Tag: ಪ್ರಭಾಸ್

  • ರೀಲ್ಸ್ ರಾಣಿ ಈಗ ಪ್ರಭಾಸ್‌ಗೆ ನಾಯಕಿ

    ರೀಲ್ಸ್ ರಾಣಿ ಈಗ ಪ್ರಭಾಸ್‌ಗೆ ನಾಯಕಿ

    ‘ಕಲ್ಕಿ’ ಸಿನಿಮಾದ ಸಕ್ಸಸ್ ನಂತರ ‘ಸೀತಾರಾಮಂ’ (Seetharamam) ಡೈರೆಕ್ಟರ್ ಹನು ರಾಘವಪುಡಿ ಜೊತೆ ಪ್ರಭಾಸ್ (Prabhas) ಕೈಜೋಡಿಸಿದ್ದಾರೆ. ಈ ಚಿತ್ರಕ್ಕೆ ರೀಲ್ಸ್ ರಾಣಿ ಇಮಾನ್ ಇಸ್ಮಾಯಿಲ್ ನಾಯಕಿಯಾಗಿದ್ದಾರೆ. ಸೋಷಿಯಲ್ ಮೀಡಿಯಾ ಸ್ಟಾರ್ ಆಗಿರುವ ಇಮಾನ್ ಅವರು ಪ್ರಭಾಸ್‌ಗೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ.

     

    View this post on Instagram

     

    A post shared by Imanvi (@iman1013)

    ಹೈದರಾಬಾದ್ ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾದ ಮುಹೂರ್ತ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದೆ. ಈ ವೇಳೆ, ಇಮಾನ್ವಿ (Imanvi) ಎಂದೇ ಫೇಮಸ್ ಆಗಿರುವ ರೀಲ್ಸ್ ರಾಣಿ ಕೂಡ ಭಾಗಿಯಾಗಿದ್ದರು. ಇದು ಅನೇಕರ ಗಮನ ಸೆಳೆದಿದೆ. ರೀಲ್ಸ್ ರಾಣಿ ಇಮಾನ್ವಿ ಮೊದಲ ಸಿನಿಮಾನೇ ಪ್ರಭಾಸ್ ಜೊತೆ ನಟಿಸುತ್ತಿರುವ ಬಗ್ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಈಕೆಯ ಹಿನ್ನೆಲೆ ಬಗ್ಗೆಯೂ ಆಸಕ್ತಿ ತೋರಿಸುತ್ತಿದ್ದಾರೆ.

     

    View this post on Instagram

     

    A post shared by Imanvi (@iman1013)

    ಇನ್ನೂ ಇನ್ಸ್ಟಾಗ್ರಾಂನಲ್ಲಿ 70 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ನಟಿ, ತನ್ನ ಡ್ಯಾನ್ಸ್ ವಿಡಿಯೋಗಳಿಂದ ಸದಾ ಗಮನ ಸೆಳೆಯುತ್ತಾರೆ. ಆಕೆಯ ಡ್ಯಾನ್ಸ್ ಮೂವ್ಸ್‌ಗೆ ಮರುಳಾಗದವರಿಲ್ಲ. ಕೆಲ ಸಣ್ಣ ಪುಟ್ಟ ಚಿತ್ರಗಳಲ್ಲಿ ನಟಿಸಿರುವ ಇಮಾನ್ವಿ ಹೆಚ್ಚು ಡ್ಯಾನ್ಸರ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಚಿರಪರಿಚಿತ. ದೆಹಲಿ ಮೂಲದ ಈ ಚೆಲುವೆ ಯೂಟ್ಯೂಬ್ ಚಾನೆಲ್‌ನಲ್ಲಿ 1.81 ಮಿಲಿಯನ್ ಸಬ್‌ಸ್ಕೈಬರ್ ಹೊಂದಿದ್ದಾರೆ. ಇನ್ನೂ ತಂದೆಯ ಪ್ರೋತ್ಸಾಹದೊಂದಿಗೆ ಕೆಲಸ ಬಿಟ್ಟು ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು. ಈಗ ನಾಯಕಿಯಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

    ಅಂದಹಾಗೆ, ಪ್ರಭುತ್ವಕ್ಕಾಗಿ ಯುದ್ಧ ನಡೆದಾಗ ಒಬ್ಬ ಯೋಧ ಯಾವುದಕ್ಕಾಗಿ ತಾವು ಹೋರಾಡಬೇಕು ಎಂಬ ಎಂಬರ್ಥದ ಶೀರ್ಷಿಕೆಯೊಂದಿಗೆ ಈ ಪೋಸ್ಟ್ ಅನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಹಂಚಿಕೊಂಡಿದೆ. 1940ರ ದಶಕದ ಕಥೆಯನ್ನು ಆಧರಿಸಿರುವ ಐತಿಹಾಸಿಕ ಕಾಲ್ಪನಿಕ ಚಿತ್ರ ಇದು ಎನ್ನಲಾಗಿದ್ದು, ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗುತ್ತದೆ.

  • ‘ಕೆಜಿಎಫ್ 2’ ನಿರ್ದೇಶಕನನ್ನು ಹಾಡಿ ಹೊಗಳಿದ ಪ್ರಭಾಸ್

    ‘ಕೆಜಿಎಫ್ 2’ ನಿರ್ದೇಶಕನನ್ನು ಹಾಡಿ ಹೊಗಳಿದ ಪ್ರಭಾಸ್

    ತೆಲುಗು ನಟ ಪ್ರಭಾಸ್ (Prabhas) ಇದೀಗ ‘ಸಲಾರ್’ ನಿರ್ದೇಶಕ ಪ್ರಶಾಂತ್ ನೀಲ್‌ರನ್ನು ಹಾಡಿ ಹೊಗಳಿದ್ದಾರೆ. ನೀವು ಹೀರೋನೇ ಎಂದು ನಿರ್ದೇಶಕ ಪ್ರಶಾಂತ್ ನೀಲ್‌ ಸ್ಟೈಲೀಶ್‌ ಲುಕ್‌ಗೆ (Prashanth Neel) ಪ್ರಭಾಸ್ ಕೊಂಡಾಡಿದ್ದಾರೆ. ಇದನ್ನೂ ಓದಿ:‘ರಕ್ಕಸಪುರದೋಳ್’ ರಾಜ್ ಬಿ ಶೆಟ್ಟಿ ಆರ್ಭಟ

    ಹೈದರಾಬಾದ್‌ನಲ್ಲಿ ಪ್ರಭಾಸ್ ನಟನೆಯ ‘ಫೌಜಿ’ ಸಿನಿಮಾದ ಮುಹೂರ್ತ ನಡೆದಿದೆ. ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಪ್ರಶಾಂತ್ ನೀಲ್‌ ಕೂಡ ಭಾಗಿಯಾಗಿದ್ದರು. ಈ ವೇಳೆ, ಬ್ಲ್ಯಾಕ್ ಔಟ್ ಫಿಟ್‌ನಲ್ಲಿ ಸ್ಟೈಲೀಶ್‌ ಆಗಿ ಎಂಟ್ರಿ ಕೊಟ್ಟ ನಿರ್ದೇಶಕನನ್ನು ನೋಡಿ ಆ ಕ್ಷಣವೇ ‘ಲುಕ್ ಲೈಕ್ ಹೀರೋ’ ಅಂತ ಪ್ರಭಾಸ್ ಮೆಚ್ಚುಗೆ ಸೂಚಿಸಿದ್ದರು. ಆಗ ನಗು ನಗುತ್ತಲೇ ನಟನನ್ನು ಪ್ರಶಾಂತ್ ನೀಲ್ ತಬ್ಬಿಕೊಂಡರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಇಬ್ಬರ ಸ್ನೇಹ ಕಂಡು ಫ್ಯಾನ್ಸ್‌ ಖುಷಿಪಟ್ಟಿದ್ದಾರೆ.

     

    View this post on Instagram

     

    A post shared by Manav Manglani (@manav.manglani)

    ಅಂದಹಾಗೆ, ಇಂದಿಗೂ ಇಬ್ಬರ ಒಡನಾಟ ಚೆನ್ನಾಗಿದೆ ಎಂಬುದಕ್ಕೆ ಈ ಸಂದರ್ಭ ಸಾಕ್ಷಿಯಾಗಿದೆ. ಈ ಹಿಂದೆ ಇಬ್ಬರ ಬಾಂಧವ್ಯ ಚೆನ್ನಾಗಿಲ್ಲ. ‘ಸಲಾರ್ 2’ (Salaar 2)  ಸೆಟ್ಟೇರಲ್ಲ ಎಂದೆಲ್ಲಾ ಕಿಡಿಗೇಡಿಗಳು ಸುದ್ದಿ ಹಬ್ಬಿಸಿದ್ದರು. ಅದಕ್ಕೆ, ಪ್ರಶಾಂತ್ ನೀಲ್ ಪತ್ನಿ ಪರೋಕ್ಷವಾಗಿ ಟೀಕೆಗಳಿಗೆ ಉತ್ತರ ಕೊಟ್ಟಿದ್ದರು. ಈಗ ಮತ್ತೊಮ್ಮೆ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಜೊತೆಯಾಗಿರೋದು ಈ ಹಿಂದೆ ಹರಿದಾಡುತ್ತಿದ್ದ ವದಂತಿಗಳಿಗೆ ತಕ್ಕ ಉತ್ತರ ಸಿಕ್ಕಿದೆ.

    ಪ್ರಭಾಸ್ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಿದ ಬಳಿಕ ‘ಸಲಾರ್ 2’ ಚಿತ್ರದ ಶೂಟಿಂಗ್ ಶುರುವಾಗಲಿದೆ. ಇನ್ನೂ ಕಳೆದ ವಾರ ‘ಕೆಜಿಎಫ್ 2’ (KGF 2) ನಿರ್ದೇಶಕನ ಜೊತೆಗಿನ ಜ್ಯೂ.ಎನ್‌ಟಿಆರ್ ಹೊಸ ಚಿತ್ರದ ಮುಹೂರ್ತ ಸರಳವಾಗಿ ಜರುಗಿದೆ. ಸೆಪ್ಟೆಂಬರ್‌ನಿಂದ ಶೂಟಿಂಗ್ ಆರಂಭವಾಗಲಿದೆ. ಈ ಸಿನಿಮಾದ ಬಳಿಕ ಪ್ರಭಾಸ್ ಜೊತೆ ಪ್ರಶಾಂತ್ ನೀಲ್ ಕೈಜೋಡಿಸಲಿದ್ದಾರೆ.

  • ವಯನಾಡು ಭೂಕುಸಿತ ದುರಂತ- 2 ಕೋಟಿ ದೇಣಿಗೆ ನೀಡಿದ ಪ್ರಭಾಸ್

    ವಯನಾಡು ಭೂಕುಸಿತ ದುರಂತ- 2 ಕೋಟಿ ದೇಣಿಗೆ ನೀಡಿದ ಪ್ರಭಾಸ್

    ಕೇರಳದ ವಯನಾಡಿನಲ್ಲಿ (Wayanad Landslide) ಸಂಭವಿಸಿದ ಭೀಕರ ಭೂಕುಸಿತದಲ್ಲಿ ಸತ್ತವರ ಸಂಖ್ಯೆ ಈಗ 400 ದಾಟಿದೆ. ಈ ದುರಂತದಲ್ಲಿ ಮನೆಯನ್ನು, ಕುಟುಂಬಸ್ಥರನ್ನು ಕಳೆದುಕೊಂಡು ಹಲವರು ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಸಂತ್ರಸ್ತರ ಸಹಾಯಕ್ಕೆ ಡಾರ್ಲಿಂಗ್ ಪ್ರಭಾಸ್ (Prabhas) ನೆರವಾಗಿದ್ದಾರೆ.

    ವಯನಾಡು ಭೂಕುಸಿತ ದುರಂತದ ನಿಮಿತ್ತ ಸಂಕಷ್ಟದಲ್ಲಿರುವವರಿಗೆ ನಟ ಪ್ರಭಾಸ್ 2 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಕೇರಳದ ಸಿಎಂ ಪರಿಹಾರ ನಿಧಿಗೆ 2 ಕೋಟಿ ರೂ. ನೀಡುವ ಮೂಲಕ ಪ್ರಭಾಸ್ ಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ:ಗೋವಾದಲ್ಲಿ ಕೊಡೆ ಹಿಡಿದು ನಿಂತ ‘ಬಿಗ್ ಬಾಸ್’ ಖ್ಯಾತಿಯ ಸೋನು

    ಅಂದಹಾಗೆ, ವಯನಾಡು ಭೂಕುಸಿತ ದುರಂತ ಹಿನ್ನೆಲೆ ಈಗಾಗಲೇ ರಶ್ಮಿಕಾ ಮಂದಣ್ಣ, ಸೂರ್ಯ ದಂಪತಿ, ಮಮ್ಮುಟ್ಟಿ, ಚಿಯಾನ್ ವಿಕ್ರಮ್, ದುಲ್ಕರ್ ಸಲ್ಮಾನ್, ಅಲ್ಲು ಅರ್ಜುನ್, ಮೆಗಾಸ್ಟಾರ್ ಚಿರಂಜೀವಿ ಕುಟುಂಬ ಸೇರಿದಂತೆ ಅನೇಕರು ಕೇರಳದ ಸಿಎಂ ಫಂಡ್‌ಗೆ ಲಕ್ಷ ಲಕ್ಷ ದೇಣಿಗೆ ನೀಡಿದ್ದಾರೆ.

  • ಪ್ರಭಾಸ್‌ಗೆ ತ್ರಿಷಾ ನಾಯಕಿ- ‘ಅನಿಮಲ್’ ನಿರ್ದೇಶಕ ಆ್ಯಕ್ಷನ್ ಕಟ್

    ಪ್ರಭಾಸ್‌ಗೆ ತ್ರಿಷಾ ನಾಯಕಿ- ‘ಅನಿಮಲ್’ ನಿರ್ದೇಶಕ ಆ್ಯಕ್ಷನ್ ಕಟ್

    ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದ ಯಶಸ್ಸಿನಲ್ಲಿರುವ ಪ್ರಭಾಸ್ ಇದೀಗ ‘ಸ್ಪಿರಿಟ್’ ಸಿನಿಮಾಗೆ ಸಿದ್ಧತೆ ನಡೆಸುತ್ತಿದ್ದಾರೆ. ಇದರ ನಡುವೆ ಈ ಸಿನಿಮಾ ಬಗ್ಗೆ ಲೇಟೆಸ್ಟ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಈ ಚಿತ್ರದಲ್ಲಿ ಡಾರ್ಲಿಂಗ್ ಪ್ರಭಾಸ್ ಜೊತೆ ತ್ರಿಷಾ ರೊಮ್ಯಾನ್ಸ್ ಮಾಡಲಿದ್ದಾರೆ. ಇದನ್ನೂ ಓದಿ:ಗೋವಾದಲ್ಲಿ ಕೊಡೆ ಹಿಡಿದು ನಿಂತ ‘ಬಿಗ್ ಬಾಸ್’ ಖ್ಯಾತಿಯ ಸೋನು

    ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟಿವ್ ಇರುವ ನಟಿ ತ್ರಿಷಾ (Trisha) ಇಂದಿಗೂ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ವಿಜಯ ದಳಪತಿ, ಮೆಗಾಸ್ಟಾರ್ ಚಿರಂಜೀವಿ, ಅಜಿತ್ ಕುಮಾರ್‌ಗೆ ಪ್ರಸ್ತುತ ನಾಯಕಿಯಾಗಿ ಸದ್ದು ಮಾಡುತ್ತಿರುವ ತ್ರಿಷಾ ಇದೀಗ ಪ್ರಭಾಸ್ (Prabhas) ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ.

    ತ್ರಿಷಾರನ್ನು ಈಗಾಗಲೇ ಅನಿಮಲ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಭೇಟಿಯಾಗಿ ಸಿನಿಮಾದ ಕಥೆ ಹೇಳಿದ್ದಾರೆ. ಸಿನಿಮಾ ಕುರಿತು ಮಾತುಕತೆಯಾಗಿದ್ದು, ಸದ್ಯದಲ್ಲೇ ಚಿತ್ರತಂಡ ಈ ಕುರಿತು ಘೋಷಣೆ ಮಾಡಬೇಕಿದೆ. ಸದ್ಯ ‘ಸ್ಪಿರಿಟ್’ ಸಿನಿಮಾದ ಪ್ರೀ ಪ್ರೋಡಕ್ಷನ್ ಕೆಲಸಗಳು ನಡೆಯುತ್ತಿದೆ.

    ಪ್ರಭಾಸ್ ಮತ್ತು ತ್ರಿಷಾ ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ದಿ ರಾಜಾ ಸಾಬ್ ಸಿನಿಮಾದ ಬಳಿಕ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಜೊತೆ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಪ್ರಭಾಸ್. ಸದ್ಯ ಈ ಚಿತ್ರದ ಅಪ್‌ಡೇಟ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  • ಡಿವೋರ್ಸ್ ಬಳಿಕ ಅಣ್ಣನ ಗೆಳೆಯನ ಮೇಲೆ ನಿಹಾರಿಕಾಗೆ ಪ್ಯಾರ್

    ಡಿವೋರ್ಸ್ ಬಳಿಕ ಅಣ್ಣನ ಗೆಳೆಯನ ಮೇಲೆ ನಿಹಾರಿಕಾಗೆ ಪ್ಯಾರ್

    ಟಾಲಿವುಡ್ ನಟಿ ನಿಹಾರಿಕಾ ಕೊನಿಡೆಲಾ (Niharika Konidela) ಪ್ರಸ್ತುತ ನಿರ್ಮಾಪಕಿಯಾಗಿಯೂ ಸದ್ದು ಮಾಡುತ್ತಿದ್ದಾರೆ. ಸದ್ಯ ನಟಿಯ ನಿರ್ಮಾಣದ ‘ಕಮಿಟಿ ಕುರ್ರಾಲು’ ರಿಲೀಸ್‌ಗೆ ಸಿದ್ಧವಾಗಿದೆ. ಈ ಚಿತ್ರದ ಪ್ರಚಾರ ಕಾರ್ಯದ ವೇಳೆ, ಅಣ್ಣನ ಗೆಳೆಯನ ಮೇಲಿನ ಪ್ರೀತಿಯ ಬಗ್ಗೆ ನಿಹಾರಿಕಾ ಮಾತನಾಡಿದ್ದಾರೆ.

    ನಾಯಕಿಯಾಗಿ ನಿಹಾರಿಕಾಗೆ ಸಕ್ಸಸ್ ಸಿಗಲಿಲ್ಲ. ಬಳಿಕ ದಾಂಪತ್ಯ ಜೀವನ ಕೂಡ ಅವರ ಕೈಹಿಡಿಯಲಿಲ್ಲ. ಈಗ ನಿರ್ಮಾಪಕಿಯಾಗಿ ಟಾಲಿವುಡ್‌ನಲ್ಲಿ ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡಿದ್ದಾರೆ. ಡಿವೋರ್ಸ್ ಬಳಿಕ ಪ್ರೀತಿಯ ಬಗ್ಗೆನಿಹಾರಿಕಾ ಆಡಿರುವ ಮಾತು ಈಗ ಸೆನ್ಸೇಷನ್ ಕ್ರಿಯೆಟ್ ಮಾಡಿದೆ. ಇದನ್ನೂ ಓದಿ:ಬದುಕಿನಲ್ಲಿ ಎದುರಿಸಿದ ಏರಿಳಿತಗಳ ಬಗ್ಗೆ ಮಾತನಾಡಿದ ಸಮಂತಾ

    ಸಂದರ್ಶನವೊಂದರಲ್ಲಿ ನಟಿಗೆ ಮಹೇಶ್ ಬಾಬು, ಎನ್‌ಟಿಆರ್, ಪ್ರಭಾಸ್, ಇವರಲ್ಲಿ ಯಾರನ್ನು ಇಷ್ಟಪಡುತ್ತೀರಿ ಎಂದು ನಿರೂಪಕಿ ಕೇಳಿದ್ದಾರೆ. ಅದಕ್ಕೆ ಕೊಂಚವೂ ಯೋಚಿಸದೆ ಪ್ರಭಾಸ್ ಎಂದು ಹೇಳಿದರು. ನಾನು ಪ್ರಭಾಸ್‌ರನ್ನು ಇಷ್ಟಪಡುತ್ತೇನೆ. ಅವರ ಹಾಸ್ಯ ನನಗಿಷ್ಟ ಎಂದು ನಟಿ ಮಾತನಾಡಿದ್ದಾರೆ. ಅವರ ಹೇಳಿಕೆ ಈಗ ಭಾರೀ ಸದ್ದು ಮಾಡುತ್ತಿದೆ.

    ಅಂದಹಾಗೆ, ರಾಮ್ ಚರಣ್ ಆತ್ಮೀಯ ಸ್ಮೇಹಿತರಲ್ಲಿ ನಿಹಾರಿಕಾ ಕೂಡ ಒಬ್ಬರು. ಅದಲ್ಲದೇ, ವರುಣ್ ತೇಜ್ ಕೂಡ ನನಗೆ ಪ್ರಭಾಸ್ ಎಂದರೆ ಇಷ್ಟ ಅಂತ ಹಲವು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ.

  • ತೆಲುಗಿನಲ್ಲಿ ಬಿಗ್ ಚಾನ್ಸ್- ಪ್ರಭಾಸ್‌ಗೆ ಮೃಣಾಲ್ ಠಾಕೂರ್ ಜೋಡಿ

    ತೆಲುಗಿನಲ್ಲಿ ಬಿಗ್ ಚಾನ್ಸ್- ಪ್ರಭಾಸ್‌ಗೆ ಮೃಣಾಲ್ ಠಾಕೂರ್ ಜೋಡಿ

    ಸೀತಾರಾಮಂ, ಹಾಯ್ ನಾನ್ನಾ ಸಿನಿಮಾಗಳ ಮೂಲಕ ಸಕ್ಸಸ್ ಕಂಡ ಮೃಣಾಲ್ ಠಾಕೂರ್ (Mrunal Thakur) ಇದೀಗ ತೆಲುಗಿನಲ್ಲಿ ಗೋಲ್ಡನ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಡಾರ್ಲಿಂಗ್ ಪ್ರಭಾಸ್ (Prabhas) ಜೊತೆ ರೊಮ್ಯಾನ್ಸ್ ಮಾಡೋಕೆ ನಟಿ ರೆಡಿಯಾಗಿದ್ದಾರೆ.

    ತೆಲುಗು ಮತ್ತು ಬಾಲಿವುಡ್‌ನಲ್ಲಿ ಗುರುತಿಸಿಕೊಳ್ತಿರುವ ಮೃಣಾಲ್‌ಗೆ ಪ್ರಭಾಸ್ ಚಿತ್ರತಂಡ ಮಣೆ ಹಾಕಿದೆ. ಸುಂದರ ಪ್ರೇಮಕಥೆಯಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ಮೃಣಾಲ್ ಕಾಣಿಸಿಕೊಳ್ತಿದ್ದಾರೆ. ವಿಶೇಷ ಅಂದ್ರೆ, ‘ಸೀತಾರಾಮಂ’ ನಿರ್ದೇಶಕ ಈ ಚಿತ್ರಕ್ಕೂ ಡೈರೆಕ್ಷನ್‌ ಮಾಡುತ್ತಿದ್ದಾರೆ. ಹನು ರಾಘವಪುಡಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇದನ್ನೂ ಓದಿ:ನಾನು ಸುದೀಪ್ ಅವರ ದೊಡ್ಡ ಅಭಿಮಾನಿ: ‘ಮ್ಯಾಕ್ಸ್’ ನಟಿ ಸಂಯುಕ್ತಾ ಹೊರನಾಡ್

    ಪ್ರಭಾಸ್ ಮತ್ತು ಮೃಣಾಲ್ ಕಾಂಬಿನೇಷನ್‌ ಚಿತ್ರ ಇದೇ ಸೆಪ್ಟೆಂಬರ್‌ನಿಂದ ಶುರುವಾಗಲಿದೆ. ಈ ಸಿನಿಮಾ‌ ತಂಡದಿಂದ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

    ಇನ್ನೂ ಕಲ್ಕಿ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ಅತಿಥಿ ಪಾತ್ರ ಮಾಡಿದ್ದರು. ಅವರ ನಟನೆಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹಾಗಾಗಿ ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ.

  • ಬೊಕ್ಕೆ ಹಿಡಿದು ಲವರ್ ಬಾಯ್ ಗೆಟಪ್‌ನಲ್ಲಿ ಬಂದ ಪ್ರಭಾಸ್

    ಬೊಕ್ಕೆ ಹಿಡಿದು ಲವರ್ ಬಾಯ್ ಗೆಟಪ್‌ನಲ್ಲಿ ಬಂದ ಪ್ರಭಾಸ್

    ಡಾರ್ಲಿಂಗ್ ಪ್ರಭಾಸ್ (Actor Prabhas) ಇದೀಗ ಬೊಕ್ಕೆ ಹಿಡಿದು ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ. ರೊಮ್ಯಾಂಟಿಕ್‌ ಹುಡುಗನ ಅವತಾರದಲ್ಲಿ ಪ್ರಭಾಸ್‌ ಮಿಂಚಿದ್ದಾರೆ. ‘ದಿ ರಾಜಾ ಸಾಬ್’ ಸಿನಿಮಾದ ಪ್ರಭಾಸ್ ಪಾತ್ರದ ಗ್ಲಿಂಪ್ಸ್ ಇದೀಗ ರಿವೀಲ್ ಆಗಿದೆ. ಇದನ್ನೂ ಓದಿ:ಕಾರ್ತಿ ನಟನೆಯ ‘ಸರ್ದಾರ್ 2’ ಸಿನಿಮಾ ರಿಜೆಕ್ಟ್ ಮಾಡಿದ ಶ್ರೀಲೀಲಾ

    ಪ್ಯಾನ್ ಇಂಡಿಯಾ ಚಿತ್ರ ‘ಕಲ್ಕಿ’ (Kalki 2898 AD) ಯಶಸ್ಸಿನ ನಂತರ ‘ದಿ ರಾಜಾ ಸಾಬ್’ (The Raja Saab) ಚಿತ್ರದ ಮೂಲಕ ಪ್ರಭಾಸ್ ಸದ್ದು ಮಾಡುತ್ತಿದ್ದಾರೆ. ಮತ್ತೆ ಲವರ್ ಬಾಯ್ ಗೆಟಪ್‌ನಲ್ಲಿ ನಟ ಮಿಂಚಿದ್ದಾರೆ. ಬೈಕ್ ರೈಡ್ ಮಾಡುತ್ತಾ ಬೊಕ್ಕೆ ಹಿಡಿದು ನಟ ಮಸ್ತ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಸಖತ್ ಸ್ಟೈಲೀಶ್ ಆಗಿರುವ ಪ್ರಭಾಸ್ ಪಾತ್ರದ ಮೊದಲ ಲುಕ್‌ಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

    ಈ ಚಿತ್ರವನ್ನು ಮಾರುತಿ ಎಂಬುವವರು ನಿರ್ದೇಶನ ಮಾಡಿದ್ದು, ಪ್ರಭಾಸ್‌ಗೆ ನಿಧಿ ಅಗರ್‌ವಾಲ್ ಜೋಡಿಯಾಗಿ ನಟಿಸಿದ್ದಾರೆ. ಮತ್ತೋರ್ವ ನಟಿಯಾಗಿ ಪಾಕಿಸ್ತಾನಿ ಬೆಡಗಿ ಸಜಲ್ ಅಲಿ ಕೂಡ ಇರಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ಪರಿಸರ ಸ್ನೇಹಿ ಇನ್ವಿಟೇಷನ್ ಮೂಲಕ ಮಾದರಿಯಾದ ನಟಿ ಸೋನಲ್, ತರುಣ್ ಸುಧೀರ್

    ಇನ್ನೂ ಸಿನಿಮಾದಲ್ಲಿನ ಪ್ರಭಾಸ್ ಪಾತ್ರದ ಗ್ಲಿಂಪ್ಸ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಮುಂದಿನ ವರ್ಷ ಏ.10ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ.

  • ಪ್ರಭಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ‘ದಿ ರಾಜಾ ಸಾಬ್’ ಚಿತ್ರದ ಬಗ್ಗೆ ಸಿಕ್ತು ಅಪ್‌ಡೇಟ್

    ಪ್ರಭಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ‘ದಿ ರಾಜಾ ಸಾಬ್’ ಚಿತ್ರದ ಬಗ್ಗೆ ಸಿಕ್ತು ಅಪ್‌ಡೇಟ್

    ಡಾರ್ಲಿಂಗ್ ಪ್ರಭಾಸ್ (Prabhas) ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ‘ಕಲ್ಕಿ’ (Kalki 2898 AD) ಸಿನಿಮಾದ ಯಶಸ್ಸಿನ ನಂತರ ಪ್ರಭಾಸ್ ಮುಂದಿನ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ (The Raja Saab) ಸಿನಿಮಾದ ಫಸ್ಟ್ ಗ್ಲಿಂಪ್ಸ್ ರಿವೀಲ್ ಆಗಲಿದೆ.

    ಇದೇ ಜು.29ರಂದು ಸಂಜೆ 5 ಗಂಟೆಗೆ ‘ದಿ ರಾಜಾ ಸಾಬ್’ ಸಿನಿಮಾದ ಮೊದಲು ತುಣುಕು ಹೊರಬೀಳಲಿದೆ. ಪ್ರಭಾಸ್ ಲುಕ್ ಅನಾವರಣ ಆಗಲಿದೆ. ಚಿತ್ರದ ಗ್ಲಿಂಪ್ಸ್ ಕುರಿತು ಚಿತ್ರತಂಡ ಮಾಹಿತಿ ನೀಡಿದೆ. ಪ್ರಭಾಸ್ ಬ್ಯಾಕ್‌ ಸೈಡ್ ನಿಂತಿರುವ ಪೋಸ್ಟರ್ ರಿವೀಲ್ ಮಾಡಿ ಈ ಸಿಹಿಸುದ್ದಿಯನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ಈ ಚಿತ್ರದಲ್ಲಿ ಪ್ರಭಾಸ್‌ಗೆ ನಿಧಿ ಅಗರ್‌ವಾಲ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಮಾರುತಿ ಎಂಬುವವರು ನಿರ್ದೇಶನ ಮಾಡಿದ್ದಾರೆ. ಎಂದಿಗಿಂತ ಪ್ರಭಾಸ್ ಈ ಬಾರಿ ಸ್ಟೈಲೀಶ್‌ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಕುರಿತು ಫ್ಯಾನ್ಸ್‌ಗೆ ಭಾರೀ ನಿರೀಕ್ಷೆ ಇದೆ.

  • ಪ್ರಭಾಸ್ ಹೊಸ ಚಿತ್ರಕ್ಕೆ ನಾಯಕಿಯಾದ ಪಾಕಿಸ್ತಾನಿ ನಟಿ

    ಪ್ರಭಾಸ್ ಹೊಸ ಚಿತ್ರಕ್ಕೆ ನಾಯಕಿಯಾದ ಪಾಕಿಸ್ತಾನಿ ನಟಿ

    ಟಾಲಿವುಡ್ ನಟ ಪ್ರಭಾಸ್‌ಗೆ (Prabhas) ಈಗ ‘ಕಲ್ಕಿ’ ಸಿನಿಮಾ ಯಶಸ್ಸಿನಿಂದ ಬೇಡಿಕೆ ಹೆಚ್ಚಾಗಿದೆ. ಕೆರಿಯರ್‌ನಲ್ಲಿ ಹೊಸ ತಿರುವು ಸಿಕ್ಕಿದೆ. ಹೀಗಿರುವಾಗ ಡಾರ್ಲಿಂಗ್ ಪ್ರಭಾಸ್ ನಟನೆಯ ಹೊಸ ಸಿನಿಮಾಗೆ ಪಾಕಿಸ್ತಾನಿ ನಟಿಗೆ ಅವಕಾಶ ಕೊಡಲಾಗಿದೆ. ಪ್ರಭಾಸ್‌ ಜೊತೆ ಪಾಕಿಸ್ತಾನಿ ನಟಿ ಡ್ಯುಯೇಟ್‌ ಹಾಡಲಿದ್ದಾರೆ. ಇದನ್ನೂ ಓದಿ:‘ರಾಜಾ ರಾಣಿ’ ಶೋಗೆ ಬಂದ್ಮೇಲೆ ನನ್ನ ಅಸ್ತಿತ್ವ ಕಾಣಿಸುತ್ತಿದೆ: ಅದಿತಿ ಪ್ರಭುದೇವ

    ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಸಕ್ಸಸ್‌ನಿಂದ ಹಳೆಯ ಸಿನಿಮಾಗಳ ಸೋಲಿನ ಕಹಿ ಮರೆಸಿದೆ. ಈ ಸಿನಿಮಾ ಬಳಿಕ ‘ದಿ ರಾಜಾ ಸಾಬ್’ ಚಿತ್ರದ ಶೂಟಿಂಗ್‌ನಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ. ಹನು ರಾಘವಪುಡಿ ನಿರ್ದೇಶನ ಮಾಡುತ್ತಿದ್ದಾರೆ.

    ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಪಾಕಿಸ್ತಾನಿ ನಟಿ ಸಜಲ್ ಅಲಿಗೆ ಚಾನ್ಸ್ ಸಿಕ್ಕಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಚಿತ್ರತಂಡಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಭಾರತದಲ್ಲಿ ನಾಯಕಿಯರಿಗೆ ಕೊರತೆ ಏನಿದೆ. ಪಾಕಿಸ್ತಾನಿ ನಟಿಗೆ ಅವಕಾಶ ಕೊಡುವ ಅಗತ್ಯ ಏನಿದೆ ಎಂದೆಲ್ಲಾ ಚಿತ್ರತಂಡಕ್ಕೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಆದರೆ ಸಜಲ್ ಅಲಿನೇ ಈ ಚಿತ್ರದ ನಾಯಕಿ ಎಂದು ಅಧಿಕೃತ ಘೋಷಣೆ ಮಾಡಿಲ್ಲ ಚಿತ್ರತಂಡ. ಕೇವಲ ಹರಿದಾಡುತ್ತಿರುವ ಸುದ್ದಿಗೆ ನೆಟ್ಟಿಗರು ರಾಂಗ್ ಆಗಿದ್ದಾರೆ. ಈ ಕುರಿತು ಚಿತ್ರತಂಡ ರಿಯಾಕ್ಟ್‌ ಮಾಡುತ್ತಾರಾ ಎಂದು ಕಾಯಬೇಕಿದೆ.

    ಅಂದಹಾಗೆ, ಸಜಲ್ ಅಲಿಗೆ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಬಾಲಿವುಡ್‌ನಲ್ಲಿ ಈ ಹಿಂದೆ ‘ಮಾಮ್’ ಎಂಬ ಸಿನಿಮಾದಲ್ಲಿ ಅವರು ನಟಿಸಿದ್ದರು.

  • ಪ್ರಭಾಸ್ ಮದುವೆ ಬಗ್ಗೆ ಸೂಚನೆ ಕೊಟ್ಟ ದೊಡ್ಡಮ್ಮ

    ಪ್ರಭಾಸ್ ಮದುವೆ ಬಗ್ಗೆ ಸೂಚನೆ ಕೊಟ್ಟ ದೊಡ್ಡಮ್ಮ

    ತೆಲುಗಿನ ಸ್ಟಾರ್ ನಟ ಪ್ರಭಾಸ್ (Prabhas) ಸದ್ಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಇದರ ಮಧ್ಯೆ ಮತ್ತೆ ಪ್ರಭಾಸ್ ಮದುವೆ ಮ್ಯಾಟರ್ ಚರ್ಚೆಗೆ ಗ್ರಾಸವಾಗಿದೆ. ಈಗ ಸಂದರ್ಶನವೊಂದರಲ್ಲಿ ದೊಡ್ಡಮ್ಮ ಶ್ಯಾಮಲಾ ದೇವಿ ಪ್ರಭಾಸ್ ಮದುವೆ ಸೂಚನೆ ಕೊಟ್ಟಿದ್ದಾರೆ. ಇದನ್ನೂ ಓದಿ:‘ಫೈರ್ ಫ್ಲೈ’ ತಂಡದಿಂದ ಹೊಸ ಸುದ್ದಿ- ಶಿವಣ್ಣನ ಪುತ್ರಿ ಜೊತೆ ಕೈಜೋಡಿಸಿದ ಅಚ್ಯುತ್ ಕುಮಾರ್

    ಕಲ್ಕಿ ಯಶಸ್ಸಿನ ಕುರಿತು ಮಾತನಾಡಿರುವ ಅವರು, ಒಳ್ಳೆಯತನ ಮನುಷ್ಯನನ್ನು ಎಲ್ಲಿಯವರೆಗೆ ಕರೆದುಕೊಂಡು ಹೋಗಲಿದೆ ಎಂಬುದು ಸಾಬೀತಾಗಿದೆ. ಬಾಹುಬಲಿ ಬಳಿಕ ಪ್ರಭಾಸ್ ದೊಡ್ಡ ಯಶಸ್ಸು ಕಾಣುವುದಿಲ್ಲ ಎಂದು ಅನೇಕರು ಹೇಳಿದ್ದರು. ಆದರೆ ಈಗ ಏನಾಯ್ತು ಎಂದು ಪ್ರಶ್ನಿಸಿದ್ದಾರೆ. ಅದೇ ರೀತಿ ಪ್ರಭಾಸ್ ಮದುವೆ ವಿಚಾರದಲ್ಲೂ ಹೀಗೆಯೇ ಆಗುತ್ತದೆ ಎಂದಿದ್ದಾರೆ ಶ್ಯಾಮಲಾ ದೇವಿ. ಈ ಮೂಲಕ ಪ್ರಭಾಸ್ ಮದುವೆ ಆಗಲ್ಲ ಎನ್ನುವವರ ಬಾಯಿ ಮುಚ್ಚಿಸಿದ್ದಾರೆ. ಈಗ ಪ್ರಭಾಸ್ ಮದುವೆ ಕುರಿತು ದೊಡ್ಡಮ್ಮ ಸೂಚನೆ ಕೊಟ್ಟಿದ್ದಾರೆ.

    ಅಂದಹಾಗೆ, ಚಿತ್ರರಂಗದಲ್ಲಿ ಗಾಸಿಪ್ ಕಾಮನ್. ಅನುಷ್ಕಾ ಶೆಟ್ಟಿ, ಕೃತಿ ಸನೋನ್ ಇನ್ನೂ ಅನೇಕರ ಜೊತೆ ಪ್ರಭಾಸ್ ಹೆಸರು ಸದ್ದು ಮಾಡಿತ್ತು. ಈ ನಟಿಯರಲ್ಲಿ ಯಾರನ್ನಾದರೂ ಪ್ರಭಾಸ್ ಮದುವೆ ಆಗುತ್ತಾರೆ ಎಂದೇ ಭಾವಿಸಿದ್ದರು. ಆದರೆ ಆಗಿದ್ದೇ ಬೇರೆ. ಸಿಂಗಲ್ ಆಗಿರುವ 44 ವರ್ಷದ ಪ್ರಭಾಸ್ ಬೇಗ ಮದುವೆ ಆಗಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ.