Tag: ಪ್ರಭಾಸ್

  • ಜೂ.20ಕ್ಕೆ ಪ್ರಭಾಸ್ ನಟನೆಯ ‘ಕಲ್ಕಿ’ ರಿಲೀಸ್

    ಜೂ.20ಕ್ಕೆ ಪ್ರಭಾಸ್ ನಟನೆಯ ‘ಕಲ್ಕಿ’ ರಿಲೀಸ್

    ಪ್ರಭಾಸ್ ನಟನೆಯ ಕಲ್ಕಿ (Kalki) ಸಿನಿಮಾದ ಬಿಡುಗಡೆ ದಿನಾಂಕ ಬದಲಾಗುತ್ತಲೇ ಇದೆ. ಈಗಾಗಲೇ ಎರಡು ಬಾರಿ ಡೇಟ್ ಬದಲಾವಣೆಯ ಬಗ್ಗೆ ಚರ್ಚೆಯಾಗಿದೆ. ಅಂತಿಮವಾಗಿ ಜೂನ್ 20ರಂದು ಚಿತ್ರ ಬಿಡುಗಡೆ (Release) ಮಾಡುವುದಾಗಿ ತಿಳಿದುಬಂದಿದೆ. ಚುನಾವಣೆ, ಫಲಿತಾಂಶ ಎಲ್ಲವೂ ಮುಗಿದ ನಂತರ ಕಲ್ಕಿ ಬಿಡುಗಡೆ ಆಗಲಿದೆ.

    ಬಿಡುಗಡೆಗೂ ಮುನ್ನ ಕಲ್ಕಿ ಸಿನಿಮಾ ನೂರು ಕೋಟಿ ಕ್ಲಬ್ ಸೇರಿತಾ? ಹೌದು ಎನ್ನುತ್ತಿದೆ ಬಿಟೌನ್. ಹಿಂದಿ ಭಾಷೆಯಲ್ಲೇ ಕಲ್ಕಿ 175 ಕೋಟಿ ರೂಪಾಯಿಗೆ ಒಟಿಟಿಗೆ (OTT) ಸೇಲ್ ಆಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ದಕ್ಷಿಣದ ಭಾಷೆಗಳಿಗೂ ನೂರಾರು ಕೋಟಿ ಕೊಟ್ಟು ಖರೀದಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸಿನಿಮಾ ರಿಲಿಸ್ ಗೂ ಮುನ್ನ ದಾಖಲೆಯ ಮೊತ್ತ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ.

    ಅಮಿತಾಭ್ ಬಚ್ಚನ್ ಸಿನಿಮಾ ಶೂಟಿಂಗ್ (Shooting) ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ರಾತ್ರಿ ಶೂಟಿಂಗ್ ಮುಗಿಸಿ ಬಂದೆ. ಚಿತ್ರದ ಚಿತ್ರೀಕರಣ ಮುಗಿದಿದೆ. ಅಂದುಕೊಂಡಂತೆ ಮೇ 9ಕ್ಕೆ ಚಿತ್ರ ರಿಲೀಸ್ ಆಗಲಿದೆ ಎಂದು ಅವರು ಮಾಹಿತಿಯನ್ನು ಹಂಚಿಕೊಂಡಿದ್ದರು. ಆದರೆ, ಮೇನಲ್ಲಿ ಸಿನಿಮಾ ರಿಲೀಸ್ ಆಗುತ್ತಿಲ್.

    ಈ ಸಿನಿಮಾ ನಾನಾ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ಪ್ರಭಾಸ್ (Prabhas) ನಟನೆಯ ಈ ಸಿನಿಮಾದ ಮತ್ತೊಂದು ಪೋಸ್ಟರ್ (Poster) ಮೊನ್ನೆಯಷ್ಟೇ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಭೈರವ (Bhairava) ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಜುಟ್ಟು ಬಿಟ್ಟುಕೊಂಡು ಸ್ಟೈಲಿಶ್ ಆಗಿ ಕಂಡಿದ್ದಾರೆ ಪ್ರಭಾಸ್. ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  • ಪ್ರಭಾಸ್ ಜೊತೆ ಕೀರ್ತಿ ಸುರೇಶ್ ಡ್ಯುಯೇಟ್‌

    ಪ್ರಭಾಸ್ ಜೊತೆ ಕೀರ್ತಿ ಸುರೇಶ್ ಡ್ಯುಯೇಟ್‌

    ಸೌತ್ ಬ್ಯೂಟಿ ಕೀರ್ತಿ ಸುರೇಶ್ (Keerthy Suresh) ಬಂಪರ್ ಚಾನ್ಸ್‌ವೊಂದನ್ನು ಗಿಟ್ಟಿಸಿಕೊಂಡಿದ್ದಾರೆ. ಸೌತ್ ಮತ್ತು ಬಾಲಿವುಡ್‌ನಲ್ಲಿ ಬ್ಯುಸಿಯಿರುವ ಮಹಾನಟಿ ಕೀರ್ತಿ ಸುರೇಶ್ ಈಗ ಡಾರ್ಲಿಂಗ್ ಪ್ರಭಾಸ್ (Prabhas)  ಜೊತೆ ರೊಮ್ಯಾನ್ಸ್ ಮಾಡುವ ಚಾನ್ಸ್ ಸಿಕ್ಕಿದೆ.

    ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಸದಾ ಗ್ರ್ಯಾಮರ್‌ಗಿಂತ ನಟನೆಯ ಗ್ರಾಮರ್‌ಗೆ ಬೆಲೆ ಕೊಡುವ ನಟಿ. ಪಾತ್ರ ಹೇಗೆ ಇರಲಿ, ಆ ಪಾತ್ರದಿಂದ ಜನರಿಗೆ ಏನು ಸಿಗುತ್ತೆ. ನಟನೆಗೆ ಸ್ಕೋಪ್ ಇದ್ಯಾ? ಎಂದು ನೋಡುತ್ತಾರೆ. ಅದಕ್ಕೆ ತಾಜಾ ಉದಾಹರಣೆ ಅಂದರೆ ‘ಮಹಾನಟಿ’ ಚಿತ್ರ. ಇದೀಗ ನಟನೆಗೆ ಹೆಚ್ಚು ಒತ್ತು ಇರುವ ಸ್ಪಿರಿಟ್ ಸಿನಿಮಾದಲ್ಲಿ ನಟಿಸುವ ಅವಕಾಶ ಬಾಚಿಕೊಂಡಿದ್ದಾರೆ. ಇದನ್ನೂ ಓದಿ:ಮುಂಬೈ ಕರಾವಳಿ ಸುರಂಗ ಮಾರ್ಗ ಮೆಚ್ಚಿದ ಬಿಗ್ ಬಿ

    ಅರ್ಜುನ್ ರೆಡ್ಡಿ, ಅನಿಮಲ್ (Animal) ಸಿನಿಮಾಗಳ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ಮೂಡಿ ಬರಲಿರುವ ‘ಸ್ಪಿರಿಟ್’ (Spirit Film) ಚಿತ್ರದಲ್ಲಿ ಪ್ರಭಾಸ್ ಜೊತೆ ಮುಖ್ಯಭೂಮಿಕೆಯಲ್ಲಿ ಕೀರ್ತಿ ಸುರೇಶ್ ಕೂಡ ನಟಿಸಲಿದ್ದಾರೆ.

    ಇದರ ಜೊತೆ ವರುಣ್ ಧವನ್ (Varun Dhawan) ನಟನೆಯ ‘ಬೇಬಿ ಜಾನ್’ ಸಿನಿಮಾದಲ್ಲಿಯೂ ಕೀರ್ತಿ ನಟಿಸುತ್ತಿದ್ದಾರೆ. ಈ ಮೂಲಕ ಬಾಲಿವುಡ್‌ಗೂ ಪಾದಾರ್ಪಣೆ ಮಾಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ಬ್ಯೂಟಿಗೆ ಯಾವ ಚಿತ್ರ ಕೈಹಿಡಿಯಲಿದೆ ಕಾಯಬೇಕಿದೆ.

  • ಚುನಾವಣೆ ಎಫೆಕ್ಟ್: ಪ್ರಭಾಸ್ ನಟನೆಯ ‘ಕಲ್ಕಿ’ ರಿಲೀಸ್ ಮುಂದಕ್ಕೆ

    ಚುನಾವಣೆ ಎಫೆಕ್ಟ್: ಪ್ರಭಾಸ್ ನಟನೆಯ ‘ಕಲ್ಕಿ’ ರಿಲೀಸ್ ಮುಂದಕ್ಕೆ

    ಪ್ರಭಾಸ್ ಮತ್ತು ಅಮಿತಾಭ್ ಬಚ್ಚನ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಕಲ್ಕಿ ಸಿನಿಮಾ ಮೇ 9ಕ್ಕೆ ಬಿಡುಗಡೆ ಆಗಬೇಕಿತ್ತು. ಈ ಮಾಹಿತಿಯನ್ನು ಸ್ವತಃ ಬಿಗ್ ಬಿ ಅಮಿತಾಭ್ ಅವರೇ ಹೇಳಿಕೊಂಡಿದ್ದರು. ಆದರೆ, ಅಂದು ಸಿನಿಮಾ ರಿಲೀಸ್ ಆಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಲೋಕಸಭೆ ಚುನಾವಣೆ ಕಾರಣದಿಂದಾಗಿ ಬಿಡುಗಡೆಯನ್ನು ಚುನಾವಣೆ ನಂತರ ಮಾಡಲು ನಿರ್ಧರಿಸಿದ್ದಾರಂತೆ.

    ಸಿನಿಮಾ (Kalki)  ರಿಲೀಸ್ (release) ಡೇಟ್ ಅನ್ನು ಸ್ವತಃ ಅಮಿತಾಭ್ ಅವರೇ ಮಾಡಿದ್ದರೂ, ಮುಂದೂಡಿರುವ ವಿಚಾರವನ್ನು ಚಿತ್ರತಂಡ ಇನ್ನೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ಮುಂದೂಡುವುದು ಪಕ್ಕಾ ಎಂದೇ ಹೇಳಲಾಗುತ್ತಿದೆ.

    ಮೊನ್ನೆಯಷ್ಟೇ ಅಮಿತಾಭ್ ಬಚ್ಚನ್ ಸಿನಿಮಾ ಶೂಟಿಂಗ್ (Shooting) ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಿನ್ನೆ ರಾತ್ರಿ ಶೂಟಿಂಗ್ ಮುಗಿಸಿ ಬಂದೆ. ಚಿತ್ರದ ಚಿತ್ರೀಕರಣ ಮುಗಿದಿದೆ. ಅಂದುಕೊಂಡಂತೆ ಮೇ 9ಕ್ಕೆ ಚಿತ್ರ ರಿಲೀಸ್ ಆಗಲಿದೆ ಎಂದು ಅವರು ಮಾಹಿತಿಯನ್ನು ಹಂಚಿಕೊಂಡಿದ್ದರು. ಇತ್ತೀಚೆಗಷ್ಟೇ ನಟ ಅಮಿತಾಭ್ ಬಚ್ಚನ್  (Amitabh Bachchan) ಅವರ ಹುಟ್ಟು ಹಬ್ಬದ (Birthday) ದಿನದಂದು ಕಲ್ಕಿ ಸಿನಿಮಾ ಟೀಮ್ ಅಮಿತಾಭ್ ಬಚ್ಚನ್ ಪಾತ್ರದ ಫಸ್ಟ್ ಲುಕ್(First Look)  ರಿಲೀಸ್ ಮಾಡಿತ್ತು. ವಿಚಿತ್ರ ವೇಷದಲ್ಲಿ ಅಮಿತಾಭ್ ಕಾಣಿಸಿಕೊಂಡಿದ್ದು ಪಾತ್ರದ ಬಗ್ಗೆ ಕುತೂಹಲ ಮೂಡಿಸಿತ್ತು.

    ಈ ಸಿನಿಮಾ ನಾನಾ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ಪ್ರಭಾಸ್ (Prabhas) ನಟನೆಯ ಈ ಸಿನಿಮಾದ ಮತ್ತೊಂದು ಪೋಸ್ಟರ್ (Poster) ಮೊನ್ನೆಯಷ್ಟೇ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಭೈರವ (Bhairava) ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಜುಟ್ಟು ಬಿಟ್ಟುಕೊಂಡು ಸ್ಟೈಲಿಶ್ ಆಗಿ ಕಂಡಿದ್ದಾರೆ ಪ್ರಭಾಸ್. ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

     

    ಜೊತೆಗೆ ಈ ಸಿನಿಮಾದಲ್ಲಿ ರಾಜಮೌಳಿಯೂ (Rajamouli) ಪಾತ್ರ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಸಿನಿಮಾದಲ್ಲಿ ಅವರು ಮಹತ್ವದ ಪಾತ್ರವೊಂದನ್ನು ನಿರ್ವಹಿಸಿದ್ದು, ಅದು ವಿಜ್ಞಾನಿ (Scientist) ಪಾತ್ರವಾಗಿದೆಯಂತೆ. ಅಧಿಕೃತವಾಗಿ ಚಿತ್ರತಂಡ ಯಾವುದೇ ಮಾಹಿತಿ ಹಂಚಿಕೊಳ್ಳದೇ ಇದ್ದರೂ, ಇಂಥದ್ದೊಂದು ಸುದ್ದಿಯಂತೂ ಸಖತ್ ಜೋರಾಗಿಯೇ ಕೇಳಿ ಬರುತ್ತಿದೆ.

  • ನಟಿ ಮೃಣಾಲ್ ಠಾಕೂರ್ ಗೆ ಮತ್ತೊಂದು ಬಿಗ್ ಆಫರ್

    ನಟಿ ಮೃಣಾಲ್ ಠಾಕೂರ್ ಗೆ ಮತ್ತೊಂದು ಬಿಗ್ ಆಫರ್

    ಸೀತಾ ರಾಮಂ ಖ್ಯಾತಿಯ ಜೋಡಿ ಮತ್ತೆ ಒಂದಾಗಲು ಸಜ್ಜಾಗಿದೆ. ಚಿತ್ರದ ನಿರ್ದೇಶಕ ಹನು ರಾಘವಪುಡಿ ಹಾಗೂ ನಾಯಕಿ ಮೃಣಾಲ್ ಠಾಕೂರ್ ಇಬ್ಬರೂ ಒಟ್ಟಾಗಿ ಮತ್ತೊಂದು ಚಿತ್ರಕ್ಕೆ ಕೆಲಸ ಮಾಡಲಿದ್ದಾರೆ. ಈ ಚಿತ್ರಕ್ಕೆ ಪ್ರಭಾಸ್ ನಾಯಕ. ಇದೇ ಮೊದಲ ಬಾರಿಗೆ ಪ್ರಭಾಸ್ ಜೊತೆ ಮೃಣಾಲ್ ನಟಿಸುತ್ತಿರುವುದು ವಿಶೇಷ.

    ಮೃಣಾಲ್ ಠಾಕೂರ್ (Mrunal Thakur ಈ ಹಿಂದೆ ಮತ್ತೊಂದು ಬಂಪರ್ ಚಾನ್ಸ್ ಗಿಟ್ಟಿಸಿಕೊಂಡಿದ್ದರು. ‘ಹಾಯ್ ನಾನ್ನಾಚಿತ್ರದ ಸಕ್ಸಸ್ ನಂತರ ಐಕಾನ್ ಸ್ಟಾರ್ ಜೊತೆ ಮೃಣಾಲ್ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ. ‘ಪುಷ್ಪಚಿತ್ರದ ನಂತರ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರುವ ಅಲ್ಲು ಅರ್ಜುನ್ ಜೊತೆ ನಟಿಸಬೇಕು ಎಂಬುದು ಎಲ್ಲಾ ನಟಿಮಣಿಯರ ಕನಸಾಗಿದೆ. ಹೀಗಿರುವಾಗ ಅಲ್ಲು ಅರ್ಜುನ್ ಜೊತೆ ನಟಿಸುವ ಗೋಲ್ಡನ್ ಚಾನ್ಸ್ ಮೃಣಾಲ್ಗೆ ಸಿಕ್ಕಿದೆ. ‘ಅನಿಮಲ್‘ (Animal) ಚಿತ್ರದ ಸ್ಟಾರ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

    ಅರ್ಜುನ್ ರೆಡ್ಡಿ, ಕಬೀರ್ ಸಿಂಗ್, ಅನಿಮಲ್ ಸಕ್ಸಸ್ ನಂತರ ಸಂದೀಪ್ ರೆಡ್ಡಿ ವಂಗಾ ಈಗ ಪ್ರಭಾಸ್ (Prabhas) ನಟನೆಯಸ್ಪಿರಿಟ್ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಇದರ ಜೊತೆ ಅಲ್ಲು ಅರ್ಜುನ್ (Allu Arjun) ಜೊತೆ ಹೊಸ ಸಿನಿಮಾ ಮಾಡಲು ಮಾತುಕತೆಯಾಗಿದೆ. ಚಿತ್ರಕ್ಕೆ ಮೃಣಾಲ್ ನಾಯಕಿ ಎಂದು ಸಂದೀಪ್ ಅಧಿಕೃತ ಮಾಹಿತಿ ನೀಡಿದ್ದಾರೆ.

    ಅನಿಮಲ್ ಪಾರ್ಟ್ 2′ಗೆ ಕೂಡ ತೆರೆಮರೆಯಲ್ಲಿ ಭಾರೀ ಸಿದ್ಧತೆ ನಡೆಯುತ್ತಿದೆ. ಅಲ್ಲು ಅರ್ಜುನ್ ಜೊತೆ ಸಂದೀಪ್ ಕೈಜೋಡಿಸಿರೋದ್ರಿಂದ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆಯಿದೆ. ಮೊದಲ ಬಾರಿಗೆ ಅಲ್ಲು ಅರ್ಜುನ್ ಮತ್ತು ಮೃಣಾಲ್ ಜೋಡಿಯಾಗುತ್ತಿದ್ದಾರೆ.

     

    ಸಂದೀಪ್ ನಿರ್ದೇಶನ ಮಾಡ್ತಿದ್ದಾರೆ ಅಂದರೆ ಅಲ್ಲಿ ಆ್ಯಕ್ಷನ್ ಸೀನ್ಗಳಿಗೆ ಕೊರತೆ ಇರಲ್ಲ. ಅಲ್ಲು ಅರ್ಜುನ್ ಮತ್ತು ಮೃಣಾಲ್ ಕೆಮಿಸ್ಟ್ರಿ ಮತ್ತು ಕಥೆಯನ್ನು ಯಾವ ರೀತಿ ತೆರೆಯ ಮೇಲೆ ಸಂದೀಪ್ ಪ್ರಸೆಂಟ್ ಮಾಡ್ತಾರೆ ಎಂಬುದರ ಬಗ್ಗೆ ಫ್ಯಾನ್ಸ್ಗೆ ಕೌತುಕ ಮೂಡಿಸಿದೆ.

  • ‘ಆಡು ಜೀವಿತಂ’ ಟ್ರೈಲರ್ ನೋಡಿ ಪೃಥ್ವಿರಾಜ್‌ರನ್ನು ಹಾಡಿ ಹೊಗಳಿದ ಪ್ರಭಾಸ್

    ‘ಆಡು ಜೀವಿತಂ’ ಟ್ರೈಲರ್ ನೋಡಿ ಪೃಥ್ವಿರಾಜ್‌ರನ್ನು ಹಾಡಿ ಹೊಗಳಿದ ಪ್ರಭಾಸ್

    ಹುಮುಖ ಪ್ರತಿಭೆ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ‘ಸಲಾರ್’ (Salaar) ಸಿನಿಮಾದ ಸಕ್ಸಸ್ ನಂತರ ‘ಆಡು ಜೀವಿತಂ’ (Aadujeevitham) ಚಿತ್ರದ ಟ್ರೈಲರ್ ಮೂಲಕ ಸದ್ದು ಮಾಡ್ತಿದ್ದಾರೆ. ಟ್ರೈಲರ್‌ನಲ್ಲಿ ಪೃಥ್ವಿರಾಜ್ ಬೆಚ್ಚಿ ಬೀಳಿಸುವ ಅವತಾರ ಮತ್ತು ಅವರ ನಟನೆ ನೋಡಿ ಪ್ರಭಾಸ್ (Prabhas) ಭೇಷ್ ಎಂದಿದ್ದಾರೆ. ಇದನ್ನೂ ಓದಿ:‘ಗೂಗ್ಲಿ’ ನಟಿ ಕೃತಿ ಕರಬಂಧ ಮದುವೆ ಯಾವಾಗ, ಎಲ್ಲಿ?

    ‘ಆಡು ಜೀವಿತಂ’ ಇದೇ ಮಾರ್ಚ್ 28ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಪೃಥ್ವಿರಾಜ್- ಅಮಲಾ ಪೌಲ್ (Amala Paul) ನಟಿಸಿರುವ ಈ ಚಿತ್ರದಲ್ಲಿ ಈ ಹಿಂದೆ ಎಂದೂ ಕಾಣಿಸಿಕೊಂಡಿರದ ಶೇಡ್‌ನಲ್ಲಿ ಪೃಥ್ವಿರಾಜ್ ನಟಿಸಿದ್ದಾರೆ. ಅವರ ಲುಕ್ ಭಯಂಕರವಾಗಿದೆ. ಸಲಾರ್ ನಟನ ನಯಾ ಲುಕ್ ನೋಡಿ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

    ಇನ್ನೂ ಟ್ರೈಲರ್‌ನಲ್ಲಿ ಪೃಥ್ವಿರಾಜ್ ಅಲಿಯಾಸ್ ‘ಸಲಾರ್’ ಚಿತ್ರದ ವರದರಾಜ್ ಮನ್ನಾರ್ ಅವರ ಈ ಗೆಟಪ್ ಕಂಡು ಪ್ರಭಾಸ್ ಶಾಕ್ ಆಗಿದ್ದಾರೆ. ವರದರಾಜ ಮನ್ನಾರ್ ಪಾತ್ರ ಮಾಡಿದ್ದು, ಇದೇ ವ್ಯಕ್ತಿನಾ ಅಂತ ನಂಬಲಾಗುತ್ತಿಲ್ಲ ಎಂದಿದ್ದಾರೆ. ಪೃಥ್ವಿರಾಜ್ ಅವರಿಗೆ ಮನಪೂರ್ವಕವಾಗಿ ಶುಭಾಶಯವನ್ನೂ ಕೋರಿದ್ದಾರೆಕ್ಸಿನಿಮಾ ಬ್ಲ್ಯಾಕ್ ಬಸ್ಟರ್ ಗ್ಯಾರಂಟಿ ಎಂದು ಪ್ರಭಾಸ್ ಭವಿಷ್ಯ ನುಡಿದಿದ್ದಾರೆ.

    ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ನಿರ್ದೇಶನದ ಈ `ಆಡು ಜೀವಿತಂ’ ಚಿತ್ರದ ಕಥೆ ಇಮಿಗ್ರಟ್ಸ್ ಸುತ್ತವೇ ಸಾಗುತ್ತದೆ. ತನ್ನ ಹೊಟ್ಟೆ ಪಾಡಿಗಾಗಿ ಕೆಲಸ ಅರಸಿ ಸೌದಿ ಅರೇಬಿಯಾಗೆ ವಲಸೆ ಹೋಗುವ ನಸೀಬ್ ಮೊಹಮ್ಮದ್ ಎನ್ನುವ ಕೇರಳದ ವ್ಯಕ್ತಿ ಅಲ್ಲಿ ಅನುಭವಿಸುವ ಕಷ್ಟ, ಎದುರಿಸುವ ಸಮಸ್ಯೆ ಹೈಲೆಟ್. ಇನ್ನು ಆತನ ಪಾಸ್ಪೋರ್ಟ್ ಕಸಿದು ಆತನಿಗೆ ಕೊಡುವ ಹಿಂಸೆಗಳು ಆ ಬಿಸಿಲಿನ ಮರುಭೂಮಿಯಲ್ಲಿ ಆತ ಪಡುವ ಯಾತನೆ ಕುರಿತು ಸಾಗುವ ಕಥೆ ಇಲ್ಲಿದೆ.

     

    View this post on Instagram

     

    A post shared by Amala Paul (@amalapaul)

    ನಿರ್ದೇಶಕ ಬ್ಲೆಸ್ಸಿ ಅವರ ಹದಿನೈದು ವರ್ಷದ ಕನಸಿನ ಕಥೆ ಇದು. ಅವರ ಕಲ್ಪನೆಯ ಪಾತ್ರದಲ್ಲಿ ವಲಸಿಗ ವ್ಯಕ್ತಿಯಾಗಿ ಹೊಸ ಲುಕ್ ಮೂಲಕ ಕಾಣಿಸಿಕೊಂಡಿರುವ ಪೃಥ್ವಿರಾಜ್ ಸುಕುಮಾರನ್, ಹಲವಾರು ವರ್ಷಗಳಿಂದ ಈ ಚಿತ್ರಕ್ಕಾಗಿ ದುಡಿದಿದ್ದಾರೆ. ಇಡೀ ಚಿತ್ರತಂಡ ಹಗಲು ರಾತ್ರಿ ಎನ್ನದೆ ಚಿತ್ರದ ಔಟ್ಪುಟ್ ಗಾಗಿ ದುಡಿದಿದೆ. ಪೃಥ್ವಿರಾಜ್ ನಿರೀಕ್ಷೆಯ ಚಿತ್ರ ಇದಾಗಿದ್ದು, ಬ್ಲೆಸ್ಸಿ ನಿರ್ದೇಶನದ ‘ಆಡುಜೀವಿತಂ’ 2008ರಲ್ಲಿ ಬೆನ್ಯಾಮಿನ್ ಬರೆದ ಅದೇ ಹೆಸರಿನ ಮಲಯಾಳಂ ಕಾದಂಬರಿ ಸಿನಿಮಾ ಇದು.

    ನಜೀಬ್ ಎಂಬ ವಲಸಿಗ ಕಾರ್ಮಿಕನ ಕಥೆಯನ್ನು ಮತ್ತು ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಅವನು ಅನುಭವಿಸುವ ದುಃಸ್ಥಿತಿ ಮತ್ತು ಅಸಹಾಯಕತೆಯ ಕಥೆ ಚಿತ್ರದ ಸಾರಾಂಶ ಎನ್ನುತ್ತಾರೆ. ಪೃಥ್ವಿರಾಜ್ ನಜೀಬ್ ಪಾತ್ರ ನಿರ್ವಹಿಸಿದ್ದಾರೆ.

    ಚಿತ್ರದ ನಜೀಬ್ ಪಾತ್ರಕ್ಕಾಗಿ ಪೃಥ್ವಿರಾಜ್ ಸಾಕಷ್ಟು ದೇಹವನ್ನು ದಂಡಿಸಿದ್ದಾರೆ. ಅವರು ಸಿನುಮಾಗಾಗಿ ಸುಮಾರು 30 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಕಳೆದ ಚಿತ್ರ ಐದು ವರ್ಷಗಳಿಂದ ತಯಾರಾಗುತ್ತಿದೆ ಎಂಬುದು ವಿಶೇಷ. ಚಿತ್ರದ ತಾಂತ್ರಿಕ ವಿಭಾಗದಲ್ಲಿ ಎ.ಆರ್.ರೆಹಮಾನ್ ಅವರ ಸಂಗೀತ, ಸುನಿಲ್ ಕೆ.ಎಸ್ ಅವರ ಕ್ಯಾಮೆರಾ ಕೈಚಳಕ, ರೆಸುಲ್ ಪೂಕುಟ್ಟಿ ಅವರ ಸೌಂಡ್ ಡಿಸೈನ್ ಮತ್ತು ಶ್ರೀಕರ್ ಪ್ರಸಾದ್ ಅವರ ಸಂಕಲನ ಕೆಲಸವಿದೆ.

  • ಪ್ರಭಾಸ್ ಅಭಿಮಾನಿ ಮೇಲೆ ಅಲ್ಲು ಅರ್ಜುನ್ ಫ್ಯಾನ್ಸ್ ಹಲ್ಲೆ: ಬೆಂಗಳೂರಿನಲ್ಲಿ ನಡೆದ ಘಟನೆ

    ಪ್ರಭಾಸ್ ಅಭಿಮಾನಿ ಮೇಲೆ ಅಲ್ಲು ಅರ್ಜುನ್ ಫ್ಯಾನ್ಸ್ ಹಲ್ಲೆ: ಬೆಂಗಳೂರಿನಲ್ಲಿ ನಡೆದ ಘಟನೆ

    ಕ್ರಿಕೆಟ್ ಆಡುವಾಗ ತೆಲುಗು ನಟರಾದ ಪ್ರಭಾಸ್ (Prabhas) ಮತ್ತು ಅಲ್ಲು ಅರ್ಜುನ್ (Allu Arjun) ಅಭಿಮಾನಿಗಳು ಗಲಾಟೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪ್ರಭಾಸ್ ಅಭಿಮಾನಿಯೊಬ್ಬನ ಮೇಲೆ ಅಲ್ಲು ಅರ್ಜುನ್ ಫ್ಯಾನ್ಸ್ ಹಿಗ್ಗಾಮುಗ್ಗ ತಳಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ, ಸೂಕ್ತ ಕ್ರಮ ತೆಗೆದುಕೊಳ್ಳಲು ಆಗ್ರಹಿಸಲಾಗಿದೆ.

    ವೈರಲ್ ಆಗಿರುವ ವಿಡಿಯೋದಲ್ಲಿ ಜೈ ಅಲ್ಲು ಅರ್ಜುನ್ ಅಂತ ಹೇಳು ಎನ್ನುವ ಮಾತುಗಳು ಪದೇ ಪದೇ ಕೇಳಿ ಬರುತ್ತಿವೆ. ಪ್ರಭಾಸ್ ಅಭಿಮಾನಿ ಹೇಳದೇ ಇದ್ದಾಗ ರಕ್ತ ಬರುವಂತೆ ಹೊಡೆಯಲಾಗಿದೆ. ಆ ಹುಡುಗನ ಬಟ್ಟೆ ಹರಿದಿದೆ. ನಾಲ್ಕೈದು ಹುಡುಗರು ಒಂದೇ ಸಮನೆ ಬಡಿದಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ಕ್ರಮ ತೆಗೆದುಕೊಳ್ಳಲು ಸೋಷಿಯಲ್ ಮೀಡಿಯಾದಲ್ಲಿ ವಿನಂತಿಸಿದ್ದಾರೆ.

    ಫ್ಯಾನ್ಸ್ ವಾರ್ ಇದೇ ಮೊದಲೇನೂ ಅಲ್ಲ. ಅದರಲ್ಲೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಇದೆ. ಕನ್ನಡದಲ್ಲಿ ಕೇವಲ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಅಭಿಮಾನಿಗಳು ಕೆರಚಾಟ ಮಾಡುತ್ತಾರೆ. ಆದರೆ, ತೆಲುಗು ಮತ್ತು ತಮಿಳು ಚಿತ್ರೊದ್ಯಮದಲ್ಲಿ ಸಾಕಷ್ಟು ಗಲಾಟೆಗಳೇ ನಡೆದಿವೆ.

     

    ಆ ಮನಸ್ಥಿತಿ ಬೆಂಗಳೂರಿನಲ್ಲಿರೋ ಪರಭಾಷೆ ತಾರೆಯರ ಅಭಿಮಾನಿಗಳಿಗೂ ಹರಿದು ಬಂದಿದ್ದಾರೆ. ಹಾಗಾಗಿ ಮೈದಾನದಲ್ಲಿ ಆ ರೀತಿಯಲ್ಲಿ ಅವರು ಕಿತ್ತಾಡಿದ್ದಾರೆ. ಮುಂದಲ್ಲಿ ರಕ್ತ ಬರುವಂತೆ ಹೊಡೆದಿದ್ದಾರೆ.

  • ‘ಕಲ್ಕಿ’ಯಲ್ಲಿ ಭೈರವನ ಅವತಾರವೆತ್ತಿದ ನಟ ಪ್ರಭಾಸ್

    ‘ಕಲ್ಕಿ’ಯಲ್ಲಿ ಭೈರವನ ಅವತಾರವೆತ್ತಿದ ನಟ ಪ್ರಭಾಸ್

    ಪ್ರಭಾಸ್ (Prabhas) ನಟನೆಯ ಕಲ್ಕಿ ಸಿನಿಮಾದ ಮತ್ತೊಂದು ಪೋಸ್ಟರ್ (Poster) ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಭೈರವ (Bhairava) ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಜುಟ್ಟು ಬಿಟ್ಟುಕೊಂಡು ಸ್ಟೈಲಿಶ್ ಆಗಿ ಕಂಡಿದ್ದಾರೆ ಪ್ರಭಾಸ್. ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಕಲ್ಕಿ ಸಿನಿಮಾ ನಾನಾ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ಈ ಸಿನಿಮಾದಲ್ಲಿ ರಾಜಮೌಳಿಯೂ (Rajamouli) ಪಾತ್ರ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಸಿನಿಮಾದಲ್ಲಿ ಅವರು ಮಹತ್ವದ ಪಾತ್ರವೊಂದನ್ನು ನಿರ್ವಹಿಸಿದ್ದು, ಅದು ವಿಜ್ಞಾನಿ (Scientist) ಪಾತ್ರವಾಗಿದೆಯಂತೆ. ಅಧಿಕೃತವಾಗಿ ಚಿತ್ರತಂಡ ಯಾವುದೇ ಮಾಹಿತಿ ಹಂಚಿಕೊಳ್ಳದೇ ಇದ್ದರೂ, ಇಂಥದ್ದೊಂದು ಸುದ್ದಿಯಂತೂ ಸಖತ್ ಜೋರಾಗಿಯೇ ಕೇಳಿ ಬರುತ್ತಿದೆ.

    ಪ್ರತಿ ಹಂತದಲ್ಲೂ ನಾನಾ ರೀತಿಯ ಸುದ್ದಿಗಳನ್ನು ಮಾಡುತ್ತಲೇ ಬರುತ್ತಿದೆ ಚಿತ್ರತಂಡ. ಮೊನ್ನೆಯಷ್ಟೇ ನಟ ಅಮಿತಾಭ್ ಬಚ್ಚನ್  (Amitabh Bachchan) ಅವರ ಹುಟ್ಟು ಹಬ್ಬದ (Birthday) ದಿನದಂದು ಕಲ್ಕಿ ಸಿನಿಮಾ ಟೀಮ್ ಅಮಿತಾಭ್ ಬಚ್ಚನ್ ಪಾತ್ರದ ಫಸ್ಟ್ ಲುಕ್(First Look)  ರಿಲೀಸ್ ಮಾಡಿತ್ತು. ವಿಚಿತ್ರ ವೇಷದಲ್ಲಿ ಅಮಿತಾಭ್ ಕಾಣಿಸಿಕೊಂಡಿದ್ದು ಪಾತ್ರದ ಬಗ್ಗೆ ಕುತೂಹಲ ಮೂಡಿಸಿತ್ತು.

    ಈ ನಡುವೆ ಕಲ್ಕಿ (Kalki) ಸಿನಿಮಾದ ಫೋಟೋವೊಂದು ಲೀಕ್ ಆಗಿತ್ತು. ಸಿನಿಮಾದ ಪ್ರಮುಖ ಗೆಟಪ್ ಒಳಗೊಂಡಿದ್ದ ಆ ಫೋಟೋವನ್ನು ಯಾರು ಲೀಕ್ ಮಾಡಿದ್ದಾರೆ ಎಂದು ನಿರ್ಮಾಣ ಸಂಸ್ಥೆ ತಲೆಕೆಡಿಸಿಕೊಂಡಿತ್ತು. ಸಿನಿಮಾ ರಿಲೀಸ್ ಗೂ ಮುನ್ನ ಹೀಗೆ ಪಾತ್ರಗಳ ಬಗ್ಗೆ ರಿವಿಲ್ ಮಾಡುತ್ತಿರುವುದು ಕೋಪ ತರಿಸಿತ್ತು. ಇದೀಗ ನಿರ್ಮಾಪಕರು ಈ ಕುರಿತು ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ.

     

    ಕಲ್ಕಿ ಸಿನಿಮಾದ ವಿಎಫ್ಎಕ್ಷ್  ಮಾಡುತ್ತಿರುವ ಸಂಸ್ಥೆಯೇ ಫೋಟೋವನ್ನು ಲೀಕ್ ಮಾಡಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಂಸ್ಥೆಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಿರ್ಮಾಪಕರು ಪೊಲೀಸ್ ಮೊರೆ ಹೋಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

  • ಪ್ರಭಾಸ್ ಬೆನ್ನು ಬಿಡದ ಜ್ಯೋತಿಷಿ- ಸ್ಫೋಟಕ ಭವಿಷ್ಯ ನುಡಿದ ಸ್ವಾಮಿ

    ಪ್ರಭಾಸ್ ಬೆನ್ನು ಬಿಡದ ಜ್ಯೋತಿಷಿ- ಸ್ಫೋಟಕ ಭವಿಷ್ಯ ನುಡಿದ ಸ್ವಾಮಿ

    ತೆಲುಗು ಪ್ರಭಾಸ್ (Actor Prabhas) ಎಲ್ಲೇ ಹೋದರೂ, ಈ ಜ್ಯೋತಿಷಿ ವೇಣು ಸ್ವಾಮಿ ಮಾತ್ರ ಬಿಡುತ್ತಿಲ್ಲ. ಒಂದರ ಹಿಂದೊಂದು ಭವಿಷ್ಯ ಹೇಳುತ್ತಿರುತ್ತಾರೆ. ಸಿನಿಮಾ ಫ್ಲಾಪ್ ಆಗುತ್ತವೆ ಎನ್ನುವುದರಿಂದ ಹಿಡಿದು ಪ್ರಭಾಸ್ ಲಗ್ನ ಈ ಜನ್ಮದಲ್ಲಿ ಸಾಧ್ಯ ಇಲ್ಲ ಅನ್ನೋ ತನಕ ಇವರ ವಾಣಿ ವಿಜೃಂಭಿಸಿದೆ. ಪ್ರಭಾಸ್ ಫ್ಯಾನ್ಸ್ ತಿರುಗಿ ಬಿದ್ದರೂ ಸ್ವಾಮಿ ಡೋಂಟ್ ಕೇರ್. ಇದೀಗ ಅದೇ ವೇಣು ಸ್ವಾಮಿ ಅವರು ಪ್ರಭಾಸ್ ಕುರಿತು ಹೊಸ ವಿಷಯ ಹೇಳಿದ್ದಾರೆ. ಇದನ್ನೂ ಓದಿ:ತಮಿಳಿನ ಸ್ಟಾರ್ ನಟನಿಗೆ ರಶ್ಮಿಕಾ ನಾಯಕಿ- ಶೂಟಿಂಗ್‌ ವಿಡಿಯೋ ಲೀಕ್‌

    ವೇಣು ಸ್ವಾಮಿ ಹೆಸರು ಹೇಳಿದರೆ ಸಾಕು ಟಾಲಿವುಡ್ ಸ್ಟಾರ್ಸ್ ಬೆಚ್ಚಿ ಬೀಳುತ್ತಾರೆ. ಕಾರಣ ಅವರು ಹೇಳಿದ ಬಹುತೇಕ ಭವಿಷ್ಯ ನಿಜವಾಗಿವೆ. ಸಮಂತಾ ಹಾಗೂ ನಾಗಚೈತನ್ಯ ಹೆಚ್ಚು ದಿನ ಜಂಟಿಯಾಗಿರಲ್ಲ. ಡಿವೋರ್ಸ್ ಖಚಿತ ಎಂದಿದ್ದರು. ಅದು ಸತ್ಯವಾಯಿತು. ಪ್ರಭಾಸ್ 3 ಸಿನಿಮಾ ಗೆಲ್ಲಲ್ಲ ಎಂದಿದ್ದರು. ಅದೂ ನಿಜವಾಯಿತು. ಆಗಲೇ ವೇಣು ಸ್ವಾಮಿ ಹವಾ ಜೋರಾಯಿತು. ಆಗ ಪ್ರಭಾಸ್ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದರು ಸ್ವಾಮಿ. ಪ್ರಭಾಸ್ ಆರೋಗ್ಯದಲ್ಲಿ ಏರುಪೇರಾಗಲಿದೆ. ಅವರ ಮದುವೆ ಈ ಜನ್ಮದಲ್ಲಿ ನಡೆಯಲು ಸಾಧ್ಯವೇ ಇಲ್ಲ ಎಂದಿದ್ದರು. ಪ್ರಭಾಸ್ ಫ್ಯಾನ್ಸ್ ಕಿಡಿಕಾರಿದರು. ಈಗ ಮತ್ತೊಮ್ಮೆ ಪ್ರಭಾಸ್ ಚರಿತ್ರೆ ಹಿಡಿದು ನಿಂತಿದ್ದಾರೆ.

    ಪ್ರಭಾಸ್ ಮದುವೆ ಈ ಜನ್ಮದಲ್ಲಿ ಸಾಧ್ಯ ಇಲ್ಲ. ಅವರ ಜಾತಕವೇ ಇದಕ್ಕೆ ಕಾರಣ. ಹಿಂದೊಮ್ಮೆ ಇದೇ ಮಾತನ್ನು ಹೇಳಿದ್ದೆ. ಈಗ ಮತ್ತೆ ಅದನ್ನೇ ಹೇಳುತ್ತಿದ್ದೇನೆ. ನಾನು ಹೇಳುವುದು ಮಾತ್ರ ಸತ್ಯ. ಪ್ರಭಾಸ್ ಜಾತಕದಲ್ಲಿ ದೋಷ ಇದೆ. ಅದು ನನಗೆ ಗೊತ್ತು. ಹಾಗೆಯೇ ಯಾಕೆ ಮದುವೆ ಆಗಲ್ಲ ಎನ್ನುವ ಕಾರಣವೂ ಗೊತ್ತಿದೆ. ಆದರೆ ಅದನ್ನು ಹೇಳಲು ಸಾಧ್ಯ ಇಲ್ಲ. ಇವರ ತಂದೆ ನಟ ಕೃಷ್ಣಂರಾಜು ಜಾತಕವೂ ನನಗೆ ಗೊತ್ತು.

    ವರ್ಷದ ಕೊನೆಯಲ್ಲಿ ಪ್ರಭಾಸ್ ಮದುವೆ ಆಗುತ್ತಾರೆ. ಹೀಗಂತ ಪ್ರಭಾಸ್ ಖಾಸಾ ಸಂಬಂಧಿ ಹೇಳಿದ್ದರು. ಆದರೆ ಇಲ್ಲಿ ನೋಡಿದರೆ ಸ್ವಾಮಿ ಅಡ್ಡಗಾಲು ಹಾಕುತ್ತಿದ್ದಾರೆ. ಅನುಷ್ಕಾ ಶೆಟ್ಟಿ(Anushka Shetty), ಕೃತಿ ಸನೋನ್ (Kriti Sanon) ಜೊತೆ ಪ್ರಭಾಸ್ ಹೆಸರು ಕೇಳಿತ್ತು. ಅದು ಅಲ್ಲಲ್ಲೇ ನಿಂತಿತು. ಇದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ? ದೇವರಿಗೇ ಗೊತ್ತು. ಈಗಾಗಲೇ ವಯಸ್ಸು 45 ಆಗಿದೆ. ಇನ್ನೈದು ವರ್ಷಕ್ಕೆ ಹಾಫ್ ಸೆಂಚುರಿ. ಸಲ್ಮಾನ್ ಖಾನ್ ಅರವತ್ತರ ಗಡಿ ಮುಟ್ಟಿದ್ದಾರೆ. ಆ ದಾಖಲೆ ಪ್ರಭಾಸ್ ಮುರಿಯುತ್ತಾರಾ ಅಥವಾ ಅದಕ್ಕೂ ಮುಂಚೆ ಮದುವೆ ಆಗಿ ಸೆಟಲ್ ಆಗುತ್ತಾರಾ ಕಾಯಬೇಕಿದೆ.

  • ಹದಿನಾರು ವರ್ಷಗಳ ನಂತರ ಜೊತೆಯಾದ ಪ್ರಭಾಸ್ ಜೊತೆ ಕಂಗನಾ

    ಹದಿನಾರು ವರ್ಷಗಳ ನಂತರ ಜೊತೆಯಾದ ಪ್ರಭಾಸ್ ಜೊತೆ ಕಂಗನಾ

    ಡಾ.ರಾಜ್‌ಕುಮಾರ್‌ ನಟನೆಯ ‘ಬೇಡರ ಕಣ್ಣಪ್ಪ’ ಸಿನಿಮಾ ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ. ಹೊಸ ರೂಪದಲ್ಲಿ ‘ಭಕ್ತ ಕಣ್ಣಪ್ಪ’ ಸಿನಿಮಾವಾಗಿ ಮೂಡಿ ಬರಲಿದ್ದು, ಬಾಹುಬಲಿ ಪ್ರಭಾಸ್ (Prabhas) ಪ್ರಮುಖ ಪಾತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಹೇಳಲಾಗಿತ್ತು. ಈ ಸಿನಿಮಾದಲ್ಲಿ ಪ್ರಭಾಸ್ ಶಿವನಾಗಿ ಕಾಣಿಸಿಕೊಳ್ಳಲಿದ್ಧಾರೆ.

    ಮತ್ತೊಂದು ಅಚ್ಚರಿಯ ಸಂಗತಿ ಅಂದರೆ, ಶಿವನ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡರೆ, ಪಾರ್ವತಿಯ ಪಾತ್ರಕ್ಕೆ ಕಂಗನಾ ರಣಾವತ್ (Kangana Ranaut) ಅವರನ್ನು ಆಯ್ಕೆ ಮಾಡಲಾಗಿದೆಯಂತೆ. 16 ವರ್ಷಗಳ ನಂತರ ಪ್ರಭಾಸ್ ಮತ್ತು ಕಂಗನಾ ಒಟ್ಟಾಗಿ ನಟಿಸಲಿದ್ದಾರೆ. ಈ ಹಿಂದೆ ಪ್ರಭಾಸ್ ನಟನೆಯ ಏಕ್ ನಿರಂಜನ್ ಹೆಸರಿನ ತೆಲುಗು ಚಿತ್ರದಲ್ಲಿ ನಟಿಸಿದ್ದರು.

    1952ರಲ್ಲಿ ಡಾ.ರಾಜ್‌ಕುಮಾರ್ ‘ಬೇಡರ ಕಣ್ಣಪ್ಪ’ ಸಿನಿಮಾದಲ್ಲಿ ನಟಿಸಿದ್ದರು. ಅಣ್ಣಾವ್ರು ಮಾಡಿದ್ದ ಪಾತ್ರವನ್ನೇ ಕೃಷ್ಣಂ ರಾಜು ಅವರು ನಟಿಸಿ ಸೈ ಎನಿಸಿಕೊಂಡಿದ್ದರು. ಈ ಸಿನಿಮಾ ಕೃಷ್ಣಂ ರಾಜು (Krishnam Raju) ಅವರ ವೃತ್ತಿರಂಗದಲ್ಲಿ ಬಿಗ್ ಬ್ರೇಕ್ ಕೊಟ್ಟಿತ್ತು. ಚಿತ್ರ ಸಕ್ಸಸ್‌ಫುಲ್ ಪ್ರದರ್ಶನ ಕಂಡಿತ್ತು. ಇದೇ ಸಿನಿಮಾವನ್ನು ಹೊಸ ವರ್ಷನ್‌ನಲ್ಲಿ ಪ್ರಭಾಸ್ ನಿರ್ಮಿಸುವ ಕನಸು ಅವರಿಗಿತ್ತು. ಆದರೆ ಕಳೆದ ವರ್ಷ ಅವರು ನಿಧನರಾದರು.

     

    ‘ಬೇಡರ ಕಣ್ಣಪ್ಪ’ (Bhakta Kannappa) ಸಿನಿಮಾವನ್ನು ಹೊಸ ರೂಪದಲ್ಲಿ ನಟ ಮಂಚು ವಿಷ್ಣು (Manchu Vishnu) ನಿರ್ಮಾಣ ಮಾಡುತ್ತಿದ್ದಾರೆ. ಕಣ್ಣಪ್ಪನ ಪಾತ್ರದಲ್ಲಿ ಮಂಚು ವಿಷ್ಣು ನಟಿಸುತ್ತಿದ್ದಾರೆ. 150 ಕೋಟಿ. ರೂ ಬಜೆಟ್‌ನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಆಗಲೇ ಹಲವಾರು ಕಂತುಗಳನ್ನು ಚಿತ್ರೀಕರಣ ಕೂಡ ಆಗಿದೆ.

  • ಪ್ರಭಾಸ್ ಜಾತಕದಲ್ಲಿ ದೋಷ- ಜ್ಯೋತಿಷಿ ಭವಿಷ್ಯಕ್ಕೆ ಫ್ಯಾನ್ಸ್ ಶಾಕ್

    ಪ್ರಭಾಸ್ ಜಾತಕದಲ್ಲಿ ದೋಷ- ಜ್ಯೋತಿಷಿ ಭವಿಷ್ಯಕ್ಕೆ ಫ್ಯಾನ್ಸ್ ಶಾಕ್

    ಟಾಲಿವುಡ್ ಪ್ರಭಾಸ್ (Prabhas) ಫ್ಯಾನ್ಯ್‌ಗೆ ಮತ್ತೆ ಆತಂಕ ಹುಟ್ಟಿಸಿದ್ದಾರೆ ಖ್ಯಾತ ಜ್ಯೋತಿಷಿ ವೇಣುಸ್ವಾಮಿ. ‘ಸಲಾರ್’ (Salaar) ಹಿಟ್ ಆಗಿದೆ. 700 ಕೋಟಿ ಗಳಿಸಿದೆ. ಹೀಗಿರುವಾಗ ಮತ್ಯಾಕೆ ಡಾರ್ಲಿಂಗ್ ಬದುಕಿನಲ್ಲಿ ಸಮಸ್ಯೆ ಬರಲಿವೆ ಎಂದಿದ್ದಾರೆ ವೇಣು ಸ್ವಾಮಿ? ಇನ್ಯಾವ ಅವಘಡ ಪ್ರಭಾಸ್ ಜೀವನದಲ್ಲಿ ಬರಲಿದೆ? ಫ್ಯಾನ್ಸ್ ಕೆಂಡ ಕಾರಿದ್ದೇಕೆ? ಇಲ್ಲಿದೆ ಮಾಹಿತಿ.

    ನಟ ಪ್ರಭಾಸ್ (Prabhas) ಜೂಮ್‌ನಲ್ಲಿದ್ದಾರೆ. ಈಗಾಗಲೇ ಅವರು ಯುರೋಪ್‌ಗೆ ಹೋಗಿದ್ದಾರೆ. ಅದಕ್ಕೆ ಕಾರಣ ಶಸ್ತ್ರ ಚಿಕಿತ್ಸೆ. ಹಿಂದೊಮ್ಮೆ ಮಂಡಿ ನೋವಿನ ಆಪರೇಶನ್ ಯುರೋಪ್‌ನಲ್ಲಿಯೇ ಮಾಡಿಸಿಕೊಂಡಿದ್ದರು. ಈಗ ಮತ್ತೆ ಅದೇ ದೇಶಕ್ಕೆ ಹೋಗಿದ್ದಾರೆ. ಆರೋಗ್ಯದಲ್ಲಿ ಮತ್ಯಾಕೆ ಹೀಗೆ? ಉತ್ತರ ಗೊತ್ತಿಲ್ಲ. ಆದರೆ ಇದೇ ಸಮಯದಲ್ಲಿ ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ. ಅದನ್ನು ಕೇಳಿ ಪ್ರಭಾಸ್ ಭಕ್ತಗಣ ಸಿಟ್ಟಾಗಿದ್ದಾರೆ. ಇದೆಲ್ಲ ಸುಳ್ಳು ಸುದ್ದಿ ಎನ್ನುತ್ತಿದ್ದಾರೆ. ಆದರೆ ವೇಣುಸ್ವಾಮಿ ಮಾತ್ರ ನಾನು ಹೇಳಿರುವುದು ಎಲ್ಲವೂ ನಿಜ ಎಂದಿದ್ದಾರೆ. ಹಾಗಿದ್ದರೆ ಅವರು ಹೇಳಿದ್ದೇನು? ಇದನ್ನೂ ಓದಿ:ಸುದೀಪ್ ಗಾಗಿ ರಕ್ಷಿತ್ ಶೆಟ್ಟಿ ಸಿನಿಮಾ: ಕಿಚ್ಚ ಹೇಳಿದ್ದೇನು?

    ‘ಸಲಾರ್’ (Salaar Film) ಸಿನಿಮಾವನ್ನು ಬರೀ ಅವರ ಅಭಿಮಾನಿಗಳು ಮಾತ್ರ ನೋಡುತ್ತಾರೆ ಎಂದು ಹೇಳಿದ್ದೆ. ಅದು ನಿಜವಾಗಿದೆ. ಈಗ ಇನ್ನೊಂದು ಸತ್ಯ ಇದೆ. ಅದೇ ಪ್ರಭಾಸ್ ಆರೋಗ್ಯ. ಅವರ ಆರೋಗ್ಯದಲ್ಲಿ ಏರುಪೇರಾಗಲಿದೆ. ಜೊತೆಗೆ ವೈಯಕ್ತಿಕ ಬದುಕಿನಲ್ಲಿ ಅನೇಕ ಅಡೆತಡೆ ಬರಲಿವೆ. ಇದು ಸತ್ಯವಾಗಲಿದೆ ಎಂದಿದ್ದಾರೆ. ಇದನ್ನೂ ಓದಿ:ಸಿಂಗಲ್ ಆಗಿರೋ ತ್ರಿಶಾಗೆ ರೋಸ್ ಕೊಟ್ಟಿದ್ಯಾರು?

    ಮೂರು ವರ್ಷಗಳ ಹಿಂದೆಯೇ ವೇಣುಸ್ವಾಮಿ ಇದೇ ರೀತಿ ಪ್ರಭಾಸ್ ಹಿಂದೆ ಬಿದ್ದಿದ್ದರು. ಮೂರು ಸಿನಿಮಾ ಸೋಲಲಿದೆ. ಸಲಾರ್ ಗೆದ್ದರೂ ಅದನ್ನು ಅಭಿಮಾನಿಗಳು ಮಾತ್ರ ನೋಡುತ್ತಾರೆ ಎಂದಿದ್ದರು. ನಂತರ ಪ್ರಭಾಸ್ ಮದುವೆ ಆಗಲ್ಲ. ಅವರಿಗೆ ಆ ಯೋಗ ಇಲ್ಲ ಎಂದಿದ್ದರು. ಅದಕ್ಕೂ ಫ್ಯಾನ್ಸ್ ಕಿಡಿಕಾರಿದ್ದರು. ಈಗ ‘ಸಲಾರ್’ ಗೆದ್ದಿದೆ. ‘ಕಲ್ಕಿ’ ಸಿನಿಮಾ ಬರಲಿದೆ. ಹಾಗಿದ್ದರೆ ಪ್ರಭಾಸ್ ವೈಯಕ್ತಿಕ ಬದುಕಿನಲ್ಲಿ ಏನಾಗಲಿದೆ? ಅದು ಆರೋಗ್ಯದ ವಿಷಯವಾ ಅಥವಾ ಮದುವೆ ಲೆಕ್ಕಾಚಾರನಾ ಅಥವಾ ಅದನ್ನು ಮೀರಿದ್ದಾ? ಸಮಯವೇ ಎಲ್ಲದಕ್ಕೂ ಉತ್ತರ ಕೊಡಲಿದೆ.