Tag: ಪ್ರಧಾನಿ ನರೆಂದ್ರ ಮೋದಿ

  • ಸಿದ್ದಗಂಗಾ ಶ್ರೀಗಳ 114ನೇ ಹುಟ್ಟುಹಬ್ಬ – ಪ್ರಧಾನಿಗಳಿಂದ ಗೌರವ ಸಲ್ಲಿಕೆ

    ಸಿದ್ದಗಂಗಾ ಶ್ರೀಗಳ 114ನೇ ಹುಟ್ಟುಹಬ್ಬ – ಪ್ರಧಾನಿಗಳಿಂದ ಗೌರವ ಸಲ್ಲಿಕೆ

    ನವದೆಹಲಿ: ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ 114ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ.

    ಶಿವಕುಮಾರ ಸ್ವಾಮೀಜಿಯವರು ಪ್ರಖ್ಯಾತ ಲಿಂಗಾಯತ ವಿದ್ವಂಸರು, ಶಿಕ್ಷಣತಜ್ಞರು ಮತ್ತು ಪ್ರಸಿದ್ಧ ಸಿದ್ಧಗಂಗ ಮಠದ ಆಧ್ಯಾತ್ಮಿಕ ನಾಯಕರಾಗಿದ್ದರು. ಶಿವಕುಮಾರ ಸ್ವಾಮೀಜಿಯವರ ಉದಾತ್ತ ಆಲೋಚನೆಗಳು ಮತ್ತು ಆದರ್ಶಗಳು ಸ್ಪೂರ್ತಿದಾಯಕವಾದವುಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

    ಪವಿತ್ರವಾದಂತಹ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಯವರ ಜಯಂತಿಯಂದು ನಾನು ಅವರಿಗೆ ನಮಸ್ಕರಿಸುತ್ತೇನೆ. ಸಮಾಜಕ್ಕೆ ಸೇವೆ ಸಲ್ಲಿಸಲು ಹಾಗೂ ಬಡವರ ಆರೈಕೆಗಾಗಿ ಅವರು ಮಾಡಿದ ಅಸಂಖ್ಯಾತ ಪ್ರಯತ್ನಗಳು ವ್ಯಾಪಕವಾಗಿ ನೆನಪಿನಲ್ಲಿವೆ. ಅವರ ಉದಾತ್ತ ಆಲೋಚನೆಗಳು ಮತ್ತು ಆದರ್ಶಗಳಿಂದ ನಾವು ಆಳವಾಗಿ ಪ್ರೇರಿತರಾಗಿದ್ದೇವೆ ಎಂದು ಕ್ಯಾಪ್ಷನ್ ಹಾಕುವ ಮೂಲಕ ಟ್ವೀಟ್ ಮಾಡಿದ್ದಾರೆ.