Tag: ಪ್ರಭಾತ್ ಝಾ

  • ಕಾಂಗ್ರೆಸಿಗರು ಬೇಕಾದ್ರೆ ರಾಹುಲ್ ಗಾಂಧಿಯ ಮೂತ್ರವನ್ನೂ ಕುಡಿಯಲು ರೆಡಿ ಇರ್ತಾರೆ: ಬಿಜೆಪಿ ಮುಖಂಡ

    ಕಾಂಗ್ರೆಸಿಗರು ಬೇಕಾದ್ರೆ ರಾಹುಲ್ ಗಾಂಧಿಯ ಮೂತ್ರವನ್ನೂ ಕುಡಿಯಲು ರೆಡಿ ಇರ್ತಾರೆ: ಬಿಜೆಪಿ ಮುಖಂಡ

    ಭೋಪಾಲ್: ಕಾಂಗ್ರೆಸಿಗರು ರಾಹುಲ್ ಗಾಂಧಿಯ ಮೂತ್ರವನ್ನೂ ಬೇಕಾದರೆ ಕುಡಿಯಲು ತಯಾರಿ ಇರುತ್ತಾರೆ ಎಂದು ಮಧ್ಯ ಪ್ರದೇಶದ ಚುನಾವಣೆಯ ಉಸ್ತುವಾರಿಯನ್ನ ಹೊತ್ತಿರುವ ಬಿಜೆಪಿಯ ಉಪಾಧ್ಯಕ್ಷ ಪ್ರಭಾತ್ ಝಾ ವಿವಾದತ್ಮಾಕ ಹೇಳಿಕೆಯನ್ನು ನೀಡಿದ್ದಾರೆ.

    ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯೆಂದೇ ಬಿಂಬಿತವಾಗಿರುವ ಕಮಲ್‍ನಾಥ್ ಅವರನ್ನು ತೆಗಳಲು ಪ್ರಭಾತ್ ಝಾ ಗೃಹ ಇಲಾಖೆಯ ಮಾಜಿ ಕಾರ್ಯದರ್ಶಿ ಆರ್ ವಿಎಸ್ ಮಣಿ ಅವರ ಬರೆದ ಪುಸ್ತಕದಲ್ಲಿರುವ ಅಂಶವನ್ನು ಪ್ರಸ್ತಾಪಿಸಿ ಟೀಕಿಸಿದ್ದಾರೆ.

    ಕೇಂದ್ರ ಸಚಿವರಾಗಿದ್ದ ವೇಳೆ ಕಮಲ್‍ನಾಥ್ ಇಶ್ರಾತ್ ಜಹಾನ್ ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಮೋದಿ ಹೆಸರನ್ನು ಸೇರಿಸಲು ಆರ್‍ವಿಎಸ್ ಮಣಿ ಮೇಲೆ ಒತ್ತಡ ಹೇರಿದ್ದರು. ಆರ್‍ವಿಎಸ್ ಮಣಿ ಈ ಬೇಡಿಕೆಯನ್ನು ಒಪ್ಪದಕ್ಕೆ ಕಮಲ್‍ನಾಥ್, ಬಹಳಷ್ಟು ಜನರು ರಾಹುಲ್ ಗಾಂಧಿಯ ಮೂತ್ರವನ್ನು ಕುಡಿಯಲು ತಯಾರಿದ್ದಾಗ ನೀವು ಯಾಕೆ ಈ ಒಂದು ಸಣ್ಣ ಉಪಕಾರವನ್ನು ಮಾಡಬಾರದು ಎಂದು ಪ್ರಶ್ನಿಸಿದ್ದರು ಎಂಬುದಾಗಿ ಪ್ರಭಾತ್ ಝಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ಕಮಲ್‍ನಾಥ್ ಅವರ ಬಗ್ಗೆ ಮಾತನಾಡಲು ನನಗೆ ನಾಚಿಕೆ ಆಗುತ್ತದೆ. ನನ್ನ ಸಹೋದರಿ ಇಲ್ಲೇ ಇದ್ದರೂ ನನ್ನ ಮರ್ಯಾದೆಯನ್ನು ಬಿಟ್ಟು ಹೇಳುತ್ತಿದ್ದೇನೆ. ಅವರು ನಮ್ಮ ಮುಖ್ಯಮಂತ್ರಿಯ ಬಗ್ಗೆ ಮಾತನಾಡುವುದು ಏನು? ಜನರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಈಗಾಗಲೇ ಗೊತ್ತಾಗಿದೆ. ಮಾಜಿ ಸಚಿವರಾಗಿ ಇಂತಹ ಮಾತುಗಳನ್ನ ಆಡುವರು ಜನಗಳಿಗೆ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿ ಟೀಕಿಸಿದ್ದಾರೆ.

    ಪ್ರಭಾತ್ ಝಾ ಹೇಳಿಕೆಗೆ ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ನರೇಂದ್ರ ಸಲುಜಾ ಪ್ರತಿಕ್ರಿಯಿಸಿ, ಬಿಜೆಪಿ ಅವರು ನಕಲಿ ವಿಡಿಯೋಗಳನ್ನು ಪ್ರಕಟಿಸಿ ಕಮಲ್‍ನಾಥ್ ಅವರ ಚಾರಿತ್ರ್ಯ ಹರಣಕ್ಕೆ ಮುಂದಾಗಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv