ಮೈಸೂರು: ಇಂದು ವಿಧಿವಶರಾಗಿರುವ ಶ್ರೀನಿವಾಸ್ ಪ್ರಸಾದ್ (Srinivas Prasad) ಅವರ ಅಂತ್ಯಕ್ರಿಯೆ ಮಂಗಳವಾರ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಮಗಳು ಪ್ರತಿಮಾ ಪ್ರಸಾದ್ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಇಂದು ಮಧ್ಯಾಹ್ನ 1 ಗಂಟೆ ತನಕ ಮನೆಯಲ್ಲಿ ಅಂತಿಮ ನಮನ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ನಂತರ ಅಶೋಕಪುರಂನ ಎನ್ ಟಿ ಎಂ ಶಾಲೆ ಆವರಣದಲ್ಲಿ ಅಂತಿಮ ನಮನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.
ಬೆಂಗಳೂರು: ನಮ್ಮ ತಂದೆ ಯಾವಾಗಲೂ ಸಂತೋಷವಾಗಿದ್ರು. ಅವರು ಸಾವಾದ್ರೂ ನಗುನಗುತ್ತಲೇ ಕಳಿಸಿಕೊಡಿ ಅಂತಾ ಹೇಳಿದ್ರು. ಅದೇ ರೀತಿ ಯಾವುದೇ ಅಹಿತಕರ ಘಟನೆಗಳು ಆಗದಂತೆ ನಮ್ಮ ತಂದೆಯನ್ನ ಸಂತೋಷದಿಂದ ಬಿಳ್ಕೋಡೋಣ ಎಂದು ಶ್ರೀನಿವಾಸ್ ಪ್ರಸಾದ್ (V Srinivas Prasad) ಪುತ್ರಿ ಪ್ರತಿಮಾ ಪ್ರಸಾದ್ (Prathima Prasad) ಮನವಿ ಮಾಡಿಕೊಂಡರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ತಂದೆಯ ಆರೋಗ್ಯ ಗಂಭೀರವಾಗಿತ್ತು. ಎಲ್ಲಾ ವೈದ್ಯರು ಅವರನ್ನ ಗುಣಪಡಿಸಲು ಶ್ರಮ ಪಟ್ಟಿದ್ದಾರೆ. ಇವತ್ತು ಪ್ರಯತ್ನ ಕೈಗೂಡದೆ ನಮ್ಮನ್ನು ಅಗಲಿದ್ದಾರೆ. ಇವತ್ತು ಮೈಸೂರಿನ ಜಯಲಕ್ಷ್ಮಿಪುರಂ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುತ್ತೆ. ಇಡೀ ದಿನ ಅಂತಿಮ ದರ್ಶನ ಮನೆಯಲ್ಲೆ ಇರುವುದಿಲ್ಲ. ಒಂದು ಸಾರ್ವತ್ರಿಕ ಜಾಗ ನಿರ್ಧಾರ ಮಾಡಿ ಅಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತೆ ಎಂದರು.
ಇಂದು ನುಕಿನ ಜಾವ 1:20 ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಕಳೆದ ಸೋಮವಾರ ಆರೋಗ್ಯ ಏರುಪೇರಾಗಿತ್ತು. ಹಾಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ವಿ. ಆರೋಗ್ಯ ಸುಧಾರಿಸಿದ್ದರಿಂದ ಡಿಸ್ಚಾರ್ಜ್ ಮಾಡಿಸಿದ್ವಿ. ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕರೆದುಕೊಂಡು ಬಂದ್ವಿ. ಅವರಿಗೆ ಹೈಲಿ ಡಯಾಬಿಟಿಸ್ ಸಮಸ್ಯೆ ಇತ್ತು. 11 ವರ್ಷದ ಹಿಂದೆ ಅವರಿಗೆ ರಿನಲ್ ಟ್ರಾನ್ಸ್ ಪ್ಲಾಂಟ್ ಆಗಿತ್ತು. ಅದನ್ನೂ ಫೈಟ್ ಮಾಡಿದ್ದರು. ಆದರೆ ಇಂದು ಅವರನ್ನು ಉಳಿಸಿಕೊಳ್ಳೋದಕ್ಕೆ ಬಹಳ ಪ್ರಯತ್ನವನ್ನ ವೈದ್ಯರು ಮಾಡಿದ್ರು. ಆದರೆ ವಿಧಿ ಹೀಗೆ ಮಾಡಿದೆ ಎಂದು ಹೇಳಿದರು.
2000 ಇಸವಿಯಿಂದ ಅವರು ಮಣಿಪಾಲ್ ಆಸ್ಪತ್ರೆಯಲ್ಲೇ ಏನೇ ಅದ್ರೂ ಚಿಕಿತ್ಸೆ ಪಡೆಯುತ್ತಿದ್ರು. ಆಗಿನಿಂದ ಈ ಆಸ್ಪತ್ರೆ ಮೇಲೆ ಅವ್ರಿಗೆ ಬಹಳ ನಂಬಿಕೆ ಇತ್ತು ಎಂದ ಅವರು, ಆಸ್ಪತ್ರೆಯ ಎಲ್ಲ ವೈದ್ಯರಿಗೂ ಧನ್ಯವಾದಗಳನ್ನು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಇನ್ನಿಲ್ಲ
ಇತ್ತೀಚೆಗೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ರು. ಆದ್ರೆ ತಮ್ಮ ಜರ್ನಿಯಿಂದಲೇ ನಿವೃತ್ತಿ ತೆಗೆದುಕೊಳ್ಳುತ್ತಾರೆ ಅಂದುಕೊಂಡಿರಲಿಲ್ಲ. ಇದು ಬಹಳ ದುಃಖಕರವಾದ ವಿಷಯ, ಇದು ಕರ್ನಾಟಕ ಜನತೆಗೆ ಬಿಗ್ ಲಾಸ್. ಎಲ್ಲಾ ಜನಾಂಗದ ನಾಯಕರಾಗಿದ್ರು ಎಂದು ತಿಳಿಸಿದರು.