Tag: ಪ್ರತಿಭಟನೆ

  • ಗ್ರೇಟರ್ ಬೆಂಗಳೂರು ಯೋಜನೆಗೆ ವಿರೋಧ – 101 ಈಡುಗಾಯಿ ಒಡೆದು ವಾಟಾಳ್ ಪ್ರತಿಭಟನೆ

    ಗ್ರೇಟರ್ ಬೆಂಗಳೂರು ಯೋಜನೆಗೆ ವಿರೋಧ – 101 ಈಡುಗಾಯಿ ಒಡೆದು ವಾಟಾಳ್ ಪ್ರತಿಭಟನೆ

    ರಾಮನಗರ: ಗ್ರೇಟರ್ ಬೆಂಗಳೂರು (Greater Bengaluru) ಯೋಜನೆ ವಿರೋಧಿಸಿ ರಾಮನಗರದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ವಿನೂತನ ಪ್ರತಿಭಟನೆ ನಡೆಸಿದ್ದಾರೆ.

    ನಗರದ ಐಜೂರು ವೃತ್ತದಲ್ಲಿ ಈಡುಗಾಯಿ ಚಳುವಳಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 101 ಈಡುಗಾಯಿ ಒಡೆದು, ಕೂಡಲೇ ಗ್ರೇಟರ್ ಬೆಂಗಳೂರು ಯೋಜನೆ ಕೈಬಿಡುವಂತೆ ಒತ್ತಾಯ ಮಾಡಿದ್ದಾರೆ. ಬಿಬಿಎಂಪಿಯನ್ನು ವಿಭಜನೆ ಮಾಡುವುದು ಸರಿಯಲ್ಲ. ಬೆಂಗಳೂರು ವಿಭಜನೆ ಆದರೆ ಕೆಂಪೇಗೌಡರು ಕಟ್ಟಿದ ಬೆಂಗಳೂರು ಕನ್ನಡಿಗರ ಕೈತಪ್ಪಿ ಹೋಗಲಿದೆ. ಗ್ರೇಟರ್ ಬೆಂಗಳೂರು ಬೇಡವೇ ಬೇಡ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ವಕ್ಫ್‌ ತಿದ್ದುಪಡಿ ಮಸೂದೆಗೆ ಮುಸ್ಲಿಂ ಮಹಿಳೆಯರ ಬೆಂಬಲ – ‘ಥ್ಯಾಂಕ್ಯು ಮೋದಿ ಜೀ’ ಎಂದು ಕೃತಜ್ಞತೆ

    ಮಹಾದಾಯಿ, ಕಳಸ ಬಂಡೂರಿ, ಮೇಕೇದಾಟು ಯೋಜನೆ ಜಾರಿ ಮತ್ತು ಕನ್ನಡಗಿರ ಮೇಲಿನ ದಬ್ಬಾಳಿಕೆ ಬಗ್ಗೆ ಈಗಾಗಲೇ ಕರ್ನಾಟಕ ಬಂದ್ ಮಾಡಲಾಗಿದೆ. ಇನ್ನೂ ಏ.26ರಂದು ಕನ್ನಡಿಗರ ಎಲ್ಲಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಈಡುಗಾಯಿ ಒಡೆಯುವ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಲೆ ಏರಿಕೆ ವಿರುದ್ಧ ಬಿಜೆಪಿ ಏಕಾಂಗಿ ಹೋರಾಟ ಮಾಡೋದು ಸರಿಯಲ್ಲ: ಸುರೇಶ್ ಬಾಬು

  • ಕರಾವಳಿಯಲ್ಲಿ ಹೆಚ್ಚಿದ ಅಕ್ರಮ ಗೋಮಾಂಸ ಸಾಗಾಟ – ಹಿಂದೂ ಸಂಘಟನೆಗಳಿಂದ ಉಗ್ರ ಹೋರಾಟದ ಎಚ್ಚರಿಕೆ

    ಕರಾವಳಿಯಲ್ಲಿ ಹೆಚ್ಚಿದ ಅಕ್ರಮ ಗೋಮಾಂಸ ಸಾಗಾಟ – ಹಿಂದೂ ಸಂಘಟನೆಗಳಿಂದ ಉಗ್ರ ಹೋರಾಟದ ಎಚ್ಚರಿಕೆ

    – ಆರೋಪಿಗಳ ವಿರುದ್ಧ ಕ್ರಮಕ್ಕೆ ಹೆಚ್ಚಿದ ಒತ್ತಡ

    ಮಂಗಳೂರು: ಇತ್ತೀಚಿನ ದಿನಗಳಲ್ಲಿ ಮಂಗಳೂರಿನಲ್ಲಿ (Mangaluru) ಗೋಮಾಂಸ ಮಾಫಿಯಾ ಜೋರಾಗಿದೆ. ನಗರದ ಮಧ್ಯೆಯೇ ಅಕ್ರಮ ಗೋಮಾಂಸ ಸಾಗಾಟ ಆಗುತ್ತಿದ್ದು, ಕಾನೂನಿನ ಭಯವೇ ಇಲ್ಲವಾಗಿದೆ. ಇದು ಹಿಂದೂ ಸಂಘಟನೆಗಳನ್ನು ಕೆರಳಿಸಿದ್ದು, ಗೋಮಾಂಸ ಮಾಫಿಯಾ ನಿಲ್ಲದೇ ಹೋದರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ.

    ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಒಂದೇ ಒಂದು ಅಧಿಕೃತ ಗೋ ಕಸಾಯಿಖಾನೆ ಇಲ್ಲ. ಆದರೂ ಜಿಲ್ಲೆಯಲ್ಲಿ ಅಕ್ರಮ ಗೋಮಾಂಸ ಸಾಗಾಟ ಮಾತ್ರ ನಿರಂತರವಾಗಿ ನಡೆಯುತ್ತಿದೆ. ನಗರದ ಮಧ್ಯೆ ಗೋಮಾಂಸ ಸಾಗಾಟ ಮಾಡಿ ಕಟುಕರು ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮಂಗಳೂರಿನ 5 ಕಡೆಗಳಲ್ಲಿ ಅಕ್ರಮ ಗೋಮಾಂಸ ಸಾಗಾಟವನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಪತ್ತೆ ಹಚ್ಚಿ, ಪೊಲೀಸರಿಗೆ ತಿಳಿಸಿದ್ದರು. ಇದನ್ನೂ ಓದಿ: ಬಾಂಬ್‌ ಬೆದರಿಕೆ ಬೆನ್ನಲ್ಲೇ ಅಮೆರಿಕಕ್ಕೆ ಪ್ರತ್ಯುತ್ತರ ನೀಡಲು ಪ್ಲ್ಯಾನ್‌ – ದೈತ್ಯ ಮಿಸೈಲ್‌ ಸಿದ್ಧಪಡಿಸಿದ ಇರಾನ್‌

    ಪೊಲೀಸರು 1 ಟನ್‌ಗೂ ಅಧಿಕ ಗೋಮಾಂಸ ವಶಕ್ಕೆ ತೆಗೆದುಕೊಂಡಿದ್ದರು. ಅಲ್ಲದೇ ಸುರತ್ಕಲ್, ಜೋಕಟ್ಟೆ, ತಣ್ಣೀರು ಬಾವಿ, ಕುದ್ರೋಳಿ, ಫರಂಗಿಪೇಟೆ ಮುಂದಾದ ಕಡೆಗಳಲ್ಲಿ ಅಕ್ರಮ ಗೋ ಕಸಾಯಿಖಾನೆ ಕಾರ್ಯಾಚರಿಸುತ್ತಿದೆ. ಇಲ್ಲಿಂದಲೇ ಎಲ್ಲಾ ಕಡೆಗಳಿಗೂ ರಾಜಾರೋಷವಾಗಿ ನಗರದ ನಡುವೆಯೇ ಗೋಮಾಂಸ ಸಾಗಾಟ ಮಾಡುತ್ತಿದ್ದಾರೆ. ಅಕ್ರಮ ಗೋಮಾಂಸ ಸಾಗಾಟಗಾರರಿಗೆ ಯಾರು ರಕ್ಷಣೆ ನೀಡುತ್ತಿರುವುದು ಎನ್ನುವ ಪ್ರಶ್ನೆ ಎದ್ದಿದೆ.

    ಜಿಲ್ಲೆಯಾದ್ಯಂತ ಕಾನೂನು ಮೀರಿ ಪ್ರತಿದಿನ ನೂರಾರು ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡಲಾಗುತ್ತಿದೆ. ಅಕ್ರಮ ಗೋಮಾಂಸ ಸಾಗಾಟ ಮಾಡಿ ಸಿಕ್ಕಿಬಿದ್ದರೂ, ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳತ್ತಿಲ್ಲ. ಇತ್ತೀಚಿಗೆ ಮಂಗಳೂರು ಹೊರವಲಯದ ಸುರಲ್ಪಾಡಿ ಎಂಬಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಗೋಸಾಗಾಟದ ವಾಹನವನ್ನು ಸಿನಿಮೀಯ ರೀತಿಯಲ್ಲಿ ಅಡ್ಡ ಹಾಕಿದ್ದರು. ಇದನ್ನೂ ಓದಿ: ಪತ್ನಿ ಕೊಂದು ಕಾರಿನಲ್ಲಿ ಮಹಾರಾಷ್ಟ್ರಕ್ಕೆ ಹೋಗಿದ್ದ ಹಂತಕ – ಕಾರಣ ಬಾಯ್ಬಿಡದ ಟೆಕ್ಕಿ

    ಈ ವೇಳೆ ಸುಮಾರು 25 ಗೋವುಗಳನ್ನು ಅಮಾನುಷವಾಗಿ ಸಾಗಾಟ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದ್ದು, ಸಾಗಾಟಗಾರರು ಈ ವೇಳೆ ಓಡಿ ಪರಾರಿಯಾಗಿದ್ದರು. ಬಳಿಕ ಬಜಪೆ ಪೊಲೀಸರು ಗೋವುಗಳನ್ನು ರಕ್ಷಣೆ ಮಾಡಿದ್ದರು. ಜಿಲ್ಲೆಯಾದ್ಯಂತ ನಡೆಯುತ್ತಿರುವ ಗೋಮಾಂಸ ಸಾಗಾಟ ವಾಹನ, ಅಕ್ರಮ ಕಸಾಯಿಖಾನೆ ನಡೆಯುವ ಸ್ಥಳ ಮುಟ್ಟುಗೋಲು ಹಾಕಿಕೊಳ್ಳಿ. ನಮ್ಮನ್ನು ಕೆಣಕಬೇಡಿ, ಅಕ್ರಮ ಗೋಮಾಂಸ ಸಾಗಾಟ ನಿಲ್ಲದೇ ಇದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ವಿಶ್ವ ಹಿಂದೂ ಪರಿಷತ್ತು, ಬಜರಂಗದಳ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಐಸ್‌ಕ್ರೀಂ ಪ್ರಿಯರೇ ಎಚ್ಚರ – ಕೂಲ್‌ಕೂಲ್ ಐಸ್‌ಕ್ರೀಂನಲ್ಲೂ ಹಾನಿಕಾರಕ ಅಂಶ ಪತ್ತೆ

    ಒಟ್ಟಿನಲ್ಲಿ, ಜಿಲ್ಲೆಯಾದ್ಯಂತ ಅಕ್ರಮ ಗೋಸಾಗಾಟ, ಗೋಮಾಂಸ ಸಾಗಾಟ ಹೆಚ್ಚಿದೆ. ಪೊಲೀಸರ ಭಯ ಇಲ್ಲದಂತಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಆದರೂ ಪೊಲೀಸರು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

  • ಯತ್ನಾಳ್ ಉಚ್ಚಾಟನೆ ಖಂಡಿಸಿ ಪಂಚಮಸಾಲಿ, ಹಿಂದೂ ಸಂಘಟನೆಗಳ ಪ್ರತಿಭಟನೆ

    ಯತ್ನಾಳ್ ಉಚ್ಚಾಟನೆ ಖಂಡಿಸಿ ಪಂಚಮಸಾಲಿ, ಹಿಂದೂ ಸಂಘಟನೆಗಳ ಪ್ರತಿಭಟನೆ

    – ಯಡಿಯೂರಪ್ಪ, ವಿಜಯೇಂದ್ರ ಭಾವಚಿತ್ರಕ್ಕೆ ಚಪ್ಪಲಿ ಏಟು

    ಗದಗ: ಬಸನಗೌಡ ಪಾಟೀಲ್ ಯತ್ನಾಳ್‌ರನ್ನು (Basanagouda Patil Yatnal) ಬಿಜೆಪಿ ಪಕ್ಷದಿಂದ ಉಚ್ಚಾಟನೆ ಖಂಡಿಸಿ, ಪಂಚಮಸಾಲಿ ಸಮಾಜ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸರ್ಕಲ್ ಬಳಿ ಪ್ರತಿಭಟನೆ ಮಾಡಿದರು.

    ಮಾಜಿ ಸಿಎಂ ಯಡಿಯೂರಪ್ಪ (Yediyurappa) ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra) ವಿರುದ್ಧ ಧಿಕ್ಕಾರ ಕೂಗಿದರು. ಅಲ್ಲದೇ ಕುಟುಂಬ ರಾಜಕಾರಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಭಾವಚಿತ್ರಗಳಿಗೆ ಚಪ್ಪಲಿ ಏಟು ನೀಡಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಯತ್ನಾಳ್‍ರನ್ನು ನಾನೇ ಕಾಂಗ್ರೆಸ್‍ಗೆ ಕರೆದ್ಕೊಂಡು ಬರುತ್ತೇನೆ: ರಾಜು ಕಾಗೆ

    ಭಾವಚಿತ್ರಕ್ಕೆ ಬೆಂಕಿ ಹಚ್ಚಲು ಮುಂದಾದ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಇದನ್ನೂ ಓದಿ: ಏ.10ರ ಒಳಗಡೆ ಯತ್ನಾಳ್‌ ಉಚ್ಚಾಟನೆ ಆದೇಶ ವಾಪಸ್‌ ಪಡೀರಿ : ಜಯಮೃತ್ಯುಂಜಯ ಸ್ವಾಮೀಜಿ ಡೆಡ್‌ಲೈನ್‌

    ಯತ್ನಾಳ್‌ರ ಉಚ್ಚಾಟನೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. ಹಿಂದುತ್ವ ಪರ ಧೋರಣೆಗಳು ಮತ್ತು ಸಮಾಜದ ಹಿತಕ್ಕಾಗಿ ಹೋರಾಟ ಮಾಡಿದ್ದಕ್ಕಾಗಿ ಯತ್ನಾಳ್‌ರನ್ನು ಉಚ್ಚಾಟನೆ ಮಾಡಲಾಗಿದೆ. ಹಿಂದುತ್ವ ಪರ ನಿಲುವುಗಳನ್ನು ತಳ್ಳಿಹಾಕಲು ಅವರನ್ನು ರಾಜಕೀಯವಾಗಿ ತೊಡೆದು ಹಾಕಲಾಗಿದೆ ಎಂದು ಸಂಘಟನೆ ಮುಖಂಡರು ಆರೋಪಿಸಿದರು. ಇದನ್ನೂ ಓದಿ: ಯತ್ನಾಳ್ ಕೊಟ್ಟಿದ್ದ ಉತ್ತರ ಪತ್ರ ಬಹಿರಂಗ – ಯಡಿಯೂರಪ್ಪ, ವಿಜಯೇಂದ್ರ ಮೇಲೆ ಚಾರ್ಜ್‌ಶೀಟ್‌

    ಕೂಡಲಸಂಗಮ ಶ್ರೀಗಳು ಕೊಟ್ಟ ಗಡುವಿನ ಒಳಗೆ ಆದೇಶ ಹಿಂಪಡೆಯದಿದ್ದರೆ, ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಪಂಚಮಸಾಲಿ ಸಮಾಜ ಜಿಲ್ಲಾಧ್ಯಕ್ಷ ಅಯ್ಯಪ್ಪ ಅಂಗಡಿ, ಸಂಘಟನಾಕಾರ ಬಸವರಾಜ, ವಸಂತ ಪಡಗದ, ಶಿವಕುಮಾರ್ ಮೂಲಿಮನಿ ಪಾಟೀಲ, ಶರಣಪ್ಪ, ಪ್ರದೀಪ್ ಸಚಿನ್, ಸಂಗಮೇಶ, ಪ್ರವೀಣ್ ಸೇರಿ ಹಲವರು ಭಾಗಿಯಾಗಿದ್ದರು. ಇದನ್ನೂ ಓದಿ: 2ನೇ ಬಾರಿ ಬಿಜೆಪಿಯಿಂದ ಯತ್ನಾಳ್‌ ಉಚ್ಛಾಟನೆ

  • Karnataka Bandh| ಮೈಸೂರಲ್ಲಿ ಪ್ರತಿಭಟನಾಕಾರರು ಪೊಲೀಸರ ವಶಕ್ಕೆ

    Karnataka Bandh| ಮೈಸೂರಲ್ಲಿ ಪ್ರತಿಭಟನಾಕಾರರು ಪೊಲೀಸರ ವಶಕ್ಕೆ

    – ಎರಡು ತಾಸು ಬಸ್ ಸಂಚಾರದಲ್ಲಿ ವ್ಯತ್ಯಯ

    ಮೈಸೂರು: ಕರ್ನಾಟಕ ಬಂದ್ (Karnataka Bandh) ಹಿನ್ನೆಲೆ ಮೈಸೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು (KSRTC Bus) ತಡೆದು ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಪರ ಸಂಘಟನೆಗಳ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಬಸ್‌ಗಳಿಗೆ ಅಡ್ಡಲಾಗಿ ಪ್ರತಿಭಟನೆ ನಡೆಸಲಾಗುತ್ತಿತ್ತು. ಕನ್ನಡ ಪರ ಸಂಘಟನೆಗಳ ಪ್ರತಿಭಟನೆಯಿಂದಾಗಿ ಎರಡು ತಾಸು ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಹಿನ್ನೆಲೆ ಪೊಲೀಸರು ಮೈಸೂರು ಕೇಂದ್ರೀಯ ಬಸ್ ನಿಲ್ದಾಣದ ಮುಂದೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳೇ ನಮ್ಮನೆ ದೇವ್ರು – ಎರಡು ಕೈ ಜೋಡಿಸಿ ಪಾಟಿದಾರ್‌ ಕೃತಜ್ಞತೆ

    ಮೈಸೂರು (Mysuru) ಗ್ರಾಮಾಂತರ ಬಸ್ ನಿಲ್ದಾಣದ ಎರಡು ಭಾಗಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದ ಎಲ್ಲಾ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಬಸ್ ಸಂಚಾರ ವ್ಯವಸ್ಥೆ ಸಹಜ ಸ್ಥಿತಿಗೆ ಮರಳಿದೆ. ಇದನ್ನೂ ಓದಿ: ಕರ್ನಾಟಕ ಬಂದ್ ಎಫೆಕ್ಟ್ – ಸ್ಯಾಟಲೈಟ್, ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆ

  • ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವೈಟಿಪಿಎಸ್‌ನ 1,500 ಗುತ್ತಿಗೆ ನೌಕರರಿಂದ ಉಗ್ರ ಹೋರಾಟ

    ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವೈಟಿಪಿಎಸ್‌ನ 1,500 ಗುತ್ತಿಗೆ ನೌಕರರಿಂದ ಉಗ್ರ ಹೋರಾಟ

    ರಾಯಚೂರು: ಜಿಲ್ಲೆಯ ಯರಮರಸ್‌ನಲ್ಲಿರುವ ವೈಟಿಪಿಎಸ್ ವಿದ್ಯುತ್ ಕೇಂದ್ರದ 1,500 ಗುತ್ತಿಗೆ ಕಾರ್ಮಿಕರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕೆಲಸಕ್ಕೆ ಗೈರಾಗಿ ಪ್ರತಿಭಟನೆ ನಡೆಸಿದ್ದಾರೆ.

    ಸಂಬಳ ಹೆಚ್ಚಳ, ಭತ್ತೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಂದಾಗಿದ್ದು, ವಿದ್ಯುತ್ ಕೇಂದ್ರದ 1500 ಗುತ್ತಿಗೆ ಕಾರ್ಮಿಕರು ಪಾಳೆಯ ಪ್ರಕಾರ ಕೆಲಸಕ್ಕೆ ಗೈರಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಹೀಗಾಗಿ ಪ್ರತಿಭಟನೆ ವಿದ್ಯುತ್ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀಳಲಿದೆ.ಇದನ್ನೂ ಓದಿ: ಜೋರಾಯ್ತು ಛತ್ರಿ ಪಾಲಿಟಿಕ್ಸ್ – ನನಗೆ ಅಧಿಕಾರದ ಮದ, ಕಮ್ಮಿ ಮಾಡಲಿ : ಡಿಕೆಶಿ ತಿರುಗೇಟು

    ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಭೀತಿ ನಡುವೆಯೇ ವಿದ್ಯುತ್ ಕೇಂದ್ರದ ಕಾರ್ಮಿಕರು ಹೋರಾಟಕ್ಕೆ ಮುಂದಾಗಿದ್ದಾರೆ. ಹೋರಾಟ ಮುಂದುವರೆದರೆ ವಿದ್ಯುತ್ ಉತ್ಪಾದನೆಗೆ ಖಂಡಿತ ಬ್ರೇಕ್ ಬೀಳಲಿದೆ. ವಿದ್ಯುತ್ ಕೇಂದ್ರದ ವಿವಿಧ ವಿಭಾಗಗಳ ಕಾರ್ಮಿಕರು, ನೌಕರರು ಕೆಲಸಕ್ಕೆ ಗೈರಾಗಿದ್ದಾರೆ. ಗುತ್ತಿಗೆ ಪಡೆದಿರುವ ಪವರ್ ಮೇಕ್ ಕಂಪನಿ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಳವನ್ನ ಸರಿಯಾಗಿ ಕೊಡದೇ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

    1,600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ವೈಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಸದ್ಯ ಕೇವಲ 839 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಈಗಾಗಲೇ ತಾಂತ್ರಿಕ ಸಮಸ್ಯೆ, ದುರಸ್ತಿ ಕಾರಣಕ್ಕೆ ರಾಜ್ಯದಲ್ಲಿ ನಡೆದಿರುವ ಲೋಡ್ ಶೆಡ್ಡಿಂಗ್ ಈ ಹೋರಾಟದಿಂದ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.

    ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿರುವ ಹೊತ್ತಲ್ಲೇ ಆರ್‌ಟಿಸಿಎಲ್ ಹಾಗೂ ವೈಟಿಪಿಎಸ್ ಗುತ್ತಿಗೆ ಕಾರ್ಮಿಕ ಸಂಘದ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಹೋರಾಟ ನಡೆದಿದೆ. ಕಾರ್ಮಿಕರು ಹಾಗೂ ನೌಕರರ ಹೋರಾಟದಿಂದ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಸಾಧ್ಯತೆಯಿದೆ.ಇದನ್ನೂ ಓದಿ: ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಹೇಗೆ ಮಾಡಬೇಕು ಅನ್ನೋದು ನನಗೆ ಗೊತ್ತಿದೆ: ಡಿಕೆಶಿ

  • ಜಮೀರ್ ಕಣ್ಣೀರು ಮತ್ತು 100 ಬಿರಿಯಾನಿ..!

    ಜಮೀರ್ ಕಣ್ಣೀರು ಮತ್ತು 100 ಬಿರಿಯಾನಿ..!

    ಅವರೆಲ್ಲ ಬೆಳ್ಳಂಬೆಳಗ್ಗೆ ಮೂರು ಗಂಟೆಗೆ ಎದ್ದು ಮೈಸೂರಿನಿಂದ (Mysuru) ನೇರವಾಗಿ ಬಸ್ ಹತ್ತಿ ಬೆಂಗಳೂರಿಗೆ ಬಂದಿದ್ರು. ವಸತಿ ಸೌಲಭ್ಯ, ಪಿಂಚಣಿ ಹೆಚ್ಚಳಕ್ಕಾಗಿ ಎಷ್ಟು ಅಂತಾ ಜಿಲ್ಲಾಧಿಕಾರಿ ಕಚೇರಿಗೆ ಅಲೆಯೋದು ಸಿಎಂ ಮನೆಗೆ ಹೋಗಿ ನ್ಯಾಯ ಕೇಳುವ ಅನ್ನುವ ಸೋತ ನೋವಿನಿಂದ ಬಂದಿದ್ರು.

    ಬಹುತೇಕರಿಗೆ ಕಾಲಿನ ಸ್ವಾಧೀನವಿಲ್ಲ, ನಡೆಯೋಕೆ ಆಗಲ್ಲ ವೀಲ್ ಚೇರ್ ಆಧಾರ. ಇನ್ನು ಕೆಲವರಿಗೆ ಕೈ ಇಲ್ಲ, ಊರುಗೋಲಿನ ಅಧಾರದಲ್ಲಿರೋರು. ಇವರೆಲ್ಲ ಬಸ್ ಮಾಡಿಕೊಂಡು ಸುಮಾರು ನೂರಕ್ಕೂ ಹೆಚ್ಚು ಜನ ಸಿಎಂ ಗೃಹಕಚೇರಿ ಕೃಷ್ಣಾಗೆ ಬಂದಿದ್ದಾರೆ. ಆದ್ರೇ ಸಿಎಂ ಕಚೇರಿಯಲ್ಲಿ ಇರದ ಕಾರಣ ಇವ್ರ ಭೇಟಿಗೆ ಅವಕಾಶ ಸಿಗಲಿಲ್ಲ. ಅಲ್ಲಿಂದ ವಸತಿ ವಿಚಾರಕ್ಕೆ ಸಿಎಂ ಆಪ್ತ ಕಾರ್ಯದರ್ಶಿ ಜಮೀರ್ (Zameer Ahmed Khan) ಮನೆಗೆ ಹೋಗಿ ಅಂತಾ ಸಾಗಾ ಹಾಕಿದ್ದಾರೆ.

    ಪಾಪ ವ್ಹೀಲ್‌ ಚೇರ್‌ನಲ್ಲಿಯೇ ಬೆಂಗಳೂರು ಟ್ರಾಫಿಕ್ ನಲ್ಲಿ ಅವರೆಲ್ಲ ಸಿಎಂ ಗೃಹಕಚೇರಿಯಿಂದ ಐನೂರು ಮೀಟರ್ ದೂರದ ಜಮೀರ್ ಸರ್ಕಾರಿ ನಿವಾಸಕ್ಕೆ ಹೋಗಿದ್ದಾರೆ. ಅರಂಭದಲ್ಲಿ ಅಪಾಯಿಂಟ್‌ಮೆಂಟ್‌ ತಗೊಂಡಿಲ್ಲ ಸಾಹೇಬ್ರು ಇಲ್ಲ ಅಂತಾ ಪೊಲೀಸರು ರಸ್ತೆಯಲ್ಲಿಯೇ ಇವರನ್ನು ನಿಲ್ಲಿಸಿದ್ದಾರೆ. ಫುಟ್‌ ಪಾತ್ ರಸ್ತೆಯಲ್ಲಿಯೇ ಬಿರುಬಿಸಿಲಿನಲ್ಲಿ ಸುಮಾರು ಮೂರು ನಾಲ್ಕು ಗಂಟೆ ನೀರು ತಿಂಡಿ ಇಲ್ಲದೇ ನಿಂತಿದ್ದಾರೆ. ಏನು ದಾರಿ ಕಾಣದೇ ʻಪಬ್ಲಿಕ್ ಟಿವಿʼಗೆ ಕರೆ ಮಾಡಿದ್ದಾರೆ. ಪಬ್ಲಿಕ್ ಟಿವಿ ಸ್ಥಳಕ್ಕೆ ಹೋಗುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿ ಜಮೀರ್ ಮನೆಯೊಳಗೆ ಬಿಟ್ಟಿದ್ದಾರೆ.

    ತಕ್ಷಣ ಜಮೀರ್ ಆಪ್ತಕಾರ್ಯದರ್ಶಿ ಬಂದು ಮನವಿ ಸ್ವೀಕರಿಸಿದ್ದಾರೆ. ಕೊನೆಗೆ ಚಾಮರಾಜಪೇಟೆಯಲ್ಲಿ ಸಭೆ ಮುಗಿಸಿ ಬಂದ ಜಮೀರ್ ತಕ್ಷಣ ಮನೆಬಾಗಿಲಲ್ಲಿ ನಿಂತ ವಿಶೇಷ ಚೇತನರ ಸಮಸ್ಯೆ ಆಲಿಸಿದ್ರು. ಯಾಕ್ ಬರೋಕೆ ಹೋದ್ರಿ ಮೈಸೂರಿಂದ ಸಿಎಂ ಬಂದಾಗ ಅವರಿಗೆ ಮನವಿ ನೀಡಬೇಕಾಗಿತ್ತು ಅಂತಾ ಹೇಳುತ್ತಲೇ ಮನವಿ ಸ್ವೀಕರಿಸಿದ್ರು. ಕೊನೆಗೆ ನಾನೇ ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇನೆ ರಾಜೀವ್ ಗಾಂಧಿ ವಸತಿ ಯೋಜನೆ ಮೂಲಕ ಮನೆ ಕೊಡಿಸುವ ಕೆಲ್ಸ ಮಾಡ್ತೀನಿ ಅಂತಾ ಭರವಸೆ ಕೊಟ್ರು.

    ಜೊತೆಗೆ ಬಿರಿಯಾನಿ ತರಿಸ್ತೀನಿ ಇರಪ್ಪ ಅಂತಾ 100 ಮಟನ್ ಬಿರಿಯಾನಿ, 20-30 ಪ್ಲೇಟ್ ಕಬಾಬ್‌ಗೆ ಆರ್ಡರ್ ಮಾಡಿದ್ರು. ವಿಶೇಷ ಚೇತನರು ಫುಲ್ ಖುಷ್. ಧನ್ಯವಾದ ಹೇಳೋಕೆ ಕಾಲು ಹಿಡಿಯೋಕೆ ಮುಂದಾದಾಗ ಜಮೀರ್‌ಗೆ ಕಣ್ಣೀರು.. ʻಪಬ್ಲಿಕ್ ಟಿವಿʼ ಜೊತೆಗೆ ಮಾತಾನಾಡ್ತಾ ಸಚಿವ ಜಮೀರ್ ಕಣ್ಣಿಂದ ನೀರು ಜಿನುಗುತ್ತಿತ್ತು. ಪಾಪ ಬಡವರು ಕಾಲಿಲ್ಲ.. ಕೈಯಿಲ್ಲ.. ನೋಡೋಕೆ ಬೇಜಾರಾಯ್ತು. ಇಷ್ಟು ದೂರ ಬಂದ್ರಲ್ಲ ಅಂತಾ ನೋವಿನಿಂದಲೇ ನುಡಿದ್ರು. ಕ್ಯಾಮೆರಾ ಆಫ್ ಮಾಡ್ರಪ್ಪ ಅಂತಾ ಮನವಿ ಮಾಡುತ್ತಲೇ ಎರಡು ಲಕ್ಷ ರೂಪಾಯಿ ದುಡ್ಡು ತಗೊಂಡು ವಿಶೇಷಚೇತನರ ಕೈಗೆ ತುರುಕಿದ್ರು.

  • ವಿಷ ಕುಡಿಯುವ ಪ್ರತಿಭಟನೆಗೆ ಕಿಯೋನಿಕ್ಸ್ ವೆಂಡರ್ಸ್ ಕರೆ – ಕಚೇರಿ ಎದುರು ಹೈಡ್ರಾಮಾ

    ವಿಷ ಕುಡಿಯುವ ಪ್ರತಿಭಟನೆಗೆ ಕಿಯೋನಿಕ್ಸ್ ವೆಂಡರ್ಸ್ ಕರೆ – ಕಚೇರಿ ಎದುರು ಹೈಡ್ರಾಮಾ

    – ಪ್ರಿಯಾಂಕ್‌ ಖರ್ಗೆ, ಶರತ್ ಬಚ್ಚೇಗೌಡ ಹೆಸರಿನಲ್ಲಿ ಡೆತ್ ನೋಟ್

    ಬೆಂಗಳೂರು: ಇಲ್ಲಿನ ಕುಮಾರ ಪಾರ್ಕ್‌ ರಸ್ತೆಯಲ್ಲಿರುವ ಕಿಯೋನಿಕ್ಸ್‌ (KEONICS) ಕಚೇರಿ ಎದುರು ಭಾರೀ ಹೈಡ್ರಾಮಾ ನಡೆದಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿಷ ಕುಡಿಯುವ ಪ್ರತಿಭಟನೆಗೆ (KEONICS Protest) ಕರೆ ಕೊಟ್ಟಿದ್ದಾರೆ.

    ಈಗಾಗಲೇ ಬಾಕಿ ಹಣ ಪಾವತಿ ಮಾಡುವಂತೆ ಒತ್ತಾಯಿಸಿ ಈ ಹಿಂದೆ ದಯಾಮರಣ ಕೋರಿದ್ದ ಕಿಯೋನಿಕ್ಸ್‌ ವೆಂಡರ್ಸ್‌ ಇದೀಗ ವಿಷ ಕುಡಿಯುವ ಪ್ರತಿಭಟನೆಗೆ ಕರೆ ಕೊಟ್ಟಿದ್ದರು. ಅಲ್ಲದೇ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge), ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಹೆಸರಿನಲ್ಲಿ ಡೆತ್ ನೋಟ್ ಸಹ ಬರೆದುಕೊಂಡಿದ್ದರು.

    ಕಚೇರಿಯ ಮುಂಭಾಗ ವೆಂಡರ್ಸ್ ಪ್ರತಿಭಟನೆ ಬೆನ್ನಲ್ಲೇ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು. ಈ ವೇಳೆ ವೆಂಡರ್ಸ್ ಕಚೇರಿಗೆ ಬರುತ್ತಿದ್ದ ವ್ಯಕ್ತಿಯಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೇರೆ ಕಚೇರಿಗೆ ಹೋಗ್ತಾ ಇದ್ದೀನಿ ಅಂದ್ರೂ ಬಿಡದೇ ಸದಾಶಿವನಗರ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಸದ್ಯ ಕಿಯೋನಿಕ್ಸ್ ವೆಂಡರ್ಸ್ ಡೆತ್ ನೋಟ್ ನಿಂದ ಸರ್ಕಾರ ಮತ್ತೆ ಮುಜುಗರಕ್ಕೆ ಒಳಗಾದಂತಿದೆ.

    ಒಂದು ವಾರದ ಹಿಂದೆಯಷ್ಟೇ ಕಿಯೋನಿಕ್ಸ್ ವೆಂಡರ್ಸ್‌ಗಳಿಗೆ ಈಗಾಗಲೇ ಬಾಕಿ ಹಣ ಪಾವತಿ ಮಾಡ್ತಿದ್ದೇವೆ ಎಂದು ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಹೇಳಿದ್ದರು.

    ಕಿಯೋನಿಕ್ಸ್ ವೆಂಡರ್ಸ್‌ಗಳಿಗೆ ಬಾಕಿ ಪಾವತಿ ವಿಚಾರ ಮತ್ತು ಕಿಯೋನಿಕ್ಸ್ ವೆಂಡರ್ಸ್‌ನಿಂದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಿಯೋನಿಕ್ಸ್ ವೆಂಡರ್ಸ್ ಜೊತೆ ನಾವು ಈಗಾಗಲೇ ಚರ್ಚೆ ಮಾಡಿದ್ದೇವೆ. ಸಚಿವ ಪ್ರಿಯಾಂಕ್ ಖರ್ಗೆ ಮತ್ತು ನಾನು ಇಬ್ಬರು ಚರ್ಚೆ ಮಾಡಿದ್ದೇವೆ. ಎಲ್ಲರಿಗೂ ಪರಿಹಾರ ಕೊಡುವ ಕುರಿತು ಚರ್ಚೆಗಳನ್ನ ನಡೆಸಿದ್ದೇವೆ. ಕಳೆದ ಸರ್ಕಾರದಲ್ಲಿ ನಡೆದ ಹಗರಣಗಳನ್ನ ನಾವು ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ವೆಂಡರ್ಸ್‌ಗಳಿಗೆ ಮತ್ತು ಸಣ್ಣ ಗುತ್ತಿಗೆದಾರಿಗೆ ತೊಂದರೆ ಕೊಡುವ ಉದ್ದೇಶ ನಮಗೆ ಇಲ್ಲ. ಆದರೆ ಸರ್ಕಾರದ ಖಜಾನೆಗೆ ಆಗಿರುವ ಖೋತಾ ಬಗ್ಗೆ ಸಮಗ್ರ ತನಿಖೆ ಆಗಬೇಕು. ಈ ತನಿಖೆಯನ್ನ ಗಂಭೀರವಾಗಿ ಮಾಡ್ತಿದ್ದೇವೆ ಎಂದು ಹೇಳಿದ್ದರು.

  • ಕೋಲಾರ| ಪ್ಯಾಸೆಂಜರ್ ರೈಲು ತಡೆದು ಪ್ರಯಾಣಿಕರ ಪ್ರತಿಭಟನೆ

    ಕೋಲಾರ| ಪ್ಯಾಸೆಂಜರ್ ರೈಲು ತಡೆದು ಪ್ರಯಾಣಿಕರ ಪ್ರತಿಭಟನೆ

    ಕೋಲಾರ: ಕೆಜಿಎಫ್‌ನಿಂದ ಬೆಂಗಳೂರಿಗೆ ತೆರಳುವ ರೈಲುಗಳಿಗೆ ಕೋಚ್ ಕಡಿಮೆ ಮಾಡಿದ ಹಿನ್ನೆಲೆ ಪ್ಯಾಸೆಂಜರ್ ರೈಲು (Passenger Train) ತಡೆದು ಪ್ರಯಾಣಿಕರು ಪ್ರತಿಭಟನೆ ನಡೆಸಿದ ಘಟನೆ ಕೋಲಾರದ (Kolar) ಬಂಗಾರಪೇಟೆ (Bangarpet) ರೈಲು ನಿಲ್ದಾಣದಲ್ಲಿ ನಡೆದಿದೆ.

    ನಿತ್ಯ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ. ನಿತ್ಯ ಉದ್ಯೋಗ, ವಿದ್ಯಾಭ್ಯಾಸ, ಎಂದು ಸಾವಿರಾರು ಜನರು ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ. ಇದೀಗ ರೈಲು ಪ್ರಯಾಣಕ್ಕೆ ತೊಂದರೆಯಾಗುವಂತೆ ರೈಲ್ವೆ ಇಲಾಖೆ ಕೋಚ್‌ಗಳನ್ನು ಕಡಿಮೆ ಮಾಡಿದೆ. ಈ ಹಿನ್ನೆಲೆ ರೈಲ್ವೆ ಇಲಾಖೆ ಕ್ರಮವನ್ನು ಖಂಡಿಸಿ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ನೀವು ಇರುವ ಗಂಗಾ ಮಾತೆಯ ಘಾಟ್ ಬಳಿಯೇ ಸ್ನಾನ ಮಾಡಿ, ವದಂತಿ ನಂಬಬೇಡಿ: ಯೋಗಿ ಅದಿತ್ಯನಾಥ್‌

    ಬಂಗಾರಪೇಟೆ ರೈಲು ನಿಲ್ದಾಣದಲ್ಲಿ ಮಾರಿಕುಪ್ಪಂನಿಂದ ಬೆಂಗಳೂರಿನ ಸಂಗೋಳ್ಳಿರಾಯಣ್ಣ ನಿಲ್ದಾಣಕ್ಕೆ ತಲುಪುವ ಪ್ಯಾಸೆಂಜರ್ ರೈಲನ್ನು 45 ನಿಮಿಷಗಳ ಕಾಲ ತಡೆದು ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಕೋಚ್ ಹೆಚ್ವಿಸುವ ಭರವಸೆ ಕೊಟ್ಟಿದ್ದಾರೆ. ನಂತರ ರೈಲು ಮುಂದಕ್ಕೆ ಚಲಿಸಿದೆ. ಇದನ್ನೂ ಓದಿ: GSLV ರಾಕೆಟ್‌ ಹಾರಿಸಿ ಶತಕ ಹೊಡೆದ ಇಸ್ರೋ! – ಏನಿದು ನಾವಿಕ್‌? ಲಾಭ ಏನು?

  • ಗೃಹ ಸಚಿವರ ಮನೆಮುಂದೆ ಬಿಜೆಪಿ ಪ್ರತಿಭಟನೆಗೆ ಕರೆ – ಪರಮೇಶ್ವರ್ ಮನೆಗೆ ಪೊಲೀಸ್ ಭದ್ರತೆ

    ಗೃಹ ಸಚಿವರ ಮನೆಮುಂದೆ ಬಿಜೆಪಿ ಪ್ರತಿಭಟನೆಗೆ ಕರೆ – ಪರಮೇಶ್ವರ್ ಮನೆಗೆ ಪೊಲೀಸ್ ಭದ್ರತೆ

    ತುಮಕೂರು: ಗೃಹ ಸಚಿವರ ಮನೆಮುಂದೆ ಬಿಜೆಪಿ (BJP) ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆ ಡಾ.ಜಿ. ಪರಮೇಶ್ವರ್ (G Parameshwar) ಮನೆಗೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.

    ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಹಿನ್ನೆಲೆ ತುಮಕೂರಿನ (Tumakuru) ಹೆಗ್ಗೆರೆ ಬಳಿಯ ಸಿದ್ದಾರ್ಥ ನಗರದಲ್ಲಿರುವ ಪರಮೇಶ್ವರ್ ಮನೆಮುಂದೆ ಬೆಳಗ್ಗೆ 10:30ಕ್ಕೆ ಪ್ರತಿಭಟನೆ ನಡೆಸಲು ಜಿಲ್ಲಾ ಬಿಜೆಪಿ ಘಟಕ ಕರೆ ನೀಡಿದೆ. ಪ್ರತಿಭಟನೆ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಇದನ್ನೂ ಓದಿ: ಮೊಣಕಾಲಿನಲ್ಲೇ ತಿರುಪತಿ ದೇವಾಲಯದ ಮೆಟ್ಟಿಲು ಹತ್ತಿ ಹರಕೆ ತೀರಿಸಿದ ಯುವ ಕ್ರಿಕೆಟಿಗ

    ಒಬ್ಬರು ಎಎಸ್‌ಪಿ, ಇಬ್ಬರು ಡಿವೈಎಸ್‌ಪಿ, ನೇತೃತ್ವದಲ್ಲಿ ಭದ್ರತೆ ನೀಡಿದ್ದು, ಸುಮಾರು ನೂರೈವತ್ತಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಚಿನ್ನ ಕದ್ದು ಪೊಲೀಸರಿಗೆ ಸಿಕ್ಕಿಬಿದ್ದ ಟಿಟಿಡಿ ನೌಕರ

  • ಸಿಬಿಐಗೆ ನೀಡದಿದ್ದರೆ ಕಲಬುರಗಿಯಲ್ಲಿ ಬೃಹತ್‌ ಹೋರಾಟ – ಪ್ರಿಯಾಂಕ್‌ ವಿರುದ್ಧ ವಿಜಯೇಂದ್ರ ಆಕ್ರೋಶ

    ಸಿಬಿಐಗೆ ನೀಡದಿದ್ದರೆ ಕಲಬುರಗಿಯಲ್ಲಿ ಬೃಹತ್‌ ಹೋರಾಟ – ಪ್ರಿಯಾಂಕ್‌ ವಿರುದ್ಧ ವಿಜಯೇಂದ್ರ ಆಕ್ರೋಶ

    ಬೆಂಗಳೂರು: ಗುತ್ತಿಗೆದಾರ ಸಚಿನ್‌ ಪಾಂಚಾಳ್‌ (Sachin Panchal) ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ (CBI) ನೀಡದೇ ಇದ್ದರೆ ಜನವರಿ 4 ರಂದು ಕಲಬುರಗಿಯಲ್ಲಿ (Kalaburagi) ಬೃಹತ್‌ ಪ್ರತಿಭಟನೆ (Protest) ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು (CM Siddaramaiah) ಸಿಬಿಐ ತನಿಖೆಗೆ ಆದೇಶಿಸಿದರೆ ಒಳ್ಳೆಯದು. ಜನವರಿ 3 ರವರೆಗೂ ಕಾಯುತ್ತೇವೆ. ಸಿಬಿಐಗೆ ನೀಡದೇ ಇದ್ದರೆ ಜ.4 ರಂದು ಬೃಹತ್‌ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಆರೋಪಿ ರಾಜು ಕಪನೂರು ಪ್ರಿಯಾಂಕ್‌ ಖರ್ಗೆ (Priyank Kharge), ಸಿದ್ದರಾಮಯ್ಯ, ಡಿಕೆಶಿ ಜತೆಗೂ ಇರುವ ಫೋಟೋ ರಿಲೀಸ್ ಮಾಡಿ, ಈತ ಖರ್ಗೆ ಕುಟುಂಬಕ್ಕೆ ಪರಮಾತ್ರ. ರಾಜೂನ ಸಿಎಂ, ಡಿಸಿಎಂ ತೊಡೆ ಮೇಲೆ ಕೂರಿಸಿಕೊಳ್ಳುವುದು ಬಾಕಿ. ಬಿಟ್ಟರೆ ತಲೆ ಮೇಲೂ ಕೂರಿಸಿಕೊಳ್ತಾರೆ. ಪ್ರಿಯಾಂಕ್ ಖರ್ಗೆ ತಮಗೆ ರಾಜು ಕಪನೂರು ಪರಿಚಯ ಇಲ್ಲ ಅಂತ ಹೇಳಲು ಸಾಧ್ಯವಿಲ್ಲ ಎಂದರು.

    ಸಿದ್ದರಾಮಯ್ಯ ನಿಜವಾದ ಅಹಿಂದ ನಾಯಕ ಆಗಿದ್ದರೆ ಪ್ರಕರಣವನ್ನು ಸಿಬಿಐಗೆ ನೀಡಿ ಸಚಿನ್ ಕುಟುಂಬಕ್ಕೆ ನ್ಯಾಯ ಕೊಡಿಸಲಿ. ಆಗ ನಾವು ನಿಮ್ಮನ್ನು ಅಹಿಂದ ನಾಯಕ, ಬಲಿಷ್ಟ ಸಿಎಂ ಎಂದು ಒಪ್ಪಿಕೊಳ್ಳುತ್ತೇವೆ ಎಂದು ವಿಜಯೇಂದ್ರ ಸವಾಲ್ ಎಸೆದರು. ಇದನ್ನೂ ಓದಿ: ವಿವಾದ ಇಲ್ಲಿಗೆ ಮುಗಿಸೋಣ – ಸಿಎಂ ಹೆಸರು ಸಮರ್ಥಿಸಿದ್ದ ಪ್ರತಾಪ್ ಸಿಂಹ ಯೂ ಟರ್ನ್

    ನಮ್ಮ ಕಲಬುರಗಿ ನಾಯಕರ ಕೊಲೆ ಬಗ್ಗೆ ಸಚಿನ್ ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿದೆ. ಆಂದೋಲನ ಸ್ವಾಮೀಜಿ ಕೊಲೆ ಬಗ್ಗೆಯೂ ಪ್ರಸ್ತಾಪವಾಗಿದೆ. ಕೊಲ್ಹಾಪುರದ ಸುಪಾರಿ ಕಿಲ್ಲರ್‌ಗಳಿಗೆ ಸುಪಾರಿ ಕೊಡಲಾಗಿದೆ ಅಂತ ಇದೆ. ಹೀಗಾಗಿ ಎಲ್ಲ ಅಂಶಗಳ ಬಗ್ಗೆಯೂ ಪಾರದರ್ಶಕ ತನಿಖೆಗೆ ಸಿಬಿಐ ತನಿಖೆ ನಡೆಯಬೇಕು. ನಮ್ಮ ಪೊಲೀಸರಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ ಎಂದರು.

    ಪ್ರಿಯಾಂಕ್ ಖರ್ಗೆ ಇಲಾಖೆ ಕೇವಲ ಗ್ರಾಮೀಣಾಭಿವೃದ್ಧಿ, ಐಟಿಬಿಟಿ ಅಷ್ಟೇ ಅಲ್ಲ ಪ್ರಿಯಾಂಕ್ ಖರ್ಗೆ ಸರ್ವ ಇಲಾಖೆಗೂ ಮಂತ್ರಿ. ಸದನದಲ್ಲಿ ಎಲ್ಲಾ ಇಲಾಖೆಗಳ ಪ್ರಶ್ನೆಗೂ ಎದ್ದು ಎದ್ದು ಉತ್ತರ ಕೊಡ್ತಾರೆ. ಅವರು ಬಹಳ ದೊಡ್ಡ ಜ್ಞಾನಿ, ಪ್ರಭಾವಿ.  ಬಿಜೆಪಿಯವರಿಗೆ ಆರೋಪ ಮಾಡುವ ಚಟ ಅಂತ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ. ಪೋಕ್ಸೋ ಕೇಸ್ ನಿಂದ ಡೈವರ್ಟ್ ಮಾಡಲು ಆರೋಪ ಮಾಡ್ತಿದ್ದಾರೆ ಅಂದಿದ್ದಾರೆ. ನೀವೇನು ಹೈಕೋರ್ಟಾ? ಸುಪ್ರೀಂಕೋರ್ಟಾ? ಯಡಿಯೂರಪ್ಪ ಬಗ್ಗೆ ನೀವೇನು ಮಾತಾಡೋದು? ನಿಮ್ಮ ಆಪ್ತನ ಕುಮ್ಮಕ್ಕಿನಿಂದಲೇ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿದರು.

    ಇದೇ ತಿಂಗಳ 27ರಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಗುತ್ತಿಗೆದಾರ ಸಚಿನ್ ಪಾಂಚಾಳ ಅವರ ಆತ್ಮಹತ್ಯೆ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದೆ. ಅವರು ಬರೆದಿಟ್ಟ 7 ಪುಟಗಳ ಡೆತ್ ನೋಟ್‌ನಲ್ಲಿ ಕಿರುಕುಳದ ಉಲ್ಲೇಖವಿದೆ. ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಬರೆದಿಟ್ಟ ಡೆತ್ ನೋಟಿನ ಮಾಹಿತಿ ಸತ್ಯಕ್ಕೆ ದೂರವಾಗುವ ಸಾಧ್ಯತೆ ಇಲ್ಲ ಎಂದು ತಿಳಿಸಿದರು.

    ನಿನ್ನೆ ನಾನು, ವಿಪಕ್ಷ ನಾಯಕರು, ವಿಧಾನಪರಿಷತ್ ಸದಸ್ಯ ರವಿಕುಮಾರ್, ಸ್ಥಳೀಯ ಶಾಸಕರು, ಪಕ್ಷದ ಅಧ್ಯಕ್ಷರು, ಭಾಲ್ಕಿ ತಾಲ್ಲೂಕಿನ ಮೃತರ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೇವೆ. ಸಚಿನ್ ಅವರ ಕುಟುಂಬವನ್ನು ಭೇಟಿ ಮಾಡಿದ್ದೇವೆ. ಆ ಹಿಂದುಳಿದ ವರ್ಗದ ಬಡ ಕುಟುಂಬದಲ್ಲಿ ಸಚಿನ್‍ಗೆ 5 ಜನರು ಸಹೋದರಿಯರಿದ್ದಾರೆ ಎಂದು ವಿವರಿಸಿದರು. ಬಿಜೆಪಿಯವರಿಗೆ ರಾಜಕೀಯ ತೆವಲು, ಚಟ, ಹಿಟ್ ಆಂಡ್ ರನ್ ಎಂದು ಕಾಂಗ್ರೆಸ್ಸಿನವರು ಮಾತನಾಡುತ್ತಾರೆ ಎಂದರು.

    ಸಚಿನ್ ಸಾಮಾಜಿಕ ಜಾಲತಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಸ್ಟ್ ಹಾಕಿಕೊಂಡಿದ್ದಾಗ ಅವರ ಇಬ್ಬರು ಸಹೋದರಿಯರಾದ ಸವಿತಾ, ಸುನೀತಾ ಮಧ್ಯಾಹ್ನವೇ 2.15ಕ್ಕೆ ಪೊಲೀಸ್ ಠಾಣೆಗೆ ಧಾವಿಸಿದ್ದರು. ಗೋಗರೆದು ಕೇಳಿದರೆ ಪ್ರಾಣ ಉಳಿಸಲು ಕೋರಿದರೆ, ಅವರ ಮನವಿಯನ್ನು ಕಿಂಚಿತ್ತೂ ಲೆಕ್ಕಿಸದೆ, ಅಮಾನವೀಯವಾಗಿ ಪಿಎಸ್‍ಐ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಅವರನ್ನು ಪೊಲೀಸ್ ಸ್ಟೇಷನ್‍ಗಳಿಗೆ ತಿರುಗಾಡಿಸಿದ್ದರು ಎಂದು ಟೀಕಿಸಿದರು.

    ಸಚಿನ್‌ ಕುಟುಂಬದವರಿಂದ ಪೊಲೀಸರು ದೂರು ಸ್ವೀಕರಿಸಿಲ್ಲ, ಸಚಿನ್ ಹುಡುಕುವ ಕೆಲಸವನ್ನೂ ಮಾಡಿಲ್ಲ. ಪೊಲೀಸ್ ಅಧಿಕಾರಿಗಳ ವರ್ತನೆಯು ಖಂಡನೀಯ. ಕಾಂಗ್ರೆಸ್ ಹಿರಿಯ ಮುಖಂಡ, ಖರ್ಗೆ ಕುಟುಂಬಕ್ಕೆ ಹತ್ತಿರ ಇರುವ ರಾಜು ಕಪನೂರ್ ಈ ಪ್ರಕರಣದ ಹಿಂದಿನ ಪ್ರಮುಖ ಆರೋಪಿ ಎಂಬುದು ಡೆತ್ ನೋಟಿನಲ್ಲಿದೆ ಎಂದು ತಿಳಿಸಿದರು.

    ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದ ಬಡ ಕುಟುಂಬಕ್ಕೆ ಅನ್ಯಾಯವಾಗಿದೆ. ಕುಟುಂಬದ ಆಧಾರಸ್ತಂಭ ಕುಸಿದಿದೆ. ಹಾಗಾಗಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲು ನಾವು ಒತ್ತಾಯಿಸುತ್ತಿದ್ದೇವೆ. ದೆಹಲಿಯಲ್ಲಿ ಪ್ರಮುಖ ಸಭೆ ಇದ್ದರೂ ಇಲ್ಲಿ ಬಂದಿದ್ದೇನೆ. ಭಾಲ್ಕಿಗೆ ಹೋಗಿ ಬಂದಿದ್ದೇವೆ ಎಂದ ಅವರು, ರಾಜು ಕಪನೂರ್, ಖರ್ಗೆ ಕುಟುಂಬಕ್ಕೆ ಪರಮಾಪ್ತ. ಬಡ ಸಚಿನ್ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ಪ್ರಾಮಾಣಿಕ ಇಚ್ಛೆ ನಮ್ಮದು ಎಂದರು.