Tag: ಪ್ರಭುದೇವ

  • ‘ಡಿಕೆಡಿ’ಯಲ್ಲಿ ಪ್ರಭುದೇವ- ಅನುಶ್ರೀ ಜೊತೆ ಹೆಜ್ಜೆ ಹಾಕಿದ ಡ್ಯಾನ್ಸ್‌ಕಿಂಗ್

    ‘ಡಿಕೆಡಿ’ಯಲ್ಲಿ ಪ್ರಭುದೇವ- ಅನುಶ್ರೀ ಜೊತೆ ಹೆಜ್ಜೆ ಹಾಕಿದ ಡ್ಯಾನ್ಸ್‌ಕಿಂಗ್

    ಪ್ರಭುದೇವ…ಕನ್ನಡದವರೇ ಆಗಿದ್ದರೂ ಕನ್ನಡಿಗರಿಗೆ ಬಲು ಅಪರೂಪ. ವಿಶ್ವಾದ್ಯಂತ ಹೆಸರು ಮಾಡಿರೋ ಡ್ಯಾನ್ಸ್‌ ಕಿಂಗ್ ಪ್ರಭುದೇವ (Prabhudeva) ಕೆಲ ತಿಂಗಳ ಹಿಂದೆ ವೀಕೇಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮದಲ್ಲಿ ಜೀವನತೆರೆದಿಟ್ಟಿದ್ರು. ಇದೀಗ ಅದೇ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲೂ ಕಾಣಿಸ್ಕೊಂಡು ಮಕ್ಕಳ ಜೊತೆ ಡ್ಯಾನ್ಸ್ ಮಾಡಿದ್ದಾರೆ.

    ಭಾರತದ ಮೈಕಲ್ ಜಾಕ್ಸನ್…ಆಲ್‌ರೌಂಡರ್ ಪ್ರಭುದೇವ ಭಾರತೀಯ ಸಿನಿಮೋದ್ಯಮದ ಅದ್ಭುತ ಕಲಾವಿದ. ವಿಶ್ವವ್ಯಾಪಿ ಅಭಿಮಾನಿಗಳನ್ನ ಹೊಂದಿರೋ ಪ್ರಭುದೇವ ಇದೀಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ ಅತಿಥಿಯಾಗಿ ಆಗಮಿಸಿದ್ರು.

    ಡಾನ್ಸ್ ಕಿಂಗ್ ಆಗಮನದಿಂದ ಡಿಕೆಡಿ ವೇದಿಕೆಯಲ್ಲಿ ಅದ್ದೂರಿ ಕಳೆ ಬಂದಿತ್ತು…ಸ್ಪರ್ಧಿಗಳೆಲ್ಲಾ ಅವರ ಆರಾಧ್ಯದೈವ ಪ್ರಭುದೇವ ಮುಂದೆ ಡಾನ್ಸ್ ಪ್ರದರ್ಶನ ಮಾಡಿ ಖುಷಿಯಿಂದ ಕುಣಿದ್ರು. ಓರ್ವ ಸ್ಪರ್ಧಿಯಂತೂ ಪ್ರಭುದೇವ ಆಶೀರ್ವಾದ ಸದಾ ತನ್ನೊಂದಿಗೆ ಇರಲೆಂದು ಕಾಲಿನ ಅಚ್ಚನ್ನೇ ಪಡೆದ. ಮಕ್ಕಳ ನೃತ್ಯವೆಂದ್ರೆ ಯಾರಿಗ್ ತಾನೇ ಇಷ್ಟವಿಲ್ಲ…ಹಾಗೇನೇ ಪ್ರಭುದೇವಾಗೂ ಇಷ್ಟ…ತಮ್ಮೆದುರು ಕುಣಿದ ಮಕ್ಕಳ ನೃತ್ಯಕ್ಕೆ ಮನಸೋತು ತಾವೂ ವೇದಿಕೆಗೆ ಹೋಗಿ ಕುಣಿದ್ರು. ಹೊಸ ಹೊಸ ಸ್ಟೆಪ್‌ಗಳ ಸೃಷ್ಟಿಕರ್ತ ಪ್ರಭುದೇವ. ಎಷ್ಟೋ ಹಾಡುಗಳು ಇಂದಿಗೂ ಎವರ್‌ಗ್ರೀನ್, ಅದರಲ್ಲೊಂದು ಚಂದಾರೇ ಹಾಡು…ಇದೇ ಹಾಡಿಗೆ ಪ್ರಭು , ಆ್ಯಂಕರ್ ಅನುಶ್ರೀ (Anushee) ಜೊತೆ ಹೆಜ್ಜೆ ಹಾಕಿದ್ರು. ಇದನ್ನೂ ಓದಿ:ಪವನ್ ಒಡೆಯರ್ ನಿರ್ದೇಶನದ ಬಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್

    ಶಿವಣ್ಣ (Shivanna) ಹಾಗೂ ಪ್ರಭುದೇವ ಬೆಸ್ಟ್ ಫ್ರೆಂಡ್ಸ್. ಡಿಕೆಡಿ ಜಡ್ಜ್ ಆಗಿರೋ ಶಿವರಾಜ್‌ಕುಮಾರ್ (Shivarajkumar) ಜೊತೆಯೂ ಪ್ರಭುದೇವ ಸ್ಟೆಪ್ ಹಾಕಿದ್ರು. ಡ್ಯಾನ್ಸ್‌ ಕಿಂಗ್ ಸಿಗ್ನೇಚರ್ ಸ್ಟೆಪ್‌ನ್ನ ಇಡೀ ವೇದಿಕೆ ಮಾಡಿ ಖುಷಿ ಪಡ್ತು. ಭಾರತದಲ್ಲಿ ಡ್ಯಾನ್ಸ್ ಕಿಂಗ್‌ಗಳ ಕಿಂಗ್ ಅಂದ್ರೆ ಪ್ರಭುದೇವ, ಇಂಥಹ ಪ್ರಭುದೇವ ಆಗಮನದಿಂದ ಡಿಕೆಡಿ ವೇದಿಕೆ ಇನ್ನಷ್ಟು ರಂಗೇರಿದೆ. ಬ್ಯುಸಿ ಶೆಡ್ಯೂಲ್‌ನಲ್ಲೂ ಕನ್ನಡದ ಮೇಲಿನ ಪ್ರೀತಿಯಿಂದ ಪ್ರಭುದೇವ ಆಗಮನ ಇಂಟ್ರೆಸ್ಟಿಂಗ್.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 50ನೇ ವಯಸ್ಸಿಗೆ ತಂದೆಯಾದ ಖುಷಿಯಲ್ಲಿ ಘಾಟಿ ಸುಬ್ರಹ್ಮಣ್ಯಕ್ಕೆ ಪ್ರಭುದೇವ ಭೇಟಿ

    50ನೇ ವಯಸ್ಸಿಗೆ ತಂದೆಯಾದ ಖುಷಿಯಲ್ಲಿ ಘಾಟಿ ಸುಬ್ರಹ್ಮಣ್ಯಕ್ಕೆ ಪ್ರಭುದೇವ ಭೇಟಿ

    ಟ ಪ್ರಭುದೇವ (Prabhudeva) ಅವರು ಸೋಮವಾರ (ಜೂನ್‌ 12)ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ (Ghati Subramanya Temple) ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪ್ರಭುದೇವ ನೋಡಲು ದೇವಾಲಯಕ್ಕೆ ಆಗಮಿಸಿದ್ದ ಭಕ್ತರು ಮುಗಿಬಿದ್ದಿದ್ದು, ಕೆಲ ಅಭಿಮಾನಿಗಳು ಪ್ರಭುದೇವ ಜೊತೆ ಸೆಲ್ಫಿ ಪೋಟೋ ತೆಗೆದುಕೊಂಡು ಖುಷಿಪಟ್ರು, ಬಳಿಕ ದೇವಾಲಯದ ವತಿಯಿಂದ ಪ್ರಭುದೇವ ಅವರಿಗೆ ಸನ್ಮಾನ ಮಾಡಲಾಯಿತು.

    ಭಾರತದ ಮೈಕೆಲ್ ಜಾಕ್ಸನ್ ಎಂದೇ ಖ್ಯಾತಿಗಳಿಸಿರುವ ನಟ, ನಿರ್ದೇಶಕ, ಡಾನ್ಸರ್ ಪ್ರಭುದೇವ ಮತ್ತೆ ತಂದೆಯಾಗಿದ್ದಾರೆ. 50 ವರ್ಷದ ಪ್ರಭುದೇವ 3ನೇ ಬಾರಿಗೆ ತಂದೆಯಾಗಿದ್ದಾರೆ. ಪ್ರಭುದೇವ ಎರಡನೇ ಪತ್ನಿ ಹಿಮಾನಿ ಸಿಂಗ್ ಮುಂಬೈನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪ್ರಭುದೇವ ಕುಟುಂಬಕ್ಕೆ ಮೊದಲ ಹೆಣ್ಣು ಮಗು ಆಗಮಿಸಿದ್ದು ಇಡೀ ಕುಟುಂಬ ಸಂಭ್ರಮದಲ್ಲಿದೆ. ಮೂರನೇ ಮಗು ಕಳೆದುಕೊಂಡಿದ್ದ ಪ್ರಭುದೇವ ಅವರಿಗೆ ಮಗಳು ಬೆಳಕಾಗಿ ಬಂದಿದ್ದಾಳೆ. ಇದನ್ನೂ ಓದಿ:ಬಾಲಿವುಡ್‌ ಚಿತ್ರಗಳ ಫ್ಲಾಪ್‌ ಬಳಿಕ ರಶ್ಮಿಕಾ ನಟನೆ 3ನೇ ಚಿತ್ರದ ಟೀಸರ್‌ ರಿಲೀಸ್

    ಈ ಬಗ್ಗೆ ಸ್ವತಃ ಪ್ರಭುದೇವ ಅವರೇ ಅಧಿಕೃತಗೊಳಿಸಿದ್ದಾರೆ. ಎಸ್ ಇದು ನಿಜ. ನಾನು ಮತ್ತೆ ತಂದೆ ಆಗಿದ್ದೀನಿ 50ನೇ ವಯಸ್ಸಿಗೆ. ನನಗೆ ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ಪ್ರಭುದೇವ ಅವರಿಗೆ ಈಗ ಮೂವರು ಮಕ್ಕಳು.

    ಪ್ರಭುದೇವ 1995ರಲ್ಲಿ ರಾಮಲತಾ ಜೊತೆ ಮದುವೆಯಾದರು. ಪ್ರಭುದೇವ ಮತ್ತು ರಾಮಲತಾ ದಂಪತಿಗೆ ಮೂವರು ಮಕ್ಕಳು. ಮೊದಲ ಮಗ ವಿಶಾಲ್, 2ನೇ ಮಗ ರಿಷಿ ರಾಘವೇಂದ್ರ ದೇವ ಮತ್ತು ಅದಿತ್ ದೇವ. ಆದರೆ ಮೊದಲ ಮಗ ದುರದೃಷ್ಟವಶಾತ್ ವಿಶಾಲ್‌ನನ್ನು ಕಳೆದುಕೊಂಡರು ಪ್ರಭುದೇವ. ಪುಟ್ಟ ಬಾಲಕ ವಿಶಾಲ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ. ವಿಶಾಲ್ ನಿಧನದ ಮುಂಚೆ ಮೊದಲು 6 ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಾವು ಬದುಕಿನ ನಡುವೆ ಹೋರಾಟ ನಡೆಸಿ 2008ರಲ್ಲಿ ವಿಶಾಲ್ ಕೊನೆಯುಸಿರೆಳೆದರು. ಇದೀಗ ಪ್ರಭುದೇವ- ಹಿಮಾನಿ ಸಿಂಗ್ ದಂಪತಿಯ ಬದುಕಿಗೆ ಮುದ್ದು ಮಗಳ ಆಗಮನವಾಗಿದೆ. ಇದೇ ಖುಷಿಯಲ್ಲಿ ಘಾಟಿ ಸುಬ್ರಹ್ಮಣ್ಯಕ್ಕೆ ಪ್ರಭುದೇವ ವಿಶೇಷ ಸಲ್ಲಿಸಿದ್ದಾರೆ.

  • ಹೆಣ್ಣು ಮಗುವಿನ ತಂದೆಯಾದ ನಟ ಪ್ರಭುದೇವ

    ಹೆಣ್ಣು ಮಗುವಿನ ತಂದೆಯಾದ ನಟ ಪ್ರಭುದೇವ

    ಟ, ನಿರ್ದೇಶಕ ಪ್ರಭುದೇವ (Prabhudeva) ಹೆಣ್ಣು ಮಗುವಿನ ತಂದೆಯಾಗಿದ್ದಾರೆ (Father). ಪ್ರಭುದೇವ ಅವರ ಎರಡನೇ ಪತ್ನಿ ಹಿಮಾನಿ ಸಿಂಗ್ ಗೆ ಇಂದು ಹೆರಿಗೆ ಆಗಿದ್ದು, ಈ ಮೂಲಕ 50 ವಯಸ್ಸಿನಲ್ಲಿ ಪ್ರಭುದೇವ ತಂದೆಯಾಗಿದ್ದಾರೆ. ಈವರೆಗೂ ಪ್ರಭುದೇವ ಅವರ ಮನೆಯಲ್ಲಿ ಹೆಣ್ಣು ಮಗು ಜನಿಸಿರಲಿಲ್ಲವಂತೆ ಹಾಗಾಗಿ ಸಹಜವಾಗಿಯೇ ಕುಟುಂಬಕ್ಕೆ ಸಂಭ್ರಮ ತಂದಿದೆ.

    ಪ್ರಭುದೇವ ಮೊದಲ ಪತ್ನಿಯಿಂದ ಗಂಡು ಮಗು (Child) ಪಡೆದಿದ್ದರು. ಆದರೆ, ಮಗು ಅಕಾಲಿಕ ಮರಣಕ್ಕೆ ತುತ್ತಾಗಿತ್ತು. ಮೊದಲ ಪತ್ನಿ ಜೊತೆಗಿನ ಹೊಂದಾಣಿಕೆಯ ಕೊರತೆಯಿಂದಾಗಿ ಡಿವೋರ್ಸ್ ಪಡೆದರು. ಕೋವಿಡ್ ಸಂದರ್ಭದಲ್ಲಿ ವೃತ್ತಿಯಲ್ಲಿ ವೈದ್ಯಯಾಗಿರುವ ಹಿಮಾನಿ ಸಿಂಗ್ (Himani Singh) ಜೊತೆ ಡೇಟ್ ಮಾಡಿದ್ದರು. ಆನಂತರ ಗುಟ್ಟಾಗಿಯೇ ಮದುವೆಯಾಗಿದ್ದರು. ಇದನ್ನೂ ಓದಿ:ಕರಿಹೈದ ಕೊರಗಜ್ಜ: ನಿರ್ಮಾಪಕ ತ್ರಿವಿಕ್ರಮ ಸಾಫಲ್ಯ ಬದುಕಿನ ಹಾದಿ

    ಇತ್ತೀಚೆಗಷ್ಟೇ ಹಿಮಾನಿ ಸಿಂಗ್ ಜೊತೆ ಪ್ರಭುದೇವ ಮದುವೆ ಆಗಿರುವ ವಿಚಾರ ಬಹಿರಂಗವಾಗಿತ್ತು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಭುದೇವ ಎರಡನೇ ಮದುವೆ ವಿಚಾರವನ್ನು ಹಂಚಿಕೊಂಡಿದ್ದರು. ಹಿಮಾನಿ ಜೊತೆಗಿನ ಪರಿಚಯ, ಪ್ರೀತಿ-ಪ್ರೇಮ, ಮದುವೆ ಎಲ್ಲವನ್ನೂ ಜನರೆದುರು ತೆರೆದಿಟ್ಟಿದ್ದರು. ಇದೀಗ ಹಿಮಾನಿ ಮತ್ತು ಪ್ರಭುದೇವ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

  • 2ನೇ ಪತ್ನಿ ಜೊತೆ ಮೊದಲ ಬಾರಿಗೆ ಕಾಣಿಸಿಕೊಂಡ ನಟ ಪ್ರಭುದೇವ

    2ನೇ ಪತ್ನಿ ಜೊತೆ ಮೊದಲ ಬಾರಿಗೆ ಕಾಣಿಸಿಕೊಂಡ ನಟ ಪ್ರಭುದೇವ

    ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ (Prabhudeva) ಅವರು ಇದೀಗ ವೈಯಕ್ತಿಕ ಬದುಕಿನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಮೊದಲ ಬಾರಿಗೆ 2ನೇ ಪತ್ನಿ ಜೊತೆ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಕ್ಯಾರಾವ್ಯಾನ್ ಡ್ರೈವರ್ ಇದೀಗ ಹೀರೋ : ‘ಲಕ್’ ಮೇಲೆ ಲಕ್

    ಕನ್ನಡದ ಪ್ರತಿಭೆ ಸ್ಟಾರ್ ನಟ ಪ್ರಭುದೇವ ಅವರು ಭಾರತೀಯ ಚಿತ್ರರಂಗದಲ್ಲಿ ಬೇಡಿಕೆ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಸಿನಿಮಾ ರಂಗದಲ್ಲಿ ಅದೆಷ್ಟೇ ನೇಮು ಫೇಮು ಇದ್ದರೂ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಎಲ್ಲೂ ಕೂಡ ರಿವೀಲ್ ಮಾಡಿರಲಿಲ್ಲ. ಇತ್ತೀಚಿಗೆ ವೀಕೆಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮದಲ್ಲಿ ಪ್ರಭುದೇವ ಅವರ 2ನೇ ಮದುವೆ ಬಗ್ಗೆ ರಿವೀಲ್ ಆಗಿತ್ತು.

     

    View this post on Instagram

     

    A post shared by Prabhu Deva Fans (@prabhu_deva_fans)

    ಹಿಮಾನಿ ಸಿಂಗ್ (Himani Singh) ಎನ್ನುವ ವೈದ್ಯೆಯನ್ನು ಸೀಕ್ರೆಟ್ ಆಗಿ ಮದುವೆಯಾಗಿದ್ದರು. 2020ರಲ್ಲಿ ಇವರಿಬ್ಬರ ವಿವಾಹ ರಹಸ್ಯವಾಗಿ ನಡೆದಿತ್ತು. ಲಾಕ್‌ಡೌನ್‌ನಲ್ಲಿ ಈ ಮದುವೆ ನಡೆದ ಕಾರಣ ಈ ಮದುವೆ ರಹಸ್ಯವಾಗಿಯೇ ಉಳಿಯಿತು. ನಟ ಪ್ರಭುದೇವ ಅವರು ಪತ್ನಿ ಸಮೇತರಾಗಿ ಮೊದಲ ಬಾರಿಗೆ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ (Balaji Temple) ಭೇಟಿ ಕೊಟ್ಟರು. ಪ್ರಭುದೇವ ಅವರ ತಮ್ಮ ಪತ್ನಿಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಜನಸಂದಣಿಗೆ ಇದ್ದಂತಹ ದೇವಸ್ಥಾನದಲ್ಲಿ ಪತ್ನಿಯ ಸುರಕ್ಷತೆಗಾಗಿ ಪತ್ನಿಯ ಕೈಯನ್ನು ಬಲವಾಗಿ ಹಿಡಿದುಕೊಂಡಿದ್ದರು. ಈ ಜೋಡಿಯ ಫೋಟೋ ವೈರಲ್ ಆಗಿದ್ದು, ಅವರಿಬ್ಬರನ್ನೂ ಜೊತೆಯಲ್ಲಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

    ಅಂದಹಾಗೆ, ಪ್ರಭುದೇವ ಅವರು ರಮಾಲತಾ ಎಂಬುವವರನ್ನ ಮದುವೆಯಾಗಿದ್ದರು. ಈ ದಂಪತಿಗೆ 3ವರು ಮಕ್ಕಳಿದ್ದರು. ಮೊದಲ ಮಗ ವಿಶಾಲ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಬಳಿಕ ವೈಯಕ್ತಿಕ ಕಾರಣಗಳಿಂದ 2010ರಲ್ಲಿ 16 ವರ್ಷಗಳ ದಾಂಪತ್ಯ ಜೀವನಕ್ಕೆ ಡಿವೋರ್ಸ್ (Divorce) ಮೂಲಕ ಅಂತ್ಯ ಹಾಡಿದ್ದರು.

  • ಆ ಒಂದು ಕ್ಯಾಸೆಟ್‌ನಿಂದ ಪ್ರಭುದೇವ ಭವಿಷ್ಯ ಬದಲಾಯಿಸಿತು

    ಆ ಒಂದು ಕ್ಯಾಸೆಟ್‌ನಿಂದ ಪ್ರಭುದೇವ ಭವಿಷ್ಯ ಬದಲಾಯಿಸಿತು

    ಸಾಧಕನ ಸಾಧನೆಯ ಕಥೆ ಹೇಳುವ ಜನಪ್ರಿಯ Weekend with Ramesh 5 ಶೋನಲ್ಲಿ ತಮ್ಮ ಬದಕು ಬದಲಾದ ಕಥೆಯನ್ನ ಹೇಳಿದ್ದಾರೆ. ಪ್ರಭುದೇವ (Prabhudeva) ಕೈಗೆ ಸಿಕ್ಕ ಆ ಒಂದು ಕ್ಯಾಸೆಟ್‌ನಿಂದ ಅವರ ಭವಿಷ್ಯ ಬದಲಾಗಿದ್ದು, ಹೇಗೆ? ಎಂದು ಹೇಳಿದ್ದಾರೆ.

    ಬಾಲ್ಯದಿಂದಲೇ ನೃತ್ಯ ರಂಗದಲ್ಲಿ ಪ್ರಭುದೇವಗೆ ಒಲವಿತ್ತು. ಹಾಗಾಗಿ ಭರತನಾಟ್ಯ ಸೇರಿದಂತೆ ಹಲವು ಶೈಲಿಯ ನೃತ್ಯವನ್ನ ನಟ ಕರಗತ ಮಾಡಿಕೊಂಡರು. ತಂದೆಯ ಹಾದಿಯಲ್ಲಿಯೇ ಪ್ರಭುದೇವ ಸಾಗಿದ್ದರು. ಪ್ರಭುದೇವ ನೃತ್ಯ ಕಲಿಯುವಾಗ ಅವರಿಗೆ ಥ್ರಿಲ್ಲರ್ ಹೆಸರಿನ ಕ್ಯಾಸೆಟ್ ಸಿಕ್ಕಿತ್ತು. ವಿಶ್ವಪ್ರಸಿದ್ಧ ಡ್ಯಾನ್ಸರ್ ಮೈಕಲ್ ಜಾಕ್ಸನ್ ಅವರ 1982ರ ಸೂಪರ್ ಹಿಟ್ ಆಲ್ಬಂ ಥ್ರಿಲ್ಲರ್. ಬೀಟ್ ಇಟ್ ಸೇರಿದಂತೆ ಹಲವು ಹಾಡುಗಳು ಆ ಆಲ್ಬಂನಲ್ಲಿದ್ದವು. ಪ್ರಭುದೇವ ಅವರು ಆ ಆಲ್ಬಂನ ವಿಸಿಆರ್ ಕ್ಯಾಸೆಟ್ ಅನ್ನು ತೆಗೆದುಕೊಂಡು ಅದನ್ನು ನೋಡಲು ವಿಸಿಆರ್ ಅನ್ನು ಬಾಡಿಗೆ ತಂದಿದ್ದರಂತೆ. ಆ ಕ್ಯಾಸೆಟ್ ನೋಡುತ್ತಲೇ ನನಗೆ ರೋಮಾಂಚನವಾಗಿ ಬಿಟ್ಟಿತು. ನಾನು ಹೊಸದೇನನ್ನೋ ನೋಡಿದೆ. ಅಲ್ಲಿಯವರೆಗೆ ನಾನು ಆ ರೀತಿಯ ಡ್ಯಾನ್ಸ್ ನೋಡಿರಲೇ ಇಲ್ಲ. ಮೈಕಲ್ ಜಾಕ್ಸನ್ ಡ್ಯಾನ್ಸ್ ಮಾಡಿದ ರೀತಿ ನನ್ನನ್ನು ಬೆರಗಾಗಿಸಿತು ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: `ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ಆಲಿಯಾ ಭಟ್- ರಶ್ಮಿಕಾ ಮಂದಣ್ಣ

    ಅಂದು ಮೈಕಲ್ ಜಾಕ್ಸನ್‌ರ ಥ್ರಿಲ್ಲರ್ ನೋಡಿದ ಬಳಿಕ ಆ ಮಾದರಿಯ ಡ್ಯಾನ್ಸ್ ನನ್ನನ್ನು ಕಾಡಲು ಆರಂಭಿಸಿತು. ನಾನು ಎಲ್ಲಿದ್ದರು ಏನು ಮಾಡುತ್ತಿದ್ದರೂ ಡ್ಯಾನ್ಸ್ ಮಾಡಲು ಆರಂಭಿಸಿದೆ. ಒಂದು ರೀತಿ ಹುಚ್ಚನಾಗಿಬಿಟ್ಟಿದ್ದೆ, ನೃತ್ಯ ಕಲಿಯುವಾಗಲು ಮಧ್ಯದಲ್ಲಿ ಒಂದೊಂದು ಬ್ರೇಕ್ ಡ್ಯಾನ್ಸ್ ಸ್ಟೆಪ್ಸ್ ಸೇರಿಸಿಬಿಡುತ್ತಿದ್ದ, ನನ್ನ ಗುರುಗಳು ನನ್ನನ್ನು ಬೈಯ್ಯುತ್ತಿದ್ದರೂ ಆದರೂ ಆ ಅಭ್ಯಾಸ ನನ್ನಿಂದ ಹೋಗುತ್ತಿರಲಿಲ್ಲ ಎಂದ ಪ್ರಭುದೇವ, ಮೈಕಲ್ ಜಾಕ್ಸನ್ ನನ್ನ ಮೇಲೆ ಬೀರಿದ ಪ್ರಭಾವ ಬಹಳ ದೊಡ್ಡದು ಎಂದು ಪ್ರಭುದೇವ ಸ್ಮರಿಸಿದರು.

    ಶೋನಲ್ಲಿ ಹಲವು ಬಾರಿ ಅವರು ಮೈಕಲ್ ಜಾಕ್ಸನ್ ಅವರನ್ನು ನೆನಪು ಮಾಡಿಕೊಂಡರು ಪ್ರಭುದೇವ. ಮೈಕಲ್ ಜಾಕ್ಸನ್ (Michael Jackson) ಒಮ್ಮೆ ಮುಂಬೈಗೆ ಬಂದಾಗ ನಿರ್ಮಾಪಕರೊಬ್ಬರ ಸಹಾಯದಿಂದ ತಾವು ಅವರನ್ನು ಭೇಟಿಯಾಗಿದ್ದಾಗಿಯೂ, ಅಂದು ಅವರು ನನಗೆ ಏನೋ ಹೇಳಿದರು ಆದರೆ ಅದು ನನಗೆ ನೆನಪಿಲ್ಲ ಏಕೆಂದರೆ ಅವರನ್ನು ನೋಡಿ ನಾನು ಶಾಕ್‌ನಲ್ಲಿದ್ದೆ ಅವರನ್ನೇ ನೋಡುತ್ತಿದ್ದೆ ಎಂದಿದ್ದಾರೆ. ಶೋನ ಕೊನೆಯಲ್ಲಿ ನಿಮ್ಮ ಈ ಸಾಧನೆಗೆ ಮುಖ್ಯ ಕಾರಣಕರ್ತರು ಯಾರೆಂದಾಗ ತಮಗೆ ನೃತ್ಯ ಹೇಳಿಕೊಟ್ಟ ಧರ್ಮರಾಜ್ ಮಾಸ್ಟರ್, ಲಕ್ಷ್ಮಿನಾರಾಯಣ ಮಾಸ್ಟರ್ ಎಂದ ಪ್ರಭುದೇವ, ಮೈಕಲ್ ಜಾಕ್ಸನ್ ಸಹ ತಮಗೆ ಗುರುವೇ ಎಂದು  ಪ್ರಭುದೇವ ಮಾತನಾಡಿದ್ದಾರೆ.

  • ಅಪ್ಪ ಅಂದು ಬೆನ್ನ ಮೇಲೆ ಕೊಟ್ಟ ಆ ಸಣ್ಣ ಏಟು ನನ್ನನ್ನು ಬದಲಾಯಿಸಿತು: ಪ್ರಭುದೇವ

    ಅಪ್ಪ ಅಂದು ಬೆನ್ನ ಮೇಲೆ ಕೊಟ್ಟ ಆ ಸಣ್ಣ ಏಟು ನನ್ನನ್ನು ಬದಲಾಯಿಸಿತು: ಪ್ರಭುದೇವ

    ಟಿವಿ ಲೋಕದ Weekend With Ramesh 5 ಕಾರ್ಯಕ್ರಮದಲ್ಲಿ ಡ್ಯಾನ್ಸಿಂಗ್ ಲೆಜೆಂಡ್ ಪ್ರಭುದೇವ (Prabhudeva) ಭಾಗವಹಿಸಿದ್ದಾರೆ. ತಮ್ಮ ಜೀವನದ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಪಿಯುಸಿ ಫೇಲ್ ಆದಾಗ, ಪ್ರಭುದೇವ ಅವರ ತಂದೆ ಮೂಗೂರು ಸುಂದರ್ (Mugur Sundar) ಮನಸ್ಥಿತಿ ಹೇಗಿತ್ತು? ತಂದೆ ಮಾಡಿದ ಕಾರ್ಯದಿಂದ ತಮಗೆ ಅದ್ಯಾವ ರೀತಿ ಪ್ರಭಾವ ಬೀರಿತು ಎಂಬುದನ್ನ ಪ್ರಭುದೇವ ಹಂಚಿಕೊಂಡಿದ್ದಾರೆ.

    ವೀಕೆಂಡ್ ಟೆಂಟ್‌ನಲ್ಲಿ ರಮ್ಯಾ ಬಳಿಕ ಪ್ರಭುದೇವ 2ನೇ ಅತಿಥಿಯಾಗಿ ಭಾಗಿಯಾಗಿದ್ದಾರೆ. ಪ್ರಭುದೇವ ಅವರ ಸ್ಪಷ್ಟ ಕನ್ನಡಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಡ್ಯಾನ್ಸ್ ಅನ್ನೇ ಕೆರಿಯರ್ ಆಗಿ ಬದಲಾಯಿಸಿಕೊಂಡು ನಟ, ನಿರ್ದೇಶಕ, ಕೊರಿಯೋಗ್ರಾಫರ್ ಬೆಳೆದಿದ್ದು ಹೇಗೆ ಎಂಬುದನ್ನ ಪ್ರಭುದೇವ ಹೇಳಿದ್ದಾರೆ. ಜೊತೆಗೆ ತಂದೆಯ ಬೆಂಬಲದ ಬಗ್ಗೆ ಅಚ್ಚರಿಯ ಮಾಹಿತಿ ತಿಳಿಸಿದ್ದಾರೆ. ಪ್ರತಿ ವ್ಯಕ್ತಿಯು ಕೂಡ ಸಾಧನೆಯ ಹಾದಿಗೆ ಕಾಲಿಡಲು ಅವರ ಕುಟುಂಬದವರು ನೀಡುವ ಬೆಂಬಲ ಬಹಳ ಮುಖ್ಯವಾಗುತ್ತದೆ. ಪ್ರಭುದೇವಗೆ ಅಂಥಹಾ ಬೆಂಬಲ ದೊರಕಿದ್ದು,ಅವರ ತಂದೆ ಮೂಗುರು ಸುಂದರ್‌ ಅವರಿಂದಲೇ. ಅವರು ಮಾಡಿದ್ದು ಬಹಳ ಸರಳವಾದ ಕಾರ್ಯವಷ್ಟೆ ಆದರೆ ಅದು ಪ್ರಭುದೇವ ಜೀವನದಲ್ಲಿ ಬಹಳ ಮಹತ್ವದ ಕಾರ್ಯವಾಯಿತು. ಅದರ ಬಗ್ಗೆ ವೀಕೆಂಡ್ ವಿತ್ ರಮೇಶ್‌ನಲ್ಲಿ ಪ್ರಭುದೇವ ಮಾತನಾಡಿದ್ದಾರೆ. ಇದನ್ನೂ ಓದಿ: ‘ಅಭಿರಾಮಚಂದ್ರ’ನಿಗೆ ಕರುನಾಡ ಚಕ್ರವರ್ತಿ ಶಿವಣ್ಣ ಸಾಥ್

    ಡ್ಯಾನ್ಸ್‌ನಲ್ಲಿ ಚಿಕ್ಕಂದಿನಿಂದಲೂ ಅಪ್ರತಿಮರಾಗಿದ್ದ ಪ್ರಭುದೇವ ಅವರು ಓದಿನಲ್ಲಿ ಮೊದಲಿನಿಂದಲೂ ಬಹಳ ಹಿಂದೆ ಇದರಂತೆ. ಅದರಲ್ಲಿಯೂ ರಸಾಯನಶಾಸ್ತ್ರವೆಂದರೆ ಪ್ರಭುದೇವಗೆ ಭಯವೋ ಭಯ. ಹೀಗಿರುವಾಗ ಪಿಯುಸಿಯಲ್ಲಿ ಪ್ರಭುದೇವ ಫೇಲ್ ಆಗಿಬಿಡುತ್ತಾರೆ. ಅಂದು ಬಹಳ ಭಯದಲ್ಲಿದ್ದ ಪ್ರಭುದೇವ ಮನೆಗೆ ಬಂದರೆ ಅಪ್ಪ ಮನೆಯಲ್ಲಿಯೇ ಇದ್ದಾರೆ. ಫೇಲ್ ಆಗಿ ಭಯದಲ್ಲಿ ರೂಂನಲ್ಲಿ ಕೂತಿದ್ದರಂತೆ ಪ್ರಭು, ಮಗ ಫೇಲ್ ಆಗಿದ್ದಾನೆಂದು ತಿಳಿದ ಮೂಗೂರು ಸುಂದರ್ ಅವರು ನಿಧಾನಕ್ಕೆ ಪ್ರಭು ಇದ್ದ ರೂಮಿಗೆ ಬಂದಿದ್ದಾರೆ. ಏನಾಯ್ತು ಎಂದು ಕೇಳಿದಾಗ ಫೇಲ್ ಆಗಿದ್ದೇನೆ ಎಂದರಂತೆ. ಆಗ ಮೂಗುರು ಸುಂದರ್ ಅವರು ಪ್ರಭುದೇವ ಬೆನ್ನನ್ನು ಎರಡು ಬಾರಿ ಮೆತ್ತಗೆ ತಟ್ಟಿ, ಪರವಾಗಿಲ್ಲ ನಿನಗೆ ಏನು ಇಷ್ಟವಾಗುತ್ತದೆಯೋ ಅದನ್ನು ಮಾಡು ಎಂದರಂತೆ.

    ಆ ಕ್ಷಣ ಪ್ರಭುದೇವಗೆ ಅಳು ಬಂದುಬಿಟ್ಟಿತಂತೆ, ಆದರೆ ಅಪ್ಪ ಅಂದು ಬೆನ್ನ ಮೇಲೆ ಕೊಟ್ಟ ಆ ಸಣ್ಣ ಏಟು ನನ್ನನ್ನು ಬದಲಾಯಿಸಿತು ಎಂದಿದ್ದಾರೆ ಪ್ರಭುದೇವ. ಅದಾದ ಬಳಿಕ ನಾನು ಬದಲಾಗಿಬಿಟ್ಟೆ, ಅಪ್ಪ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳಲೇ ಬೇಕು ಎಂಬ ಹಠಕ್ಕೆ ಬಿದ್ದೆ ಎಂದು ನೆನಪಿಸಿಕೊಂಡಿದ್ದಾರೆ. ಅಂದು ಅಪ್ಪ ಬೆನ್ನು ತಟ್ಟಿದ್ದರಿಂದಲೇ ನಾನು ಇಂದಿನ ಪ್ರಭುದೇವ ಆಗಲು ಸಾಧ್ಯವಾಗಿದ್ದು ಎಂದಿದ್ದಾರೆ ಪ್ರಭು.

  • ಮಗ ಸತ್ತಾಗ ಆತ್ಮಸ್ಥೈರ್ಯ ತುಂಬಿ ಜೊತೆಯಾಗಿದ್ದು, ಪ್ರಭುದೇವ: ಪ್ರಕಾಶ್‌ ರಾಜ್‌

    ಮಗ ಸತ್ತಾಗ ಆತ್ಮಸ್ಥೈರ್ಯ ತುಂಬಿ ಜೊತೆಯಾಗಿದ್ದು, ಪ್ರಭುದೇವ: ಪ್ರಕಾಶ್‌ ರಾಜ್‌

    ವೀಕೆಂಡ್ ಟೆಂಟ್‌ನಲ್ಲಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ (Prabhudeva)  ಅವರ ಎಂಟ್ರಿಯಾಗಿದೆ. ನಟ ರಮೇಶ್ ಅರವಿಂದ್ ಜೊತೆ ಬದುಕಿನ ಬಾಲ್ಯದ ಹಲವಾರು ವಿಚಾರಗಳನ್ನ ನಟ ಹಂಚಿಕೊಂಡಿದ್ದಾರೆ. ಅದಷ್ಟೇ ಅಲ್ಲ, ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಅವರು ಪ್ರಭುದೇವ ಬಗ್ಗೆ Weekend With Ramesh ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಮಗ ಸಿದ್ದು ಸತ್ತಾಗ, ಆತ್ಮಸ್ಥೈರ್ಯ ತುಂಬಿದ ಪ್ರಭುದೇವ ನಡೆಯ ಬಗ್ಗೆ ಮಾತನಾಡಿದ್ದಾರೆ.

    ಮೈಸೂರು ಮೂಲದ ನಟ ಪ್ರಭುದೇವ ಅವರಿಗೆ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ನಟ, ನಿರ್ದೇಶಕ, ಕೊರಿಯೋಗ್ರಾಫರ್ ಆಗಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ರು ಕೂಡ. ಕನ್ನಡ ಭಾಷೆ- ಕರ್ನಾಟಕದ ಬಗ್ಗೆ ಅಪಾರ ಪ್ರೀತಿಯನ್ನ ಇಟ್ಟುಕೊಂಡಿದ್ದಾರೆ. ಪ್ರಭುದೇವ-ಅವರ ತಂದೆ ಮುಗೂರ್ ಸುಂದರ್ ಇಡೀ ಕುಟುಂಬ ಚಿತ್ರರಂಗದಲ್ಲಿ ಕಲಾಸೇವೆ ಮಾಡುತ್ತಲೇ ಬಂದಿದ್ದಾರೆ. ಪ್ರಭುದೇವ ಅವರು `ಪದ್ಮಶ್ರೀ’ ಜೊತೆಗೆ 2 ರಾಷ್ಟ್ರ ಪ್ರಶಸ್ತಿ ಪುರಸ್ಕಾರ ಪಡೆದ ಪ್ರಭುದೇವ ಅವರು ಅಪ್ಪಟ ಕನ್ನಡದ ಪ್ರತಿಭೆ. 36 ವರ್ಷಗಳಲ್ಲಿ 100ಕ್ಕೂ ಅಧಿಕ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿರುವ ಪ್ರಭುದೇವ ಅವರು 61 ಚಿತ್ರಗಳಲ್ಲಿ ನಟಿಸಿದ್ದಾರೆ, 15 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ, 3 ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ಭಾರತದ ಸ್ಟಾರ್ ನಟರ ಜೊತೆ ಪ್ರಭುದೇವ ಕೆಲಸ ಮಾಡಿದ್ದಾರೆ. ಇಷ್ಟೇಲ್ಲಾ ಸಾಧನೆ ಮಾಡಿರುವ ಪ್ರಭುದೇವ ಅವರು ಕಷ್ಟದಲ್ಲಿರುವ ಸ್ನೇಹಿತರಿಗಾಗಿ ಮಿಡಿಯುವ ಮನಸ್ಸಿನ ಬಗ್ಗೆ ಪ್ರಕಾಶ್ ರಾಜ್ ವೀಕೆಂಡ್ ವಿತ್ ರಮೇಶ್‌ನಲ್ಲಿ ಹಂಚಿಕೊಂಡಿದ್ದಾರೆ.

    ಕನ್ನಡಿಗ, ಬಹುಭಾಷಾ ನಟ ಪ್ರಕಾಶ್ ರಾಜ್ ಕಾರ್ಯಕ್ರಮದಲ್ಲಿ ವೀಡಿಯೋ ಸಂದೇಶದ ಮೂಲಕ ಸ್ನೇಹಿತ ಪ್ರಭುದೇವ ಅವರ ಹುಟ್ಟುಹಬ್ಬಕ್ಕೆ, ಸಿನಿ ಜರ್ನಿಗೆ ಶುಭಹಾರೈಸಿದ್ದಾರೆ. ಹಾಗೆಯೇ ಎಲ್ಲೂ ಹೇಳಿರದ ವಿಚಾರವೊಂದರನ್ನ ಹಂಚಿಕೊಂಡಿದ್ದಾರೆ. ಪ್ರಕಾಶ್ ರಾಜ್ ಅವರಿಗೆ `ಸಿದ್ದು’ ಎಂಬ ಮುದ್ದಾದ ಗಂಡು ಮಗನಿದ್ದ, 2004ರಲ್ಲಿ 5 ವರ್ಷದ ಮಗ ಸಿದ್ದು ನಿಧನರಾದರು. ಮಗನ ನಿಧನದ ಸಂದರ್ಭದಲ್ಲಿ ಧೈರ್ಯ,ಸಾಂತ್ವನ ತುಂಬಿದ ಬಗ್ಗೆ ಪ್ರಕಾಶ್ ರಾಜ್ ಹೇಳಿದ್ದಾರೆ. ಸಂಕಷ್ಟದ ಸಮಯದಲ್ಲಿ ಪ್ರಭುದೇವ ಸಾಥ್ ನೀಡಿದ್ದರ ಬಗ್ಗೆ ನಟ ಹಂಚಿಕೊಂಡಿದ್ದಾರೆ.

    ವೇದಿಕೆಯಲ್ಲಿ ಶಾಲೆಯ ಗೆಳೆಯರು ಸೇರಿದಂತೆ ಬಾಲ್ಯದ ಗೆಳೆಯರೆಲ್ಲರೂ ಸಹ ವೇದಿಕೆಯ ಮೇಲೆ ಬಂದು ಪ್ರಭುದೇವ ಅವರಿಗೆ ಸರ್ಪ್ರೈಸ್ ನೀಡುವ ಮೂಲಕ ಮತ್ತೊಮ್ಮೆ ಶಾಲಾ ದಿನಗಳು ಹಾಗೂ ಬಾಲ್ಯಕ್ಕೆ ಕರೆದುಕೊಂಡು ಹೋಗುವ ಕೆಲಸವನ್ನು ಮಾಡಿದ್ದಾರೆ. ಬಾಲ್ಯದ ಸ್ನೇಹಿತರನ್ನು ನೋಡಿ ನಾನು ಲುಂಗಿಯನ್ನು ಉಟ್ಟುಕೊಳ್ಳುವುದಿಲ್ಲ. ಇವರೆಲ್ಲರೂ ಲುಂಗಿಯನ್ನ ಉಟ್ಟುಕೊಳ್ಳುತ್ತಾರೆ. ಯಾಕೆಂದರೆ ಬೆಳಿಗ್ಗೆ ಎದ್ದು ನೋಡಿದ್ರೆ ಲುಂಗಿ ಮಾಯವಾಗಿತ್ತು ಎಂದು ಬಾಲ್ಯದಲ್ಲಿ ನಡೆದಂತಹ ಒಂದು ಪ್ರಸಂಗವನ್ನ ಮೆಲುಕು ಹಾಕಿ ಎಲ್ಲರ ಮುಖದಲ್ಲೂ ನಗೆಯನ್ನ ತರಿಸಿದ್ದಾರೆ. ಪ್ರಭುದೇವ ಮತ್ತು ಸ್ನೇಹಿತರು ಮಲಗಿದ್ದಾಗ ರಾತ್ರಿ ಲುಂಗಿ ಉಟ್ಟುಕೊಂಡು ಮಲಗಿದ್ದಾರೆ. ಆದರೆ ಪ್ರಭುದೇವ ಅವರು ಬೆಳಿಗ್ಗೆ ಎದ್ದಾಗ ಲುಂಗಿ ಮಾಯವಾಗಿತ್ತಂತೆ. ಇದರಿಂದ ನಾನು ಅಂದಿನಿಂದ ಲುಂಗಿ ಉಟ್ಟಿಕೊಳ್ಳುವುದನ್ನು ಬಿಟ್ಟೆ ಎಂದು ಪ್ರಭುದೇವ ತಿಳಿಸಿದ್ದಾರೆ.

  • `ಇಂಡಿಯನ್ ಮೈಕಲ್ ಜಾಕ್ಸನ್’ ಪ್ರಭುದೇವ ಕನ್ನಡಕ್ಕೆ ಕನ್ನಡಿಗರ ಚಪ್ಪಾಳೆ

    `ಇಂಡಿಯನ್ ಮೈಕಲ್ ಜಾಕ್ಸನ್’ ಪ್ರಭುದೇವ ಕನ್ನಡಕ್ಕೆ ಕನ್ನಡಿಗರ ಚಪ್ಪಾಳೆ

    ಕಿರುತೆರೆಯ ಜನಪ್ರಿಯ Weekend With Ramesh ಶೋನಲ್ಲಿ `ಇಂಡಿಯನ್ ಮೈಕಲ್ ಜಾಕ್ಸನ್’ ಪ್ರಭುದೇವ ಎಂಟ್ರಿಯಾಗಿದೆ. ಬಾಲ್ಯ ಜೀವನ, ಶಿಕ್ಷಣ, ಸಿನಿಮಾ ಕೆರಿಯರ್, ಡ್ಯಾನ್ಸ್, ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಪ್ರಭುದೇವ ಅವರು ಈ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರಭುದೇವ (Prabhudeva) ಅವರ ಕನ್ನಡಕ್ಕೆ (Kannada) ಕನ್ನಡಿಗರು ಫಿದಾ ಆಗಿದ್ದಾರೆ.

    ಮೈಸೂರು (Mysore) ಮೂಲದ ಪ್ರಭುದೇವ್ ಅವರು ಇತರೆ ಭಾಷೆಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಭಾರತದ ಮೈಕಲ್ ಜಾಕ್ಸನ್ ಎಂದೇ ಖ್ಯಾತಿಗಳಿಸಿರುವ ಪ್ರಭುದೇವ ನಟ ನಿರ್ದೇಶಕ ಡ್ಯಾನ್ಸರ್ ಆಗಿದ್ದಾರೆ. ಈಗ ಐದನೇ ಆವೃತ್ತಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಎರಡನೇ ಸಾಧಕನಾಗಿ ಪ್ರಭುದೇವ ಆಗಮಿಸಿದ್ದಾರೆ. ಮೊದಲ ಸಂಚಿಕೆಯಲ್ಲಿ ರಮ್ಯಾ ಸ್ಪೂರ್ತಿಯ ಕಥೆ ಎಲ್ಲರಿಗೂ ಮೋಡಿ ಮಾಡಿತ್ತು. ಆದರೆ ಅವರ ಅತಿಯಾದ ಇಂಗ್ಲಿಷ್ ಬಳಕೆ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಇನ್ನೂ ಬಾಲಿವುಡ್‌ನ ಬಹುಬೇಡಿಕೆ ನಟ, ನಿರ್ದೇಶಕ ಕೊರಿಯೋಗ್ರಾಫರ್ ಪ್ರಭುದೇವ ಬರುತ್ತಾರೆ ಎಂದಾಗ ಹಿಂದಿ & ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ ಎಂದು ಅಂದುಕೊಂಡವರೇ ಜಾಸ್ತಿ. ಆದರೆ ಆಗಿದ್ದೇ ಬೇರೆ.

    ಪ್ರಭುದೇವ ಅವರು ಅಪರೂಪಕ್ಕೆ ಇಂಗ್ಲಿಷ್ ಪದ ಬಳಸಿದ್ದರು ಕೂಡ ಅತೀ ಹೆಚ್ಚು ಕನ್ನಡದಲ್ಲಿಯೇ ಮಾತನಾಡಿದರು. ಅವರ ತಂದೆ ಮೂಗೂರು ಸುಂದರಂ, ತಾಯಿ, ಸಹೋದರ ನಾಗೇಂದ್ರ ಪ್ರಸಾದ್ ಸೇರಿ ಅವರ ಬಳಗ ಎಲ್ಲವೂ ಕನ್ನಡದಲ್ಲಿಯೇ ಮಾತನಾಡಿದ್ದರು. ಕೆಲವರಿಗೆ ಇದು ತಮಿಳು ಮಿಶ್ರಿತ ಕನ್ನಡ ಅಂತ ಅನಿಸಿರಬಹುದು. ಆದರೆ ಅದು ತಮಿಳು ಮಿಶ್ರಿತ ಕನ್ನಡ ಅಲ್ಲವೇ ಅಲ್ಲ. ಚಾಮರಾಜನಗರ ಭಾಷೆಯ ಕನ್ನಡವಿದು, ಕಾಡು ಭಾಷೆ ಅಂತಲೂ ಹೇಳುತ್ತಾರೆ. ಡಾ ರಾಜ್‌ಕುಮಾರ್ ಅವರು ಚಾಮರಾಜನಗರದ ಕಡೆಯವರು ಬಂದ್ರು ಅಂದ್ರೆ ನಮ್ಮ ಕಾಡಿನವ್ರು ಅಂತ ಹೇಳುತ್ತಿದ್ದರಂತೆ. ಅಷ್ಟೇ ಅಲ್ಲ, ದೋಸೆ ಕೊಡು ಎನ್ನಲು ತತ್ತಾಯ್ಯಾ ಒಂದ್ ದ್ಯಾಸ್ಯಾ ಅಂತ ಹೇಳುತ್ತಿದ್ದರಂತೆ. ಮನೆಯಲ್ಲಿ ಅಣ್ಣಾವ್ರು ಹೀಗೆ ಮಾತನಾಡ್ತಿದ್ರಂತೆ. ಒಟ್ನಲ್ಲಿ ರಮ್ಯಾ (Ramya) ಕನ್ನಡ ಬಳಕೆಗೆ ಅಸಮಾಧಾನ ವ್ಯಕ್ತವಾದ ಬೆನ್ನಲ್ಲೇ ಪ್ರಭುದೇವ ಅವರ ಕನ್ನಡಕ್ಕೆ ಕನ್ನಡಿಗರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದನ್ನೂ ಓದಿ: ದಶಕದ ನಂತರ ಮತ್ತೆ ಬಣ್ಣ ಹಚ್ಚಿದ ಸಂಗೀತ ನಿರ್ದೇಶಕ ಗುರುಕಿರಣ್

    ಶಾಲೆಯ ಗೆಳೆಯರು ಸೇರಿದಂತೆ ಬಾಲ್ಯದ ಗೆಳೆಯರೆಲ್ಲರೂ ಸಹ ವೇದಿಕೆಯ ಮೇಲೆ ಬಂದು ಪ್ರಭುದೇವ ಅವರಿಗೆ ಸರ್ಪ್ರೈಸ್ ನೀಡುವ ಮೂಲಕ ಮತ್ತೊಮ್ಮೆ ಶಾಲಾ ದಿನಗಳು ಹಾಗೂ ಬಾಲ್ಯಕ್ಕೆ ಕರೆದುಕೊಂಡು ಹೋಗುವ ಕೆಲಸವನ್ನು ಮಾಡಿದ್ದಾರೆ. ಅಮಾವಾಸ್ಯೆ ಎಂದರೆ ಎಲ್ಲರಿಗೂ ಭಯ ಇದ್ದೇ ಇರುತ್ತದೆ. ಆ ದಿನ ಮಗು ಜನಿಸಿದ್ರೆ ಹೇಗಾಗಿರಬೇಡ, ಆದರೆ ಮೂಗೂರು ಸುಂದರ್ ಅವರು ತಮ್ಮ ಮಗ ಅಮಾವಾಸ್ಯೆ ದಿನ ಹುಟ್ಟಿದ ಎಂದು ತುಂಬಾ ಖುಷಿಯನ್ನ ಪಟ್ಟಿದ್ದಾರೆ. ಅದನ್ನು ಸ್ವತಃ ಅವರೇ ಹೇಳಿದ್ದಾರೆ. ನನ್ನ ಮಗ ಅಮಾವಾಸ್ಯೆಯ ದಿನ ಹುಟ್ಟಿದ್ದು ನನಗಂತೂ ತುಂಬಾ ಸಂತಸವನ್ನು ತಂದಿದೆ ಎಂದು ವೇದಿಕೆಯ ಮೇಲೆ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಪ್ರಭುದೇವ ಅವರಿಗೆ ಹಪ್ಪಳ ಎಂದರೆ ತುಂಬಾ ಇಷ್ಟ. ಇದರಿಂದಾಗಿ ಹಪ್ಪಳದ ಕಥೆಯನ್ನ ಹೇಳಿದ್ದಾರೆ. ನಾವು ಮನೆಯಲ್ಲಿ ಇದ್ದಾಗ ಹಪ್ಪಳವನ್ನು ಜೋಡಿಸಿಕೊಂಡು ತಿನ್ನುತ್ತಿದ್ದೆವು ಎಂದು ನಟ ರಮೇಶ್ ಬಳಿ ಹೇಳಿದ್ದಾರೆ. ಇನ್ನು ಇದೇ ವೇಳೆ `ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ತಂದೆ ಮಗ ಇಬ್ಬರು ಸೇರಿಕೊಂಡು ಡ್ಯಾನ್ಸ್ ಮಾಡಿದ್ದಾರೆ.

    `ಪದ್ಮಶ್ರೀ’ ಜೊತೆಗೆ 2 ರಾಷ್ಟ್ರ ಪ್ರಶಸ್ತಿ ಪುರಸ್ಕಾರ ಪಡೆದ ಪ್ರಭುದೇವ ಅವರು ಅಪ್ಪಟ ಕನ್ನಡದ ಪ್ರತಿಭೆ. 36 ವರ್ಷಗಳಲ್ಲಿ 100ಕ್ಕೂ ಅಧಿಕ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡಿರುವ ಪ್ರಭುದೇವ ಅವರು 61 ಚಿತ್ರಗಳಲ್ಲಿ ನಟಿಸಿದ್ದಾರೆ, 15 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ, 3 ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ. ಭಾರತದ ಸ್ಟಾರ್ ನಟರ ಜೊತೆ ಪ್ರಭುದೇವ ಕೆಲಸ ಮಾಡಿದ್ದಾರೆ.