Tag: ಪ್ರದ್ಮವಿಭೂಷಣ

  • ಮಾಯಾವತಿ, ಅಸಾದುದ್ದೀನ್ ಓವೈಸಿಗೆ ಭಾರತ ರತ್ನ, ಪದ್ಮವಿಭೂಷಣ ನೀಡಬೇಕು: ಸಂಜಯ್ ರಾವತ್

    ಮಾಯಾವತಿ, ಅಸಾದುದ್ದೀನ್ ಓವೈಸಿಗೆ ಭಾರತ ರತ್ನ, ಪದ್ಮವಿಭೂಷಣ ನೀಡಬೇಕು: ಸಂಜಯ್ ರಾವತ್

    ನವದೆಹಲಿ: ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರಿಗೆ ಪದ್ಮವಿಭೂಷಣ, ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕು ಎಂದು ಶಿವಸೇನಾ ಸಂಸದ ಸಂಜಯ್ ರಾವತ್  ಒತ್ತಾಯಿಸಿದ್ದಾರೆ.

    ಯುಪಿ ಚುನಾವಣಾ ಫಲಿತಾಂಶ ಪ್ರಕಟವಾದ ಒಂದು ದಿನದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಯಾವತಿ, ಅಸಾದುದ್ದೀನ್ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಗೆಲುವಿಗೆ ಆ ಎರಡು ಪಕ್ಷಗಳ ಕೊಡುಗೆ ಮಹತ್ತರವಾಗಿದೆ. ಪದ್ಮವಿಭೂಷಣ, ಭಾರತರತ್ನ ಪ್ರಶಸ್ತಿಗಳನ್ನು ನೀಡಲಾಗುವುದು. ಮಾಯಾವತಿ ಮತ್ತು ಓವೈಸಿ ಕೊಡುಗೆ ನೀಡಿದ್ದರಿಂದ ಬಿಜೆಪಿ ಗೆಲುವು ಸಾಧಿಸಿದೆ. ಆದ್ದರಿಂದ ಇಬ್ಬರೂ ನಾಯಕರಿಗೆ ಪದ್ಮವಿಭೂಷಣ ಮತ್ತು ಭಾರತ ರತ್ನ ನೀಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ : ಯಾಕೆ ಆ ವಿಡಿಯೋ ಹಾಕಿದ್ರು ಮೀರಾ ಜಾಸ್ಮಿನ್? ಅಭಿಮಾನಿ ಅಳಲೇನು ಕೇಳಿ

    ಉತ್ತರ ಪ್ರದೇಶದಲ್ಲಿ ಪ್ರಬಲ ರಾಜಕೀಯ ಪಕ್ಷವೆಂದು ಪರಿಗಣಿಸಲ್ಪಟ್ಟಿರುವ ಬಿಎಸ್‍ಪಿ ಕೇವಲ ಒಂದು ಅಸೆಂಬ್ಲಿ ಸ್ಥಾನವನ್ನು ಮಾತ್ರ ಗೆದ್ದಿದೆ. ಆದರೆ ಎಐಎಂಐಎಂ ತನ್ನ ಖಾತೆಯನ್ನು ತೆರೆಯಲು ವಿಫಲವಾಗಿದೆ. ಸಮಾಜವಾದಿ ಪಕ್ಷದ (ಎಸ್‍ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಪಕ್ಷವು ತನ್ನ ಮತದಾರರ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚಿಸಿಕೊಂಡಿದ್ದಾರೆ ಎಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ 255 ಸ್ಥಾನಗಳನ್ನು ಗಳಿಸಿದ ನಂತರ ತನ್ನ ಪ್ರಮುಖ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷವನ್ನು ಸೋಲಿಸಿದೆ.