Tag: ಪ್ರಭಾಸ್

  • ಪ್ರಭಾಸ್ ಚಿತ್ರಕ್ಕೆ ಫೌಜಿ ಟೈಟಲ್ ಫಿಕ್ಸ್

    ಪ್ರಭಾಸ್ ಚಿತ್ರಕ್ಕೆ ಫೌಜಿ ಟೈಟಲ್ ಫಿಕ್ಸ್

    ಪ್ರಭಾಸ್ (Prabhas) ನಟಿಸುತ್ತಿರುವ, ಹನು ರಾಘವಪುಡಿ ನಿರ್ದೇಶಿಸುತ್ತಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾದ ಟೈಟಲ್ ಪೋಸ್ಟರ್ ರಿಲೀಸ್ ಆಗಿದೆ. ಪ್ರಭಾಸ್-ಹನು ಜೋಡಿಯ ಚಿತ್ರಕ್ಕೆ ಫೌಜಿ ಎಂಬ ಟೈಟಲ್ ಇಡಲಾಗಿದೆ. ಫೌಜಿಯಲ್ಲಿ (Fauji) ಪ್ರಭಾಸ್ ಸೈನಿಕನಾಗಿ ನಟಿಸುತ್ತಿದ್ದಾರೆ. 1940 ರ ದಶಕದ ವಸಾಹತುಶಾಹಿ ಭಾರತದ ಹಿನ್ನೆಲೆಯ ವಿರುದ್ಧ ಹೊಂದಿಸಲಾದ ಪೋಸ್ಟರ್‌ನಲ್ಲಿ ಉರಿಯುತ್ತಿರುವ, ಹರಿದ ಬ್ರಿಟಿಷ್ ಧ್ವಜವಿದೆ. ಇದು ದಂಗೆ ಮತ್ತು ಪ್ರತಿರೋಧದ ಚಿತ್ರಣವನ್ನು ಹುಟ್ಟುಹಾಕುತ್ತದೆ. ಚದುರಿದ ಜ್ವಾಲೆಗಳು ಉದ್ವಿಗ್ನತೆಯನ್ನು ಹೆಚ್ಚಿಸುತ್ತವೆ.

    ಪೋಸ್ಟರ್‌ನಲ್ಲಿರುವ ಪದ್ಯಗಳು ಅವನು ಪದ್ಮವ್ಯೂಹವನ್ನು ಗೆದ್ದ ಪಾರ್ಥ (ಅರ್ಜುನ) ನಂತೆ, ಕೌರವರ ಪರವಾಗಿ ನಿಂತ ಕರ್ಣನಂತೆ, ಗುರುವಿಲ್ಲದ ಯೋಧ ಏಕಲವ್ಯನಂತೆ, ಸಹಜ ಶೌರ್ಯದಿಂದ ಜನಿಸಿದನೆಂದು ತಿಳಿಸುತ್ತವೆ. ಅವನು ಬ್ರಾಹ್ಮಣನ ಬುದ್ಧಿವಂತಿಕೆ ಮತ್ತು ಕ್ಷತ್ರಿಯನ ನೀತಿವಂತ ಕರ್ತವ್ಯ (ಧರ್ಮ) ಎರಡನ್ನೂ ಸಾಕಾರಗೊಳಿಸುತ್ತಾನೆ. ಒಟ್ಟಾಗಿ, ಈ ಗುಣಲಕ್ಷಣಗಳು ನಾಯಕನ ಪಾತ್ರದ ಸಾರವನ್ನು ವ್ಯಾಖ್ಯಾನಿಸುತ್ತವೆ.‌ ಇದನ್ನೂ ಓದಿ: ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಕೇಸ್ – ನಟಿ ರಿಯಾ ಚಕ್ರವರ್ತಿಗೆ CBIನಿಂದ ಕ್ಲೀನ್‌ಚಿಟ್

    ಚಿತ್ರದಲ್ಲಿ ಪ್ರಭಾಸ್‌ಗೆ ಜೋಡಿಯಾಗಿ ಇಮಾನ್ವಿ ನಟಿಸಿದ್ದಾರೆ. ಜೊತೆಗೆ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಜಯಪ್ರದಾ ಮತ್ತು ಭಾನು ಚಂದರ್ ಸೇರಿದಂತೆ ಹಲವರು ಪಾತ್ರ ವರ್ಗದಲ್ಲಿ ಇದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್‌ನಡಿ ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ಹಾಗೂ ಭೂಷಣ್ ಕುಮಾರ್ ಫೌಜಿ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ವಿಶಾಲ್ ಚಂದ್ರಶೇಖರ್ ಸಂಗೀತ ನೀಡುತ್ತಿದ್ದಾರೆ. ಸುದೀಪ್ ಚಟರ್ಜಿ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ. ಕೋಟಗಿರಿ ವೆಂಕಟೇಶ್ವರ ರಾವ್ ಅವರ ಸಂಕಲನವಿದೆ. ಈ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ ,ಮಲಯಾಳಂ ಜೊತೆಗೆ ಬೆಂಗಾಲಿ ಭಾಷೆಯಲ್ಲಿ ರಿಲೀಸ್ ಆಗಲಿದೆ.

  • ʼದಿ ರಾಜಾಸಾಬ್’ ಟ್ರೈಲರ್ ರಿಲೀಸ್ : ಪ್ರಭಾಸ್ ಅಭಿಮಾನಿಗಳಿಗೆ ಸರ್ಪ್ರೈಸ್

    ʼದಿ ರಾಜಾಸಾಬ್’ ಟ್ರೈಲರ್ ರಿಲೀಸ್ : ಪ್ರಭಾಸ್ ಅಭಿಮಾನಿಗಳಿಗೆ ಸರ್ಪ್ರೈಸ್

    ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಅವರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಹಾರರ್-ಫ್ಯಾಂಟಸಿ ಡ್ರಾಮಾ ದಿ ರಾಜಾಸಾಬ್ (The Raja Saab) ಸಿನಿಮಾ ಮೇಲೆ ಎಲ್ಲರ ಕಣ್ಣಿದೆ. ನಿರೀಕ್ಷೆಯೂ ದುಪ್ಪಟ್ಟಾಗಿದೆ. ಕಳೆದ ವರ್ಷ, ಚಿತ್ರತಂಡವು ಪ್ಯಾನ್-ಇಂಡಿಯಾ ಝಲಕ್ ಮೂಲಕ ಕುತೂಹಲ ಕೆರಳಿಸಿತ್ತು. ಅದಾದ ಮೇಲೆ ಇದೇ ಜೂನ್‌ ತಿಂಗಳಿನಲ್ಲಿ ಟೀಸರ್ ಬಿಡುಗಡೆಯಾಗಿ ಕೌತುಕಕ್ಕೆ ಒಗ್ಗರಣೆ ಹಾಕಿತ್ತು. ಆ ಟೀಸರ್‌ನಲ್ಲಿ ಹಲವು ಶೇಡ್‌ಗಳಲ್ಲಿ ಪ್ರಭಾಸ್ ಕಾಣಿಸಿಕೊಂಡು, ಅಚ್ಚರಿ ಮೂಡಿಸಿದ್ದರು. ಇದೀಗ ಇದೇ ರಾಜಾಸಾಬ್ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

    ಹೌದು, ಮಾರುತಿ ನಿರ್ದೇಶನದ ಬಹುನಿರೀಕ್ಷಿತ ‘ದಿ ರಾಜಾಸಾಬ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಇಲ್ಲೊಂದು ಟ್ವಿಸ್ಟ್ ಇದೆ. `ದಿ ರಾಜಾಸಾಬ್ʼ ಸಿನಿಮಾದ ಟ್ರೇಲರ್ ಮೊದಲಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಮೂಲಕ ಅಭಿಮಾನಿಗಳಿಗೆ ಹಬ್ಬದ ಉಡುಗೊರೆ ನೀಡಿದೆ. ಇದಾದ ಮೇಲೆ ಅಂತಿಮವಾಗಿ ಈ ಟ್ರೇಲರ್ (Trailer) ಎಲ್ಲೆಡೆ ಯಾವಾಗ, ಯಾವ ದಿನದಂದು ಬಿಡುಗಡೆ ಆಗಲಿದೆ ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಲಿದೆ.  ಇದನ್ನೂ ಓದಿ: ನೋವಿನ ಸಂದರ್ಭದಲ್ಲಿ ಸಂಭ್ರಮ ಬೇಡವೆಂದು ಹಿಂದೆ ಸರಿದ ರಿಷಬ್ ಶೆಟ್ಟಿ


    ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯ ಈ ಮಹೋನ್ನತ ಪ್ರಾಜೆಕ್ಟ್‌ಗೆ ಟಿ.ಜಿ. ವಿಶ್ವ ಪ್ರಸಾದ್ ಬಂಡವಾಳ ಹೂಡುತ್ತಿದ್ದಾರೆ. ಪ್ರಭಾಸ್ ನಟನೆಯ ‘ದಿ ರಾಜಾಸಾಬ್’ ಸಿನಿಮಾ ಐದು ಭಾಷೆಗಳಲ್ಲಿ ಸಿದ್ಧವಾಗಿದೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತಮನ್ ಎಸ್ ಅವರ ಸಂಗೀತ ಮತ್ತು ಮೈನವಿರೇಳಿಸುವ ದೃಶ್ಯಗಳು ಈ ಸಿನಿಮಾದ ಹೈಲೈಟ್ಸ್. ಇದನ್ನೂ ಓದಿ:  ಮಳೆಯಲ್ಲಿ ರೋಷನ್ ಜೊತೆಯಲಿ ಅನುಶ್ರೀ ಜಾಲಿ ಟ್ರಿಪ್

    ಈ ಭರಪೂರ ಮನರಂಜನೆಯ ಪ್ಯಾನ್-ಇಂಡಿಯಾ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ವರ್ಚಸ್ಸು ಸಂಪೂರ್ಣ ಬದಲಾಗಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಬಹುತಾರಾಗಣದ ಚಿತ್ರದಲ್ಲಿ ಸಂಜಯ್ ದತ್, ಜರೀನಾ ವಹಾಬ್, ಬೋಮನ್ ಇರಾನಿ, ನಿಧಿ ಅಗರವಾಲ್, ಮಾಳವಿಕಾ ಮೋಹನನ್ ಮತ್ತು ರಿದ್ಧಿ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಟಿ.ಜಿ. ವಿಶ್ವ ಪ್ರಸಾದ್ ಮತ್ತು ಕೃತಿ ಪ್ರಸಾದ್ ಅವರು ಪೀಪಲ್ ಮೀಡಿಯಾ ಫ್ಯಾಕ್ಟರಿ ಅಡಿಯಲ್ಲಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
  • ಪ್ರಭಾಸ್ ನಟನೆಯ ರಾಜಾಸಾಬ್ ಟ್ರೇಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್

    ಪ್ರಭಾಸ್ ನಟನೆಯ ರಾಜಾಸಾಬ್ ಟ್ರೇಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್

    ಟ ಪ್ರಭಾಸ್ (Prabhas) ಅಭಿನಯದ ರಾಜಾಸಾಬ್ ಸಿನಿಮಾದ ಟ್ರೇಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಈ ಮುಂಚೆ ಟೀಸರ್ ರಿಲೀಸ್ ಆಗಿ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಇದೀಗ ಟ್ರೇಲರ್‌ ಇದೇ ಸೆಪ್ಟೆಂಬರ್‌ 29ರ ಸಂಜೆ 6ಕ್ಕೆ ರಿಲೀಸ್ ಆಗಲಿದೆ. ಪ್ರಭಾಸ್ ನಟನೆಯ ವಿಭಿನ್ನ ಕಾನ್ಸೆಪ್ಟ್‌ ಸಿನಿಮಾ ಇದಾಗಿದೆ. ಕಲ್ಕಿ 2898 ಎಡಿ ಸಿನಿಮಾ ನಂತರ ಬರುತ್ತಿರುವ ವಿಶಿಷ್ಟ ಸಿನಿಮಾ ರಾಜಾಸಾಬ್ ಆಗಿದೆ.

    ರಾಜಾಸಾಬ್ ಸಿನಿಮಾದಲ್ಲಿ ಪ್ರಭಾಸ್ ಜೊತೆ ಸಂಜಯ್ ದತ್, ನಿಧಿ ಅಗರವಾಲ್, ಮಾಳವಿಕಾ ಮೋಹನನ್, ರಿದ್ದಿ ಕುಮಾರ್ ಸೇರಿದಂತೆ ಅತಿದೊಡ್ಡ ತಾರಾಗಣ ಈ ಸಿನಿಮಾದಲ್ಲಿ ಇರಲಿದೆ. ಪ್ರಭಾಸ್ ಸಿನಿಮಾ ಕರಿಯರ್‌ನಲ್ಲೇ ವಿಭಿನ್ನವಾದ ಸಿನಿಮಾ ರಾಜಾಸಾಬ್ ಆಗಿದ್ದು, ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ನಲ್ಲಿ ತಯಾರಾಗಿದೆ.  ಇದನ್ನೂ ಓದಿ: ಬಿಗ್‌ಬಾಸ್‌ಗೆ ಯೂಟ್ಯೂಬ್ ಸ್ಟಾರ್ ರಕ್ಷಿತಾ ಶೆಟ್ಟಿ ಎಂಟ್ರಿ|


    ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ಮಾರುತಿ. ಇನ್ನು ಈ ಸಿನಿಮಾಗೆ ಬಂಡವಾಳ ಹೂಡಿ ನಿರ್ಮಾಣ ಮಾಡಿರೋದು ಟಿಜಿ ವಿಶ್ವಪ್ರಸಾದ್, ವಿವೇಕ್ ಕುಚಿಬೊಟ್ಲಾ, ಇಶಾನ್ ಸಕ್ಸೇನಾ. ರಾಜಾಸಾಬ್ ಸಿನಿಮಾ ಇದೇ ಡಿಸೆಂಬರ್‌ನಲ್ಲಿ ತೆರೆಗೆ ಬರುವ ತಯಾರಿಯನ್ನ ಮಾಡಿಕೊಂಡಿತ್ತು. ಇದೀಗ ಈ ಸಿನಿಮಾ 2026ರ ಜನವರಿ 9ಕ್ಕೆ ರಿಲೀಸ್ ಆಗಲಿದೆ. ಪ್ರಭಾಸ್ ಅಭಿಮಾನಿಗಳಿಗೆ ಹೊಸ ರೀತಿಯ ಎಂಟರ್‌ಟೈನ್ಮೈಂಟ್‌ ನೀಡಲಿದೆ ರಾಜಾಸಾಬ್. ಸದ್ಯ ಟ್ರೇಲರ್‌ ಹೇಗಿರಲಿದೆ ಎನ್ನುವ ಕುತೂಹಲ ಮೂಡಿದೆ.

  • ರಾಜಾಸಾಬ್ ವರ್ಸಸ್ ಧುರಂಧರ್ ಬಾಕ್ಸಾಫೀಸ್ ಕ್ಲ್ಯಾಶ್: ಸಂಜುಬಾಬ ಸ್ಫೋಟಕ ಹೇಳಿಕೆ

    ರಾಜಾಸಾಬ್ ವರ್ಸಸ್ ಧುರಂಧರ್ ಬಾಕ್ಸಾಫೀಸ್ ಕ್ಲ್ಯಾಶ್: ಸಂಜುಬಾಬ ಸ್ಫೋಟಕ ಹೇಳಿಕೆ

    ಬಾಲಿವುಡ್‌ನ ನಟ ಸಂಜಯ್ ದತ್ (Sanjay Dutt) ಭಾರತೀಯ ಚಿತ್ರರಂದಲ್ಲಿ ಭಾರೀ ಬ್ಯುಸಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತದ ಎಲ್ಲಾ ಪ್ಯಾನ್ ಇಂಡಿಯಾ ಸಿನಿಮಾದಲ್ಲೂ ಸಂಜುಬಾಬ ಒಂದು ಮುಖ್ಯ ಪಾತ್ರವನ್ನ ನಿರ್ವಹಿಸಿದ್ದಾರೆ. ಕನ್ನಡದ ಕೆಡಿ ಸಿನಿಮಾದಲ್ಲೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಮುಂಬೈನಲ್ಲಿ ಕೆಡಿ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಇವೆಂಟ್‌ನಲ್ಲಿ ಮಾತನಾಡಿರುವ ಸಂಜಯ್ ದತ್ ರಾಜಾಸಾಬ್ (The Raja Saab) ಹಾಗೂ ಧುರಂಧರ್ (Dhurandhar) ಚಿತ್ರದ ರಿಲೀಸ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಎರಡೂ ಸಿನಿಮಾಗಳು ಒಂದೇ ದಿನ ತೆರೆಕಂಡರೆ ಎನ್ನುವ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಉತ್ತರಿಸಿರುವ ಸಂಜಯ್ ದತ್ ತಾವು ನಟಿಸಿದ ಎರಡು ಸಿನಿಮಾಗಳು ಒಂದೇ ದಿನ ರಿಲೀಸ್ ಆದರೂ ವ್ಯತ್ಯಾಸವೆನಿಸೊಲ್ಲ. `ಯಾಕೆಂದರೆ ಧುರಂಧರ್ ಹಾಗೂ ರಾಜಾಸಾಬ್ ಸಿನಿಮಾದ ಎರಡೂ ಪಾತ್ರಗಳು ತುಂಬಾನೇ ವಿಭಿನ್ನವಾಗಿವೆ. ಎರಡೂ ಒಂದೇ ರೀತಿ ಇರುವುದಿಲ್ಲ’ ಎಂದಿದ್ದಾರೆ. ಇದನ್ನೂ ಓದಿ: ಅಟ್ಲಿ ಸಿನಿಮಾಗೆ ಮತ್ತೆ ಒಂದಾದ ಪುಷ್ಪ ಹಿಟ್ ಜೋಡಿ..!

    ಪ್ರಭಾಸ್ ಅಭಿನಯದ ಮೋಸ್ಟ್ ಅವೈಟೆಡ್ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ಪೋನ್ ಮಾಡಿಕೊಂಡು ಬಂದಿದೆ. 2025ರ ಕೊನೆಯಲ್ಲಿ ಸಿನಿಮಾ ತೆರೆಗೆ ಬರುತ್ತೆ ಅನ್ನೋ ಮಾಹಿತಿಯನ್ನ ಚಿತ್ರತಂಡ ಶೇರ್ ಮಾಡಿಕೊಂಡಿದೆ. ಇನ್ನು ರಣವೀರ್ ಸಿಂಗ್ ನಟನೆಯ ಧುರಂಧರ್ ಸಿನಿಮಾ ಕೂಡಾ ಇದೇ ವರ್ಷ ಡಿಸೆಂಬರ್‌ಗೆ ತೆರೆಗೆ ಬರೋಕೆ ಸಿದ್ಧವಾಗಿದೆ.

    ಧುರಂಧರ್ ಹಾಗೂ ರಾಜಾಸಾಬ್ ಸಿನಿಮಾ ಒಂದೇ ದಿನ ತೆರೆಗೆ ಬಂದರೂ ಬಾಕ್ಸಾಫೀಸ್‌ನಲ್ಲಿ ಆಗಲಿ, ಸಿನಿಮಾದ ಪಾತ್ರದ ಮೇಲೆಯಾಗಲಿ ಯಾವುದೇ ಡಿಫರೆನ್ಸ್ ಆಗೋದಿಲ್ಲ ಎನ್ನು ಮಾತುಗಳನ್ನ ನಟ ಸಂಜಯ್ ದತ್ ಕೆಡಿ ಸಿನಿಮಾದ ಇವೆಂಟ್‌ನಲ್ಲಿ ಹೇಳಿದ್ದಾರೆ. ಇದನ್ನೂ ಓದಿ: `ನನ್ನ ಬ್ಲೌಸ್ ಒಳಗೆ ಕೈಹಾಕಿದ’ – ಆಶೀರ್ವಾದದ ನೆಪದಲ್ಲಿ ಅರ್ಚಕನಿಂದ ಮಾಡೆಲ್‌ಗೆ ಲೈಂಗಿಕ ದೌರ್ಜನ್ಯ ಆರೋಪ

  • 5 ದಿನಕ್ಕೆ 10 ಕೋಟಿ – ಇದು ಅಕ್ಷಯ್‌ ಕುಮಾರ್‌ ಕಾಲ್‌ ಶೀಟ್!

    5 ದಿನಕ್ಕೆ 10 ಕೋಟಿ – ಇದು ಅಕ್ಷಯ್‌ ಕುಮಾರ್‌ ಕಾಲ್‌ ಶೀಟ್!

    ಮುಂಬೈ: ವಿಷ್ಣುಮಂಚು (Vishnu Manchu) ಅಭಿನಯದ ಕಣ್ಣಪ್ಪ (Kannappa) ಸಿನಿಮಾ ಬಹುಭಾಷೆಯಲ್ಲಿ ರಿಲೀಸ್ ಆಗಿದೆ ಈ ಚಿತ್ರದಲ್ಲಿ ಹಲವು ಭಾಷೆಯ ವಿವಿಧ ಖ್ಯಾತ ಕಲಾವಿದರು ನಟಿಸಿದ್ದು ಚಿತ್ರದ ಹೈಲೈಟ್‌ನಲ್ಲೊಂದು.

    ವಿಷ್ಣು ಮಂಚು ಕಣ್ಣಪ್ಪನಾಗಿ ಅಭಿನಯಿಸಿದರೆ ಅತಿಥಿ ಪಾತ್ರಗಳಲ್ಲಿ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್‌ಲಾಲ್ ಅಭಿನಯಿಸಿದ್ದಾರೆ. ಗೆಸ್ಟ್ ಅಪೀಯರೆನ್ಸ್ ಮಾಡಿದ್ದ ಬೇರೆ ಭಾಷೆ ಕಲಾವಿದರು ಉಚಿತವಾಗಿಯೇ ಅಭಿನಯಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೀಗ ಅಕ್ಷಯ್ ಕುಮಾರ್ (Akshay Kumar) ಶಿವನ ಪಾತ್ರಕ್ಕಾಗಿ 10 ಕೋಟಿ ರೂ. ಸಂಭಾವನೆ ಪಡೆದು ಅಭಿನಯಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ: ರಾಮ್‌ಚರಣ್‌ಗೆ ಕ್ಷಮೆ ಕೇಳಿದ `ಗೇಮ್ ಚೇಂಜರ್’ ಪ್ರೊಡ್ಯೂಸರ್

     

    ಶಿವನ ಪಾತ್ರ ಮಾಡಿದ್ದ ಅಕ್ಷಯ್ ಕುಮಾರ್ 5 ದಿನದ ಕಾಲ್‌ಶೀಟ್‌ಗಾಗಿ 10 ಕೋಟಿ ರೂ. ಸಂಭಾವನೆ ಪಡೆದಿದ್ದರು ಎನ್ನಲಾಗುತ್ತಿದೆ. ಆದರೆ ಪ್ರಭಾಸ್ ಹಾಗೂ ಮೋಹನ್‌ಲಾಲ್ ಮೋಹನ್‌ಬಾಬು ಮೇಲಿನ ಸ್ನೇಹ, ವಿಶ್ವಾಸದಿಂದ ರೆಮನ್ಯುರೇಶನ್ ಪಡೆಯದೇ ಅಭಿನಯಿಸಿದ್ದಾರೆ. ಆದರೆ ಐದೇ ದಿನದ ಕಾಲ್‌ಶೀಟ್‌ಗೆ ಅಕ್ಷಯ್ 10 ಕೋಟಿ ಪಡೆದುಕೊಂಡು ಹೋಗಿರುವುದು ಟಾಲಿವುಡ್ ವಲಯದಲ್ಲಿ ಬಹಳ ಚರ್ಚೆಯಾಗುತ್ತಿದೆ. ಇದನ್ನೂ ಓದಿ: ಓಂಪ್ರಕಾಶ್ ರಾವ್ ನಿರ್ದೇಶನದ 50ನೇ ಚಿತ್ರಕ್ಕೆ ಹಂಸಲೇಖ ಸಂಗೀತ

    ಅಕ್ಷಯ್ ದುರಾಸೆಯಿಂದ ಹಣ ಪಡೆದುಕೊಂಡು ಹೋಗಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಆದರೆ ಅಕ್ಷಯ್ ಕೇಳಿದಷ್ಟು ಹಣಕ್ಕೆ ಒಪ್ಪಿಗೆಯಿಂದಲೇ ನಿರ್ಮಾಪಕರು ರೆಮನ್ಯುರೇಷನ್ ಕೊಟ್ಟಿರುತ್ತಾರೆ. ಹೀಗಾಗಿ ಅಕ್ಷಯ್ ಕುಮಾರ್ ಕೂಡ ಕಣ್ಣಪ್ಪ ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿದ್ದು. ಆದರೆ ಮೋಹನ್‌ಲಾಲ್ ಆಗಲಿ ಪ್ರಭಾಸ್ ಆಗಲಿ ಭಾಗಿಯಾಗಿರಲಿಲ್ಲ. ಪ್ರಭಾಸ್ ಹಾಗೂ ಮೋಹನ್‌ಲಾಲ್ ಮುಂದೆ ಅಕ್ಷಯ್ ಸಣ್ಣವರಾದ್ರು ಅಷ್ಟೇ ಎನ್ನುತ್ತಿದ್ದಾರೆ ಪ್ರಭಾಸ್ ಫ್ಯಾನ್ಸ್.

  • ಚಾಮುಂಡಿ ತಾಯಿ ಕಾಪಾಡಮ್ಮ – `ದಿ ರಾಜಾ ಸಾಬ್’ ಚಿತ್ರದಲ್ಲಿ ಪ್ರಭಾಸ್‌ ಘರ್ಜನೆ

    ಚಾಮುಂಡಿ ತಾಯಿ ಕಾಪಾಡಮ್ಮ – `ದಿ ರಾಜಾ ಸಾಬ್’ ಚಿತ್ರದಲ್ಲಿ ಪ್ರಭಾಸ್‌ ಘರ್ಜನೆ

    ಬಾಹುಬಲಿ (Bahubali) ಚಿತ್ರದ ಯಶಸ್ಸಿನ ಬಳಿಕ ಪ್ರಭಾಸ್‌ಗೆ (Prabhas) ಯಾವ ಚಿತ್ರವೂ ಕೈ ಹಿಡಿಯುತ್ತಿಲ್ಲ. ನಿರೀಕ್ಷೆಯಂತೆ ಚಿತ್ರಗಳು ಹಿಟ್ ಆಗುತ್ತಿಲ್ಲ. ಹೀಗಾಗಿ ಪ್ರಭಾಸ್ ಹೊಸ ಹೊಸ ಪ್ರಯೋಗಕ್ಕೆ ಅಣಿಯಾಗುತ್ತಿದ್ದಾರೆ. ಪ್ರಯೋಗದ ಇನ್ನೊಂದು ಭಾಗವೇ `ದಿ ರಾಜಾ ಸಾಬ್’ (The Raja Saab). ಇದೀಗ ಪ್ರಭಾಸ್ ಅಭಿನಯದ ರಾಜಾಸಾಬ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಪ್ರಭಾಸ್ ಕರಿಯರ್‌ನ ವಿಭಿನ್ನ ಚಿತ್ರ ಅನ್ನೋದಾಗಿ ಟೀಸರ್ ಸುಳಿವು ನೀಡುತ್ತಿದೆ.

    ಪ್ರಭಾಸ್ ಹಾಗೂ ಸಂಜಯ್ ದತ್ (Sanjay Datt) ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ `ದಿ ರಾಜಾ ಸಾಬ್’ ಹಾರರ್, ಫ್ಯಾಂಟಸಿ ಕಥೆಯ ಚಿತ್ರ. ಸ್ಟಾರ್ ನಟರು ಆಕ್ಷನ್ ಸಿನಿಮಾಗಳಿಗೆ ಪಟ್ಟು ಹಿಡಿದು ಕುಳಿತಿರುವ ವೇಳೆ ಪ್ರಭಾಸ್ ಇಂಥದ್ದೊಂದು ವಿಭಿನ್ನ ಪ್ರಾಜೆಕ್ಟ್ ಒಪ್ಪಿಕೊಂಡಿದ್ದು ವಿಶೇಷ. ಈ ಮೂಲಕ ಹೊಸ ಪ್ರಯೋಗಕ್ಕೆ ಪ್ರಭಾಸ್ ಮುಂದಾದಂತೆ ಕಾಣುತ್ತಿದೆ. ಇದನ್ನೂ ಓದಿ: ಶೂಟಿಂಗ್ ಮುಗಿಸಿದ ಸತೀಶ್ ನೀನಾಸಂ, ಸಪ್ತಮಿ ನಟನೆಯ ʻದಿ ರೈಸ್ ಆಫ್ ಅಶೋಕʼ

    `ದಿ ರಾಜ ಸಾಬ್’ ಚಿತ್ರದಲ್ಲಿ ಪ್ರಭಾಸ್ ಜೊತೆ ಮಾಳವಿಕಾ, ನಿಧಿ ಅಗರ್‌ವಾಲ್, ರಿದ್ದಿ ಕುಮಾರ್ ಅಭಿನಯಿಸಿದ್ದಾರೆ. ಬಂಗಲೆಯೊಂದರಲ್ಲಿ ನಡೆಯುವ ಫ್ಯಾಂಟಸಿ ಕಥೆಯಾಗಿದ್ದು, ಸತ್ತು ಹೋಗಿರೋ ರಾಜ ಹಾಗೂ ಆತನ ತೀರದ ಆಸೆಯಿಂದ ಬಂಗಲೆಗೆ ಬರುವವರಿಗೆ ಕಾಟ ಕೊಡುವ ಕಥೆಯನ್ನ ಟೀಸರ್ ಬಿಚ್ಚಿಟ್ಟಿದೆ. ಟೀಸರ್‌ನ ಕೊನೆಯಲ್ಲಿ ಪ್ರಭಾಸ್‌, ಚಾಮುಂಡಿ ತಾಯಿ ಕಾಪಾಡಮ್ಮ ಎಂದು ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾಗೆ ದೇವರೇ ದಿಕ್ಕು – ರವೀನಾ ಟಂಡನ್

    ಮಾರುತಿ ನಿರ್ದೇಶಿಸಿರುವ ಈ ಚಿತ್ರವು ಅನೇಕ ವರ್ಷಗಳಿಂದ ಕುಂಟುತ್ತಾ, ತೆವಳುತ್ತಾ ಶೂಟಿಂಗ್ ಮುಗಿಸಿದ್ದು, ಇದೀಗ ಡಿಸೆಂಬರ್ 5ಕ್ಕೆ ರಿಲೀಸ್ ಘೋಷಿಸಿದೆ. ವಿಶೇಷ ಅಂದ್ರೆ 5 ಭಾಷೆಯಲ್ಲಿ ಚಿತ್ರ ತಯಾರಾಗಿದ್ದು, ಕನ್ನಡದಲ್ಲೂ ಟೀಸರ್ ರಿಲೀಸ್ ಆಗಿದೆ.

  • ಪ್ರಭಾಸ್ ನಟನೆಯ ‘ದಿ ರಾಜಾಸಾಬ್’ ಚಿತ್ರದ ಟೀಸರ್ ಬಿಡುಗಡೆ

    ಪ್ರಭಾಸ್ ನಟನೆಯ ‘ದಿ ರಾಜಾಸಾಬ್’ ಚಿತ್ರದ ಟೀಸರ್ ಬಿಡುಗಡೆ

    ಟಾಲಿವುಡ್ ನಟ, ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಅಭಿನಯದ, ಮಾರುತಿ ನಿರ್ದೇಶನದ ‘ದಿ ರಾಜಾಸಾಬ್’ (The Rajasaab) ಸಿನಿಮಾ, ಈಗಾಗಲೇ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿದೆ. ಮೇಕಿಂಗ್ ಮೂಲಕ ಗಮನ ಸೆಳೆದ ಈ ಸಿನಿಮಾದ ಮೊದಲ ಟೀಸರ್ ಇದೀಗ ಬಿಡುಗಡೆ ಆಗಿದೆ. ತೆಲುಗಿನ ಖ್ಯಾತ ಚಿತ್ರನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಟಿಜಿ ವಿಶ್ವ ಪ್ರಸಾದ್ ಈ ಚಿತ್ರದ ನಿರ್ಮಾಪಕರು.

    ‘ದಿ ರಾಜಾ ಸಾಬ್’ ಟೀಸರ್ ನೋಡಿದ ಅಭಿಮಾನಿಗಳು ಸದ್ಯ ಪುಳಕಿತರಾಗಿದ್ದಾರೆ. ಇದರಲ್ಲಿ ಪ್ರಭಾಸ್ ಅವರ ವಿಂಟೇಜ್ ಲುಕ್ ಖಡಕ್ ಆಗಿದೆ. ಮೂವರು ನಾಯಕಿಯರು, ಪ್ರಭಾಸ್ ಅವರ ಎಂಟ್ರಿ, ನಗಿಸುವ ಕಾಮಿಡಿ ಡೈಲಾಗ್‌ಗಳು ರೊಮ್ಯಾಂಟಿಕ್ ಟ್ರ‍್ಯಾಕ್ ಅದ್ಭುತವಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಬಾಲಿವುಡ್ ನಟ ಸಂಜಯ್ ದತ್ ಅವರ ವಿಚಿತ್ರ ಗೆಟಪ್, ರಾಜಮನೆತನದ ಸುತ್ತ ನಡೆಯುವ ಕಥೆ ಮತ್ತು ಹಾರರ್ ಅಂಶಗಳು ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ.

    ಟೀಸರ್‌ನಲ್ಲಿ, ಪ್ರಭಾಸ್ ಎರಡು ಲುಕ್‌ನಲ್ಲಿ ಕಂಡಿದ್ದಾರೆ. ಒಂದು ಪಕ್ಕಾ ಲವರ್‌ಬಾಯ್ ಲುಕ್ ಮತ್ತು ಮಾಸ್ ಆಕ್ಷನ್ ಅವತಾರದಲ್ಲಿ ಎದುರಾದರೇ, ಮತ್ತೊಂದರಲ್ಲಿ ಗಾಢವಾದ, ಅತೀಂದ್ರಿಯ ಶಕ್ತಿಯನ್ನು ಆವಾಹಿಸಿಕೊಂಡಂತೆ ಕಂಡಿದ್ದಾರೆ. ಟೀಸರ್‌ನಲ್ಲಿ ಮಸ್ತ್ ನೃತ್ಯ, ಪಂಚ್ ಡೈಲಾಗ್‌ಗಳಿಂದಲೂ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ. ಪ್ರಭಾಸ್ ಜೊತೆಗೆ ನಿಧಿ ಅಗರ್ವಾಲ್, ಮಾಳವಿಕಾ ಮೋಹನ್ ಮತ್ತು ರಿದ್ಧಿ ಕುಮಾರ್ ಈ ಚಿತ್ರದ ತ್ರಿವಳಿ ನಾಯಕಿಯರು. ಪ್ರತಿ ಪಾತ್ರವೂ ಶಾಪಗ್ರಸ್ತ ಮಹಲಿನ ಕಥೆಗೆ ನಿಗೂಢತೆಯ ಪದರಗಳನ್ನು ಸೇರಿಸುತ್ತಾ ಹೋಗುತ್ತಾರೆ.

    ‘ದಿ ರಾಜಾಸಾಬ್’ ಚಿತ್ರದ ಮೂಲಕ ನಾವು ಏನನ್ನಾದರೂ ದೊಡ್ಡದನ್ನೇ ನಿರ್ಮಿಸಲು ಬಯಸಿದ್ದೇವೆ. ಈವರೆಗೂ ನೋಡದ ಸೆಟ್‌ಗಳು ಈ ಸಿನಿಮಾದಲ್ಲಿರಲಿದೆ. ನಮ್ಮ ಈ ಸಿನಿಮಾ ಇದೇ ವರ್ಷದ ಡಿಸೆಂಬರ್ 5ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ ಎಂದಿದ್ದಾರೆ ನಿರ್ಮಾಪಕ ಟಿಜಿ ವಿಶ್ವ ಪ್ರಸಾದ್.

    ರಾಜಾಸಾಬ್ ಒಂದು ಪ್ರಕಾರದ ಪ್ರಯಾಣ – ಇದು ಭಯಾನಕ ಮತ್ತು ಫ್ಯಾಂಟಸಿ, ನೈಜ ಮತ್ತು ಅತಿವಾಸ್ತವಿಕತೆಯ ನಡುವೆ ಹರಿಯುತ್ತದೆ. ಥಮನ್ ಅವರ ರೋಮಾಂಚಕಾರಿ ಸಂಗೀತ ಇಡೀ ಸಿನಿಮಾದ ಹೈಲೈಟ್ ಎಂದಿದ್ದಾರೆ ನಿರ್ದೇಶಕ ಮಾರುತಿ.

  • ಇದು ನಿಮ್ಮ ಫೆಮಿನಿಸಂ?- ದೀಪಿಕಾ ಪಡುಕೋಣೆ ವಿರುದ್ಧ ಸಂದೀಪ್ ರೆಡ್ಡಿ ಆಕ್ರೋಶ

    ಇದು ನಿಮ್ಮ ಫೆಮಿನಿಸಂ?- ದೀಪಿಕಾ ಪಡುಕೋಣೆ ವಿರುದ್ಧ ಸಂದೀಪ್ ರೆಡ್ಡಿ ಆಕ್ರೋಶ

    ರ್ಜುನ್ ರೆಡ್ಡಿ, ಅನಿಮಲ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ. ‘ಸ್ಪಿರಿಟ್’ ಚಿತ್ರದ ಕಥೆ ಲೀಕ್ ಆಗಿರೋದ್ದಕ್ಕೆ ನಿರ್ದೇಶಕ ಸಿಟ್ಟಾಗಿದ್ದಾರೆ. ದೀಪಿಕಾ ಪಡುಕೋಣೆಗೆ (Deepika Padukone) ಪರೋಕ್ಷವಾಗಿ ನಿರ್ದೇಶಕ ಟಾಂಗ್ ಕೊಟ್ರಾ ಎಂಬ ಅನುಮಾನ ನೆಟ್ಟಿಗರಲ್ಲಿ ಮೂಡಿದೆ. ಇದನ್ನೂ ಓದಿ:ಫಸ್ಟ್‌ ಟೈಮ್‌ ಕನ್ನಡ ಚಿತ್ರರಂಗದಲ್ಲಿ ಪೋಸ್ಟರ್‌ ಬ್ಯಾನ್‌

    ನಿರ್ದೇಶಕನ ಪೋಸ್ಟ್‌ನಲ್ಲಿ ನಾನು ಕಲಾವಿದರಿಗೆ ಕಥೆ ಹೇಳುವಾಗ 100% ನಂಬಿಕೆ ಇಡುತ್ತೇನೆ. ಯಾರಿಗೂ ಕಥೆ ಹೇಳಬಾರದು ಅಂತ ನಮ್ಮ ನಡುವೆ ಒಪ್ಪಂದ ಆಗಿರುತ್ತದೆ. ಆ ನಿಯಮವನ್ನು ಮುರಿಯುವ ಮೂಲಕ ನೀವೇನು ಎಂಬುದನ್ನು ತೋರಿಸಿದ್ದೀರಿ. ಕಿರಿಯ ಕಲಾವಿದರನ್ನು ಕೆಳಗೆ ಹಾಕಿದ್ದಲ್ಲದೇ, ನನ್ನ ಸ್ಟೋರಿಯನ್ನು ಲೀಕ್ ಮಾಡಿದ್ದೀರಿ. ಇದೇನಾ ನಿಮ್ಮ ಸ್ತ್ರೀವಾದ ಎಂದು ಅವರು ಪ್ರಶ್ನಿಸಿದ್ದಾರೆ.

    ಒಬ್ಬ ಫಿಲ್ಮ್ ಮೇಕರ್ ಆಗಿ, ನಾನು ನನ್ನ ಚಿತ್ರಕ್ಕಾಗಿ ವರ್ಷಗಳ ಕಠಿಣ ಪರಿಶ್ರಮ ಹಾಕಿದ್ದೇನೆ. ಫಿಲ್ಮ್ ಮೇಕಿಂಗ್ ನನಗೆ ಎಲ್ಲವೂ ಆಗಿದೆ. ಅದಕ್ಕೆ ನಾವು ಸಂಪೂರ್ಣವಾಗಿ ಕೆಲಸ ಮಾಡಿರುತ್ತೇವೆ. ಒಂದು ಕೆಲಸ ಮಾಡಿ ಮುಂದಿನ ಬಾರಿ ಸಂಪೂರ್ಣ ಕಥೆ ಹೇಳಿಬಿಡಿ, ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಕೆಂಡಕಾರಿದ್ದಾರೆ.

    ಈ ಆಕ್ರೋಶದ ಪೋಸ್ಟ್ ಅನ್ನು ಸಂದೀಪ್ ರೆಡ್ಡಿ ದೀಪಿಕಾ ಕುರಿತಾಗಿಯೇ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಿನಿ ಪ್ರಿಯರು ಚರ್ಚೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಪ್ರಶಾಂತ್ ನೀಲ್, ಜ್ಯೂ.ಎನ್‌ಟಿಆರ್ ಸಿನಿಮಾದಲ್ಲಿ ರಶ್ಮಿಕಾ ಐಟಂ ಡ್ಯಾನ್ಸ್?

     

    View this post on Instagram

     

    A post shared by Triptii Dimri (@tripti_dimri)

    ಪ್ರಭಾಸ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಆಯ್ಕೆ ಮಾಡಿದ್ದಾರೆ ಎನ್ನಲಾಗಿತ್ತು. ಏಕಾಏಕಿ ಅದು ಏನು ಆಯ್ತೋ ಏನೋ ದಿಢೀರ್ ಅಂತ ಮೊನ್ನೆ (ಮೇ 24) ತೃಪ್ತಿ ದಿಮ್ರಿ ಅವರನ್ನು ಸಿನಿಮಾಗೆ ನಾಯಕಿ ಅಂತ ಚಿತ್ರತಂಡ ಘೋಷಣೆ ಮಾಡಿತ್ತು. ಇದನ್ನು ಸಹಿಸದ ದೀಪಿಕಾ ಕಥೆ ಲೀಕ್ ಮಾಡಿದ್ದಾರೆ ಎಂಬುದನ್ನು ನಿರ್ದೇಶಕ ಪರೋಕ್ಷವಾಗಿ ಹೇಳಿದ್ರಾ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ ಕಾಂಬಿನೇಷನ್ ಸಿನಿಮಾ ‘ಸ್ಪಿರಿಟ್’ ಈ ವರ್ಷದ ಅಂತ್ಯದಲ್ಲಿ ಶೂಟಿಂಗ್ ಶುರುವಾಗಲಿದೆ. ಇದಕ್ಕೆ ತೃಪ್ತಿ ದಿಮ್ರಿ ನಾಯಕಿ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ.

  • ‘ಅನಿಮಲ್’ ನಟಿಗೆ ಬಂಪರ್ ಆಫರ್- ಪ್ರಭಾಸ್‌ಗೆ ನಾಯಕಿಯಾದ ತೃಪ್ತಿ ದಿಮ್ರಿ

    ‘ಅನಿಮಲ್’ ನಟಿಗೆ ಬಂಪರ್ ಆಫರ್- ಪ್ರಭಾಸ್‌ಗೆ ನಾಯಕಿಯಾದ ತೃಪ್ತಿ ದಿಮ್ರಿ

    ‘ಅನಿಮಲ್’ ಖ್ಯಾತಿಯ (Animal) ನಟಿ ತೃಪ್ತಿ ದಿಮ್ರಿಗೆ (Tripti Dimri) ಬಿಗ್ ಚಾನ್ಸ್‌ವೊಂದು ಸಿಕ್ಕಿದೆ. ಸೂಪರ್ ಸ್ಟಾರ್ ಪ್ರಭಾಸ್‌ಗೆ ನಾಯಕಿಯಾಗಿ ತೃಪ್ತಿ ದಿಮ್ರಿ ನಟಿಸಲಿದ್ದಾರೆ. ಈ ಕುರಿತು ಚಿತ್ರತಂಡವೇ ಅಧಿಕೃತ ಘೋಷಣೆ ಮಾಡಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಬಳಿಕ ಬಿಗ್ ನ್ಯೂಸ್ ಕೊಟ್ರು ಮೋಕ್ಷಿತಾ ಪೈ!

    ಡಾರ್ಲಿಂಗ್ ಪ್ರಭಾಸ್ (Prabhas) ಜೊತೆ ತೃಪ್ತಿ ದಿಮ್ರಿ ರೊಮ್ಯಾನ್ಸ್ ಮಾಡಲಿದ್ದಾರೆ. ‘ಸ್ಪಿರಿಟ್‌’ಗೆ (Spirit) ತೃಪ್ತಿ ನಾಯಕಿ ಎಂದು 9 ಭಾಷೆಗಳಲ್ಲಿ ಪೋಸ್ಟರ್ ಮೂಲಕ ಚಿತ್ರತಂಡ ತಿಳಿಸಿದೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು. ಈ ಚಿತ್ರದ ಭಾಗವಾಗಲು ಹೆಮ್ಮೆಯಾಗುತ್ತಿದೆ. ‘ಅನಿಮಲ್’ ಬಳಿಕ ಮತ್ತೆ ‘ಸ್ಪಿರಿಟ್’ ಅವಕಾಶ ಕೊಟ್ಟಿದ್ದಕ್ಕೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾಗೆ (Sandeep Reddy Vanga) ನಟಿ ಥ್ಯಾಂಕ್ಯೂ ಎಂದಿದ್ದಾರೆ.

     

    View this post on Instagram

     

    A post shared by Triptii Dimri (@tripti_dimri)

    ನಾಯಕಿ ತೃಪ್ತಿ ಹೆಸರನ್ನು 9 ಭಾಷೆಗಳಲ್ಲಿ ಉಲ್ಲೇಖಿಸಿ ಅನೌನ್ಸ್ ಮಾಡಿರೋದ್ದಕ್ಕೆ ‘ಸ್ಪಿರಿಟ್’ ಸಿನಿಮಾ 9 ಭಾಷೆಗಳಲ್ಲಿ ಮೂಡಿ ಬರಲಿದ್ಯಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಇದನ್ನೂ ಓದಿ:‘ಮಾರ್ನಮಿ’ಗೆ ಮೋಹಕ ತಾರೆ ರಮ್ಯಾ ಸಾಥ್ – ರಿವೀಲಾಯ್ತು ಚೈತ್ರಾ ಆಚಾರ್ ರೋಲ್

    ಈ ಚಿತ್ರದಲ್ಲಿ ಪ್ರಭಾಸ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ತಿದ್ದಾರೆ. ಹೀಗಾಗಿ ತೃಪ್ತಿ ಪಾತ್ರ ಈ ಚಿತ್ರದಲ್ಲಿ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.

  • ಬಿಗ್ ಆಫರ್ ಗಿಟ್ಟಿಸಿಕೊಂಡ ಕನ್ನಡತಿ- ಪ್ರಭಾಸ್‌ಗೆ ರುಕ್ಮಿಣಿ ವಸಂತ್ ನಾಯಕಿ?

    ಬಿಗ್ ಆಫರ್ ಗಿಟ್ಟಿಸಿಕೊಂಡ ಕನ್ನಡತಿ- ಪ್ರಭಾಸ್‌ಗೆ ರುಕ್ಮಿಣಿ ವಸಂತ್ ನಾಯಕಿ?

    ನ್ನಡದ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರಿಗೆ ಸೌತ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಪ್ರಭಾಸ್ (Prabhas) ನಟನೆಯ ‘ಸ್ಪಿರಿಟ್’ ಚಿತ್ರಕ್ಕೆ (Spirit) ರುಕ್ಮಿಣಿ ವಸಂತ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:ಎಲ್ಲಾ ಸಂದರ್ಭಕ್ಕೂ ನಗುವೇ ಒಳ್ಳೆಯ ಉತ್ತರ – ದರ್ಶನ್ ಭೇಟಿ ಬಳಿಕ ಪವಿತ್ರಾ ಪೋಸ್ಟ್!

    ‘ಭೈರತಿ ರಣಗಲ್, ಭಘೀರ’ ಸಿನಿಮಾದ ಬಳಿಕ ರುಕ್ಮಿಣಿ ವಸಂತ್‌ಗೆ (Rukmini Vasanth) ತೆಲುಗು, ತಮಿಳಿನಿಂದ ಭರ್ಜರಿ ಆಫರ್ಸ್‌ ಅರಸಿ ಬರುತ್ತಿವೆ. ಪ್ರಭಾಸ್ ಜೊತೆ ನಟಿಸುವ ಆಫರ್ ರುಕ್ಮಿಣಿಗೆ ಸಿಕ್ಕಿದೆಯಂತೆ. ಮೊದಲಿಗೆ ‘ಸ್ಪಿರಿಟ್’ ಸಿನಿಮಾಗೆ ದೀಪಿಕಾ ಪಡುಕೋಣೆ ಆಯ್ಕೆ ಆಗಿದ್ದರು. ಆದರೆ ಅವರು ಹೆಚ್ಚಿನ ಸಂಭಾವನೆ ಕೇಳಿದ್ದಕ್ಕೆ ರುಕ್ಮಿಣಿ ಅವರನ್ನು ನಟಿಸಲು ಕೇಳಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಒಟ್ನಲ್ಲಿ ಕನ್ನಡದ ನಟಿಯನ್ನ ಪ್ರಭಾಸ್ ಜೊತೆಗೆ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ. ಇದನ್ನೂ ಓದಿ:ನಮ್ಮ ಜಗಳ ನಮ್ಮಲ್ಲೇ ಇರಬೇಕಿತ್ತು, ನಾನು ಸತ್ತರೂ ಯಾರೂ ಕಾರಣರಲ್ಲ: ಸಹ ಕಲಾವಿದೆ

    ವಿಜಯ್ ಸೇತುಪತಿ, ರುಕ್ಮಿಣಿ ನಟನೆಯ ‘ಏಸ್’ ಚಿತ್ರ ಇಂದು ರಿಲೀಸ್ ಆಗಿದೆ. ಅಮರನ್ ನಟ ಶಿವಕಾರ್ತಿಕೇಯನ್ ಜೊತೆಗಿನ ‘ಮದರಾಸಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಮ್ ಚರಣ್ ಜೊತೆಗೆ ನಟಿಸಲು ಕೂಡ ನಟಿಯ ಜೊತೆ ಮಾತುಕತೆ ಆಗಿದೆ ಎನ್ನಲಾಗಿದೆ.

    ಕರ್ನಾಟಕದಿಂದ ರಶ್ಮಿಕಾ ಮಂದಣ್ಣ (Rashmika Mandanna), ಶ್ರೀಲೀಲಾ ಅವರಂತೆಯೇ ರುಕ್ಮಿಣಿ ವಸಂತ್ ಕೂಡ ಸಕ್ಸಸ್‌ಗಾಗಿ ಸಿನಿಮಾ ಆಯ್ಕೆಯಲ್ಲಿ ಚ್ಯುಸಿಯಾಗಿದ್ದಾರೆ. ಹೀಗೆ ಸೌತ್‌ನಿಂದ ಸಾಕಷ್ಟು ಸಿನಿಮಾ ಅವಕಾಶಗಳು ನಟಿಯನ್ನು ಅರಸಿ ಬರುತ್ತಿವೆ.