Tag: ಪ್ರಭಾಸ್

  • ಪ್ರಭಾಸ್, ಪ್ರಶಾಂತ್ ನೀಲ್ ನಡುವೆ ಭಿನ್ನಾಭಿಪ್ರಾಯ- ಪತಿಯ ಬೆಂಬಲಕ್ಕೆ ನಿಂತ ಲಿಖಿತಾ ರೆಡ್ಡಿ

    ಪ್ರಭಾಸ್, ಪ್ರಶಾಂತ್ ನೀಲ್ ನಡುವೆ ಭಿನ್ನಾಭಿಪ್ರಾಯ- ಪತಿಯ ಬೆಂಬಲಕ್ಕೆ ನಿಂತ ಲಿಖಿತಾ ರೆಡ್ಡಿ

    ಡಾರ್ಲಿಂಗ್ ಪ್ರಭಾಸ್ (Actor Prabhas) ಮತ್ತು ಪ್ರಶಾಂತ್ ನೀಲ್ (Prashanth Neel) ಗೆಳೆತನದ ಬಗ್ಗೆ ಟಾಲಿವುಡ್‌ನಲ್ಲಿ ಗುಸು ಗುಸು ಶುರುವಾಗಿದೆ. ಇಬ್ಬರ ನಡುವೆ ಭಿನ್ನಾಭಿಪ್ರಾಯವಿದೆ. ‘ಸಲಾರ್ 2’ (Salaar 2) ಸಿನಿಮಾ ನಿಂತೇ ಹೋಯ್ತು ಎಂದೆಲ್ಲಾ ಸುದ್ದಿ ಹಬ್ಬಿಸಿದವರಿಗೆ ಪ್ರಶಾಂತ್ ನೀಲ್ ಪತ್ನಿ ತಿರುಗೇಟು ನೀಡಿದ್ದಾರೆ.

    ‘ಸಲಾರ್-2’ ಸಿನಿಮಾ ನಿಂತೇ ಹೋಯ್ತು ಎನ್ನುವ ವದಂತಿಗಳ ಬಗ್ಗೆ ಚಿತ್ರತಂಡ ನಗುತ್ತಿದೆ ಎನ್ನುವಂತೆ ಈ ಪೋಸ್ಟ್ ಮಾಡಲಾಗಿತ್ತು. ಅದೇ ಫೋಟೋವನ್ನೇ ಪ್ರಶಾಂತ್ ನೀಲ್ ಪತ್ನಿ ಲಿಖಿತಾ ರೆಡ್ಡಿ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ಈ ಫೋಟೊ ನೋಡಿ ನಿಮಗೆ ಏನಾದರೂ ಭಿನ್ನಾಭಿಪ್ರಾಯ ಕಾಣಿಸ್ತಿದ್ಯಾ? ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಲಿಖಿತಾ ಉತ್ತರಿಸಿದ್ದಾರೆ. ಇಬ್ಬರೂ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಅಂತ ಪರೋಕ್ಷವಾಗಿ ಸ್ಪಷ್ಟನೆ ನೀಡಿದ್ದಾರೆ. ಲಿಖಿತಾ ರೆಡ್ಡಿ (Likitha Reddy) ಇನ್ಸ್ಟಾಗ್ರಾಂ ಸ್ಕ್ರೀನ್ ಶಾಟ್ ತೆಗೆದು ಪ್ರಭಾಸ್ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.

    ಅಂದಹಾಗೆ, ಡೈರೆಕ್ಟರ್ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ನಡುವೆ ಭಿನ್ನಾಭಿಪ್ರಾಯವಿದೆ ಎನ್ನಲಾದ ಕೆಲ ಸುದ್ದಿಗಳು ಹರಿದಾಡಿತ್ತು. ಇದರಿಂದ ಸಲಾರ್ 2 ಸಿನಿಮಾ ನಿಂತಿದೆ ಎಂದು ಬಿಂಬಿಸಲಾಗಿತ್ತು. ಈ ಬೆನ್ನಲ್ಲೇ ಪ್ರಭಾಸ್ ಖುಷಿಯಿಂದ ಸ್ಮೈಲ್ ಮಾಡುತ್ತಿರುವ ಫೋಟೋ ಶೇರ್ ಮಾಡಿ ಹೊಂಬಾಳೆ ಟೀಮ್ ಪರೋಕ್ಷವಾಗಿ ಉತ್ತರಿಸಿತ್ತು. ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಒಟ್ಟಿಗೆ ಜೋರಾಗಿ ನಗುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದು, ಅವರು ನಗು ನಿಲ್ಲಿಸುವುದಿಲ್ಲ ಎಂದು ಅಡಿಬರಹ ನೀಡಿ ಪೋಸ್ಟ್ ಮಾಡಿದ್ದರು. ಈ ಮೂಲಕ ‘ಸಲಾರ್ 2’ ನಿಂತು ಹೋಗಿದೆ ಎಂಬ ಸುದ್ದಿ ಸುಳ್ಳು ಎಂಬುದನ್ನು ಖಾತ್ರಿ ಪಡಿಸಿತ್ತು. ಇದನ್ನೂ ಓದಿ:Sikandar: ಸಲ್ಮಾನ್ ಖಾನ್‌ಗೆ ತಮಿಳು ನಟ ಸತ್ಯರಾಜ್ ವಿಲನ್

    ಇನ್ನೂ ಪ್ರಭಾಸ್ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಬ್ಯುಸಿಯಿರುವ ಕಾರಣ, ಪ್ರಶಾಂತ್ ನೀಲ್ ಅವರು ಜ್ಯೂ.ಎನ್‌ಟಿಆರ್ ನಟನೆಯ ‘ಡ್ರ‍್ಯಾಗನ್’ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಇದೇ ಆಗಸ್ಟ್‌ನಿಂದ ‘ಡ್ರ‍್ಯಾಗನ್’ ಚಿತ್ರದ ಶೂಟಿಂಗ್ ಶುರುವಾಗಲಿದೆ. ಈ ಚಿತ್ರ ಪೂರ್ಣಗೊಳಿಸಲು 2 ವರ್ಷಗಳು ಸಮಯ ಬೇಕಿದೆ. ಇದಾದ ಬಳಿಕ ‘ಸಲಾರ್ 2’ ಕೈಗೆತ್ತಿಕೊಳ್ಳಲಿದ್ದಾರೆ ಪ್ರಶಾಂತ್ ನೀಲ್.

  • ‘ಸಲಾರ್ 2’ ಸಿನಿಮಾ ನಿಂತೇ ಹೋಯ್ತು ಎಂದವರಿಗೆ ಖಡಕ್ ಉತ್ತರ ಕೊಟ್ಟ ಹೊಂಬಾಳೆ ಸಂಸ್ಥೆ

    ‘ಸಲಾರ್ 2’ ಸಿನಿಮಾ ನಿಂತೇ ಹೋಯ್ತು ಎಂದವರಿಗೆ ಖಡಕ್ ಉತ್ತರ ಕೊಟ್ಟ ಹೊಂಬಾಳೆ ಸಂಸ್ಥೆ

    ಹೊಂಬಾಳೆ ಸಂಸ್ಥೆ ನಿರ್ಮಾಣದ ‘ಸಲಾರ್’ (Salaar) ಸಿನಿಮಾ ಥಿಯೇಟರ್‌ನಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ. ಇದೀಗ ಕಿರುತೆರೆಯಲ್ಲೂ ಪ್ರಸಾರವಾಗುತ್ತಿದೆ. ಹೀಗಿರುವಾಗ ಕೆಲ ದಿನಗಳಿಂದ ‘ಸಲಾರ್ -2’ (Salaar 2)  ಸಿನಿಮಾ ನಿಂತು ಹೋಗಿದೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ವಿಚಾರವಾಗಿ ಹೊಂಬಾಳೆ ಸಂಸ್ಥೆ ಖಡಕ್ ಆಗಿ ಉತ್ತರ ನೀಡಿದೆ. ಇದನ್ನೂ ಓದಿ:ಟ್ರೋಲ್‌ಗಳ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ನೇಹಾ ಶೆಟ್ಟಿ

    ಡೈರೆಕ್ಟರ್ ಪ್ರಶಾಂತ್ ನೀಲ್ (Prashanth Neel) ಮತ್ತು ಪ್ರಭಾಸ್ ನಡುವೆ ಭಿನ್ನಾಭಿಪ್ರಾಯವಿದೆ ಎನ್ನಲಾದ ಕೆಲ ಸುದ್ದಿಗಳು ಹರಿದಾಡಿತ್ತು. ಇದರಿಂದ ಸಲಾರ್ 2 ಸಿನಿಮಾ ನಿಂತಿದೆ ಎಂದು ಬಿಂಬಿಸಲಾಗಿತ್ತು. ಇದೀಗ ಪ್ರಶಾಂತ್ ನೀಲ್ ಮತ್ತು ನಟ ಪ್ರಭಾಸ್ (Prabhas) ಖುಷಿಯಿಂದ ಸ್ಮೈಲ್ ಮಾಡುತ್ತಿರುವ ಫೋಟೋ ಶೇರ್ ಮಾಡಿ ಹೊಂಬಾಳೆ ಟೀಮ್ ಪರೋಕ್ಷವಾಗಿ ಉತ್ತರಿಸಿದೆ.

     

    View this post on Instagram

     

    A post shared by Salaar (@salaarthesaga)

    ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಒಟ್ಟಿಗೆ ಜೋರಾಗಿ ನಗುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದು, ಅವರು ನಗು ನಿಲ್ಲಿಸುವುದಿಲ್ಲ ಎಂದು ಬರೆಯಲಾಗಿದೆ.  ಈ ಮೂಲಕ ‘ಸಲಾರ್ 2’ ನಿಂತು ಹೋಗಿದೆ ಎಂಬ ಸುದ್ದಿ ಸುಳ್ಳು ಎಂಬುದನ್ನು ಖಾತ್ರಿ ಪಡಿಸಿದೆ. ಈ ಪೋಸ್ಟ್ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.

    ಅಂದಹಾಗೆ, ಪ್ರಭಾಸ್ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದಲ್ಲಿ ಬ್ಯುಸಿಯಿರುವ ಕಾರಣ, ಪ್ರಶಾಂತ್ ನೀಲ್ ಅವರು ಜ್ಯೂ.ಎನ್‌ಟಿಆರ್ ನಟನೆಯ ‌’ಡ್ರ್ಯಾಗನ್’ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಇದೇ ಆಗಸ್ಟ್‌ನಿಂದ ‘ಡ್ರ್ಯಾಗನ್’ ಚಿತ್ರದ ಶೂಟಿಂಗ್ ಶುರುವಾಗಲಿದೆ. ಈ ಚಿತ್ರ ಪೂರ್ಣಗೊಳಿಸಲು 2 ವರ್ಷಗಳು ಸಮಯ ಬೇಕಿದೆ. ಇದಾದ ಬಳಿಕ ‘ಸಲಾರ್ 2’ ಕೈಗೆತ್ತಿಕೊಳ್ಳಲಿದ್ದಾರೆ ಪ್ರಶಾಂತ್ ನೀಲ್.

  • ಕಲ್ಕಿ ಬುಜ್ಜಿಗೆ ಧ್ವನಿಯಾಗಿದ್ದಾರೆ ನಟಿ ಕೀರ್ತಿ ಸುರೇಶ್

    ಕಲ್ಕಿ ಬುಜ್ಜಿಗೆ ಧ್ವನಿಯಾಗಿದ್ದಾರೆ ನಟಿ ಕೀರ್ತಿ ಸುರೇಶ್

    ಪ್ರಭಾಸ್ ನಟನೆಯ ‘ಕಲ್ಕಿ’ ಸಿನಿಮಾದಲ್ಲಿ ಬುಜ್ಜಿಗೆ ಸಾಕಷ್ಟು ಮಹತ್ವವನ್ನು ನೀಡಲಾಗಿದೆ.  ಬುಜ್ಜಿಗಾಗಿಯೇ ಮೊನ್ನೆಯಷ್ಟೇ ವಿಶೇಷ ಕಾರ್ಯಕ್ರವನ್ನೂ ಆಯೋಜನೆ ಮಾಡಿತ್ತು ಚಿತ್ರತಂಡ. ಈಗ ಆ ಬುಜ್ಜಿಗೆ ಧ್ವನಿದಾನ ಮಾಡಿದ್ದಾರಂತೆ ನಟಿ ಕೀರ್ತಿ ಸುರೇಶ್ (Keerthi Suresh). ಬುಜ್ಜಿ ಕೂಡ ಪಾತ್ರದಂತೆ ಚಿತ್ರದುದ್ದಕ್ಕೂ ಇರಲಿದೆಯಂತೆ.

    ಟಾಲಿವುಡ್‌ ಮಾತ್ರವಲ್ಲದೆ, ಇಡೀ ಭಾರತ ಕಲ್ಕಿ (Kalki)  2898 AD ಸಿನಿಮಾಕ್ಕಾಗಿ ಕಾಯುತ್ತಿದೆ. ಒಂದಾದ ನಂತರ ಬಂದು ವಿಶೇಷತೆಗಳನ್ನು ಈ ಸಿನಿಮಾ ಪ್ರೇಕ್ಷಕರ ಮಡಿಲಿಗೆ ಕಾಯುತ್ತಲೇ ಬರುತ್ತಿದೆ. ಈಗ ಇದೇ ಸಿನಿಮಾದಿಂದ ಮತ್ತೊಂದು ವಿಶೇಷವನ್ನು ಅನಾವರಣಗೊಳಿಸಿದೆ ಚಿತ್ರತಂಡ. ಹೌದು, ಪ್ಯಾನ್‍ ಇಂಡಿಯಾ ಸೂಪರ್‍ ಸ್ಟಾರ್‍ ಪ್ರಭಾಸ್‍ (Prabhas,) ಅಭಿನಯದ ಕಲ್ಕಿ 2898 AD ಬಿಡುಗಡೆಗೆ ಹೆಚ್ಚು ದಿನಗಳು ಉಳಿದಿಲ್ಲ. ಹೀಗಿರುವಾಗಲೇ ಇದೇ ಕಲ್ಕಿ ಚಿತ್ರದ ಐದನೇ ಸೂಪರ್‍ ಸ್ಟಾರ್ ಯಾರು ಎಂಬುದನ್ನು ಕಿರು ವಿಡಿಯೋ ಮೂಲಕ ಅನಾವರಣ ಮಾಡಿದೆ ಚಿತ್ರತಂಡ.

    ಆ ಐದನೇ ಸೂಪರ್‌ಸ್ಟಾರ್‌ ಬೇರಾರು ಅಲ್ಲ, ಬುಜ್ಜಿ ಹೆಸರಿನ ಆಪ್ತ ಸ್ನೇಹಿತ. ಅಂದರೆ, ಬುಜ್ಜಿಯನ್ನು ಭವಿಷ್ಯದ ವಾಹನ ಎಂದೇ ಚಿತ್ರತಂಡ ಹೇಳಿಕೊಂಡು, ಅದರ ಕಿರು ಝಲಕ್‌ಅನ್ನು ಮೇ 22ರಂದು ಅನಾವರಣ ಮಾಡಿದೆ. ನಿರ್ದೇಶಕ ನಾಗ್ ಅಶ್ವಿನ್, ನಿರ್ಮಾಪಕರಾದ ಸಿ. ಅಶ್ವಿನಿ ದತ್, ಸ್ವಪ್ನಾ ದತ್ ಚಲಸಾನಿ, ಪ್ರಿಯಾಂಕಾ ದತ್ ಚಲಸಾನಿ ಸೇರಿ ಸುಮಾರು ಇಪ್ಪತ್ತು ಸಾವಿರ ಪ್ರೇಕ್ಷಕರು ಮತ್ತು ಮಾಧ್ಯಮದವರ ಸಮ್ಮುಖದಲ್ಲಿ ಹೈದರಾಬಾದ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಬುಜ್ಜಿಯನ್ನು ಪರಿಚಯಿಸಿದ್ದಾರೆ.

    ಬುಜ್ಜಿ ಹೆಸರಿನ ಈ ಆಪ್ತ ಗೆಳೆಯ ಚಿತ್ರದ ನಾಯಕ ಭೈರವನ ಅತ್ಯಂತ ನಂಬಿಕಸ್ಥ ಗೆಳೆಯ. ಈ ಗೆಳೆಯನ ಕುರಿತು ವೈಜಯಂತಿ ನೆಟ್‍ವರ್ಕ್ ಯೂಟ್ಯೂಬ್‌ ಚಾನಲ್‍ನಲ್ಲಿ ಹೊಸ ವೀಡಿಯೋ ರಿಲೀಸ್‌ ಮಾಡಿದೆ. ವಿಡಿಯೋದಲ್ಲಿ ಬುಜ್ಜಿ ಹೇಗೆಲ್ಲ ಕೆಲಸ ಮಾಡುತ್ತೆ, ಭವಿಷ್ಯದ ಆಪ್ತ ಸ್ನೇಹಿತ ಎಂದು ಏಕೆ ಕರೆಯಲಾಗುತ್ತದೆ ಎಂಬುದು ಗೋಚರವಾಗುತ್ತದೆ.

     

    ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ಪ್ರಭಾಸ್,‍ ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್‍ ನಿರ್ಮಿಸಿರುವ ಈ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್‍ 27ರಂದು ಬಿಡುಗಡೆ ಆಗಲಿದೆ.

  • ನನ್ನ ಫ್ಯಾನ್ಸ್ ಮನಸ್ಸು ನೋಯಿಸಲ್ಲ ಎನ್ನುತ್ತಲೇ ಮದುವೆ ಬಗ್ಗೆ ಪ್ರಭಾಸ್ ಸ್ಪಷ್ಟನೆ

    ನನ್ನ ಫ್ಯಾನ್ಸ್ ಮನಸ್ಸು ನೋಯಿಸಲ್ಲ ಎನ್ನುತ್ತಲೇ ಮದುವೆ ಬಗ್ಗೆ ಪ್ರಭಾಸ್ ಸ್ಪಷ್ಟನೆ

    ಟಾಲಿವುಡ್ ನಟ ಪ್ರಭಾಸ್ (Prabhas)  ಬಗ್ಗೆ ಸದಾ ಎದುರಾಗುವ ಪ್ರಶ್ನೆ ಎಂದರೆ ಮದುವೆ ಮ್ಯಾಟರ್. ಪ್ರಭಾಸ್ ಕೈ ಹಿಡಿಯುವ ಆ ಹುಡುಗಿ ಯಾರು ಎಂದು ಅಭಿಮಾನಿಗಳು ಕುತೂಹಲದಿಂದ ಕಾಯ್ತಿದ್ದಾರೆ. ನಟನ ಕಡೆಯಿಂದ ಗುಡ್ ನ್ಯೂಸ್ ಬರಲಿ ಅಂತ ಎದುರು ನೋಡ್ತಿದ್ದಾರೆ. ಹೀಗಿರುವಾಗ ಬಗ್ಗೆ ಮದುವೆ (Wedding) ಬಗ್ಗೆ ನಟ ಸ್ಪಷ್ಟನೆ ನೀಡಿದ್ದಾರೆ.

    ಪ್ರಭಾಸ್ ಹೈದರಾಬಾದ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ನಾನು ಈಗಲೇ ಮದುವೆ ಆಗೋದಿಲ್ಲ, ನನಗೆ ಮಹಿಳಾ ಅಭಿಮಾನಿಗಳನ್ನು ನೋಯಿಸಲು ಮನಸ್ಸಿಲ್ಲ ಎಂದು ಹೇಳಿದ್ದಾರೆ. ನಟನ ಹೇಳಿಕೆಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

    ಸದ್ಯ ಪ್ರಭಾಸ್ ‘ಕಲ್ಕಿ 2898 ಎಡಿ’ (Kalki 2898 AD)  ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ನನ್ನ ಜೀವನದಲ್ಲಿ ವಿಶೇಷ ವ್ಯಕ್ತಿಯ ಆಗಮನ ಆಗುತ್ತಿದೆ ಎಂದು ಹೇಳಿ, ಸಿನಿಮಾದಲ್ಲಿನ ‘ಬುಜ್ಜಿ’ ಎಂಬ ಕಾರಿನ ಬಗ್ಗೆ ಪ್ರಭಾಸ್ ಮಾಹಿತಿ ನೀಡಿದ್ದರು. ಬುಜ್ಜಿ ಎಂದಾಕ್ಷಣ ಎಲ್ಲರೂ ಪ್ರಭಾಸ್, ಬಾಳ ಸಂಗಾತಿಯನ್ನು ಪರಿಚಯಿಸುತ್ತಾರೆ ಎಂದೇ ಭಾವಿಸಿದ್ದರು. ಆದರೆ ಸಿನಿಮಾ ಪ್ರಚಾರಕ್ಕಾಗಿ ಚಿತ್ರತಂಡ ಗಿಮಿಕ್ ಮಾಡಿತ್ತು.

    ಅಂದಹಾಗೆ, ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಜೊತೆಗೆ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ರಾಜೇಂದ್ರ ಪ್ರಸಾದ್ ಕೂಡ ನಟಿಸಿದ್ದಾರೆ. ಸಿನಿಮಾದ ವಿಶೇಷ ಏನೆಂದರೆ, ದೀಪಿಕಾ ಪಡುಕೋಣೆ (Deepika Padukone) ಮೊದಲ ಬಾರಿಗೆ ಮಾತೃಭಾಷೆ ಕನ್ನಡದಲ್ಲಿ ಡಬ್ ಮಾಡಿದ್ದಾರೆ. ಇದೇ ಜೂನ್ 27ಕ್ಕೆ ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

  • ಭೈರವನ ಆಪ್ತ ಗೆಳೆಯ ಬುಜ್ಜಿ ಯಾರು? ವಿಡಿಯೋ ರಿಲೀಸ್

    ಭೈರವನ ಆಪ್ತ ಗೆಳೆಯ ಬುಜ್ಜಿ ಯಾರು? ವಿಡಿಯೋ ರಿಲೀಸ್

    ಟಾಲಿವುಡ್‌ ಮಾತ್ರವಲ್ಲದೆ, ಇಡೀ ಭಾರತ ಕಲ್ಕಿ (Kalki)  2898 AD ಸಿನಿಮಾಕ್ಕಾಗಿ ಕಾಯುತ್ತಿದೆ. ಒಂದಾದ ನಂತರ ಬಂದು ವಿಶೇಷತೆಗಳನ್ನು ಈ ಸಿನಿಮಾ ಪ್ರೇಕ್ಷಕರ ಮಡಿಲಿಗೆ ಕಾಯುತ್ತಲೇ ಬರುತ್ತಿದೆ. ಈಗ ಇದೇ ಸಿನಿಮಾದಿಂದ ಮತ್ತೊಂದು ವಿಶೇಷವನ್ನು ಅನಾವರಣಗೊಳಿಸಿದೆ ಚಿತ್ರತಂಡ. ಹೌದು, ಪ್ಯಾನ್‍ ಇಂಡಿಯಾ ಸೂಪರ್‍ ಸ್ಟಾರ್‍ ಪ್ರಭಾಸ್‍ (Prabhas,) ಅಭಿನಯದ ಕಲ್ಕಿ 2898 AD ಬಿಡುಗಡೆಗೆ ಹೆಚ್ಚು ದಿನಗಳು ಉಳಿದಿಲ್ಲ. ಹೀಗಿರುವಾಗಲೇ ಇದೇ ಕಲ್ಕಿ ಚಿತ್ರದ ಐದನೇ ಸೂಪರ್‍ ಸ್ಟಾರ್ ಯಾರು ಎಂಬುದನ್ನು ಕಿರು ವಿಡಿಯೋ ಮೂಲಕ ಅನಾವರಣ ಮಾಡಿದೆ ಚಿತ್ರತಂಡ.

    ಆ ಐದನೇ ಸೂಪರ್‌ಸ್ಟಾರ್‌ ಬೇರಾರು ಅಲ್ಲ, ಬುಜ್ಜಿ ಹೆಸರಿನ ಆಪ್ತ ಸ್ನೇಹಿತ. ಅಂದರೆ, ಬುಜ್ಜಿಯನ್ನು ಭವಿಷ್ಯದ ವಾಹನ ಎಂದೇ ಚಿತ್ರತಂಡ ಹೇಳಿಕೊಂಡು, ಅದರ ಕಿರು ಝಲಕ್‌ಅನ್ನು ಮೇ 22ರಂದು ಅನಾವರಣ ಮಾಡಿದೆ. ನಿರ್ದೇಶಕ ನಾಗ್ ಅಶ್ವಿನ್, ನಿರ್ಮಾಪಕರಾದ ಸಿ. ಅಶ್ವಿನಿ ದತ್, ಸ್ವಪ್ನಾ ದತ್ ಚಲಸಾನಿ, ಪ್ರಿಯಾಂಕಾ ದತ್ ಚಲಸಾನಿ ಸೇರಿ ಸುಮಾರು ಇಪ್ಪತ್ತು ಸಾವಿರ ಪ್ರೇಕ್ಷಕರು ಮತ್ತು ಮಾಧ್ಯಮದವರ ಸಮ್ಮುಖದಲ್ಲಿ ಹೈದರಾಬಾದ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಬುಜ್ಜಿಯನ್ನು ಪರಿಚಯಿಸಿದ್ದಾರೆ.

    ಬುಜ್ಜಿ ಹೆಸರಿನ ಈ ಆಪ್ತ ಗೆಳೆಯ ಚಿತ್ರದ ನಾಯಕ ಭೈರವನ ಅತ್ಯಂತ ನಂಬಿಕಸ್ಥ ಗೆಳೆಯ. ಈ ಗೆಳೆಯನ ಕುರಿತು ವೈಜಯಂತಿ ನೆಟ್‍ವರ್ಕ್ ಯೂಟ್ಯೂಬ್‌ ಚಾನಲ್‍ನಲ್ಲಿ ಹೊಸ ವೀಡಿಯೋ ರಿಲೀಸ್‌ ಮಾಡಿದೆ. ವಿಡಿಯೋದಲ್ಲಿ ಬುಜ್ಜಿ ಹೇಗೆಲ್ಲ ಕೆಲಸ ಮಾಡುತ್ತೆ, ಭವಿಷ್ಯದ ಆಪ್ತ ಸ್ನೇಹಿತ ಎಂದು ಏಕೆ ಕರೆಯಲಾಗುತ್ತದೆ ಎಂಬುದು ಗೋಚರವಾಗುತ್ತದೆ.

    ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ಪ್ರಭಾಸ್,‍ ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಅಶ್ವಿನಿ ದತ್‍ ನಿರ್ಮಿಸಿರುವ ಈ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್‍ 27ರಂದು ಬಿಡುಗಡೆ ಆಗಲಿದೆ.

  • ‘ಕಲ್ಕಿ 2898 AD : ಮೇ 22 ರಂದು ಭೈರವನ ನಂಬಿಕಸ್ಥ ಗೆಳೆಯ ಬುಜ್ಜಿಯ ಅನಾವರಣ

    ‘ಕಲ್ಕಿ 2898 AD : ಮೇ 22 ರಂದು ಭೈರವನ ನಂಬಿಕಸ್ಥ ಗೆಳೆಯ ಬುಜ್ಜಿಯ ಅನಾವರಣ

    ‘ಪ್ಯಾನ್‍ ಇಂಡಿಯಾ ಸೂಪರ್‍ ಸ್ಟಾರ್‍’ ಪ್ರಭಾಸ್‍ ಅಭಿನಯದ ‘ಕಲ್ಕಿ 2898 AD’ (Kalki) ಬಿಡುಗಡೆಗೆ ಇನ್ನು ಕೇವಲ ಎರಡು ತಿಂಗಳಷ್ಟೇ ಬಾಕಿ ಇದೆ. ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಬೆಟ್ಟದಷ್ಟು ನಿರೀಕ್ಷೆ ಮತ್ತು ಕುತೂಹಲವಿದೆ. ಈಗ ಚಿತ್ರದ ಐದನೇ ಸೂಪರ್‍ ಸ್ಟಾರ್ ಅನ್ನು ಇದೇ ಮೇ 22ರಂದು ಅನಾವರಣಗೊಳಿಸುವುದಾಗಿ ಚಿತ್ರತಂಡ ಘೋಷಿಸಿದ್ದು, ಆ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಾಗಿದೆ.

    ಈ ಐದನೇ ಸೂಪರ್‍ ಸ್ಟಾರ್‍ ಯಾರು? ಈ ರಹಸ್ಯವನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.  ಹೆಸರು ಬುಜ್ಜಿ ಮತ್ತು ಈತ ನಾಯಕ ಭೈರವನ ಅತ್ಯಂತ ನಂಬಿಕಸ್ಥ ಗೆಳೆಯನಂತೆ. ಈ ಗೆಳೆಯನ ಕುರಿತು ಯೂಟ್ಯೂಬ್‍ನ ವೈಜಯಂತಿ ನೆಟ್‍ವರ್ಕ್ ಚಾನಲ್‍ನಲ್ಲಿ ಹೊಸ ವೀಡಿಯೋ ಬಿಡುಗಡೆ ಮಾಡಲಾಗಿದೆ. ‘From Skratch: Building A Superstar’ ಹೆಸರಿನ ಈ ವೀಡಿಯೋದಲ್ಲಿ ಬುಜ್ಜಿಯ ಕುರಿತು ಪರಿಚಯ ಮಾಡಿಕೊಡಲಾಗಿದೆ. 2020ರ ಜೂನ್‍ನಲ್ಲಿ ಅಂಥದ್ದೊಂದು ಪಾತ್ರದ ಸೃಷ್ಠಿ ಹೇಗಾಯಿತು ಎಂದು ಪ್ರಾರಂಭವಾಗುವುದರಿಂದ, ಅಂತಿಮವಾಗಿ ಅದು ಹೇಗೆ ರೂಪುಗೊಂಡಿತು ಎಂಬುದನ್ನು ಈ ವೀಡಿಯೋದಲ್ಲಿ ತೋರಿಸಲಾಗಿದೆ. ಭೈರವನ ಅಚ್ಚುಮೆಚ್ಚಿನ ಗೆಳೆಯನ ಕುರಿತು ಸಾಕಷ್ಟು ಬಿಲ್ಡಪ್‍ ನೀಡಲಾಗಿದ್ದು, ಈ ಐದನೇ ಸೂಪರ್‍ ಸ್ಟಾರ್‍ ಯಾರಿರಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮನೆಮಾಡಿದೆ. ಬುಜ್ಜಿ ಯಾರು ಎಂಬ ಪ್ರಶ್ನೆಗೆ, ಎರಡು ನಿಮಿಷ 22 ಸೆಕೆಂಡ್‍ನ ಈ ವೀಡಿಯೋದಲ್ಲಿ ಚಿತ್ರಕ್ಕೆ ದುಡಿದ ಹಲವು ತಂತ್ರಜ್ಞರು ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ಇಷ್ಟಕ್ಕೂ ಬುಜ್ಜಿ ಯಾರು? ಉತ್ತರಕ್ಕಾಗಿ ಮೇ 22ರವರೆಗೂ ಕಾಯಬೇಕು.

    ಕೆಲವು ದಿನಗಳ ಹಿಂದಷ್ಟೇ ಚಿತ್ರದಲ್ಲಿನ ಅಮಿತಾಭ್ ಬಚ್ಚನ್‍ ಅವರ ಪಾತ್ರವನ್ನು ಅನಾವರಣಗೊಳಿಸಲಾಗಿತ್ತು. ಅಶ್ವತ್ಥಾಮನಾಗಿ ಅಮಿತಾಭ್‍ ನಟಿಸಿದ್ದು, ಅವರ ಪಾತ್ರ ಹೇಗಿರಬಹುದು ಎಂದು ಪ್ರೇಕ್ಷಕರು ತುದಿಗಾಲಲ್ಲಿ ಕಾಯುವಂತಾಗಿದೆ. ಅವರ ಪಾತ್ರ ಪರಿಚಯಿಸುವ ಟೀಸರ್‍ ತೆಲುಗು, ತಮಿಳು, ಕನ್ನಡ, ಹಿಂದಿ, ಮಲಯಾಳಂ ಮತ್ತು ಇಂಗ್ಲೀಷ್‍ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.

     

    ಈ ವರ್ಷದ ಅತೀ ನಿರೀಕ್ಷಿತ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಕಲ್ಕಿ 2898 AD’ ಚಿತ್ರದಲ್ಲಿ ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ಪ್ರಭಾಸ್,‍ ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮುಂತಾದವರು ನಟಿಸಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‍ನಡಿ ಅಶ್ವಿನಿ ದತ್‍ ನಿರ್ಮಿಸಿರುವ ಈ ಚಿತ್ರವನ್ನು ನಾಗ್‍ ಅಶ್ವಿನ್‍ ನಿರ್ದೇಶನ ಮಾಡಿದ್ದಾರೆ. ‘ಕಲ್ಕಿ 2898 AD’ ಚಿತ್ರವು ಜಗತ್ತಿನಾದ್ಯಂತ ಜೂನ್‍ 27ರಂದು ಬಿಡುಗಡೆ ಆಗಲಿದೆ.

  • ಮದುವೆ ಬಗ್ಗೆ ಸುಳಿವು ಕೊಟ್ಟ ನಟ- ಪ್ರಭಾಸ್ ಕೈ ಹಿಡಿಯುವ ಆ ಹುಡುಗಿ ಯಾರು?

    ಮದುವೆ ಬಗ್ಗೆ ಸುಳಿವು ಕೊಟ್ಟ ನಟ- ಪ್ರಭಾಸ್ ಕೈ ಹಿಡಿಯುವ ಆ ಹುಡುಗಿ ಯಾರು?

    ಬಾಹುಬಲಿ, ಸಲಾರ್ ಸೂಪರ್ ಸ್ಟಾರ್ ಪ್ರಭಾಸ್ (Prabhas) ಸದ್ಯ ‘ಸಲಾರ್’ ಪಾಟ್ 2, ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪ್ರಭಾಸ್ ಶೇರ್ ಮಾಡಿರುವ ಪೋಸ್ಟ್‌ನಿಂದ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಸದ್ದಿಲ್ಲದೇ ಮದುವೆಗೆ (Wedding) ಸಜ್ಜಾದ್ರಾ ಪ್ರಭಾಸ್ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

    ಅಷ್ಟಕ್ಕೂ ಪ್ರಭಾಸ್ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ, ‘ಡಾರ್ಲಿಂಗ್ಸ್.. ಕೊನೆಗೂ ನಮ್ಮ ಜೀವನಕ್ಕೆ ತುಂಬಾ ವಿಶೇಷವಾದ ವ್ಯಕ್ತಿಯೊಬ್ಬರು ಪ್ರವೇಶಿಸಲಿದ್ದಾರೆ. ಕಾಯ್ತಾ ಇರಿ ಎಂದು ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಕೆಲವರು ಪ್ರಭಾಸ್ ಆದಷ್ಟು ಬೇಗ ಮದುವೆ ಸುದ್ದಿ ನೀಡುತ್ತಿದ್ದಾರೆ. ಭಾವಿ ಪತ್ನಿಯನ್ನು ಪರಿಚಯಿಸುತ್ತಾರೆ ಎಂದೆಲ್ಲಾ ಚರ್ಚೆ ಶುರುವಾಗಿದೆ. ಇದನ್ನೂ ಓದಿ:ಸಿದ್ಧಾಂತ್ ಚತುರ್ವೇದಿ ಜೊತೆ ‘ಸೀತಾರಾಮಂ’ ನಟಿ ಡೇಟಿಂಗ್

    ಇತ್ತೀಚೆಗೆ ಅವರ ದೊಡ್ಡಮ್ಮ ಶ್ಯಾಮಲಾ ದೇವಿ ಕಾರ್ಯಕ್ರಮವೊಂದರಲ್ಲಿ ಈ ವರ್ಷವೇ ಪ್ರಭಾಸ್ ಮದುವೆ ನಡೆಯುತ್ತದೆ ಎಂದಿದ್ದರು. ಈಗ ಪ್ರಭಾಸ್ ಶೇರ್ ಮಾಡಿರುವ ಪೋಸ್ಟ್ ನೋಡಿ, ಮದುವೆ ಬಗ್ಗೆನೇ ನಟ ಶುಭಸುದ್ದಿ ಕೊಡಬಹುದು. ಹಾಗಾದ್ರೆ ಹುಡುಗಿ ಯಾರಿರಬಹುದು ಎಂದೆಲ್ಲಾ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

    ಅಂದಹಾಗೆ ‘ಆದಿಪುರುಷ್’ ಸಿನಿಮಾ ರಿಲೀಸ್ ವೇಳೆ ಕೃತಿ ಸನೋನ್ ಜೊತೆ ಪ್ರಭಾಸ್ ಡೇಟಿಂಗ್ ಸುದ್ದಿ ಕೇಳಿ ಬಂದಿತ್ತು. ಹಾಗಾಗಿ ಮದುವೆ ಬಗ್ಗೆ ಅಧಿಕೃತ ಘೋಷಣೆ ಆಗಲಿದ್ಯಾ? ಎಂಬುದನ್ನು ಕಾದುನೋಡಬೇಕಿದೆ.

  • ‘ಕಲ್ಕಿ’ ಸಿನಿಮಾಗಾಗಿ ಕನ್ನಡದಲ್ಲಿ ಡಬ್ ಮಾಡಲಿದ್ದಾರೆ ದೀಪಿಕಾ ಪಡುಕೋಣೆ

    ‘ಕಲ್ಕಿ’ ಸಿನಿಮಾಗಾಗಿ ಕನ್ನಡದಲ್ಲಿ ಡಬ್ ಮಾಡಲಿದ್ದಾರೆ ದೀಪಿಕಾ ಪಡುಕೋಣೆ

    ‘ಪಠಾಣ್’ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಜೂನ್‌ನಿಂದ ಸಿನಿಮಾಗೆ ಬ್ರೇಕ್‌ ಕೊಟ್ಟು ವಿಶ್ರಾಂತಿ ಪಡೆಯಲಿದ್ದಾರೆ. ಅದಕ್ಕಾಗಿ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ನಟಿ ಪೂರ್ಣಗೊಳಿಸುತ್ತಿದ್ದಾರೆ. ಇದರ ನಡುವೆ ದೀಪಿಕಾ ಮತ್ತು ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಮೊದಲ ಬಾರಿಗೆ ತಮ್ಮ ಸಿನಿಮಾಗಾಗಿ ಮಾತೃ ಭಾಷೆಯಲ್ಲಿ ನಟಿ ಡಬ್ ಮಾಡಲಿದ್ದಾರೆ.

    ಪ್ರಭಾಸ್‌ಗೆ (Prabhas) ನಾಯಕಿಯಾಗಿ ನಟಿಸಿರುವ ‘ಕಲ್ಕಿ 2898 ಎಡಿ’ ಚಿತ್ರದ ಭಾರೀ ನಿರೀಕ್ಷೆಯಿದೆ. ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿನ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ತಮ್ಮ ಪಾತ್ರಕ್ಕಾಗಿ ಹಿಂದಿಯಲ್ಲಿ ಡಬ್ ಮಾಡಲಿದ್ದಾರೆ. ಆದರೆ ವಿಶೇಷತೆ ಏನೆಂದರೆ, ಮೊದಲ ಬಾರಿಗೆ ತಮ್ಮ ಮಾತೃ ಭಾಷೆ ಕನ್ನಡದಲ್ಲಿ ಡಬ್ ಮಾಡಲು ದೀಪಿಕಾ ಮುಂದಾಗಿದ್ದಾರೆ.

    ಈ ಚಿತ್ರದಲ್ಲಿ ಪ್ರಭಾಸ್ ಮತ್ತು ದೀಪಿಕಾ ಜೊತೆ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಮಲ್ ಹಾಸನ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ದಿಶಾ ಪಟಾನಿ ಕೂಡ ನಟಿಸಿದ್ದಾರೆ. ಸದ್ಯ ‘ಕಲ್ಕಿ 2898 ಎಡಿ’ ಚಿತ್ರಕ್ಕೆ ಕನ್ನಡದಲ್ಲಿ ದೀಪಿಕಾ ಡಬ್ ಮಾಡುವ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದನ್ನೂ ಓದಿ:‘ಹಲಗಲಿ’ ಚಿತ್ರದಿಂದ ಹೊರಬಂದಿದ್ದೇಕೆ? ಕಾರಣ ತಿಳಿಸಿದ ಡಾರ್ಲಿಂಗ್ ಕೃಷ್ಣ


    ಅಂದಹಾಗೆ, ದೀಪಿಕಾ ಪಡುಕೋಣೆ ಮೂಲತಃ ಕರ್ನಾಟಕದವರು. ಅವರು ಮೊದಲ ಬಾರಿಗೆ ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಐಶ್ವರ್ಯಾ’ ಚಿತ್ರದಲ್ಲಿ ನಟಿಸಿದ್ದರು. ಉಪೇಂದ್ರಗೆ ನಾಯಕಿಯಾಗಿ ಮಿಂಚಿದ್ದರು. ಇದೀಗ ದೀಪಿಕಾ ಬಾಲಿವುಡ್‌ನಲ್ಲಿ ನಂಬರ್ 1 ನಟಿಯಾಗಿ ಗುರುತಿಸಿಕೊಳ್ತಿದ್ದಾರೆ.

  • ಕೆವಿಎನ್ ತೆಕ್ಕೆಗೆ ‘ಕಲ್ಕಿ’ ಕರ್ನಾಟಕದ ವಿತರಣಾ ಹಕ್ಕು

    ಕೆವಿಎನ್ ತೆಕ್ಕೆಗೆ ‘ಕಲ್ಕಿ’ ಕರ್ನಾಟಕದ ವಿತರಣಾ ಹಕ್ಕು

    ಪ್ರಭಾಸ್ ನಟನೆಯ ಕಲ್ಕಿ ಸಿನಿಮಾದ ರಿಲೀಸ್ (Release) ಡೇಟ್ ಅಧಿಕೃತವಾಗಿ ಘೋಷಣೆಯಾಗಿದೆ. ಇದೇ ಜೂನ್ 27ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದೆ. ಈ ಬೆನ್ನಲ್ಲೇ ಕರ್ನಾಟಕದಲ್ಲಿ ಈ ಸಿನಿಮಾವನ್ನು ವಿತರಿಸಲು (Distribution) ಕೆವಿಎನ್ ಸಂಸ್ಥೆ ಮುಂದಾಗಿದೆ. ಮತ್ತೊಂದು ಖುಷಿ ಸಂಗತಿ ಅಂದರೆ,  ಭಾರತದ ಭಾಷೆಗಳಿಗೆ ಅಷ್ಟೇ ಅಲ್ಲ, ಇಂಗ್ಲಿಷ್ ಗೂ ಈ ಸಿನಿಮಾ ಡಬ್ ಆಗಿ ಹಾಲಿವುಡ್ (Hollywood) ನಲ್ಲೂ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಈ ಸಿನಿಮಾ ಒಂದಿಲ್ಲೊಂದು ಕಾರಣದಿಂದಾಗಿ ಸುದ್ದಿ ಆಗುತ್ತಲೇ ಇದೆ. ಈ ಬಾರಿ ಕಲಾವಿದರಿಗೆ ನೀಡಿರುವ ಸಂಭಾವನೆಯಿಂದಾಗಿ (Remuneration) ಸಖತ್ ಸದ್ದು ಮಾಡುತ್ತಿದೆ. ಮೂಲಗಳ ಪ್ರಕಾರ ಕಲಾವಿದರಿಗಾಗಿಯೇ ಒಟ್ಟು 250 ಕೋಟಿ ರೂಪಾಯಿಗೂ ಅಧಿಕ ಖರ್ಚು ಮಾಡಿದ್ದಾರಂತೆ ನಿರ್ಮಾಪಕರು. ಅದರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದಿರೋದು ಚಿತ್ರ ನಾಯಕ ಪ್ರಭಾಸ್.

    ಪ್ರಭಾಸ್‌ (Prabhas) ಈ ಸಿನಿಮಾಗಾಗಿ ಬರೋಬ್ಬರಿ 150 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ.  ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್‌ ಹಾಸನ್‌ ತಲಾ 20 ಕೋಟಿ ರೂಪಾಯಿ ಸಂಭಾವನೆ ಜೇಬಿಗಿಳಿಸಿಕೊಂಡಿದ್ದಾರೆ. ನಾಯಕಿ ದಿಶಾ ಪಟಾಣಿ 5 ಕೋಟಿ ರೂಪಾಯಿಗೆ ತೃಪ್ತಿ ಪಟ್ಟಿದ್ದಾರೆ. ಲಕ್ಷದಲ್ಲಿ ಸಂಭಾವನೆ ಪಡೆಯುವ ಅನೇಕ ನಟರೂ ಈ ಸಿನಿಮಾದಲ್ಲಿ ಇದ್ದಾರೆ.

     

    ನಾಗ್‌ ಅಶ್ವಿನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಲ್ಕಿ (Kalki 2898 AD) ಸಿನಿಮಾ, ಈಗಾಗಲೇ ಶೂಟಿಂಗ್‌ನಲ್ಲಿ ಬಿಜಿಯಾಗಿದೆ. ಈ ನಡುವೆ ಈಗ ಸೋಷಿಯಲ್‌ ಮೀಡಿಯಾದಲ್ಲಿ ಈ ಸಿನಿಮಾ  ಟ್ರೆಂಡಿಂಗ್‌ನಲ್ಲಿಯೂ ಮುಂದುವರಿದಿದೆ. ಅದಕ್ಕೆ ಕಾರಣ ರಿಲೀಸ್‌ ಆದ ಅಮಿತಾಭ್ ಬಚ್ಚನ್‌ ಅವರ ಹೊಸ ಲುಕ್‌.

  • ‘ಕಣ್ಣಪ್ಪ’ ಸಿನಿಮಾದ ವಿಶೇಷ ಪಾತ್ರದಲ್ಲಿ ನಟ ಪ್ರಭಾಸ್

    ‘ಕಣ್ಣಪ್ಪ’ ಸಿನಿಮಾದ ವಿಶೇಷ ಪಾತ್ರದಲ್ಲಿ ನಟ ಪ್ರಭಾಸ್

    ಗಾಗಲೇ ಸ್ಟಾರ್‌ ಕಾಸ್ಟ್‌ ವಿಚಾರವಾಗಿಯೇ ಸಾಕಷ್ಟು ಸುದ್ದಿಯಲ್ಲಿದೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಕಣ್ಣಪ್ಪ (Kannappa) ಸಿನಿಮಾ. ಈಗ ಇದೇ ಸಿನಿಮಾ ತಂಡಕ್ಕೆ ಇನ್ನೊಬ್ಬ ಸ್ಟಾರ್‌ ನಟನ ಎಂಟ್ರಿಯಾಗಿದೆ. ಅದು ಬೇರಾರು ಅಲ್ಲ, ಪ್ಯಾನ್‌ ಇಂಡಿಯನ್‌ ಹೀರೋ ಪ್ರಭಾಸ್.

    ಈಗಾಗಲೇ ಅಕ್ಷಯ್‌ ಕುಮಾರ್‌, ಮೋಹನ್‌ ಬಾಬು, ಮೋಹನ್‌ ಲಾಲ್‌, ಶರತ್‌ಕುಮಾರ್‌, ಕಣ್ಣಪ್ಪ ಚಿತ್ರದ ತಾರಾಬಳಗದಲ್ಲಿದ್ದಾರೆ. ಈಗ ಈ ಸ್ಟಾರ್‌ ತಾರಾಬಳಗಕ್ಕೆ ಪ್ರಭಾಸ್‌ (Prabhas) ಅವರ ಎಂಟ್ರಿಯೂ ಆಗಿದೆ. ಈ ವಿಚಾರವನ್ನು ಸ್ವತಃ ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ.

    ಮುಖೇಷ್‌ ಕುಮಾರ್‌ ಸಿಂಗ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕಣ್ಣಪ್ಪ ಸಿನಿಮಾ, ಬಹುಭಾಷೆಗಳಲ್ಲಿ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಲಿದೆ. ಬಹು ಕೋಟಿ ವೆಚ್ಚದಲ್ಲೂ ಈ ಸಿನಿಮಾ ಮೂಡಿಬರುತ್ತಿದೆ. ಶಿವನ ಪರಮ ಭಕ್ತ ಕಣ್ಣಪ್ಪನಾಗಿ ವಿಷ್ಣು ಮಂಚು ನಟಿಸಲಿದ್ದಾರೆ.

    ಕಳೆದ ಏಳು ವರ್ಷಗಳಿಂದ ಈ ಪ್ರಾಜೆಕ್ಟ್‌ ಸಲುವಾಗಿ ವಿಷ್ಣು ಮಂಚು ಶ್ರಮಿಸುತ್ತಿದ್ದಾರೆ. ಅಷ್ಟೇ ಅದ್ದೂರಿಯಾಗಿಯೇ ಅದನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಅದರಂತೆ ಸ್ಟಾರ್‌ ಕಲಾವಿದರನ್ನೇ ಆಯ್ಕೆ ಮಾಡಿಕೊಳ್ಳುತ್ತ ಕುತೂಹಲ ಮೂಡಿಸುತ್ತಿದೆ. ಹಾಲಿವುಡ್‌ನ ಶೆಲ್ಡೋನ್‌ ಚಾವ್‌ ಅವರ ಛಾಯಾಗ್ರಹಣ, ಕೇಚ ಖಂಫಕದೀ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.