ಪ್ರಭಾಸ್ ಮುಖ್ಯ ಭೂಮಿಕೆಯ ಕಲ್ಕಿ ಸಿನಿಮಾದಲ್ಲಿ ರಾಜಮೌಳಿಯೂ (Rajamouli) ಪಾತ್ರ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಸಿನಿಮಾದಲ್ಲಿ ಅವರು ಮಹತ್ವದ ಪಾತ್ರವೊಂದನ್ನು ನಿರ್ವಹಿಸಿದ್ದು, ಅದು ವಿಜ್ಞಾನಿ (Scientist) ಪಾತ್ರವಾಗಿದೆಯಂತೆ. ಅಧಿಕೃತವಾಗಿ ಚಿತ್ರತಂಡ ಯಾವುದೇ ಮಾಹಿತಿ ಹಂಚಿಕೊಳ್ಳದೇ ಇದ್ದರೂ, ಇಂಥದ್ದೊಂದು ಸುದ್ದಿಯಂತೂ ಸಖತ್ ಜೋರಾಗಿಯೇ ಕೇಳಿ ಬರುತ್ತಿದೆ.

ಪ್ರತಿ ಹಂತದಲ್ಲೂ ನಾನಾ ರೀತಿಯ ಸುದ್ದಿಗಳನ್ನು ಮಾಡುತ್ತಲೇ ಬರುತ್ತಿದೆ ಚಿತ್ರತಂಡ. ಮೊನ್ನೆಯಷ್ಟೇ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರ ಹುಟ್ಟು ಹಬ್ಬದ (Birthday) ದಿನದಂದು ಕಲ್ಕಿ ಸಿನಿಮಾ ಟೀಮ್ ಅಮಿತಾಭ್ ಬಚ್ಚನ್ ಪಾತ್ರದ ಫಸ್ಟ್ ಲುಕ್(First Look) ರಿಲೀಸ್ ಮಾಡಿತ್ತು. ವಿಚಿತ್ರ ವೇಷದಲ್ಲಿ ಅಮಿತಾಭ್ ಕಾಣಿಸಿಕೊಂಡಿದ್ದು ಪಾತ್ರದ ಬಗ್ಗೆ ಕುತೂಹಲ ಮೂಡಿಸಿತ್ತು.

ಈ ನಡುವೆ ಕಲ್ಕಿ (Kalki) ಸಿನಿಮಾದ ಫೋಟೋವೊಂದು ಲೀಕ್ ಆಗಿತ್ತು. ಸಿನಿಮಾದ ಪ್ರಮುಖ ಗೆಟಪ್ ಒಳಗೊಂಡಿದ್ದ ಆ ಫೋಟೋವನ್ನು ಯಾರು ಲೀಕ್ ಮಾಡಿದ್ದಾರೆ ಎಂದು ನಿರ್ಮಾಣ ಸಂಸ್ಥೆ ತಲೆಕೆಡಿಸಿಕೊಂಡಿತ್ತು. ಸಿನಿಮಾ ರಿಲೀಸ್ ಗೂ ಮುನ್ನ ಹೀಗೆ ಪಾತ್ರಗಳ ಬಗ್ಗೆ ರಿವಿಲ್ ಮಾಡುತ್ತಿರುವುದು ಕೋಪ ತರಿಸಿತ್ತು. ಇದೀಗ ನಿರ್ಮಾಪಕರು ಈ ಕುರಿತು ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ.

ಕಲ್ಕಿ ಸಿನಿಮಾದ ವಿಎಫ್ಎಕ್ಷ್ ಮಾಡುತ್ತಿರುವ ಸಂಸ್ಥೆಯೇ ಫೋಟೋವನ್ನು ಲೀಕ್ ಮಾಡಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಂಸ್ಥೆಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಿರ್ಮಾಪಕರು ಪೊಲೀಸ್ ಮೊರೆ ಹೋಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಭಾರೀ ಬಜೆಟ್ ನಲ್ಲಿ ರೆಡಿ ಆಗಿರುವ ಕಲ್ಕಿ ಚಿತ್ರಕ್ಕೆ ಈ ಹಿಂದೆ ಪ್ರಾಜೆಕ್ಟ್ ಕೆ (Project K) ಹೆಸರಿನಿಂದ ಕರೆಯಲಾಗುತ್ತಿತ್ತು. ಸಿನಿಮಾದ ಗ್ಲಿಂಪ್ಸ್ (Glimpse) ರಿಲೀಸ್ ದಿನ ಅಸಲಿ ಹೆಸರನ್ನು ಅನೌನ್ಸ್ ಮಾಡಲಾಯಿತು. ಈ ಗ್ಲಿಂಪ್ಸ್ ನಲ್ಲಿ ಸಾಕಷ್ಟು ಸಂಗತಿಗಳನ್ನು ನಿರ್ದೇಶಕರು ಹೇಳಿದ್ದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]


ಲೋಕೇಶ್ ಕನಕರಾಜ್ ಮಾಡಿದ್ದು ಕೆಲವೇ ಸಿನಿಮಾ. ಅಷ್ಟರಲ್ಲಿ ಇಡೀ ದೇಶದ ತುಂಬಾ ಹೆಸರು ಮಾಡಿದ್ದಾರೆ. ಇವರ ಸಿನಿಮ್ಯಾಟಿಕ್ ಯುನಿವರ್ಸ್ ಕಥಾ ಹಂದರಕ್ಕೆ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ‘ವಿಕ್ರಮ್’ (Vikram) ಸಿನಿಮಾದಲ್ಲಿ ಖೈದಿ ಪಾತ್ರ ಕಾಣಿಸಿದ್ದು ಅದಕ್ಕೆ ಸಾಕ್ಷಿ. ಇದೀಗ ಪ್ರಭಾಸ್- ಲೋಕೇಶ್ ಸಿನಿಮಾ ಮಾಡೋದು ಖಚಿತವಾಗಿದೆ. ಹಾಗಿದ್ದರೆ ಇದೂ ಸಿನಿಮ್ಯಾಟಿಕ್ ಯುನಿವರ್ಸ್ ಕಥಾ ಹಂದರ ಹೊಂದಿರುತ್ತದಾ ಅಥವಾ ಕೇವಲ ಪ್ರಭಾಸ್ ಸಿನಿಮಾ ಮಾತ್ರವೇ ಆಗಿರುತ್ತದಾ? ಅನುಮಾನಕ್ಕೆ ಉತ್ತರ ಕೊಟ್ಟಿದ್ದಾರೆ ಲೋಕೇಶ್.
ಪ್ರಭಾಸ್ (Prabhas) ಸಿನಿಮಾ ನನ್ನ ಸಿನಿಮ್ಯಾಟಿಕ್ ಯುನಿವರ್ಸ್ ಕಥಾ ಹಂದರ ಹೊಂದಿರುವುದಿಲ್ಲ. ಇದು ಕೇವಲ ಪ್ರಭಾಸ್ ಸಿನಿಮಾ ಮಾತ್ರವೇ ಆಗಿರುತ್ತದೆ. ಹೀಗಾಗಿ ಬೇರೊಂದು ಆ್ಯಕ್ಷನ್ ಡ್ರಾಮಾ ಕತೆ ನೀವು ನೋಡಲಿದ್ದೀರಿ ಎಂದಿದ್ದಾರೆ. ಇದನ್ನೂ ಓದಿ:























ಮೈಸೂರಿನ ಮ್ಯೂಸಿಯಂನಲ್ಲಿ (Mysuru Museum) ಪ್ರಭಾಸ್ ಪ್ರತಿಮೆ ನಿರ್ಮಾಣ ಮಾಡಿರುವ ವಿಚಾರಕ್ಕೆ ಸ್ವತಃ ಬಾಹುಬಲಿ ನಿರ್ಮಾಪಕ ಶೋಬು ಯರ್ಲಗಡ್ಡ ಅಸಮಾಧಾನ ಹೊರಹಾಕಿದ್ದಾರೆ. ಮ್ಯೂಸಿಯಂನಲ್ಲಿ ಪ್ರಭಾಸ್ ಬಾಹುಬಲಿ ಲುಕ್ ವೈರಲ್ ಆಗ್ತಿದ್ದಂತೆ ನಿರ್ಮಾಪಕ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಮೆ ನೋಡಲು ಬಾಹುಬಲಿ ರೀತಿ ಇದೆ. ಆದರೆ ಬಾಹುಬಲಿ ಲುಕ್‌ಗೂ ಪ್ರಭಾಸ್‌ಗೂ ಹೊಂದಾಣಿಕೆ ಆಗುತ್ತಿಲ್ಲ. ಇದನ್ನೂ ಓದಿ: