Tag: ಪ್ರಮಾಣಪತ್ರ

  • ವಾಟ್ಸಪ್‍ನಲ್ಲೇ ಕೊರೊನಾ ಲಸಿಕೆಯ ಪ್ರಮಾಣಪತ್ರ ಪಡೆಯಿರಿ

    ವಾಟ್ಸಪ್‍ನಲ್ಲೇ ಕೊರೊನಾ ಲಸಿಕೆಯ ಪ್ರಮಾಣಪತ್ರ ಪಡೆಯಿರಿ

    ನವದೆಹಲಿ: ಇನ್ನು ಮುಂದೆ ಕೊರೊನಾ ಲಸಿಕೆಯ ಪ್ರಮಾಣಪತ್ರವನ್ನು ಸುಲಭವಾಗಿ ನಿಮ್ಮ ಮೊಬೈಲಿನಲ್ಲೇ ಪಡೆಯಬಹುದು.

    ಹೌದು. ಇಲ್ಲಿಯವರೆಗೆ ಕೋವಿನ್ ಪೋರ್ಟಲ್ ಗೆ ಹೋಗಿ ಮೊಬೈಲ್ ನಂಬರ್, ಒಟಿಪಿ ಹಾಕಿ ಪ್ರಮಾಣಪತ್ರವನ್ನು ಡೌನ್‍ಲೋಡ್ ಮಾಡಬೇಕಿತ್ತು. ಆದರೆ ಈಗ ವಾಟ್ಸಪ್‍ನಲ್ಲೇ ಪ್ರಮಾಣಪತ್ರವನ್ನು ಪಡೆಯಬಹುದು.

    ಏನು ಮಾಡಬೇಕು?
    +91 90131 51515 ನಂಬರ್ ಅನ್ನು ಮೊದಲು ಸೇವ್ ಮಾಡಿ. ಬಳಿಕ ‘covid certificate” ಎಂದು ಈ ನಂಬರಿಗೆ ವಾಟ್ಸಪ್ ಮಾಡಿ. ಇದಾದ ಬಳಿಕ ನಿಮ್ಮ ಮೊಬೈಲಿಗೆ ಒಂದು ಒಟಿಪಿ ಬರುತ್ತದೆ. ಈ ಒಟಿಪಿಯನ್ನು ನಮೂದಿಸಿದರೆ ಪ್ರಮಾಣಪತ್ರ ಕೂಡಲೇ ವಾಟ್ಸಪ್‍ಗೆ ಬಂದಿರುತ್ತದೆ. ಇದನ್ನೂ ಓದಿ : ಮಂಜು ಬಗ್ಗೆ ಹೇಳುತ್ತಾ ಭಾವುಕರಾದ ಚಕ್ರವರ್ತಿ ಚಂದ್ರಚೂಡ್

    ಕೇಂದ್ರ ಸರ್ಕಾರ ಕೊರೊನಾ ಸಂಬಂಧ ಮೈಗವರ್ನ್‍ಮೆಂಟ್ ಕೊರೊನಾ ಹೆಲ್ಪ್ ಡೆಸ್ಕ್ ತೆರೆದಿದೆ. ಇದರ ಮೂಲಕ ಲಸಿಕೆಯ ಪ್ರಮಾಣಪತ್ರ ವಾಟ್ಸಪ್‍ಗೆ ಬರುತ್ತದೆ.

    ಲಸಿಕೆ ನೀಡುವ ಸಮಯದಲ್ಲಿ ಯಾವ ನಂಬರ್ ನೀಡಿದ್ದಿರೋ ಆ ನಂಬರಿನ ವಾಟ್ಸಪ್ ಸಂಖ್ಯೆಗೆ ಮಾತ್ರ ಪ್ರಮಾಣಪತ್ರ ಬರುತ್ತದೆ. ಸೇವೆ ಆರಂಭಗೊಂಡ ಹಿನ್ನೆಲೆಯಲ್ಲಿ ತಡವಾಗಿ ಪ್ರಮಾಣಪತ್ರ ಬರುತ್ತಿದೆ ಎಂದು ಜನ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  • ತಹಶೀಲ್ದಾರ್ ಸೇರಿ ನಾಲ್ಕು ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಕೇಸ್

    ತಹಶೀಲ್ದಾರ್ ಸೇರಿ ನಾಲ್ಕು ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ ಕೇಸ್

    ಗದಗ: ಜಾತಿ ಪ್ರಮಾಣಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖೆಯ ನಾಲ್ಕು ಜನ ಅಧಿಕಾರಿಗಳ ವಿರುದ್ಧ ಅಟ್ರಾಸಿಟಿ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ವಿರುದ್ಧದ ದೌರ್ಜನ್ಯ ತಡೆ) ಕಾಯ್ದೆಯ ಅಡಿ ಕೇಸ್ ದಾಖಲಾಗಿರುವ ಘಟನೆ ಲಕ್ಷ್ಮೇಶ್ವರದಲ್ಲಿ ನಡೆದಿದೆ.

    ತಹಶೀಲ್ದಾರ್ ಬ್ರಮರಾಂಭ ಗುಬ್ಬಿಶೆಟ್ಟಿ, ಕಂದಾಯ ಅಧಿಕಾರಿ ಎಸ್.ಎಸ್ ಪಾಟೀಲ್, ಗ್ರಾಮ ಲೆಕ್ಕಾಧಿಕಾರಿಗಳಾದ ಪ್ರವೀಣ್ ಭರಣಿ ಮತ್ತು ಹವಳದ ಎಂಬವರ ವಿರುದ್ಧ ಕೇಸ್ ದಾಖಲಾಗಿದೆ. ತಾಲೂಕಿನ ಬಾಲೆಹೊಸೂರ ಗ್ರಾಮದ ಗಂಟಿಚೋರ್ ಸಮುದಾಯದ ನಾಲ್ವರು ಈ ಜಾತಿ ನಿಂದನೆ ಕೇಸ್ ದಾಖಲಿಸಿದ್ದಾರೆ.

    ಗಂಟಿಚೋರ್ ಸಮುದಾಯವರಿಗೆ ಎಸ್‍ಸಿ ಜಾತಿ ಪ್ರಮಾಣಪತ್ರ ನೀಡುವಂತೆ ಕೇಳಿದ್ದಾರೆ. ಆದರೆ ಗಂಟಿಚೊರ್ ಸಮುದಾಯ ಪರಿಶಿಷ್ಟ ಜಾತಿಗೆ ಒಳಪಡಲ್ಲ, ಪ್ರವರ್ಗ-1 ರ ವ್ಯಾಪ್ತಿಗೆ ಬರುತ್ತದೆ ಎಂಬ ವಾದ-ಪ್ರತಿವಾದಗಳು ಅನೇಕ ವರ್ಷಗಳಿಂದ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಬಾಲೆಹೊಸೂರು ಗ್ರಾಮದ ಅನಂತಕುಮಾರ್ ಕಟ್ಟಿಮನಿ ಸೇರಿದಂತೆ ಅಧಿಕಾರಿಗಳ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿದೆ. ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ ಎಂದು ತಹಶೀಲ್ದಾರರು ಸಹ ಕೌಂಟರ್ ಕೇಸ್ ಮಾಡಿದ್ದಾರೆ.

    ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯಿಂದ ಪ್ರಕರಣ ದಾಖಲಾಗಿದೆ. ಕರ್ತವ್ಯ ಸ್ಥಗಿತಗೊಳಿಸಿ ಡಿಸಿ ಕಚೇರಿ ಎದುರು ಕಂದಾಯ ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಪ್ರತಿಭಟನೆ ಮಾಡಿ ನಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಎರಡು ಪ್ರಕರಣ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡಿಸಿ ಎಂ.ಜಿ ಹಿರೇಮಠ ಭರವಸೆ ನೀಡಿದ್ದಾರೆ.