Tag: ಪ್ರಧಾನಿ ಸ್ಥಾನ

  • ಮೋದಿ ಮತ್ತೆ ಪ್ರಧಾನಿ – ಉಚಿತ ಬಸ್ ಸೇವೆ ನೀಡಿ ಅಭಿಮಾನಿಗಳಿಂದ ಸಂಭ್ರಮ

    ಮೋದಿ ಮತ್ತೆ ಪ್ರಧಾನಿ – ಉಚಿತ ಬಸ್ ಸೇವೆ ನೀಡಿ ಅಭಿಮಾನಿಗಳಿಂದ ಸಂಭ್ರಮ

    ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಎರಡನೇ ಬಾರಿಗೆ ಪ್ರಧಾನಿ ಪಟ್ಟಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಉಚಿತ ಬಸ್ ಸೇವೆ ನೀಡಿ ಮೋದಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

    ಇಂದು ಸಂಜೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಹೀಗಾಗಿ ಮಂಗಳೂರಿನ ಕಿನ್ನಿಗೋಳಿಯ ಮೋದಿ ಅಭಿಮಾನಿಗಳು ಸಾರ್ವಜನಿಕರಿಗೆ ಉಚಿತ ಬಸ್ಸಿನ ವ್ಯವಸ್ಥೆ ಮಾಡಿದ್ದಾರೆ. ಕಿನ್ನಿಗೋಳಿ, ಮೂಡಬಿದ್ರೆ ಹಾಗೂ ಮಂಗಳೂರು ನಗರಕ್ಕೆ ಆಗಮಿಸುವ ಬಸ್ಸನ್ನು ಉಚಿತವಾಗಿ ಓಡಿಸಲು ಬುಕ್ ಮಾಡಿದ್ದಾರೆ.

    ಈ ಬಸ್ಸಿನ ಹೊರಗಡೆ ‘ಉಚಿತ ಬಸ್ ವ್ಯವಸ್ಥೆ’ಯೆಂದು ಬೋರ್ಡ್ ಹಾಕಲಾಗಿದೆ. ಈ ಮೂಲಕ ಮೋದಿ ಅಧಿಕಾರ ಸ್ವೀಕಾರದ ಹೆಸರಲ್ಲಿ ಜನಸಾಮಾನ್ಯರಿಗೆ ಉಚಿತದ ಕೊಡುಗೆ ನೀಡುತ್ತಿರುವ ಅಭಿಮಾನಿಗಳ ಕಾರ್ಯಕ್ಕೆ ಸ್ಥಳೀಯರು ಹಾಗೂ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • 26 ಕಿ.ಮೀ ದೀರ್ಘದಂಡ ನಮಸ್ಕಾರದ ಹರಕೆ ತೀರಿಸುತ್ತಿರುವ ‘ನಮೋ’ ಭಕ್ತ

    26 ಕಿ.ಮೀ ದೀರ್ಘದಂಡ ನಮಸ್ಕಾರದ ಹರಕೆ ತೀರಿಸುತ್ತಿರುವ ‘ನಮೋ’ ಭಕ್ತ

    ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಹಿನ್ನೆಲೆ 26 ಕಿಲೋಮೀಟರ್ ದೀರ್ಘ ದಂಡ ನಮಸ್ಕಾರ ಮಾಡುವ ಹರಕೆ ಹೊತ್ತುಕೊಂಡಿದ್ದ ನಮೋ ಅಭಿಮಾನಿಯೊಬ್ಬರು ಶ್ರದ್ಧೆಯಿಂದ ಹರಕೆ ತೀರಿಸುತ್ತಿದ್ದಾರೆ.

    ಬಳ್ಳಾರಿಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹನಸಿ ಗ್ರಾಮದ ನಿವಾಸಿ ರಾಜಣ್ಣ ಮೋದಿ ಮತ್ತೆ ಪ್ರಧಾನಿಯಾಗಲಿ ಎಂದು ಹರಕೆ ಕಟ್ಟಿಕೊಂಡಿದ್ದರಂತೆ. ಕೊಟ್ಟೂರಿನ ಶ್ರೀಗುರುಕೊಟ್ಟೂರೇಶ್ವ ದೇವರಿಗೆ ಮತ್ತೆ ಮೋದಿ ಪ್ರಧಾನಿಯಾದರೆ ದೀರ್ಘ ದಂಡ ನಮಸ್ಕಾರ ಮಾಡುತ್ತೇನೆ ಎಂದು ಹರಕೆ ಹೊತ್ತುಕೊಂಡಿದ್ದರು. ಲೋಕಸಮರದಲ್ಲಿ ಸ್ಪಷ್ಟ ಬಹುಮತ ಪಡೆದು ಮತ್ತೆ ಪ್ರಧಾನಿ ಪಟ್ಟವನ್ನು ಮೋದಿ ಅಲಂಕರಿಸುತ್ತಿರುವ ಹಿನ್ನೆಲೆ ಇಂದು 26 ಕಿಲೋಮೀಟರ್ ವರೆಗೂ ದೀರ್ಘ ದಂಡ ನಮಸ್ಕಾರ ಮಾಡುವ ಹರಕೆಯನ್ನು ನಮೋ ಭಕ್ತ ತೀರಿಸುತ್ತಿದ್ದಾರೆ. ಇದನ್ನೂ ಓದಿ:ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ – ರಂಗೋಲಿಯಲ್ಲಿ ಅರಳಿದ ಕಮಲ, ಮೋದಿ

    ರಾಜಣ್ಣ ಅವರಿಗೆ ಗ್ರಾಮಸ್ಥರು ಸಾಥ್ ನೀಡುತ್ತಿದ್ದಾರೆ. ಹನಸಿ ಗ್ರಾಮದಿಂದ ಕೊಟ್ಟೂರಿನ ಶ್ರೀಗುರುಕೊಟ್ಟೂರೇಶ್ವ ದೇವಸ್ಥಾನದವರೆಗೆ ಅಂದರೆ ಸುಮಾರು 26 ಕಿ.ಮೀ ದೀರ್ಘ ದಂಡ ನಮಸ್ಕಾರವನ್ನು ರಾಜಣ್ಣ ಮಾಡಿ ಹರಕೆ ತೀರಿಸಲು ಮುಂದಾಗಿದ್ದಾರೆ. ಇಂದು ಬೆಳಗ್ಗೆ 6 ಗಂಟೆಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ದೀರ್ಘದಂಡ ನಮಸ್ಕಾರ ಮಾಡುತ್ತ ಶ್ರೀಗುರುಕೊಟ್ಟೂರೇಶ್ವರ ದೇವಸ್ಥಾನದತ್ತ ರಾಜಣ್ಣ ಸಾಗುತ್ತಿದ್ದಾರೆ. ಇದನ್ನೂ ಓದಿ:2ನೇ ಬಾರಿಗೆ ಮೋದಿ ಪ್ರಮಾಣ ವಚನ- ಅಭಿಮಾನಿಯಿಂದ ಪ್ರತಿಮೆ ವಿತರಣೆ

    ಲೋಕಸಮರದಲ್ಲಿ ಜಯಭೇರಿ ಬಾರಿಸಿ ಮತ್ತೆ ನರೇಂದ್ರ ಮೋದಿ ಅವರು ಇಂದು ಎರಡನೇ ಬಾರಿ ಪ್ರಧಾನಿ ಪಟ್ಟವನ್ನ ಅಲಂಕರಿಸಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಮಾರು 6,500 ಮಂದಿ ಭಾಗಿಯಾಗುವ ನಿರೀಕ್ಷೆಗಳಿದ್ದು, ಕಾರ್ಯಕ್ರಮಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ರಾಪ್ಟ್ರಪತಿ ಹಾಗೂ ಪ್ರಧಾನಿ ತೀರ್ಮಾನದ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

    ಪ್ರಮುಖವಾಗಿ ಕಾರ್ಯಕ್ರಮಕ್ಕೆ ಬಂಗಾಳ ಇನಿಷಿಯೇಟಿವ್ ಫಾರ್ ಮಲ್ಟಿ ಸೆಕ್ಟರಲ್ ಟೆಕ್ನಿಕಲ್ ಅಂಡ್ ಎಕನಾಮಿಕ್ ಕೋ ಆಪರೇಷನ್ (ಬಿಮ್‍ಸ್ಟಿಕ್) ಸದಸ್ಯ ರಾಷ್ಟ್ರಗಳಿಗೆ ಆಹ್ವಾನ ನೀಡಲಾಗಿದೆ. ಬಾಂಗ್ಲಾದೇಶ, ಶ್ರೀಲಂಕಾ, ಮಾಯನ್ಮಾರ, ನೇಪಾಳ, ಭೂತಾನ್, ಥೈಲ್ಯಾಂಡ್ ರಾಷ್ಟ್ರಗಳ ಗಣ್ಯರು ಸೇರಿದಂತೆ ಶಾಂಘೈ ಕೋ ಆಪರೇಷನ್ ರಾಷ್ಟ್ರಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

  • ಅಧಿಕಾರದಲ್ಲಿ ಮುಂದುವರಿದಿದ್ದರೆ ಕಾಶ್ಮೀರ ಸಮಸ್ಯೆ ಎಚ್‍ಡಿಡಿಯಿಂದ ಪರಿಹಾರ ಆಗ್ತಿತ್ತು: ಪೇಜಾವರ ಶ್ರೀ

    ಅಧಿಕಾರದಲ್ಲಿ ಮುಂದುವರಿದಿದ್ದರೆ ಕಾಶ್ಮೀರ ಸಮಸ್ಯೆ ಎಚ್‍ಡಿಡಿಯಿಂದ ಪರಿಹಾರ ಆಗ್ತಿತ್ತು: ಪೇಜಾವರ ಶ್ರೀ

    ಉಡುಪಿ: ಸದಾ ಬಿಜೆಪಿ ಪರ ಮಾತನಾಡ್ತಾರೆ ಎಂದು ಟೀಕೆಗೆ ಒಳಪಡುವ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾಜಿ ಪ್ರಧಾನಿ ದೇವೇಗೌಡರನ್ನು ಹಾಡಿ ಹೊಗಳಿದ್ದಾರೆ. ಕಾಶ್ಮೀರ ಸಮಸ್ಯೆ ದೊಡ್ಡ ಗೌಡರಿಂದ ಪರಿಹಾರ ಆಗುತ್ತಿತ್ತು ಎಂದು ಹೇಳಿದ್ದಾರೆ.

    ಪೇಜಾವರ ಶ್ರೀಗಳ 88ನೇ ಜನ್ಮ ನಕ್ಷತ್ರ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿದ್ದರು. ಈ ವೇಳೆ ಪರಸ್ಪರ ಆರೋಗ್ಯ ವಿಚಾರಿಸಿಕೊಂಡು, ಗೌರವಾರ್ಪಣೆ ಮಾಡಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀಗಳು, ರಾಷ್ಟ್ರ ರಾಜಕಾರಣದಲ್ಲಿ ದೇವೇಗೌಡರು ಅತ್ಯಂತ ಹಿರಿಯರು. ಪ್ರಧಾನ ಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದರು. ದೇವೇಗೌಡರೇ ಪ್ರಧಾನಿಯಾಗಿದ್ದರೆ ಕಾಶ್ಮೀರ ಸಮಸ್ಯೆ ಬಗೆಹರಿಯಲು ಅವಕಾಶ ಇತ್ತು ಎಂದು ಹಾಡಿ ಹೊಗಳಿದರು.

    ದೇವೇಗೌಡರಿಗೆ ಆಶೀರ್ವಾದ ಮಾಡಿದ್ದೇನೆ. ದೇವೇಗೌಡರಿಗೆ ಪ್ರಧಾನಿಯಾಗಿ ಅಧಿಕಾರ ನಡೆಸಲು ಕಡಿಮೆ ಅವಧಿ ಸಿಕ್ಕಿತ್ತು. ಆದರೆ ಗೌಡರ ಕುಟುಂಬದಿಂದ ಹೆಚ್ಚಿನ ರಾಷ್ಟ್ರಸೇವೆ ಆಗಲಿ. ನಾವಿಬ್ಬರೂ ರಾಜಕೀಯ ವಿಚಾರ ಮಾತನಾಡಿಲ್ಲ. ಗೌಡರು ಬನ್ನಂಜೆ ಗೋವಿಂದಾಚಾರ್ಯರ, ಮಧ್ವಾಚಾರ್ಯರ ಚರಿತ್ರೆ ಕುರಿತ ಪುಸ್ತಕ ಓದುತ್ತಿದ್ದಾರೆ ಎಂದು ತಿಳಿಸಿದರು.

    ಗೌಡರ ಪತ್ನಿ ಚೆನ್ನಮ್ಮ ಅತ್ಯಂತ ಸರಳಜೀವಿ ಮಹಾನ್ ದೈವಭಕ್ತೆ. ಇಬ್ಬರಿಗೂ ಯಾವ ಶ್ರೀಮಂತಿಕೆ, ಆಡಂಭರ ಇಲ್ಲ. ಅಂದೂ ಇಂದೂ ಅದೇ ತರದ ಬಟ್ಟೆ ಧರಿಸುತ್ತಾರೆ ಎಂದು ಪೇಜಾವರ ಸ್ವಾಮೀಜಿ ಭಾರೀ ಪ್ರಶಂಸೆ ವ್ಯಕ್ತಗೊಳಿಸಿದರು. ಅಲ್ಲದೆ ತುರ್ತು ಪರಿಸ್ಥಿತಿ ಕಾಲದಲ್ಲಿ ಬಹಳ ಚರ್ಚೆ ಮಾಡಿದ್ದೆವು ಎಂದು ಗೌಡರ ಜೊತೆಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ದೇವೇಗೌಡರು, ಸ್ವಾಮೀಜಿಯ ಆಶೀರ್ವಾದ ಪಡೆದಿದ್ದೇನೆ, ಅವರಿಗೆ ಶುಭ ಹಾರೈಸಿದ್ದೇನೆ. ಮೂಳೂರಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿದ್ದೇನೆ. ರಾಜಕೀಯವಾಗಿ ಮಾತಾಡಲ್ಲ ಎಂದು ಹೇಳಿ ತೆರಳಿದರು. ಅಲ್ಲಿಂದ ಪತ್ನಿ ಸಮೇತರಾಗಿ ಕೃಷ್ಣಮಠಕ್ಕೆ ತೆರಳಿ ಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಮಾಡಿ, ಪರ್ಯಾಯ ಪಲಿಮಾರು ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.