Tag: ಪ್ರತಿಭಾ ಕಾರಂಜಿ

  • ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ- ಕಟೀಲು ಶಾಲೆಗಳಿಗೆ ಬಹುಮಾನ

    ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ- ಕಟೀಲು ಶಾಲೆಗಳಿಗೆ ಬಹುಮಾನ

    ಮಂಗಳೂರು: ಆಗಸ್ಟ್ 29ರಂದು ಜರುಗಿದ ಉಲ್ಲಂಜೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ (Prathibha Karanji Competition) ಅನುದಾನಿತ ಶ್ರೀ ದುರ್ಗಾಪರಮೇಶ್ವರಿ ಹಿ.ಪ್ರಾ.ಶಾಲೆ ಕಟೀಲು ಇಲ್ಲಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ 6, ದ್ವಿತೀಯ ಸ್ಥಾನ 3 ಹಾಗೂ ತೃತೀಯ ಸ್ಥಾನ 6 ಹೀಗೆ ಒಟ್ಟು 15 ಬಹುಮಾನಗಳನ್ನು ಗಳಿಸಿದ್ದಾರೆ.

    ಕಿರಿಯರ ವಿಭಾಗ: ಕಥೆ ಹೇಳುವ ಸ್ಪರ್ಧೆ ಮತ್ತು ಆಶುಭಾಷಣದಲ್ಲಿ ಶ್ರೀಜಲ್, ಸಂಸ್ಕೃತ ಧಾರ್ಮಿಕ ಪಠಣ ಸ್ಪರ್ಧೆ ರಿಷಿಕ್ ಕೆ, ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ವಿಶ್ವನಾಥ ಬಹುಮಾನ ಗೆದ್ದಿದ್ದಾರೆ.
    ಹಿರಿಯರ ವಿಭಾಗ: ಹಿಂದಿ ಕಂಠಪಾಠ ಸ್ಪರ್ಧೆಯಲ್ಲಿ ಮನೀಷ್, ಕವನವಾಚನ ಸ್ಪರ್ಧೆಯಲ್ಲಿ ಪುಣ್ಯಶ್ರೀ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

    ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಳ ಇಂಗ್ಲಿಷ್ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಕಟೀಲು ಇಲ್ಲಿಯ ವಿದ್ಯಾರ್ಥಿಗಳು 6 ಪ್ರಥಮ, 5 ದ್ವಿತೀಯ ಹಾಗೂ 7 ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ದೊಡ್ಮನೆ ಆಟಕ್ಕೆ ಮುಹೂರ್ತ ಫಿಕ್ಸ್

    ಏಳಿಂಜೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆಯ ಹಿರಿಯ ವಿಭಾಗ (5 ರಿಂದ 7)ದಲ್ಲಿ ಲಘು ಸಂಗೀತದಲ್ಲಿ ಸಾನ್ವಿ ಡಿ ರಾವ್ (7ನೇ ತರಗತಿ) ಪ್ರಥಮ ಸ್ಥಾನ, ಕನ್ನಡ ಕಂಠ ಪಾಠದಲ್ಲಿ ಅನಿರುದ್ಧ್ (7ನೇ ತರಗತಿ) ಪ್ರಥಮ, ಧಾರ್ಮಿಕ ಪಠಣದಲ್ಲಿ ಕ್ಷಿತಿಜ್ (5ನೇ ತರಗತಿ) ಪ್ರಥಮ, ಕಥೆ ಹೇಳುವ ಸ್ಪರ್ಧೆಯಲ್ಲಿ ಹೆಜೆಲ್ ನೇಹಾ ಕೌಂಡ್ಸ್ (6ನೇ ತರಗತಿ) ದ್ವಿತೀಯ, ಹಿಂದಿ ಕಂಠ ಪಾಠದಲ್ಲಿ ಸಾನ್ವಿ ಕೋಟ್ಯಾನ್ (7 ನೇ ತರಗತಿ) ದ್ವಿತೀಯ, ಭಕ್ತಿ ಗೀತೆಯಲ್ಲಿ ಶರಣ್ಯ ಎಸ್ ಭಟ್ (6ನೇ ತರಗತಿ), ಇಂಗ್ಲಿಷ್ ಕಂಠ ಪಾಠದಲ್ಲಿ ಖುಷಿ (6ನೇ ತರಗತಿ) ತೃತೀಯ, ಅಭಿನಯ ಗೀತೆಯಲ್ಲಿ ಮೈತ್ರಿ (7ನೇ ತರಗತಿ) ತೃತೀಯ, ಛದ್ಮವೇಷ ಸ್ಪರ್ಧೆಯಲ್ಲಿ ಶರಣ್ಯ ದೇವಿ ಭಟ್ (6ನೇ ತರಗತಿ) ತೃತೀಯ, ಕವನ ವಾಚನದಲ್ಲಿ ದೀಕ್ಷಾ (6ನೇ ತರಗತಿ) ತೃತೀಯ, ಕ್ಲೇ ಮಾಡೆಲಿಂಗ್‍ನಲ್ಲಿ ಅಥರ್ವ ಪಿ. ಆಚಾರ್ಯ (6ನೇ ತರಗತಿ) ತೃತೀಯ ಸ್ಥಾನ ಗಳಿಸಿದ್ದಾರೆ.

    ಕಿರಿಯರ ವಿಭಾಗ (1 ರಿಂದ 4)ದಲ್ಲಿ ಇಂಗ್ಲಿಷ್ ಕಂಠ ಪಾಠದಲ್ಲಿ ಮನಾಹಾ (3ನೇ ತರಗತಿ) ಪ್ರಥಮ, ಲಘು ಸಂಗೀತದಲ್ಲಿ ಶಾರ್ವರಿ (4ನೇ ತರಗತಿ) ಪ್ರಥಮ, ಅಭಿನಯ ಗೀತೆಯಲ್ಲಿ ಶ್ರೀಪದ (3ನೇ ತರಗತಿ) ಪ್ರಥಮ, ಚಿತ್ರಕಲೆಯಲ್ಲಿ ಮೋಕ್ಷಿತ್ (4ನೇ ತರಗತಿ) ದ್ವಿತೀಯ, ಛದ್ಮವೇಷದಲ್ಲಿ ಅಧಿತಿ (4ನೇ ತರಗತಿ) ದ್ವಿತೀಯ, ಧಾರ್ಮಿಕ ಪಠಣ (ಸಂಸ್ಕøತ) ದಲ್ಲಿ ಆರ್ಯನ್ (3ನೇ ತರಗತಿ) ತೃತೀಯ ಹಾಗೂ ಕನ್ನಡ ಕಂಠ ಪಾಠದಲ್ಲಿ ಸ್ವಾನ್ವಿ (4ನೇ ತರಗತಿ) ತೃತೀಯ ಸ್ಥಾನ ಗಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರತಿಭಾ ಕಾರಂಜಿ ಕಾರ್ಯಕ್ರಮ ವೇಳೆ ಪೆಟ್ರೋಲ್ ಬಳಸಿ ಅವಾಂತರ – ವಿದ್ಯಾರ್ಥಿಗೆ ಸುಟ್ಟ ಗಾಯ

    ಪ್ರತಿಭಾ ಕಾರಂಜಿ ಕಾರ್ಯಕ್ರಮ ವೇಳೆ ಪೆಟ್ರೋಲ್ ಬಳಸಿ ಅವಾಂತರ – ವಿದ್ಯಾರ್ಥಿಗೆ ಸುಟ್ಟ ಗಾಯ

    ರಾಮನಗರ: ಪ್ರತಿಭಾ ಕಾರಂಜಿ ಕಾರ್ಯಕ್ರಮ ವೇಳೆ ವಿದ್ಯಾರ್ಥಿ ಮೇಲೆ ಪೆಟ್ರೋಲ್ (Petrol) ಬಿದ್ದು ಸುಟ್ಟ ಗಾಯಗಳಾಗಿರುವ ಘಟನೆ ರಾಮನಗರ (Ramanagara) ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.

    ಲಕ್ಷ್ಮೀಪುರ ಫ್ರೌಡಶಾಲೆಯಲ್ಲಿ (School) ನಡೆಯುತ್ತಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವೀರಗಾಸೆ ನೃತ್ಯ ಪ್ರದರ್ಶನ ಮಾಡಲಾಗುತ್ತಿತ್ತು. ಈ ವೇಳೆ ರಂಗೋಲಿ ಮೇಲೆ ಪೆಟ್ರೋಲ್ ಹಾಕಲು ಹೋಗಿ ವಿದ್ಯಾರ್ಥಿಗೆ ಬೆಂಕಿ ತಗುಲಿದೆ. ಇದನ್ನೂ ಓದಿ: ವರಮಹಾಲಕ್ಷ್ಮೀ ಹಬ್ಬದ ಎಫೆಕ್ಟ್ – ಹೂ, ಹಣ್ಣಿನ ದರ ಭಾರೀ ಏರಿಕೆ

    5ನೇ ತರಗತಿ ವಿದ್ಯಾರ್ಥಿ ಪ್ರೀತಮ್‌ಗೆ ಕಣ್ಣು, ಮುಖ ಹಾಗೂ ತಲೆ ಭಾಗಕ್ಕೆ ಸುಟ್ಟ ಗಾಯಗಳಾಗಿದ್ದು, ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶಿಕ್ಷಕರ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು ಕಾರ್ಯಕ್ರಮದಲ್ಲಿ ಪೆಟ್ರೋಲ್ ಬಳಕೆ ಮಾಡಿದ್ದು ಸರಿಯಿಲ್ಲ. ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಪೆಟ್ರೋಲ್ ಬಳಸಿದ್ದೇ ಅನಾಹುತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಈಗ ಕರ್ನಾಟಕಕ್ಕೂ ಚಂದ್ರನಿಗೂ ನೇರ ಸಂಪರ್ಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಕ್ಕಳಿಗೆ ಸಿಎಂ ಸಿದ್ದರಾಮಯ್ಯ ಕುರಿತು ಎಚ್ ಆಂಜನೇಯ ಪಾಠ!

    ಮಕ್ಕಳಿಗೆ ಸಿಎಂ ಸಿದ್ದರಾಮಯ್ಯ ಕುರಿತು ಎಚ್ ಆಂಜನೇಯ ಪಾಠ!

    ಚಿತ್ರದುರ್ಗ: ಮಕ್ಕಳೇ ಸಿಎಂ ಸಿದ್ದರಾಮಯ್ಯ ಯಾರು ಗೊತ್ತಾ? ಅವರು ಓದಿದ್ದು ಹೇಗೆ ಗೊತ್ತಾ.? ಅವರು ಒಂದು, ಎರಡು, ಮೂರು, ನಾಲ್ಕು ಓದಲೇ ಇಲ್ಲ. ಐದನೇ ಕ್ಲಾಸಿಗೆ ಹೋಗಿ ಬಿಎಸ್‍ಸಿ, ಎಲ್‍ಎಲ್‍ಬಿ ಮಾಡಿ ಈಗ ಮುಖ್ಯಮಂತ್ರಿ ಆಗಿದ್ದಾರೆ – ಇದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಆಂಜನೇಯ ಅವರು ಸಿಎಂ ಸಿದ್ದರಾಮಯ್ಯ ಕುರಿತು ಮಕ್ಕಳ ಮುಂದೆ ಆಡಿದ ಮಾತುಗಳು.

    ಶುಕ್ರವಾರ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳೇ ನಿಮ್ಮಲ್ಲಿ ಯಾರಾದರು ಮುಖ್ಯಮಂತ್ರಿ ಆಗಿ, ಹಾಗಂತ ಐದನೇ ತರಗತಿಗೆ ನೇರವಾಗಿ ಸೇರಬೇಡಿ. ಒಂದನೇ ತರಗತಿಯಿಂದಲೇ ಶಾಲೆಗೆ ಹೋಗಿ. ಮತ್ತೆ ದನ ಕಾಯೋಕೊ ಹೋದಿರಿ ಹುಷಾರು ಎಂದು ಹೇಳಿದರು.

    ಹಿಂದೆ ಜನಪದ ಗೀತೆಗಳು ಬದುಕಿಗೆ ಉತ್ತೇಜನ ನೀಡುತ್ತಿದ್ದವು. ಇಂದಿನ ಸಿನಿಮಾ ಹಾಡುಗಳು ದ್ವಂದ್ವದಿಂದ ಕೂಡಿರುತ್ತವೆ. ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಸಂಗೀತ ಶಿಕ್ಷಕರಿದ್ದಾರೆ ಒಳ್ಳೆಯದು. ಮುಂದಿನ ದಿನಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ಶಾಲೆಗಳಿಗೆ ಚಿತ್ರಕಲಾ ಹಾಗೂ ದೈಹಿಕ ಶಿಕ್ಷಕರನ್ನು ನೇಮಕ ಮಾಡುತ್ತೇವೆ ಎಂದರು.

    ಇಂದು ಸರ್ಕಾರಿ ಶಾಲೆಗಳು ಅಂದ್ರೆ ಉದಾಸೀನ ಮಾಡುತ್ತಾರೆ. ಸರ್ಕಾರಿ ಶಾಲೆಯಲ್ಲಿ ಓದಿದವರು ಸಂವಿಧಾನ ಬರೆದಿದ್ದಾರೆ. ವಿಜ್ಞಾನಿ ಯು.ಆರ್. ರಾವ್, ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಅವರು ಸರ್ಕಾರಿ ಶಾಲೆಯಲ್ಲಿ ಓದಿದವರು. ಖಾಸಗಿ ಶಾಲೆಯಲ್ಲಿ ಓದುವವರಿಗೆ ಸರಿಸಮಾನವಾಗಿ ನಮ್ಮ ಮಕ್ಕಳನ್ನು ತಯಾರು ಮಾಡಲು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುತ್ತೇವೆ ಎಂದು ತಿಳಿಸಿದರು.