Tag: ಪ್ರಧಾಣಿ ಮೋದಿ

  • ವೀರ ಯೋಧ ‘ಅಭಿ’ನಂದನ್‍ಗೆ ನಮೋ ಎಂದ ಮೋದಿ

    ವೀರ ಯೋಧ ‘ಅಭಿ’ನಂದನ್‍ಗೆ ನಮೋ ಎಂದ ಮೋದಿ

    ನವದೆಹಲಿ: ಶತ್ರು ರಾಷ್ಟ್ರ ಪಾಕಿಸ್ತಾನದಿಂದ ಆಗಮಿಸಿದ ವಿಗ್ ಕಮಾಂಡರ್ ಅಭಿನಂದನ್ ಅವರಿಗೆ ಸ್ವಾಗತ ಕೋರಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಟ್ವೀಟ್ ಮಾಡಿದ್ದಾರೆ.

    ನಿಮ್ಮ ಧೈರ್ಯ, ಸ್ಥೈರ್ಯ ದೇಶಕ್ಕೆ ಮಾದರಿ. ನಮ್ಮ ದೇಶದ ಸೇನಾಪಡೆಗಳು 130 ಕೋಟಿ ಭಾರತೀಯರಿಗೆ ಸ್ಫೂರ್ತಿ ಆಗಿದೆ ಎಂದು ಮೋದಿ ತಿಳಿಸಿದ್ದಾರೆ. ಇತ್ತ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೂಡ ಸ್ವಾಗತಕೋರಿದ್ದು, ನಿಮ್ಮ ಶೌರ್ಯ, ಘಟನತೆಯಿಂದ ನಮ್ಮನ್ನು ಮತ್ತಷ್ಟು ಹೆಮ್ಮೆ ಪಡುವಂತೆ ಮಾಡಿದ್ದೀರಿ ಎಂದಿದ್ದಾರೆ.

    ಅಭಿನಂದನ್ ತಯ್ನಾಡಿಗೆ ಆಗಮಿಸುತ್ತಿದಂತೆ ದೇಶದೆಲ್ಲೆಡೆ ಸಂಭ್ರಮದಲ್ಲಿದ್ದು, ಪಟಾಕಿ ಸಿಡಿಸಿ, ಸಿಹಿ ನೀಡಿ ಸಾರ್ವಜನಿಕರು ಸಂಭ್ರಮಿಸಿದ್ದಾರೆ. ವೈರಿ ರಾಷ್ಟ್ರದಿಂದ ಬರುವ ವೇಳೆ ಮುಖದಲ್ಲಿ ಅದೇ ಮಂದಹಾಸ, ಅದೇ ಹುರಿ ಮೀಸೆ, ಅದೇ ಮಾನಸಿಕ ದೃಢತೆಯೊಂದಿಗೆ ಕಾಣಸಿಕ್ಕ ಅಭಿನಂದನ್ ಅವರು ತಾಯ್ನಾಡಿನ ಕಡೆಗೆ ನಗು ಮುಖದಿಂದ ಹೆಜ್ಜೆ ಇಟ್ಟ ಕ್ಷಣ ಎಲ್ಲರನ್ನು ರೋಮಾಂಚನ ಗೊಳಿಸಿತ್ತು.

    ಅಭಿನಂದನ್ ಅವರು ಆಗಮಿಸುತ್ತಿದಂತೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಪ್ರಮುಖವಾಗಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಮಾಜಿ ಸಿಎಂ ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ ಸೇರಿದಂತೆ ದೇಶದ ಪ್ರಮುಖ ರಾಜಕೀಯ ಗಣ್ಯರು ಅಭಿನಂದನ್ ಅರಿಗೆ ಸ್ವಾಗತ ಕೋರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv