Tag: ಪ್ರದ್ಯುಮನ್

  • ಪ್ರದ್ಯುಮನ್ ಕೊಲೆ ಪ್ರಕರಣ- ವಿದ್ಯಾರ್ಥಿ ಮೇಲೆ ತಿಂಗಳ ಹಿಂದೆಯೇ ಸಿಬಿಐಗೆ ಅನುಮಾನವಿತ್ತು

    ಪ್ರದ್ಯುಮನ್ ಕೊಲೆ ಪ್ರಕರಣ- ವಿದ್ಯಾರ್ಥಿ ಮೇಲೆ ತಿಂಗಳ ಹಿಂದೆಯೇ ಸಿಬಿಐಗೆ ಅನುಮಾನವಿತ್ತು

    ಗುರ್ಗಾಂವ್: ಇಲ್ಲಿನ ಆರ್ಯನ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ 2ನೇ ಕ್ಲಾಸ್ ಬಾಲಕನ ಕತ್ತು ಸೀಳಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಅರೆಸ್ಟ್ ಆಗಿರುವ 11ನೇ ತರಗತಿ ವಿದ್ಯಾರ್ಥಿ ಮೇಲೆ ಸಿಬಿಐಗೆ ಸೆಪ್ಟೆಂಬರ್‍ನಿಂದಲೇ ಅನುಮಾನವಿತ್ತು ಎಂದು ವರದಿಯಾಗಿದೆ.

    ಸಿಬಿಐ ಈ ಪ್ರಕರಣವನ್ನು ಕೈಗೆತ್ತಿಕೊಂಡಾಗಿನಿಂದ ಈ ವಿದ್ಯಾರ್ಥಿಯೇ ಪ್ರಮುಖ ಶಂಕಿತ ಆರೋಪಿಯಾಗಿದ್ದ. ಪ್ರಕರಣ ದಾಖಲಿಸಿದ 6 ದಿನಗಳ ನಂತರ ಸಿಬಿಐ ವಿದ್ಯಾರ್ಥಿಯ ಮನೆಯಲ್ಲಿ ತಪಾಸಣೆ ಮಾಡಿ ಕೆಲವು ವಸ್ತುಗಳನ್ನ ವಶಪಡಿಸಿಕೊಂಡಿತ್ತು.

    ಗುರ್ಗಾಂವ್ ಪೊಲೀಸರು ಸೆಪ್ಟೆಂಬರ್ 22ರಂದು ಸಿಬಿಐಗೆ ಈ ಪ್ರಕರಣವನ್ನು ಹಸ್ತಾಂತರಿಸುವುದಕ್ಕೂ ಮೊದಲೇ ವಿದ್ಯಾರ್ಥಿಯ ಮೇಲೆ ಸಂಶಯ ಪಡುವುದಕ್ಕೆ ಕಾರಣವಿದೆ ಎಂದು ಮೂಲಗಳು ತಿಳಿಸಿವೆ. ವಿಜ್ಞಾನಿಕ ವಿಮರ್ಶೆಗಾಗಿ ಕಳಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಯಲ್ಲಿ ಪ್ರದ್ಯುಮನ್ ಕೊಲೆಯಾದ ನಂತರ ಟಾಯ್ಲೆಟ್‍ನಿಂದ ಹೊರಬಂದ ಕೊನೆಯ ವ್ಯಕ್ತಿ ಈ ವಿದ್ಯಾರ್ಥಿಯೇ ಆಗಿದ್ದಾನೆ. ಈತ ಶಿಕ್ಷಕರೊಬ್ಬರ ಬಳಿ ಬಂದು ಪ್ರದ್ಯುಮನ್ ರಕ್ತ ವಾಂತಿ ಮಾಡಿಕೊಳ್ಳುತ್ತಿದ್ದಾನೆ ಎಂದು ಹೇಳಿದ್ದ.

    ಅಲ್ಲದೆ ಈತನ ಜೊತೆ ಸೇರಿ ಮತ್ತೊಬ್ಬ ವಿದ್ಯಾರ್ಥಿ ಶಾಲೆಯ ತೋಟದ ಮಾಲಿಗೆ ಪ್ರದ್ಯುಮನ್ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಗ್ಗೆ ಮೊದಲು ಮಾಹಿತಿ ನೀಡಿದ್ದರು. ಹೀಗಾಗಿ ಇವರಿಬ್ಬರು ಪ್ರಕರಣದ ಪ್ರಮುಖ ಸಾಕ್ಷಿಗಳಾಗಿದ್ದರು. ಆದ್ರೆ ಇದೀಗ ವಿಟ್‍ನೆಸ್ ಆಗಿದ್ದ ವಿದ್ಯಾರ್ಥಿಯೇ ಆರೋಪಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಈಗ ಮತ್ತೊಬ್ಬ ವಿದ್ಯಾರ್ಥಿಯನ್ನೂ ವಿಚಾರಣೆ ಮಾಡಲಾಗ್ತಿದೆ. ಎರಡನೇ ವಿದ್ಯಾರ್ಥಿಗೆ ಈ ವಿಷಯ ತಿಳಿದಿದ್ದು ಹೇಗೆ ಎಂಬ ಬಗ್ಗೆ ಸಿಬಿಐ ತನಿಖೆ ಮಾಡುತ್ತಿದೆ. ಮತ್ತೊಂದು ಕಡೆ ಸದ್ಯ ಅರೆಸ್ಟ್ ಮಾಡಲಾಗಿರುವ ವಿದ್ಯಾರ್ಥಿಯ ವಿರುದ್ಧ ದೃಢವಾದ ಸಾಕ್ಷಿಗಳಿಲ್ಲ ಎಂದು ಮೂಲಗಳು ತಿಳಿಸಿವೆ.

    ವಿದ್ಯಾರ್ಥಿ ಚಾಕು ತೆಗೆದುಕೊಂಡು ಶಾಲೆಗೆ ಬರುತ್ತಿದ್ದ ಎಂದು ಇತರೆ ವಿದ್ಯಾರ್ಥಿಗಳು ಹೇಳಿಕೆ ನೀಡಿದ ಬಳಿಕ, ಆರೋಪಿ ವಿದ್ಯಾರ್ಥಿಯನ್ನು ಚಾಕು ಅಂಗಡಿಗಳಿಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಆತ ಚಾಕು ಖರೀದಿಸಿದ ಅಂಗಡಿ ಮಾಲೀಕ ವಿದ್ಯಾರ್ಥಿಯನ್ನು ಗುರುತು ಹಿಡಿಯುವಲ್ಲಿ ವಿಫಲರಾಗಿದ್ದಾರೆ. ನಾನು ಯಾರಿಗೆ ಈ ಚಾಕುವನ್ನು ಮಾರಿದ್ದೆ ಎಂಬುದು ನೆನಪಿಲ್ಲ ಎಂದು ಹೇಳಿದ್ದಾರೆ. ಪ್ರದ್ಯುಮನ್ ಕೊಲೆಯ ದಿನ ನಡೆದ ಘಟನೆಯನ್ನು ಮರುಸೃಷ್ಟಿ ಮಾಡಲು ಆರೋಪಿ ವಿದ್ಯಾರ್ಥಿಯನ್ನು ಶಾಲೆಯ ಬಳಿಯೂ ಕರೆದುಕೊಂಡು ಹೋಗಲಾಗುತ್ತದೆ ಎಂದು ವರದಿಯಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಹರಿಯಾಣ ಪೊಲೀಸರು ಶಾಲೆಯ ಬಸ್ ಕಂಡಕ್ಟರ್ ಅಶೋಕ್ ಕುಮಾರ್‍ನನ್ನು ಬಂಧಿಸಿದ್ದರು. ಆದ್ರೆ ಮಂಗಳವಾರದಂದು 11ನೇ ಕ್ಲಾಸ್ ಬಾಲಕನನ್ನು ಸಿಬಿಐ ವಶಕ್ಕೆ ಪಡೆದು, ಈತ ಪರೀಕ್ಷೆ ಮುಂದೂಡಲು ಬಾಲಕನನ್ನು ಕೊಲೆ ಮಾಡಿದ್ದಾನೆ ಎಂದು ಹೇಳಿದೆ.

    ಸೆಪ್ಟೆಂಬರ್ 8ರಂದು ಶಾಲೆಯ ಟಾಯ್ಲೆಟ್‍ನಲ್ಲಿ ಬಾಲಕ ಪ್ರದ್ಯುಮನ್‍ನನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು.

  • ಎಕ್ಸಾಂ ಮುಂದೂಡಿಕೆಯಾಗ್ಲಿ ಅಂತ 11ನೇ ಕ್ಲಾಸ್ ವಿದ್ಯಾರ್ಥಿಯಿಂದ ಬಾಲಕನ ಕೊಲೆ- ಸಿಬಿಐ

    ಎಕ್ಸಾಂ ಮುಂದೂಡಿಕೆಯಾಗ್ಲಿ ಅಂತ 11ನೇ ಕ್ಲಾಸ್ ವಿದ್ಯಾರ್ಥಿಯಿಂದ ಬಾಲಕನ ಕೊಲೆ- ಸಿಬಿಐ

    ಗುರ್ಗಾಂವ್: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ 2ನೇ ಕ್ಲಾಸ್ ಬಾಲಕ ಪ್ರದ್ಯುಮನ್ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಬಾಲಕನನ್ನು ಕೊಂದಿದ್ದು ಬಸ್ ಕಂಡಕ್ಟರ್ ಅಲ್ಲ, ಶಾಲೆಯ ಹಿರಿಯ ವಿದ್ಯಾರ್ಥಿ ಎಂದು ಸಿಬಿಐ ಹೇಳಿದೆ.

    ಸೆಪ್ಟೆಂಬರ್ 8ರಂದು ಇಲ್ಲಿನ ಆರ್ಯನ್ ಇಂಟರ್‍ನಮ್ಯಾಷನಲ್ ಶಾಲೆಯ ಟಾಯ್ಲೆಟ್‍ ನಲ್ಲಿ 7 ವರ್ಷದ ಬಾಲಕ ಪ್ರದ್ಯುಮನ್‍ನನ್ನು ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಶಾಲೆಯ 11ನೇ ತರಗತಿ ವಿದ್ಯಾರ್ಥಿಯನ್ನು ಮಂಗಳವಾರದಂದು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಆತನ ವಿಚಾರಣೆಯಿಂದ ಸ್ಫೋಟಕ ಮಾಹಿತಿಗಳು ಬಯಲಾಗಿದೆ. ಪರೀಕ್ಷೆ ಮುಂದೂಡಿಕೆಯಾಗಲಿ ಅಂತ 11ನೇ ತರಗತಿ ವಿದ್ಯಾರ್ಥಿ ಬಾಲಕನನ್ನು ಕೊಲೆ ಮಾಡಿದ್ದಾನೆಂದು ಸಿಬಿಐ ಹೇಳಿದೆ.

    ಪ್ರದ್ಯುಮನ್ ಶವವನ್ನು ಮೊದಲು ನೋಡಿದ್ದವನು ಎಂದು ನಂಬಲಾಗಿದ್ದ ವಿದ್ಯಾರ್ಥಿಯೇ ಕೊಲೆ ಮಾಡಿದ್ದಾನೆ. ಆತನನ್ನು ಇಂದು ಜುವಿನೈಲ್ ಬೋರ್ಡ್ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ವರದಿಯಾಗಿದೆ.

    ಈ ವಿದ್ಯಾರ್ಥಿ ಕಳೆದ ಒಂದು ವರ್ಷದಿಂದ ಮನೋವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದ. ಆತನನ್ನು ಕಳೆದ ಕೆಲವು ದಿನಗಳಿಂದ ವಿಚಾರಣೆ ಮಡಲಾಗುತ್ತಿದ್ದು, ಪ್ರತಿ ಬಾರಿಯೂ ಆತನ ಹೇಳಿಕೆ ಭಿನ್ನವಾಗಿರುತ್ತಿತ್ತು ಎಂದು ಮೂಲಗಳು ತಿಳಿಸಿವೆ.

    ಎಕ್ಸಾಂ ಪೋಸ್ಟ್ ಪೋನ್‍ಗೆ ಕೊಲೆ?: ಕೊಲೆಗೂ ಮುನ್ನ ವಿದ್ಯಾರ್ಥಿ ತನ್ನ ಸ್ನೇಹಿತರ ಬಳಿ ಪರೀಕ್ಷೆ ಮುಂದೂಡಿಕೆಯಾಗಬೇಕು. ಆಗ ನಾವು ಓದುವ ಚಿಂತೆಯೇ ಇರುವುದಿಲ್ಲ ಎಂದು ಹೇಳಿಕೊಂಡಿದ್ದ ಎಂದು ಸಿಬಿಐ ಹೇಳಿದೆ. ಈತನ ಶಾಲೆಯ ರೆಕಾರ್ಡ್ ನೋಡಿದ್ರೆ ಈತ ಒಳ್ಳೆಯ ವಿದ್ಯಾರ್ಥಿಯಾಗಿರಲಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಶಾಲೆಗೆ ಚಾಕು ತರುತ್ತಿದ್ದ: ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಪ್ರದ್ಯುಮನ್ ಜೊತೆ ಟಾಯ್ಲೆಟ್ ಪ್ರವೇಶಿಸಿದ ಐವರಲ್ಲಿ ಈ ವಿದ್ಯಾರ್ಥಿಯೂ ಒಬ್ಬನಾಗಿದ್ದ ಎಂದು ಮೂಲಗಳು ಹೇಳಿವೆ. ಪ್ರದ್ಯುಮನ್‍ ನನ್ನು ಕೊಲೆ ಮಾಡಲು ಬಳಸಲಾಗಿರಬಹುದಾದ ಚಾಕು ಕಮೋಡ್‍ ನಲ್ಲಿ ಪತ್ತೆಯಾಗಿತ್ತು. ಆರೋಪಿ ವಿದ್ಯಾರ್ಥಿಯು ಶಾಲೆಗೆ ಚಾಕು ತೆಗೆದುಕೊಂಡು ಬರುತ್ತಿದ್ದುದನ್ನು ಶಿಕ್ಷಕರು ಹಾಗೂ ಆತನ ಸಹಪಾಠಿಗಳು ನೋಡಿದ್ದರು ಎಂಬುದನ್ನು ಸಿಬಿಐ ಪತ್ತೆಹಚ್ಚಿದೆ.

    ಆರೋಪಿ ವಿದ್ಯಾರ್ಥಿಯ ತಂದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕಳೆದ ರಾತ್ರಿ ನನ್ನ ಮಗನನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗ್ತಿದೆ ಎಂದು ಕರೆ ಬಂತು. ನನ್ನ ಮಗ ಈ ಕೃತ್ಯವೆಸಗಿಲ್ಲ. ನಾವು ಪೊಲೀಸರ ವಿಚಾರಣೆಗೆ ಸಹಕರಿಸುತ್ತಿದ್ದೇವೆ. ನನ್ನ ಮಗನನ್ನು 4 ಬಾರಿ ವಿಚಾರಣೆ ಮಾಡಲಾಗಿದೆ. ನಮ್ಮ ಮನೆಗೆ ಬಂದು ಕೂಡ ವಿಚಾರಣೆ ಮಾಡಿದ್ದಾರೆ. ನಿನ್ನೆ ಮಧ್ಯರಾತ್ರಿವರೆಗೆ ನನ್ನನ್ನು ಅವರ ಕಚೇರಿಯಲ್ಲಿ ಕೂರಿಸಿಕೊಂಡಿದ್ದರು. ನಿಮ್ಮ ಮಗ ಕೊಲೆ ಮಾಡಿದ್ದಾನೆ. ಆತನನ್ನು ಬಂಧಿಸುತ್ತಿದ್ದೇವೆ ಎಂದು ಹೇಳಿದ್ರು. ಆತನ ತಪ್ಪೊಪ್ಪಿಗೆಗೆ ನೀವು ಸಹಿ ಮಾಡಬೇಕೆಂದು ಹೇಳಿದ್ರು. ನಾನು ಮಧ್ಯರಾತ್ರಿ 2 ಗಂಟೆಗೆ ಅಲ್ಲಿಂದ ಹೊರಟೆ ಎಂದು ಹೇಳಿದ್ದಾರೆ.

    ಈ ಹಿಂದೆ ಶಾಲೆಯ ಬಸ್ ಕಂಡಕ್ಟರ್ ಅಶೋಕ್ ಕುಮಾರ್‍ನನ್ನು ಬಂಧಿಸಲಾಗಿತ್ತು. ಲೈಂಗಿಕ ಕ್ರಿಯೆಗೆ ಒಪ್ಪದ್ದಕ್ಕೆ ಕೊಲೆ ಮಾಡಿದ್ದೇನೆಂದು ಅಶೋಕ್ ಕುಮಾರ್ ಹೇಳಿಕೆ ನೀಡಿದ್ದ. ಆದ್ರೆ ಈಗಲೂ ಆತನಿಗೆ ಸಂಪೂರ್ಣವಾಗಿ ಪ್ರಕರಣದಿಂದ ರಿಲೀಫ್ ಸಿಕ್ಕಿಲ್ಲ. ಸದ್ಯಕ್ಕೆ ಸಿಬಿಐ ವಿದ್ಯಾರ್ಥಿಯ ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ವರದಿಯಾಗಿದೆ.

    ಈ ಪ್ರಕರಣದಲ್ಲಿ ಶಾಲೆಯ ಆಡಳಿತ ಮಂಡಳಿ ಸತ್ಯ ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ. ಪೊಲೀಸರು ಸರಿಯಾಗಿ ತನಿಖೆ ಮಡಿಲ್ಲ ಎಂದು ಪ್ರದ್ಯುಮನ್ ಪೋಷಕರು ಆರೋಪಿಸಿದ್ದರು. ಪೋಷಕರ ಒತ್ತಾಯದ ನಂತರ ಹರ್ಯಾಣ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು.

    ಸೆಪ್ಟೆಂಬರ್ 22ರಂದು ಸಿಬಿಐ ಈ ಪ್ರಕರಣವನ್ನು ಕೈಗೆತ್ತಿಕೊಂಡು, ಸಿಸಿಟಿವಿ ದೃಶ್ಯಾವಳಿ ಹಾಗೂ ಫೋರೆನ್ಸಿಕ್ ಸಾಕ್ಷಿಯನ್ನು ಮರುಪರಿಶೀಲನೆ ಮಾಡಿತ್ತು.

  • ಶಾಲೆಯ ಟಾಯ್ಲೆಟ್‍ ನಲ್ಲಿ ಬಾಲಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್- 11ನೇ ಕ್ಲಾಸ್ ವಿದ್ಯಾರ್ಥಿ ಸಿಬಿಐ ವಶಕ್ಕೆ

    ಶಾಲೆಯ ಟಾಯ್ಲೆಟ್‍ ನಲ್ಲಿ ಬಾಲಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್- 11ನೇ ಕ್ಲಾಸ್ ವಿದ್ಯಾರ್ಥಿ ಸಿಬಿಐ ವಶಕ್ಕೆ

    ಗುರ್ಗಾಂವ್: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಆರ್ಯನ್ ಇಂಟರ್‍ನ್ಯಾಷನಲ್ ಶಾಲೆಯ 7 ವರ್ಷದ ಬಾಲಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, ಇದೇ ಶಾಲೆಯ 11ನೇ ಕ್ಲಾಸ್ ವಿದ್ಯಾರ್ಥಿಯೊಬ್ಬನನ್ನು ವಶಕ್ಕೆ ಪಡೆದಿದೆ.

    ಆರ್ಯನ್ ಇಂಟರ್‍ನ್ಯಾಷನಲ್ ಗ್ರೂಪ್ ಸಿಇಓ ಆರ್ಯನ್ ಪಿಂಟೋ ಹಾಗೂ ಸಂಸ್ಥಾಪಕ ಅಧ್ಯಕ್ಷ ಆಗಸ್ಟೀನ್ ಪಿಂಟೋ ಮತ್ತು ವ್ಯವಸ್ಥಾಪಕ ನಿರ್ದೇಶಕ ಗ್ರೇಸ್ ಪಿಂಟೋ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಮರುದಿನವೇ ಈ ಬೆಳವಣಿಗೆ ನಡೆದಿದೆ.

    ಮೂಲಗಳ ಪ್ರಕಾರ ಸಿಬಿಐ, 11ನೇ ತರಗತಿ ವಿದ್ಯಾರ್ಥಿಯನ್ನು ಮಂಗಳವಾರ ರಾತ್ರಿ 11 ಗಂಟೆಗೆ ಸೋಹ್ನಾ ರೋಡ್‍ನಿಂದ ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದೆ. ಆದ್ರೆ ವಿದ್ಯಾರ್ಥಿಯನ್ನು ಬಂಧನಕ್ಕೆ ಒಳಪಡಿಸಲಾಗಿದೆಯಾ ಅಥವಾ ವಿಚಾರಣೆ ಬಳಿಕ ವಾಪಸ್ ಕಳಿಸಲಾಗಿದೆಯಾ ಎಂಬ ಬಗ್ಗೆ ಸ್ಪಷ್ಟವಾಗಿಲ್ಲ.

    ಇದೇ ವರ್ಷ ಸೆಪ್ಟೆಂಬರ್ 8ರಂದು 2ನೇ ತರಗತಿಯಲ್ಲಿ ಓದುತ್ತಿದ್ದ 7 ವರ್ಷದ ಬಾಲಕ ಪ್ರದ್ಯುಮನ್‍ನನ್ನು ಶಾಲೆಯ ಟಾಯ್ಲೆಟ್‍ನಲ್ಲಿ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಬಸ್ ಕಂಡಕ್ಟರ್ ಅಶೋಕ್ ಕುಮಾರ್‍ನನ್ನು ಪೊಲೀಸರು ಬಂಧಿಸಿದ್ದರು. ಲೈಂಗಿಕ ಕ್ರಿಯೆಗೆ ಒಪ್ಪದ್ದಕ್ಕೆ ಬಾಲಕನನ್ನು ಕೊಲೆ ಮಾಡಿದ್ದಾಗಿ ಬಸ್ ಕಂಡಕ್ಟರ್ ಹೇಳಿಕೆ ನೀಡಿದ್ದ. ಆದ್ರೆ ಆತನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗ್ತಿದೆ ಎಂದು ಕುಟುಂಬಸ್ಥರು ಹಾಗೂ ಸ್ನೇಹಿತರು ಹೇಳಿದ್ದರು.

    ಬಾಲಕನ ಕೊಲೆ ಪ್ರಕರಣ ದೇಶದಾದ್ಯಂತ ಪೋಷಕರ ಆಕ್ರೋಶಕ್ಕೆ ಕಾರಣವಾಗಿತ್ತು. ಶಾಲೆಯಲ್ಲಿ ನೂತನ ಭದ್ರತಾ ಮಾನದಂಡಗಳನ್ನ ಸಿಬಿಎಸ್‍ಇ ಜಾರಿಗೆ ತಂದಿತ್ತು. ಶಾಲೆಯ ಕ್ಯಾಂಪಸ್‍ನಲ್ಲಿ ಮಕ್ಕಳ ಸುರಕ್ಷತೆ ಮತ್ತು ಭದ್ರತೆಯ ಜವಾಬ್ದಾರಿ ಶಾಲೆಯ ಆಡಳಿತದವರದ್ದೇ ಆಗಿರುತ್ತದೆ ಎಂದು ಬೋರ್ಡ್ ಹೇಳಿತ್ತು.

    ಇದನ್ನೂ ಓದಿ: 2ನೇ ಕ್ಲಾಸ್ ಬಾಲಕನ ಕೊಲೆ ಪ್ರಕರಣದಲ್ಲಿ ಮತ್ತಷ್ಟು ಅನುಮಾನ- ಟಾಯ್ಲೆಟ್‍ನಲ್ಲಿದ್ದ ಕಿಟಕಿಗೆ ಕಂಬಿ ಇರ್ಲಿಲ್ಲ

  • 2ನೇ ಕ್ಲಾಸ್ ಬಾಲಕ ಕೊಲೆಯಾದ ನಂತರ ಕ್ಲಾಸ್‍ಗೆ ಬಂದಿದ್ದು ನಾಲ್ಕೇ ಮಕ್ಕಳು

    2ನೇ ಕ್ಲಾಸ್ ಬಾಲಕ ಕೊಲೆಯಾದ ನಂತರ ಕ್ಲಾಸ್‍ಗೆ ಬಂದಿದ್ದು ನಾಲ್ಕೇ ಮಕ್ಕಳು

    ಗುರ್ಗಾಂವ್: ಇಲ್ಲಿನ ಆರ್ಯನ್ ಇಂಟರ್‍ನ್ಯಾಷನಲ್ ಶಾಲೆಯ ಟಾಯ್ಲೆಟ್‍ನಲ್ಲಿ 2ನೇ ಕ್ಲಾಸ್ ಬಾಲಕ ಪ್ರದ್ಯುಮನ್‍ನ ಕೊಲೆಯಾಗಿ 10 ದಿನಗಳ ಕಳೆದ ನಂತರ ಆತನ ನಾಲ್ಕು ಸಹಪಾಠಿಗಳು ಮಾತ್ರ ಶಾಲೆಗೆ ಬಂದಿದ್ದಾರೆ. ಅದರಲ್ಲೂ ಇಬ್ಬರು ವಿದ್ಯಾರ್ಥಿಗಳು ಶಾಲೆಯನ್ನ ಬಿಡಲು ತಮ್ಮ ಪೋಷಕರೊಂದಿಗೆ ಬಂದಿದ್ದಾರೆ.

    ಸೆಪ್ಟೆಂಬರ್ 8ರಂದು 2ನೇ ತರಗತಿಯ 7 ವರ್ಷದ ಬಾಲಕ ಪ್ರದ್ಯುಮನ್‍ನನ್ನು ಶಾಲೆಯ ಟಾಯ್ಲೆಟ್‍ನಲ್ಲಿ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 42 ವರ್ಷದ ಬಸ್ ಕಂಡಕ್ಟರ್ ಅಶೋಕ್ ಕುಮಾರ್‍ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಬಾಲಕ ಟಾಯ್ಲೆಟ್‍ಗೆ ಹೋದಾಗ ಅಶೋಕ್ ಕುಮಾರ್ ಒಳಗೆ ಹೋಗಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೆ ಪ್ರದ್ಯುಮನ್ ಟಾಯ್ಲೆಟ್‍ನಿಂದ ಹೊರಗೆ ತೆವಳಿಕೊಂಡು ಬಂದು ಗೋಡೆಯ ಬಳಿ ಕುಸಿದು ಬೀಳೋದು ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಬಾಲಕನ ಕೊಲೆಯಾದ ನಂತರ ಇದೀಗ ತರಗತಿಗಳು ಪುನಾರಂಭವಾಗಿದ್ದು, ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ಬಾಲಕ ಪ್ರದ್ಯುಮನ್‍ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸ್ಥಳದಲ್ಲಿದ್ದ ಸುಭಾಷ್ ಗಾರ್ಗ್ ಎಂಬವರು ಕೂಡ ತಮ್ಮ ಮಗುವನ್ನ ಶಾಲೆಗೆ ಕರೆದುಕೊಂಡು ಬಂದಿದ್ರು. ಭಯಪಡುವಂತದ್ದೇನೂ ಅಲ್ಲ. ಪೊಲೀಸರು ಹಾಗೂ ಸೆಕ್ಯೂರಿಟಿಗಳು ಇಲ್ಲಿದ್ದಾರೆ. ಈಗ ಶಾಲೆಯ ಆಡಳಿತವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ ಎಂದು ಅವರು ಹೇಳಿದ್ರು.

    ಆದ್ರೆ ಮತ್ತೊಬ್ಬ ವಿದ್ಯಾರ್ಥಿಯ ಪೋಷಕರು ತಮ್ಮ ಮಗನ ಅಡ್ಮಿಷನ್ ಕ್ಯಾನ್ಸಲ್ ಮಾಡಿಸಲು ಬಂದಿರುವುದಾಗಿ ಹೇಳಿದ್ರು. ಶಾಲೆ ಸರಿಯಾದುದನ್ನೇ ಮಾಡುತ್ತದೆ ಎಂದು ಗೊತ್ತು. ಆದ್ರೆ ನನ್ನ ಮಗುವಿಗೆ ಈಗ ಆ ಸ್ಥಳದ ಬಗ್ಗೆ ಭಯವಿದೆ. ಆತನನ್ನು ಶಾಲೆಗೆ ಹೋಗುವಂತೆ ಬಲವಂತ ಮಾಡಿದೆವು. ಆದ್ರೆ ಆತ ಒಪ್ಪುತ್ತಿಲ್ಲ. ಶಾಲೆಯ ಮಧ್ಯವರ್ಷದಲ್ಲಿ ಮತ್ತೊಂದು ಶಾಲೆಯಲ್ಲಿ ಅಡ್ಮಿಷನ್ ಸಿಗುವುದು ಕಷ್ಟ. ಆದ್ರೆ ನಾವು ಮಾಡಲೇಬೇಕು ಎಂದಿದ್ದಾರೆ.

    ಮತ್ತದೇ ತರಗತಿಗೆ ಹೋಗಲು ಹಾಗೂ ಅದೇ ಟಾಯ್ಲೆಟ್ ಬಳಸಬೇಕೆಂಬ ಬಗ್ಗೆ ನನ್ನ ಮಗ ಭಯಗೊಂಡಿದ್ದಾನೆ ಅಂತ ಪ್ರದ್ಯುಮನ್‍ನ ಸಹಪಾಠಿಯೊಬ್ಬನ ಪೋಷಕರು ಹೇಳಿದ್ದಾರೆ
    ನಾನು ಮತ್ತೆ ನನ್ನ ಮಗನನ್ನು ಶಾಲೆಗೆ ಕಳಿಸಲ್ಲ. ಆ ಶಾಲೆಯನ್ನ ನಾನು ನಂಬಲ್ಲ ಎಂದು ಒಂದನೇ ತರಗತಿ ವಿದ್ಯಾರ್ಥಿಯೊಬ್ಬನ ಪೋಷಕರು ಹೇಳಿದ್ದಾರೆ.

    ಕೊಲೆಯಾದ ಪ್ರದ್ಯುಮನ್ ಪೋಷಕರು ಶಾಲೆ ಪುನಾರಂಭವಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಬಿಐ ತನಿಖೆ ಮುಗಿಯುವವರೆಗೆ ಶಾಲೆ ಕಾಯಬೇಕಿತ್ತು. ಸಾಕ್ಷಿಗಳು ನಾಶವಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.