Tag: ಪ್ರಧಾನಿಗೆ ಭದ್ರತಾ ವೈಫಲ್ಯ

  • ಪ್ರಧಾನಿ ಭದ್ರತೆಯಲ್ಲಿ ಲೋಪ – ನಿವೃತ್ತ ಜಡ್ಜ್‌ ಇಂದೂ ಮಲ್ಹೋತ್ರಾ ನೇತೃತ್ವದ ಸಮಿತಿ ರಚನೆ

    ಪ್ರಧಾನಿ ಭದ್ರತೆಯಲ್ಲಿ ಲೋಪ – ನಿವೃತ್ತ ಜಡ್ಜ್‌ ಇಂದೂ ಮಲ್ಹೋತ್ರಾ ನೇತೃತ್ವದ ಸಮಿತಿ ರಚನೆ

    ನವದೆಹಲಿ: ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಪಂಜಾಬ್‌ಗೆ ಆಗಮಿಸಿದ್ದಾಗ ಪ್ರಧಾನಿ ಮೋದಿ ಅವರ ಭದ್ರತೆ ಲೋಪ ಪ್ರಕರಣಕ್ಕೆ  ಸಂಬಂಧಿಸಿದಂತೆ ತನಿಖೆ ನಡೆಸಲು ನಿವೃತ್ತ ಸುಪ್ರೀಂ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ಸುಪ್ರೀಂ ಕೋರ್ಟ್‌ ರಚಿಸಿದೆ.

    ಈ ಕುರಿತು ಬುಧವಾರ ಮಾಹಿತಿ ನೀಡಿದ ಸುಪ್ರೀಂ ಕೋರ್ಟ್‌, ರಾಷ್ಟ್ರೀಯ ತನಿಖಾ ಸಂಸ್ಥೆ (ಐಎನ್‌ಎ) ಹಾಗೂ ಪಂಜಾಬ್‌ ಪೊಲೀಸರು ಸಹ ತನಿಖೆಯ ಭಾಗವಾಗಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಪ್ರಧಾನಿಗೆ ಭದ್ರತಾ ವೈಫಲ್ಯ – ನಿವೃತ್ತ ನ್ಯಾಯಾಧೀಶರ ಸಮಿತಿಯಿಂದ ತನಿಖೆ

    ಇಲ್ಲಿ ಏಕಪಕ್ಷೀಯವಾಗಿ ತನಿಖೆ ನಡೆಯುವ ಪ್ರಶ್ನೆಯೇ ಬರುವುದಿಲ್ಲ. ನಮಗೆ ಸ್ವತಂತ್ರವಾಗಿ ನಡೆಸಿದ ತನಿಖೆ ಅಗತ್ಯವಿದೆ. ಸಮಿತಿಯು ತನಿಖಾ ವರದಿಯನ್ನು ಆದಷ್ಟು ಬೇಗ ಸಲ್ಲಿಸಲಿದೆ ಎಂದು ಕೋರ್ಟ್‌ ಹೇಳಿದೆ.

    ಪ್ರಧಾನಿಗೆ ಭದ್ರತಾ ವೈಫಲ್ಯಕ್ಕೆ ಕಾರಣವೇನು, ಅದಕ್ಕೆ ಯಾರು ಹೊಣೆಗಾರರು, ಭವಿಷ್ಯದಲ್ಲಿ ಇಂತಹ ಲೋಪಗಳನ್ನು ತಡೆಗಟ್ಟಲು ಯಾವ ಬಗೆಯ ರಕ್ಷಣಾತ್ಮಕ ಕ್ರಮಗಳ ಅಗತ್ಯವಿದೆ ಎಂಬುದರ ಬಗ್ಗೆ ತನಿಖೆ ನಡೆಸಿ ಸಮಿತಿಯು ವರದಿ ನೀಡಲಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಭದ್ರತಾ ವೈಫಲ್ಯ -150 ಅಪರಿಚಿತರ ವಿರುದ್ಧ ಎಫ್‌ಐಆರ್‌

    ತನಿಖಾ ಸಮಿತಿಯಲ್ಲಿ ಎನ್‌ಐಎ ಮಹಾನಿರ್ದೇಶಕ, ಚಂಡೀಗಢ ಪೊಲೀಸ್‌ ಮುಖ್ಯಸ್ಥ, ಪಂಜಾಬ್‌ನ ಎಡಿಜಿಪಿ ಹಾಗೂ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರರ್‌ ಜನರಲ್‌ ಅವರು ಸದಸ್ಯರಾಗಿದ್ದಾರೆ.

    ಕಳೆದ ವಾರ ಪ್ರಧಾನಿ ಮೋದಿ ಅವರು ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಪಂಜಾಬ್‌ಗೆ ಭೇಟಿ ನೀಡಿದ್ದರು. ಫಿರೋಜ್‌ಪುರ ಬಳಿ ರಸ್ತೆ ಮಾರ್ಗವಾಗಿ ತೆರಳುತ್ತಿದ್ದಾಗ ಪ್ರತಿಭಟನೆ ಕಾರಣದಿಂದಾಗಿ ಸುಮಾರು 20 ನಿಮಿಷಗಳ ಕಾಲ ರಸ್ತೆಯಲ್ಲಿ ಪ್ರಧಾನಿ ಸಿಲುಕಿದ್ದರು. ಇದು ಭದ್ರತಾ ಲೋಪ ಎಂದು ಕೇಂದ್ರ ಗೃಹ ಸಚಿವಾಲಯ ಗಂಭೀರ ಆರೋಪ ಮಾಡಿತ್ತು. ನಂತರ ಈ ವಿಚಾರ ರಾಜಕೀಯ ತಿರುವು ಪಡೆದುಕೊಂಡಿತು. ಇದನ್ನೂ ಓದಿ: ಪ್ರಧಾನಿ ಮೋದಿ ಪ್ರಯಾಣದ ಮಾಹಿತಿಯನ್ನು ಸಂರಕ್ಷಿಸಲು ಸುಪ್ರೀಂಕೋರ್ಟ್ ಸೂಚನೆ

    ಪ್ರಕರಣದ ತನಿಖೆಗೆ ಪಂಜಾಬ್‌ ಸರ್ಕಾರ ಹಾಗೂ ಕೇಂದ್ರ ಗೃಹ ಸಚಿವಾಲಯ ಪ್ರತ್ಯೇಕ ಸಮಿತಿ ರಚಿಸಿದ್ದವು. ಆದರೆ ಈ ವಿಚಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು. ಈ ಹಿನ್ನೆಲೆಯಲ್ಲಿ ಎರಡೂ ಸಮಿತಿಗಳ ತನಿಖೆಗೆ ಸುಪ್ರೀಂ ತಡೆ ನೀಡಿತು. ಈಗ ಸ್ವತಂತ್ರ ತನಿಖಾ ತಂಡವನ್ನು ಸುಪ್ರೀಂ ಕೋರ್ಟ್‌ ರಚಿಸಿದೆ.

  • ಪ್ರಧಾನಿಗೆ ಭದ್ರತಾ ವೈಫಲ್ಯ –  ನಿವೃತ್ತ ನ್ಯಾಯಾಧೀಶರ ಸಮಿತಿಯಿಂದ ತನಿಖೆ

    ಪ್ರಧಾನಿಗೆ ಭದ್ರತಾ ವೈಫಲ್ಯ – ನಿವೃತ್ತ ನ್ಯಾಯಾಧೀಶರ ಸಮಿತಿಯಿಂದ ತನಿಖೆ

    ನವದೆಹಲಿ: ಪಂಜಾಬ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ವೇಳೆ ಉಂಟಾದ ಭದ್ರತಾ ಲೋಪದ ತನಿಖೆಯನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಶೀಘ್ರವೇ ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಂಬಂಧಿಸಿದೆ.

    ಪ್ರಧಾನಿ ಮೋದಿಯವರ ಪಂಜಾಬ್ ಭೇಟಿ ವೇಳೆ ಉಂಟಾಯಿತು ಎನ್ನಲಾದ ಭದ್ರತಾ ಲೋಪಕ್ಕೆ ನ್ಯಾಯಾಲಯ ಸಲ್ಲಿಸಿದ ಮೇಲ್ವಿಚಾರಣೆಯ ತನಿಖೆಯ ಕೋರಿ ಅರ್ಜಿಯನ್ನು ಸಿಜೆಐ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಹಿಮಾ ಕೊಹ್ಲಿ ಅವರ ಪೀಠದ ವಿಚಾರಣೆ ನಡೆಸಿತು. ಇದನ್ನೂ ಓದಿ: ಪ್ರಧಾನಿ ಭದ್ರತೆ ವಿಚಾರದಲ್ಲಿ ಅವರಿಗೇಕೆ ಮಾಹಿತಿ ನೀಡಲಾಗಿದೆ? – ಚರಣ್‌ಜಿತ್ ಸಿಂಗ್ ಚನ್ನಿ ವಿರುದ್ಧ ಬಿಜೆಪಿ ಕಿಡಿ

    ಪಂಜಾಬ್ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಡಿ.ಎಸ್.ಪಟ್ವಾಲಿಯ, ಪ್ರಧಾನಿಯವರ ಪ್ರಯಾಣದ ವಿವರಗಳನ್ನು ಹೈಕ ರಿಜಿಸ್ಟ್ರಾರ್ ಜನರಲ್ ಅವರು ದಾಖಲಿಸಿದ್ದಾರೆ ಎಂದು ಪ್ರಕಟಿಸಿದ್ದಾರೆ.

    ರಾಜ್ಯದ ಏಳು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಈ ನೋಟಿಸ್‌ಗಳು ಎಲ್ಲಿಂದ ಬಂದಿವೆ? ಹೀಗಿದ್ದಮೇಲೆ ಯಾವುದೇ ವಿಚಾರಣೆಯ ಅಗತ್ಯವಿಲ್ಲ. ತನಿಖೆಗೆ ಕೇಂದ್ರ ಸರ್ಕಾರ ರಚಿಸಿರುವ ಸಮಿತಿಯಿಂದ ನಮಗೆ ನ್ಯಾಯ ಸಿಗುವುದಿಲ್ಲ. ಹೀಗಾಗಿ ಸ್ವತಂತ್ರ ತನಿಖೆಗೆ ಕೋರ್ಟ್ ನಿರ್ದೇಶನ ಎಂದು ಮನವಿ ಮಾಡಿದರು. ಇದನ್ನೂ ಓದಿ: ಪ್ರಧಾನಿ ಮೋದಿ ಭದ್ರತಾ ವೈಫಲ್ಯ -150 ಅಪರಿಚಿತರ ವಿರುದ್ಧ ಎಫ್‌ಐಆರ್

    ಕೇಂದ್ರದ ಪರ ವಾದ ಮಂಡಿಸಿದ ಸಾಲಿಸಿಟರ್ಲ್ ತುಷಾರ್ ಮೆಹ್ತಾ, ಪ್ರಧಾನಿಗಳ ಪ್ರಯಾಣಕ್ಕೆ ವಿಶೇಷ ರಕ್ಷಣಾ ಪಡೆಯ (ಎಸ್‌ಎಸ್‌ಪಿಜಿ) ಬ್ಲೂ ಬುಕ್ ಕುರಿತು ಜನಪದಕ್ಕೆ ಸಂಬಂಧಿಸಿದವರು. `ಪ್ರಧಾನಿಗಳಿಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ರಾಜ್ಯ ಸರ್ಕಾರ ಹಾಗೂ ಅಲ್ಲಿನ ಪೊಲೀಸ್ ವ್ಯವಸ್ಥೆಯ ಜವಾಬ್ದಾರಿ ಕುರಿತು. ಆದರೆ ಮೇಲ್ಸೇತುವೆ ಬಳಿ ಜನಸಂದಣಿ ಇದೆ ಎಂದು ಬೆಂಗಾವಲು ಪಡೆಗೆ ಯಾವುದೇ ಸೂಚನೆ ನೀಡಿಲ್ಲ. ಇದು ಸಂಪೂರ್ಣ ಗುಪ್ತಚರ ವೈಫಲ್ಯ’ ಎಂದು ತಿಳಿಸಲಾಗಿದೆ.

    ವಾದ ಪ್ರತಿವಾದಗಳನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಹಿಮಾ ಕೋಲ್, ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದಮೇಲೆ ನ್ಯಾಯಾಲಯ ಏಕೆ ಪ್ರಕರಣದ ವಿಚಾರಣೆಗೆ ಹೋಗಬೇಕು ಎಂದು ಪ್ರಶ್ನಿಸಿದರು.

    ನಿಮ್ಮ ಶೋಕಾಸ್ ನೋಟಿಸ್ ಸಂಪೂರ್ಣ ವಿರೋಧಾಭಾಸವಾಗಿದೆ. ಸಮಿತಿಯನ್ನು ರಚಿಸುವ ಮೂಲಕ ನೀವು ಎಸ್ಪಿಜಿ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ವಿಚಾರಣೆಯನ್ನು ಬಯಸುತ್ತೀರಿ. ಜೊತೆಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರನ್ನು ತಪ್ಪಿತಸ್ಥರೆಂದು ಪರಿಗಣಿಸುತ್ತೀರಿ. ಅವರು ತಪ್ಪಿತಸ್ಥರೇ ಎಂದು ನ್ಯಾಯಾಧೀಶ ಸೂರ್ಯಕಾಂತ್ ಕೇಳಿದರು. ಇದನ್ನೂ ಓದಿ: ಪ್ರಧಾನಿ ಮೋದಿ ಪ್ರಯಾಣದ ಮಾಹಿತಿಯನ್ನು ಸಂರಕ್ಷಿಸಲು ಸೂಚನೆ ಸೂಚನೆ

    ನೀವು ರಾಜ್ಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು, ನ್ಯಾಯಾಲಯಕ್ಕೆ ಏನು ಉಳಿದಿದೆ ಎಂದು ಸಿಜೆಐ ರಮಣ ಪ್ರಶ್ನಿಸಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ ಕೊನೆಗೆ ನಿವೃತ್ತ ನ್ಯಾಯಾಧೀಶರನ್ನೊಳಗೊಂಡ ಸಮಿತಿ ರಚಿಸಲಾಗುವುದು ಎಂದು ಹೇಳಿದರು,

  • ಪ್ರಧಾನಿ ಮೋದಿ ಭದ್ರತಾ ವೈಫಲ್ಯ -150 ಅಪರಿಚಿತರ ವಿರುದ್ಧ ಎಫ್‌ಐಆರ್‌

    ಪ್ರಧಾನಿ ಮೋದಿ ಭದ್ರತಾ ವೈಫಲ್ಯ -150 ಅಪರಿಚಿತರ ವಿರುದ್ಧ ಎಫ್‌ಐಆರ್‌

    ಚಂಡೀಗಢ: ಪ್ರಧಾನಿ ಮೋದಿ ಅವರು ಪಂಜಾಬ್‌ಗೆ ತೆರಳಿದ್ದ ಸಂದರ್ಭದಲ್ಲಿ ಫಿರೋಜ್‌ಪುರ್‌ ಫ್ಲೈಓವರ್‌ ಬಳಿ ಸಿಲುಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ ಪೊಲೀಸರು 150 ಮಂದಿ ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

    ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 283ರಡಿ ಎಫ್‌ಐಆರ್‌ ದಾಖಲಾಗಿದೆ. ಯಾವುದೇ ಸಾರ್ವಜನಿಕ ಮಾರ್ಗದಲ್ಲಿ ಯಾವುದೇ ವ್ಯಕ್ತಿಗೆ ಅಪಾಯ, ಅಡಚಣೆ ಅಥವಾ ಗಾಯವನ್ನು ಉಂಟು ಮಾಡಿದರೆ ಅಂತಹವರು ಶಿಕ್ಷೆಗೆ ಗುರಿಯಾಗುತ್ತಾರೆ. 200 ರೂ. ವರೆಗೆ ದಂಡವನ್ನೂ ವಿಧಿಸಬಹುದಾಗಿದೆ. ಇದನ್ನೂ ಓದಿ: ಪ್ರಧಾನ ಮಂತ್ರಿ ಭದ್ರತಾ ಸಿದ್ಧತೆ ಹೇಗಿರುತ್ತೆ ಗೊತ್ತಾ?

    ಪ್ರಧಾನಿಗೆ ಭದ್ರತಾ ವೈಫಲ್ಯ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಪಂಜಾಬ್‌ ಸರ್ಕಾರ, ಇಬ್ಬರು ಸದಸ್ಯರನ್ನೊಳಗೊಂಡ ಸಮಿತಿ ರಚಿಸಿತ್ತು. ಸಮಿತಿಯು ನೀಡಿದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 150 ಮಂದಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ವರದಿಯಲ್ಲಿ ತಿಳಿಸಿದೆ.

    ಪ್ರಕರಣದ ತನಿಖೆಗೆ ಕೇಂದ್ರ ಸರ್ಕಾರವೂ ಸಹ ಮೂವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿದೆ. ಸಮಿತಿಯು ತನಿಖೆಯನ್ನು ಈಗಾಗಲೇ ಆರಂಭಿಸಿದೆ. ಇದನ್ನೂ ಓದಿ: ಪ್ರಧಾನಿ ಕಾರು ಸಿಲುಕಿದ್ದ ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರ ದಂಡು – ವೀಡಿಯೋ ವೈರಲ್‌

    ಪಂಜಾಬ್‌ನಲ್ಲಿ ರ‍್ಯಾಲಿಯೊಂದರಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರು ಆಗಮಿಸಿದ್ದರು. ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್‌ನಲ್ಲಿ ರ‍್ಯಾಲಿ ಸ್ಥಳಕ್ಕೆ ಆಗಮಿಸಲು ಸಾಧ್ಯವಾಗಿರಲಿಲ್ಲ. ಆಗ ರಸ್ತೆ ಮಾರ್ಗವಾಗಿ ಆಗಮಿಸುತ್ತಿದ್ದಾಗ ಫಿರೋಜ್‌ಪುರ್‌ ಫ್ಲೈಓವರ್‌ ಬಳಿ ಪ್ರತಿಭಟನೆ ಕಾರಣದಿಂದಾಗಿ ಪ್ರಧಾನಿಯವರು ಸಿಲುಕಿಕೊಂಡಿದ್ದರು.