ಕಿರುತೆರೆಯ ಜನಪ್ರಿಯ Weekend With Ramesh-5 ಶೋಗೆ ರಮ್ಯಾ (Ramya) ಮೊದಲ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದರು. ತನ್ನ ಬದುಕಿನ ಹಲವು ವಿಚಾರಗಳನ್ನ ನಟಿ ಬಿಚ್ಚಿಟ್ಟಿದ್ದರು. ಇದೀಗ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ (Prabhudeva) ಅವರು ಈ ಸಾಧಕರ ಸೀಟ್ ಅನ್ನ ಅಲಂಕರಿಸಿದ್ದಾರೆ.
ಮೊದಲ ಅತಿಥಿಯಾಗಿ ರಮ್ಯಾ ಕಾಲಿಟ್ಟ ಬೆನ್ನಲ್ಲೇ ಪ್ರಭುದೇವ ಅವರು 2ನೇ ಅತಿಥಿಯಾಗಿ ತಮ್ಮ ಬದುಕಿನ ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಪ್ರಭುದೇವ ಅವರು ಬೆಳೆದು ಬಂದ ದಾರಿ, ಬೆಳೆದ ರೀತಿಯ ಬಗ್ಗೆ Weekend With Ramesh ಶೋನಲ್ಲಿ ನೋಡಬಹುದಾಗಿದೆ. ಈ ವಾರ ಏಪ್ರಿಲ್ 1 & 2ರಂದು ರಾತ್ರಿ 9ಕ್ಕೆ ಪ್ರಭುದೇವ ಅವರ ಸಂಚಿಕೆ ಪ್ರಸಾರವಾಗಲಿದೆ.
ಈ ಕುರಿತ ಪ್ರೋಮೋ ಸದ್ದು ಮಾಡ್ತಿದೆ. ಪ್ರಭುದೇವ ತಂದೆ ಮೂಗೂರು ಸುಂದರ್ (Muguru Sundar) ಎಂಟ್ರಿ ಪ್ರಮುಖ ಘಟ್ಟವಾಗಿದೆ. ಈ ಪ್ರೋಮೊದಲ್ಲಿ ಮೂಗೂರು ಸುಂದರ್ ಅವರ ಮಗನ ಹುಟ್ಟಿನ ರಹಸ್ಯವನ್ನು ರಿವೀಲ್ ಮಾಡಿದ್ದಾರೆ. ಬ್ಯಾಕ್‌ಗ್ರೌಂಡ್‌ನಲ್ಲಿ ಪ್ರಭುದೇವ ಅವರ ತಂದೆ, ಮಗ “ಅಮಾವಾಸ್ಯೆಯಲ್ಲಿ ಹುಟ್ಟಿದ್ದಾನೆ ಅಂದ್ರು” ಅಂತ ಹೇಳಿದ್ದಾರೆ.
ಪ್ರಭುದೇವ ಯಾವುದೇ ಕಾರ್ಯಕ್ರಮಕ್ಕೆ ಹೋದರೂ, ಡ್ಯಾನ್ಸ್ ಇಲ್ಲದೆ ಹೊರ ಬರುವ ಹಾಗಿಲ್ಲ. ವೀಕ್ಷಕರ ಡಿಮ್ಯಾಂಡ್ ಕೂಡ ಇದೇನೆ. `ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲೂ ಪ್ರಭುದೇವ ಭರ್ಜರಿಯಾಗಿ ಸ್ಟೆಪ್ಸ್ ನೋಡುವುದಕ್ಕೆ ಸಿಗುತ್ತಿದೆ. ಅಲ್ಲದೆ, ತಂದೆ ಮೂಗೂರು ಸುಂದರ್ ಜೊತೆ ಹುಟ್ಟಿದರೆ `ಕನ್ನಡ ನಾಡಿನಲ್ಲಿ ಹುಟ್ಟಬೇಕು’ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದು ಕಾರ್ಯಕ್ರಮದಲ್ಲಿ ನೆನಪಿನಲ್ಲಿ ಉಳಿಯುವ ಘಳಿಗೆ ಆಗಬಹುದು. ಇದರೊಂದಿಗೆ ನಿರೂಪಕ ರಮೇಶ್ ಅರವಿಂದ್ ಜೊತೆ ಪ್ರಭುದೇವ ಮೂನ್ ವಾಕ್ ಮಾಡಿದ್ದಾರೆ. ಇದು ಕೂಡ ಪ್ರೋಮೊದ ಹೈಲೈಟ್ ಆಗಿದೆ. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ಕೂಡ ಭಾಗಿಯಾಗಿದ್ದಾರೆ.











ʻWOLFʼ ಸಿನಿಮಾದಲ್ಲಿ ನಟ ವಿಜಯ್ ಸೇತುಪತಿ ಒಂದು ಹಾಡನ್ನ ಹಾಡಿದ್ದಾರೆ. ಇದು ವಿಶೇಷವಾಗಿ ಹಾಡಿರುವ ಹಾಡು ಆಗಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಮತ್ತಷ್ಟು ಸಿಗಲಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಮಾರ್ಚ್ನಲ್ಲಿ ರಿಲೀಸ್ ಮಾಡೋಕೆ ರೆಡಿಯಾಗಿದೆ.
















ಇತ್ತೀಚೆಗಷ್ಟೇ ಶಿವಣ್ಣ ಮತ್ತು ಪ್ರಭುದೇವ ಕಾಂಬಿನೇಷನ್‌ನಲ್ಲಿ ನಿರ್ದೇಶನ ಮಾಡುವುದಾಗಿ ಭಟ್ರು ಅಧಿಕೃತವಾಗಿ ಹೇಳಿದ್ದರು. ಇದೀಗ ಈ ಸಿನಿಮಾಗಾಗಿ ತೆರೆಮರೆಯಲ್ಲಿ ಭರ್ಜರಿಯಾಗಿ ತಯಾರಿ ನಡೆಯುತ್ತಿದೆ. ಶಿವರಾಜ್‌ಕುಮಾರ್ ಮತ್ತು ಪ್ರಭುದೇವ ಚಿತ್ರಕ್ಕೆ ಚಂದನವನದ ಪ್ರತಿಭಾವಂತ ನಾಯಕಿಯರನ್ನೇ ಭಟ್ರು ಹುಡುಕಿದ್ದಾರೆ.
`ಕುಲದಲ್ಲಿ ಕೀಳ್ಯಾವುದೋ’ ತಾತ್ಕಲಿಕ ಟೈಟಲ್‌ನ ಈ ಚಿತ್ರದಲ್ಲಿ ನಾಯಕಿಯರಾಗಿ ರಾಜಕುಮಾರ ಮತ್ತು ಜೇಮ್ಸ್ ಚಿತ್ರದ ನಾಯಕಿ ಪ್ರಿಯಾ ಆನಂದ್ ಶಿವಣ್ಣಗೆ ಜೋಡಿಯಾಗಿ ಕಾಣಿಸಿಕೊಂಡ್ರೆ, ಇತ್ತ ಪ್ರಭುದೇವಗೆ ನಾಯಕಿಯಾಗಿ ಸಖತ್ ಬ್ಯೂಟಿ ನಿಶ್ವಿಕಾ ನಾಯ್ಡು ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:
ಬಿಗ್ ಸ್ಟಾರ್‌ಗಳಿರುವ ಈ ಪ್ರಾಜೆಕ್ಟ್ ಮೇಲೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳಿಗೆ ನಿರೀಕ್ಷೆಯಿದೆ. ಇದೇ ಆಗಸ್ಟ್ 20ಕ್ಕೆ ಸಿನಿಮಾ ಕೂಡ ಸೆಟ್ಟೇರಲಿದೆ. ಮುಂದಿನ ದಿನಗಳಲ್ಲಿ ಈ ಚಿತ್ರ ಹೇಗೆ ಕಮಾಲ್ ಮಾಡಬಹುದು ಅಂತಾ ಕಾದುನೋಡಬೇಕಿದೆ.
