Tag: ಪ್ರಪಾತ

  • ಅಂಕುಡೊಂಕಾದ ರಸ್ತೆಯಲ್ಲಿ ಚಲಿಸ್ತಿದ್ದ ವಾಹನ 400 ಅಡಿ ಪ್ರಪಾತಕ್ಕೆ

    ಅಂಕುಡೊಂಕಾದ ರಸ್ತೆಯಲ್ಲಿ ಚಲಿಸ್ತಿದ್ದ ವಾಹನ 400 ಅಡಿ ಪ್ರಪಾತಕ್ಕೆ

    – 6 ಮಂದಿ ಸಾವು, 18 ಜನರು ಗಂಭೀರ ಗಾಯ

    ಮುಂಬೈ: ಅಂಕುಡೊಂಕಾದ ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನವೊಂದು ಪ್ರಪಾತಕ್ಕೆ ಬಿದ್ದು, 6 ಮಂದಿ ಸಾವನ್ನಪ್ಪಿ 18 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ನಂದರ್‍ಬಾರ್‍ನಲ್ಲಿ ನಡೆದಿದೆ.

    ಈ ರಸ್ತೆ ಅಫಘಾತದಲ್ಲಿ ಸಾವನ್ನಪ್ಪಿದ 8 ಮಂದಿ ಝಾಪಿ ಫಲಾಯಿ ಗ್ರಾಮದವರಾಗಿದ್ದಾರೆ. 18 ಜನ ಗಾಯಾಳುಗಳಲ್ಲಿ 7 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.

    ಅಪಘಾತಕ್ಕಿಡಾದ ವಾಹನದಲ್ಲಿ ಸುಮಾರು 24 ಮಂದಿ ಕಾರ್ಮಿಕರು ಮಹೀಂದ್ರಾ ಮ್ಯಾಕ್ಸ್ ವಾಹನದಲ್ಲಿ ತೋರನ್ಮಾಲ್‍ರೆ ಹೋಗುತ್ತಿದ್ದರು. ಏಕಾಏಕಿ ವಾಹನವು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದ ಪರಿಣಾಮ ಈ ಅಪಘಾತ ಸಂಭವಿಸಿದೆ. 400 ಅಡಿ ಆಳದ ಪ್ರಪಾತಕ್ಕೆ ವಾಹನ ಬಿದ್ದಿದೆ. ವಾಹನದಲ್ಲಿ ಐವರು ಮಹಿಳೆಯರಿದ್ದರು. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಅಂಕುಡೊಂಕಾದ ಬೆಟ್ಟದ ಮಾರ್ಗದಲ್ಲಿ ವಾಹನ ಚಲಿಸುತ್ತಿರುವಾಗ ವಾಹನ ಚಾಲಕನ ನಿಯಂತ್ರಣವನ್ನು ಕಳೆದುಕೊಂಡು ಪ್ರಪಾತಕ್ಕೆ ಬಿದ್ದಿದೆ. ಇದರಿಂದ ಸಾವು ನೋವು ಸಂಭವಿಸಿದೆ. ಗಾಯಾಳುಗಳನ್ನು ನಂದೂರ್‍ಬಾರ್‍ನ ಸಿವಿಲ್ ಆಸ್ಪತ್ರೆ ಮತ್ತು ತೋರನ್ಮಲ್ ಗ್ರಾಮೀಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನಂದೂರ್ಬಾರ್ ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಪಂಡಿತ್ ಹೇಳಿದ್ದಾರೆ.

  • ನಿಯಂತ್ರಣ ತಪ್ಪಿ 30 ಅಡಿಯ ಪ್ರಪಾತಕ್ಕೆ ಉರುಳಿದ ಕಾರ್- ಮೂವರು ಸಾವು

    ನಿಯಂತ್ರಣ ತಪ್ಪಿ 30 ಅಡಿಯ ಪ್ರಪಾತಕ್ಕೆ ಉರುಳಿದ ಕಾರ್- ಮೂವರು ಸಾವು

    – ಇಬ್ಬರಿಗೆ ಗಂಭೀರ ಗಾಯ

    ತುಮಕೂರು: ಚಾಲಕನ ನಿಯಂತ್ರಣ ತಪ್ಪಿ ಕಾರ್ 30 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಇಬ್ಬರಿಗೆ ಗಂಭೀರ ಗಾಯವಾಗಿದೆ.

    ಜಿಲ್ಲೆಯ ಶಿರಾ ತಾಲೂಕಿನ ಹೊನ್ನೇಹಳ್ಳಿ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದ್ದು, ಎದುರಿನಿಂದ ಏಕಾಏಕಿ ವಾಹನ ಬಂದಿದೆ. ವಾಹನಕ್ಕೆ ಡಿಕ್ಕಿ ತಪ್ಪಿಸಲು ಹೋಗಿ ಕಾರ್ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಹ್ಯೂಂಡೈ ಐ-20 ಕಾರ್ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಕಾರಿನಲ್ಲಿದ್ದ ಬಸವರಾಜು ಸೇರಿದಂತೆ ಒಟ್ಟು ಮೂವರು ಸ್ಥಳದಲ್ಲೇ ಅಸುನೀಗಿದ್ದಾರೆ.

    ಮೃತರು ಶಿರಾ ತಾಲೂಕಿನ ಬರಗೂರು ಗ್ರಾಮದವರಾಗಿದ್ದು, ಕಾರಿನಲ್ಲಿದ್ದ ನವೀನ್ ಹಾಗೂ ಸಚಿನ್ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ಬುಕ್ಕಾ ಪಟ್ಟಣದ ಮರಡಿ ಗುಡ್ಡದಿಂದ ತಮ್ಮ ಮನೆಗೆ ವಾಪಸ್ಸಾಗುತ್ತಿದ್ದರು ಎನ್ನಲಾಗಿದೆ. ಶಿರಾ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಘಾಟಿಯಲ್ಲಿ ಹೋಗ್ತಿದ್ದಾಗ 100 ಅಡಿ ಆಳದ ಪ್ರಪಾತಕ್ಕೆ ಬಿತ್ತು ಬಸ್- 51 ಮಂದಿ ಸಾವು

    ಘಾಟಿಯಲ್ಲಿ ಹೋಗ್ತಿದ್ದಾಗ 100 ಅಡಿ ಆಳದ ಪ್ರಪಾತಕ್ಕೆ ಬಿತ್ತು ಬಸ್- 51 ಮಂದಿ ಸಾವು

    ಹೈದರಾಬಾದ್: ತೆಲಂಗಾಣ ಸಾರಿಗೆ ಇಲಾಖೆಯಲ್ಲಿ ಈ ಹಿಂದೆ ಎಂದೂ ನಡೆಯದ ಭಾರೀ ದುರಂತವೊಂದು ಸಂಭವಿಸಿದ್ದು, ಬಸ್ ಪ್ರಪಾತಕ್ಕೆ ಬಿದ್ದ ಪರಿಣಾಮ 51 ಮಂದಿ ಮೃತಪಟ್ಟಿದ್ದಾರೆ.

    83 ಜನ ಯಾತ್ರಿಗಳಿದ್ದ ಬಸ್ಸುವೊಂದು ಜಗ್ತಿಯಾಲ್ ಜಿಲ್ಲೆಯ ಕೊಂಡಗಟ್ಟು ಬೆಟ್ಟದ ಆಂಜನೇಯ ದೇವಸ್ಥಾನದಿಂದ ಮರಳುತ್ತಿತ್ತು. ಈ ವೇಳೆ ಶನಿವಾರಪೇಟೆ ಗ್ರಾಮದ ಸಮೀಪದ ಘಾಟ್‍ನಲ್ಲಿ ಬ್ರೇಕ್ ಫೇಲ್ ಆದ ಪರಿಣಾಮ ಪ್ರಪಾತಕ್ಕೆ ಜಾರಿ ಬಿದ್ದಿದೆ.

    ಅಪಘಾತದಲ್ಲಿ ಚಾಲಕ ಸೇರಿದಂತೆ 4 ಮಕ್ಕಳು, 21 ಜನ ಮಹಿಳೆಯರು ಹಾಗೂ 21 ಮಂದಿ ಪುರುಷರು ಮೃತಪಟ್ಟಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರು.

    ಚಿಕ್ಕಪುಟ್ಟ ಗಾಯವಾಗಿರುವವನ್ನು ಜಗ್ತಿಯಾಲ್ ಜಿಲ್ಲಾಸ್ಪತ್ರೆಗೆ, ಇನ್ನು ಸ್ಥಿತಿ ಗಂಭೀರವಾಗಿವ ಪ್ರಯಾಣಿಕರನ್ನು ಕರೀಂನಗರ ಹಾಗೂ ಹೈದರಾಬಾದ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಬೆಳಗ್ಗೆ 11.45 ಗಂಟೆಗೆ ದುರ್ಘಟನೆ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಎ.ಶರತ್ ತಿಳಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಸದಸ್ಯರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಪಾತಕ್ಕೆ ಜಾರಿ, ಪಲ್ಟಿ ಹೊಡೆದ ಕಾರು- 11 ಸಾವು

    ಪ್ರಪಾತಕ್ಕೆ ಜಾರಿ, ಪಲ್ಟಿ ಹೊಡೆದ ಕಾರು- 11 ಸಾವು

    ಶಿಮ್ಲಾ: ಪ್ರಪಾತಕ್ಕೆ ಕಾರು ಉರುಳಿ ಬಿದ್ದ ಪರಿಣಾಮ 11 ಜನರು ಮೃತಪಟ್ಟ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ರಾಣಿ ನಲ್ಲಾ ಪ್ರದೇಶದಲ್ಲಿ ನಡೆದಿದೆ.

    ಎತ್ತರ ರಸ್ತೆಯಿಂದ ಬಿದ್ದ ಕಾರು ಪಲ್ಟಿಹೊಡೆಯುತ್ತ ಕಲ್ಲಿನ ಬಂಡೆಯ ಮೇಲೆ ಬಿದ್ದಿದ್ದು, ಸಂಪೂರ್ಣ ಜಖಂಗೊಂಡಿದೆ. ಮೃತ ದೇಹ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

    ಇದಕ್ಕೂ ಮುನ್ನ ಮುಂಬೈನ ಪೋಳಾದ್ಪುರ್ ನಲ್ಲಿ ನಡೆದ ಘಟನೆಯೊಂದರಲ್ಲಿ ವಿಶ್ವವಿದ್ಯಾಲಯದ 33 ಸಿಬ್ಬಂದಿ ಮೃತಪಟ್ಟಿದ್ದರು. ಆದರೆ ಈ ದುರ್ಘಟನೆಯಲ್ಲಿ ಅದೃಷ್ಟವಶಾತ್ ಪ್ರಕಾಶ್ ಸಾವಂತ್ ಎಂಬವರು ಮಾತ್ರ ಬದುಕುಳಿದಿದ್ದರು.

    34 ಮಂದಿ ಪ್ರವಾಸ ಕೈಗೊಂಡಿದ್ದೇವು. ಈ ವೇಳೆ ಪೋಳಾದ್ಪುರ್ ಸಮೀಪದಲ್ಲಿ ಬಸ್ಸು ರಾಡಿಯಲ್ಲಿ ಜಾರಿ ಪ್ರಪಾತಕ್ಕೆ ಬಿದ್ದಿತ್ತು. ಇದರಿಂದಾಗಿ ಮರಗಳನ್ನು ತಾಕಿ, ಪಲ್ಟಿ ಹೊಡೆಯುತ್ತಿತ್ತು. ನಾನು ಹಾರಿ ಪ್ರಾಣ ಉಳಿಸಿಕೊಂಡೆ ಎಂದು ಪ್ರಕಾಶ್, ಮಾಧ್ಯಮಗಳ ಜೊತೆಗೆ ತಮ್ಮ ಅನುಭವ ಹಂಚಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 250 ಮೀ ಆಳದ ಪ್ರಪಾತಕ್ಕೆ ಬಿದ್ದ ಬಸ್: 14 ಸಾವು, 18 ಜನರ ಸ್ಥಿತಿ ಗಂಭೀರ

    250 ಮೀ ಆಳದ ಪ್ರಪಾತಕ್ಕೆ ಬಿದ್ದ ಬಸ್: 14 ಸಾವು, 18 ಜನರ ಸ್ಥಿತಿ ಗಂಭೀರ

    ಡೆಹ್ರಾಡೂನ್: 205 ಮೀ ಆಳದ ಪ್ರಪಾತಕ್ಕೆ ಬಸ್ ಉರುಳಿ ಬಿದ್ದ ಪರಿಣಾಮ 14 ಜನರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಉತ್ತರಾಖಂಡ ರಾಜ್ಯದ ತೆಹರಿ ಜಿಲ್ಲೆಯಲ್ಲಿ ನಡೆದಿದೆ.

    ಉತ್ತರಾಖಂಡದ ಸಾರಿಗೆ ನಿಗಮಕ್ಕೆ ಸೇರಿದ್ದ ಬಸ್ ಇದಾಗಿದ್ದು, ಉತ್ತರ ಕಾಶಿಯಿಂದ ಹರಿದ್ವಾರಕ್ಕೆ ಹೊರಟಿತ್ತು. ದಾರಿ ಮಧ್ಯದಲ್ಲಿ ಜಾರ್ಜ್ ಸಮೀಪದ ಸುಲೀಧರ್ ಪ್ರದೇಶದ ಎತ್ತರ ಪರ್ವತ ಶ್ರೇಣಿಯ ಕಡಿದಾದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ಉರುಳಿ ಬಿದ್ದಿದೆ. ಘಟನಾ ಸ್ಥಳದಲ್ಲಿಯೇ 14 ಜನರು ಮೃತಪಟ್ಟರೇ, 16 ಜನರು ಗಂಭೀರವಾಗಿ ಗಾಯಗೊಂಡಿದ್ದು, ಅದರಲ್ಲಿ 6 ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ.

    ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು, ಅಧಿಕಾರಿಗಳು ಹಾಗೂ ಎಸ್‌ಡಿಆರ್‌ಎಫ್ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಗಾಯಾಳುಗಳನ್ನು ಹೃಷಿಕೇಶದ ಎಐಐಎಂಎಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಅಪಘಾತದಲ್ಲಿ ಉತ್ತರಾಖಂಡ ರಾಜ್ಯ ಸರ್ಕಾರವು ಮೃತರ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದೆ.

  • ಚಾರ್ಮಾಡಿ ಘಾಟ್ ಬಳಿ 400 ಅಡಿ ಆಳದ ಕಂದಕಕ್ಕೆ ಬಿದ್ದ ಸ್ಕಾರ್ಪಿಯೋ- ಪವಾಡಸದೃಶವಾಗಿ ಬದುಕುಳಿದ ಪ್ರಯಾಣಿಕರು!

    ಚಾರ್ಮಾಡಿ ಘಾಟ್ ಬಳಿ 400 ಅಡಿ ಆಳದ ಕಂದಕಕ್ಕೆ ಬಿದ್ದ ಸ್ಕಾರ್ಪಿಯೋ- ಪವಾಡಸದೃಶವಾಗಿ ಬದುಕುಳಿದ ಪ್ರಯಾಣಿಕರು!

    ಚಿಕ್ಕಮಗಳೂರು: ಹಾಸನದಿಂದ ಮಂಗಳೂರಿಗೆ ಹೋಗುತ್ತಿದ್ದ ಸ್ಕಾರ್ಪಿಯೋ ಕಾರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಬಳಿ 400 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಆದ್ರೆ ಅದೃಷ್ಟವಶಾತ್ ಕಾರಿನಲ್ಲಿದ್ದ ಸುಳ್ಯ ಮೂಲದ ಗುರು ಹಾಗೂ ಬೆಳ್ತಂಗಡಿ ಮೂಲದ ಲೋಹಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನೂ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಕಾರು 400 ಅಡಿಯ ಪ್ರಪಾತಕ್ಕೆ ಬೀಳಲು ಮಳೆ ಹಾಗೂ ದಟ್ಟವಾದ ಮಂಜು ಕವಿದಿದ್ದೇ ಕಾರಣ ಎಂದು ಅಂದಾಜಿಸಲಾಗಿದೆ. 400 ಅಡಿಯ ಪ್ರಪಾತಕ್ಕೆ ಬಿದ್ದ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಇಂತಹ ಜಾಗದಲ್ಲಿ ಬಿದ್ರೂ ಪ್ರಯಾಣಿಕರು ಬದುಕಿರೋದು ಪವಾಡವೇ ಸರಿ.

    ಇದೀಗ ಸ್ಥಳಕ್ಕೆ ಆಗಮಿಸಿರೋ ಮೂಡಿಗೆರೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರನ್ನ ಮೇಲೆತ್ತಲು ಹರಸಾಹಸ ಪಡ್ತಿದ್ದಾರೆ. ಮಂಗಳೂರಿನಿಂದ ಅಥವಾ ಹಾಸನದಿಂದ ಬರಲಿರುವ ದೊಡ್ಡ ಕ್ರೇನ್‍ಗಾಗಿ ಕಾಯುತ್ತಿದ್ದಾರೆ.