Tag: ಪ್ರಭಾಕರ್ ರೆಡ್ಡಿ

  • 2ನೇ ಹೆಂಡ್ತಿ ಮನೆ ಟಾಯ್ಲೆಟ್‍ನಲ್ಲಿ ಅಡಗಿದ್ದ ಪ್ರಭಾಕರ್ ರೆಡ್ಡಿ ಅರೆಸ್ಟ್

    2ನೇ ಹೆಂಡ್ತಿ ಮನೆ ಟಾಯ್ಲೆಟ್‍ನಲ್ಲಿ ಅಡಗಿದ್ದ ಪ್ರಭಾಕರ್ ರೆಡ್ಡಿ ಅರೆಸ್ಟ್

    ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಭೂಮಿ ಮಾರಾಟ, ಭೂ ಕಬಳಿಕೆ, ಜೀವ ಬೆದರಿಕೆ, ವಂಚನೆ ಕೇಸ್‍ನಲ್ಲಿ ಬೆಂಗಳೂರಿನ ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿಯನ್ನ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಪೊಲೀಸರ ದಾಳಿ ವೇಳೆ ರೆಡ್ಡಿ ರಾಜರಾಜೇಶ್ವರಿ ನಗರದಲ್ಲಿರುವ ತನ್ನ 2ನೇ ಹೆಂಡ್ತಿ ಮನೆ ಟಾಯ್ಲೆಟ್‍ನಲ್ಲಿ ಅಡಗಿದ್ದ. ಪೊಲೀಸರು ಬಂಧನಕ್ಕೆ ಬಂದಾಗ 2ನೇ ಪತ್ನಿ ಬಾಗಿಲು ತೆರೆಯದೇ ಸತಾಯಿಸಿದ್ರು. ಗುರುವಾರ ನಡೆದ ದಾಳಿ ವೇಳೆ 300 ಕೋಟಿ ರೂಪಾಯಿ ಮೊತ್ತದ ಆಸ್ತಿಪಾಸ್ತಿಯ ದಾಖಲೆಯನ್ನ ವಶಪಡಿಸಿಕೊಳ್ಳಲಾಗಿದೆ.

    ಕಂಡಕಂಡವರ ಖಾಸಗಿ, ಸರ್ಕಾರಿ ಸೈಟನ್ನು ತನ್ನದೆಂದು ಹೇಳಿ ಮಾರಾಟ ಮಾಡ್ತಿದ್ದ ರೆಡ್ಡಿ ಹಲವಾರು ಮಂದಿಗೆ ಕೋಟಿಗಟ್ಟಲೇ ರೂಪಾಯಿ ವಂಚಿಸಿದ್ದರು. ಬೇಗೂರು ಬಳಿ ಮೂಲ ಮಾಲೀಕರಿಗೆ ಗೊತ್ತೇ ಇಲ್ಲದಂತೆ 7 ಸೈಟ್‍ ಗಳನ್ನು ಮಾರಿದ್ದರು. ಆದ್ರೆ ಮೋಸ ಬಯಲಾದ ಬಳಿಕ ಸೈಟ್ ಖರೀದಿಸಿದ್ದ ಉದ್ಯಮಿ ಹಣ ನೀಡುವಂತೆ ಒತ್ತಾಯಿಸಿದ್ದರು.

    ಈ ವೇಳೆ ಹಣ ಕೊಡಲ್ಲ, ಕೊಲೆ ಮಾಡ್ತೀನಿ ಎಂದು ರೆಡ್ಡಿ ಅವಾಜ್ ಹಾಕಿದ್ದರು. `ಶ್ರೀಸಾಯಿ ರಿಯಲ್ ಎಸ್ಟೇಟ್’ ಕಂಪನಿ ನಡೆಸ್ತಿರುವ ರೆಡ್ಡಿ ಜೆಡಿಎಸ್‍ನಿಂದ ಲೋಕಸಭೆ ಮತ್ತು ಅಸೆಂಬ್ಲಿ ಎಲೆಕ್ಷನ್‍ಗೂ ನಿಂತು ಸೋತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv