತೂ ಯದುವಂಶದಿಂದ ಕಿರಿಕಿರಿ ಆಗಿಲ್ಲ. ಪ್ರತಿ ದಸರಾಗೂ ಯದುವಂಶದ ಸಹಕಾರ ಇರುತ್ತದೆ. ಈ ಬಾರಿಯ ದಸರಾಗೂ ಉತ್ತಮ ಸಹಕಾರ ನೀಡುತ್ತೇವೆ ಎಂದು ಪ್ರಮೋದಾ ದೇವಿ ಒಡೆಯರ್ ಹೇಳಿದ್ದಾರೆ. ಕಳೆದ ಬಾರಿ ಆದ ಒಂದೆರಡು ಗೊಂದಲಗಳ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಪ್ರಮೋದಾ ದೇವಿ ಒಡೆಯರ್ ತಂದಿದ್ದಾರೆ. ಕೆಲ ಸಲಹೆ ಕೂಡ ಕೊಟ್ಟಿದ್ದು ಅವರ ಸಲಹೆ ಸ್ವೀಕರಿಸಿದ್ದೇವೆ ಎಂದಿದ್ದಾರೆ.

    ಬಾನು ಮುಷ್ತಾಕ್‌ ಅವರಿಂದ ದಸರಾವನ್ನು ಉದ್ಘಾಟಿಸುತ್ತಿರುವ ಬಗ್ಗೆ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಯದುವಂಶಕ್ಕೆ ದಸರಾದ ಆಹ್ವಾನ ನೀಡಿದ್ದಾರೆ.

  • ಚಾಮುಂಡೇಶ್ವರಿ ದೇವಸ್ಥಾನ ಹಿಂದೂ ದೇಗುಲವಲ್ಲದೇ ಇದ್ದಿದ್ರೆ ಮುಜರಾಯಿ ವ್ಯಾಪ್ತಿಗೆ ತರುತ್ತಿರಲಿಲ್ಲ – ಪ್ರಮೋದಾ ದೇವಿ ಒಡೆಯರ್‌

    ಚಾಮುಂಡೇಶ್ವರಿ ದೇವಸ್ಥಾನ ಹಿಂದೂ ದೇಗುಲವಲ್ಲದೇ ಇದ್ದಿದ್ರೆ ಮುಜರಾಯಿ ವ್ಯಾಪ್ತಿಗೆ ತರುತ್ತಿರಲಿಲ್ಲ – ಪ್ರಮೋದಾ ದೇವಿ ಒಡೆಯರ್‌

    ಮೈಸೂರು: ದಸರಾ ಉದ್ಘಾಟನೆಗೆ ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ಗೆ ಆಹ್ವಾನ ಕೊಟ್ಟಿರೋದು ರಾಜಕೀಯ ಜಟಾಪಟಿ ಜೊತೆಗೆ ಕಾರಣವಾಗಿದೆ. ಚಾಮುಂಡೇಶ್ವರಿ ಕೇವಲ ಹಿಂದೂಗಳ ಆಸ್ತಿ ಅಲ್ಲ ಎಂದಿದ್ದ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಈಗ ದೇಗುಲ ದಂಗಲ್ ರೂಪ ಪಡೀತಿದೆ. ಈ ಬೆನ್ನಲ್ಲೇ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್‌ ಕೂಡ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು ಸರ್ಕಾರದ ವಿರುದ್ಧ ಬೇಸರ ಹೊರಹಾಕಿದ್ದಾರೆ.

    ಚಾಮುಂಡಿ ಬೆಟ್ಟದ ಮೇಲಿರುವ ಪವಿತ್ರ ಚಾಮುಂಡೇಶ್ವರಿ ದೇವಸ್ಥಾನದ ಸುತ್ತ ರಾಜಕೀಯವು ನಡೆಯುತ್ತಿರುವುದು ತೀವ್ರ ಬೇಸರ ತಂದಿದೆ. ನಾಡ ಹಬ್ಬ ಉದ್ಘಾಟನೆಗೆ ಗಣ್ಯರ ಆಯ್ಕೆಯು ಸಂಘರ್ಷದ ಅಭಿಪ್ರಾಯಗಳಿಗೆ ಕಾರಣವಾಗಿದೆ. ಚಾಮುಂಡೇಶ್ವರಿ ದೇವಸ್ಥಾನ ಹಿಂದೂಗಳಿಗೆ ಸೇರಿಲ್ಲ ಎಂಬ ಹೇಳಿಕೆ ಅಸಂವೇದನಾಶೀಲ. ಅದು ಹಿಂದೂ ದೇವಸ್ಥಾನವಲ್ಲದಿದ್ದರೆ, ಅದನ್ನು ಎಂದಿಗೂ ಮುಜರಾಯಿ ಇಲಾಖೆಯ ಅಡಿಯಲ್ಲಿ ತರುತ್ತಿರಲಿಲ್ಲ ಎಂದಿದ್ದಾರೆ. ಈ ಕುರಿತ ವಿಡಿಯೋ ಇಲ್ಲಿದೆ.

  • 11 ದಿನ ನವರಾತ್ರಿ ಅಭೂತಪೂರ್ವವಲ್ಲ, ಮೊದಲನೇ ಬಾರಿಯೂ ಅಲ್ಲ: ಪ್ರಮೋದಾ ದೇವಿ ಒಡೆಯರ್ ಸ್ಪಷ್ಟನೆ

    11 ದಿನ ನವರಾತ್ರಿ ಅಭೂತಪೂರ್ವವಲ್ಲ, ಮೊದಲನೇ ಬಾರಿಯೂ ಅಲ್ಲ: ಪ್ರಮೋದಾ ದೇವಿ ಒಡೆಯರ್ ಸ್ಪಷ್ಟನೆ

    ಮೈಸೂರು: ಈ ವರ್ಷದ ಹನ್ನೊಂದು ದಿನಗಳ ನವರಾತ್ರಿ (Navratri) ಆಚರಣೆಯು ಅಭೂತಪೂರ್ವವಲ್ಲ, ಬದಲಿಗೆ ಚಂದ್ರಮಾನ ಕ್ಯಾಲೆಂಡರ್ ಆಧಾರಿತ ಸಾಂಪ್ರದಾಯಿಕ ಆಚರಣೆಗಳಿಗೆ ಅನುಗುಣವಾಗಿದೆ ಎಂದು ಪ್ರಮೋದಾ ದೇವಿ ಒಡೆಯರ್ (Pramoda Devi Wadiyar) ಸ್ಪಷ್ಟಪಡಿಸಿದ್ದಾರೆ.

    11 ದಿನಗಳ ನವರಾತ್ರಿಯ ಬಗ್ಗೆ ಮೈಸೂರು ಅರಮನೆ ವತಿಯಿಂದ ಪ್ರಮೋದಾ ದೇವಿ ಒಡೆಯರ್ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಈ ವರ್ಷದ ದಸರಾ (Mysuru Dasara) ಆಚರಣೆಗಳು ಹನ್ನೊಂದು ದಿನಗಳವರೆಗೆ ನಡೆಯುತ್ತಿದ್ದು, 400 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ವರದಿ ವಾಸ್ತವವಾಗಿ ತಪ್ಪಾಗಿದೆ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ದಸರಾ ಹಬ್ಬವನ್ನು ಸಾಮಾನ್ಯವಾಗಿ ಒಂಬತ್ತು ದಿನಗಳವರೆಗೆ ಆಚರಿಸಲಾಗುತ್ತದೆಯಾದರೂ, ಹಿಂದಿನ ಕಾಲದಲ್ಲಿ ಅಷ್ಟರಾತ್ರಿ (ಎಂಟು ರಾತ್ರಿಗಳು) ಒಂಬತ್ತು ದಿನಗಳು, ನವರಾತ್ರಿ (ಒಂಬತ್ತು ರಾತ್ರಿಗಳು) 10 ದಿನಗಳು ಅಥವಾ ದಶರಾತ್ರಿ (10 ರಾತ್ರಿಗಳು) ಮತ್ತು ಹನ್ನೊಂದು ದಿನಗಳವರೆಗೆ ಆಚರಣೆಗಳು ನಡೆದ ಹಲವು ನಿದರ್ಶನಗಳಿವೆ ಎಂದು ತಿಳಿಸಿದರು. ಇದನ್ನೂ ಓದಿ: ಸರ್ಕಾರ ಮುಸ್ಲಿಮರ ಗುಲಾಮ; ಸುಳ್ಳುಗಾರ ಜಮೀರ್ ಮಾತನ್ನು ಸಿಎಂ ಕೇಳಬಾರದು: ಈಶ್ವರಪ್ಪ

    ದಸರಾ ಸೇರಿದಂತೆ ಎಲ್ಲಾ ಹಬ್ಬಗಳಿಗೆ ಮೈಸೂರು ಅರಮನೆಯು ಅನುಸರಿಸುವ ಪಂಚಾಂಗ (ಕ್ಯಾಲೆಂಡರ್) ಚಂದ್ರಮಾನ ಕ್ಯಾಲೆಂಡರ್ ಅನ್ನು ಆಧರಿಸಿದೆ. ಹಬ್ಬದ ಅವಧಿಯಲ್ಲಿನ ವ್ಯತ್ಯಾಸಗಳು ಖಗೋಳೀಯ ಅಂಶಗಳಿಂದ ಉಂಟಾಗುತ್ತವೆ. ನಿರ್ದಿಷ್ಟವಾಗಿ, ಸೂರ್ಯ ಮತ್ತು ಚಂದ್ರನ ಚಲನೆಯು ಚಂದ್ರಮಾನ ದಿನಗಳು/ದಿನಾಂಕಗಳ ಜೋಡಣೆಯನ್ನು ನಿರ್ಧರಿಸುತ್ತದೆ. ವಾಸ್ತವವಾಗಿ, 1920, 1929, 1953, 1962, 1980, 1990, 1998, 2000, 2015 ಮತ್ತು 2016ರಲ್ಲಿ ದಸರಾವನ್ನು ಹನ್ನೊಂದು ದಿನಗಳಿಗಿಂತ ಹೆಚ್ಚು ಕಾಲ ಆಚರಿಸಲಾಯಿತು ಎಂದು ಹೇಳಿದರು. ಇದನ್ನೂ ಓದಿ: 1 ಸಾವಿರ ಕಿ.ಮೀ. ದೂರದಿಂದ ದಾಳಿ – ಕಾರಿನಲ್ಲಿ ಹೋಗುತ್ತಿದ್ದಾಗಲೇ ಇರಾನ್‌ ಟಾಪ್‌ ಸೇನಾ ನಾಯಕ ಹತ್ಯೆ

  • ಡಿಸಿಗೆ ಪ್ರಮೋದಾದೇವಿ ಪತ್ರ – ಜಾಗ ನೀಡಿದ್ರೆ 4500 ಜನರ ಇಡೀ ಗ್ರಾಮವೇ ಖಾಲಿ!

    ಡಿಸಿಗೆ ಪ್ರಮೋದಾದೇವಿ ಪತ್ರ – ಜಾಗ ನೀಡಿದ್ರೆ 4500 ಜನರ ಇಡೀ ಗ್ರಾಮವೇ ಖಾಲಿ!

    ಚಾಮರಾಜನಗರ: ಮೈಸೂರು ಮಹಾರಾಜರಿಗೆ ಸೇರಿರುವ ಆಸ್ತಿಯನ್ನು ಖಾತೆ ಮಾಡಿಕೊಡುವಂತೆ ಮೈಸೂರಿನ ರಾಣಿ ಪ್ರಮೋದಾದೇವಿ ಒಡೆಯರ್ (Pramod Devi Wadiyar) ಚಾಮರಾಜನಗರ ಜಿಲ್ಲಾಧಿಕಾರಿ (Chamarajanagara DC) ಪತ್ರ ಬರೆದಿದ್ದರಿಂದ ಚಾಮರಾಜನಗರ ತಾಲೂಕಿನ ಸಿದ್ದಯ್ಯನಪುರ ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ.

    ಸಿದ್ದಯ್ಯನಪುರದ ಮೂಲ ಹೆಸರೇ ಜಯಚಾಮರಾಜೇಂದ್ರ ಪುರಂ. ಈಗ ಊರಿಗೆ ಊರೇ ಖಾಲಿ ಮಾಡಬೇಕಾದ ಆತಂಕ ಎದುರಾಗಿದೆ. 4,000 ಕ್ಕೂ ಹೆಚ್ಚು ಜನರು ಸಿದ್ದಯ್ಯನಪುರ ಗ್ರಾಮದಲ್ಲಿ ವಾಸ ಮಾಡುತ್ತಿದ್ದಾರೆ. ಇಂದಿಗೂ ಮಹಾರಾಜರ ಫೋಟೋವನ್ನು ಮನೆಯ ದೇವರ ಕೋಣೆಯಲ್ಲಿ ಗ್ರಾಮಸ್ಥರು ಇಟ್ಟುಕೊಂಡಿದ್ದಾರೆ. ಪ್ರತಿ ವರ್ಷ ಮಹಾರಾಜರ ಭಾವಚಿತ್ರ ಮೆರವಣಿಗೆ ಮಾಡಿ ಅವರ ಜನ್ಮ ದಿನ ಆಚರಿಸಿಕೊಂಡು ಬರುತ್ತಿದ್ದಾರೆ. ಇದನ್ನೂ ಓದಿ: ಮೈಸೂರು ಮಹಾರಾಜರಿಗೆ ಸೇರಿರುವ 4,500 ಎಕ್ರೆ ಭೂಮಿ ವರ್ಗಕ್ಕೆ ಪ್ರಮೋದಾದೇವಿ ಪತ್ರ

    ಜಯಚಾಮರಾಜೇಂದ್ರ ಒಡೆಯರ್ ನಮಗೆ 1,035 ಎಕರೆ ಭೂಮಿ ದಾನ ನೀಡಿದ್ದಾರೆ. 1982 ರಲ್ಲಿ ಸಚಿವರಾಗಿದ್ದ ಬಿ ರಾಚಯ್ಯ ಕಾಲದಲ್ಲಿ ಸರ್ಕಾರ ಸಾಗುವಳಿ ಚೀಟಿ ನೀಡಿದೆ. ಈಗಲೂ ಮಹಾರಾಜರ ಹೆಸರೇಳಿಕೊಂಡು ಬದುಕುತ್ತಿದ್ದೇವೆ. ರಾಣಿ ಪ್ರಮೋದಾದೇವಿಗೆ ಖಾತೆ ಮಾಡಿಕೊಟ್ಟಲ್ಲಿ ಇಡೀ ಗ್ರಾಮದವರು ಮೈಸೂರು ಅರಮನೆಗೆ ಹೋಗುತ್ತೇವೆ. ಅವರೇ ನಮಗೆ ಹಿಟ್ಟು ಬಟ್ಟೆ ಕೊಟ್ಟು ಸಾಕಲಿ ಅಂತಿದ್ದಾರೆ.

    ಪ್ರಮೋದಾದೇವಿ ಅವರಿಗೆ ಖಾತೆ ಮಾಡಿ ಕೊಟ್ಟರೆ ಇಡೀ ಊರಿಗೆ ಊರೆ ಖಾಲಿ ಮಾಡಬೇಕಾಗುತ್ತದೆ. ಮಕ್ಕಳು ಮರಿ ಕಟ್ಟಿಕೊಂಡು ಎಲ್ಲಿಗೆ ಹೋಗಬೇಕು? ನಾವು ಇದ್ರು ಇಲ್ಲೇ ಸತ್ರು ಇಲ್ಲೇ ಸಾಯ್ತೀವಿ ಎಂದು ಸಿದ್ದಯ್ಯನಪುರ ಗ್ರಾಮಸ್ಥರ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: 1 ಲಕ್ಷ ಪಾವತಿಸಿ ಶೂಟಿಂಗ್‌ | ಗೋಪಾಲಸ್ವಾಮಿ ಬೆಟ್ಟದ ಜಾಗ ಯಾರಿಗೆ ಸೇರಿದ್ದು? ಈಗ ಮತ್ತೊಂದು ವಿವಾದ

    ಚಾಮರಾಜನಗರ ತಾಲ್ಲೂಕಿನ ವಿವಿಧೆಡೆ 4,500 ಎಕರೆಗು ಹೆಚ್ಚು ಭೂಮಿ ಮೈಸೂರು (Mysuru) ಮಹಾರಾಜರ ಖಾಸಗಿ ಸ್ವತ್ತು ಎಂದು ಪತ್ರ ಮೈಸೂರಿನ ರಾಣಿ ಬರೆದಿದ್ದರು.ಇದೇ ವ್ಯಾಪ್ತಿಯಲ್ಲಿ ಸಿದ್ದಯ್ಯನಪುರ ಗ್ರಾಮ ಬರುತ್ತದೆ. ಮೈಸೂರು ಮಹಾರಾಜರು ಹಾಗೂ ಭಾರತ ಸರ್ಕಾರದ ನಡುವೆ ಆಗಿರುವ ಒಪ್ಪಂದದ ಪ್ರಕಾರ 4,500 ಎಕರೆಗೂ ಹೆಚ್ಚು ಭೂಮಿ ಮೈಸೂರು ಮಹಾರಾಜರ ಖಾಸಗಿ ಸ್ವತ್ತು ಎಂದು ಪತ್ರದಲ್ಲಿ ಪ್ರಮೋದಾದೇವಿ ಉಲ್ಲೇಖಿಸಿದ್ದಾರೆ.

  • Mysuru | ಶುರುವಾಯ್ತು ಹೊಸ ವಿವಾದ – ರಾಜ್ಯ ಸರ್ಕಾರ & ರಾಜಮನೆತನದ ನಡುವೆ ಜಟಾಪಟಿ

    Mysuru | ಶುರುವಾಯ್ತು ಹೊಸ ವಿವಾದ – ರಾಜ್ಯ ಸರ್ಕಾರ & ರಾಜಮನೆತನದ ನಡುವೆ ಜಟಾಪಟಿ

    ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ – MUDA) ವಿಚಾರದಲ್ಲಿ ಮೈಸೂರು ಸುದ್ದಿ ಆಗುತ್ತಿರುವ ಹೊತ್ತಿನಲ್ಲಿ ಮತ್ತೆ ಹೊಸ ವಿವಾದ ಆರಂಭವಾಗಿದೆ. ಆ ವಿವಾದದ ಕೇಂದ್ರ ಬಿಂದು ಚಾಮುಂಡಿ ಬೆಟ್ಟ.

    ಮೈಸೂರಿನ ಚಾಮುಂಡಿ ಬೆಟ್ಟದ (Mysuru Chamundi Hills) ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿತ್ತು. ಆದರೆ, ಈ ವಿಚಾರದಲ್ಲಿ ಮೈಸೂರಿನ ರಾಜಮನೆತನ ನ್ಯಾಯಾಲಯದ ಮೆಟ್ಟಿಲು ಏರಿ ಪ್ರಾಧಿಕಾರದ ರಚನೆಗೆ ತಡೆಯಾಜ್ಞೆ ತಂದಿದೆ. ಈ ಮೂಲಕ ಸರ್ಕಾರ ಮತ್ತು ಮೈಸೂರು ರಾಜಮನೆತನದ ನಡುವೆ ಜಟಾಜಟಿ ಶುರುವಾಗಿದೆ. ಈ ಹಿಂದೆಯೂ ಅರಮನೆ ಆಸ್ತಿ ವಿಚಾರದಲ್ಲೂ ಇದೇ ರೀತಿಯ ಜಟಾಪಟಿ ಸರ್ಕಾರ ಮತ್ತು ರಾಜಮನೆತನದ ನಡುವೆ ನಡೆದಿತ್ತು. ಆಗ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದರು. ಈಗ ಮತ್ತೆ 2ನೇ ಸುತ್ತಿನ ಜಟಾಪಟಿ ಆರಂಭವಾಗಿದೆ.

    ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ ಪ್ರಮೋದಾ ದೇವಿ ಒಡೆಯರ್ (Pramoda Devi Wadiyar), ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಆಸ್ತಿ. ಅದು ಸಂಸ್ಥಾನದ ಖಾಸಗಿ ಆಸ್ತಿಗಳ ಪಟ್ಟಿಯಲ್ಲಿ ಇದೆ. ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ನಮ್ಮ ವಿರೋಧ ಇದೆ. ಸಂಸ್ಥಾನದ ಖಾಸಗಿ ಆಸ್ತಿಗಳ ಪಟ್ಟಿಯಲ್ಲಿ ಬೆಟ್ಟದ ಅರಮನೆ, ನಂದಿ, ಚಾಮುಂಡೇಶ್ವರಿ ಹಾಗೂ ಮಹಾಬಲೇಶ್ವರ ದೇವಸ್ಥಾನ, ದೇವಿಕೆರೆ ಸುತ್ತಮುತ್ತಲ ಪ್ರದೇಶ ಸೇರಿದೆ. ಪ್ರಕರಣ ಕೋರ್ಟ್‌ನಲ್ಲಿ ಇರುವಾಗ ಪ್ರಾಧಿಕಾರ ರಚನೆ ಮಾಡುವುದು ಸರಿಯಲ್ಲ. ಹೀಗಾಗಿ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

    ಇದಕ್ಕೆ ಸಿಎಂ ಮತ್ತು ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಯಾವ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರ್ತಾರೋ ಅಂಥಹ ದೇವಸ್ಥಾನಗಳಲ್ಲಿ ಪ್ರಾಧಿಕಾರ ಮಾಡಿದ್ದೇವೆ. ಪ್ರತಿವರ್ಷ ಚಾಮುಂಡಿ ದೇವಾಲಯಕ್ಕೆ ಕನಿಷ್ಟ 50 ಲಕ್ಷ ಜನ ಬರ್ತಾರೆ. ಮೂಲ ಸೌಕರ್ಯಗಳನ್ನು ಒದಗಿಸಲು, ಅಭಿವೃದ್ಧಿಯ ದೃಷ್ಟಿಯಿಂದ ಪ್ರಾಧಿಕಾರ ಮಾಡಿದ್ದೇವೆ. ಕೋರ್ಟ್‌ನಲ್ಲಿ ಕೇಸಿದೆ. ಏನು ತೀರ್ಮಾನ ಆಗುತ್ತೋ ಅದರ ಪ್ರಕಾರ ನಡೆದುಕೊಳ್ಳತ್ತೇವೆ ಎಂದಿದ್ದಾರೆ.

    ಇನ್ನೂ ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿ ನಾವು ಕಾನೂನು ಮಾಡಿದ್ದೇವೆ. ಪ್ರಮೋದಾ ದೇವಿಯವರು ಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ಏನ್ ಮಾಡಬೇಕು ಅಂತ ಮುಂದಿನ ತೀರ್ಮಾನ ಮಾಡ್ತೀವಿ ಎಂದಿದ್ದಾರೆ. ಒಟ್ಟಾರೆ ಈಗ ಮೈಸೂರಿನಲ್ಲಿ ಹೊಸ ವಿವಾದದ ಚರ್ಚೆ ಜೋರಾಗಿದೆ. ಈ ವಿವಾದಕ್ಕೆ ನ್ಯಾಯಾಲಯದ ಆದೇಶದಿಂದ ಮಾತ್ರವೇ ತೆರೆ ಎಳೆಯಬಹುದಾಗಿದೆ.

  • ದಾಖಲೆ ಮರೆತು ಬಂದ ಪ್ರಮೋದಾ ದೇವಿ ಒಡೆಯರ್ – ಅರಮನೆಗೆ ತೆರಳಿದ ಬಳಿಕ ವೋಟ್ ಮಾಡಿದ ರಾಜವಂಶಸ್ಥೆ

    ದಾಖಲೆ ಮರೆತು ಬಂದ ಪ್ರಮೋದಾ ದೇವಿ ಒಡೆಯರ್ – ಅರಮನೆಗೆ ತೆರಳಿದ ಬಳಿಕ ವೋಟ್ ಮಾಡಿದ ರಾಜವಂಶಸ್ಥೆ

    ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election) ಹಿನ್ನೆಲೆ ಮೈಸೂರಿನ (Mysuru) ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ (Pramoda Devi Wadiyar) ಮತದಾನ ಮಾಡಲೆಂದು ಮತಗಟ್ಟೆಗೆ ಬಂದಿದ್ದರೂ ವಾಪಸ್ ತೆರಳಿರುವ ಪ್ರಸಂಗ ನಡೆದಿದೆ.

    ಮತದಾನ ಮಾಡಲೆಂದು ರಾಜವಂಶಸ್ಥೆ ಮತಗಟ್ಟೆಗೆ ಬಂದಿದ್ದರು. ಆದರೆ ಅವರು ಒರಿಜಿನಲ್ ದಾಖಲೆಗಳನ್ನು ಮರೆತು ಬಂದಿದ್ದರು. ಬಳಿಕ ಅವರು ಚುನಾವಣಾ ಸಿಬ್ಬಂದಿಗೆ ತಮ್ಮ ಮೊಬೈಲಿನಲ್ಲಿ ಸಾಫ್ಟ್ ಕಾಪಿ ತೋರಿಸಿದ್ದಾರೆ. ಆದರೆ ಒರಿಜಿನಲ್ ದಾಖಲಾತಿ ತರುವಂತೆ ಚುನಾವಣಾ ಸಿಬ್ಬಂದಿ ಪ್ರಮೋದಾ ದೇವಿ ಬಳಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕ್ಯೂನಲ್ಲಿ ನಿಂತು ಮತ ಚಲಾಯಿಸಿದ ಸುಧಾಮೂರ್ತಿ ದಂಪತಿ

    ಪ್ರಮೋದಾ ದೇವಿ ದಾಖಲೆಗಳನ್ನು ತಂದು ಬಳಿಕ ವೋಟ್ ಮಾಡುವುದಾಗಿ ತಿಳಿಸಿ ಅರಮನೆಗೆ ಹಿಂತಿರುಗಿದ್ದಾರೆ. ಬಳಿಕ ದಾಖಲೆ ಸಮೇತ ಮತಗಟ್ಟೆಗೆ ಬಂದ ಅವರು ಕೆಆರ್ ಕ್ಷೇತ್ರದ ಬೂತ್ ಸಂಖ್ಯೆ 179ರಲ್ಲಿ ಮತದಾನ ಮಾಡಿದರು. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates