Tag: ಪ್ರದರ್ಶನ

  • ದುಬೈನಲ್ಲೂ ‘ಕಾಟೇರ’ಗೆ ಭರ್ಜರಿ ರೆಸ್ಪಾನ್ಸ್

    ದುಬೈನಲ್ಲೂ ‘ಕಾಟೇರ’ಗೆ ಭರ್ಜರಿ ರೆಸ್ಪಾನ್ಸ್

    ರ್ಶನ್ ನಟನೆಯ ಕಾಟೇರ (Katera) ಸಿನಿಮಾದ ಶೋ ದುಬೈನಲ್ಲಿ ನಿನ್ನೆ ನಡೆಯಿತು. ದುಬೈನಲ್ಲೂ (Dubai) ಕಾಟೇರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ನಟ ದರ್ಶನ್, ನಿರ್ದೇಶಕ ತರುಣ್ ಸುಧೀರ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು. ಅಭಿಮಾನಿಗಳ ಜೊತೆ ಸಿನಿಮಾ ನೋಡಿ ದರ್ಶನ್ ಸಂಭ್ರಮಿಸಿದ್ದಾರೆ.

    ದೇಶ ವಿದೇಶಗಳಲ್ಲಿ ಕಾಟೇರ ಗೆಲುವು ಸಾಧಿಸುತ್ತಿದ್ದರೆ, ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಅತೀ ಶೀಘ್ರದಲ್ಲೇ ಕಾಟೇರ ಸಿನಿಮಾವನ್ನು ಕಿಚ್ಚ ಸುದೀಪ್ (Sudeep) ನೋಡಲಿದ್ದಾರಂತೆ. ಸೆಲೆಬ್ರಿಟಿ ಶೋಗೆ ಬರುವಂತೆ ಸುದೀಪ್ ಅವರಿಗೆ ಕಾಟೇರ ತಂಡದಿಂದ ಕರೆ ಹೋಗಿತ್ತು. ಕಿಚ್ಚ ಶೂಟಿಂಗ್ ನಲ್ಲಿ ಇರುವ ಕಾರಣದಿಂದಾಗಿ ಬರುವುದಕ್ಕೆ ಆಗಿರಲಿಲ್ಲ. ಆದರೆ ಅತೀ ಶೀಘ್ರದಲ್ಲೇ ಸಿನಿಮಾ ನೋಡುವುದಾಗಿ ಸುದೀಪ್ ಹೇಳಿದ್ದಾರೆ ಎನ್ನುವುದು ಸದ್ಯದ ವರ್ತಮಾನ.

    ಒಂದು ಕಡೆ ಸೆಲೆಬ್ರಿಟಿಗಳು ಚಿತ್ರವನ್ನು ನೋಡಿ ಹೊಗಳುತ್ತಿದ್ದರೆ, ಮತ್ತೊಂದು ಕಡೆ ಕಾಟೇರ ಸಿನಿಮಾ ರಿಲೀಸ್ ಆದ ಮೊದಲ ವಾರದಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಕುರಿತಂತೆ ದರ್ಶನ್ (Darshan) ಅಭಿಮಾನಿಗಳು ಪೋಸ್ಟ್ ಮಾಡಿದ್ದು, ‘ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ, ಮತ್ತು  ಕರುನಾಡೆ ಮೆಚ್ಚಿದ ನಮ್ಮ ಕಾಟೇರ ಕೇವಲ ಒಂದು ವಾರದಲ್ಲಿ, 52 ಲಕ್ಷಕ್ಕೂ ಅಧಿಕ ಟಿಕೆಟ್ಸ್ ಸೋಲ್ಡ್ ಔಟ್ ಆಗಿ, 104 ಕೋಟಿಗೂ ಅಧಿಕ ಹಣವನ್ನುಗಳಿಸಿ ಎಲ್ಲಾ ದಾಖಲೆಗಳನ್ನು ಮುರಿದು. ಹೊಸ ದಾಖಲೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

     

    ರಾಜ್ಯದಲ್ಲಿ ಕಾಟೇರ ಹವಾ ಜೋರಾಗಿದೆ. ಕರ್ನಾಟಕದಲ್ಲೇ ಬಾಕ್ಸ್ ಆಫೀಸಿಗೆ ಕೋಟಿ ಕೋಟಿ ರೂಪಾಯಿ ಹಣ ಹರಿದು ಬರುತ್ತಿದೆ. ಜೊತೆಗೆ ನೆರೆಯ ರಾಜ್ಯದಲ್ಲೂ ಕಾಟೇರ ರಿಲೀಸ್ ಆಗಿದ್ದು, ಅಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೋವಾ, ಆಂಧ್ರಪ್ರದೇಶ, ತಮಿಳು ನಾಡಿನಲ್ಲೂ ಕಾಟೇರ ಬಿಡುಗಡೆ ಆಗಿದ್ದು, ಅಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಥಿಯೇಟರ್ ಆಗಮಿಸಿದ್ದಾರೆ. ಸಿನಿಮಾಗೆ ಅತ್ಯುತ್ತಮ ರೆಸ್ಪಾನ್ಸ್ ಬಂದಿರುವ ಹಿನ್ನೆಲೆಯಲ್ಲಿ ವಿದೇಶದಲ್ಲೂ ಚಿತ್ರವನ್ನು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.

  • ಛತ್ತೀಸ್‌ಗಢದ ಮಾವಿನ ಮೇಳದಲ್ಲಿ ವಿಶ್ವದ ದುಬಾರಿ ಮಾವಿನ ಪ್ರದರ್ಶನ- ಕೆ.ಜಿಗೆ 2.70 ಲಕ್ಷ ರೂ.

    ಛತ್ತೀಸ್‌ಗಢದ ಮಾವಿನ ಮೇಳದಲ್ಲಿ ವಿಶ್ವದ ದುಬಾರಿ ಮಾವಿನ ಪ್ರದರ್ಶನ- ಕೆ.ಜಿಗೆ 2.70 ಲಕ್ಷ ರೂ.

    – ಮಿಯಾಝಾಕಿಯ ವಿಶೇಷತೆಯೇನು?

    ರಾಯ್ಪುರ: ವಿಶ್ವದಲ್ಲೇ ಅತ್ಯಂತ ದುಬಾರಿಯಾಗಿರುವ ಮಾವು ಎಂದರೆ ಅದು ಜಪಾನಿನ (Japan) ಮಿಯಾಝಾಕಿ (Miyazaki) ಮಾವಿನ ಹಣ್ಣು. ವಿದೇಶಿ ಮಾರುಕಟ್ಟೆಯಲ್ಲಿ ಸುಮಾರು 1.82 ಲಕ್ಷ ಮೌಲ್ಯವನ್ನು ಹೊಂದಿರುವ ಈ ದುಬಾರಿ ಮಾವನ್ನು ಛತ್ತೀಸ್‌ಗಢದ (Chattisgarh) ರಾಯ್ಪುರದಲ್ಲಿ (Raipur) ನಡೆದ ಮಾವಿನ ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.

    ಜಪಾನ್ ಮೂಲದ ಮಿಯಾಝಾಕಿ ಮಾವು ವಿಶ್ವದಲ್ಲೇ ಅತ್ಯಂತ ದುಬಾರಿ ಮಾವು ಎಂಬ ಖ್ಯಾತಿಯನ್ನು ಹೊಂದಿದೆ. ಜೂನ್ 17ರಿಂದ 19ರ ವರೆಗೆ ಛತ್ತೀಸ್‌ಗಢದ ರಾಯ್ಪುರದಲ್ಲಿ ಮಾವಿನ ಮೇಳವನ್ನು (Mango Festival) ಆಯೋಜಿಸಲಾಗಿತ್ತು. ಈ ಮಾವಿನ ಮೇಳದಲ್ಲಿ ದುಬಾರಿ ಮಾವು ಮಿಯಾಝಾಕಿಯನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. ಈ ಮಾವು ಕೆ.ಜಿಗೆ ಸುಮಾರು 2.70 ಲಕ್ಷ ರೂ. ಮೌಲ್ಯವನ್ನು ಹೊಂದಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ. ಇದನ್ನೂ ಓದಿ: RAW ಸಂಸ್ಥೆಯ ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ರವಿ ಸಿನ್ಹಾ ನೇಮಕ

    ಕೋಲ್ ಇಂಡಿಯಾದ (Coal India) ನಿವೃತ್ತ ಮ್ಯಾನೇಜರ್ ಆರ್‌ಪಿ ಗುಪ್ತ ಈ ದುಬಾರಿ ಮಾವನ್ನು ಮಾವಿನ ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದು, ಈ ಮಾವನ್ನು ಅತ್ಯಂತ ಕಾಳಜಿಯಿಂದ ಬೆಳೆಸಬೇಕಾಗುತ್ತದೆ. ಈ ಮಾವನ್ನು ಕಾರ್ಪೊರೇಟ್‌ನ ಕೊಡುಗೆಯಾಗಿ ವ್ಯಾಪಾರ ಮಾಡಲಾಗುತ್ತಿದ್ದು, ಈ ಮಾವಿನ ಬೆಲೆ ಸಾಮಾನ್ಯ ಮಾವಿನ ಹಣ್ಣುಗಳಿಂತ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಏರ್‌ಬಸ್‌ ಜೊತೆ ಬರೋಬ್ಬರಿ 500 ವಿಮಾನ ಖರೀದಿಗೆ ಡೀಲ್‌ – ವಿಶ್ವದಾಖಲೆ ಬರೆದ ಇಂಡಿಗೋ

    ಸೂರ್ಯನ ಬೆಳಕು ಬಿದ್ದ ಮಾವಿನ ಭಾಗವು ಒಂದು ರೀತಿಯ ರುಚಿಯನ್ನು ನೀಡಿದರೆ ಮತ್ತೊಂದು ಭಾಗ ವಿಭಿನ್ನ ರುಚಿಯನ್ನು ನೀಡುತ್ತದೆ. ಇದು ಈ ಮಾವಿನ ವಿಶೇಷತೆಯಾಗಿದ್ದು, ಪ್ರದರ್ಶನದಲ್ಲಿ ಇರಿಸಲಾದ ಮಾವು 639 ಗ್ರಾಂ. ತೂಕವನ್ನು ಹೊಂದಿದೆ ಎಂದು ಆರ್‌ಪಿ ಗುಪ್ತ ತಿಳಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತದ ಬಳಿಕ ಎಚ್ಚೆತ್ತ ರೈಲ್ವೆ ಇಲಾಖೆ- ಟ್ರ್ಯಾಕ್‌ಗಳ ಡೀಪ್ ಸ್ಕ್ರೀನಿಂಗ್‌ಗೆ ನಿರ್ಧಾರ

  • ರಾಘವೇಂದ್ರ ಸ್ಟೋರ್ಸ್ ಚಿತ್ರಕ್ಕೆ ಅಡೆತಡೆಯಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

    ರಾಘವೇಂದ್ರ ಸ್ಟೋರ್ಸ್ ಚಿತ್ರಕ್ಕೆ ಅಡೆತಡೆಯಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ

    ವರಸ ನಾಯಕ ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ (Raghavendra Stores) ಸಿನಿಮಾ ರಾಜ್ಯದ ಬಹುತೇಕ ಕಡೆ ತುಂಬಿದ ಪ್ರದರ್ಶನ ಕಾಣುತ್ತಿದೆ. ವಿಧಾನಸಭೆ ಚುನಾವಣೆಗೆ (Election) ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಟ ಜಗ್ಗೇಶ್ (Jaggesh) ಪ್ರಚಾರ ಮಾಡುತ್ತಿದ್ದಾರೆ ಎನ್ನವ ಕಾರಣಕ್ಕಾಗಿ ನಿನ್ನೆ ದಾವಣಗೆರೆಯಲ್ಲಿ ಚುನಾವಣೆ ಅಧಿಕಾರಿ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಮಾಡಿದ್ದರು. ಪ್ರದರ್ಶನ ನಿಲ್ಲಿಸುವಂತೆ ಸೂಚಿಸಿದ್ದರು. ಈಗ ಈ ಘಟನೆ ಕುರಿತಂತೆ ದಾವಣಗೆರೆ ಜಿಲ್ಲಾಧಿಕಾರಿ (District Collector) ಸ್ಪಷ್ಟನೆ ನೀಡಿದ್ದಾರೆ.

    ಚುನಾವಣಾ ಅಧಿಕಾರಿಯ ಸೂಚನೆಯಂತೆ ಜಗ್ಗೇಶ್ ಇರುವ ಸಿನಿಮಾ ಪೋಸ್ಟರ್ ಗೆ ನಿನ್ನೆ ಬಿಳಿ ಹಾಳೆಯಿಂದ ಮುಚ್ಚಲಾಗಿತ್ತು. ಈ ಕುರಿತು ನಿರ್ಮಾಣ ಸಂಸ್ಥೆ ಚುನಾವಣೆ ಆಯೋಗಕ್ಕೆ ಪತ್ರ ಬರೆದಿತ್ತು. ಚುನಾವಣೆ ಆಯೋಗವು ಅಡೆತಡೆ ಮಾಡದಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಚಿತ್ರಕ್ಕೆ ಯಾವುದೇ ರೀತಿಯಲ್ಲಿ ಅಡೆತಡೆ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ನಟಿ ಮೇಘನಾ ರಾಜ್ ಹುಟ್ಟು ಹಬ್ಬಕ್ಕೆ ತತ್ಸಮ ತದ್ಭವ ಪೋಸ್ಟರ್ ರಿಲೀಸ್

    ದಾವಣಗೆರೆ ಗೀತಾಂಜಲಿ ಚಿತ್ರಮಂದಿರದಲ್ಲಿ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಪ್ರದರ್ಶನ ಕಾಣುತ್ತಿತ್ತು. ನಿನ್ನೆ ಬೆಳ್ಳಗೆ ಚಿತ್ರಮಂದಿರಕ್ಕೆ ಆಗಮಿಸಿದ್ದ ಚುನಾವಣೆ ಅಧಿಕಾರಿ ಚಿತ್ರ ಪ್ರದರ್ಶನ ಮಾಡದಂತೆ ತಿಳಿಸಿದ್ದರು. ಜಗ್ಗೇಶ್ ನೇರವಾಗಿ ಚುನಾವಣೆ ಪ್ರಚಾರಕ್ಕೆ ಇಳಿದಿರುವುದರಿಂದ ಮತ್ತು ಅವರು ರಾಜ್ಯಸಭಾ ಸದಸ್ಯರು ಆಗಿರುವುದರಿಂದ ಸಿನಿಮಾ ಪ್ರದರ್ಶನ ಮಾಡದಂತೆ ಸೂಚಿಸಿದ್ದರು.

    ಜಗ್ಗೇಶ್ ಕೇವಲ ಸ್ಟಾರ್ ಪ್ರಚಾರಕರು. ಅವರು ಚುನಾವಣೆಗೆ ಸ್ಪರ್ಧಿಸಿಲ್ಲ. ಅಲ್ಲದೇ, ಅನೇಕ ನಟರು ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಸುದೀಪ್ ಅವರ ವಿಷಯದಲ್ಲಿ ಚುನಾವಣೆ ಆಯೋಗ ಯಾವುದೇ ಕ್ರಮ ತಗೆದುಕೊಂಡಿಲ್ಲ. ಹಾಗಾಗಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಚಿತ್ರಮಂದಿರ ಮಾಲೀಕರು ಮನವರಿಕೆ ಮಾಡಿಕೊಟ್ಟಿದ್ದರು. ಆದರೂ, ಪ್ರಯೋಜನವಾಗಿರಲಿಲ್ಲ.

  • Breaking-ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾಗೆ ಚುನಾವಣೆ ಕಿರಿಕ್: ಜಗ್ಗೇಶ್ ಮುಖಕ್ಕೆ ಬಿಳಿಪಟ್ಟೆ

    Breaking-ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾಗೆ ಚುನಾವಣೆ ಕಿರಿಕ್: ಜಗ್ಗೇಶ್ ಮುಖಕ್ಕೆ ಬಿಳಿಪಟ್ಟೆ

    ಟ, ರಾಜ್ಯಸಭಾ ಸದಸ್ಯ ಜಗ್ಗೇಶ್ (Jaggesh) ನಟನೆಯ ‘ರಾಘವೇಂದ್ರ ಸ್ಟೋರ್ಸ್’ (Raghavendra Stores) ಸಿನಿಮಾ ರಾಜ್ಯದ ಬಹುತೇಕ ಕಡೆ ತುಂಬಿದ ಪ್ರದರ್ಶನ (Exhibition) ಕಾಣುತ್ತಿದೆ. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಟ ಜಗ್ಗೇಶ್ ಪ್ರಚಾರ ಮಾಡುತ್ತಿರುವುದರಿಂದ ಚುನಾವಣೆ (Election) ಅಧಿಕಾರಿ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಮಾಡಿದ ಆರೋಪ ಕೇಳಿ ಬಂದಿದೆ.

    ದಾವಣಗೆರೆ ಗೀತಾಂಜಲಿ ಚಿತ್ರಮಂದಿರದಲ್ಲಿ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇಂದು ಬೆಳ್ಳಗೆ ಚಿತ್ರಮಂದಿರಕ್ಕೆ ಆಗಮಿಸಿದ್ದ ಚುನಾವಣೆ ಅಧಿಕಾರಿ ಚಿತ್ರ ಪ್ರದರ್ಶನ ಮಾಡದಂತೆ ತಿಳಿಸಿದ್ದಾರೆ. ಜಗ್ಗೇಶ್ ನೇರವಾಗಿ ಚುನಾವಣೆ ಪ್ರಚಾರಕ್ಕೆ ಇಳಿದಿರುವುದರಿಂದ ಮತ್ತು ಅವರು ರಾಜ್ಯಸಭಾ ಸದಸ್ಯರು ಆಗಿರುವುದರಿಂದ ಸಿನಿಮಾ ಪ್ರದರ್ಶನ ಮಾಡದಂತೆ ಸೂಚಿಸಿದ್ದರು. ಇದನ್ನೂ ಓದಿ:ನಟಿ ಮೇಘನಾ ರಾಜ್ ಹುಟ್ಟು ಹಬ್ಬಕ್ಕೆ ತತ್ಸಮ ತದ್ಭವ ಪೋಸ್ಟರ್ ರಿಲೀಸ್

    ಜಗ್ಗೇಶ್ ಕೇವಲ ಸ್ಟಾರ್ ಪ್ರಚಾರಕರು. ಅವರು ಚುನಾವಣೆಗೆ ಸ್ಪರ್ಧಿಸಿಲ್ಲ. ಅಲ್ಲದೇ, ಅನೇಕ ನಟರು ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಸುದೀಪ್ ಅವರ ವಿಷಯದಲ್ಲಿ ಚುನಾವಣೆ ಆಯೋಗ ಯಾವುದೇ ಕ್ರಮ ತಗೆದುಕೊಂಡಿಲ್ಲ. ಹಾಗಾಗಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಚಿತ್ರಮಂದಿರ ಮಾಲೀಕರು ಮನವರಿಕೆ ಮಾಡಿಕೊಟ್ಟಿದ್ದಾರೆ. ಹಾಗಾಗಿ ಚಿತ್ರ ಪ್ರದರ್ಶನಕ್ಕೆ ನಂತರ ಅನುವು ಮಾಡಿಕೊಡಲಾಗಿದೆ.

    ಚಿತ್ರಪ್ರದರ್ಶನಕ್ಕೆ ಅನುವು ಮಾಡಿಕೊಟ್ಟರೂ, ಜಗ್ಗೇಶ್ ಅವರ ಪೋಸ್ಟರ್ ಮುಚ್ಚುವಂತೆ ಚುನಾವಣೆ ಅಧಿಕಾರಿ ತಿಳಿಸಿದ್ದಾರೆ. ಹಾಗಾಗಿ ಜಗ್ಗೇಶ್ ಮುಖಕ್ಕೆ ಬಿಳಿ ಹಾಳೆ ಅಂಟಿಸಲಾಗಿದೆ. ಚಿತ್ರಮಂದಿರ ಮುಂದೆ ಹಾಕಲಾದ ಪೋಸ್ಟರ್ ಗೆ ಬಿಳಿ ಹಾಳೆಯಿಂದ ಜಗ್ಗೇಶ್ ಮುಖಮುಚ್ಚಿ, ಥಿಯೇಟರ್ ಒಳಗಡೆ ಚಿತ್ರ ಪ್ರದರ್ಶನ ಮಾಡಲಾಗುತ್ತಿದೆ.

  • ಪಾರ್ವತಿ ವೇಷದಲ್ಲಿ ನರ್ತಿಸುತ್ತಿದ್ದ 20ರ ಹುಡುಗ- ಹೃದಯಾಘಾತದಿಂದ ಸ್ಟೇಜ್‍ನಲ್ಲೇ ಕುಸಿದು ಸಾವು

    ಪಾರ್ವತಿ ವೇಷದಲ್ಲಿ ನರ್ತಿಸುತ್ತಿದ್ದ 20ರ ಹುಡುಗ- ಹೃದಯಾಘಾತದಿಂದ ಸ್ಟೇಜ್‍ನಲ್ಲೇ ಕುಸಿದು ಸಾವು

    ಶ್ರೀನಗರ: ಪಾರ್ವತಿಯ(Goddess Parvati) ವೇಷ ಧರಿಸಿ ಹುಡುಗಿಯಂತೆ ನರ್ತಿಸುತ್ತಿದ್ದ 20 ವರ್ಷದ ಹುಡುಗನೊಬ್ಬ ಹೃದಯಾಘಾತದಿಂದ ವೇದಿಕೆಯಲ್ಲೇ(Stage) ಕುಸಿದು ಸಾವನ್ನಪ್ಪಿದ ಘಟನೆ ಜಮ್ಮುವಿನಲ್ಲಿ ನಡೆದಿದೆ.

    ಜಮ್ಮು ಮತ್ತು ಕಾಶ್ಮೀರದ(Jammu and Kashmir) ಬಿಷ್ನಾಹ್ ಪ್ರದೇಶದಲ್ಲಿ ಯೋಗೇಶ್ ಗುಪ್ತಾ ನರ್ತಕಿಯ ವೇಷ ಧರಿಸಿ ಪ್ರದರ್ಶನ ನೀಡುತ್ತಿದ್ದ. ಈ ವೇಳೆ ಹೃದಯಾಘಾತವಾಗಿ(Heart Attack) ಅಲ್ಲೇ ಕುಸಿದು ಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ವೀಡಿಯೋದಲ್ಲಿ ಏನಿದೆ?: ವೈರಲ್ ವೀಡಿಯೋದಲ್ಲಿ ಪಾರ್ವತಿ ವೇಷ ಧರಿಸಿ ಯೋಗೇಶ್ ಗುಪ್ತಾ ನೃತ್ಯ ಮಾಡುತ್ತಿದ್ದ. ಅಲ್ಲಿ ನೆರೆದಿದ್ದ ಜನರೆಲ್ಲರೂ ಆ ನೃತ್ಯವನ್ನು ಆಹ್ಲಾದಿಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಆತ ಕುಸಿದು ಅಲ್ಲಿಯೇ ಬೀಳುತ್ತಾನೆ. ಅದಾದ ಬಳಿಕವೂ ಕೆಲ ಸೆಕೆಂಡಿನ ನಂತರ ಕೆಲವು ಸ್ಟೇಪ್‍ಗಳನ್ನು ಮಾಡುತ್ತಾನೆ. ಆ ಬಳಿಕ ಆತ ಅಲ್ಲಿಂದ ಏಳುವುದೇ ಇಲ್ಲ. ಇದನ್ನೂ ಓದಿ: ರಾಜಪಥ್‍ನಿಂದ ಕರ್ತವ್ಯ ಪಥವಾಗಿ ಬದಲಾದ ದೆಹಲಿ ಐಕಾನಿಕ್ ರಸ್ತೆ ಹೇಗೆ ಅಭಿವೃದ್ಧಿಯಾಗಿದೆ ಗೊತ್ತಾ?

    ಆದರೆ ದುರಂತವೆಂದರೆ ಕೆಲಕಾಲ ಅಲ್ಲಿ ನೆರೆದಿದ್ದ ಪ್ರೇಕ್ಷಕರು ಆತ ಇನ್ನೂ ಪ್ರದರ್ಶನವನ್ನೇ ನೀಡುತ್ತಿದ್ದಾನೆ ಎಂದು ಕೊಳ್ಳುತ್ತಾರೆ. ಆದರೆ ಕೆಲ ನಿಮಿಷಗಳಾದರೂ ಆತ ಏಳದಿದ್ದಾಗ ಅಲ್ಲಿದ್ದ ಶಿವನ ವೇಷವನ್ನು ಧರಿಸಿದ ಯೋಗೇಶ್ ಬಳಿ ಹೋಗಿ ಪರೀಕ್ಷೆ ನಡೆಸುತ್ತಾನೆ. ಆದರೂ ಆತನಿಗೆ ಎಚ್ಚರವಾಗಿಲ್ಲವೆಂದು ಅಲ್ಲಿದ್ದ ಸಿಬ್ಬಂದಿಯನ್ನು ಕರೆಯುತ್ತಾನೆ. ತಕ್ಷಣ ಯೋಗೇಶನನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಯೋಗೇಶ್ ಗುಪ್ತಾ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದರು. ಇದನ್ನೂ ಓದಿ: ಉಗ್ರ ಯಾಕೂಬ್ ಮೆಮನ್ ಸಮಾಧಿ ಸೌಂದರ್ಯೀಕರಣ – ಉದ್ಧವ್‌ ವಿರುದ್ಧ ಬಿಜೆಪಿ ಕಿಡಿ

    Live Tv
    [brid partner=56869869 player=32851 video=960834 autoplay=true]

  • ಹನುಮನ ವೇಷ ಧರಿಸಿದ್ದ ವ್ಯಕ್ತಿ ಪ್ರದರ್ಶನ ನೀಡುತ್ತಲೇ ಕುಸಿದು ಸಾವು

    ಹನುಮನ ವೇಷ ಧರಿಸಿದ್ದ ವ್ಯಕ್ತಿ ಪ್ರದರ್ಶನ ನೀಡುತ್ತಲೇ ಕುಸಿದು ಸಾವು

    ಲಕ್ನೋ: ಗಣೇಶ ಚತುರ್ಥಿ ಆಚರಣೆಯಲ್ಲಿ ಹನುಮಂತನ ವೇಷ ಧರಿಸಿ ನೃತ್ಯ ಪ್ರದರ್ಶನ ಮಾಡುತ್ತಿದ್ದ ಕಲಾವಿದನೊಬ್ಬ ಮೃತಪಟ್ಟ ಘಟನೆ ಉತ್ತರಪ್ರದೇಶದ ಮೈನ್‍ಪುರಿದಲ್ಲಿ ನಡೆದಿದೆ.

    ಮೃತರನ್ನು ಹನುಮಂತರನ ವೇಷ ಧರಿಸಿದ್ದ ರವಿ ಶರ್ಮಾ ಎಂದು ಗುರುತಿಸಲಾಗಿದೆ. ಈತ ಉತ್ತರಪ್ರದೇಶದ ಮೈನ್‍ಪುರಿಯಲ್ಲಿ ಪ್ರದರ್ಶನ ನೀಡುತ್ತಿದ್ದ ವೇಳೆ ಮೃತಪಟ್ಟಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

    ರವಿ ಶರ್ಮಾ ಅವರು ಮೈನ್‍ಪುರಿಯ ಕೊತ್ವಾಲಿ ಪ್ರದೇಶದ ಶಿವ ದೇವಾಲಯದಲ್ಲಿ ಗಣೇಶ ಚತುರ್ಥಿ ಆಚರಣೆಯ ಅಂಗವಾಗಿ ಬಂದಿದ್ದ ಭಜನಾ ತಂಡದ ಭಾಗವಾಗಿದ್ದರು. ಇದನ್ನೂ ಓದಿ: ತಮ್ಮ ಮಗುವಿಗೆ ಭಾರತೀಯ ಖಾದ್ಯದ ಹೆಸರಿಟ್ಟ ವಿದೇಶಿ ದಂಪತಿ

    ನೃತ್ಯ ಪ್ರದರ್ಶನದ ಸಮಯದಲ್ಲಿ ಅವರು ಹನುಮಾನ್ ವೇಷ ಧರಿಸಿ ವೇದಿಕೆಯ ಮೇಲೆ ಕುಸಿದುಬಿದ್ದರು. ಕೆಲ ನಿಮಿಷಗಳ ಕಾಲ ಅಲ್ಲಿ ನರೆದಿದ್ದ ಪ್ರೇಕ್ಷಕರಿಗೆ ಅವರು ಕುಸಿದು ಬಿದ್ದಿದ್ದಾರೆ ಎಂದೇ ತಿಳಿದಿರಲಿಲ್ಲ. ಬದಲಿಗೆ ಪ್ರದರ್ಶನ ನೀಡುತ್ತಿದ್ದಾರೆ ಎಂದು ಕೊಂಡಿದ್ದರು. ಇದಾದ ನಂತರ ಅವರನ್ನು ಮೈನ್‍ಪುರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ರವಿ ಶರ್ಮಾ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಜನಜಂಗುಳಿ ಪ್ರದೇಶದಲ್ಲಿ ಹಾಡಹಗಲೇ ಗ್ಯಾಂಗ್ ಅಟ್ಯಾಕ್

    Live Tv
    [brid partner=56869869 player=32851 video=960834 autoplay=true]

  • ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಯ್ತು ಅಪರೂಪದ ಕಪ್ಪು ವಜ್ರ

    ಅಬುಧಾಬಿ: 555-ಕ್ಯಾರೆಟ್‌ನ ಪರೂಪದ ಕಪ್ಪು ವಜ್ರವನ್ನು ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಅಪರೂಪದಲ್ಲಿ ಅಪರೂಪದ ವಜ್ರ ಭೂಮಿಯ ವಸ್ತುವೇ ಅಲ್ಲ ಎಂದು ನಂಬಲಾಗಿದೆ.

    ಎನಿಗ್ಮಾ ಹೆಸರಿನ ಅಪರೂಪದ ಕಪ್ಪು ಕಾರ್ಬನಾಡೋ ವಜ್ರವನ್ನು ದುಬೈನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಈ ವಜ್ರವನ್ನು ಫೆಬ್ರವರಿಯಲ್ಲಿ ಹರಾಜಿಗೆ ಇಡಲಿದ್ದು, 5 ಮಿಲಿಯನ್ ಡಾಲರ್‌ಗೆ ಮಾರಾಟವಾಗುವ ಸಾಧ್ಯತೆ ಇದೆ. ಇದರ ಮಾರಾಟಕ್ಕೂ ಮೊದಲು ಸೋಮವಾರ ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಇದನ್ನೂ ಓದಿ: ಹಾಂಕಾಂಗ್‌ನಲ್ಲಿ 2000 ಪ್ರಾಣಿಗಳನ್ನು ಕೊಲ್ಲಲು ಆದೇಶ!

    2.6 ಶತಕೋಟಿ ವರ್ಷಗಳ ಹಿಂದೆ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದಾಗ ಈ ವಜ್ರ ರಚನೆಯಾಗಿದೆ ಎಂದು ಆಭರಣ ತಜ್ಞ ಸೋಫಿ ಸ್ಟೀವನ್ಸ್ ಅಭಿಪ್ರಾಯಪಟ್ಟಿದ್ದಾರೆ. 555.55-ಕ್ಯಾರೆಟ್ ಹೊಂದಿರುವ ವಜ್ರವನ್ನು ಕತ್ತರಿಸುವುದು ಅತ್ಯಂತ ಕಷ್ಟಕರ. ಆದರೂ ತಜ್ಞರು ಅದನ್ನು 55 ಮುಖದ ಆಭರಣವಾಗಿ ಪರಿವರ್ತಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಮಿನಿ ಕೃತಕ ಚಂದ್ರ – ಚೀನಾದ ಹೊಸ ಪ್ರಯತ್ನ

    ವಿಭಿನ್ನವಾದ ಈ ವಜ್ರ ಅತಿ ದೊಡ್ಡ ಕಟ್ ಡೈಮಂಡ್ ಎಂದು ಗಿನ್ನೆಸ್ ವಿಶ್ವ ದಾಖಲೆಯನ್ನೂ ಹೊಂದಿದೆ. ದುಬೈನಲ್ಲಿ ಪ್ರದರ್ಶನದ ಬಳಿಕ ವಜ್ರವನ್ನು ಲಾಸ್ ಏಂಜಲೀಸ್ ಮತ್ತು ಲಂಡನ್‌ಗೆ ಕೊಂಡೊಯ್ಯಲಾಗುತ್ತದೆ. ಫೆಬ್ರವರಿ 3ರಿಂದ ಏಳು ದಿನಗಳ ಕಾಲ ಹರಾಜು ನಡೆಯಲಿದೆ ಎಂದು ವರದಿಗಳು ತಿಳಿಸಿವೆ.

  • ಏರೋ ಇಂಡಿಯಾ ಅಂತರಾಷ್ಟ್ರೀಯ ವೈಮಾನಿಕ ಪ್ರದರ್ಶನಕ್ಕೆ ಕೌಂಟ್ ಡೌನ್

    ಏರೋ ಇಂಡಿಯಾ ಅಂತರಾಷ್ಟ್ರೀಯ ವೈಮಾನಿಕ ಪ್ರದರ್ಶನಕ್ಕೆ ಕೌಂಟ್ ಡೌನ್

    ಬೆಂಗಳೂರು : ಐತಿಹಾಸಿಕ ಏರ್ ಶೋಗೆ ಕ್ಷಣಗಣನೆ ಆರಂಭವಾಗಿದೆ. 13ನೇ ಆವೃತ್ತಿಯ ಏರೋ ಇಂಡಿಯಾ ಅಂತರಾಷ್ಟ್ರೀಯ ವೈಮಾನಿಕ ಪ್ರದರ್ಶನಕ್ಕೆ ಕೌಂಟ್‍ಡೌನ್ ಶುರುವಾಗಿದ್ದು, ಫೆ.3 ರಿಂದ 5ರವರೆಗೆ ಯಲಹಂಕದ ಭಾರತೀಯ ವಾಯುನೆಲೆಯಲ್ಲಿ ಏರ್ ಶೋ ನಡೆಯಲಿದೆ.

    ದೇಶ-ವಿದೇಶಗಳ ಲೋಹದ ಹಕ್ಕಿ ಹಾರಾಟಕ್ಕೆ ಸಕಲ ಸಿದ್ಧತೆ ನಡೆಯುತ್ತಿದ್ದು, ಕೋವಿಡ್ ಸೋಂಕಿತ ಭೀತಿಯ ಮಧ್ಯೆಯೂ ಪ್ರದರ್ಶಕರ ಉತ್ಸಾಹ ತೋರಿದ್ದಾರೆ.

    14 ದೇಶದ 78 ಪ್ರದರ್ಶಕರು, ಭಾರತೀಯ ಮೂಲದ 523 ಪ್ರದರ್ಶಕರು ಈ ಏರೋ ಇಂಡಿಯಾ ಪ್ರದರ್ಶನದಲ್ಲಿ ಭಾಗಿಯಾಗಲಿವೆ. ಒಟ್ಟು 601 ಪ್ರದರ್ಶಕರ ನೊಂದಣಿಯಾಗಿದ್ದು, ಈ ಪೈಕಿ 220 ಕಂಪನಿಗಳಿಂದ ವರ್ಚುವಲ್ ಪ್ರದರ್ಶನ ನಡೆಯಲಿದೆ.

    2019ರ ಏರೋ ಇಂಡಿಯಾ ಪ್ರದರ್ಶನದಲ್ಲಿ ಭಾರತೀಯ ಮೂಲದ 238 ಪ್ರದರ್ಶಕರು, 165 ವಿದೇಶಿ ಪ್ರದರ್ಶಕರು ಸೇರಿ ಒಟ್ಟು 403 ಪ್ರದರ್ಶಕರು ಭಾಗಿಯಾಗಿದ್ದರು. 22 ದೇಶಗಳು ಏರೋ ಇಂಡಿಯಾದಲ್ಲಿ ಭಾಗಿಯಾಗಿದ್ದವು. ಆದರೆ ಈ ವರ್ಷ ಕೋವಿಡ್ ಹಿನ್ನಲೆ ಈ ವರ್ಷ 14 ರಾಷ್ಟ್ರಗಳು ಏರೋ ಇಂಡಿಯಾದಲ್ಲಿ ಭಾಗಿಯಾಗಲಿವೆ.

  • ನವರಂಗ್ ಚಿತ್ರಮಂದಿರದಲ್ಲಿ ಪ್ರದರ್ಶನ ಸ್ಥಗಿತ

    ನವರಂಗ್ ಚಿತ್ರಮಂದಿರದಲ್ಲಿ ಪ್ರದರ್ಶನ ಸ್ಥಗಿತ

    ಬೆಂಗಳೂರು: ನಗರದ ಖ್ಯಾತ ಚಿತ್ರಮಂದಿರ ನವರಂಗ್ ಚಿತ್ರ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದ್ದು, ಹೊಸ ರೂಪ ಪಡೆದುಕೊಂಡು ಮತ್ತೆ ಆರಂಭವಾಗಲಿದೆ.

    ಡಾ. ರಾಜ್‍ಕುಮಾರ್ ರಸ್ತೆಯಲ್ಲಿರುವ ನವರಂಗ್ ಚಿತ್ರ ಮಂದಿರದಲ್ಲಿ ಸದ್ಯ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಮಾತನಾಡಿದ ಮಾಲೀಕ ಕೆಸಿಎನ್ ಮೋಹನ್, ತಾತ್ಕಾಲಿಕವಾಗಿ ಮಾತ್ರ ಚಿತ್ರಮಂದಿರವನ್ನು ಕ್ಲೋಸ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

    ಈಗಾಗಲೇ ನಗರದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಎರಡು, ಮೂರು ಸ್ಕ್ರೀನ್ ಗಳನ್ನು ಹೊಂದಿರುವ ಹಲವು ಮಲ್ಟಿಪ್ಲೆಕ್ಸ್ ಥಿಯೇಟರ್ ಗಳು ನಿರ್ಮಾಣವಾಗಿದೆ. ಹಾಗಾಗಿ ನವರಂಗ ಚಿತ್ರಮಂದಿರವನ್ನು ಕೂಡ ಇದೇ ರೀತಿ ನವೀಕರಣ ಮಾಡಲು ಮಾಲೀಕರು ಮುಂದಾಗಿದ್ದಾರೆ.

    ನಗರದಲ್ಲಿ ಇತ್ತೀಚೆಗೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಜಾಸ್ತಿ ಆಗುತ್ತಿರುವುರಿಂದ ಜಾಸ್ತಿ ಲಾಭ ಸಿಗುತ್ತಿಲ್ಲ. ಅನಿವಾರ್ಯವಾಗಿ ಚಿತ್ರಮಂದಿರಗಳಲ್ಲಿ ಕೆಲ ಆಧುನಿಕ ಬದಲಾವಣೆಗಳನ್ನು ಮಾಡಬೇಕು. ಚಿತ್ರಮಂದಿರ ನವೀಕರಣ ಮಾಡುತ್ತಿರುವ ವಿಷಯ ತಿಳಿದ ಕೆಲವರು, ಥಿಯೇಟರ್ ಕೆಡವಿ ಶಾಪಿಂಗ್ ಮಾಲ್ ಮಾಡಲು ಸಲಹೆ ನೀಡಿದ್ದರು. ಆದರೆ ಇದು ನಮ್ಮ ತಂದೆಯವರ ಕನಸು. ಹಾಗಾಗಿ ನಾನು ಚಿತ್ರಮಂದಿರ ಕೆಡವದೆ ಹೊಸ ರೂಪ ಪಡೆದುಕೊಂಡು ಮತ್ತೆ ರೀ-ಓಪನ್ ಮಾಡುತ್ತೇನೆ ಎಂದು ಕೆಸಿಎನ್ ಮೋಹನ್ ಪ್ರತಿಕ್ರಿಯಿಸಿದ್ದಾರೆ.

    1963ರಲ್ಲಿ ಎಸ್ ನಿಜಲಿಂಗಪ್ಪವರು ಚಿತ್ರಮಂದಿರವನ್ನು ಉದ್ಘಾಟನೆ ಮಾಡಿದ್ದರು. ರಾಜ್‍ಕುಮಾರ್ ಅವರ `ವೀರ ಕೇಸರಿ’ ಸಿನಿಮಾ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ನವರಂಗ ಚಿತ್ರಮಂದಿಕ್ಕೆ ಸುಮಾರು 60 ವರ್ಷಗಳ ಇತಿಹಾಸವನ್ನು ಇದೆ.

    ಇತ್ತೀಚೆಗೆ ಈ ಚಿತ್ರಮಂದಿರದಲ್ಲಿ ಯಂಗ್ ರೆಬೆಲ್ ಸ್ಟಾರ್ ನಟ ಅಭಿಷೇಕ್ ನಟನೆಯ ‘ಅಮರ್’ ಸಿನಿಮಾ ಬಿಡುಗಡೆಯಾಗಿತ್ತು. ಡಾ. ರಾಜ್‍ಕುಮಾರ್ ಕುಟುಂಬ ಎಲ್ಲಾ ಸಿನಿಮಾಗಳು ಈ ಚಿತ್ರಮಂದಿರಲ್ಲಿ ಬಿಡುಗಡೆಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ `ಮುಂಗಾರು ಮಳೆ’ ಸಿನಿಮಾ ಚಿತ್ರಮಂದಿರಲ್ಲಿ 25 ವಾರ ಪ್ರದರ್ಶನ ಕಂಡಿತ್ತು.

  • ದರ್ಶನ್ ಸೆರೆ ಹಿಡಿದ ಫೋಟೋಗಳಿಂದ ಬಂತು ಬರೋಬ್ಬರಿ 3.75 ಲಕ್ಷ ರೂ.!

    ದರ್ಶನ್ ಸೆರೆ ಹಿಡಿದ ಫೋಟೋಗಳಿಂದ ಬಂತು ಬರೋಬ್ಬರಿ 3.75 ಲಕ್ಷ ರೂ.!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೆರೆ ಹಿಡಿದ ಫೋಟೋಗಳ ಮಾರಾಟದಿಂದ 3 ಲಕ್ಷಕ್ಕೂ ಅಧಿಕ ರೂ. ಸಂಗ್ರಹವಾಗಿದೆ.

    ಮಾರ್ಚ್ 3ರಂದು ವಿಶ್ವ ವನ್ಯಜೀವಿ ದಿನದ ಹಿನ್ನೆಲೆಯಲ್ಲಿ ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್‍ನಲ್ಲಿ ದರ್ಶನ್ ಅವರು ಸೆರೆ ಹಿಡಿದ 75 ಆಯ್ದ ಛಾಯಾಚಿತ್ರಗಳನ್ನು ಮೂರು ದಿನಗಳ ಕಾಲ ಪ್ರದರ್ಶನಕ್ಕೆ ಇಡಲಾಗಿತ್ತು. ಮೂರು ದಿನಗಳಲ್ಲಿ ಒಟ್ಟು 3.75 ಲಕ್ಷ ರೂ. ಹಣ ಸಂಗ್ರಹವಾಗಿದೆ.

    ತಮ್ಮ ಚಿತ್ರಗಳ ಪ್ರದರ್ಶನದ ಜೊತೆಗೆ ಮಾರಾಟದ ಆಯೋಜನೆ ಕೂಡ ನಡೆದಿತ್ತು. ಪ್ರತಿ ಚಿತ್ರಕ್ಕೆ 2 ಸಾವಿರ ರೂ. ಬೆಲೆ ನಿಗದಿ ಆಗಿತ್ತು. ಅಲ್ಲದೇ ಫೋಟೋ ಜೊತೆಗೆ ದರ್ಶನ್ ಆಟೋಗ್ರಾಫ್ ಪಡೆಯಲು 500 ಹೆಚ್ಚುವರಿ ಹಣ ನೀಡಬೇಕಾಗಿತ್ತು. ಮೂರು ದಿನಗಳು ಪ್ರದರ್ಶನ ನಡೆದ ಜಾಗದಲ್ಲಿ ದರ್ಶನ್ ಆಟೋಗ್ರಾಫ್ ನೀಡಿದ್ದಾರೆ.

    ಮಾರ್ಚ್ 1ರಂದು ದರ್ಶನ್ ಹಾಗೂ ಸಂದೇಶ್ ನಾಗರಾಜ್ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಇದಾದ ಬಳಿಕ ಛಾಯಾಚಿತ್ರದ ಪ್ರದರ್ಶನದ ಬಗ್ಗೆ ಮಾತನಾಡಿದ ದರ್ಶನ್, ಒಂದು ಒಳ್ಳೆಯ ಉದ್ದೇಶದಿಂದ ಈ ಪ್ರದರ್ಶನವನ್ನು ಆಯೋಜಿಸಿದ್ದೇವೆ. ಇದರಲ್ಲಿ ಬಂದ ಹಣವನ್ನು ಅರಣ್ಯ ಸಂರಕ್ಷಣೆಗೆ ಖರ್ಚು ಮಾಡುತ್ತೇನೆ ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv