Tag: ಪ್ರಭಾಸ್

  • ಬಾಹುಬಲಿ ಪ್ರಭಾಸ್‌ಗೆ ಜೋಡಿಯಾದ ಅನುಷ್ಕಾ ಶೆಟ್ಟಿ

    ಬಾಹುಬಲಿ ಪ್ರಭಾಸ್‌ಗೆ ಜೋಡಿಯಾದ ಅನುಷ್ಕಾ ಶೆಟ್ಟಿ

    ಬಾಹುಬಲಿ ಪ್ರಭಾಸ್ (Prabhas) ಮತ್ತು ಅನುಷ್ಕಾ ಶೆಟ್ಟಿ (Anushka Shetty) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 6 ವರ್ಷಗಳ ನಂತರ ಡಾರ್ಲಿಂಗ್ ಪ್ರಭಾಸ್ ಮತ್ತು ಸ್ವೀಟಿ ಮತ್ತೆ ತೆರೆಯ ಮೇಲೆ ಜೋಡಿಯಾಗಿ ಬರುತ್ತಿದ್ದಾರೆ. ಹೊಸ ಸಿನಿಮಾ ಮಾಡುವ ಮೂಲಕ ಸದ್ದು ಮಾಡ್ತಿದ್ದಾರೆ.ಇದನ್ನೂ ಓದಿ:ವದಂತಿಗೆ ಬ್ರೇಕ್, ಕಡೆಗೂ ಸ್ನೇಹಿತ್ ಜೊತೆ ಕಾಣಿಸಿಕೊಂಡ ವಿನಯ್

    ಸದ್ದಿಲ್ಲದೇ ಪ್ರಭಾಸ್ (Prabhas) ಸಿನಿಮಾದಲ್ಲಿ ಅನುಷ್ಕಾ ನಟಿಸುತ್ತಿದ್ದಾರೆ. ಒಡಿಶಾದಲ್ಲಿ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ರಮ್ಯಾಕೃಷ್ಣ (Ramyakrishna) ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ಕರಾವಳಿ ನಟಿ ಬಣ್ಣಹಚ್ಚಿದ್ದಾರೆ. ಈ ಚಿತ್ರವನ್ನು ಪ್ರಭಾಸ್ ಹೋಂ ಬ್ಯಾನರ್ ಯುವಿ ಕ್ರಿಯೇಷನ್ಸ್ ಸಂಸ್ಥೆ ನಿರ್ಮಾಣ ಮಾಡ್ತಿದೆ ಎನ್ನಲಾಗಿದೆ. ಶೀಘ್ರದಲ್ಲೇ ಈ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದೆ. ಇನ್ನೂ 10 ದಿನಗಳ ಕಾಲ ಅನುಷ್ಕಾ ಶೆಟ್ಟಿ ಹಾಗೂ ರಮ್ಯಾಕೃಷ್ಣ ಭಾಗದ ಚಿತ್ರೀಕರಣ ಒಡಿಶಾದಲ್ಲಿ ಶೂಟಿಂಗ್ ನಡೆಯಲಿದೆ. ಈ ಸಿನಿಮಾ ಬಗ್ಗೆ ಯಾವುದೇ ವಿಚಾರ ಲೀಕ್ ಆಗಬಾರದು ಎನ್ನುವ ಕಾರಣಕ್ಕೆ ಚಿತ್ರತಂಡ ಶೂಟಿಂಗ್‌ಗೆ ಭಾರೀ ಭದ್ರತೆ ವಹಿಸಿದ್ದಾರೆ.

    ಎರಡು ದಿನಗಳ ಹಿಂದೆ ಒಡಿಶಾದಲ್ಲಿ ಚಿತ್ರೀಕರಣಕ್ಕೆ ಹೋಗುವಾಗ ಮಾಸ್ಕ್ ಧರಿಸಿ ಕಾಣಿಸಿಕೊಂಡಿದ್ದ ಅನುಷ್ಕಾ ಶೆಟ್ಟಿ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸ್ವೀಟಿಯನ್ನು ನೋಡಲು ಹೋಟೆಲ್ ಬಳಿ ಜಮಾಯಿಸಿದ್ದರು. 2017ರಲ್ಲಿ ಬಾಹುಬಲಿ- 2ನಲ್ಲಿ ಪ್ರಭಾಸ್- ಅನುಷ್ಕಾ ಶೆಟ್ಟಿ ಕಡೆಯದಾಗಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಹೊಸ ಸಿನಿಮಾಗಾಗಿ ಜೊತೆಯಾಗುತ್ತಿರುವ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

    ಅಂದಹಾಗೆ, ಮಲಯಾಳಂನಲ್ಲಿ ‘ಕಥನಾರ್’ ಎನ್ನುವ ಚಿತ್ರದಲ್ಲಿ ಕೂಡ ಅನುಷ್ಕಾ ನಟಿಸಿದ್ದಾರೆ. ಆ ಸಿನಿಮಾ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರುವಾಗಿದೆ.

  • ಡಾರ್ಲಿಂಗ್‌ ಪ್ರಭಾಸ್‌ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್

    ಡಾರ್ಲಿಂಗ್‌ ಪ್ರಭಾಸ್‌ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್

    ಶ್ಮಿಕಾ (Rashmika Mandanna) ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲಿದ್ದಾರಾ? ಹೌದು ಎನ್ನುತ್ತದೆ ಬಾಲಿವುಡ್ ಅಂಗಳ. ಕಾರಣ ಇದೆ. ಈಗಾಗಲೇ ‘ಅನಿಮಲ್’ (Animal) ಸಿನಿಮಾದಿಂದ ಭರ್ಜರಿ ಹೆಸರು ಮಾಡಿರುವ ಸಾನ್ವಿಗೆ ಅವಕಾಶ ಹುಡುಕಿಕೊಂಡು ಬರುತ್ತಿವೆ. ನಾಲ್ಕು ಕೋಟಿ ಸಂಭಾವನೆ ಪಡೆಯುತ್ತಿದ್ದರೂ ನಿರ್ಮಾಪಕರು ಈಕೆಯನ್ನು ಬಿಡುತ್ತಿಲ್ಲ. ಹಾಗಿದ್ದರೆ ಇನ್ಯಾವ ಸಿನಿಮಾಗೆ ರಶ್ಮಿಕಾಗೆ ಬುಲಾವ್ ಬಂದಿದೆ? ಯಾರು ಹೀರೋ? ಡಾರ್ಲಿಂಗ್‌ ಪ್ರಭಾಸ್ (Prabhas) ಮೊದಲ ಬಾರಿ ಜಂಟಿಯಾಗಲಿದ್ದಾರಾ ಶ್ರೀವಲ್ಲಿ? ಇಲ್ಲಿದೆ ಮಾಹಿತಿ.

    ರಶ್ಮಿಕಾ ಮಂದಣ್ಣ ಇದೀಗ ಬಹುಬೇಡಿಕೆಯ ನಟಿ, ಅವರನ್ನು ಹಿಡಿಯೋರು ಇಲ್ಲ. ‘ಅನಿಮಲ್’ ಸಿನಿಮಾದಿಂದ ಟಾಕ್ ಆಫ್ ದಿ ಇಂಡಿಯಾ ಆಗಿರುವ ಸಾನ್ವಿಗೆ ಒಂದರ ಹಿಂದೊಂದು ಅವಕಾಶ ಹುಡುಕಿಕೊಂಡು ಬರುತ್ತಿವೆ. ಆದರೆ ಡೇಟ್ ಸಿಗಬೇಕಲ್ಲವೇ? ಹೀಗಾಗಿಯೇ ಒಂದಲ್ಲ ಎರಡಲ್ಲ ಭರ್ತಿ 4 ಕೋಟಿ ಕೊಟ್ಟು ಬುಕ್ ಮಾಡುತ್ತಿದ್ದಾರೆ. ಆದರೆ ರಶ್ಮಿಕಾ ಮಾತ್ರ ನಾನು 4 ಕೋಟಿ ಸಂಭಾವನೆ ಪಡೆಯುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಎಲ್ಲವೂ ಇನ್‌ಕಮ್ ಟ್ಯಾಕ್ಸ್ ಮಹಿಮೆ. ಏನಾದರಾಗಲಿ ರಶ್ಮಿಕಾ ಮಾತ್ರ ಪ್ರಭಾಸ್ ಜೊತೆ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ. ಇದು ಬಾಲಿವುಡ್ ಮಾಹಿತಿ. ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ನಿರ್ದೇಶನದ ‘ಸ್ಪಿರಿಟ್’ (Spirit Film) ಚಿತ್ರಕ್ಕೆ ರಶ್ಮಿಕಾ ಬುಕ್ ಆಗಿದ್ದಾರೆ. ಇದನ್ನೂ ಓದಿ:Exclusive: ತೆಲುಗಿನತ್ತ ಕನ್ನಡದ ನಟ- ಬಾಲಯ್ಯಗೆ ರಿಷಿ ವಿಲನ್

    ‘ಅನಿಮಲ್’ ಸಿನಿಮಾದಿಂದ ಸಂದೀಪ್ ಹಾಗೂ ರಶ್ಮಿಕಾ ಒಂದಾಗಿದ್ದಾರೆ. ಅಂದರೆ ಹತ್ತಿರವಾಗಿದ್ದಾರೆ. ಹೀಗಾಗಿಯೇ ಸಂದೀಪ್ ಹೊಸ ಚಿತ್ರಕ್ಕೆ ಕನ್ನಡದ ನಟಿ ರಶ್ಮಿಕಾ ನಾಯಕಿ ಎಂದೇ ಹೇಳಲಾಗುತ್ತಿದೆ. ಇದನ್ನು ಯಾರೂ ಅಧಿಕೃತವಾಗಿ ಹೇಳಿಲ್ಲ. ಅದು ನಿಜವಾದರೂ ಅಚ್ಚರಿ ಇಲ್ಲ. ಕಾರಣ ‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾ ಅಷ್ಟೊಂದು ಅದ್ಭುತವಾಗಿ ನಟಿಸಿದ್ದರು. ಜನರು ಮಾತ್ರ ಅಲ್ಲ. ರಶ್ಮಿಕಾ ನಿಜಕ್ಕೂ ಇಷ್ಟೊಂದು ಅದ್ಭುತವಾಗಿ ನಟಿಸುತ್ತಾರಾ ಎಂದು ಬಾಲಿವುಡ್ ಕೂಡ ಅಚ್ಚರಿ ಪಟ್ಟಿತ್ತು. ಅದನ್ನು ಸಾಬೀತು ಪಡಿಸಲು ಮತ್ತೆ ಅವಕಾಶ ಕೊಡುವ ಸಾಧ್ಯತೆ ಇದೆ. ಪ್ರಭಾಸ್‌ ಜೊತೆ ರಶ್ಮಿಕಾ ರೊಮ್ಯಾನ್ಸ್‌ ಮಾಡೋದ್ದಕ್ಕೆ ರೆಡಿಯಾಗಿದ್ದಾರೆ.

    ಎಲ್ಲಾ ಸೂಪರ್ ಸ್ಟಾರ್‌ಗಳ ಜೊತೆ ನಟಿಸಿರುವ ರಶ್ಮಿಕಾ ಈಗ ಮೊದಲ ಬಾರಿಗೆ ಡಾರ್ಲಿಂಗ್ ಪ್ರಭಾಸ್‌ಗೆ  ಕನ್ನಡದ ನಟಿ ಜೋಡಿಯಾಗುತ್ತಿದ್ದಾರೆ. ಇವರಿಬ್ಬರ ಕಾಂಬೋ ತೆರೆಯ ಮೇಲೆ ವರ್ಕ್ ಆಗುತ್ತಾ ಕಾಯಬೇಕಿದೆ.

  • ಪ್ರಭಾಸ್ ನಟನೆಯ ‘ಸಲಾರ್’ ಇಂಗ್ಲಿಷ್ ನಲ್ಲೂ ರಿಲೀಸ್

    ಪ್ರಭಾಸ್ ನಟನೆಯ ‘ಸಲಾರ್’ ಇಂಗ್ಲಿಷ್ ನಲ್ಲೂ ರಿಲೀಸ್

    ಲಾರ್ ಸಿನಿಮಾವನ್ನು ನೆಟ್ ಫ್ಲಿಕ್ಸ್ (OTT) ಖರೀದಿಸಿದ್ದು ಈಗಾಗಲೇ ಹಲವು ಭಾಷೆಗಳಲ್ಲಿ ಅದು ಸ್ಟ್ರೀಮಿಂಗ್ ಆರಂಭಿಸಿದೆ. ಇದರ ಜೊತೆ ಜೊತೆಗೆ ಸಲಾರ್ ಸಿನಿಮಾ ಇಂಗ್ಲಿಷ್ (English) ನಲ್ಲೂ ರಿಲೀಸ್ ಆಗಿದೆ. ಜೊತೆಗೆ ಸ್ಪ್ಯಾನಿಷ್ (Spanish) ಭಾಷೆಯಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಸ್ಪ್ಯಾನಿಷ್ ಭಾಷೆಗೆ ಚಿತ್ರವನ್ನು ಡಬ್ ಮಾಡಲಾಗುತ್ತಿದ್ದು, ಮಾರ್ಚ್ 7 ರಂದು ಈ ಚಿತ್ರವನ್ನು ರಿಲೀಸ್ ಮಾಡುವುದಾಗಿ ಸಂಸ್ಥೆ ತಿಳಿಸಿದೆ.

    ಸಲಾರ್ ಸಿನಿಮಾ ಬಾಕ್ಸಾಫೀಸಿನಲ್ಲಿ ಈವರೆಗೂ 627 ಕೋಟಿ ರೂಪಾಯಿಗೂ ಅಧಿಕ ಗಳಿಸಿ, ಇನ್ನೂ ಮುನ್ನುಗ್ಗುತ್ತಿದೆ. ಈ ನಡುವೆ ಸಲಾರ್ 2 ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಗಳು ಹೊರ ಬಿದ್ದಿವೆ. ಆಂಗ್ಲ ವೆಬ್ ಸೈಟ್ ಜೊತೆ ನಿರ್ಮಾಪಕ ವಿಜಯ ಕಿರಗಂದೂರು (Vijaya Kirgandur) ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದು, ಅದರ ಪ್ರಕಾರ ಸಲಾರ್ 2 ಸಿನಿಮಾ 2025ರಲ್ಲಿ ಬಿಡುಗಡೆ ಆಗಿದೆ. ಇನ್ನೂ ಅಚ್ಚರಿಯ ಸಂಗತಿ ಅಂದರೆ, ಈಗಾಗಲೇ ಸಲಾರ್ 2 ಸಿನಿಮಾದ ಸ್ಕ್ರಿಪ್ಟ್ ರೆಡಿಯಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಸಲಾರ್ 2 ಸಿನಿಮಾದ ಕುರಿತಂತೆ ನಿರ್ದೇಶಕ ಪ್ರಶಾಂತ್ ನೀಲ್ ಕೆಲಸ ಕೂಡ ಶುರು ಮಾಡಲಿದ್ದಾರಂತೆ. ಸಲಾರ್ ಸಿನಿಮಾಗಿಂತಲೂ ಸಲಾರ್ 2 ಇನ್ನೂ ಅದ್ಧೂರಿಯಾಗಿ ಇರಲಿದೆ ಎಂದು ವಿಜಯ್ ತಿಳಿಸಿದ್ದಾರೆ.

    ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಾಣದ ಸಲಾರ್ (Salaar) ಸಿನಿಮಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಈ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವಿಶ್ವದಾದ್ಯಂತ  ಕೋಟಿ ಕೋಟಿ ಹಣವನ್ನು ಗಳಿಸಿದೆ. ಬಾಕ್ಸ್ ಆಫೀಸಿಗೆ ಕೋಟಿ ಕೋಟಿ ಹಣ ಹರಿದು ಬರುತ್ತಿದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ, ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೊಸ ದಾಖಲೆಯನ್ನು ಮಾಡಿದೆ. ಕನ್ನಡದ ನಿರ್ಮಾಣದ ಸಂಸ್ಥೆಯೊಂದು ರಾಷ್ಟ್ರೀಯ ಮಟ್ಟದಲ್ಲಿ ಇಂಥದ್ದೊಂದು ದಾಖಲೆ ಮಾಡಿರುವುದು ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

    ಕನ್ನಡದಲ್ಲಿ ‘ಮಾಸ್ಟರ್ ಪೀಸ್‍’, ‘ರಾಜಕುಮಾರ’, ‘ಯುವರತ್ನ’, ‘ಕೆಜಿಎಫ್‍ 1 ಮತ್ತು 2’, ‘ಕಾಂತಾರ’, ‘ರಾಘವೇಂದ್ರ ಸ್ಟೋರ್ಸ್’ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್, ತನ್ನ ನಿರ್ಮಾಣದ ಚಿತ್ರಗಳ ಮೂಲಕ ಜಗತ್ತಿನ ಗಮನ ಸೆಳೆದಿರುವುದಷ್ಟೇ ಅಲ್ಲ, ಕನ್ನಡ ಚಿತ್ರಗಳನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಮೂಲಕ ಎಲ್ಲರ ಗಮನ ಸೆಳೆದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಸಲಾರ್’ ಪ್ಯಾನ್‍ ಇಂಡಿಯಾ ಚಿತ್ರವಾದರೂ, ಈ ಚಿತ್ರದ ಹಿಂದಿರುವ ತಾಂತ್ರಿಕ ತಂಡದವರೆಲ್ಲರೂ ಕನ್ನಡದವರಾಗಿದ್ದಾರೆ. ನಿರ್ಮಾಪಕರಾದ ವಿಜಯ್‍ ಕಿರಗಂದೂರು, ನಿರ್ದೇಶಕ ಪ್ರಶಾಂತ್‍ ನೀಲ್‍ (Prashant Neel), ಛಾಯಾಗ್ರಾಹಕ ಭುವನ್‍ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಚಿತ್ರದಲ್ಲಿ ಕೆಲಸ ಮಾಡಿರುವ ಹಲವು ತಂತ್ರಜ್ಞರು ಹಾಗೂ ಕಲಾವಿದರು  ಈ ನೆಲದ ಮಣ್ಣಿನವರಾಗಿದ್ದು, ಇದು ಕನ್ನಡದ ಪ್ರತಿಭಾ ಸಂಪತ್ತಿನ ಒಂದು ಉದಾಹರಣೆಯಷ್ಟೇ.

  • ಎರಡು ತಿಂಗಳ ವಿರಾಮ ಘೋಷಿಸಿದ ನಟ ಪ್ರಭಾಸ್

    ಎರಡು ತಿಂಗಳ ವಿರಾಮ ಘೋಷಿಸಿದ ನಟ ಪ್ರಭಾಸ್

    ಪ್ರಭಾಸ್ (Prabhas) ಆಕಾಶದಲ್ಲಿ ತೇಲಾಡುತ್ತಿದ್ದಾರೆ. ಅದಕ್ಕೆ ಕಾರಣ ಸಲಾರ್ (Salaar) ಮಹಾ ಗೆಲುವು. ಭರ್ತಿ ಏಳು ನೂರು ಕೋಟಿಯನ್ನು ಗಳಿಸಿ ಮತ್ತೆ ರೆಬೆಲ್‌ ಸ್ಟಾರ್‌ಗೆ ಆನೆ ಬಲ ನೀಡಿದೆ. ಮೂರು ಸೋಲಿನಿಂದ ಒದ್ದಾಡುತ್ತಿದ್ದ ಡಾರ್ಲಿಂಗ್ ಅದೇ ಖುಷಿಯಲ್ಲಿ ವಿದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಇನ್ನು ಎರಡು ತಿಂಗಳು ಯಾರಿಗೂ ಸಿಗಲ್ಲ ಎಂದು ಘೋಷಿಸಿದ್ದಾರೆ. ಏಕಾಏಕಿ ಯುರೋಪ್‌ಗೆ ಹೊರಟಿದ್ದೇಕೆ ಪ್ರಭಾಸ್? ಎರಡು ತಿಂಗಳು ಏನು ಮಾಡಲಿದ್ದಾರೆ ? ಅದರ ಪಿನ್ ಟು ಪಿನ್ ಡಿಟೇಲ್ಸ್ ಇಲ್ಲಿದೆ.

    ಸಲಾರ್. ಇದೊಂದು ಗೆಲುವು ಬೇಕಾಗಿತ್ತು. ಒಂದಲ್ಲ ಎರಡಲ್ಲ, ಭರ್ತಿ ಮೂರು ಮೂರು ಸಿನಿಮಾ ಆಕಾಶ ನೋಡಿದ್ದವು. ಅಂದರೆ ಹೆಚ್ಚು ಕಮ್ಮಿ ಐದು ವರ್ಷ ಪ್ರಭಾಸ್‌ಗೆ ಗೆಲುವು ದಕ್ಕಿರಲಿಲ್ಲ. ಗೆಲುವನ್ನು ಪಕ್ಕಕ್ಕಿಡಿ. ಈ ಸಿನಿಮಾಗಳಿಂದ ಅವರು ಅತಿ ಹೆಚ್ಚು ಟೀಕೆ ಎದುರಿಸಬೇಕಾಯಿತು. ಹೀಗಾಗಿ ಪ್ರಶಾಂತ್ ನೀಲ್ ಮೇಲೆ ಭರವಸೆ ಇಟ್ಟಿದ್ದರು. ಕೊನೆಗೂ ನೀಲ್ ಕೈ ಬಿಡಲಿಲ್ಲ. ಮಿಶ್ರ ಪ್ರತಿಕ್ರಿಯೆ ನಡುವೆಯೂ ನೀಲ್ ಮ್ಯಾಜಿಕ್ ಕೆಲಸ ಮಾಡಿತ್ತು. ಬರೋಬ್ಬರಿ ಏಳು ನೂರು ಕೋಟಿಯನ್ನು ಗಳಿಸಿತು. ಹೊಂಬಾಳೆ ಸಂಸ್ಥೆ ಮೀಸೆ ತಿರುವಿತು. ಪ್ರಭಾಸ್ ಮೈ ಕೊಡವಿ ಎದ್ದು ನಿಂತರು. ಇದೇ ಖುಷಿಯಲ್ಲಿ ಯುರೋಪ್‌ಗೆ ಎರಡು ತಿಂಗಳು ಹಾರಲಿದ್ದಾರೆ. ಪಿಕ್‌ನಿಕ್ ಅಲ್ಲಪ್ಪಾ, ಚಿಕಿತ್ಸೆ ಮಾಡಿಸಿಕೊಂಡು ಬರಲು.

    ಸಿನಿಮಾ ಮಂದಿಗೆ ಇದು ಹೊಸದಲ್ಲ. ಶೂಟಿಂಗ್ ಸಮಯದಲ್ಲಿ ಯಾವ್ಯಾವುದೋ ಕಾರಣಕ್ಕೆ ಏಟು ಬಿದ್ದಿರುತ್ತವೆ. ಅದನ್ನು ಆ ಕ್ಷಣಕ್ಕೆ ಸರಿ ಮಾಡಿಕೊಂಡು ಮತ್ತೆ ಕ್ಯಾಮೆರಾ ಮುಂದೆ ನಿಂತಿರುತ್ತಾರೆ. ಆದರೆ ಅದು ಸಾಕಾಗಲ್ಲ. ಅದಕ್ಕೆ ವಿದೇಶದಲ್ಲಿ ಶಸ್ತ್ರ ಚಿಕಿತ್ಸೆ (Surgery) ನಡೆಯಬೇಕು. ಅದಕ್ಕಾಗಿಯೇ ಪ್ರಭಾಸ್ ಎರಡು ತಿಂಗಳು ವಿಶ್ರಾಂತಿ ತೆಗೆದುಕೊಂಡು, ಮೈ ಹಗುರ ಹಾಗೂ ಗಟ್ಟಿ ಮಾಡಿಕೊಂಡು ಬರಲು ವಿಮಾನ ಏರಲಿದ್ದಾರೆ. ಇದೇನು ತೀರಾ ಗಂಭೀರ ಆಪರೇಶನ್ ಅಲ್ಲ. ಕೆಲವು ದಿನ ರೆಸ್ಟ್ ಮಾಡಿ, ಮತ್ತೆ ಕಲ್ಕಿ ಹಾಗೂ ರಾಜಾಸಾಬ್ ಶೂಟಿಂಗ್‌ಗೆ ಎಂಟ್ರಿ ಕೊಡಲಿದ್ದಾರೆ.

    ಎರಡು ತಿಂಗಳಲ್ಲಿ ಮತ್ತೆ ಕುದುರೆಯಂತೆ ಎದ್ದು ಬರುವ ಪ್ರಭಾಸ್ ಗಾಗಿ ಅವರ ಅಭಿಮಾನಿಗಳು ಕಾಯುತ್ತಾರೆ. ಕಾಯುವುದರಲ್ಲಿ ಸುಖವಿದೆ ಎನ್ನುವುದು ಅವರ ಅಭಿಮಾನಿಗಳು ಅರಿತುಕೊಂಡಿದ್ದಾರೆ.

  • ‘ಸಲಾರ್’ ಸಕ್ಸಸ್ ಬಳಿಕ ಏಕಾಎಕಿ ಯುರೋಪ್‌ಗೆ ಹೊರಟಿದ್ದೇಕೆ ಪ್ರಭಾಸ್?

    ‘ಸಲಾರ್’ ಸಕ್ಸಸ್ ಬಳಿಕ ಏಕಾಎಕಿ ಯುರೋಪ್‌ಗೆ ಹೊರಟಿದ್ದೇಕೆ ಪ್ರಭಾಸ್?

    ಪ್ರಭಾಸ್ (Prabhas) ಆಕಾಶದಲ್ಲಿ ತೇಲಾಡುತ್ತಿದ್ದಾರೆ. ಅದಕ್ಕೆ ಕಾರಣ ‘ಸಲಾರ್’ ಚಿತ್ರದ ಗೆಲುವು. ಭರ್ತಿ 700 ಕೋಟಿಯನ್ನು ಗಳಿಸಿ ಮತ್ತೆ ಡಾರ್ಲಿಂಗ್ ಹೀರೋಗೆ ಆನೆ ಬಲ ನೀಡಿದೆ. ಮೂರು ಸೋಲಿನಿಂದ ಒದ್ದಾಡುತ್ತಿದ್ದ ಡಾರ್ಲಿಂಗ್ ಅದೇ ಖುಷಿಯಲ್ಲಿ ವಿದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಇನ್ನು ಎರಡು ತಿಂಗಳು ಯಾರಿಗೂ ಸಿಗಲ್ಲ ಎಂದು ಘೋಷಿಸಿದ್ದಾರೆ. ಏಕಾಎಕಿ ಯುರೋಪ್‌ಗೆ ಹೊರಟಿದ್ದೇಕೆ ಪ್ರಭಾಸ್? 2 ತಿಂಗಳು ಏನು ಮಾಡಲಿದ್ದಾರೆ?

    ‘ಸಲಾರ್’ (Salaar) ಇದೊಂದು ಗೆಲುವು ಬೇಕಾಗಿತ್ತು. ಒಂದಲ್ಲ ಎರಡಲ್ಲ. ಭರ್ತಿ ನಾಲ್ಕೈದು ಸಿನಿಮಾ ಮಕಾಡೆ ಮಲಗಿದೆ. ಅಂದರೆ ಹೆಚ್ಚು ಕಮ್ಮಿ ಐದು ವರ್ಷ ಪ್ರಭಾಸ್‌ಗೆ ಗೆಲುವು ದಕ್ಕಿರಲಿಲ್ಲ. ಗೆಲುವನ್ನು ಪಕ್ಕಕ್ಕಿಡಿ. ಈ ಸಿನಿಮಾಗಳಿಂದ ಅವರು ಅತಿ ಹೆಚ್ಚು ಟೀಕೆ ಎದುರಿಸಬೇಕಾಯಿತು. ಹೀಗಾಗಿ ಪ್ರಶಾಂತ್ ನೀಲ್ (Prashanth Neel) ಮೇಲೆ ಭರವಸೆ ಇಟ್ಟಿದ್ದರು. ಕೊನೆಗೂ ನೀಲ್ ಕೈ ಬಿಡಲಿಲ್ಲ. ಮಿಶ್ರ ಪ್ರತಿಕ್ರಿಯೆ ನಡುವೆಯೂ ನೀಲ್ ಮ್ಯಾಜಿಕ್ ಕೆಲಸ ಮಾಡಿತ್ತು. ಬರೋಬ್ಬರಿ 700 ಕೋಟಿಯನ್ನು ಗಳಿಸಿತು. ಹೊಂಬಾಳೆ ಸಂಸ್ಥೆ ಮೀಸೆ ತಿರುವಿತು. ಪ್ರಭಾಸ್ ಮೈ ಕೊಡವಿ ಎದ್ದು ನಿಂತರು. ಇದೇ ಖುಷಿಯಲ್ಲಿ ಯುರೋಪ್‌ಗೆ ಹಾರಲಿದ್ದಾರೆ. ಚಿಕಿತ್ಸೆಗಾಗಿ ವಿದೇಶಕ್ಕೆ ಹಾರಿದ್ದಾರೆ. ಇದನ್ನೂ ಓದಿ:ಬಾಲಿವುಡ್ ಸಿನಿಮಾ ಬಗ್ಗೆ ಅಪ್‌ಡೇಟ್ ಹಂಚಿಕೊಂಡ ಸಮಂತಾ

    ಚಿಕಿತ್ಸೆ ಸಿನಿಮಾ ಮಂದಿಗೆ ಇದು ಹೊಸದಲ್ಲ. ಶೂಟಿಂಗ್ ಸಮಯದಲ್ಲಿ ಯಾವ್ಯಾವುದೋ ಕಾರಣಕ್ಕೆ ಏಟು ಬಿದ್ದಿರುತ್ತವೆ. ಅದನ್ನು ಆ ಕ್ಷಣಕ್ಕೆ ಸರಿ ಮಾಡಿಕೊಂಡು ಮತ್ತೆ ಕ್ಯಾಮೆರಾ ಮುಂದೆ ನಿಂತಿರುತ್ತಾರೆ. ಆದರೆ ಅದು ಸಾಕಾಗಲ್ಲ. ಅದಕ್ಕೆ ವಿದೇಶದಲ್ಲಿ ಶಸ್ತ್ರ ಚಿಕಿತ್ಸೆ ನಡೆಯಬೇಕು. ಅದಕ್ಕಾಗಿಯೇ ಪ್ರಭಾಸ್ 2 ತಿಂಗಳು ವಿಶ್ರಾಂತಿ ತೆಗೆದುಕೊಂಡು ಬರಲು ವಿಮಾನ ಏರಲಿದ್ದಾರೆ. ಇದೇನು ತೀರಾ ಗಂಭೀರ ಆಪರೇಷನ್ ಅಲ್ಲ. ಕೆಲವು ದಿನ ರೆಸ್ಟ್ ಮಾಡಿ. ಮತ್ತೆ ‘ಕಲ್ಕಿ’- ‘ರಾಜಾಸಾಬ್’ ಶೂಟಿಂಗ್‌ಗೆ ಎಂಟ್ರಿ ಕೊಡಲಿದ್ದಾರೆ.

    ‘ಸಲಾರ್’ ಬಳಿಕ ಬರಲಿರುವ ‘ಕಲ್ಕಿ’ ಮತ್ತು ‘ರಾಜಾಸಾಬ್’ ಅದೆಷ್ಟರ ಮಟ್ಟಿಗೆ ಕೈ ಹಿಡಿಯುತ್ತೆ ಎಂದು ಕಾದುನೋಡಬೇಕಿದೆ.

  • ಜನವರಿ 20 ರಿಂದ ಒಟಿಟಿಯಲ್ಲಿ ಸಲಾರ್

    ಜನವರಿ 20 ರಿಂದ ಒಟಿಟಿಯಲ್ಲಿ ಸಲಾರ್

    ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಪ್ರಭಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ನೆಟ್ ಫ್ಲಿಕ್ಸ್ (OTT) ಸಲಾರ್ ಸಿನಿಮಾವನ್ನು ಖರೀದಿಸಿದ್ದು, ನಾಳೆಯಿಂದಲೇ ಒಟಿಟಿಯಲ್ಲಿ ಸಲಾರ್ ನೋಡಬಹುದಾಗಿದೆ. ಈ ಕುರಿತಂತೆ ಸಂಸ್ಥೆಯೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದೆ.

    ಈ ಸಿಹಿ ಸುದ್ದಿಯ ಜೊತೆ ಜೊತೆಗೆ ಸಲಾರ್ ಸಿನಿಮಾ ಸ್ಪ್ಯಾನಿಷ್ (Spanish) ಭಾಷೆಯಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಸ್ಪ್ಯಾನಿಷ್ ಭಾಷೆಗೆ ಚಿತ್ರವನ್ನು ಡಬ್ ಮಾಡಲಾಗುತ್ತಿದ್ದು, ಮಾರ್ಚ್ 7 ರಂದು ಈ ಚಿತ್ರವನ್ನು ರಿಲೀಸ್ ಮಾಡುವುದಾಗಿ ಹೊಂಬಾಳೆ ಸಂಸ್ಥೆ ತಿಳಿಸಿದೆ.

    ಸಲಾರ್ ಸಿನಿಮಾ ಬಾಕ್ಸಾಫೀಸಿನಲ್ಲಿ ಈವರೆಗೂ 627 ಕೋಟಿ ರೂಪಾಯಿಗೂ ಅಧಿಕ ಗಳಿಸಿ, ಇನ್ನೂ ಮುನ್ನುಗ್ಗುತ್ತಿದೆ. ಈ ನಡುವೆ ಸಲಾರ್ 2 ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಗಳು ಹೊರ ಬಿದ್ದಿವೆ. ಆಂಗ್ಲ ವೆಬ್ ಸೈಟ್ ಜೊತೆ ನಿರ್ಮಾಪಕ ವಿಜಯ ಕಿರಗಂದೂರು (Vijaya Kirgandur) ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದು, ಅದರ ಪ್ರಕಾರ ಸಲಾರ್ 2 ಸಿನಿಮಾ 2025ರಲ್ಲಿ ಬಿಡುಗಡೆ ಆಗಿದೆ. ಇನ್ನೂ ಅಚ್ಚರಿಯ ಸಂಗತಿ ಅಂದರೆ, ಈಗಾಗಲೇ ಸಲಾರ್ 2 ಸಿನಿಮಾದ ಸ್ಕ್ರಿಪ್ಟ್ ರೆಡಿಯಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಸಲಾರ್ 2 ಸಿನಿಮಾದ ಕುರಿತಂತೆ ನಿರ್ದೇಶಕ ಪ್ರಶಾಂತ್ ನೀಲ್ ಕೆಲಸ ಕೂಡ ಶುರು ಮಾಡಲಿದ್ದಾರಂತೆ. ಸಲಾರ್ ಸಿನಿಮಾಗಿಂತಲೂ ಸಲಾರ್ 2 ಇನ್ನೂ ಅದ್ಧೂರಿಯಾಗಿ ಇರಲಿದೆ ಎಂದು ವಿಜಯ್ ತಿಳಿಸಿದ್ದಾರೆ.

    ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಾಣದ ಸಲಾರ್ (Salaar) ಸಿನಿಮಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಈ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವಿಶ್ವದಾದ್ಯಂತ  ಕೋಟಿ ಕೋಟಿ ಹಣವನ್ನು ಗಳಿಸಿದೆ. ಬಾಕ್ಸ್ ಆಫೀಸಿಗೆ ಕೋಟಿ ಕೋಟಿ ಹಣ ಹರಿದು ಬರುತ್ತಿದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ, ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೊಸ ದಾಖಲೆಯನ್ನು ಮಾಡಿದೆ. ಕನ್ನಡದ ನಿರ್ಮಾಣದ ಸಂಸ್ಥೆಯೊಂದು ರಾಷ್ಟ್ರೀಯ ಮಟ್ಟದಲ್ಲಿ ಇಂಥದ್ದೊಂದು ದಾಖಲೆ ಮಾಡಿರುವುದು ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

    ಕನ್ನಡದಲ್ಲಿ ‘ಮಾಸ್ಟರ್ ಪೀಸ್‍’, ‘ರಾಜಕುಮಾರ’, ‘ಯುವರತ್ನ’, ‘ಕೆಜಿಎಫ್‍ 1 ಮತ್ತು 2’, ‘ಕಾಂತಾರ’, ‘ರಾಘವೇಂದ್ರ ಸ್ಟೋರ್ಸ್’ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್, ತನ್ನ ನಿರ್ಮಾಣದ ಚಿತ್ರಗಳ ಮೂಲಕ ಜಗತ್ತಿನ ಗಮನ ಸೆಳೆದಿರುವುದಷ್ಟೇ ಅಲ್ಲ, ಕನ್ನಡ ಚಿತ್ರಗಳನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಮೂಲಕ ಎಲ್ಲರ ಗಮನ ಸೆಳೆದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಸಲಾರ್’ ಪ್ಯಾನ್‍ ಇಂಡಿಯಾ ಚಿತ್ರವಾದರೂ, ಈ ಚಿತ್ರದ ಹಿಂದಿರುವ ತಾಂತ್ರಿಕ ತಂಡದವರೆಲ್ಲರೂ ಕನ್ನಡದವರಾಗಿದ್ದಾರೆ. ನಿರ್ಮಾಪಕರಾದ ವಿಜಯ್‍ ಕಿರಗಂದೂರು, ನಿರ್ದೇಶಕ ಪ್ರಶಾಂತ್‍ ನೀಲ್‍ (Prashant Neel), ಛಾಯಾಗ್ರಾಹಕ ಭುವನ್‍ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಚಿತ್ರದಲ್ಲಿ ಕೆಲಸ ಮಾಡಿರುವ ಹಲವು ತಂತ್ರಜ್ಞರು ಹಾಗೂ ಕಲಾವಿದರು  ಈ ನೆಲದ ಮಣ್ಣಿನವರಾಗಿದ್ದು, ಇದು ಕನ್ನಡದ ಪ್ರತಿಭಾ ಸಂಪತ್ತಿನ ಒಂದು ಉದಾಹರಣೆಯಷ್ಟೇ.

  • ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಒಟಿಟಿಯಲ್ಲಿ ಸಲಾರ್

    ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಒಟಿಟಿಯಲ್ಲಿ ಸಲಾರ್

    ಲವಾರು ಕಡೆ ಸಲಾರ್ ಸಿನಿಮಾ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಪ್ರಭಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ನೆಟ್ ಫ್ಲಿಕ್ಸ್ (OTT) ಸಲಾರ್ ಸಿನಿಮಾವನ್ನು ಖರೀದಿಸಿದ್ದು ಫೆಬ್ರವರಿ ಮೊದಲ ವಾರದಿಂದ ಸ್ಟ್ರೀಮಿಂಗ್ ಆರಂಭಿಸಲಿದೆ ಎಂದು ಹೇಳಲಾಗುತ್ತಿದೆ. ಅಧಿಕೃತವಾಗಿ ಸಂಸ್ಥೆ ಹೇಳಿಕೊಳ್ಳದೇ ಇದ್ದರೂ, ಫೆಬ್ರವರಿ ಗ್ಯಾರಂಟಿ ಎನ್ನುವ ಮಾಹಿತಿ ಹೊರ ಬಿದ್ದಿದೆ. ಇದರ ಜೊತೆ ಜೊತೆಗೆ ಸಲಾರ್ ಸಿನಿಮಾ ಸ್ಪ್ಯಾನಿಷ್ (Spanish) ಭಾಷೆಯಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಸ್ಪ್ಯಾನಿಷ್ ಭಾಷೆಗೆ ಚಿತ್ರವನ್ನು ಡಬ್ ಮಾಡಲಾಗುತ್ತಿದ್ದು, ಮಾರ್ಚ್ 7 ರಂದು ಈ ಚಿತ್ರವನ್ನು ರಿಲೀಸ್ ಮಾಡುವುದಾಗಿ ಸಂಸ್ಥೆ ತಿಳಿಸಿದೆ.

    ಸಲಾರ್ ಸಿನಿಮಾ ಬಾಕ್ಸಾಫೀಸಿನಲ್ಲಿ ಈವರೆಗೂ 627 ಕೋಟಿ ರೂಪಾಯಿಗೂ ಅಧಿಕ ಗಳಿಸಿ, ಇನ್ನೂ ಮುನ್ನುಗ್ಗುತ್ತಿದೆ. ಈ ನಡುವೆ ಸಲಾರ್ 2 ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಗಳು ಹೊರ ಬಿದ್ದಿವೆ. ಆಂಗ್ಲ ವೆಬ್ ಸೈಟ್ ಜೊತೆ ನಿರ್ಮಾಪಕ ವಿಜಯ ಕಿರಗಂದೂರು (Vijaya Kirgandur) ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದು, ಅದರ ಪ್ರಕಾರ ಸಲಾರ್ 2 ಸಿನಿಮಾ 2025ರಲ್ಲಿ ಬಿಡುಗಡೆ ಆಗಿದೆ. ಇನ್ನೂ ಅಚ್ಚರಿಯ ಸಂಗತಿ ಅಂದರೆ, ಈಗಾಗಲೇ ಸಲಾರ್ 2 ಸಿನಿಮಾದ ಸ್ಕ್ರಿಪ್ಟ್ ರೆಡಿಯಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಸಲಾರ್ 2 ಸಿನಿಮಾದ ಕುರಿತಂತೆ ನಿರ್ದೇಶಕ ಪ್ರಶಾಂತ್ ನೀಲ್ ಕೆಲಸ ಕೂಡ ಶುರು ಮಾಡಲಿದ್ದಾರಂತೆ. ಸಲಾರ್ ಸಿನಿಮಾಗಿಂತಲೂ ಸಲಾರ್ 2 ಇನ್ನೂ ಅದ್ಧೂರಿಯಾಗಿ ಇರಲಿದೆ ಎಂದು ವಿಜಯ್ ತಿಳಿಸಿದ್ದಾರೆ.

    ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಾಣದ ಸಲಾರ್ (Salaar) ಸಿನಿಮಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಈ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವಿಶ್ವದಾದ್ಯಂತ  ಕೋಟಿ ಕೋಟಿ ಹಣವನ್ನು ಗಳಿಸಿದೆ. ಬಾಕ್ಸ್ ಆಫೀಸಿಗೆ ಕೋಟಿ ಕೋಟಿ ಹಣ ಹರಿದು ಬರುತ್ತಿದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ, ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೊಸ ದಾಖಲೆಯನ್ನು ಮಾಡಿದೆ. ಕನ್ನಡದ ನಿರ್ಮಾಣದ ಸಂಸ್ಥೆಯೊಂದು ರಾಷ್ಟ್ರೀಯ ಮಟ್ಟದಲ್ಲಿ ಇಂಥದ್ದೊಂದು ದಾಖಲೆ ಮಾಡಿರುವುದು ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

    ಕನ್ನಡದಲ್ಲಿ ‘ಮಾಸ್ಟರ್ ಪೀಸ್‍’, ‘ರಾಜಕುಮಾರ’, ‘ಯುವರತ್ನ’, ‘ಕೆಜಿಎಫ್‍ 1 ಮತ್ತು 2’, ‘ಕಾಂತಾರ’, ‘ರಾಘವೇಂದ್ರ ಸ್ಟೋರ್ಸ್’ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್, ತನ್ನ ನಿರ್ಮಾಣದ ಚಿತ್ರಗಳ ಮೂಲಕ ಜಗತ್ತಿನ ಗಮನ ಸೆಳೆದಿರುವುದಷ್ಟೇ ಅಲ್ಲ, ಕನ್ನಡ ಚಿತ್ರಗಳನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಮೂಲಕ ಎಲ್ಲರ ಗಮನ ಸೆಳೆದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಸಲಾರ್’ ಪ್ಯಾನ್‍ ಇಂಡಿಯಾ ಚಿತ್ರವಾದರೂ, ಈ ಚಿತ್ರದ ಹಿಂದಿರುವ ತಾಂತ್ರಿಕ ತಂಡದವರೆಲ್ಲರೂ ಕನ್ನಡದವರಾಗಿದ್ದಾರೆ. ನಿರ್ಮಾಪಕರಾದ ವಿಜಯ್‍ ಕಿರಗಂದೂರು, ನಿರ್ದೇಶಕ ಪ್ರಶಾಂತ್‍ ನೀಲ್‍ (Prashant Neel), ಛಾಯಾಗ್ರಾಹಕ ಭುವನ್‍ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಚಿತ್ರದಲ್ಲಿ ಕೆಲಸ ಮಾಡಿರುವ ಹಲವು ತಂತ್ರಜ್ಞರು ಹಾಗೂ ಕಲಾವಿದರು  ಈ ನೆಲದ ಮಣ್ಣಿನವರಾಗಿದ್ದು, ಇದು ಕನ್ನಡದ ಪ್ರತಿಭಾ ಸಂಪತ್ತಿನ ಒಂದು ಉದಾಹರಣೆಯಷ್ಟೇ.

  • ಗೆಲ್ಲಲು ತಂತ್ರ ಬದಲಿಸಿದ ಪ್ರಭಾಸ್- ಸಂಖ್ಯಾಶಾಸ್ತ್ರ ಮೊರೆ ಹೋದ ನಟ

    ಗೆಲ್ಲಲು ತಂತ್ರ ಬದಲಿಸಿದ ಪ್ರಭಾಸ್- ಸಂಖ್ಯಾಶಾಸ್ತ್ರ ಮೊರೆ ಹೋದ ನಟ

    ಡಾರ್ಲಿಂಗ್ ಪ್ರಭಾಸ್ (Prabhas) ತಮ್ಮ ಹೆಸರಿಗೆ ಹೊಸ ಅಕ್ಷರ ಸೇರಿಸಿಕೊಂಡ್ರ? ಸಿನಿಜರ್ನಿ ಮತ್ತಷ್ಟು ಸೂಪರ್ ಆಗ್ಲಿ ಅಂತ ಸಂಖ್ಯಾಶಾಸ್ತ್ರ ಫಾಲೋ ಮಾಡ್ತಿದ್ದಾರ? ಪ್ರಭಾಸ್ ಹೆಸರಿನಲ್ಲಿ ಆಗಿರುವ ಬದಲಾವಣೆ ಏನು? ಈ ಬದಲಾವಣೆ ವರ್ಕೌಟ್ ಆಗುತ್ತಾ? ಇಲ್ಲಿದೆ ಮಾಹಿತಿ.

    ‘ಸಲಾರ್’ (Salaar) ಸಂಭ್ರಮದಲ್ಲಿರುವ ಡಾರ್ಲಿಂಗ್ ಪ್ರಭಾಸ್ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ. ಸಂಭಾವನೆ ಕೂಡ ಜಾಸ್ತಿ ಮಾಡಿಕೊಂಡಿದ್ದಾರೆ ಅನ್ನೋ ಟಾಕ್ ಕೂಡ ಶುರುವಾಗಿದೆ. ಸಂಪಾದನೆ ಬಗ್ಗೆ ಆಮೇಲೆ ಮಾತಾಡೋಣ ಸದ್ಯಕ್ಕೆ ಸೌಂಡ್ ಮಾಡ್ತಿರೋ ವಿಚಾರ ‘ರಾಜಾ ಸಾಬ್’ (Raja Saab) ಸಿನಿಮಾದ ಟೈಟಲ್ ಪೋಸ್ಟರ್‌ನಲ್ಲಿ ಪ್ರಭಾಸ್ ಹೆಸರು ಜೊತೆಗೆ ಮತ್ತೊಂದು ಎಸ್ ಎನ್ನುವ ಅಕ್ಷರ ಸೇರಿಕೊಂಡಿದೆ. ಈ ಎಸ್ ಅಕ್ಷರ ಬಹಳಷ್ಟು ಪ್ರಶ್ನೆಗಳನ್ನ ಹುಟ್ಟು ಹಾಕಿದೆ. ಡಾರ್ಲಿಂಗ್ ಸಂಖ್ಯಾಶಾಸ್ತ್ರ ಫಾಲೋ ಮಾಡ್ತಿದ್ದಾರೆ ಎನ್ನುವ ಡೌಟ್ ಶುರುವಾಗಿದೆ. ಇದನ್ನೂ ಓದಿ:ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ನಟಿ ಕಾವ್ಯಾ ಗೌಡ

    View this post on Instagram

    A post shared by Prabhas (@actorprabhas)

    ಮಾರುತಿ ನಿರ್ದೇಶನದ ‘ರಾಜಾಸಾಬ್’ ಫಸ್ಟ್ ಲುಕ್ ಪೋಸ್ಟರ್ ಜೊತೆಗೆ ಟೀಸರ್ ಕೂಡ ರಿಲೀಸ್ ಆಗಿದೆ. ಹಬ್ಬದ ಸಂಭ್ರಮದಲ್ಲಿ ಫ್ಯಾನ್ಸ್‌ಗೆ ಮುಂದಿನ ಸಿನಿಮಾ ಬಗ್ಗೆ ಪ್ರಭಾಸ್ ಅಪ್‌ಡೇಟ್ ಕೊಟ್ಟಿದ್ದಾರೆ.

    ಇದು ನಿಜವಾಗಲೂ ಪ್ರಭಾಸ್ ತಮ್ಮ ಹೆಸರಿನಲ್ಲಿ ಮಾಡಿಕೊಂಡಿರುವ ಬದಲಾವಣೆಯಾ? ಅಥವಾ ಡಿಸೈನರ್ ಮಾಡಿರುವ ಎಡವಟ್ಟಾ ಕ್ಲ್ಯಾರಿಟಿ ಸದ್ಯಕಿಲ್ಲ. ಮುಂದೆ ಈ ಎಸ್ ಬಿಟ್ಟು ಹೋಗುತ್ತಾ? ಅಥವಾ ಹಾಗೇ ಮುಂದುವರಿಯುತ್ತಾ ಗೊತ್ತಿಲ್ಲ. ಡಾರ್ಲಿಂಗ್ ಫ್ಯಾನ್ಸ್ ಮಾತ್ರ ನಮ್ಮ ಬಾಸ್‌ಗೆ ಲಕ್ ಬದಲಾಯ್ತು ಅಂತ ಖುಷಿಯಲ್ಲಿದ್ದಾರೆ.

  • ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ‘ಸಲಾರ್’ ಟೀಮ್

    ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ‘ಸಲಾರ್’ ಟೀಮ್

    ಪ್ರಶಾಂತ್ ನೀಲ್-ಪ್ರಭಾಸ್ (Prabhas) ಕಾಂಬಿನೇಷನ್ ಸಿನಿಮಾ ‘ಸಲಾರ್’ (Salaar) ಸಕ್ಸಸ್ ಬೆನ್ನಲ್ಲೇ ಪ್ರಭಾಸ್ & ಟೀಮ್ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

    ಪ್ರಭಾಸ್, ಶ್ರುತಿ ಹಾಸನ್ (Shruti Haasan) ನಟನೆಯ ಸಲಾರ್ ಸಿನಿಮಾ ಕಳೆದ ಡಿಸೆಂಬರ್ 22ರಂದು ರಿಲೀಸ್ ಆಗಿತ್ತು. ಸಾಲು ಸಾಲು ಸೋಲುಗಳನ್ನೇ ಕಂಡ ಪ್ರಭಾಸ್‌ಗೆ ‘ಸಲಾರ್’ (Salaar) ಚಿತ್ರದ ಮೂಲಕ ಸಕ್ಸಸ್ ರುಚಿ ಸಿಕ್ಕಂತೆ ಆಗಿದೆ. ಇದೇ ಸಂಭ್ರಮದಲ್ಲಿ ಚಿತ್ರತಂಡ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದೆ.

    ಪ್ರಭಾಸ್, ಪ್ರಶಾಂತ್ ನೀಲ್, ಹೊಂಬಾಳೆ ಸಂಸ್ಥೆಯ ರೂವಾರಿ ವಿಜಯ್ ಕಿರಂಗದೂರು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ತುಕಾಲಿ ಕಳಪೆ, ಜೈಲಿಗಟ್ಟಿದ ಮನೆಮಂದಿ

    ಅಂದಹಾಗೆ ‘ಸಲಾರ್’ ಸಿನಿಮಾ ಒಟ್ಟು 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡುತ್ತಿದೆ.

  • ಮಾರ್ಚ್ 7ಕ್ಕೆ ಸ್ಪ್ಯಾನಿಷ್ ಭಾಷೆಯಲ್ಲಿ ‘ಸಲಾರ್’ ರಿಲೀಸ್

    ಮಾರ್ಚ್ 7ಕ್ಕೆ ಸ್ಪ್ಯಾನಿಷ್ ಭಾಷೆಯಲ್ಲಿ ‘ಸಲಾರ್’ ರಿಲೀಸ್

    ಗಾಗಲೇ ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದಿರುವ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ಸ್ಪ್ಯಾನಿಷ್ (Spanish0 ಭಾಷೆಯಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಸ್ಪ್ಯಾನಿಷ್ ಭಾಷೆಗೆ ಚಿತ್ರವನ್ನು ಡಬ್ ಮಾಡಲಾಗುತ್ತಿದ್ದು, ಮಾರ್ಚ್ 7 ರಂದು ಈ ಚಿತ್ರವನ್ನು ರಿಲೀಸ್ ಮಾಡುವುದಾಗಿ ಸಂಸ್ಥೆ ತಿಳಿಸಿದೆ.

    ಸಲಾರ್ ಸಿನಿಮಾ ಬಾಕ್ಸಾಫೀಸಿನಲ್ಲಿ ಈವರೆಗೂ 627 ಕೋಟಿ ರೂಪಾಯಿ ಅಧಿಕ ಗಳಿಸಿ, ಇನ್ನೂ ಮುನ್ನುಗ್ಗುತ್ತಿದೆ. ಈ ನಡುವೆ ಸಲಾರ್ 2 ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಗಳು ಹೊರ ಬಿದ್ದಿವೆ. ಆಂಗ್ಲ ವೆಬ್ ಸೈಟ್ ಜೊತೆ ನಿರ್ಮಾಪಕ ವಿಜಯ ಕಿರಗಂದೂರು (Vijaya Kirgandur) ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದು, ಅದರ ಪ್ರಕಾರ ಸಲಾರ್ 2 ಸಿನಿಮಾ 2025ರಲ್ಲಿ ಬಿಡುಗಡೆ ಆಗಿದೆ.

    ಇನ್ನೂ ಅಚ್ಚರಿಯ ಸಂಗತಿ ಅಂದರೆ, ಈಗಾಗಲೇ ಸಲಾರ್ 2 ಸಿನಿಮಾದ ಸ್ಕ್ರಿಪ್ಟ್ ರೆಡಿಯಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಸಲಾರ್ 2 ಸಿನಿಮಾದ ಕುರಿತಂತೆ ನಿರ್ದೇಶಕ ಪ್ರಶಾಂತ್ ನೀಲ್ ಕೆಲಸ ಕೂಡ ಶುರು ಮಾಡಲಿದ್ದಾರಂತೆ. ಸಲಾರ್ ಸಿನಿಮಾಗಿಂತಲೂ ಸಲಾರ್ 2 ಇನ್ನೂ ಅದ್ಧೂರಿಯಾಗಿ ಇರಲಿದೆ ಎಂದು ವಿಜಯ್ ತಿಳಿಸಿದ್ದಾರೆ.

    ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಾಣದ ಸಲಾರ್ (Salaar) ಸಿನಿಮಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದೆ. ಈ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವಿಶ್ವದಾದ್ಯಂತ  ಕೋಟಿ ಕೋಟಿ ಹಣವನ್ನು ಗಳಿಸಿದೆ. ಬಾಕ್ಸ್ ಆಫೀಸಿಗೆ ಕೋಟಿ ಕೋಟಿ ಹಣ ಹರಿದು ಬರುತ್ತಿದೆ. ಈ ಮೂಲಕ ಭಾರತೀಯ ಚಿತ್ರರಂಗದಲ್ಲಿ, ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೊಸ ದಾಖಲೆಯನ್ನು ಮಾಡಿದೆ. ಕನ್ನಡದ ನಿರ್ಮಾಣದ ಸಂಸ್ಥೆಯೊಂದು ರಾಷ್ಟ್ರೀಯ ಮಟ್ಟದಲ್ಲಿ ಇಂಥದ್ದೊಂದು ದಾಖಲೆ ಮಾಡಿರುವುದು ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ.

    ಕನ್ನಡದಲ್ಲಿ ‘ಮಾಸ್ಟರ್ ಪೀಸ್‍’, ‘ರಾಜಕುಮಾರ’, ‘ಯುವರತ್ನ’, ‘ಕೆಜಿಎಫ್‍ 1 ಮತ್ತು 2’, ‘ಕಾಂತಾರ’, ‘ರಾಘವೇಂದ್ರ ಸ್ಟೋರ್ಸ್’ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲಂಸ್, ತನ್ನ ನಿರ್ಮಾಣದ ಚಿತ್ರಗಳ ಮೂಲಕ ಜಗತ್ತಿನ ಗಮನ ಸೆಳೆದಿರುವುದಷ್ಟೇ ಅಲ್ಲ, ಕನ್ನಡ ಚಿತ್ರಗಳನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಮೂಲಕ ಎಲ್ಲರ ಗಮನ ಸೆಳೆದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ.

    ‘ಸಲಾರ್’ ಪ್ಯಾನ್‍ ಇಂಡಿಯಾ ಚಿತ್ರವಾದರೂ, ಈ ಚಿತ್ರದ ಹಿಂದಿರುವ ತಾಂತ್ರಿಕ ತಂಡದವರೆಲ್ಲರೂ ಕನ್ನಡದವರಾಗಿದ್ದಾರೆ. ನಿರ್ಮಾಪಕರಾದ ವಿಜಯ್‍ ಕಿರಗಂದೂರು, ನಿರ್ದೇಶಕ ಪ್ರಶಾಂತ್‍ ನೀಲ್‍ (Prashant Neel), ಛಾಯಾಗ್ರಾಹಕ ಭುವನ್‍ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಚಿತ್ರದಲ್ಲಿ ಕೆಲಸ ಮಾಡಿರುವ ಹಲವು ತಂತ್ರಜ್ಞರು ಹಾಗೂ ಕಲಾವಿದರು  ಈ ನೆಲದ ಮಣ್ಣಿನವರಾಗಿದ್ದು, ಇದು ಕನ್ನಡದ ಪ್ರತಿಭಾ ಸಂಪತ್ತಿನ ಒಂದು ಉದಾಹರಣೆಯಷ್ಟೇ.