Tag: ಪ್ರತಿಸುಂಕ

  • ಚಿನ್ನದ ಬೆಲೆ ಗಗನಕ್ಕೆ – ಮಾರುಕಟ್ಟೆ ಏರಿಳಿತದ ನಡುವೆಯೂ ನೆಚ್ಚಿನ ಹೂಡಿಕೆಯಾಗಲು ಕಾರಣವೇನು?

    ಚಿನ್ನದ ಬೆಲೆ ಗಗನಕ್ಕೆ – ಮಾರುಕಟ್ಟೆ ಏರಿಳಿತದ ನಡುವೆಯೂ ನೆಚ್ಚಿನ ಹೂಡಿಕೆಯಾಗಲು ಕಾರಣವೇನು?

    ಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹಲವು ರಾಷ್ಟ್ರಗಳ ಮೇಲೆ ಪ್ರತಿಸುಂಕ ವಿಧಿಸಿದ ಬಳಿಕ ವ್ಯಾಪಾರ, ವಾಣಿಜ್ಯ ವಲಯದಲ್ಲಿ ಏರಿಳಿತ ಶುರುವಾಗಿದೆ. ಷೇರು ಮಾರುಕಟ್ಟೆಯಲ್ಲೂ ಕೂಡ ಹಾವು-ಏಣಿ ಆಟ ಮುಂದುವರಿದಿದೆ. ಜಾಗತಿಕ ಮಾರುಕಟ್ಟೆಗಳು ಯುಎಸ್ ಟ್ರೆಷರಿ ಬಿಲ್‌ಗಳ (‘ಟಿ-ಬಿಲ್’ ಯುಎಸ್ ಸರ್ಕಾರದ ಖಜಾನೆ ಇಲಾಖೆಯಿಂದ ಬೆಂಬಲಿತವಾದ ಅಲ್ಪಾವಧಿಯ ಯುಎಸ್ ಸರ್ಕಾರದ ಸಾಲದ ಬಾಧ್ಯತೆಯಾಗಿದೆ) ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಿವೆ. ಇಂತಹ ಸಂದಿಗ್ಧ ಸನ್ನಿವೇಶದಲ್ಲೂ ಸಹ ಚಿನ್ನದ ಬೆಲೆ ಮಾತ್ರ ಗಗನಕ್ಕೆ ಏರುತ್ತಲೇ ಇದೆ. ಚಿನ್ನದ ಮೇಲಿನ ಹೂಡಿಕೆ ಹೆಚ್ಚು ಸುರಕ್ಷಿತ ಎಂಬುದು ಜನರ ಭಾವನೆಯಾಗಿದ್ದು, ಹೂಡಿಕೆದಾರರು ಚಿನ್ನದ ಕಡೆ ಮುಖ ಮಾಡಿದ್ದಾರೆ. ಈ ಕಲ್ಪನೆ ನಿಜವೇ? ಪ್ರಸ್ತುತ ಆರ್ಥಿಕ ಪ್ರಕ್ಷುಬ್ಧತೆಯ ಸಮಯದಲ್ಲಿ ಚಿನ್ನ ತನ್ನ ಮೌಲ್ಯ ಕಾಪಾಡಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಹೌದು.. ಎಂಬುದೇ ಉತ್ತರ.

    ಟ್ರಂಪ್ ಪ್ರತಿಸುಂಕ (Tariff) ವಿಧಿಸುವ ಮೂಲಕ ಜಾಗತಿಕ ಆರ್ಥಿಕತೆಗೆ ಚಾಟಿ ಬೀಸಿದ್ದರಿಂದ ಚಿನ್ನವು (Gold Price Hike) ಎಂದಿಗಿಂತಲೂ ಉತ್ತಮವಾಗಿದೆ ಎಂಬುದನ್ನು ಅದರ ಬೆಲೆಯೇ ಸೂಚಿಸುತ್ತಿದೆ. ಇದೇ ಮಾರ್ಚ್ 15ರ ಹೊತ್ತಿಗೆ ಮೊದಲ ಬಾರಿಗೆ ಚಿನ್ನವು ‘ಔನ್ಸ್’ಗೆ (28.34 ಗ್ರಾಂ) ಅಂದಾಜು 2,56,161 ರೂ. (3,000 ಡಾಲರ್) ಆಗಿದೆ. ಸ್ಥಳೀಯವಾಗಿ ಗಮನಿಸಿದರೆ, ಚಿನ್ನದ ಬೆಲೆಯು 10 ಗ್ರಾಂಗೆ 95,000 ರೂ.ಗೆ ಏರಿಕೆ ಕಂಡಿದೆ. ಹಳದಿ ಲೋಹದ ಹೊಳಪಿನ ಓಟವು, ಪ್ರಪಂಚದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳಿಂದ ಚಿನ್ನ ಸಂಗ್ರಹಣೆ, ಹಣದುಬ್ಬರದ ಕಾಳಜಿ ಮತ್ತು ಸಾಂಕ್ರಾಮಿಕ ನಂತರ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಮುಂದುವರಿದಿದೆ. ಇದನ್ನೂ ಓದಿ: ಗೋಲ್ಡ್ ಪ್ರಿಯರಿಗೆ ಶಾಕ್‌ – ಚಿನ್ನದ ಬೆಲೆ ಒಂದೇ ದಿನ 6,000 ರೂ. ಏರಿಕೆ

    ಏನಿದು ಯುಎಸ್ ಟ್ರೆಷರಿ ಬಾಂಡ್?
    ಜಗತ್ತಿನ ದೈತ್ಯ ಅಮೆರಿಕದ ಆರ್ಥಿಕತೆ ನಿಂತಿರುವುದೇ ಟ್ರೆಷರಿ ಬಾಂಡ್ ಮೇಲೆ. ಯುಎಸ್ ಸರ್ಕಾರಕ್ಕೆ ಪ್ರತಿ ವರ್ಷ ಸಾಕಷ್ಟು ಹಣ ಬೇಕು, ಸಂಬಳ ನೀಡಬೇಕು, ಸೈನ್ಯಕ್ಕೆ ಹಣ ಬೇಕು, ರಸ್ತೆ-ಆಸ್ಪತ್ರೆ ಇತರೆ ಮೂಲಸೌಕರ್ಯಗಳಿಗೂ ಸಾಲ ಮಾಡಿ ಹಣ ತರುತ್ತದೆ. ಈ ಸಾಲವನ್ನು ಟ್ರೆಷರಿ ಬಾಂಡ್‌ನಿಂದ ಅಮೆರಿಕ ಸರ್ಕಾರಕ್ಕೆ ಬರುತ್ತದೆ. ಅಮೆರಿಕ ಸರ್ಕಾರ, ಅಲ್ಪಾವಧಿ-ಮಧ್ಯಮ-ಧೀರ್ಘಾವಧಿ ಎಂದು ಮೂರು ವಿಧದಲ್ಲಿ ಬಾಂಡ್ ಬಿಡುಗಡೆ ಮಾಡುತ್ತದೆ. ಈ ಬಾಂಡನ್ನು ಸಾಮಾನ್ಯ ಜನರು, ಕಂಪನಿಗಳು ಮತ್ತು ಯಾವುದೇ ದೇಶವು ಖರೀದಿಸಲು ಅವಕಾಶ ಇದೆ. ಅಮೆರಿಕದ ಸಾಲದಲ್ಲಿ ಶೇ.30 ವಿದೇಶಿ ಹೂಡಿಕೆಗಳಿಗೆ ಮಾತ್ರ ಅವಕಾಶ ಇದೆ. ಜಗತ್ತಿನಲ್ಲಿ ವ್ಯಾಪಾರ, ವಹಿವಾಟನ್ನು ಡಾಲರ್ ಮುಖಾಂತರವೇ ನಡೆಸಲಾಗುವುದು. ಹೀಗಾಗಿ, ಬಾಂಡ್ ಮೂಲಕ ಮೀಸಲು ನಿಧಿ ಖರೀದಿಸಲು ಇತರೆ ದೇಶಗಳು ಮುಂದಾಗುತ್ತವೆ. ಯಾವ ದೇಶ ಹೆಚ್ಚು ಮೀಸಲು ನಿಧಿ ಹೊಂದಿರುತ್ತೋ ಅದು ಆರ್ಥಿಕವಾಗಿ ಸುಭದ್ರವಾಗಿರುತ್ತದೆ.

    ಟ್ಯಾರಿಫ್ ಅವ್ಯವಸ್ಥೆ ನಡುವೆ ಚಿನ್ನದ ಏರಿಕೆ
    ಎಸ್&ಪಿ 500 (ಸ್ಟಾಕ್ ಮಾರುಕಟ್ಟೆ ಸೂಚ್ಯಂಕ) ಈ ತಿಂಗಳ ಆರಂಭದಲ್ಲಿ 10.5% ಕುಸಿದಾಗ, ಮಾರುಕಟ್ಟೆ ಮೌಲ್ಯ ಕೂಡ 6.6 ಮಿಲಿಯನ್ ಡಾಲರ್‌ನಷ್ಟು ಕುಸಿತ ಕಂಡಿತು. ಇದರ ಎಫೆಕ್ಟ್‌ನಿಂದಾಗಿ ಅಮೆರಿಕ ಬಾಂಡ್ ಮೇಲೆ ಹೂಡಿಕೆ ಮಾಡುತ್ತಿರುವವರು, ಅದನ್ನು ಹಿಂತೆಗೆದುಕೊಳ್ಳಬೇಕೇ ಎಂದು ಪ್ರಶ್ನಿಸುತ್ತಿದ್ದಾರೆ. ಚಿನ್ನದ ಮೇಲಿನ ಹೂಡಿಕೆ ಕಡೆ ಮುಖ ಮಾಡಿದ್ದಾರೆ. ಎಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ಚಿನ್ನದ ಬೆಲೆಯಲ್ಲಾಗಲಿ ಅಥವಾ ಅದರ ಮೇಲಿನ ಹೂಡಿಕೆಗೆ ಎಫೆಕ್ಟ್ ಆಗಲಿ ಆಗಿಲ್ಲ. ಇದನ್ನೂ ಓದಿ: ಟ್ಯಾರಿಫ್‌ ವಾರ್‌ಗೆ ತಾತ್ಕಾಲಿಕ ಬ್ರೇಕ್‌ – ಭಾರತೀಯ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ

    ‘ಚಿನ್ನ ಯಾವತ್ತೂ ಸುರಕ್ಷಿತ ಧಾಮ ಇದ್ದಂತೆ. ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ಅದು ದುರ್ಬಲಗೊಂಡಿಲ್ಲ. ಆರ್ಥಿಕ ದಿವಾಳಿ ಆರಂಭದಲ್ಲಿ ಚಿನ್ನದ ಬೆಲೆ ಕುಸಿತ ಕಂಡರೂ, ನಂತರದ ದಿನಗಳಲ್ಲಿ ಅದರ ಬೆಲೆ ಏರಿಕೆಯನ್ನು ನಾವು ನೋಡುತ್ತೇವೆ. ಚಿನ್ನದ ಬೇಡಿಕೆಯಲ್ಲಿ ತೀವ್ರ ಹೆಚ್ಚಳವಾಗುತ್ತದೆ’ ಎಂದು ಗೋಲ್ಡ್‌ಮನ್ ಸ್ಯಾಚ್ಸ್‌ನ ಸರಕುಗಳ ವಿಶ್ಲೇಷಕ ಲೀನಾ ಥಾಮಸ್ ವಿಶ್ಲೇಷಿಸಿದ್ದಾರೆ. 2020ರ ಕೋವಿಡ್ ಸಂದರ್ಭದಲ್ಲೂ ಆರ್ಥಿಕತೆ ಕುಸಿತ ಕಂಡಾಗ, ಚಿನ್ನವೂ ಶೇ.5ರಷ್ಟು ಕುಸಿದಿತ್ತು. ಅಷ್ಟೇ ತ್ವರಿತವಾಗಿ ಏರಿಕೆ ಕಂಡಿತು ಎಂದು ಥಾಮಸ್ ತಿಳಿಸಿದ್ದಾರೆ.

    ‘ಸುರಕ್ಷಿತ ಧಾಮ’ ಚಿನ್ನ
    ಬಿಕ್ಕಟ್ಟಿನ ಸಂದರ್ಭದಲ್ಲಿ ಚಿನ್ನ ಸುರಕ್ಷಿತ ಧಾಮ ಎಂಬ ಭಾವನೆ ದೀರ್ಘಕಾಲದ್ದಾಗಿದೆ. ಯುಎಸ್, ಭಾರತ, ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಚಿನ್ನ ಜನಪ್ರಿಯ ಲೋಹವಾಗಿದೆ. ಮಾನವ ಇತಿಹಾಸದಲ್ಲಿ ಇದುವರೆಗೆ ಸುಮಾರು 2 ಲಕ್ಷ ಟನ್‌ಗಳಷ್ಟು ಚಿನ್ನವನ್ನು ಗಣಿಗಾರಿಕೆ ಮಾಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಚಿನ್ನದ ಮೇಲಿನ ಆಕರ್ಷಣೆಯೂ ಹೆಚ್ಚಾಗಿದೆ. ಹಿಂದೆ 28 ಗ್ರಾಂ ಚಿನ್ನದ ಬೆಲೆಯು ಅಂದಾಜು 85,387 ರೂ.ನಿಂದ 1,70,774 ಡಾಲರ್‌ಗೆ ಏರಲು ಬರೋಬ್ಬರಿ 12 ವರ್ಷಗಳನ್ನು ತೆಗೆದುಕೊಂಡಿತ್ತು. ಬಳಿಕ ಅಂದಾಜು 2,56,161 ರೂ. ಗಡಿದಾಟಲು ಕೇವಲ 5 ವರ್ಷಗಳನ್ನಷ್ಟೇ ತೆಗೆದುಕೊಂಡಿದೆ. ಇದು ಮೂರು ವರ್ಷದ ಅವಧಿಯಲ್ಲಿ 3,41,549 ರೂ.ಗೆ ಏರಬಹುದು ಎಂದು ಅಂದಾಜು 3,41,549 ರೂ.ಗೆ ಹೆಚ್ಚಬಹುದು ಎನ್ನಲಾಗಿದೆ. ಇದನ್ನೂ ಓದಿ: ‘ಆಪಲ್‌’ ಮೇಲೆ ಟ್ರಂಪ್‌ ಟ್ಯಾರಿಫ್‌ ಎಫೆಕ್ಟ್‌; ಮುಂದಿನ ಐಫೋನ್‌ ಉತ್ಪಾದನಾ ಕೇಂದ್ರವಾಗುತ್ತಾ ಭಾರತ?

    ಗೋಲ್ಡ್ಮನ್ ಸ್ಯಾಚ್ಸ್ ತನ್ನ 2025 ರ ಅಂತ್ಯದ ಚಿನ್ನದ ಬೆಲೆ ಮುನ್ಸೂಚನೆಯನ್ನು $3,300 ರಿಂದ $3,700ಗೆ, $3,650-$3,950 ರ ಯೋಜಿತ ಶ್ರೇಣಿಯೊಂದಿಗೆ ಹೆಚ್ಚಿಸಿತು. ‘ಕಳೆದ ನಾಲ್ಕು ವರ್ಷಗಳಲ್ಲಿ ಚಿನ್ನವು ವಾರ್ಷಿಕವಾಗಿ 24-25 ಪ್ರತಿಶತದಷ್ಟು ಆದಾಯವನ್ನು ನೀಡಿದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣೆಯ ನಂತರ, ಚಿನ್ನ ಮತ್ತಷ್ಟು ವಿಜೃಂಭಿಸುತ್ತಿದೆ. ಜಾಗತಿಕವಾಗಿ ಸೂಕ್ಷ್ಮ ಮತ್ತು ಸ್ಥೂಲ ರಂಗಗಳಲ್ಲಿ ಸುಂಕದ ಮೇಲಿನ ಅನಿಶ್ಚಿತತೆಯಿಂದಾಗಿ, ಚಿನ್ನವು ತುಂಬಾ ಪ್ರಬಲವಾಗಿ ಕಾಣುತ್ತದೆ. ಅನಿಶ್ಚಿತತೆ ಇದ್ದಾಗಲೆಲ್ಲಾ ಚಿನ್ನವು ಸುರಕ್ಷಿತ ಧಾಮ ಆಸ್ತಿ ಎಂದೇ ಪರಿಗಣಿತವಾಗಿದೆ’ ಎಂದು ಮೋತಿಲಾಲ್ ಒಸ್ವಾಲ್ ಫಿನಾಲ್ಸಿಯಲ್ ಸರ್ವಿಸಸ್‌ನ ರಿಸರ್ಚ್ ಕಮಾಡಿಟಿಸ್‌ನ ಮುಖ್ಯಸ್ಥ ನವನೀತ್ ದಮಾನಿ ಅಭಿಪ್ರಾಯಪಟ್ಟಿದ್ದಾರೆ.

    ಚಿನ್ನದತ್ತ ಕೇಂದ್ರೀಯ ಬ್ಯಾಂಕ್‌ಗಳ ಚಿತ್ತ
    ಪ್ರಪಂಚದಾದ್ಯಂತ ಕೇಂದ್ರೀಯ ಬ್ಯಾಂಕ್‌ಗಳು ತಮ್ಮ ಮೀಸಲುಗಳಲ್ಲಿ ಅಮೆರಿಕ ಡಾಲರ್‌ಗಳ ಪಾಲನ್ನು (ಯುಎಸ್ ಮೀಸಲು ನಿಧಿ) ಕಡಿಮೆ ಮಾಡಲು ಮುಂದಾಗಿವೆ. ಬದಲಾಗಿ ಚಿನ್ನವನ್ನು ಖರೀದಿಸುತ್ತಿವೆ. ಇದು ಚಿನ್ನದ ಬೇಡಿಕೆಯನ್ನು ಹೆಚ್ಚಿಸಿದೆ. ಟ್ರಂಪ್ ಪ್ರತಿಸುಂಕ ವಿಧಿಸಿದಾಗಿನಿಂದ ಮಾರುಕಟ್ಟೆ ವಲಯದಲ್ಲಿ ಅವ್ಯವಸ್ಥೆ ಸೃಷ್ಟಿಯಾಗಿದೆ. ಹೀಗಾಗಿ, ಜಾಗತಿಕ ಹೂಡಿಕೆದಾರರು, ಯುಎಸ್ ಟ್ರೆಷರಿ ಬಿಲ್ ನಮಗೆ ಸಮಸ್ಯೆ ತಂದೊಡ್ಡದ ಆಸ್ತಿಯಾಗಿ ಅರ್ಹತೆ ಪಡೆದಿದೆಯೇ ಎಂದು ಪ್ರಶ್ನಿಸುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಹೂಡಿಕೆದಾರರು ಚಿನ್ನದ ಕಡೆಗೆ ಹೆಚ್ಚಿನ ಒಲವು ತೋರಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಗೋಲ್ಡ್ ಪ್ರಿಯರಿಗೆ ಶಾಕ್‌ – ಚಿನ್ನದ ಬೆಲೆ ಒಂದೇ ದಿನ 6,000 ರೂ. ಏರಿಕೆ

    ಈಗ ಚಿನ್ನದ ಬೆಲೆ ಎಷ್ಟಿದೆ?
    ದಿನ ಕಳೆದಂತೆ ಚಿನ್ನದ ಬೆಲೆ ಗಗನಕ್ಕೆ ಏರುತ್ತಲೇ ಇದೆ. ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 22 ಕ್ಯಾರೆಟ್ 1 ಗ್ರಾಂಗೆ 8,945 ರೂ. ಇದೆ. 24 ಕ್ಯಾರೆಟ್ 1 ಗ್ರಾಂ ಬೆಲೆ 9,758 ಕ್ಕೆ ಏರಿಕೆ ಆಗಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಈಗಿನ ದರ 89,450 ರೂ. ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 97,580 ರೂ.ಗೆ ಏರಿದೆ.

  • ‘ಆಪಲ್‌’ ಮೇಲೆ ಟ್ರಂಪ್‌ ಟ್ಯಾರಿಫ್‌ ಎಫೆಕ್ಟ್‌; ಮುಂದಿನ ಐಫೋನ್‌ ಉತ್ಪಾದನಾ ಕೇಂದ್ರವಾಗುತ್ತಾ ಭಾರತ?

    ‘ಆಪಲ್‌’ ಮೇಲೆ ಟ್ರಂಪ್‌ ಟ್ಯಾರಿಫ್‌ ಎಫೆಕ್ಟ್‌; ಮುಂದಿನ ಐಫೋನ್‌ ಉತ್ಪಾದನಾ ಕೇಂದ್ರವಾಗುತ್ತಾ ಭಾರತ?

    ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಸುಂಕ ಅಸ್ತçವನ್ನು ಪ್ರಯೋಗಿಸಿರುವುದು ಜಾಗತಿಕ ವ್ಯಾಪಾರ ವಲಯದಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದೆ. ಇದು ‘ವಿಶ್ವ ವ್ಯಾಪಾರ ಯುದ್ಧ’ ಎನ್ನುವಂತೆಯೇ ಬಿಂಬಿತವಾಗಿದೆ. ವಿವಿಧ ದೇಶಗಳಲ್ಲಿ ಉತ್ಪನ್ನಗಳನ್ನು ತಯಾರಿಸಿ ಅಮೆರಿಕಗೆ ರಫ್ತು ಮಾಡುತ್ತಿದ್ದ ದೈತ್ಯ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿವೆ. ತಮ್ಮ ಉತ್ಪನ್ನಗಳ ಮೇಲೆ ಬೀಳುವ ಹೆಚ್ಚಿನ ಸುಂಕದಿಂದ ತಪ್ಪಿಸಿಕೊಳ್ಳಲು ಪರಿಹಾರ ಮಾರ್ಗವನ್ನು ಹುಡುಕುತ್ತಿವೆ. ಟ್ರಂಪ್ ಕಡಿಮೆ ಟ್ಯಾರಿಫ್ ಹಾಕಿರುವ ರಾಷ್ಟ್ರಗಳತ್ತ ಈ ಕಂಪನಿಗಳು ತಮ್ಮ ದೃಷ್ಟಿ ನೆಟ್ಟಿವೆ.

    ಟ್ರಂಪ್ ಪ್ರತಿಸುಂಕ ನೀತಿಯು ಉದ್ಯಮ ವಲಯದಲ್ಲಿ ಕೆಲವು ರಾಷ್ಟ್ರಗಳಿಗೆ ವಿಫುಲ ಅವಕಾಶಗಳಿಗೆ ದಾರಿ ಮಾಡಿಕೊಡಲಿದೆ ಎಂಬುದು ಉದ್ಯಮ ತಜ್ಞರ ಅಭಿಪ್ರಾಯವಾಗಿದೆ. ತನ್ನ ನೆಲದಲ್ಲಿ ಐಫೋನ್ ಉತ್ಪಾದನಾ ಕೇಂದ್ರವಾಗಬೇಕೆಂಬ ಆಸೆಯನ್ನು ಭಾರತ ಹೊಂದಿತ್ತು. ಭಾರತದ ಈ ಮಹತ್ವಾಕಾಂಕ್ಷೆಗೆ ಟ್ರಂಪ್ ನೀತಿ ನೀರೆರೆದು ಪೋಷಿಸುವಂತಿದೆ. ಭಾರತವು ತನ್ನನ್ನು ತಾನು ಚೀನಾಕ್ಕೆ ಪರ್ಯಾಯವಾಗಿ ಪ್ರಸ್ತುತಪಡಿಸಲು ಇದೊಂದು ಸದಾವಕಾಶ ಎಂಬುದು ತಜ್ಞರ ಮಾತಾಗಿದೆ.

    ‘ಆಪಲ್’ಗೆ ಟ್ಯಾರಿಫ್ ಪೆಟ್ಟು
    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ಯಾರಿಫ್ ನೀತಿಯು ಆಪಲ್ ಐಫೋನ್ ಉದ್ಯಮಕ್ಕೆ ದೊಡ್ಡ ಪೆಟ್ಟು ನೀಡಿದೆ. ತನ್ನ ಉತ್ಪಾದನಾ ಕೇಂದ್ರ ರಾಷ್ಟçದ ಮೇಲೆ ಹೆಚ್ಚಿನ ಸುಂಕ ವಿಧಿಸಿರುವುದು ಆಪಲ್ ಕಂಪನಿಗೆ ತಲೆನೋವಾಗಿ ಪರಿಣಮಿಸಿದೆ. ಪರಿಣಾಮವಾಗಿ ತನ್ನ ಐಫೋನ್ ರಫ್ತಿಗೆ ಹೆಚ್ಚಿನ ಸುಂಕ ತೆರಬೇಕಾದ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ. ತಾತ್ಕಾಲಿಕವಾಗಿ ಅಮೆರಿಕದ ಪೆಟ್ಟಿನಿಂದ ಪಾರಾಗಲು 5 ವಿಮಾನಗಳಷ್ಟು ಐಫೋನ್ ಮತ್ತು ಇತರೆ ಉತ್ಪನ್ನಗಳನ್ನು ಭಾರತದ ಮೂಲಕ ಆಪಲ್ ಕಂಪನಿ ರಫ್ತು ಮಾಡಿದೆ.

    ಭಾರತದತ್ತ ಆಪಲ್ ಚಿತ್ತ?
    ಐಫೋನ್ ಉತ್ಪಾದನೆ ಮೇಲೆ ಯುಎಸ್ ಸುಂಕದ ಹೊಡೆತ ಬಿದ್ದಿದೆ. ಹೀಗಾಗಿ, ಆಪಲ್ ತನ್ನ ಪೂರೈಕೆ ಸರಪಳಿಯನ್ನು ಚೀನಾದಿಂದ ಕಳಚಿಕೊಂಡು ಭಾರತ ಮತ್ತು ವಿಯೆಟ್ನಾಂ ಜೊತೆ ಜೋಡಿಸಿಕೊಳ್ಳಲು ಯೋಜಿಸಿದೆ. ಜಾಗತಿಕ ಐಫೋನ್ ಉತ್ಪಾದನೆಯ ಶೇ.14 ರಷ್ಟನ್ನು ಹೊಂದಿರುವ ಭಾರತಕ್ಕೆ ಯುಎಸ್ ಶೇ.26 ಸುಂಕ ವಿಧಿಸಿದೆ. ಚೀನಾಗೆ ವಿಧಿಸಿರುವ 142%, ವಿಯೆಟ್ನಾಂನ 46%ಗಿಂತ ಕಡಿಮೆಯಿದೆ. ಆದರೆ, ಭಾರತೀಯ ಉದ್ಯಮ ಸಂಸ್ಥೆಗಳು ಎಲೆಕ್ಟಾçನಿಕ್ ರಫ್ತು ಮತ್ತು ಉತ್ಪಾದನೆಯ ಮೇಲೆ ದೀರ್ಘಾವಧಿಯ ಪರಿಣಾಮಗಳ ಬಗ್ಗೆ ಎಚ್ಚರಿಕೆ ವಹಿಸಿವೆ. ಚೀನಾ ಮತ್ತು ಭಾರತದಲ್ಲಿ ಆಪಲ್ ಐಫೋನ್ ಮೇಲೆ ಅಮೆರಿಕ ಸುಂಕದ ಪರಿಣಾಮ ಏನು? ಈ ಬೆಳವಣಿಗೆ ಭಾರತದ ಪರವಾಗಿ ಹೇಗೆ ಕೆಲಸ ಮಾಡಬಹುದು?

    ಭಾರತಕ್ಕೆ ಹೇಗೆ ಹೊಡೆತ ಬಿದ್ದಿದೆ?
    ಯುಎಸ್ ಭಾರತದ ಏಕೈಕ ಅತಿದೊಡ್ಡ ವ್ಯಾಪಾರ ಪಾಲುದಾರರಾಗಿದ್ದು, ಒಟ್ಟು ಸರಕುಗಳ ರಫ್ತಿನ 18% ರಷ್ಟನ್ನು ಹೊಂದಿದೆ. 26% ಟ್ಯಾರಿಫ್ ಎಲೆಕ್ಟ್ರಾನಿಕ್ಸ್ ಸಾಗಣೆಗಳ ಮೇಲೆ ಪರಿಣಾಮ ಬೀರಬಹುದು. ಲಾಭದಾಯಕತೆಯನ್ನು ಕಡಿಮೆ ಮಾಡುತ್ತದೆ. ಪೂರೈಕೆ ಸರಪಳಿಗಳನ್ನು ಅಸ್ಥಿರಗೊಳಿಸಬಹುದು. ಯುಎಸ್ ವಿಧಿಸಿರುವ 26% ಸುಂಕಗಳು ಭಾರತದ ರಫ್ತಿಗೆ ಗಮನಾರ್ಹ ಸವಾಲನ್ನು ಒಡ್ಡುತ್ತದೆ. ಭಾರತವು ಇತರ ಅನೇಕ ಆರ್ಥಿಕತೆಗಳಿಗಿಂತ ಉತ್ತಮ ಸ್ಥಾನದಲ್ಲಿದ್ದರೂ, ಈ ಸುಂಕಗಳು ದೇಶೀಯ ಕೈಗಾರಿಕೆಗಳ ಮೇಲೆ ಪ್ರಭಾವ ಬೀರಬಹುದು. ವ್ಯಾಪಾರದ ಹರಿವಿಗೆ ಅಡ್ಡಿಪಡಿಸಬಹುದು. ಲಾಭದ ಪ್ರಮಾಣವನ್ನು ತಗ್ಗಿಸಬಹುದು ಎಂದು ಭಾರತೀಯ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಚಂದಕ್ ಹೇಳಿದ್ದಾರೆ.

    ಆಪಲ್ ಲಾಭಕ್ಕೆ ಪೆಟ್ಟು?
    ಚೀನೀ ಆಮದುಗಳ ಮೇಲೆ ಈಗ 124% ಸುಂಕದ ಪರಿಣಾಮ ಎದುರಿಸುತ್ತಿರುವ ಆಪಲ್‌ಗೆ ಅಸ್ತಿತ್ವದ ಬಿಕ್ಕಟ್ಟು ಎದುರಾಗಿದೆ. 799 ಡಾಲರ್ ಬೆಲೆಯೊಂದಿಗೆ ಯುಎಸ್‌ನಲ್ಲಿ ಬಿಡುಗಡೆ ಮಾಡಲಾದ ಅಗ್ಗದ ಐಫೋನ್ 16 ಮಾದರಿಗೆ ಪ್ರತಿಸುಂಕದಿಂದ 1,142 ಡಾಲರ್ ವೆಚ್ಚವಾಗಬಹುದು. ರೋಸೆನ್‌ಬ್ಲಾಟ್ ಸೆಕ್ಯುರಿಟೀಸ್‌ನ ಲೆಕ್ಕಾಚಾರಗಳ ಪ್ರಕಾರ, ವೆಚ್ಚವು 43% ರಷ್ಟು ಹೆಚ್ಚಾಗಬಹುದು. 599 ಡಾಲರ್ ಬೆಲೆಯ ಫೆಬ್ರವರಿಯಲ್ಲಿ ಬಿಡುಗಡೆ ಮಾಡಲಾದ ಅಗ್ಗದ ಐಫೋನ್ 16ಇ ಮಾದರಿಯು ಪ್ರತಿಸುಂಕದ ಕಾರಣದಿಂದಾಗಿ 856 ಡಾಲರ್‌ನೊಂದಿಗೆ 43% ಹೆಚ್ಚಳ ಆಗಬಹುದು. ಇತರ ಆಪಲ್ ಉತ್ಪನ್ನಗಳ ಬೆಲೆಗಳು ಕೂಡ ಹೆಚ್ಚಾಗಬಹುದು. ಟ್ರಂಪ್ ಟ್ಯಾರಿಫ್ ಘೋಷಣೆ ಬಳಿಕ ಕಳೆದ ವಾರ ಆಪಲ್‌ನ ಷೇರುಗಳು ಸುಮಾರು 9% ರಷ್ಟು ಕುಸಿತ ಕಂಡಿತು.

    ಸಿಎಫ್‌ಆರ್‌ಎ ರಿಸರ್ಚ್‌ನ ಇಕ್ವಿಟಿ ವಿಶ್ಲೇಷಕ ಏಂಜೆಲೊ ಝಿನೋ, ಆಪಲ್ ತನ್ನ ವೆಚ್ಚದ 5% ರಿಂದ 10% ರಷ್ಟುನ್ನು ಗ್ರಾಹಕರಿಗೆ ವರ್ಗಾಯಿಸುತ್ತದೆ ಎಂದು ಅಂದಾಜಿಸಿದ್ದಾರೆ. ಆಪಲ್ ಈಗಾಗಲೇ ಯುಎಸ್ ಹೂಡಿಕೆಯಲ್ಲಿ 500 ಡಾಲರ್ ಶತಕೋಟಿಯನ್ನು ಬದ್ಧವಾಗಿದೆ. ಟೆಕ್ಸಾಸ್‌ನಲ್ಲಿ ಎಐ ಸರ್ವರ್ ಸೌಲಭ್ಯವನ್ನು ತೆರೆಯಿತು. ಕೆಲವು ಪೂರೈಕೆ ಸರಪಳಿಗಳನ್ನು ಸ್ಥಳಾಂತರಿಸಿದೆ. ಆದರೆ ಎವರ್‌ಕೋರ್ ಐಎಸ್‌ಐ ಪ್ರಕಾರ, ಅದರ ಸುಮಾರು 90% ಐಫೋನ್‌ಗಳು ಇನ್ನೂ ಚೀನಾದಲ್ಲಿ ತಯಾರಾಗ್ತಿವೆ. ಟ್ಯಾರಿಫ್‌ನಿಂದಾಗಿ ಐಫೋನ್ ಬೆಲೆಗಳಲ್ಲಿ ಸಂಭಾವ್ಯ ಹೆಚ್ಚಳ ಕಂಡುಬರುವುದರಿAದ ಐಫೋನ್‌ಗಳ ಬೇಡಿಕೆಯನ್ನು ಕುಗ್ಗಿಸಬಹುದು. ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್ಗೆ ಇದು ವರದಾನ ಆಗಬಹುದು.

    ಭಾರತಕ್ಕೆ ವರದಾನ?
    ಟ್ರಂಪ್ ಸುಂಕಗಳು ಅನೇಕ ಬಹುರಾಷ್ಟ್ರೀಯ ಕಂಪನಿಗಳಿಗೆ ಚೀನಾದ ವಿರುದ್ಧ ಭಾರತವನ್ನು ಪ್ರಮುಖ ಆಯ್ಕೆಯನ್ನಾಗಿ ಮಾಡುತ್ತದೆ. ಆಪಲ್ ಜಾಗತಿಕವಾಗಿ ಎಲ್ಲಾ ಐಫೋನ್‌ಗಳಲ್ಲಿ ಸುಮಾರು 25% ರಷ್ಟನ್ನು ಭಾರತದಲ್ಲಿ ತಯಾರಿಸಲು ಗುರಿಯನ್ನು ಹೊಂದಿದೆ ಎಂದು ಸರ್ಕಾರದ ಸಚಿವರು 2023 ರಲ್ಲಿ ಹೇಳಿದ್ದರು. ಚೀನಾದ ಮೇಲಿರುವ 126% ಸುಂಕದ ಹೊತ್ತಲ್ಲಿ, ಆಪಲ್‌ಗೆ ಈಗ ಭಾರತ ಬಿಟ್ಟು ಬೇರೆ ಆಯ್ಕೆಯಿಲ್ಲ. ಇದು 2025 ರ ಅಂತ್ಯದ ವೇಳೆಗೆ ಭಾರತದ ಐಫೋನ್ ಉತ್ಪಾದನಾ ಸಾಮರ್ಥ್ಯವನ್ನು 15%-20% ಗೆ ಹೆಚ್ಚಿಸಬಹುದು ಎಂದು ಬರ್ನ್ಸ್ಟೈನ್ ವಿಶ್ಲೇಷಕರು ಅಂದಾಜಿಸಿದ್ದಾರೆ. ಎವರ್‌ಕೋರ್ ಐಎಸ್‌ಐ ಸುಮಾರು 10% ರಿಂದ 15% ರಷ್ಟು ಐಫೋನ್‌ಗಳನ್ನು ಪ್ರಸ್ತುತ ಭಾರತದಲ್ಲಿ ಜೋಡಿಸಲಾಗಿದೆ ಎಂದು ಹೇಳಿದೆ. ಭಾರತದ ನೆಲೆಯನ್ನು ಬಲಪಡಿಸಲು ಆಪಲ್, ಮೈಕ್ರೋಸಾಫ್ಟ್, ಗೂಗಲ್‌ನಂತಹ ನಿಗಮಗಳಿಂದ ಬೆಂಬಲ ಪಡೆಯಬಹುದು ಎಂದು ಉದ್ಯಮ ತಜ್ಞರು ಹೇಳುತ್ತಾರೆ.

    ಆಪಲ್‌ನ ಗುತ್ತಿಗೆ ತಯಾರಕರಾದ ಫಾಕ್ಸ್ಕಾನ್, ಟಾಟಾ ಮತ್ತು ಪೆಗಾಟ್ರಾನ್ ನೇತೃತ್ವದಲ್ಲಿ ಭಾರತದ ಬೃಹತ್ ಸ್ಮಾರ್ಟ್ಫೋನ್ ರಫ್ತು ಚಾಲನೆಯು ಅದರ ಹೆಚ್ಚುತ್ತಿರುವ ಸಾಮರ್ಥ್ಯದ ಪುರಾವೆಯಾಗಿದೆ. ಭಾರತವು 2024ರ ಏಪ್ರಿಲ್ ಮತ್ತು 2025 ಜನವರಿಯ ನಡುವೆ ಸುಮಾರು 1 ಲಕ್ಷ ಕೋಟಿ ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಿದೆ. 2023 ರಲ್ಲಿ ಅದೇ ಅವಧಿಯಲ್ಲಿ 60,000 ಕೋಟಿ ರೂ. ಮೌಲ್ಯದ ಐಫೋನ್ ರಫ್ತಾಗಿದೆ. ಆಪಲ್ ಪಾಲುದಾರರು ಆ ಸಬ್ಸಿಡಿಗಳಲ್ಲಿ 75% ಅನ್ನು ಪಡೆಯುವುದರೊಂದಿಗೆ ತನ್ನ ಪಿಎಲ್‌ಐ (ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್) ಯೋಜನೆಯಡಿಯಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯನ್ನು ಉತ್ತೇಜಿಸಲು ಭಾರತ ಸರ್ಕಾರವು 8,700 ಕೋಟಿ ರೂ. ವಿತರಿಸಿದೆ.

    ಭಾರತೀಯ ಉದ್ಯಮ ಸಂಸ್ಥೆಗಳು ಹೇಳೋದೇನು?
    ಹಲವಾರು ಅಭಿವೃದ್ಧಿಶೀಲ ಆರ್ಥಿಕತೆಗಳು ಈಗ ಹೆಚ್ಚು ಆಕರ್ಷಕವಾದ ವ್ಯಾಪಾರ ಅವಕಾಶ ನೀಡುತ್ತಿವೆ ಎಂದು ಭಾರತೀಯ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ತಿಳಿಸಿದೆ. ಬ್ರೆಜಿಲ್, ಟರ್ಕಿ, ಸೌದಿ ಅರೇಬಿಯಾ, ಯುಎಇ-ಎಲ್ಲವೂ ಭಾರತಕ್ಕೆ ಹೋಲಿಸಿದರೆ ಕಡಿಮೆ ಸುಂಕದ ದರಗಳನ್ನು ಪಡೆದುಕೊಂಡಿವೆ. ಕೆಲವು ದೇಶಗಳಿಗೆ 10%, ಫಿಲಿಪೈನ್ಸ್ 17% ಟ್ಯಾರಿಫ್ ಹಾಕಲಾಗಿದೆ. ಸೌದಿ ಅರೇಬಿಯಾ ಮತ್ತು ಯುಎಇ ತಮ್ಮ ವಿಶೇಷ ಆರ್ಥಿಕ ವಲಯಗಳ ಕಾರಣದಿಂದಾಗಿ ಕಡಿಮೆ ಪ್ರತಿಸುಂಕಕ್ಕೆ ಒಳಗಾಗಿವೆ.

    ಚೀನಾ ಟ್ಯಾರಿಫ್ ಹೊಡೆತ ಹೇಗೆ ತಡೆದುಕೊಂಡಿದೆ?
    ಟ್ರಂಪ್ ಆಡಳಿತವು ಚೀನಾದ ಆಮದುಗಳ ಮೇಲೆ 125% ಸುಂಕವನ್ನು ವಿಧಿಸಿದೆ. ಹೆಚ್ಚುವರಿ 34% ಸುಂಕ ಮತ್ತು 20% ಪರಂಪರೆ ಸುಂಕವನ್ನು ಟ್ರಂಪ್ ವಿಧಿಸಿದ್ದಾರೆ. ಅದು ಕೇವಲ ಐಫೋನ್‌ಗಳ ಮೇಲೆ ಪರಿಣಾಮ ಬೀರುವುದಿಲ್ಲ. ಗ್ರಾಹಕ ಎಲೆಕ್ಟ್ರಾನಿಕ್ಸ್ ಶ್ರೇಣಿಯ ಮೇಲೂ ಪರಿಣಾಮ ಬೀರುತ್ತದೆ. ಸುಂಕಗಳ ಹಿಂದಿನ ತಾರ್ಕಿಕತೆಯು ನ್ಯಾಯಸಮ್ಮತವಾಗಿದೆ ಎಂದು ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ‘ಸುಂಕಗಳು ನಮಗೆ ಮಾತುಕತೆ ನಡೆಸಲು ಹೆಚ್ಚಿನ ಶಕ್ತಿಯನ್ನು ನೀಡುತ್ತವೆ’ ಎಂದು ತಿಳಿಸಿದ್ದಾರೆ.

    ಎವರ್‌ಕೋರ್ ಐಎಸ್‌ಐ ಅಂದಾಜಿನ ಪ್ರಕಾರ, ಆಪಲ್‌ನ ಉತ್ಪಾದನಾ ಸಾಮರ್ಥ್ಯದ ಸುಮಾರು 80% ರಷ್ಟು ಚೀನಾವನ್ನು ಹೊಂದಿದೆ. ಸುಮಾರು 90% ಐಫೋನ್‌ಗಳನ್ನು ಚೀನಾದಲ್ಲಿ ಜೋಡಿಸಲಾಗಿದೆ. ಆಪಲ್‌ನ 55% ಮ್ಯಾಕ್ ಉತ್ಪನ್ನಗಳು ಮತ್ತು 80% ಐಪ್ಯಾಡ್‌ಗಳನ್ನು ಚೀನಾದಲ್ಲಿ ಜೋಡಿಸಲಾಗಿದೆ ಎಂದು ತಿಳಿಸಿದೆ. ಆಪಲ್‌ನ 2017 ಮತ್ತು 2020 ರ ಆರ್ಥಿಕ ವರ್ಷದ ನಡುವೆ ಚೀನಾದಲ್ಲಿ ಉತ್ಪಾದನೆ ಸಂಖ್ಯೆ ಕಡಿಮೆಯಾಗಿತ್ತು. ನಂತರ ಮತ್ತೆ ಹೆಚ್ಚಾಯಿತು. ಚೀನೀ ಪೂರೈಕೆದಾರರು ಆಪಲ್‌ನ ಒಟ್ಟು 40% ರಷ್ಟಿದ್ದಾರೆ ಎಂದು ಬರ್ನ್ಸ್ಟೈನ್ ಹೇಳಿದ್ದಾರೆ.

  • ಟ್ರಂಪ್ ಟ್ಯಾರಿಫ್ ಎಫೆಕ್ಟ್ – ಹಾಲಿವುಡ್ ಸಿನಿಮಾ ಬ್ಯಾನ್ ಮಾಡುತ್ತಾ ಚೀನಾ?

    ಟ್ರಂಪ್ ಟ್ಯಾರಿಫ್ ಎಫೆಕ್ಟ್ – ಹಾಲಿವುಡ್ ಸಿನಿಮಾ ಬ್ಯಾನ್ ಮಾಡುತ್ತಾ ಚೀನಾ?

    ಬೀಜಿಂಗ್: ಡೊನಾಲ್ಡ್‌ ಟ್ರಂಪ್‌ (Donald Trump) ಪ್ರತಿಸುಂಕ ಹೇರಿಗೆ ನೀತಿಯಿಂದ ಅಮೆರಿಕ ಮತ್ತು ಚೀನಾ ನಡುವೆ ಜೋರಾಗಿದೆ. ಹಾಲಿವುಡ್‌ ಸಿನಿಮಾಗಳನ್ನು ನಿಷೇಧಿಸಲು ಚೀನಾ ಯೋಜಿಸಿದೆ ಎಂದು ವರದಿಯಾಗಿದೆ.

    ಆದರೆ, ಈ ವಿಚಾರವನ್ನು ಬೀಜಿಂಗ್‌ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಅಮೆರಿಕ ಟ್ಯಾರಿಫ್‌ (Tariff) ಹಾಕಿದೆ. ಚೀನಾದ (China) ರಫ್ತು ವಸ್ತುಗಳ ಮೇಲೂ ಅಮೆರಿಕ ಪ್ರತಿಸುಂಕ ವಿಧಿಸುತ್ತಿದೆ. ಪ್ರತಿಕಾರ ತಂತ್ರದ ಭಾಗವಾಗಿ ಚೀನಾ ಈ ಕ್ರಮಕ್ಕೆ ಮುಂದಾಗಿದ್ದು, ಹಾಲಿವುಡ್‌ ಚಲನಚಿತ್ರಗಳನ್ನು ಬ್ಯಾನ್‌ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಸೇಡಿನ ಯೋಜನೆ ಬಿಡದಿದ್ದರೆ ಚೀನಾದ ಮೇಲೆ 50% ರಷ್ಟು ಸುಂಕ: ಟ್ರಂಪ್ ಎಚ್ಚರಿಕೆ

    ಚೀನಾದ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇ.50 ರಷ್ಟು ಪ್ರತಿಸುಂಕ ವಿಧಿಸುವ ಪ್ರಸ್ತಾಪವನ್ನು ಟ್ರಂಪ್ ಮಂಡಿಸಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ವ್ಯಾಪಾರ ವಲಯದಲ್ಲಿ ನಡೆಯುತ್ತಿರುವ ತಿಕ್ಕಾಟವನ್ನು ಮತ್ತಷ್ಟು ತೀವ್ರಗೊಳಿಸಲಿದೆ.

    ಚೀನಾದ ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ಸಂಬಂಧಿಸಿದ WeChat ಖಾತೆಯ ಸಾಮಾಜಿಕ ಮಾಧ್ಯಮದಲ್ಲಿ ಚಲನಚಿತ್ರ ನಿಷೇಧದ ಸುದ್ದಿ ಹರಿದಾಡುತ್ತಿದೆ. ಆದರೆ ಚೀನಾ ಸರ್ಕಾರ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ. ಇದನ್ನೂ ಓದಿ: Black Monday| ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ – ಕರಗಿತು ಹೂಡಿಕೆದಾರರ 19 ಲಕ್ಷ ಕೋಟಿ

    ನಿಷೇಧ ಕ್ರಮವು ಚೀನಾದಲ್ಲಿ ಗಮನಾರ್ಹ ವೀಕ್ಷಕರನ್ನು ಹೊಂದಿರುವ ಹಾಲಿವುಡ್‌ (Hollywood) ಅನ್ನು ಟಾರ್ಗೆಟ್‌ ಮಾಡಲಾಗಿದೆ. 2024 ರಲ್ಲಿ, ಯುಎಸ್ ಚಲನಚಿತ್ರಗಳು ಚೀನೀ ಚಿತ್ರಮಂದಿರಗಳಲ್ಲಿ 585 ಮಿಲಿಯನ್ ಡಾಲರ್‌ ಗಳಿಸಿವೆ. ಇದು ದೇಶದ ಒಟ್ಟು ಬಾಕ್ಸ್ ಆಫೀಸ್ ಸಂಗ್ರಹದ ಸುಮಾರು 3.5% ರಷ್ಟಿದ್ದು, 17.7 ಬಿಲಿಯನ್ ಡಾಲರ್‌ ಎಂದು ಅಂದಾಜಿಸಲಾಗಿದೆ.

    ಅಮೆರಿಕದ (America) ಚಲನಚಿತ್ರಗಳ ಮೇಲಿನ ಸಂಪೂರ್ಣ ನಿಷೇಧವು ಚೀನಾದ ಮಾರುಕಟ್ಟೆಯ ಮೇಲೆ ಹೆಚ್ಚು ಅವಲಂಬಿತವಾಗಿರುವ ಹಾಲಿವುಡ್‌ನ ವಿದೇಶಿ ಆದಾಯದ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.