Tag: ಪ್ರಧಾನಿ ನರೇಂದ್ರಮೋದಿ

  • ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಬ್ಯಾನರ್ಜಿಯನ್ನು ನಿಂದಿಸಿದ್ದ ನೀವು ಇದಕ್ಕೆ ಏನ್ ಹೇಳ್ತೀರಿ: ಮೋದಿ ವಿರುದ್ಧ ವಿಪಕ್ಷಗಳು ಕಿಡಿ

    ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಬ್ಯಾನರ್ಜಿಯನ್ನು ನಿಂದಿಸಿದ್ದ ನೀವು ಇದಕ್ಕೆ ಏನ್ ಹೇಳ್ತೀರಿ: ಮೋದಿ ವಿರುದ್ಧ ವಿಪಕ್ಷಗಳು ಕಿಡಿ

    ಗಾಂಧಿನಗರ: ಗುಜರಾತಿನ ಮೋರ್ಬಿ (Gujarat Morbi Bridge) ಜಿಲ್ಲೆಯಲ್ಲಿ ಸಂಭವಿಸಿದ ತೂಗು ಸೇತುವೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಇದರೊಂದಿಗೆ 100 ಮಂದಿ ನಾಪತ್ತೆಯಾಗಿದ್ದು, ತೀವ್ರ ಶೋಧಕಾರ್ಯ ನಡೆಯುತ್ತಿದೆ. ಈ ವೇಳೆ ಪ್ರಧಾನಿ ಮೋದಿ (Narendra Modi) ತವರಿನಲ್ಲಿ ನಡೆದ ಭೀಕರ ದುರಂತವನ್ನು 2016ರ ಮಧ್ಯ ಕೋಲ್ಕತ್ತಾದಲ್ಲಿ ನಡೆದ ಮೇಲ್ಸೇತುವೆ (Flyover) ಕುಸಿತಕ್ಕೆ ಹೋಲಿಸಿ ಟೀಕೆ ಮಾಡಲಾಗುತ್ತಿದೆ.

    ಈ ಕುರಿತು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಶುರುವಾಗಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

    2016ರಲ್ಲಿ ಪಶ್ಚಿಮ ಬಂಗಾಳದ ಚುನಾವಣಾ (West Bengal Election) ಸಂದರ್ಭದಲ್ಲಿ ಕೋಲ್ಕತ್ತಾದ ವಿವೇಕಾನಂದ ನಗರದ ಮೇಲ್ಸೇತುವೆ ಕುಸಿತವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಮಮತಾ ಬ್ಯಾನರ್ಜಿ ಅವರು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಸೇತುವೆ ಕುಸಿದ ಬಳಿಕ ಇದು ದೇವರ ಕಾರ್ಯ. ಇದು ಮೋಸದ ಕೃತ್ಯ, ವಂಚನೆಯ ಪರಿಣಾಮ, ಚುನಾವಣೆಯ ಸಮಯದಲ್ಲೇ ಕುಸಿದು ಬಿದ್ದಿದೆ. ನೀವು ಯಾವ ರೀ ಸರ್ಕಾರ ನಡೆಸುತ್ತೀದ್ದೀರಿ. ಇದು ನಿಜವಾಗಿಯೂ ಜನರಿಗೆ ದೇವರು ಕೊಟ್ಟ ಸಂದೇಶವಾಗಿದೆ ಎಂದು ಮೋದಿ ಅವರು ಮಮತಾ ಬ್ಯಾನರ್ಜಿ ಅವರನ್ನ ಟೀಕಿಸಿದ್ದರು.

    ಅವರು ಎಡಪಂಥೀಯರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಎಡ-ಬಲ ಹೇಗಾದರೂ ಇರಲಿ. ಮೊದಲು ಸಾಯುತ್ತಿರುವವರ ಬಗ್ಗೆ ಯೋಚಿಸಿ, ಸತ್ತವರನ್ನು ಗೌರವಿಸಿ ಎಂದು ಮೋದಿ ಕಿಡಿಕಾರಿದ್ದರು. ಈ ಮಾಹಿತಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಪ್ರತಿಪಕ್ಷದ ನಾಯಕರು ಪ್ರಧಾನಿ ಮೋದಿ ಅವರೇ ಇಂದು ನಿಮ್ಮ ತವರಿನಲ್ಲೇ ನಡೆದಿರುವ ಘಟನೆಗೆ ಏನು ಹೇಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವಿಜಯಪುರ ನಗರಪಾಲಿಕೆ ಚುನಾವಣೆ – ಬಿಜೆಪಿಗೆ ಸಿಂಹಪಾಲು

    ಟಿಎಂಸಿ (TMC) ನಾಯಕ ಮತ್ತು ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್ ಟ್ವೀಟ್ (Twitter) ಮಾಡಿದ್ದು, ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಮಮತಾ ಬ್ಯಾನರ್ಜಿ (Mamata Banerjee) ಅವರನ್ನು ನಿಂದಿಸಿದ್ದೀರಿ. ಈಗ ಗುಜರಾತ್‌ನಲ್ಲಿ ಹೊಸದಾಗಿ ನವೀಕರಿಸಿದ ಸೇತುವೆ ಕುಸಿತು 141 ಜನ ಸಾವನ್ನಪ್ಪಿದ್ದಾರೆ. ಮೋದಿ ಜೀ ಅವರೇ ಸತ್ತವರ ಬಗ್ಗೆ ಕೆಲವು ಹನಿ ಕಣ್ಣೀರು ಇರಲಿ ಎಂದು ಮೋದಿ ವಿರುದ್ಧ ಕಿಡಿಕಾರಿದ್ದಾರೆ.

    ಇನ್ನೂ 2016ರ ಘಟನೆಯನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿರುವ ಶಿವಸೇನಾ (Shivsena) ಸಂಸದೆ ಪ್ರಿಯಾಂಕಾ ಚತುರ್ವೇದಿ (Priyanka Chaturvedi), ಪಶ್ಚಿಮ ಬಂಗಾಳದಲ್ಲಿ ಸೇತುವೆ ಕುಸಿದಾಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇದು ದೇವರ ಕಾರ್ಯ, ವಂಚನೆಯ ಕೃತ್ಯ ಎಂದು ಹೇಳಿದ್ದನ್ನು ಗುಜರಾತಿನ ಘಟನೆ ನೆನಪಿಸುತ್ತದೆ ಎಂದು ಬರೆದು, 2016 ಘಟನೆಯ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 15-20 ಹುಡುಗರು ಉದ್ದೇಶಪೂರ್ವಕವಾಗಿ ಮೋರ್ಬಿ ಸೇತುವೆಯನ್ನು ಅಲುಗಾಡಿಸಿದ್ದೆ ದುರಂತಕ್ಕೆ ಕಾರಣ: ಪ್ರತ್ಯಕ್ಷದರ್ಶಿ

    2016ರ ಮಾರ್ಚ್ 31ರಂದು ಮಧ್ಯ ಕೋಲ್ಕತ್ತಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು 30 ಜನರು ಸಾವನ್ನಪ್ಪಿದ್ದರು. ಚುನಾವಣಾ ಸಂದರ್ಭದಲ್ಲಿ ನಡೆದಿದ್ದರಿಂದ ಪ್ರತಿ ಪಕ್ಷಗಳು ಇದನ್ನು ರಾಜಕೀಯವಾಗಿ ಬಳಸಿಕೊಂಡಿದ್ದವು.

    Live Tv
    [brid partner=56869869 player=32851 video=960834 autoplay=true]

  • ಶಾರ್ಟ್‌ಕಟ್‌ ರಾಜಕೀಯದ ಮೂಲಕ ಮತಗಳನ್ನು ಸೆಳೆಯುವುದು ತುಂಬಾ ಸುಲಭ: ಪ್ರಧಾನಿ ಮೋದಿ

    ಶಾರ್ಟ್‌ಕಟ್‌ ರಾಜಕೀಯದ ಮೂಲಕ ಮತಗಳನ್ನು ಸೆಳೆಯುವುದು ತುಂಬಾ ಸುಲಭ: ಪ್ರಧಾನಿ ಮೋದಿ

    ರಾಂಚಿ: ಶಾರ್ಟ್‌ಕಟ್‌ ರಾಜಕೀಯವೆಂಬುದು ದೊಡ್ಡ ಸವಾಲಾಗಿದೆ. ಶಾರ್ಟ್ಕಟ್ ಮೂಲಕ ಮತಗಳನ್ನು ಸೆಳೆಯುವುದು ತುಂಬಾ ಸುಲಭ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಜಾರ್ಖಂಡ್‌ನ ದೇವಘರ್‌ನಲ್ಲಿ ನಡೆದ ಬಿಜೆಪಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, `ಶಾರ್ಟ್‌ಕಟ್‌’ ರಾಜಕೀಯದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬುಮ್ರಾ ಬೌಲಿಂಗ್‌ ದಾಳಿಗೆ ತತ್ತರಿಸಿದ ಆಂಗ್ಲರು – ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ

    ಶಾರ್ಟ್‌ಕಟ್‌ ರಾಜಕೀಯವೇ ದೊಡ್ಡ ಸವಾಲಾಗಿದೆ. ಶಾರ್ಟ್‌ಕಟ್‌ಗಳ ಮೂಲಕ ಮತಗಳನ್ನು ಸೆಳೆಯುವುದು ತುಂಬಾ ಸುಲಭ. ಆದರೆ ಒಂದು ದೇಶವು ಶಾರ್ಟ್‌ಕಟ್‌ ರಾಜಕೀಯ ಅವಲಂಬಿಸಿದರೆ ಅದು ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗುತ್ತದೆ. ನಾವು ಅದರಿಂದ ದೂರವಿರಬೇಕು ಎಂದು ಎಚ್ಚರಿಸಿದ್ದಾರೆ.

    ನಂತರ ಪ್ರಧಾನಿ ನರೇಂದ್ರ ಮೋದಿ ಅವರು 16,800 ಕೋಟಿಗೂ ಅಧಿಕ ಮೊತ್ತದ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು. ಇದನ್ನೂ ಓದಿ: PSI ಹಗರಣದ ಹಿಂದೆ ಬೊಮ್ಮಾಯಿ, ಗೃಹಸಚಿವರಿದ್ದಾರೆ – ಸರ್ಕಾರದ ಕುಮ್ಮಕ್ಕಿಲ್ಲದೇ ಇದೆಲ್ಲಾ ಸಾಧ್ಯವೇ ಎಂದ ಸಿದ್ದರಾಮಯ್ಯ

    ಇದಕ್ಕೂ ಮುನ್ನ ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಬಾಬಾ ಬೈದ್ಯನಾಥ ದೇವಾಲಯದಲ್ಲಿ ವೇದ ಮಂತ್ರಗಳ ಪಠಣಗಳ ನಡುವೆ ಪ್ರಧಾನಿ ಮೋದಿ ಪ್ರಾರ್ಥನೆ ಸಲ್ಲಿಸಿದರು. ಪ್ರಧಾನಿ ಭೇಟಿಗಾಗಿ ದೇವಾಲಯವನ್ನು ದೀಪಗಳು ಮತ್ತು ಹೂವುಗಳಿಂದ ಅಲಂಕರಿಸಲಾಗಿತ್ತು. ದೇಗುಲದ ವಿಐಪಿ ಬಾಗಿಲು ತಲುಪಿದ ತಕ್ಷಣ 11 ಪುರೋಹಿತರ ಗುಂಪಿನಿಂದ ಶಂಖನಾದದ ನಡುವೆ ಪ್ರಧಾನಿ ಅವರನ್ನು ಸ್ವಾಗತಿಸಲಾಯಿತು.

    ಜಾರ್ಖಂಡ್ ರಾಜಧಾನಿಯಿಂದ ಸುಮಾರು 720 ಕಿಮೀ ದೂರದಲ್ಲಿರುವ ಈ ದೇವಾಲಯವು ಜುಲೈ 14 ರಂದು ಪ್ರಾರಂಭವಾಗುವ ಶ್ರಾವಣಿ ಮೇಳದ ಸಂದರ್ಭದಲ್ಲಿ ಪ್ರತಿವರ್ಷ ಸಾವಿರಾರು ಯಾತ್ರಿಕರನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಸಮ್ಮಿಶ್ರ ಸರ್ಕಾರ ವರ್ಗಾವಣೆ ದಂಧೆ ಬಿಟ್ಟು ಬೇರೇನೂ ಮಾಡ್ತಿಲ್ಲ: ಬಿಎಸ್‍ವೈ

    ಸಮ್ಮಿಶ್ರ ಸರ್ಕಾರ ವರ್ಗಾವಣೆ ದಂಧೆ ಬಿಟ್ಟು ಬೇರೇನೂ ಮಾಡ್ತಿಲ್ಲ: ಬಿಎಸ್‍ವೈ

    ಬಾಗಲಕೋಟೆ: ಸಮ್ಮಿಶ್ರ ಸರ್ಕಾರ ನೂರು ದಿನಗಳಲ್ಲಿ ವರ್ಗಾವಣೆ ದಂಧೆಯನ್ನು ಬಿಟ್ಟು ಬೇರೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

    ಮುಧೋಳ ಪಟ್ಟಣದಲ್ಲಿ ಶಾಸಕ ಮುರುಗೇಶ್ ನಿರಾಣಿಯವರ 53 ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರಿಗೆ ಶುಭಾಶಯ ಕೋರಿ ಮಾತನಾಡಿದ ಅವರು, ನನ್ನ ಪ್ರಕಾರ ಜೆಡಿಎಸ್ ಹಾಗೂ ಕಾಂಗ್ರೆಸ್ಸಿನ ಸಮ್ಮಿಶ್ರ ಸರ್ಕಾರ ಬಹಳ ದಿನ ಉಳಿಯೋದಿಲ್ಲ. ಸರ್ಕಾರ ಕೇವಲ ವರ್ಗಾವಣೆಯ ದಂಧೆಯಲ್ಲಿ ತೊಡಗಿಕೊಂಡಿದೆ. ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನ ಪೂರೈಸಿದ್ದರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲವೆಂದು ಕಿಡಿಕಾರಿದರು.

      

    ಕುಮಾರಸ್ವಾಮಿ ಸರ್ಕಾರ ಬದುಕಿದ್ದು ಸತ್ತಾಂತಾಗಿದೆ. ಸರ್ಕಾರದಲ್ಲಿ ವಸೂಲಿ ಬಾಜಿ ದಂಧೆ ನಡೆಯುತ್ತಿದೆ. ಸಾಲಮನ್ನಾ ಬಗ್ಗೆ ಸಿಎಂಗೆ ಸ್ಪಷ್ಟತೆ ಇಲ್ಲ. ಅವರು ದಿನಕ್ಕೊಂದು ಹೇಳಿಕೆ ನೀಡುತ್ತಾ ಪ್ರಚಾರದಲ್ಲಿದ್ದಾರೆ ಹೊರತು, ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಯತ್ನಿಸುತ್ತಿಲ್ಲ. ಅಧಿಕಾರಕ್ಕೆ ಬಂದು ನೂರು ದಿನವಾದರೂ, ಒಂದು ದಿನ ಸಹ ಉತ್ತರ ಕರ್ನಾಟಕದ ಭಾಗದಲ್ಲಿ ಪ್ರವಾಸ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

    ಯಡಿಯೂರಪ್ಪ ಸಿಎಂ ಆಗುತ್ತಾರೆ ಅಂತ ಕನಸು ಕಾಣುತ್ತಿದ್ದಾರೆ ಎನ್ನುವ ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸಿದ್ದರಾಮಯ್ಯನವರು ಹಗಲುಗನಸು ಕಾಣುತ್ತಿದ್ದಾರೋ, ಇಲ್ಲ ಯಡಿಯೂರಪ್ಪ ಹಗಲುಗನಸು ಕಾಣುತ್ತಿದ್ದಾರೋ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ. ಅಲ್ಲದೇ ನಮ್ಮ ಪಕ್ಷದ ಯಾವುದೇ ಮುಖಂಡರು ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಹೇಳಿಕೆಗಳನ್ನು ಹೇಳಬೇಡಿ ಎಂದು ವಿನಂತಿಸಿಕೊಂಡರು.

    ಸಿಎಂ ಕುಮಾರಸ್ವಾಮಿಯವರು ದೇವಸ್ಥಾನಗಳಿಗೆ ತೆರಳುತ್ತಿರುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಸಂಕಷ್ಟದಲ್ಲಿರುವ ರೈತರ ಹಾಗೂ ಸಂತ್ರಸ್ತರ ನೋವುಗಳನ್ನು ಕೇಳಬೇಕು. ಇವರ ಸರ್ಕಾರದಲ್ಲಿ ಯಾವುದೂ ಸರಿಯಿಲ್ಲ. ಪರಸ್ಪರ ಕಚ್ಚಾಟ ಶುರವಾಗಿದೆ. ಹೀಗಾಗಿ ಸಿದ್ದರಾಮಯ್ಯನವರು ಕಾಂಗ್ರೆಸ್ಸಿನ ಕೆಲವು ಶಾಸಕರಿಂದ ತಾವೇ ಮುಂದಿನ ಸಿಎಂ ಎಂಬ ಹೇಳಿಕೆಗಳನ್ನು ಹೇಳಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಸಮ್ಮಿಶ್ರ ಸರ್ಕಾರ ನೀರಿನ ಮೇಲೆ ಗುಳ್ಳೆ ಇದ್ದಂತೆ: ಜಗದೀಶ್ ಶೆಟ್ಟರ್

    ಸರ್ಕಾರದಲ್ಲಿ ಕಚ್ಚಾಟ ಇಲ್ಲದಿದ್ದರೆ, ಪುನಃ ಸಂಪುಟ ವಿಸ್ತರಣೆ ಯಾಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಈ ಸರ್ಕಾರ ಬಹಳ ದಿನ ಉಳಿಯಲ್ಲ ಅಂತ ನಾನು ಹೇಳುತ್ತಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಶಾಸಕರೇ ಹೇಳುತ್ತಿದ್ದಾರೆ. ಅಲ್ಲದೇ ಇವರ ಸರ್ಕಾರವು ಪ್ರಮುಖ ನಾಯಕರ ಫೋನ್ ಕದ್ದಾಲಿಕೆ ನಡೆಸುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಈ ವಿಚಾರದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.

    ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳದಿಂದ ಸಿದ್ದರಾಮಯ್ಯ ಸ್ಪರ್ಧೆವಿಚಾರ ಪ್ರಸ್ತಾಪಿಸಿದಾಗ, ಅವರು ಎಲ್ಲಿಂದಲಾದರೂ ಸ್ಪರ್ಧಿಸಲಿ, ನಮಗೇನು ವ್ಯತ್ಯಾಸವಾಗಲ್ಲ. ಎಲ್ಲಾ ಕಡೆ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಇನ್ನೂ ಹೆಚ್ಚಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ. ಅಲ್ಲದೇ ಈಗ ನಡೆದಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ರಾಜ್ಯದ ಶೇ 50 ಕ್ಕೂ ಹೆಚ್ಚು ಕಡೆ ನಮ್ಮ ಪಕ್ಷ ಅಧಿಕಾರ ಹಿಡಿಯಲಿದೆ ಎಂದು ಭವಿಷ್ಯ ನುಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv