Tag: ಪ್ರಭಾಕರ್

  • ತಿಲಕ್ ನಟನೆಯ ಹೊಸ ಚಿತ್ರಕ್ಕೆ ‘ಉಸಿರು’ ಟೈಟಲ್

    ತಿಲಕ್ ನಟನೆಯ ಹೊಸ ಚಿತ್ರಕ್ಕೆ ‘ಉಸಿರು’ ಟೈಟಲ್

    ಆರ್‌.ಎಸ್‌.ಪಿ. ಪ್ರೊಡಕ್ಷನ್ಸ್  ಮೂಲಕ ಲಕ್ಷ್ಮಿ ಹರೀಶ್ ಅವರು ನಿರ್ಮಿಸುತ್ತಿರುವ ಉಸಿರು (Usiru) ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು. ನಟ ತಿಲಕ್, ಪ್ರಿಯಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ಪ್ರಭಾಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆರ್‌ಎಸ್‌ಪಿ ಗ್ರೂಪ್ ಆಫ್ ಕಂಪನೀಸ್ ನಡೆಸುತ್ತಿರುವ, ಲಕ್ಷ್ಮಿ ಹರೀಶ್ ಅವರು ನೂತನ ಪ್ರೊಡಕ್ಷನ್ ಹೌಸ್ ಆರಂಭಿಸಿ ಆ ಮೂಲಕ ಉಸಿರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸದ್ಯದಲ್ಲೇ  ಚಿತ್ರೀಕರಣ ಆರಂಭಿಸುತ್ತಿರುವ  ಈ ಚಿತ್ರದ ಪೋಸ್ಟರ್ ಅನಾವರಣ ಹಾಗೂ ಪತ್ರಿಕಾಗೋಷ್ಠಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು, ಒಬ್ಬ ಬೇಜವಾಬ್ದಾರಿ ಪೊಲೀಸ್ ಅಧಿಕಾರಿ, ತನ್ನ ಹೆಂಡತಿಗೆ ಅನಾಮಿಕ ವ್ಯಕ್ತಿಯಿಂದ ಪ್ರಾಣಕ್ಕೆ ಆಪತ್ತು ಬಂದಾಗ ಆತ ಪತ್ನಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ, ತನ್ನ ತಾಯಿಯನ್ನು ಕೊಂದವರ ಮೇಲೆ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾನೆ ಎಂಬುದನ್ನು ಉಸಿರು ಚಿತ್ರದ ಮೂಲಕ ನಿರ್ದೇಶಕ ಪ್ರಭಾಕರ್ (Prabhakar) ಹೇಳಹೊರಟಿದ್ದಾರೆ, ಸುಮಾರು 6 ತಿಂಗಳವರೆಗೆ ವರ್ಕ್ ಷಾಪ್ ನಡೆಸಿ ತಯಾರಾಗಿರುವ ಚಿತ್ರತಂಡ ಇದೇ ತಿಂಗಳ 17ರಿಂದ ಮಡಿಕೇರಿಯಲ್ಲಿ  ಚಿತ್ರದ ಮುಹೂರ್ತ ನಡೆಸಿ ಶೂಟಿಂಗ್ ಆರಂಭಿಸಲಿದೆ.

    ಈ ಸಂದರ್ಭದಲ್ಲಿ ನಿರ್ಮಾಪಕಿ ಲಕ್ಷ್ಮೀ ಹರೀಶ್ ಮಾತನಾಡುತ್ತ ನಮ್ಮ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ಪ್ರಥಮ ಚಿತ್ರವಿದು. ನಿರ್ದೇಶಕ ಪ್ರಭಾಕರ್ ನಮಗೆ ಬಹಳ ದಿನಗಳ ಪರಿಚಯ. ಅವರು ಈ ಥರ ಒಂದು ಕಥೆಯಿದೆ ಎಂದು ಹೇಳಿದ ಸ್ಟೋರಿ ಲೈನ್ ನಮಗೆ ಇಷ್ಟವಾಯ್ತು, ಹಾಗಾಗಿ ಚಿತ್ರ ನಿರ್ಮಾಣಕ್ಕೆ ಮುಂದಾದೆವು. ತಿಲಕ್ ಚಿತ್ರದ ನಾಯಕನಾಗಿ ನಟಿಸುತ್ತಿದ್ದು,  ಬೇರೆ ಶೂಟಿಂಗ್‌ನಲ್ಲಿರುವ ಕಾರಣ ಇವತ್ತು ಬಂದಿಲ್ಲ ಎಂದರು.

    ನಂತರ ನಿರ್ದೇಶಕ ಪ್ರಭಾಕರ್ ಮಾತನಾಡಿ  ನನ್ನ 12 ವರ್ಷಗಳ ಕನಸೀಗ ನನಸಾಗುತ್ತಿದೆ. ಈಗಾಗಲೇ ಒಂದೆರಡು ತಮಿಳು ಸಿನಿಮಾಗಳಿಗೆ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗುತ್ತಿದ್ದೇನೆ. ಇದೊಂದು ಸೈಕೋ ಥ್ರಿಲ್ಲರ್ ಕಥಾಹಂದರ ಇರುವ  ಚಿತ್ರವಾಗಿದ್ದು, “ಉಸಿರು” ಟೈಟಲ್ ನಮ್ಮ ಕಥೆಗೆ ಸೂಕ್ತವಾಗುತ್ತೆ ಅಂತ ಇಡಲಾಗಿದೆ. ಒಂದೊಳ್ಳೇ ಟೀಮ್ ಕಟ್ಟಿಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ ತಿಲಕ್ ಒಬ್ಬ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ, ನಾಯಕಿಯಾಗಿ ಪ್ರಿಯಾ ಹೆಗ್ಡೆ ಉಳಿದಂತೆ  ರಘು ರಮಣಕೊಪ್ಪ, ರಂಗಾಯಣ ರಘು  ನಟಿಸುತ್ತಿದ್ದಾರೆ,  ಮುಖ್ಯವಾಗಿ ಒಂಬತ್ತು ಪಾತ್ರಗಳ ಮೇಲೆ ಚಿತ್ರದ ಕಥೆ ಸಾಗುತ್ತದೆ. ಮೊದಲ ಹಂತದಲ್ಲಿ  ಮಡಿಕೇರಿ ಸುತ್ತಮುತ್ತ  15 ದಿನಗಳ ಚಿತ್ರೀಕರಣ  ನಡೆಸಿ, ನಂತರ ಬೆಂಗಳೂರಲ್ಲಿ ಮುಂದುವೆಸುತ್ತೇವೆ ಎಂದು ಹೇಳಿದರು.

     

    ಸಂಗೀತ ನಿರ್ದೇಶಕ ಆರ್‌ಎಸ್‌ಜಿ ನಾರಾಯಣ ಮಾತನಾಡುತ್ತ  ನನ್ನ ಸಿನಿ ಜರ್ನಿಯ 25ನೇ ವರ್ಷವಿದು, ಕಥೆಯಲ್ಲಿರುವ ಸನ್ನಿವೇಶಗಳು ನನಗೆ ತುಂಬಾ ಇಷ್ಟವಾಯ್ತು. ಬೇರೆ ಬೇರೆ ಜಾನರ್‌ನ ನಾಲ್ಕು ಹಾಡುಗಳನ್ನು ಕಂಪೋಜ್ ಮಾಡಿದ್ದು, ತುಂಬಾ ಚೆನ್ನಾಗಿ ಮೂಡಿಬಂದಿವೆ, ಅಭಿ ಅರ್ಥಗರ್ಭಿತವಾದ  ಲಿರಿಕ್ ಬರೆದಿದ್ದಾರೆ ಎಂದರು. ಚಿತ್ರದ ನಾಯಕಿ ಪ್ರಿಯಾ ಹೆಗ್ಡೆ ಮಾತನಾಡಿ ಚಿತ್ರದ  ಕಾನ್ಸೆಪ್ಟ್, ಟೈಟಲ್  ಎರಡೂ ಚೆನ್ನಾಗಿದೆ,  ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಎರಡು ಶೇಡ್ಸ್ ಇದೆ. ಈಗಾಗಲೇ ಕನ್ನಡದ ಜಿಲ್ಕಾ, ಕುದ್ರು ಅಲ್ಲದೆ  ಒಂದು ತೆಲುಗು ಚಿತ್ರದಲ್ಲೂ ಸಹ ಅಭಿನಯಿಸಿದ್ದೇನೆ ಎಂದು ಹೇಳಿದರು. ಮತ್ತೊಬ್ಬ ನಟ ಸಂತೋಷ್ ಮಾತನಾಡಿ ನಾನು ರಂಗಭೂಮಿಯಿಂದ ಬಂದವನು, ಇದು ನನ್ನ ಮೊದಲ ಚಿತ್ರವಾಗಿದ್ದು, ಪಾತ್ರ ತುಂಬಾ ಎಮೋಷನಲ್ ಪಾತ್ರವಿದೆ ಎಂದರು. ನಟಿ ಅಪೂರ್ವ ಮಾತನಾಡಿ ನಾನು ಭರತನಾಟ್ಯ ಕಲಾವಿದೆ, ರಂಗಭೂಮಿ ನಟಿ, ನಿರ್ದೇಶಕಿ ಕೂಡ ಎಂದು ಹೇಳಿದರು, ಮತ್ತೊಬ್ಬನಟ ಅರುಣ್, ಸಾಹಿತಿ, ಡೈಲಾಗ್ ರೈಟರ್ ಭೈರವರಾಮ(ಅಭಿ), ಸಂಕಲನಕಾರ ಹರೀಶ್ ಕೊಮ್ಮೆ ಎಲ್ಲರೂ ಚಿತ್ರದ ಕುರಿತಂತೆ ಮಾತನಾಡಿದರು.

  • ಟೈಗರ್ ಪ್ರಭಾಕರ್ ಹುಟ್ಟುಹಬ್ಬಕ್ಕೆ  ‘ಲಂಕಾಸುರ’ ಚಿತ್ರದ ವಿಶೇಷ ಟೀಸರ್

    ಟೈಗರ್ ಪ್ರಭಾಕರ್ ಹುಟ್ಟುಹಬ್ಬಕ್ಕೆ ‘ಲಂಕಾಸುರ’ ಚಿತ್ರದ ವಿಶೇಷ ಟೀಸರ್

    ನ್ನಡದ ಹೆಸರಾಂತ ನಟ, ಟೈಗರ್ ಖ್ಯಾತಿಯ ಪ್ರಭಾಕರ್ (Tiger Prabhakar) ಹುಟ್ಟು ಹಬ್ಬದ ದಿನ ಲಂಕಾಸುರ ಸಿನಿಮಾದ ವಿಶೇಷ ಟೀಸರ್ ರಿಲೀಸ್ ಆಗಿದೆ. ತಮ್ಮ ತಂದೆಯ ಹುಟ್ಟು ಹಬ್ಬದ ದಿನದಂದು ಟೀಸರ್ ರಿಲೀಸ್ ಮಾಡುವುದಾಗಿ ಪ್ರಭಾಕರ್ ಪುತ್ರ ವಿನೋದ್ ಟೀಸರ್ ರಿಲೀಸ್ ಮಾಡುವುದಾಗಿ ಘೋಷಿಸಿದ್ದರು. ಇದು ವಿನೋದ್ ಚೊಚ್ಚಲು ನಿರ್ಮಾಣದ ಸಿನಿಮಾವಾಗಿದ್ದರಿಂದ ಸಖತ್ ಪ್ಲ್ಯಾನ್ ಮಾಡಿಯೇ ಸಿನಿಮಾವನ್ನು ಜನರಿಗೆ ಅರ್ಪಿಸುತ್ತಿದ್ದಾರೆ.

    ‘ನಮ್ಮ ನಿರ್ಮಾಣ ಸಂಸ್ಥೆ ಟೈಗರ್ ಟಾಕೀಸ್ ಲಾಂಛನದಿಂದ ನಿರ್ಮಾಣವಾಗಿರುವ ಮೊದಲ ಚಿತ್ರ ಲಂಕಾಸುರದ (Lancasura) ವಿಶೇಷ ಟೀಸರ್ ಬಿಡುಗಡೆ ಆಗಿದೆ. ನಾವು ಈ ಚಿತ್ರ ಪ್ರಾರಂಭಿಸಿದ ದಿನದಿಂದಲೂ ನಮಗೆ ನೀವು ನೀಡುತ್ತಿರುವ ಪ್ರೋತ್ಸಾಹಕ್ಕೆ ನಾವು ಚಿರ ಖುಣಿ. ನಮಗೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ’ ಎನ್ನುತ್ತಾರೆ ವಿನೋದ್ ಪ್ರಭಾಕರ್ (Vinod Prabhakar) ಹಾಗೂ ನಿಶಾ ವಿನೋದ್ ಪ್ರಭಾಕರ್. ಇದನ್ನೂ ಓದಿ: ʻಪೊನ್ನಿಯಿನ್ ಸೆಲ್ವನ್-2ʼ ಟ್ರೈಲರ್ ರಿಲೀಸ್: ಚೋಳಾ ಸಾಮ್ರಾಜ್ಯಕ್ಕಾಗಿ ಮುಂದುವರೆದ ಹೋರಾಟ

    ಈಗಾಗಲೇ ಲಂಕಾಸುರ  ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳು ಕನ್ನಡ ಸಿನಿರಸಿಕರ ಮನ ಗೆದ್ದಿದೆ. ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ?  ಎಂಬ ಕಾತುರ ಅಭಿಮಾನಿಗಳಿಗಿದೆ.  ಅನುಭವಿ ಕಲಾವಿದರ ಅಭಿನಯ ಹಾಗೂ ಉತ್ತಮ ತಂತ್ರಜ್ಞರ ಕಾರ್ಯವೈಖರಿಯಲ್ಲಿ ಲಂಕಾಸುರ ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ.

    ಲಂಕಾಸುರ ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿದ್ದು, ವಿನೋದ್ ಪ್ರಭಾಕರ್ ಹೊಸ ಬಗೆಯ ಪಾತ್ರವನ್ನು ಮಾಡಿದ್ದಾರೆ. ಈ ಚಿತ್ರಕ್ಕಾಗಿಯೇ ಅವರು ವಿಶೇಷ ಗೆಟಪ್ ಕೂಡ ಹಾಕಿದ್ದಾರೆ. ಸಾಹಸ ಪ್ರಧಾನ ಚಿತ್ರವಾಗಿದ್ದು, ವಿಭಿನ್ನ ಕಥೆಯನ್ನು ಹೊತ್ತು ಪ್ರೇಕ್ಷಕರ ಮುಂದೆ ಬರಲಿದೆ.

  • ವೆಬ್ ಸರಣಿ ರೂಪದಲ್ಲಿ ಬರಲಿದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣ

    ವೆಬ್ ಸರಣಿ ರೂಪದಲ್ಲಿ ಬರಲಿದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣ

    ಮಾಜಿ ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಹತ್ಯೆಯ ಕುರಿತು ಕನ್ನಡದಲ್ಲಿ ಸಿನಿಮಾ ಬರುತ್ತಿದೆ ಎಂದು ಹಲವು ವರ್ಷಗಳಿಂದ ಸುದ್ದಿ ಆಗುತ್ತಲೇ ಇದೆ. ಆದರೂ, ಇನ್ನೂ ಅದಕ್ಕೆ ಮುಹೂರ್ತ ಕೂಡಿ ಬಂದಿಲ್ಲ. ಅಷ್ಟರಲ್ಲಿ ಹಿಂದಿಯಲ್ಲಿ ವೆಬ್ ಸರಣಿಯೊಂದು ಮೂಡಿ ಬರಲಿದೆ. ನಿರ್ದೇಶಕ ನಾಗೇಶ್ ಕುಕನೂರು (Nagesh Kukanur) ಈ ವೆಬ್ ಸರಣಿಯ ಸೂತ್ರಧಾರರಾಗಿದ್ದು, ಅಪ್ಲಾಸ್ ಎಂಟರ್ ಟೈನ್ಮೆಂಟ್ ಬ್ಯಾನರ್ ಅಡಿ ಈ ಸರಣಿ ನಿರ್ಮಾಣಗೊಳ್ಳಲಿದೆ.

    ಈಗಾಗಲೇ ರಾಜೀವ್ ಗಾಂಧಿ ಹತ್ಯೆಯ ಕುರಿತು ಅನೇಕ ಡಾಕ್ಯುಮೆಂಟರಿಗಳು, ಕೆಲವು ಸಿನಿಮಾಗಳಲ್ಲಿ ದೃಶ್ಯಗಳಾಗಿ ಹಾಗೂ ಈ ಕುರಿತು ಅನೇಕರು ಪುಸ್ತಕಗಳನ್ನು ಬರೆದಿದ್ದಾರೆ. ಇದೇ ಮೊದಲ ಬಾರಿಗೆ ವೆಬ್ ಸರಣಿ ರೂಪದಲ್ಲಿ ರಾಜೀವ್ ಗಾಂಧಿ ಹತ್ಯೆ ಜನರೆದುರು ಬರಲಿದೆ. ಈ ವೆಬ್ ಸರಣಿಗಾಗಿ ಪತ್ರಕರ್ತ ಅನಿರುದ್ಧ ಮಿತ್ರ ಬರೆದಿರುವ ‘90 ಡೇಸ್: ದಿ ಟ್ರು ಸ್ಟೋರಿ ಆಫ್ ದಿ ಹಂಟ್ ಫಾರ್ ರಾಜೀವ್ ಗಾಂಧಿ ಅಸಾಸಿನ್; ಪುಸ್ತಕವನ್ನು ಆಧರಿಸಲಾಗಿದೆ. ಇದನ್ನೂ ಓದಿ:ರಾಕೇಶ್‍ಗೆ ಸೋನು ಮೇಲೆ ಲವ್ವಾಗಿದ್ಯಾ? ಏನಿದು ಬಿಗ್‍ಬಾಸ್ ಮನೆಯಲ್ಲಿ ಹೊಸ ಕಹಾನಿ

    ಈ ವೆಬ್ ಸರಣಿಗೆ ಟ್ರೈಯಲ್ ಆಫ್ ಅಸಾಸಿನ್’ ಎಂದು ಹೆಸರಿಡಲಾಗಿದೆ. ರಾಜೀವ್ ಗಾಂಧಿ ಹತ್ಯೆಗೆ ಕಾರಣವಾದ ಅಂಶ, ಅದರ ಹಿಂದಿನ ರೂವಾರಿಗಳು, ಎಲ್‍ಟಿಟಿ ಪ್ರಭಾಕರನ್ (Prabhakar), ಅವರ ತಯಾರಿ ಹೀಗೆ ಏನೆಲ್ಲ ರೋಚಕ ಸಂಗತಿಗಳು ಇರಲಿವೆಯಂತೆ. ಅಲ್ಲದೇ, ರಾಜೀವ್ ಗಾಂಧಿ ಹತ್ಯೆಯ ನಂತರದ ಸಂಗತಿಗಳನ್ನು ಸೇರಿಸಲಿದ್ದಾರಂತೆ ನಿರ್ದೇಶಕರು. ಈಗಾಗಲೇ ಚಿತ್ರಕಥೆ ಕೂಡ ರೆಡಿಯಾಗಿದೆಯಂತೆ.

    Live Tv
    [brid partner=56869869 player=32851 video=960834 autoplay=true]

  • ಕಲ್ಲಡ್ಕ ಪ್ರಭಾಕರ್‍ ಭಟ್‍ಗೆ ಭಿಕ್ಷೆ ಬೇಡುವಂತಹ ಪರಿಸ್ಥಿತಿ ಬರಲಿದೆ: ರಮಾನಾಥ ರೈ

    ಕಲ್ಲಡ್ಕ ಪ್ರಭಾಕರ್‍ ಭಟ್‍ಗೆ ಭಿಕ್ಷೆ ಬೇಡುವಂತಹ ಪರಿಸ್ಥಿತಿ ಬರಲಿದೆ: ರಮಾನಾಥ ರೈ

    ಮಂಗಳೂರು: ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಅವರಿಗೆ ಭಿಕ್ಷೆ ಬೇಡುವಂತಹ ಪರಿಸ್ಥಿತಿ ಬರಲಿದೆ ಎಂದು ಅರಣ್ಯ ಸಚಿವ ರಮಾನಾಥ ರೈ ಅವರು ವಾಗ್ದಾಳಿ ನಡೆಸಿದ್ದಾರೆ.

    ಬಂಟ್ವಾಳ ತಾಲೂಕಿನ ಬಿಸಿ ರೋಡ್‍ನಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪ್ರಭಾಕರ್ ಭಟ್ ಅವರು ಜನರಲ್ಲಿ ಭಿಕ್ಷೆ ಕೇಳುತ್ತಿದ್ದಾರೆ. ಮಕ್ಕಳ ಕೈಯಲ್ಲಿ ತಟ್ಟೆ ಹಿಡಿದು ರಸ್ತೆಯಲ್ಲಿ ನಿಲ್ಲಿಸಿದ್ದಕ್ಕೆ ಇನ್ನು ಮುಂದೆ ಇವರೇ ತಟ್ಟೆ ಹಿಡಿದು ನಿಲ್ಲುವ ಪರಿಸ್ಥಿತಿ ಬರಲಿದೆ. ಭಿಕ್ಷೆ ಬೇಡುವಂಥ ಸ್ಥಿತಿ ಇವರಿಗೆ ಬರಲಿದೆ ಅಂತಾ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

    ನಾವು ಬಡವರ ಹೊಟ್ಟೆಗೆ ಮೇಲೆ ಹೊಡೆಯುವುದಿಲ್ಲ. ಮಕ್ಕಳು ತಟ್ಟೆ ಹಿಡಿಯ ಬೇಕಾಗಿಲ್ಲ ಇವರು ತಟ್ಟೆ ಹಿಡಿಯಬೇಕು. ಪ್ರಜ್ಞಾವಂತ ನಾಗರೀಕರು ಇವುಗಳನ್ನು ಅರ್ಥಮಾಡಿಕೊಳ್ಳಬೇಕು ಎಂದರು.

    ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವದ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಶ್ರೀದೇವಿ ವಿದ್ಯಾಕೇಂದ್ರಕ್ಕೆ ಸರ್ಕಾರ ಅನುದಾನ ಕಡಿತಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಎರಡೂ ವಿದ್ಯಾಕೇಂದ್ರಗಳ ವಿದ್ಯಾರ್ಥಿಗಳು ಆಗಸ್ಟ್ ನಲ್ಲಿ ಬಿಸಿ ರೋಡ್‍ನಲ್ಲಿ ತಟ್ಟೆ ಹಿಡಿದು ಬೃಹತ್ ಪ್ರತಿಭಟನೆ ನಡೆಸಿದ್ದರು.