Tag: ಪ್ರಭಾಕರ್ ಕೋರೆ

  • ಡೊನಾಲ್ಡ್ ಟ್ರಂಪ್‍ರನ್ನು ಭೇಟಿಯಾದ ಡಾ.ಪ್ರಭಾಕರ್ ಕೋರೆ

    ಡೊನಾಲ್ಡ್ ಟ್ರಂಪ್‍ರನ್ನು ಭೇಟಿಯಾದ ಡಾ.ಪ್ರಭಾಕರ್ ಕೋರೆ

    ವಾಷಿಂಗ್ಟನ್/ಚಿಕ್ಕೋಡಿ: ಇತ್ತೀಚಿಗೆ ಕೆಎಲ್‍ಇ ಸಂಸ್ಥೆಯ ಕಾರ್ಯಧ್ಯಕ್ಷ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ ಅವರು ಅಮೆರಿಕ ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸೌಹಾರ್ದಯುತವಾಗಿ ಭೇಟಿಯಾದರು.

    ಉದ್ಯಮಿ ರವಿಶಂಕರ್ ಭೂಪಲಾಪೂರ್ ದಂಪತಿಯ ಮಗಳಾದ ಡಾ.ಮನಾಲಿ ಮತ್ತು ಅಂಕಿತ್ ಅವರ ಮದುವೆಯ ಸಮಾರಂಭದಲ್ಲಿ ಟ್ರಂಪ್ ಅವರನ್ನು ಭೇಟಿಯಾದರು. ಇದನ್ನೂ ಓದಿ:  ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಇಲ್ಲ, ವದಂತಿ ಹಬ್ಬಿಸಿದ್ರೆ ಕಠಿಣ ಕ್ರಮ: ಡಾ. ಕೆ. ಸುಧಾಕರ್

    ಕುಶಲೋಪರಿಯಾಗಿ ಟ್ರಂಪ್ ಅವರೊಂದಿಗೆ ಮಾತನಾಡಿದ ಕೋರೆ ಅವರು, ಪ್ರಸ್ತುತ ಜಾಗತಿಕ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳ ಕುರಿತು ವಿಚಾರಗಳನ್ನು ಹಂಚಿಕೊಂಡರು. ಟ್ರಂಪ್ ಭೇಟಿಗೆ ಕೋರೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ರವಿಶಂಕರ್ ಭೂಪಲಾಪೂರ್ ಅವರು ಜೊತೆಗಿದ್ದರು.

  • ಆರೋಗ್ಯ ಕಾಪಾಡಿಕೊಳ್ಳಿ ಅಂದ್ರೆ ನಾನು ಜನ ಸೇವಕ ಅಂತಿದ್ರು- ಗೆಳೆಯನ ನೆನೆದು ಪ್ರಭಾಕರ್ ಕೋರೆ ಕಂಬನಿ

    ಆರೋಗ್ಯ ಕಾಪಾಡಿಕೊಳ್ಳಿ ಅಂದ್ರೆ ನಾನು ಜನ ಸೇವಕ ಅಂತಿದ್ರು- ಗೆಳೆಯನ ನೆನೆದು ಪ್ರಭಾಕರ್ ಕೋರೆ ಕಂಬನಿ

    ಬೆಳಗಾವಿ: ಕೇಂದ್ರ ಸಚಿವ ಸುರೇಶ್ ಅಂಗಡಿ ನಾನು ಉತ್ತಮ ಸ್ನೇಹಿತರಾಗಿದ್ದೆವು, ಕೊರೊನಾ ಬಳಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಮಾಸ್ಕ್ ಹಾಕಿಕೊಳ್ಳಿ ಎಂದು ಹೇಳುತ್ತಿದ್ದೆ. ಆದರೆ ಅವರು ನಾನು ಜನರ ಸೇವೆ ಮಾಡಲು ಬಂದವನು ಎನ್ನುತ್ತಿದ್ದರು ಎಂದು ಸುರೇಶ್ ಅಂಗಡಿ ಅಗಲಿಕೆ ಕುರಿತು ರಾಜ್ಯಸಭಾ ಸದಸ್ಯ, ಅವರ ಆಪ್ತ ಸ್ನೇಹಿತ ಪ್ರಭಾಕರ್ ಕೋರೆ ಕಂಬನಿ ಮಿಡಿದಿದ್ದಾರೆ.

    ಸುರೇಶ್ ಅಂಗಡಿಯವರ ಬೆಳಗಾವಿ ನಿವಾಸಕ್ಕೆ ದಂಪತಿ ಸಮೇತ ಭೇಟಿ ನೀಡಿ ಅವರ ತಾಯಿ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ವೇಳೆ ಸುರೇಶ್ ಅಂಗಡಿ ನೆನೆದು ಕಣ್ಣೀರು ಹಾಕಿದ್ದಾರೆ. ಸುರೇಶ್ ಅಂಗಡಿಯವರ ಆಕಸ್ಮಿಕ ನಿಧನದಿಂದ ದೇಶಕ್ಕೆ, ರಾಜ್ಯಕ್ಕೆ ದೊಡ್ಡ ಹಾನಿಯಾಗಿದೆ. ನಿಧನದ ನಂತರ ಅವರ ವ್ಯಕಿತ್ವ ಎಲ್ಲರಿಗೂ ಗೊತ್ತಾಗುತ್ತಿದೆ. ಅವರು ರೈಲ್ವೆ ಸಚಿವರಾದ ನಂತರ ಸಾಕಷ್ಟು ರೈಲುಗಳನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ಸ್ಮರಿಸಿದರು.

    ಅವರ 90 ವರ್ಷದ ತಾಯಿಯನ್ನು ನೋಡಿದರೆ ದುಃಖವಾಗುತ್ತದೆ. ಸುರೇಶ್ ಅಂಗಡಿ ಸೆ.11ರಂದು ಆಸ್ಪತ್ರೆಗೆ ದಾಖಲಾದ ನಂತರ 12 ರಂದು ಕರೆ ಮಾಡಿ ಅವರ ಜೊತೆ ಮಾತನಾಡಿದ್ದೆ. ಅವರು ನಿನ್ನೆಯೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬೇಕಿತ್ತು. ಆದರೆ ನಿನ್ನೆ ಹಾರ್ಟ್‍ನಲ್ಲಿ ಬ್ಲಾಕ್ ಆದ ಪರಿಣಾಮ ನಮ್ಮನ್ನ ಅಗಲಿದ್ದಾರೆ. ನಾನು ಅವರ ಮನೆಯಲ್ಲಿ ಮೂರು ತಿಂಗಳು ಇದ್ದೆ. ಪೂಜೆ ಪುನಸ್ಕಾರ ಮಾಡುತ್ತಿದ್ದರು. ನಮ್ಮ ದುರ್ದೈವ, ಬಹು ದೊಡ್ಡ ಅನ್ಯಾಯವಾಗಿದೆ ಎಂದು ಭಾವುಕರಾದರು.

    ನಾನು ಮೊದಲು ಬೇರೆ ಪಕ್ಷದಲ್ಲಿ ಇದ್ದರೂ ಒಳ್ಳೆಯ ಸ್ನೇಹಿತರಾಗಿದ್ದೆವು. ಇತ್ತೀಚೆಗೆ ಅವರಿಗೆ ಮಾಸ್ಕ್ ಹಾಕಿಕೊಂಡು, ಆರೋಗ್ಯ ಕಾಪಾಡಿಕೊಳ್ಳುವಂತೆ ಹೇಳಿದ್ದೆ. ಆಗ ಉತ್ತರಿಸಿ, ನಾನು ಜನರ ಸೇವೆ ಮಾಡಲು ಬಂದವನು ಎಂದು ಹೇಳಿದ್ದರು. ಕೊರೊನಾ ಈಗ ಹಳ್ಳಿ ಹಳ್ಳಿಗೂ ತಲುಪಿದೆ. ಜನ ಎಚ್ಚರದಿಂದ ಇರಬೇಕು, ಜನ ಜಾಗೃತರಾದರೆ ಮಾತ್ರ ಕೊರೊನಾ ಹರಡುವುದನ್ನು ತಡೆಗಟ್ಟಬಹುದು ಎಂದು ಅವರು ಸಲಹೆ ನೀಡಿದರು.

  • ರಾಜ್ಯ ಬಿಜೆಪಿಯಿಂದ ರಾಜ್ಯಸಭೆಗೆ ಮೂವರ ಹೆಸರು ಶಿಫಾರಸು

    ರಾಜ್ಯ ಬಿಜೆಪಿಯಿಂದ ರಾಜ್ಯಸಭೆಗೆ ಮೂವರ ಹೆಸರು ಶಿಫಾರಸು

    ಬೆಂಗಳೂರು: ರಾಜ್ಯಸಭಾ ಚುನಾವಣಾ ಕಣ ರಂಗೇರಿದೆ. ಈಗಾಗ್ಲೇ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿ ಫೈನಲ್ ಆಗಿದೆ. ಬಿಜೆಪಿ ಅಭ್ಯರ್ಥಿ ಆಯ್ಕೆ ಮಾತ್ರ ಬಾಕಿಯಿದೆ.

    ಬೆಂಗಳೂರಿನಲ್ಲಿ ಇಂದು ಸಂಜೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮೂವರ ಹೆಸರುಗಳನ್ನು ಬಿಜೆಪಿ ಹೈಕಮಾಂಡ್ ಶಿಫಾರಸು ಮಾಡಲಾಗಿದೆ. ಹಾಲಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಅಥವಾ ರಮೇಶ್ ಕತ್ತಿ, ಮತ್ತೊಂದು ಸ್ಥಾನಕ್ಕೆ ಉದ್ಯಮಿ ಪ್ರಕಾಶ್ ಶೆಟ್ಟಿ ಹೆಸರನ್ನು ರಾಜ್ಯ ಬಿಜೆಪಿ ಫೈನಲ್ ಮಾಡಿದೆ.

    ರಾಜ್ಯದ ಶಿಫಾರಸುಗಳನ್ನು ಆಧರಿಸಿ ಬಿಜೆಪಿ ಹೈಕಮಾಂಡ್ ಸೋಮವಾರದೊಳಗೆ ತೀರ್ಮಾನ ಕೈಗೊಳ್ಳಲಿದೆ. ಕೋರ್ ಕಮಿಟಿ ಸಭೆಗೂ ಮುನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದಲ್ಲಿ ಸಭೆಗಳ ಮೇಲೆ ಸಭೆ ನಡೆಸಲಾಗಿತ್ತು. ಈ ವೇಳೆ ಉತ್ತರ ಕರ್ನಾಟಕ ನಾಯಕರ ಜೊತೆ ಸಿಎಂ ಚರ್ಚೆ ನಡೆಸಿದ್ದರು.

    ಇತ್ತ ಕಾಂಗ್ರೆಸ್ ಪಾಳಯದಲ್ಲೂ ಎಲೆಕ್ಷನ್‍ಗೆ ಭರ್ಜರಿಯಾಗೇ ತಯಾರಿ ನಡೆಯುತ್ತಿದೆ. ರಾಜ್ಯಸಭೆ ಚುನಾವಣೆ ಹಾಗೂ ವಿಧಾನ ಪರಿಷತ್ ಷುನಾವಣೆ ಹಿನ್ನೆಲೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿದ್ದಾರೆ. ಸೋಮವಾರ ಬೆಳಗ್ಗೆ 9 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಸಿಎಲ್‍ಪಿ ಮೀಟಿಂಗ್ ನಡೆಯಲಿದೆ.

  • ರಾಜ್ಯಸಭಾ ಟಿಕೆಟ್- ಪ್ರಭಾಕರ ಕೋರೆ ಪರ ಡಿಸಿಎಂ ಲಕ್ಷ್ಮಣ ಸವದಿ ಬ್ಯಾಟಿಂಗ್

    ರಾಜ್ಯಸಭಾ ಟಿಕೆಟ್- ಪ್ರಭಾಕರ ಕೋರೆ ಪರ ಡಿಸಿಎಂ ಲಕ್ಷ್ಮಣ ಸವದಿ ಬ್ಯಾಟಿಂಗ್

    ಚಿಕ್ಕೋಡಿ: ಬಿಜೆಪಿಯಲ್ಲಿ ರಾಜ್ಯಸಭಾ ಟಿಕೆಟ್ ಗೊಂದಲದ ವಿಚಾರವಾಗಿ ಶಾಸಕ ಉಮೇಶ ಕತ್ತಿ ಕುಟುಂಬ ಹಾಗೂ ಸವದಿ ಕುಟುಂಬದ ನಡುವೆ ಯಾವುದೂ ಸರಿಯಿಲ್ಲ ಎಂಬುದನ್ನು ಸ್ವತಃ ಡಿಸಿಎಂ ಲಕ್ಷ್ಮಣ ಸವದಿ ಸಾಬೀತು ಪಡಿಸಿದ್ದಾರೆ.

    ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಸಭೆ ಟಿಕೆಟ್‍ನ್ನು ಹಾಲಿ ಇರುವ ಪ್ರಭಾಕರ ಕೋರೆ ಅವರಿಗೆ ನೀಡಬೇಕು ಎಂದು ಕೋರೆ ಪರ ಬ್ಯಾಟ್ ಬೀಸಿದ್ದಾರೆ.ಪ್ರಭಾಕರ ಕೋರೆ ಹಿರಿಯರು, ಅವರ ಬಗ್ಗೆ ಸಹಾನೂಭೂತಿ ಇರಲಿ. ಬೆಳಗಾವಿ, ಬಾಗಲಕೋಟೆ, ವಿಜಯಪೂರದ ಕೆಲ ಶಾಸಕರು ಕೋರೆ ಅವರನ್ನೇ ಮುಂದುವರೆಸುವಂತೆ ಸಿಎಂ ಯಡಿಯೂರಪ್ಪ ಬಳಿ ಮನವಿ ಮಾಡಿದ್ದೇವೆ ಎಂದು ಡಿಸಿಎಂ ಹೇಳಿದ್ದಾರೆ. ಆದರೂ ಈ ಬಗ್ಗೆ ಅಂತಿಮವಾಗಿ ಹೈ ಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು
    ಪರೋಕ್ಷವಾಗಿ ಮಾಜಿ ಸಂಸದ ರಮೇಶ ಕತ್ತಿ ರಾಜ್ಯಸಭೆ ಎಂಟ್ರಿಗೆ ಲಕ್ಷ್ಮಣ ಸವದಿ ವಿರೋಧ ವ್ಯಕ್ತಪಡಿಸಿದ್ದಾರೆ.

    ಪ್ರಭಾಕರ ಕೋರೆ ಅವರ ರಾಜ್ಯಸಭೆ ಟಿಕೆಟ್ ತಪ್ಪಿಸಿ ಮಾಜಿ ಸಂಸದ, ಸಹೋದರ ರಮೇಶ ಕತ್ತಿಗೆ ನೀಡುವಂತೆ ಶಾಸಕ ಉಮೇಶ ಕತ್ತಿ ಪಟ್ಟು ಹಿಡಿದಿದ್ದು, ಬೆಳಗಾವಿ ರಾಜಕಾರಣ ರಾಜ್ಯ ರಾಜಕಾರಣನ್ನು ಯಾವ ಹಂತಕ್ಕೆ ಕೊಂಡೊಯಲಿದೆ ಎಂಬುವದನ್ನ ಕಾದು ನೋಡಬೇಕಿದೆ.

    ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಉಮೇಶ ಕತ್ತಿ ಸಭೆ ನಡೆಸಿದ ವಿಚಾರವಾಗಿ ಮಾತನಾಡಿದ ಅವರು, ಕೇವಲ ಊಟಕ್ಕಾಗಿ ಅವರು ಸಭೆ ನಡೆಸಿದ್ದಾರೆ. ಅದಕ್ಕೆ ರೆಕ್ಕೆಪುಕ್ಕ ಕಟ್ಟುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

  • ಸಿಎಂ ರಿಲೀಫ್ ಫಂಡ್‍ಗೆ 2 ಕೋಟಿ ರೂ. ದೇಣಿಗೆ ನೀಡಿದ ಕೋರೆ

    ಸಿಎಂ ರಿಲೀಫ್ ಫಂಡ್‍ಗೆ 2 ಕೋಟಿ ರೂ. ದೇಣಿಗೆ ನೀಡಿದ ಕೋರೆ

    ಬೆಂಗಳೂರು: ಮುಖ್ಯಮಂತ್ರಿ ವಿಪತ್ತು ಪರಿಹಾರ ನಿಧಿಗೆ ರಾಜ್ಯಸಭಾ ಸದಸ್ಯ, ಕೆಎಲ್‍ಇ ಸಂಸ್ಥೆಯ ಅಧ್ಯಕ್ಷ ಪ್ರಭಾಕರ್ ಕೋರೆ 2 ಕೋಟಿ ರೂ. ದೇಣಿಗೆ ನೀಡಿದ್ದಾರೆ.

    ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಪ್ರಭಾಕರ್ ಕೋರೆ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಲ್ಲಿಸಿದ 2 ಕೋಟಿ ರೂ. ಚೆಕ್ ಸ್ವೀಕರಿಸಿದರು. ಈ ವೇಳೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವರಾದ ಜಗದೀಶ್ ಶೆಟ್ಟರ್, ರಮೇಶ್ ಜಾರಕಿಹೊಳಿ, ಶಾಸಕ ಮಹಾಂತೇಶ ಕವಟಗಿಮಠ ಇದ್ದರು. ಇದನ್ನೂ ಓದಿ:  ಕೊರೊನಾಗೆ ಆಂಟಿಬಾಡಿ ಸಿದ್ಧ – ಭಾರೀ ಪ್ರಮಾಣದಲ್ಲಿ ಉತ್ಪಾದನೆಗೆ ಮುಂದಾದ ಇಸ್ರೇಲ್

    ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗುವಂತೆ ಕಾಣುತ್ತಿಲ್ಲ. ಇಂದು ಒಂದೇ ದಿನ 20 ಜನರಿಗೆ ಸೋಂಕು ತಗುಲಿದೆ. ಈವರೆಗೂ 693 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ 29 ಮಂದಿ ಮೃತಪಟ್ಟರೆ, 354 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 309 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಗೋವಾದಲ್ಲಿ ಸಿಲುಕಿದ್ದ ಹತ್ತು ಸಾವಿರ ಮಂದಿ ಕರ್ನಾಟಕಕ್ಕೆ ವಾಪಸ್

  • ಪಿಎಲ್‍ಡಿ ಬ್ಯಾಂಕ್ ನಂತರ, ಇದೀಗ ಡಿಸಿಸಿ ಬ್ಯಾಂಕ್ ಚುನಾವಣೆ- ಕುಂದಾ ನಗರದ ಕದನ

    ಪಿಎಲ್‍ಡಿ ಬ್ಯಾಂಕ್ ನಂತರ, ಇದೀಗ ಡಿಸಿಸಿ ಬ್ಯಾಂಕ್ ಚುನಾವಣೆ- ಕುಂದಾ ನಗರದ ಕದನ

    ಬೆಂಗಳೂರು: ಒಂದು ವರ್ಷದ ಹಿಂದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬೆಳಗಾವಿ ಕಾಂಗ್ರೆಸ್ ಶಾಸಕರ ನಡುವೆ ಪಿಎಲ್‍ಡಿ ಬ್ಯಾಂಕ್ ಚುನಾವಣೆ ಕದನ ಜೋರಾಗಿತ್ತು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಾರಕಿಹೋಳಿ ಸಹೋದರರ ನಡುವೆ ಶುರುವಾದ ಜಟಾಪಟಿ ಅಂತಿಮವಾಗಿ ಸಮ್ಮಿಶ್ರ ಸರ್ಕಾರದ ಪಥನಕ್ಕೆ ಕಾರಣವಾಗಿತ್ತು.

    ಅದೇ ಬೆಳಗಾವಿಯಲ್ಲಿ ಈಗ ಡಿಸಿಸಿ ಬ್ಯಾಂಕ್ ಚುನಾವಣೆ ಗಲಾಟೆ ಗರಿಗೆದರಿದೆ. ಅಂದು ಕಾಂಗ್ರೆಸ್ ಶಾಸಕರ ನಡುವೆ ನಡೆದ ಕದನದ ರೀತಿಯಲ್ಲೇ ಬಿಜೆಪಿ ಶಾಸಕರ ನಡಯವೆಯೂ ಇದೀಗ ಫೈಟ್ ಆರಂಭವಾಗಿದೆ. ಬಿಜೆಪಿ ನಾಯಕರಾದ ಡಿಸಿಎಂ ಲಕ್ಷ್ಮಣ ಸವದಿ, ಪ್ರಭಾಕರ್ ಕೋರೆ ಹಾಗೂ ಸಂಸದ ಸುರೇಶ್ ಅಂಗಡಿ ಒಂದು ಕಡೆಯಾದರೆ ಬಿಜೆಪಿ ಶಾಸಕರು ಸಚಿವರಾದ ರಮೇಶ್ ಜಾರಕಿಹೊಳಿ, ಉಮೇಶ್ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೋಳಿ ಮತ್ತೊಂದು ಕಡೆ ನಿಂತಿದ್ದಾರೆ.

    ಎರಡೂ ಬಣದವರು ಬಿಜೆಪಿಯವರೇ ಆಗಿದ್ದರೂ, ಮಾರ್ಚ್ ತಿಂಗಳಲ್ಲಿ ನಡೆಯುವ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ತಮ್ಮ ಬಣವೇ ಗೆಲ್ಲಬೇಕು ಎನ್ನುವ ಜಿದ್ದಿಗೆ ಬಿದ್ದಿದ್ದಾರೆ. ಇದರ ಮಧ್ಯೆ ಲಕ್ಷಣ ಸವದಿಯವರನ್ನು ಡಿಸಿಎಂ ಆಗಿ ಮುಂದುವರಿಸಿದ್ದು ಜಾರಕಿಹೊಳಿ ಬಣಕ್ಕೆ ಇಷ್ಟ ಇರಲಿಲ್ಲ. ಅಲ್ಲದೆ ಉಮೇಶ್ ಕತ್ತಿಯವರನ್ನು ಸಚಿವರನ್ನಾಗಿ ಮಾಡದಿರುವುದು ಕತ್ತಿ ಬಣದ ಸಿಟ್ಟಿಗೆ ಕಾರಣವಾಗಿದೆ.

    ತಮ್ಮ ವಿರೋಧಿಗಳ ಸಿಟ್ಟನ್ನು ಅರಿತ ಡಿಸಿಎಂ ಲಕ್ಷ್ಮಣ್ ಸವದಿ ಪ್ರಭಾಕರ್ ಕೋರೆ ಹಾಗೂ ಸುರೇಶ್ ಅಂಗಡಿ ಜೊತೆ ಸೇರಿ ಶತಾಯಗತಾಯ ಕತ್ತಿ ಹಾಗೂ ಜಾರಕಿಹೋಳಿ ಗುಂಪಿಗೆ ಮುಖಭಂಗ ಮಾಡುವ ಪಣ ತೊಟ್ಟಿದ್ದಾರೆ. ಹೀಗೆ ಬೆಳಗಾವಿ ಅಖಾಡದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಗಲಾಟೆ ಜೋರಾಗುವ ಲಕ್ಷಣಗಳು ಕಾಣತೊಡಗಿವೆ. ಮೊದಲೇ ಸಚಿವ ಸ್ಥಾನ ಸಿಗದ ಸಿಟ್ಟು. ಡಿಸಿಎಂ ಪೋಸ್ಟ್ ಗಲಾಟೆ ಎಲ್ಲವೂ ಸೇರಿಕೊಂಡು ಪಿಎಲ್‍ಡಿ ಬ್ಯಾಂಕ್ ಗಲಾಟೆ ಮಾದರಿಯಲ್ಲೇ ಡಿಸಿಸಿ ಬ್ಯಾಂಕ್ ಚುನಾವಣೆ ಸರ್ಕಾರದ ಪಾಲಿಗೆ ಮಗ್ಗಲ ಮುಳ್ಳಾಗುತ್ತಾ ಎನ್ನುವ ಆತಂಕವಂತೂ ಬಿಜೆಪಿ ಪಾಳಯದಲ್ಲಿ ಮನೆ ಮಾಡಿದೆ.

  • ಪಾಕಿಸ್ತಾನ ಜಿಂದಾಬಾದ್ ಎಂದವ್ರಿಗೆ ಬೇಲ್- ಪ್ರಭಾಕರ್ ಕೋರೆ ಒತ್ತಡಕ್ಕೆ ಮಣೀತಾ ಸರ್ಕಾರ?

    ಪಾಕಿಸ್ತಾನ ಜಿಂದಾಬಾದ್ ಎಂದವ್ರಿಗೆ ಬೇಲ್- ಪ್ರಭಾಕರ್ ಕೋರೆ ಒತ್ತಡಕ್ಕೆ ಮಣೀತಾ ಸರ್ಕಾರ?

    – ಹಿಂದೂಪರ ಸಂಘಟನೆಗಳ ಪ್ರತಿಭಟನೆ

    ಹುಬ್ಬಳ್ಳಿ: ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಒಡೆತನದ ಹುಬ್ಬಳ್ಳಿಯ ಕೆಎಲ್‍ಇ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ದೇಶದ್ರೋಹದ ಕೇಸ್ ದಾಖಲಾಗಿದೆ. ಹಾಗಿದ್ದರೂ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ಕೋರ್ಟಿಗೂ ಹಾಜರುಪಡಿಸದೆ ಹುಬ್ಬಳ್ಳಿ ಪೊಲೀಸರು ಒಂದೇ ದಿನದಲ್ಲಿ ರಿಲೀಸ್ ಮಾಡಿದ್ದಾರೆ.

    ಕೆಎಲ್‍ಇ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಕಾಶ್ಮೀರದ ಅಮಿರ್, ತಾಲೀಬ್, ಬಾಸಿತ್‍ನನ್ನು ಸಿಆರ್‍ಪಿಸಿ ಸೆಕ್ಷನ್ 169ರ ಅಡಿಯಲ್ಲಿ ಶ್ಯೂರಿಟಿ ಬಾಂಡ್ ಮೇಲೆ ಗೋಕುಲ ಠಾಣಾ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಪೊಲೀಸರ ವಿಚಾರಣೆಗೆ ಸಹಕರಿಸುವಂತೆ ಸೂಚಿಸಿ ದೇಶದ್ರೋಹಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ವಿದ್ಯಾರ್ಥಿಗಳು ಬೇಲ್ ಮೇಲೆ ಬಿಡುಗಡೆಯಾಗಿರೋದು ಭಾರೀ ಚರ್ಚೆಗೆ ಕಾರಣವಾಗಿದೆ. ಇಂತಹ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಆಗಬೇಕು ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒತ್ತಾಯಿಸಿದ್ದರು.

    ಪ್ರಧಾನಿ ಮೋದಿ ಅವರನ್ನು ನಾಟಕವೊಂದರಲ್ಲಿ ಟೀಕಿಸಿದ್ರು ಅಂತ ಬೀದರ್‍ನ ಶಾಹೀನ್ ಶಾಲೆಯ ಶಿಕ್ಷಕಿ, ಮತ್ತು ಬಾಲಕಿಯ ತಾಯಿಯ ಮೇಲೆ ಇದೇ ರೀತಿ ದೇಶದ್ರೋಹದ ಕೇಸ್ ಹಾಕಿ ಕಂಬಿ ಎಣಿಸುವಂತೆ ಮಾಡಲಾಗಿತ್ತು. ಅವರಿಗೆ 16 ದಿನಗಳ ಕಾಲ ಬೇಲೇ ಸಿಕ್ಕಿರಲಿಲ್ಲ. ಸಿದ್ದರಾಮಯ್ಯ ಆದಿಯಾಗಿ ವಿಪಕ್ಷ ಮತ್ತು ಮುಸ್ಲಿಂ ನಾಯಕರು ಟೀಕೆ ಬಳಿಕ ಬೇಲ್ ಸಿಕ್ಕಿತ್ತು. ಆದರೆ ಕೆಎಲ್‍ಇ ಕಾಲೇಜ್‍ನ ಈ ದೇಶದ್ರೋಹಿ ವಿದ್ಯಾರ್ಥಿಗಳಿಗೆ ಮಾತ್ರ ಒಂದೇ ದಿನದಲ್ಲಿ ಬೇಲ್ ಪಡೆದುಕೊಂಡಿದ್ದಾರೆ. ಇದರ ಹಿಂದೆ ಕೆಎಲ್‍ಇಯ ಕೋರೆ ಮತ್ತು ಕಾಲೇಜು ಮಂಡಳಿಯ ಒತ್ತಡ ಇದೆ ಅಂತ ಚರ್ಚೆ ಆಗ್ತಿದೆ. ಈ ಸಂಬಂಧ, ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳು ಕಿಡಿಕಾರಿವೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಜೈ ಅಂದಿದ್ದ ದೇಶದ್ರೋಹಿ ಗ್ಯಾಂಗ್ ರಿಲೀಸ್

    ವಿಪಕ್ಷ ನಾಯಕರು ಮಾತ್ರವಲ್ಲ, ಹಿಂದೂಪರ ಸಂಘಟನೆಗಳೇ ದೇಶದ್ರೋಹಿ ವಿದ್ಯಾರ್ಥಿಗಳ ಬಿಡುಗಡೆಗೆ ಆಕ್ರೋಶ ವ್ಯಕ್ತಪಡಿಸಿವೆ. ಹುಬ್ಬಳ್ಳಿ ಗೋಕುಲ್ ಪೊಲೀಸ್ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ಆರಂಭ ಮಾಡಿದರು. ಪಾಕಿಸ್ತಾನ ಹಾಗೂ ಪೊಲೀಸ್ ಆಯುಕ್ತರ ಆರ್ ದಿಲೀಪ್ ವಿರುದ್ಧ ಘೋಷಣೆ ಕೂಗಿದರು. ಏರ್‍ಪೋರ್ಟ್ ರಸ್ತೆಯಲ್ಲಿ ಟೈರ್‍ಗೆ ಬೆಂಕಿ ಹಚ್ಚಿದರು. ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಪಾಕ್ ಪರ ಘೋಷಣೆ – ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಐದು ಪ್ರಕರಣ ದಾಖಲು

    ಪೊಲೀಸ್ ಆಯುಕ್ತ ಸ್ಥಳಕ್ಕೆ ಬರುವವರೆಗೆ ಧರಣಿ ಕೈಬಿಡಲ್ಲ ಎಂದು ಪಟ್ಟು ಹಿಡಿದರು. ಪೊಲೀಸರ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೀತು. ಸ್ಥಳಕ್ಕೆ ಆಗಮಿಸಿದ ಆಯುಕ್ತ ಆರ್ ದಿಲೀಪ್, ಸುಪ್ರೀಂ ಕೋರ್ಟ್ ಗೈಡಲೈನ್ ಪ್ರಕಾರ ಕೆಲಸ ಮಾಡ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಅಂತ ಕೇವಲ 30 ಸೆಕೆಂಡ್‍ನಲ್ಲೇ ಜಾಗ ಖಾಲಿ ಮಾಡಿದ್ರು. ಇದನ್ನೂ ಓದಿ: ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ವಿದ್ಯಾರ್ಥಿಗಳು ಅಮಾನತು

    ಆದರೆ ಪ್ರಧಾನಿ ಮೋದಿಯನ್ನು ಟೀಕಿಸಿದ್ದ ಮಾತ್ರಕ್ಕೇ ಶಾಹೀನ್ ಶಾಲೆ ಪ್ರಕರಣದಲ್ಲಿ 16 ದಿನ ಜೈಲಿಗೆ ಹಾಕಿಸಿದ್ದ ರಾಜ್ಯ ಸರ್ಕಾರ, ಕೆಎಲ್‍ಇ ಪ್ರಕರಣದಲ್ಲಿ ಯಾಕೆ ಈ ರೀತಿ ನಡೆದುಕೊಂಡಿದೆ ಅನ್ನೋದು ವ್ಯಾಪಕ ಚರ್ಚೆಗೀಡಾಗಿದೆ.

  • ದೀದಿ ಪ್ರಧಾನಿಯಾದ್ರೆ ಅವ್ರು ಹೇಳಿದ್ದ ಸೀರೆ ಉಡಬೇಕಾಗುತ್ತದೆ: ಪ್ರಭಾಕರ್ ಕೋರೆ

    ದೀದಿ ಪ್ರಧಾನಿಯಾದ್ರೆ ಅವ್ರು ಹೇಳಿದ್ದ ಸೀರೆ ಉಡಬೇಕಾಗುತ್ತದೆ: ಪ್ರಭಾಕರ್ ಕೋರೆ

    ಧಾರವಾಡ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿಯಾದರೆ ಅವರು ಹೇಳಿದ್ದೇ ಸೀರೆ ಉಡಬೇಕಾಗುತ್ತದೆ ಎಂದು ಬಿಜೆಪಿ ಮುಖಂಡ ಪ್ರಭಾಕರ್ ಕೋರೆ ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ ನಡೆದ ಗಣ್ಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ವೇಳೆ ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ನಾಯಕಿ ಮಾಯಾವತಿ ಅವರು ಪ್ರಧಾನಿಯಾದರೆ ಏನಾಗುತ್ತದೆ ಗೊತ್ತಾ? ಧಾರವಾಡಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬಸವೇಶ್ವರ ಮೂರ್ತಿ ಹಾಗೂ ಪ್ರತಿಮೆಗಳು ಗಾಯಬ್ ಆಗಿ ಎಲ್ಲಾ ಕಡೆ ಆನೆಗಳೇ ಬರುತ್ತವೆ. ಪಶ್ಚಿಮ ಬಂಗಾಳದ ಸಿಎಂ ದೀದಿ ಅವರು ಹೆಸರಿನಂತೆ ಮಮತಾ ಅಲ್ಲವೇ ಅಲ್ಲ ಎಂದು ಹೇಳಿದರು.

    ಸಿಎಂ ಕುಮಾರಸ್ವಾಮಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಕಾಂಗ್ರೆಸ್, ಜೆಡಿಎಸ್, ಎಸ್‍ಪಿ, ಬಿಎಸ್‍ಪಿ, ಟಿಎಂಸಿ, ಟಿಡಿಪಿ ನಾಯಕರು ಕೈ ಕೈ ಹಿಡಿದು ಒಂದಾದರು. ಆದರೆ ಅವರು ಒಂದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸುವುಕ್ಕಾಗಿಯೇ ಹೊರತು ದೇಶದ ಅಭಿವೃದ್ಧಿಗಾಗಿ ಅಲ್ಲ ಎಂದು ಮಹಾಮೈತ್ರಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

    ಪ್ರಧಾನಿಯಾಗುವೆ ಎನ್ನುವ ಯುವರಾಜನಿಗೆ ದೇಶದ ಬಗ್ಗೆ ಏನೂ ಗೊತ್ತಿಲ್ಲ. ಅವರ ಭಾಷಣವನ್ನು ನೀವು ಕೇಳಿದ್ದೀರಿ. ದೇಶದಲ್ಲಿ ಎಷ್ಟು ಜಾತಿ, ಧರ್ಮ ಇವೇ ಎನ್ನುವುದೇ ಅವರಿಗೆ ಗೊತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಗ್ಗೆ ಲೇವಡಿ ಮಾಡಿದರು.

  • ದೀಪಾವಳಿಗೆ ಮೊದಲೇ ದೋಸ್ತಿ ಸರ್ಕಾರ ಉರುಳೋದು ಸತ್ಯ: ಪ್ರಭಾಕರ್ ಕೋರೆ

    ದೀಪಾವಳಿಗೆ ಮೊದಲೇ ದೋಸ್ತಿ ಸರ್ಕಾರ ಉರುಳೋದು ಸತ್ಯ: ಪ್ರಭಾಕರ್ ಕೋರೆ

    ಬೆಳಗಾವಿ:  ದೋಸ್ತಿ ಸರ್ಕಾರ ಬಿದ್ದೋಗುತ್ತೆ ಅನ್ನುವ ಬಿಜೆಪಿಯವರ ಡೆಡ್‍ಲೈನ್ ಮತ್ತೆ ಮುಂದುವರಿದಿದೆ. ಭವಿಷ್ಯವಾಣಿ ನುಡಿದವರ ಸಾಲಿಗೆ ಈಗ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಸೇರ್ಪಡೆಯಾಗಿದ್ದಾರೆ. ದೀಪಾವಳಿಗೆ ಮೊದಲೇ ದೋಸ್ತಿ ಸರ್ಕಾರ ಉರುಳೋದು ಸತ್ಯ ಅಂತಿದ್ದಾರೆ.

    ದೋಸ್ತಿ ಸರ್ಕಾರದ ಹಲವರು ನಮ್ಮ ಸಂಪರ್ಕದಲ್ಲಿದ್ದಾರೆ. ನಾವು ಸರ್ಕಾರ ಮಾಡೋದು ಸೂರ್ಯ ಚಂದ್ರರಷ್ಟೇ ಸತ್ಯ ಎಂದು ಹೇಳುವ ಮೂಲಕ ಆಪರೇಷನ್ ಕಮಲ ಮುಂದುವರಿದೇ ಇದೆ ಅಂತ ಪರೋಕ್ಷವಾಗಿ ಹೇಳಿದ್ದಾರೆ. ಅಲ್ಲದೆ ಬಿಜೆಪಿಯಿಂದ 30 ಕೋಟಿ ಆಫರ್ ಬಂದಿತ್ತು ಅಂದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಂಥವರನ್ನ ಬಹಳ ಮಂದಿಯನ್ನ ನೋಡಿದ್ದೇನೆ ಅಂದರು.

    ಪಕ್ಷ ಸೇರುವಂತೆ ಬಿಜೆಪಿ ಮುಖಂಡರೇ ನನಗೆ ಫೋನ್ ಮಾಡಿ 30 ಕೋಟಿಯ ಆಫರ್ ನೀಡಿದ್ದರು. ಈ ವಿಚಾರವನ್ನು ನಮ್ಮ ಮುಖಂಡರ ಗಮನಕ್ಕೆ ತೆಗೆದುಕೊಂಡು ಬಂದೆ. ಬಿಜೆಪಿಯವರ ಮೆಸೇಜ್ ಗಳನ್ನು ಕೂಡ ನಮ್ಮ ಮುಖಂಡರಿಗೆ ತೋರಿಸಿದೆ. ಆ ಸಂದರ್ಭದಲ್ಲಿ ಡಾ. ಜಿ ಪರಮೇಶ್ವರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆವಾಗ ಅವರ ಬಳಿ ಎಲ್ಲವನ್ನು ಹೇಳಿಕೊಂಡಿದ್ದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಶುಕ್ರವಾರ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv