Tag: ಪ್ರಭಾಸ್

  • ‘ಸಲಾರ್’ ರಿಲೀಸ್ ಯಾವಾಗ? ಗೊಂದಲದಲ್ಲಿ ಪ್ರಭಾಸ್ ಫ್ಯಾನ್ಸ್

    ‘ಸಲಾರ್’ ರಿಲೀಸ್ ಯಾವಾಗ? ಗೊಂದಲದಲ್ಲಿ ಪ್ರಭಾಸ್ ಫ್ಯಾನ್ಸ್

    ಪ್ರಭಾಸ್ (Prabhas) ಮತ್ತು ಪ್ರಶಾಂತ್ ನೀಲ್ (Prashant Neel) ಕಾಂಬಿನೇಷನ್ ನ ‘ಸಲಾರ್’ (Salaar) ಸಿನಿಮಾ ಸೆಪ್ಟೆಂಬರ್ 28ರಂದು ರಿಲೀಸ್ ಆಗಲಿದೆ ಎಂದು ಸ್ವತಃ ಚಿತ್ರತಂಡವೇ ಹೇಳಿಕೊಂಡಿತ್ತು. ಬಿಡುಗಡೆಯ ದಿನಾಂಕವನ್ನು (Release Date) ನಿಗದಿ ಮಾಡಿಕೊಂಡು ಕೆಲಸ ಆರಂಭಿಸಿತ್ತು. ಆದರೆ, ಇದೀಗ ಬಿಡುಗಡೆ ಕುರಿತು ನಾನಾ ಸುದ್ದಿಗಳೂ ಹೊರ ಬೀಳುತ್ತಿವೆ. ಅಂದುಕೊಂಡ ದಿನಾಂಕದಂದು ಸಲಾರ್ ರಿಲೀಸ್ ಆಗುತ್ತಿಲ್ಲ ಎನ್ನುವ ಮಾತುಗಳು ಹರಿದಾಡುತ್ತಿವೆ.

    ಪ್ರಭಾಸ್ ಅನಾರೋಗ್ಯದ ಕಾರಣದಿಂದಾಗಿ ಶೂಟಿಂಗ್ ವಿಳಂಬವಾಗಿದೆ ಎಂದು ಹೇಳಲಾಗುತ್ತಿದ್ದು, ನಿಗದಿತ ಹಂತಗಳಲ್ಲಿ ಚಿತ್ರೀಕರಣ ಆಗಿಲ್ಲವಂತೆ. ಹಾಗಾಗಿ ಅಂದುಕೊಂಡ ದಿನಾಂಕದಂದು ಚಿತ್ರ ಬಿಡುಗಡೆ ಆಗುತ್ತಿಲ್ಲ ಎನ್ನುವುದು ಒಂದು ವಾದ. ಬಾಲಿವುಡ್ ನ ಜವಾನ್ ಸಿನಿಮಾ ಸೆಪ್ಟೆಂಬರ್ 7 ರಂದು ಜಗತ್ತಿನಾದ್ಯಂತ ರಿಲೀಸ್ ಆಗುತ್ತಿರುವುದರಿಂದ ಮತ್ತು ಆ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿರುವುದರಿಂದ ಸಲಾರ್ ಚಿತ್ರದ ದಿನಾಂಕವನ್ನು ಮುಂದೂಡಲಾಗಿದೆ ಎನ್ನುವುದು ಮತ್ತೊಂದು ವಾದ.  ಇದನ್ನೂ ಓದಿ:ನಟ ವಿಜಯ ರಾಘವೇಂದ್ರ ಮನೆಗೆ ಸುದೀಪ್ ದಂಪತಿ ಭೇಟಿ

    ಸಲಾರ್ ಬಿಡುಗಡೆಯ ದಿನಾಂಕದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಪ್ರಭಾಸ್ ಅಭಿಮಾನಿಗಳು ಈ ಕುರಿತಂತೆ ಗೊಂದಲದಲ್ಲಿದ್ದಾರೆ. ಆದರೂ, ಈವರೆಗೂ ಚಿತ್ರತಂಡ ಇದರ ಕುರಿತು ಯಾವುದೇ ಪ್ರತಿಕ್ರಿಯೆನ್ನು ನೀಡಿಲ್ಲ. ಪ್ರತಿಕ್ರಿಯೆ ನೀಡದೇ ಇರುವ ಕಾರಣಕ್ಕಾಗಿ ಬಹುಶಃ ದಿನಾಂಕ ಮುಂದೆ ಹೋಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.

    ಸಲಾರ್ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಕೆಜಿಎಫ್ ಸಿನಿಮಾ ಯಶಸ್ಸಿನ ನಂತರ ಪ್ರಶಾಂತ್ ನೀಲ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಸಲಾರ್ ಕೂಡ ಮತ್ತೊಂದು ಹಂತದ ಚಿತ್ರವೆಂದು ಬಣ್ಣಿಸಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಭಾಸ್ ನಟನೆಯ ‘ಸಲಾರ್’ ಟ್ರೈಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್

    ಪ್ರಭಾಸ್ ನಟನೆಯ ‘ಸಲಾರ್’ ಟ್ರೈಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್

    ಲಾರ್ (Salaar) ಮೆರವಣಿಗೆ ಹೊರಡಲು ಸಜ್ಜಾಗಿದೆ. ಮುಂದಿನ ತಿಂಗಳು ಸಿನಿಮಾ ತೆರೆ ಕಾಣುತ್ತಿದೆ. ಆದರೆ ಟ್ರೈಲರ್ ಬಗ್ಗೆ ಮಾತೇ ಇಲ್ಲ. ಯಾವಾಗ ಪ್ರಭಾಸ್ ದಿಬ್ಬಣ ಹೊರಡುತ್ತಾರೆ? ಯಾವಾಗ ತೋರಿಸುತ್ತೀರಿ ಡೈನೋಸಾರ್ ಹೂಂಕಾರ ? ಫ್ಯಾನ್ಸ್ ಕೇಳುತ್ತಿದ್ದರು. ಇದೀಗ ಅದಕ್ಕೆ ಉತ್ತರ ಸಿಕ್ಕಂತಿದೆ. ಟ್ರೈಲರ್ ಇಂಚಿಂಚು ವಿವರ ಇಲ್ಲಿದೆ.

    ಪ್ರಭಾಸ್‌ಗೆ (Prabhas) ಇದು ಅಗ್ನಿ ಪರೀಕ್ಷೆ. ಸತತ ಮೂರು ಸೋಲು ಅವರನ್ನು ಹಿಂಡಿ ಹಿಪ್ಪೆ ಮಾಡಿವೆ. ಸಲಾರ್ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಗೆದ್ದೇ ಗೆಲ್ಲುತ್ತದೆ ಎನ್ನುವ ನಂಬಿಕೆ ಇದೆ. ಕಾರಣ ಪ್ರಶಾಂತ್ ನೀಲ್. ಮೂರೇ ಸಿನಿಮಾದ ಒಡೆಯ ನೀಲ್ ನೀಡಿರುವ ಭರವಸೆ. ಹೀಗಾಗಿ ಕೆಜಿಎಫ್ ಸಾರಥಿಗೆ ಎಲ್ಲ ರೀತಿ ಸಮರ್ಪಿಸಿಕೊಂಡಿದ್ದಾರೆ ಬಾಹುಬಲಿ. ಅದಕ್ಕೇ ವಿಶ್ವ ಇಷ್ಟಗಲ ಕಣ್ಣು ಬಿಟ್ಟಿದೆ. ಈಗ ಟ್ರೈಲರ್ ಬಿಡುಗಡೆ ವಿಚಾರ ಬೆಂಕಿ ಹೊತ್ತಿಸಿದೆ. ಬಹುಶಃ ಸೆಪ್ಟೆಂಬರ್ 6ರಂದು ಸಲಾರ್ ಸಿಹಿ ಹಂಚಲಿದೆ. ಇದನ್ನೂ ಓದಿ:ವಿಜಯ್ ಪ್ರಕಾಶ್ ಧ್ವನಿಯಲ್ಲಿ ‘ಜಲಪಾತ’ ಸಾಂಗ್

    ಈಗಾಗಲೇ ಟೀಸರ್ ಹೊರ ಬಂದಿದೆ. ಅದನ್ನು ನೋಡಿದ ಕೆಲವರು ಬೇಸರ ಮಾಡಿಕೊಂಡಿದ್ದರು. ಕಾರಣ ಪ್ರಭಾಸ್ ಮುಖ ಸರಿಯಾಗಿ ತೋರಿಸಿಲ್ಲ ಎನ್ನುವ ಆರೋಪ. ಅದನ್ನು ಪೂರ್ತಿ ಮಾಡಲು ನೀಲ್ ರೆಡಿಯಾಗಿದ್ದಾರೆ. ಈಗಾಗಲೇ ಟ್ರೈಲರ್ ಸೆನ್ಸಾರ್ ಕೂಡ ಆಗಿದೆ. ಎರಡು ನಿಮಿಷ ನಲವತ್ತೇಳು ಸೆಕೆಂಡ್ ಇದರ ಅವಧಿ. ಹೆಚ್ಚು ಕಮ್ಮಿ ಮೂರು ನಿಮಿಷ. ಇದನ್ನು ಕೇಳಿಯೇ ಡಾರ್ಲಿಂಗ್ ಭಕ್ತಗಣ ರಣಕೇಕೆ ಹಾಕುತ್ತಿದೆ. ಅದ್ಯಾವ ರೀತಿ ಪ್ರಭಾಸ್ ಘರ್ಜಿಸಿರಬಹುದು? ಹೇಗೆ ಕಾಣಬಹುದು? ಊಹೆ ಆಕಾಶಕ್ಕೇರಿದೆ.

    ಅಂದಹಾಗೆ ಟ್ರೈಲರ್ ರಿಲೀಸ್‌ ಕಾರ್ಯಕ್ರಮವನ್ನು ಹೈದ್ರಾಬಾದ್‌ನಲ್ಲಿ ನಡೆಸಲು ಸಿದ್ಧತೆಯಾಗುತ್ತಿದೆ. ಹೊಂಬಾಳೆ ಸಂಸ್ಥೆ ಎಲ್ಲ ವ್ಯವಸ್ಥೆ ಮಾಡುತ್ತಿದೆ. ಅಂದು ಯರ‍್ಯಾರು ಬರುತ್ತಾರೆ? ಇಲ್ಲ ಗೊತ್ತಿಲ್ಲ. ಆದರೆ ಒಂದು ಮೂಲದ ಪ್ರಕಾರ ರಾಕಿಭಾಯ್ (Yash) ಮುಖ್ಯ ಅತಿಥಿಯಾಗಲಿದ್ದಾರಂತೆ. ಹೊಂಬಾಳೆಯಿಂದಲೇ (Hombale Films) ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟ ಪಡೆದಿದ್ದಾರೆ ಯಶ್. ಆ ಸಂಸ್ಥೆ ಕೊಟ್ಟ ಅವಕಾಶದಿಂದ ವಿಶ್ವದ ತುಂಬಾ ಹೆಸರು ಮಾಡಿದ್ದಾರೆ. ಹೀಗಿರುವಾಗ ಅತಿಥಿಯಾಗಲು ಇಲ್ಲ ಎನ್ನುತ್ತಾರಾ? ಪ್ರಭಾಸ್-ಯಶ್ ಮೆರವಣಿಗೆಗೆ ಸಜ್ಜಾಗಿ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Salaar: ಪ್ರಭಾಸ್‌ ಸಿನಿಮಾ ಬಗ್ಗೆ ಹೊರಬಿತ್ತು ಬಿಗ್‌ ಅಪ್‌ಡೇಟ್

    Salaar: ಪ್ರಭಾಸ್‌ ಸಿನಿಮಾ ಬಗ್ಗೆ ಹೊರಬಿತ್ತು ಬಿಗ್‌ ಅಪ್‌ಡೇಟ್

    ಪ್ರಭಾಸ್‌ಗೆ ಪ್ರಶಾಂತ್ ನೀಲ್ (Prashanth Neel) ನಿರ್ಮಿಸಿರುವ ಹೊಸ ಜಗತ್ತೇ ‘ಸಲಾರ್’. ಸದ್ಯಕ್ಕೆ ಎಲ್ಲರ ದೃಷ್ಟಿ ಇರೋದೇ ಈ ಸಲಾರ್ ಮೇಲೆ. ಸಾಮಾನ್ಯವಾಗಿ ನೀಲ್ ಸ್ಟೈಲ್ ಅಂದ್ರೆ ಸಿನಿಮಾ ರಿಲೀಸ್‌ಗೆ ಹದಿನೈದು ದಿನ ಉಳಿದಾಗ ಮಾತ್ರ ಟ್ರೈಲರ್ ರಿಲೀಸ್ ಮಾಡೋದು. ಆದರೆ ಸಲಾರ್ (Salaar) ವಿಚಾರದಲ್ಲಿ ಹೀಗಾಗ್ತಿಲ್ಲ. ಹಾಗಾದ್ರೆ ಟ್ರೈಲರ್ ಯಾವಾಗ ಬರ್ತಿದೆ? ಇಲ್ಲಿದೆ ಮಾಹಿತಿ.

    ಈ ವರ್ಷದ ಬಹುನಿರೀಕ್ಷೆ ಚಿತ್ರಕ್ಕೆ ಮುಹೂರ್ತವಂತೂ ಫಿಕ್ಸ್ ಆಗಿದೆ. ಅದುವೇ ಪ್ರಶಾಂತ್ ನೀಲ್ ಮಾಯಾ ಜಗತ್ತು ಸಲಾರ್. ಈಗಾಗ್ಲೇ ಟೀಸರ್ ರಿಲೀಸ್ ಆಗಿದ್ರೂ ಪ್ರಭಾಸ್ ಮುಖವನ್ನೂ ಸರಿಯಾಗಿ ರಿವೀಲ್ ಮಾಡದೆ ಡಿಸ್‌ಅಪಾಯಿಂಟ್‌ಮೆಂಟ್ ಮಾಡಿದ್ದ ಪ್ರಶಾಂತ್ ನೀಲ್ ಟ್ರೈಲರ್ ಮೇಲೆ ನಿರೀಕ್ಷೆ ಉಳಿಸಿಕೊಳ್ಳಿ ಎಂದಿದ್ರು. ಆಗಸ್ಟ್ ಕೊನೆಯಲ್ಲಿ ಸಲಾರ್ ಟ್ರೈಲರ್ ರಿಲೀಸ್ ಘೋಷಣೆಯನ್ನೂ ಹೊಂಬಾಳೆ (Hombale Films) ಮಾಡಿತ್ತು. ಪ್ರಾಮಿಸ್ ಉಳಿಸಿಕೊಳ್ಳಲು ಹೊರಟಿದೆ ಸಲಾರ್. ಇದನ್ನೂ ಓದಿ:ಕಟುಮಸ್ತಾದ ದೇಹ ಪ್ರದರ್ಶಿಸಿದ ಸುದೀಪ್-‌ K 46 ಬಗ್ಗೆ ಕಿಚ್ಚ ಅಪ್‌ಡೇಟ್

    ಆಗಸ್ಟ್ 31 ಇಲ್ಲವೇ ಸಪ್ಟೆಂಬರ್ ಮೊದಲ ವಾರ ಟ್ರೈಲರ್‌ಗೆ ಮುಹೂರ್ತ ಫಿಕ್ಸಾಗಿದೆ. ಅಲ್ಲಿಂದ ಪ್ರಚಾರದ ಪ್ರಕ್ರಿಯೆಗಳಿಗೆ ಚಾಲನೆ ಸಿಗುತ್ತದೆ. ಹಿಂದೆ ಕೆಜಿಎಫ್ (KGF) ಸಂದರ್ಭದಲ್ಲಿ ಹೀಗಾಗಿರಲಿಲ್ಲ. ಹಾಡುಗಳನ್ನ ಒಂದೊಂದಾಗೇ ರಿಲೀಸ್ ಮಾಡಿ ಬಹಿರಂಗ ಪ್ರಚಾರ ಪ್ರಾರಂಭಿಸಿ ಕೊನೆಗೆ ಬಿಡುಗಡೆಗೆ 10 ದಿನದ ಮುಂಚೆ ಟ್ರೈಲರ್ ರಿಲೀಸ್ ಮಾಡಲಾಗಿತ್ತು. ಆದರೀಗ ಬಹಳ ಅಂತರದಲ್ಲಿ ಟ್ರೈಲರ್ ರಿಲೀಸ್ ಮಾಡಲಾಗುತ್ತಿದೆ. ಪ್ರಭಾಸ್ ಫ್ಯಾನ್ಸ್‌ಗೆ ಇದು ಹಬ್ಬವೋ ಹಬ್ಬ.

    ಸಾಲು ಸಾಲು ಸಿನಿಮಾ ಸೋಲುಗಳನ್ನೇ ಕಂಡಿರುವ ಪ್ರಭಾಸ್‌ಗೆ (Prabhas) ಸಲಾರ್ ಸಿನಿಮಾ ಗೆಲುವು ತಂದು ಕೊಡುತ್ತಾ? ಸೆಪ್ಟೆಂಬರ್ 28ಕ್ಕೆ ತೆರೆಗೆ ಬರುತ್ತಿರೋ ಪ್ರಭಾಸ್- ಪ್ರಶಾಂತ್ ನೀಲ್ ಕಾಂಬೋ ಕ್ಲಿಕ್ ಆಗುತ್ತಾ? ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಲಾರ್ ಟೀಮ್ ಕಡೆಯಿಂದ ಮತ್ತೊಂದು ಸುದ್ದಿ: ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

    ಸಲಾರ್ ಟೀಮ್ ಕಡೆಯಿಂದ ಮತ್ತೊಂದು ಸುದ್ದಿ: ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್

    ಪ್ರಭಾಸ್ (Prabhas) ನಟನೆಯ ಸಲಾರ್ ಸಿನಿಮಾದ ಟ್ರೈಲರ್ ಯಾವತ್ತು ಬಿಡುಗಡೆಯಾಗಲಿದೆ ಎನ್ನುವ ಪ್ರಶ್ನೆ ಅಭಿಮಾನಿಗಳದ್ದು ಆಗಿತ್ತು. ಆದಷ್ಟು ಬೇಗ ಟ್ರೈಲರ್ (Trailer) ರಿಲೀಸ್ ಮಾಡಿ ಎಂದು ಸಾಕಷ್ಟು ಅಭಿಮಾನಿಗಳು ಕೇಳಿಕೊಂಡಿದ್ದರು. ಕೊನೆಗೂ ಅಭಿಮಾನಿಗಳ ಬೇಡಿಕೆಯನ್ನು ಈಡೇರಿಸಲು ಮುಂದಾಗಿದೆ ಹೊಂಬಾಳೆ ಫಿಲ್ಮ್ಸ್ (Hombale Films). ಆದಷ್ಟು ಬೇಗ ಟ್ರೈಲರ್ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಂದುಕೊಂಡಂತೆ ನಡೆದರೆ ಮುಂದಿನ ತಿಂಗಳಲ್ಲೇ ಟ್ರೈಲರ್ ರಿಲೀಸ್ ಆಗಲಿದೆ.

    ‘ಸಲಾರ್’ (Salaar) ಅಖಾಡದಿಂದ ಮತ್ತೊಂದು ಹೊಸ ವಿಚಾರ ಹೊರಬಂದಿದೆ. ಆದರೆ ಇದು ಅಧಿಕೃತವಲ್ಲ. ಏನಾದರೂ ಈ ಸುದ್ದಿ ಕೇಳಿ ಪ್ರಭಾಸ್ ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಇದು ನಿಜವೇ ಆಗಿದ್ದರೆ ಸರಪಟಾಕಿ ಅಂಗಡಿಯನ್ನೇ ಚಿತ್ರಮಂದಿರ ಮುಂದೆ ತರುವುದಾಗಿ ಘೋಷಿಸಿದ್ದಾರೆ. ಹಾಗಿದ್ದರೆ ಪ್ರಶಾಂತ್ ನೀಲ್- ಪ್ರಭಾಸ್ (Prabhas) ಅದ್ಯಾವ ಕಿಡಿಯನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಜನರಿಗಾಗಿ ತೋರಿಸಲು ಕಾದಿದ್ದಾರೆ? ಪ್ರಭಾಸ್ ಅಪ್ಪ- ಮಗನಾಗಿ ಕಾಣಿಸುತ್ತಿರುವುದು ಸತ್ಯವಾ? ಸಾವಿರ ಜನರನ್ನು ಹೊಡೆದುರುಳಿಸುವ ಅದ್ಭುತ ಸಿಕ್ವೇನ್ಸ್ ಇರೋದು ಪಕ್ಕಾನಾ? ಹೀಗೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ.

    ಸೆಪ್ಟೆಂಬರ್ 28 ಇದೊಂದು ದಿನಕ್ಕಾಗಿ ಇಡೀ ವಿಶ್ವದ ಸಿನಿ ಪ್ರೇಮಿಗಳು ಕಾಯುತ್ತಿದ್ದಾರೆ. ಒಂದೊಂದು ದಿನವನ್ನು ಒಂದೊಂದು ಯುಗದಂತೆ ಕಳೆಯುತ್ತಿದ್ದಾರೆ. ಅದ್ಯಾವ ರೀತಿ ‘ಸಲಾರ್’ ಗೆದ್ದು ಬೀಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಹಿಂದೆ ನೋಡಿರಬಾರದು ಮುಂದೆ ನೋಡಬಾರದು ಅಂಥ ಮಿರಾಕಲ್ ನಡೆಯುತ್ತದಾ? ಪ್ರಶಾಂತ್ ನೀಲ್ ಆ ಕ್ಷಣವನ್ನು ನಮಗೆ ಒದಗಿಸುತ್ತಾರಾ? ಸತತ ಮೂರು ಸೋಲಿನಿಂದ ತತ್ತರಿಸಿರುವುದು ಪ್ರಭಾಸ್ ಒಂದೇ ದಿನ ದೀಪಾವಳಿ ಹಾಗೂ ಗಣೇಶ ಹಬ್ಬವನ್ನು ಮಾಡಲಿದ್ದಾರಾ? ಇಂಥ ಪ್ರಶ್ನೆಗಳನ್ನು ಇಟ್ಟುಕೊಂಡು ದಿನ ತಳ್ಳುತ್ತಿದೆ ಡಾರ್ಲಿಂಗ್ ಭಕ್ತಗಣ.

    ‘ಸಲಾರ್’ ಆರಂಭವಾದಾಗ ಇದನ್ನು ಕನ್ನಡದ ಉಗ್ರಂ ರಿಮೇಕ್ ಎಂದವರಿದ್ದರು. ಆ ಕತೆಯನ್ನೇ ದೊಡ್ಡ ಕ್ಯಾನ್ವಾಸ್‌ನಲ್ಲಿ ಮಾಡಲು ನೀಲ್ ಸಜ್ಜಾಗಿದ್ದಾರೆ. ಈ ಮಾತು ಕೇಳಿತ್ತು. ಯಾವಾಗ ಪೃಥ್ವಿರಾಜ್ ಸುಕುಮಾರ್ ಇನ್ನೊಂದು ಪಾತ್ರದಲ್ಲಿ ಕಾಣಿಸಿದರೋ ಗಾಳಿ ಮಾತಿಗೆ ಹೊಸ ಹುರುಪು ಬಂತು. ಅಣ್ಣ ಹಾಗೂ ತಮ್ಮನ ಬಾಂಧವ್ಯ ಜೊತೆಗೆ ಸೇಡಿನ ಕತೆ ಎನ್ನುವುದು ಹಾರಾಡಿತು. ಎಲ್ಲವೂ ಬರೀ ಪಟಗಳೇ. ಯಾವುದಕ್ಕೂ ಸೂತ್ರ ಇರಲಿಲ್ಲ. ಇದ್ದದ್ದು ಕೇವಲ ಬಣ್ಣ ಮಾತ್ರ. ಈಗ ಅದೆಲ್ಲವನ್ನು ಬಿಟ್ಟು ಇನ್ನೊಂದು ಹಾದಿಯಲ್ಲಿ ಕತೆ ಲಿಂಕ್ ಬಿಚ್ಚಿಕೊಂಡಿದೆ. ಇದು ಅಪ್ಪ ಹಾಗೂ ಮಗನ ಕತೆ. ಅಪ್ಪನ ಪಾತ್ರಕ್ಕೆ ಸಲಾರ್ ಹಾಗೂ ಮಗನ ಪಾತ್ರಕ್ಕೆ ದೇವ್ ಭಾಯ್ ಹೆಸರು ಇಡಲಾಗಿದೆ. ಸತ್ಯವಾ ಸುಳ್ಳಾ?

    ಅಷ್ಟೊಂದು ಜತನದಿಂದ ನಿಗೂಢವಾಗಿ ಯಾರಿಗೂ ಗೊತ್ತಾಗದಂತೆ. ಶೂಟಿಂಗ್ ಸೆಟ್‌ನಿಂದ ಒಂದೇ ಒಂದು ಸುದ್ದಿಯ ನೊಣ ಆಚೆ ಹೋಗದಂತೆ ನೀಲ್ ಎಚ್ಚರಿಕೆ ವಹಿಸಿದ್ದಾರೆ. ಹೀಗಿದ್ದರೂ ಅದೊಂದು ವಿಡಿಯೋ ವೈರಲ್ ಆಗಿದೆ. ಅಭಿಮಾನಿ ಎಂದು ಹೇಳಿಕೊಂಡಿರುವ ವ್ಯಕ್ತಿ ಇದರಲ್ಲಿ ಮಾತಾಡಿದ್ದಾನೆ. ಶೂಟಿಂಗ್ ಸೆಟ್‌ಗೆ ಹೋಗಿದ್ದು, ಅಲ್ಲಿ ಏನು ನಡೆಯುತ್ತಿದೆ. ಯಾರ‍್ಯಾರು ಇದ್ದರು ಎಷ್ಟು ಜನರಿದ್ದರು ಅದ್ಯಾವ ಮಹಾ ದೃಶ್ಯಕ್ಕೆ ಕ್ಯಾಮೆರಾ ಸುತ್ತುತ್ತಿತ್ತು. ಹೀಗೆ ಒಂದೊಂದನ್ನೇ ಬಿಚ್ಚಿಟ್ಟಿದ್ದಾನೆ. ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೆಲ್ಲ ನಿಜವಾ ಎಂದು ಕೇಳುವಂತಿಲ್ಲ. ಆದರೆ ಫ್ಯಾನ್ಸ್ ಮಾತ್ರ ಬಾಯಿ ಚಪ್ಪರಿಸಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

    ಇದರಲ್ಲಿ ಪ್ರಭಾಸ್ ಎರಡು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಪ್ಪನಾಗಿ ಸಲಾರ್ ಮಗನಾಗಿ ದೇವ್ ಭಾಯ್ ನಟಿಸುತ್ತಿದ್ದಾರೆ. ಅದೊಂದು ದೃಶ್ಯದಲ್ಲಿ ಸುಮಾರು ಸಾವಿರ ಜನರಿದ್ದರು. ಮಗ ಪ್ರಾಣಾಪಾಯದಲ್ಲಿ ಸಿಕ್ಕಿರುತ್ತಾನೆ. ಆಗ ಮಗನನ್ನು ಕಾಪಾಡಲು ಅಪ್ಪ ಸಲಾರ್ ಬರುತ್ತಾನೆ. ಸಾವಿರ ಜನರನ್ನು ಅಪ್ಪ ಮಗ ಇಬ್ಬರೂ ನಾಶ ಮಾಡುತ್ತಾರೆ. ಬಹುಶಃ ಇದೊಂದು ಎರಡು ತಲೆಮಾರಿನ ಕತೆ. ಜಗಪತಿ ಬಾಬು ಹಾಗೂ ಪೃಥ್ವಿರಾಜ್ ಅಪ್ಪ ಮಗ. ಇನ್ನೊಂದು ಕಡೆ ಸಲಾರ್ ಹಾಗೂ ದೇವ್ ಭಾಯ್. ಎರಡು ತಲೆಮಾರಿನ ಕತೆ ಎರಡು ಭಾಗದಲ್ಲಿ ಬರಲಿದೆಯೇನೋ.

    ಇದು ಆ ಅಭಿಮಾನಿ ಹೇಳಿದ ಮಾತು. ಆದರೆ ಈಗಾಗಲೇ ಶೂಟಿಂಗ್ ಮುಗಿದು ಹೋಗಿದೆ. ಪ್ರಿ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಇನ್ನೇನು ಸಿನಿಮಾ ರಿಲೀಸ್ ಆಗುವ ಸಮಯದಲ್ಲಿ ಈ ಅಭಿಮಾನಿ ಹೀಗೆ ಹೇಳಿದ್ದಾನೆ. ಇದನ್ನು ಆತ ಯಾವಾಗ ಎಲ್ಲಿ ನೋಡಿದ? ನಿಜಕ್ಕೂ ಇದೇ ಕತೆಯಾ? ಈ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆದರೆ ಉತ್ತರ ಹೇಳಬೇಕಾದವರು ಯಾರು? ಪ್ರಶಾಂತ್ ನೀಲ್ (Prashant Neel) ಮಾತ್ರ. ಅವರು ಹೈದ್ರಾಬಾದ್‌ನಿಂದ ನೇರವಾಗಿ ರವಿ ಬಸ್ರೂರ್ ಸ್ಟುಡಿಯೋಕ್ಕೆ ಬಂದಿದ್ದಾರೆ. ಬಸ್ರೂರಿನಲ್ಲಿ ರೀ- ರೆಕಾರ್ಡಿಂಗ್ ಸೇರಿದಂತೆ ಎಲ್ಲ ಕಾರ್ಯ ನಡೆಯುತ್ತಿವೆ. ಹೈದ್ರಾಬಾದ್‌ನಲ್ಲಿ ಕತೆ ಲೀಕ್ ಆಗುವ ಸಾಧ್ಯತೆ ಇದೆ ಎನ್ನುವುದಕ್ಕಾಗಿ ಈ ಏರ್ಪಾಡು ಮಾಡಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೀಲ್‌ಗೆ ಪ್ರಭಾಸ್‌ ಸಾಥ್- ಕುಂದಾಪುರದ ಬಸ್ರೂರಿಗೆ ಬಂದಿಳಿದ ನಟ

    ನೀಲ್‌ಗೆ ಪ್ರಭಾಸ್‌ ಸಾಥ್- ಕುಂದಾಪುರದ ಬಸ್ರೂರಿಗೆ ಬಂದಿಳಿದ ನಟ

    ಪ್ರಭಾಸ್ (Prabhas) ಹೈದ್ರಾಬಾದ್‌ನಿಂದ ಹಾರಿ ಕರ್ನಾಟಕದ ಚಿಕ್ಕ ಗ್ರಾಮಕ್ಕೆ ಬಂದಿದ್ದಾರೆ. ಉಡುಪಿಯ ಕುಂದಾಪುರ ತಾಲೂಕಿನ ಪುಟ್ಟ ಗ್ರಾಮ ಬಸ್ರೂರಿನಲ್ಲಿ ಬೀಡು ಬಿಟ್ಟಿದ್ದಾರೆ. ವಾಟ್ ಈಸ್ ದಿಸ್? ಪ್ಯಾನ್ ಇಂಡಿಯಾ ಸ್ಟಾರ್ ಏಕಾಏಕಿ ಬಸ್ರೂರು ಸ್ಟುಡಿಯೋಕ್ಕೆ ಬಂದಿದ್ದೇಕೆ? ಅದು ಹೇಗೆ ಪ್ರಶಾಂತ್ ನೀಲ್ (Prashanth Neel) ಇದಕ್ಕೆ ಒಪ್ಪಿಸಿದರು? ಇಲ್ಲಿದೆ ಮಾಹಿತಿ.

    ಪ್ರಶಾಂತ್ ನೀಲ್ ಬಸ್ರೂರಿನಲ್ಲಿ ಕೆಲವು ದಿನಗಳಿಂದ ಟೆಂಟ್ ಹಾಕಿದ್ದಾರೆ. ಕಾರಣ ಎಲ್ಲರಿಗೂ ಗೊತ್ತಿದೆ. ಸಲಾರ್ (Saalar) ಇನ್ನೇನು ಬಿಡುಗಡೆಯಾಗುವ ತಯಾರಿಯಲ್ಲಿದೆ. ಅದಕ್ಕೂ ಮುಂಚೆ ಎಲ್ಲ ಕೆಲಸ ಮುಗಿಸಬೇಕಲ್ಲವೆ? ಹೀಗಾಗಿಯೇ ಸಂಗೀತ ನಿರ್ದೇಶಕ ರವಿ ಬಸ್ರೂರ್ ಒಡೆತನದ ಸ್ಟುಡಿಯೋದಲ್ಲಿ ಅಂತಿಮ ಕೆಲಸ ನಡೆದಿವೆ. ಪಟ್ಟಣದ ಸಹವಾಸವೇ ಬೇಡ ಎಂದು ರವಿ ತಮ್ಮ ಹುಟ್ಟೂರು ಬಸ್ರೂರಿನಲ್ಲಿ ಸ್ಟುಡಿಯೋ ಸ್ಥಾಪಿಸಿದ್ದಾರೆ. ರೀ- ರೆಕಾರ್ಡಿಂಗ್, ಡಬ್ಬಿಂಗ್ ಕಾರ್ಯ ನಡೆಯುತ್ತಿವೆ. ಅಲ್ಲೇ ಬಂದು ಪ್ರಭಾಸ್ ಡಬ್ಬಿಂಗ್ ಮಾಡುತ್ತಿದ್ದಾರೆ.

    ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆದಮೇಲೆ ಇದೇ ಮೊದಲ ಬಾರಿಗೆ ಹಳ್ಳಿಯೊಂದರಲ್ಲಿ ಕುಳಿತು ಡಬ್ಬಿಂಗ್ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಪ್ರಶಾಂತ್ ನೀಲ್. ಬಸ್ರೂರು ಸ್ಟುಡಿಯೋದಲ್ಲೇ ಅವರು ಅಂತಿಮ ಹಂತದ ಕೆಲಸಕ್ಕೆ ಟಚ್ ಕೊಡುತ್ತಿದ್ದಾರೆ. ಜೊತೆಗೆ ಪ್ರಭಾಸ್‌ರನ್ನು ಇಲ್ಲಿಗೇ ಕರೆಸಿದ್ದಾರೆ. ಕಾರಣವೇನು ? ವಿಷಯ ಇದೆ. ಹೈದ್ರಾಬಾದ್ ಸೇರಿದಂತೆ ಯಾವುದೇ ಸಿಟಿಯಲ್ಲಿ ಡಬ್ಬಿಂಗ್ ಮಾಡಿದರೆ, ಅದರ ವಿಶುವಲ್ಸ್ ಅಥವಾ ವಿಡಿಯೋ ಲೀಕ್ ಆಗುವ ಸಾಧ್ಯತೆ ಇರುತ್ತದೆ. ಅದಾಗಬಾರದೆಂದೇ ಈ ನಿರ್ಧಾರ ನೀಲ್ ಕೈಗೊಂಡಿದ್ದಾರೆ. ಇದನ್ನೂ ಓದಿ:ವರಮಹಾಲಕ್ಷ್ಮಿ ಹಬ್ಬದಂದು ವೈಷ್ಣವಿ ಗೌಡ ಫ್ಯಾನ್ಸ್‌ಗೆ ಸಿಹಿಸುದ್ದಿ

    ಒಬ್ಬ ಪ್ಯಾನ್ ಇಂಡಿಯಾ ಸ್ಟಾರ್‌ಗೆ ಬಸ್ರೂರಿನಲ್ಲಿ ಡಬ್ಬಿಂಗ್ ಮಾಡಿಸುವುದು ಎಷ್ಟು ದೊಡ್ಡ ವಿಷಯವೋ. ಅದೇ ರೀತಿ ಪ್ರಭಾಸ್ ಕೂಡ ಈ ಮನವಿ ಒಪ್ಪಿರುವುದು ಕೂಡ. ಎಲ್ಲರೂ ಸೇರಿ ಒಂದೊಳ್ಳೆ ಪ್ರೊಜೆಕ್ಟ್ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಹೊಂಬಾಳೆ ಸಂಸ್ಥೆ ಈಗಾಗಲೇ ಸೆಪ್ಟೆಂಬರ್ 28ಕ್ಕೆ ಬಿಡುಗಡೆ ದಿನ ಘೋಷಿಸಿದೆ. ಇನ್ನೇನು ಕೆಲವು ದಿನಗಳಲ್ಲಿ ಟ್ರೈಲರ್ ಹೊರಬೀಳಲಿದೆ. ಅಲ್ಲಿಂದ ಹಬ್ಬ ಆರಂಭವಾಗಲಿದೆ. ಕನ್ನಡದ ಬಾವುಟ ಇನ್ನೊಮ್ಮೆ ವಿಶ್ವದ ತುಂಬಾ ಮೆರವಣಿಗೆ ಹೊರಡಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಸಲಾರ್’ ಸೆಟ್‌ನಿಂದ ಮ್ಯಾಟರ್ ಲೀಕ್- ಪ್ರಭಾಸ್ ಚಿತ್ರದ ಬಿಗ್ ಅಪ್‌ಡೇಟ್

    ‘ಸಲಾರ್’ ಸೆಟ್‌ನಿಂದ ಮ್ಯಾಟರ್ ಲೀಕ್- ಪ್ರಭಾಸ್ ಚಿತ್ರದ ಬಿಗ್ ಅಪ್‌ಡೇಟ್

    ‘ಸಲಾರ್’ (Salaar) ಅಖಾಡದಿಂದ ಹೊಸ ವಿಚಾರವೊಂದು ಹೊರಬಂದಿದೆ. ಆದರೆ ಇದು ಅಧಿಕೃತವಲ್ಲ. ಏನಾದರೂ ಈ ಸುದ್ದಿ ಕೇಳಿ ಪ್ರಭಾಸ್ ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಇದು ನಿಜವೇ ಆಗಿದ್ದರೆ ಸರಪಟಾಕಿ ಅಂಗಡಿಯನ್ನೇ ಚಿತ್ರಮಂದಿರ ಮುಂದೆ ತರುವುದಾಗಿ ಘೋಷಿಸಿದ್ದಾರೆ. ಹಾಗಿದ್ದರೆ ಪ್ರಶಾಂತ್ ನೀಲ್- ಪ್ರಭಾಸ್ (Prabhas) ಅದ್ಯಾವ ಕಿಡಿಯನ್ನು ಹೊಟ್ಟೆಯಲ್ಲಿ ಇಟ್ಟುಕೊಂಡು ಜನರಿಗಾಗಿ ತೋರಿಸಲು ಕಾದಿದ್ದಾರೆ? ಪ್ರಭಾಸ್ ಅಪ್ಪ- ಮಗನಾಗಿ ಕಾಣಿಸುತ್ತಿರುವುದು ಸತ್ಯವಾ? ಸಾವಿರ ಜನರನ್ನು ಹೊಡೆದುರುಳಿಸುವ ಅದ್ಭುತ ಸಿಕ್ವೇನ್ಸ್ ಇರೋದು ಪಕ್ಕಾನಾ? ಈ ಬಗ್ಗೆ ಇಲ್ಲಿದೆ ಮಾಹಿತಿ.

    ಸೆಪ್ಟೆಂಬರ್ 28 ಇದೊಂದು ದಿನಕ್ಕಾಗಿ ಇಡೀ ವಿಶ್ವದ ಸಿನಿ ಪ್ರೇಮಿಗಳು ಕಾಯುತ್ತಿದ್ದಾರೆ. ಒಂದೊಂದು ದಿನವನ್ನು ಒಂದೊಂದು ಯುಗದಂತೆ ಕಳೆಯುತ್ತಿದ್ದಾರೆ. ಅದ್ಯಾವ ರೀತಿ ‘ಸಲಾರ್’ ಗೆದ್ದು ಬೀಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಹಿಂದೆ ನೋಡಿರಬಾರದು ಮುಂದೆ ನೋಡಬಾರದು ಅಂಥ ಮಿರಾಕಲ್ ನಡೆಯುತ್ತದಾ? ಪ್ರಶಾಂತ್ ನೀಲ್ ಆ ಕ್ಷಣವನ್ನು ನಮಗೆ ಒದಗಿಸುತ್ತಾರಾ? ಸತತ ಮೂರು ಸೋಲಿನಿಂದ ತತ್ತರಿಸಿರುವುದು ಪ್ರಭಾಸ್ ಒಂದೇ ದಿನ ದೀಪಾವಳಿ ಹಾಗೂ ಗಣೇಶ ಹಬ್ಬವನ್ನು ಮಾಡಲಿದ್ದಾರಾ? ಇಂಥ ಪ್ರಶ್ನೆಗಳನ್ನು ಇಟ್ಟುಕೊಂಡು ದಿನ ತಳ್ಳುತ್ತಿದೆ ಡಾರ್ಲಿಂಗ್ ಭಕ್ತಗಣ.

    ‘ಸಲಾರ್’ ಆರಂಭವಾದಾಗ ಇದನ್ನು ಕನ್ನಡದ ಉಗ್ರಂ ರಿಮೇಕ್ ಎಂದವರಿದ್ದರು. ಆ ಕತೆಯನ್ನೇ ದೊಡ್ಡ ಕ್ಯಾನ್ವಾಸ್‌ನಲ್ಲಿ ಮಾಡಲು ನೀಲ್ ಸಜ್ಜಾಗಿದ್ದಾರೆ. ಈ ಮಾತು ಕೇಳಿತ್ತು. ಯಾವಾಗ ಪೃಥ್ವಿರಾಜ್ ಸುಕುಮಾರ್ ಇನ್ನೊಂದು ಪಾತ್ರದಲ್ಲಿ ಕಾಣಿಸಿದರೋ ಗಾಳಿ ಮಾತಿಗೆ ಹೊಸ ಹುರುಪು ಬಂತು. ಅಣ್ಣ ಹಾಗೂ ತಮ್ಮನ ಬಾಂಧವ್ಯ ಜೊತೆಗೆ ಸೇಡಿನ ಕತೆ ಎನ್ನುವುದು ಹಾರಾಡಿತು. ಎಲ್ಲವೂ ಬರೀ ಪಟಗಳೇ. ಯಾವುದಕ್ಕೂ ಸೂತ್ರ ಇರಲಿಲ್ಲ. ಇದ್ದದ್ದು ಕೇವಲ ಬಣ್ಣ ಮಾತ್ರ. ಈಗ ಅದೆಲ್ಲವನ್ನು ಬಿಟ್ಟು ಇನ್ನೊಂದು ಹಾದಿಯಲ್ಲಿ ಕತೆ ಲಿಂಕ್ ಬಿಚ್ಚಿಕೊಂಡಿದೆ. ಇದು ಅಪ್ಪ ಹಾಗೂ ಮಗನ ಕತೆ. ಅಪ್ಪನ ಪಾತ್ರಕ್ಕೆ ಸಲಾರ್ ಹಾಗೂ ಮಗನ ಪಾತ್ರಕ್ಕೆ ದೇವ್ ಭಾಯ್ ಹೆಸರು ಇಡಲಾಗಿದೆ. ಸತ್ಯವಾ ಸುಳ್ಳಾ? ಇದನ್ನೂ ಓದಿ:ತಂದೆ ಸ್ಥಾನವನ್ನೂ ತುಂಬಿ ಮಗಳಿಗೆ ಹೆಸರಿಟ್ಟ ನಟಿ ದಿವ್ಯಾ ಶ್ರೀಧರ್

    ಅಷ್ಟೊಂದು ಜತನದಿಂದ ನಿಗೂಢವಾಗಿ ಯಾರಿಗೂ ಗೊತ್ತಾಗದಂತೆ. ಶೂಟಿಂಗ್ ಸೆಟ್‌ನಿಂದ ಒಂದೇ ಒಂದು ಸುದ್ದಿಯ ನೊಣ ಆಚೆ ಹೋಗದಂತೆ ನೀಲ್ ಎಚ್ಚರಿಕೆ ವಹಿಸಿದ್ದಾರೆ. ಹೀಗಿದ್ದರೂ ಅದೊಂದು ವಿಡಿಯೋ ವೈರಲ್ ಆಗಿದೆ. ಅಭಿಮಾನಿ ಎಂದು ಹೇಳಿಕೊಂಡಿರುವ ವ್ಯಕ್ತಿ ಇದರಲ್ಲಿ ಮಾತಾಡಿದ್ದಾನೆ. ಶೂಟಿಂಗ್ ಸೆಟ್‌ಗೆ ಹೋಗಿದ್ದು, ಅಲ್ಲಿ ಏನು ನಡೆಯುತ್ತಿದೆ. ಯಾರ‍್ಯಾರು ಇದ್ದರು ಎಷ್ಟು ಜನರಿದ್ದರು ಅದ್ಯಾವ ಮಹಾ ದೃಶ್ಯಕ್ಕೆ ಕ್ಯಾಮೆರಾ ಸುತ್ತುತ್ತಿತ್ತು. ಹೀಗೆ ಒಂದೊಂದನ್ನೇ ಬಿಚ್ಚಿಟ್ಟಿದ್ದಾನೆ. ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೆಲ್ಲ ನಿಜವಾ ಎಂದು ಕೇಳುವಂತಿಲ್ಲ. ಆದರೆ ಫ್ಯಾನ್ಸ್ ಮಾತ್ರ ಬಾಯಿ ಚಪ್ಪರಿಸಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

    ಇದರಲ್ಲಿ ಪ್ರಭಾಸ್ ಎರಡು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಪ್ಪನಾಗಿ ಸಲಾರ್ ಮಗನಾಗಿ ದೇವ್ ಭಾಯ್ ನಟಿಸುತ್ತಿದ್ದಾರೆ. ಅದೊಂದು ದೃಶ್ಯದಲ್ಲಿ ಸುಮಾರು ಸಾವಿರ ಜನರಿದ್ದರು. ಮಗ ಪ್ರಾಣಾಪಾಯದಲ್ಲಿ ಸಿಕ್ಕಿರುತ್ತಾನೆ. ಆಗ ಮಗನನ್ನು ಕಾಪಾಡಲು ಅಪ್ಪ ಸಲಾರ್ ಬರುತ್ತಾನೆ. ಸಾವಿರ ಜನರನ್ನು ಅಪ್ಪ ಮಗ ಇಬ್ಬರೂ ನಾಶ ಮಾಡುತ್ತಾರೆ. ಬಹುಶಃ ಇದೊಂದು ಎರಡು ತಲೆಮಾರಿನ ಕತೆ. ಜಗಪತಿ ಬಾಬು ಹಾಗೂ ಪೃಥ್ವಿರಾಜ್ ಅಪ್ಪ ಮಗ. ಇನ್ನೊಂದು ಕಡೆ ಸಲಾರ್ ಹಾಗೂ ದೇವ್ ಭಾಯ್. ಎರಡು ತಲೆಮಾರಿನ ಕತೆ ಎರಡು ಭಾಗದಲ್ಲಿ ಬರಲಿದೆಯೇನೋ.

    ಇದು ಆ ಅಭಿಮಾನಿ ಹೇಳಿದ ಮಾತು. ಆದರೆ ಈಗಾಗಲೇ ಶೂಟಿಂಗ್ ಮುಗಿದು ಹೋಗಿದೆ. ಪ್ರಿ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಇನ್ನೇನು ಸಿನಿಮಾ ರಿಲೀಸ್ ಆಗುವ ಸಮಯದಲ್ಲಿ ಈ ಅಭಿಮಾನಿ ಹೀಗೆ ಹೇಳಿದ್ದಾನೆ. ಇದನ್ನು ಆತ ಯಾವಾಗ ಎಲ್ಲಿ ನೋಡಿದ? ನಿಜಕ್ಕೂ ಇದೇ ಕತೆಯಾ? ಈ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆದರೆ ಉತ್ತರ ಹೇಳಬೇಕಾದವರು ಯಾರು? ಪ್ರಶಾಂತ್ ನೀಲ್ ಮಾತ್ರ. ಅವರು ಹೈದ್ರಾಬಾದ್‌ನಿಂದ ನೇರವಾಗಿ ರವಿ ಬಸ್ರೂರ್ ಸ್ಟುಡಿಯೋಕ್ಕೆ ಬಂದಿದ್ದಾರೆ. ಬಸ್ರೂರಿನಲ್ಲಿ ರೀ- ರೆಕಾರ್ಡಿಂಗ್ ಸೇರಿದಂತೆ ಎಲ್ಲ ಕಾರ್ಯ ನಡೆಯುತ್ತಿವೆ. ಹೈದ್ರಾಬಾದ್‌ನಲ್ಲಿ ಕತೆ ಲೀಕ್ ಆಗುವ ಸಾಧ್ಯತೆ ಇದೆ ಎನ್ನುವುದಕ್ಕಾಗಿ ಈ ಏರ್ಪಾಡು ಮಾಡಿಕೊಂಡಿದ್ದಾರೆ. ಆದರೆ ಈಗ ಹೀಗಾಗಿದೆ.

    ದೊಡ್ಡ ಸಿನಿಮಾ ಯಾವಾಗಲೂ ದೊಡ್ಡ ಸಿನಿಮಾನೇ. ಹೀಗಾಗಿಯೇ ಅದರ ಒಂದೊಂದು ಪೋಸ್ಟರ್, ವಿಡಿಯೋ, ಕತೆ. ಪ್ರತಿಯೊಂದೂ ಹೊರ ಬಿದ್ದರೆ ಬೆಂಕಿ ಹಚ್ಚುತ್ತದೆ. ಹೀಗಿದೆಯಾ ಹಾಗಿದೆಯಾ ಎನ್ನುವ ಚರ್ಚೆ ನಡೆಯುತ್ತದೆ. ಇನ್ನು ಪ್ಯಾನ್ ಇಂಡಿಯಾ ಡೈರೆಕ್ಟರ್ ಅಂಡ್ ಸ್ಟಾರ್ ಅಕ್ಕ ಪಕ್ಕ ನಿಂತಾಗ. ಈ ಸುದ್ದಿಗಳು ಸಾಮಾನ್ಯ. ಅದೇನೆ ಇರಲಿ, ಈಗಾಗಲೇ ಸಲಾರ್‌ಗೆ ಕ್ಷಣಗಣನೆ ಆರಂಭವಾಗಿದೆ. ಸದ್ಯದಲ್ಲೇ ಟ್ರೈಲರ್ ಹೊರ ಬೀಳಲಿದೆ. ಅದಾದ ನಂತರ ಹಾಡು, ಮೇಕಿಂಗ್ ವಿಡಿಯೋ ನೋಡುತ್ತೀರಿ. ಕೊನೆಗೆ ಪ್ರಭಾಸ್ ಬೆಳ್ಳಿ ತೆರೆ ಮೇಲೆ ದಿಬ್ಬಣ ಹೊರಡಲಿದ್ದಾರೆ. ಅಫ್‌ಕೋರ್ಸ್ ಜೊತೆಗೆ ಪ್ರಶಾಂತ್ ನೀಲ್ ಕೂಡ ರಣಕಹಳೆ ಊದಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಭಾಸ್ ಮುಂದಿನ ಚಿತ್ರಕ್ಕೆ ನಾಯಕಿಯಾದ ಬೆಂಗಳೂರಿನ ಬೆಡಗಿ

    ಪ್ರಭಾಸ್ ಮುಂದಿನ ಚಿತ್ರಕ್ಕೆ ನಾಯಕಿಯಾದ ಬೆಂಗಳೂರಿನ ಬೆಡಗಿ

    ಬಾಹುಬಲಿ ನಟ ಪ್ರಭಾಸ್ (Prabhas) ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚ್ತಿರೋ ಸ್ಟಾರ್ ಹೀರೋ. ಅವರ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಬೇಕು ಎಂಬುದು ಹಲವರ ಕನಸು. ಇದೀಗ ಪ್ರಭಾಸ್ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ನಟಿಸುವ ಲಕ್ಕಿ ಚಾನ್ಸ್ ಅನ್ನು ಬೆಂಗಳೂರಿನ ಬ್ಯೂಟಿ ನಿಧಿ ಅಗರ್ವಾಲ್ (Nidhhi Agerwal) ಬಾಚಿಕೊಂಡಿದ್ದಾರೆ.

    ಸೌತ್ ಸಿನಿಮಾರಂಗದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿರುವ ಬೆಂಗಳೂರಿನ ನಟಿ ನಿಧಿ ಈಗ ಪ್ರಭಾಸ್ ಜೊತೆ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ. ಆಗಸ್ಟ್ 17ರಂದು ನಿಧಿ ಹುಟ್ಟುಹಬ್ಬದಂದು ಪ್ರಭಾಸ್ ನಟನೆಯ ರಾಜಾ ಡಿಲಕ್ಸ್ ಸಿನಿಮಾಗೆ ನಿಧಿ ಹೀರೋಯಿನ್ ಎಂದು ನಿರ್ದೇಶಕ ಮಾರುತಿ ಅನೌನ್ಸ್ ಮಾಡಿದ್ದಾರೆ.

    ‘ರಾಜಾ ಡಿಲಕ್ಸ್’ (Raja Deluxe)  ಸಿನಿಮಾ ಇದೊಂದು ಹಾರರ್-ಕಾಮಿಡಿ ಜೊತೆ ಚೆಂದದ ಲವ್ ಸ್ಟೋರಿ ಕೂಡ ಚಿತ್ರದಲ್ಲಿ ಇರಲಿದೆ. ಪ್ರಭಾಸ್- ನಿಧಿ ಈ ಚಿತ್ರದ ಮೂಲಕ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಇನ್ನೂ ನಟ ಪ್ರಭಾಸ್ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಸೂಕ್ತ ಚಿಕಿತ್ಸೆಗಾಗಿ ಸದ್ಯ ಪ್ರಭಾಸ್ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಸರ್ಜರಿ ಮತ್ತು ವಿಶ್ರಾಂತಿಯ ಬಳಿಕ ಮತ್ತೆ ಸಿನಿಮಾಗಳತ್ತ ನಟ ಮುಖ ಮಾಡಲಿದ್ದಾರೆ.

    ‘ಸಲಾರ್’ (Salaar) ಮುಗಿಸಿಕೊಟ್ಟಿರೋ ಪ್ರಭಾಸ್, ಚಿಕಿತ್ಸೆಯ ಬಳಿಕ ದೀಪಿಕಾ ಪಡುಕೋಣೆ (Deepika Padukone) ಜೊತೆಗಿನ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ. ಇದಾದ ಬಳಿಕ ‘ರಾಜಾ ಡಿಲಕ್ಸ್’ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ. ಇನ್ನೂ ನಟಿ ನಿಧಿಗೆ ಇದು ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಇದನ್ನೂ ಓದಿ:ತೆಲುಗು ನಟ ಬ್ರಹ್ಮಾನಂದಂ ಪುತ್ರನ ಮದುವೆಗೆ ಬಂದ ಸೆಲೆಬ್ರಿಟಿಗಳು

    ನಿಧಿ ಅಗರ್ವಾಲ್ ಅವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರು. ಅವರ ವಿದ್ಯಾಭ್ಯಾಸ ಕೂಡ ಬೆಂಗಳೂರಿನಲ್ಲಿಯೇ ಪೂರ್ಣಗೊಳಿಸಿದ್ದರು. ಹಿಂದಿ ‌’ಮುನ್ನಾ ಮೈಖಲ್’ ಸಿನಿಮಾ ಮೂಲಕ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ತೆಲುಗಿನ ಸವ್ಯಸಾಚಿ, ಮಿಸ್ಟರ್ ಮಜ್ನು, ಇಸ್ಮಾರ್ಟ್ ಶಂಕರ್, ಹೀರೋ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಪ್ರಸ್ತುತ ಪವನ್ ಕಲ್ಯಾಣ್ (Pawan Kalyan) ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾದಲ್ಲಿ ನಿಧಿ ನಾಯಕಿಯಾಗಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿತ್ರೀಕರಣಕ್ಕೆ ಬ್ರೇಕ್‌ – ಅಮೆರಿಕದಲ್ಲಿ ಪ್ರಭಾಸ್‌ಗೆ ಶಸ್ತ್ರಚಿಕಿತ್ಸೆ

    ಚಿತ್ರೀಕರಣಕ್ಕೆ ಬ್ರೇಕ್‌ – ಅಮೆರಿಕದಲ್ಲಿ ಪ್ರಭಾಸ್‌ಗೆ ಶಸ್ತ್ರಚಿಕಿತ್ಸೆ

    ಟಾಲಿವುಡ್ ಬಾಹುಬಲಿ (Bahubali) ಹೀರೋ ಪ್ರಭಾಸ್ (Prabhas) ಅಭಿಮಾನಿಗಳಿಗೆ (Fans) ಬ್ಯಾಡ್ ನ್ಯೂಸ್ ಸಿಕ್ಕಿದೆ. ಸಿನಿಮಾದ ಚಿತ್ರೀಕರಣಕ್ಕೆ ಲಾಂಗ್ ಬ್ರೇಕ್ ಕೊಟ್ಟು, ಅಮೆರಿಕದಲ್ಲಿ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಪ್ರಭಾಸ್ ಒಳಗಾಗಲಿದ್ದಾರೆ.

    ಪ್ರಭಾಸ್ (Prabhas) ಮುಂಬರುವ ಸಿನಿಮಾಗಾಗಿಯೇ ಕಾಯುತ್ತಿದ್ದ ಫ್ಯಾನ್ಸ್‌ಗೆ ಈಗ ನಿರಾಸೆ ಆಗುವಂತಹ ವಿಚಾರ ಎದುರಾಗಿದೆ. ಆದಿಪುರುಷ್ ಸಿನಿಮಾ ರಿಲೀಸ್ ಬಳಿಕ, ‘ಸಲಾರ್’ (Salaar) ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ‘ಕಲ್ಕಿ 2898’ ಚಿತ್ರದ ಚಿತ್ರೀಕರಣವನ್ನು ಬಹುಮಟ್ಟಿಗೆ ಮುಗಿಸಿರುವ ಪ್ರಭಾಸ್ ಈ ವರ್ಷಾಂತ್ಯಕ್ಕೆ ಚಿತ್ರೀಕರಣದಿಂದ ದೊಡ್ಡ ಬ್ರೇಕ್ ಪಡೆಯಲು ಮುಂದಾಗಿದ್ದಾರೆ. ಪ್ರಭಾಸ್ ಆರೋಗ್ಯದಲ್ಲಿ ಆಗಾಗ ಏರುಪೇರು ಆಗ್ತಿದೆ. ಹಾಗಾಗಿ ಅವರು ಬ್ರೇಕ್ ಪಡೆಯಲು ನಿರ್ಧರಿಸಿದ್ದಾರೆ.

    ಸತತ ಶೂಟಿಂಗ್, ವ್ಯಾಯಾಮ ಇನ್ನಿತರೆಗಳಿಂದಾಗಿ ಪ್ರಭಾಸ್‌ಗೆ ಮೊಣಕಾಲು ನೋವು ಶುರುವಾಗಿದ್ದು, ವೈದ್ಯರ ಸಲಹೆ ಮೇರೆಗೆ ಮೊಣಕಾಲಿನ ಆಪರೇಷನ್‌ಗೆ ಒಳಗಾಗಲಿದ್ದಾರೆ. ಡಿಸೆಂಬರ್ ವೇಳೆಗೆ ‘ಕಲ್ಕಿ 2898’ ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಗಿಸಲಿರುವ ಪ್ರಭಾಸ್ ಆ ಬಳಿಕ ಅಮೆರಿಕಕ್ಕೆ ತೆರಳಿ ನ್ಯೂಯಾರ್ಕ್ ಪ್ರಖ್ಯಾತ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ಕನಿಷ್ಟ ಒಂದು ವರ್ಷ ಸಿನಿಮಾಗಳಿಂದ ಪ್ರಭಾಸ್ ದೂರ ಉಳಿಯಲಿದ್ದಾರೆ ಎನ್ನಲಾಗುತ್ತಿದೆ. ನಟಿ ಸಮಂತಾರಂತೆ ಆರೋಗ್ಯಕ್ಕಾಗಿ ಪ್ರಭಾಸ್‌ ಕೂಡ ಸಿನಿಮಾದಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಈಗ ಸದ್ದು ಮಾಡ್ತಿದೆ. ಇದನ್ನೂ ಓದಿ:ಸಮುದಾಯವೊಂದನ್ನು ನಿಂದಿಸಿದ್ದಕ್ಕೆ ಉಪೇಂದ್ರ ಮೇಲೆ ಎಫ್‌ಐಆರ್ ದಾಖಲು

    ಮಾರುತಿ ನಿರ್ದೇಶನದ ಹಾರರ್ ಫ್ಯಾಂಟಸಿ ಸಿನಿಮಾದಲ್ಲಿ ಪ್ರಭಾಸ್ ನಟಿಸಬೇಕಿತ್ತು. ಅದಾದ ಬಳಿಕ ‘ಅರ್ಜುನ್ ರೆಡ್ಡಿ’ (Arjun Reddy) ಸಿನಿಮಾ ನಿರ್ದೇಶಕ ಸಂದೀಪ್ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾದಲ್ಲಿ ಪ್ರಭಾಸ್ ನಟಿಸಲಿದ್ದಾರೆ. ಅದಾದ ಬಳಿಕ ಬಾಲಿವುಡ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಈ ಮೂರೂ ಸಿನಿಮಾಗಳು ತಡವಾಗಲಿವೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಲಿನ ಶಸ್ತ್ರಚಿಕಿತ್ಸೆಯ ನಂತರ ಮತ್ತೆ ಶೂಟಿಂಗ್ ಮರಳಿದ ಪ್ರಭಾಸ್

    ಕಾಲಿನ ಶಸ್ತ್ರಚಿಕಿತ್ಸೆಯ ನಂತರ ಮತ್ತೆ ಶೂಟಿಂಗ್ ಮರಳಿದ ಪ್ರಭಾಸ್

    ಬಾಹುಬಲಿ ಪ್ರಭಾಸ್ (Prabhas) ಅವರ ನಟನೆಯ ‘ಆದಿಪುರುಷ್’ (Adipurush) ರಿಲೀಸ್ ವೇಳೆಯೇ ಅಮೆರಿಕಾಗೆ ಹಾರಿದ್ದರು. ಕಾಲಿನ ಶಸ್ತ್ರಚಿಕಿತ್ಸೆಗಾಗಿ 50 ದಿನಗಳ ಕಾಲ ಚಿಕಿತ್ಸೆ ಪಡೆದು ಈಗ ಭಾರತಕ್ಕೆ ಬಂದಿದ್ದಾರೆ. ಹಾಗಾಗಿ ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 AD’ ಸಿನಿಮಾದ ಶೂಟಿಂಗ್‌ಗೆ ಪ್ರಭಾಸ್ ಭಾಗಿಯಾಗಿದ್ದಾರೆ.

    ಪಠಾಣ್ ಬೆಡಗಿ ದೀಪಿಕಾ ಪಡುಕೋಣೆ (Deepika Padukone) ಜೊತೆ ‘ಪ್ರಾಜೆಕ್ಟ್ ಕೆ’ ಸಿನಿಮಾಗೆ ಪ್ರಭಾಸ್ ಕೈಜೋಡಿಸಿದ್ದಾರೆ. ‘ಪ್ರಾಜೆಕ್ಟ್ ಕೆ’ ಹೆಸರಿನಲ್ಲಿ ಲಾಂಚ್ ಆಗಿದ್ದ ಈ ಚಿತ್ರ ಈಗ ‘ಕಲ್ಕಿ 2898 AD’ ಎಂದು ಟೈಟಲ್ ಬದಲಾಗಿಸಲಾಗಿದೆ. ಪ್ರಭಾಸ್ ಅನಾರೋಗ್ಯದ ನಿಮಿತ್ತ ಶೂಟಿಂಗ್‌ಗೆ ಬ್ರೇಕ್ ಬಿದ್ದಿತ್ತು. ಈಗ ಹೈದರಾಬಾದ್‌ನ ರಾಮೋಜಿ ಫಿಲ್ಮ್ಂ ಸಿಟಿಯಲ್ಲಿ ಶೂಟಿಂಗ್ ಶುರುವಾಗಿದೆ. ಆಗಸ್ಟ್ 28ರವರೆಗೆ ಶೂಟಿಂಗ್ ನಡೆಯಲಿದೆ.

    ಕಲ್ಕಿಯಾಗಿ ಪ್ರಭಾಸ್ ಮಿಂಚಿದ್ರೆ, ದೀಪಿಕಾ ಪಡುಕೋಣೆ (Deepika Padukone) ನಾಯಕಿಯಾಗಿ ನಟಿಸಿದ್ದಾರೆ. ಕಮಲ್ ಹಾಸನ್ (Kamal Haasan) ವಿಲನ್ ಆಗಿ ಅಬ್ಬರಿಸಿದ್ದಾರೆ. ಬಿಗ್ ಬಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಸುಂದರ ಸಂಸಾರವನ್ನು ದೇವರು ಹಾಳು ಮಾಡಿಬಿಟ್ಟ: ಗಿರಿಜಾ ಲೋಕೇಶ್

    ಪ್ರಭಾಸ್ ಕಲ್ಕಿಯ ಕಥೆ ಭಿನ್ನವಾಗಿ ಇರಲಿದೆ ಎನ್ನಲಾಗುತ್ತಿದೆ. ಕಲ್ಕಿ ಜನಿಸಿದ ಬಳಿಕ ಕಲಿಯುಗ ಅಂತ್ಯವಾಗಿ ಸತ್ಯಯುಗ ಆರಂಭ ಆಗುತ್ತದೆ ಎನ್ನುವ ನಂಬಿಕೆ ಅನೇಕರದ್ದು. ಹೀಗಾಗಿ ಸಿನಿಮಾದ ಕಥೆ ಕಲಿಯುಗದ ಅಂತ್ಯವನ್ನು ತೋರಿಸುವ ರೀತಿಯಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ಮೊದಲ ತುಣುಕು ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಎಲ್ಲಿಗೆ ಬಂತು ‘ಯುವ’ ಸಿನಿಮಾ- ಇಲ್ಲಿದೆ ಬಿಗ್ ಅಪ್‌ಡೇಟ್

    ಎಲ್ಲಿಗೆ ಬಂತು ‘ಯುವ’ ಸಿನಿಮಾ- ಇಲ್ಲಿದೆ ಬಿಗ್ ಅಪ್‌ಡೇಟ್

    ಡಾರ್ಲಿಂಗ್ ಪ್ರಭಾಸ್ (Prabhas) ‘ಸಲಾರ್’ (Salaar) ಜೊತೆ ಯುವ ಯುದ್ಧ ಆರಂಭ ಮಾಡ್ತಾರಾ? ಸಲಾರ್ ರಿಲೀಸ್ ಹೊತ್ತಿನಲ್ಲಿ ಯುವ ಬಿಗ್ ಅಪ್‌ಡೇಟ್ ಕೊಡ್ತಾರಾ? ಸದ್ಯ ಯುವ ಸಿನಿಮಾ ಯಾವ ಹಂತದಲ್ಲಿದೆ. ಎನು ಹೇಳ್ತಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್? ದೊಡ್ಮನೆ ಕುಡಿಯ ಮೊದಲ ಸಿನಿಮಾಗೆ ಹೊಂಬಾಳೆ ಸಂಸ್ಥೆ ಮಾಡ್ತಿರುವ ಪ್ಲಾನ್ ಏನು? ಇಲ್ಲಿದೆ ಮಾಹಿತಿ

    ‘ಯುವ’ (Yuva Film) ಇದೊಂದು ಹೆಸರು ಬಹಳಷ್ಟು ಮನಸ್ಸುಗಳಿಗೆ ಭರವಸೆ ಮೂಡಿಸಿದೆ. ಅಪ್ಪು ಇಲ್ಲದ ಹೊತ್ತಿನಲ್ಲಿ ಕಂಗಾಲಾಗಿದ್ದ ಕಣ್ಣುಗಳಿಗೆ ಆಸರೆಯಾಗಿದೆ. ಟೈಟಲ್ ಟೀಸರ್‌ನಿಂದ ಯುವರಾಜ್ ಕುಮಾರ್ ಮೆರವಣಿಗೆ ಶುರು ಮಾಡಿದ್ರು. ಈಗ ಈ ಮೆರವಣಿಗೆ ಮಹಾಜಾತ್ರೆ ರೂಪ ತಾಳ್ತಿದೆ. ಪ್ಯಾನ್ ಇಂಡಿಯಾ ಸಲಾರ್ ಸಿನಿಮಾ ಜೊತೆ ಯುವ ಬಿಗ್ ಅಪ್‌ಡೇಟ್ ಕೊಡಲು ಪ್ಲಾನ್ ಆಗ್ತಿದೆ. ಅಂದುಕೊಂಡಂತೆ ಆದರೆ ‘ಸಲಾರ್’ ಸಿನಿಮಾ ರಿಲೀಸ್ ಜೊತೆಗೆ ಥೇಟರ್‌ನಲ್ಲಿ ಯುವ ಸಿನಿಮಾದ ಟ್ರೈಲರ್ ಕೂಡ ಬರೊ ಸಾಧ್ಯತೆ ಇದೆ. ಇದನ್ನೂ ಓದಿ:ಅಪ್ಪು ಕನಸಿಗೆ ಮಹತ್ವದ ನಿರ್ಧಾರ ಕೈಗೊಂಡ ಅಶ್ವಿನಿ ಪುನೀತ್‌ ರಾಜ್‌ಕುಮಾರ್

    ಸದ್ಯ ಯುವ ಸಿನಿಮಾದ ಶೂಟಿಂಗ್ ಜೋರಾಗಿ ಆಗ್ತಿದೆ. ಹಗಲು-ರಾತ್ರಿ ಒಂದು ಮಾಡಿ ಯುವ ಸಿನಿಮಾನ ಮತ್ತಷ್ಟು ಚೆಂದವಾಗಿ ತೆರೆಗೆ ತರಲು ಸಂತೋಷ್ ಆನಂದ್ ರಾಮ್ ಆಂಡ್ ಟೀಮ್ ಕೆಲಸ ಮಾಡ್ತಿದೆ. ಸುಮಾರು ನಲವತ್ತರಿಂದ ಐವತ್ತು ದಿನಗಳ ಶೂಟಿಂಗ್ ಕಂಪ್ಲೀಟ್ ಆಗಿದೆ. ಇನ್ನು 30 ದಿನಗಳ ಚಿತ್ರೀಕರಣ ಮಾಡಿದ್ರೆ ಯುವ ಸಿನಿಮಾದ ಮಾತಿನ ಹಂತ ಪೂರ್ತಿಯಾಗುತ್ತೆ. ಈಗಾಗ್ಲೇ ಕೆಲವು ಫೈಟ್ ಸೀನ್‌ಗಳನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಟಾಕಿ ಆದ್ಮೇಲೆ ಸಾಂಗ್ಸ್ ಬಗ್ಗೆ ಪ್ಲ್ಯಾನ್ ಮಾಡ್ತಿವಿ ಅಂತಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್.

    ಸೆಪ್ಟೆಂಬರ್ ಅಂತ್ಯಕ್ಕೆ ‘ಯುವ’ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಲಿದೆ ಅನ್ನೋದು ತಂಡದ ಮಾಹಿತಿ. ‘ಸಲಾರ್’ ಸಿನಿಮಾ ಈಗಾಗ್ಲೇ ರಿಲೀಸ್ ಡೇಟ್ ಫೈನಲ್ ಆಗಿದೆ. ಸೆಪ್ಟೆಂಬರ್‌ನಲ್ಲಿ ಸಲಾರ್ ಸಿನಿಮಾ ಬರುವ ಹೊತ್ತಿಗೆ ಯುವ ಟ್ರೇಲರ್ ಕೂಡ ರೆಡಿಯಾಗಿರುತ್ತೆ. ಪ್ರಭಾಸ್ ಸಿನಿಮಾ ನೋಡಲು ಥೇಟರ್‌ಗೆ ಬರುವ ಆಡಿಯನ್ಸ್‌ಗೆ ‘ಯುವ’ ಟ್ರೇಲರ್ ತೋರಿಸಲು ಸಜ್ಜಾಗ್ತಿದೆ ಹೊಂಬಾಳೆ ಸಂಸ್ಥೆ. ಆದ್ರೆ ನಿರ್ಮಾಪಕರಾಗಲಿ, ನಿರ್ದೇಶಕರಾಗಲಿ ಇದರ ಬಗ್ಗೆ ಏನೂ ರಿವೀಲ್ ಮಾಡಿಲ್ಲ. ಯುವ ಕಂಟೆಂಟ್ ಕೊಡಲು ಪ್ಲಾನ್ ಆಗ್ತಿದೆ ಅನ್ನೋದು ಮೂಲಗಳ ಮಾಹಿತಿ.

    ‘ಯುವ’ ಟೈಟಲ್ ಟೀಸರ್ ನೋಡಿ ವಾಹ್ ಅಂತ ಥ್ರಿಲ್ ಆಗಿದ್ರು ದೊಡ್ಮನೆ ಅಭಿಮಾನಿಗಳು. ನಮ್ಮ ಅಪ್ಪುನ ಮತ್ತೆ ನೋಡಿದಂಗಾಯ್ತು ಅಂತ ಖುಷಿ ಪಟ್ರು ಪವರ್ ಸ್ಟಾರ್ ಅಭಿಮಾನಿಗಳು. ಡಿಸೆಂಬರ್ 22ಕ್ಕೆ ಯುವರಾಜ್ ಕುಮಾರ್ ತಮ್ಮ ‘ಯುವ’ ಸಿನಿಮಾ ಮೂಲಕ ನಿಮ್ಮ ಮನದಂಗಳಕ್ಕೆ ಬರುತ್ತಿದ್ದಾರೆ. ಈಗ ಯುವ ಸಿನಿಮಾ ಫೈನಲ್ ಶೆಡ್ಯೂಲ್ ಫಿಕ್ಸ್ ಆಗಿದೆ. ಯುವ ಮೆರವಣಿಗೆ ಮತ್ತಷ್ಟು ಮಗದಷ್ಟು ಸ್ಪೆಷಲ್ ಮಾಡಲು ಹೊಂಬಾಳೆ ಸಂಸ್ಥೆ ಸಜ್ಜಾಗ್ತಿದೆ.