Tag: ಪ್ರತಿಭಟನೆ

  • ಸ್ಟಾಲಿನ್ ಸ್ನೇಹಕ್ಕೆ ಕರ್ನಾಟಕ ಬಲಿ, ಮಂಡ್ಯ ಜನತೆಗೆ ಕಾಂಗ್ರೆಸ್ ಶಾಪ: ಸಿಟಿ ರವಿ ಕಿಡಿ

    ಸ್ಟಾಲಿನ್ ಸ್ನೇಹಕ್ಕೆ ಕರ್ನಾಟಕ ಬಲಿ, ಮಂಡ್ಯ ಜನತೆಗೆ ಕಾಂಗ್ರೆಸ್ ಶಾಪ: ಸಿಟಿ ರವಿ ಕಿಡಿ

    – ಚುನಾವಣೆಗೂ ಮುನ್ನ ನೀರಿಗಾಗಿ ಪಾದಯಾತ್ರೆ ಮಾಡಿದ್ದರು
    – ಮಗು ಅಳುವುದಕ್ಕೂ ಮೊದಲೇ ಹಾಲು ಕೊಡ್ತಿದ್ದಾರೆ

    ಮಂಡ್ಯ: ಕರ್ನಾಟಕ ಕಾಂಗ್ರೆಸ್ (Karnataka Congress) ಐಎನ್‌ಡಿಐಎ (INDIA) ಮೈತ್ರಿಗಾಗಿ ನೀರು ಬಿಟ್ಟಿದೆ. ಸ್ಟಾಲಿನ್ ಸ್ನೇಹಕ್ಕೆ (MK Stalin) ಕರ್ನಾಟಕ ಬಲಿಯಾಗುತ್ತಿದೆ. ಕಾಂಗ್ರೆಸ್ ಮಂಡ್ಯ (Mandya) ಜನರಿಗೆ ಶಾಪವಾಗುತ್ತಿದ್ದು, ತಮಿಳುನಾಡಿಗೆ (Tamil Nadu) ವರವಾಗುತ್ತಿದೆ. ನಿಮ್ಮ ಲಾಭಕ್ಕೆ ರಾಜ್ಯದ ಜನತೆಗೆ ನೀವು ಶಾಪ ಆಗಿದ್ದೀರಿ ಎಂದು ಮಾಜಿ ಸಚಿವ ಸಿಟಿ ರವಿ (CT Rvai) ಕಿಡಿಕಾರಿದ್ದಾರೆ.

    ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಕೆಆರ್‌ಎಸ್ ಡ್ಯಾಂನಿಂದ (KRS Dam) ತಮಿಳುನಾಡಿಗೆ ನೀರು ಹರಿಸುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಕಾವೇರಿ (Kaveri River) ಕರ್ನಾಟಕದ ಸ್ವಾಭಿಮಾನದ ಪ್ರತೀಕ ಮಾತ್ರವಲ್ಲ ಜೀವನಾಡಿ. ಮಂಡ್ಯ, ಮೈಸೂರು ಭಾಗದ ರೈತರ ಬದುಕನ್ನು ಹಸನು ಮಾಡಿದೆ. ಕಾವೇರಿ ಇಲ್ಲದೇ ಬೆಂಗಳೂರು ಉಳಿಯೋಕು ಆಗಲ್ಲ ಎಂದಿದ್ದಾರೆ.

    ಕಾವೇರಿ ವಿವಾದ ಇವತ್ತು ನಿನ್ನೆಯದಲ್ಲ. ಅದಕ್ಕೆ ಶತಮಾನದ ಇತಿಹಾಸ ಇದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಮುಖಂಡರು, ಡಿಕೆಶಿ ಸೇರಿ ಎಲ್ಲರೂ ಪಾದಯಾತ್ರೆ ಮಾಡಿದ್ರು. ನಮ್ಮ ನೀರು, ನಮ್ಮ ಹಕ್ಕು ಅಂತ ಪಾದಯಾತ್ರೆ ಮಾಡಿದ್ರು. ರೈತರು ಎಂದರೆ ಎಲ್ಲರೂ ಒಂದೇ. ಕರ್ನಾಟಕ-ತಮಿಳುನಾಡು ಎನ್ನುವ ಬೇಧಭಾವ ಇಲ್ಲ. ಆದರೆ ಸಂಕಷ್ಟ ಇದ್ದಾಗ ಸೂತ್ರದ ಅನುಗುಣವಾಗಿ ನೀರಿನ ವಿಚಾರದಲ್ಲಿ ವ್ಯವಹಾರ ಮಾಡಬೇಕು. ಈಗ ಮಳೆ ಇಲ್ಲ, ಸಂಕಷ್ಟ ಇದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡು ಅಳುವುದಕ್ಕೂ ಮೊದಲೇ ನೀರು ಕೊಟ್ಟಿದ್ದೀರಿ. ಮಕ್ಕಳು ಅತ್ತಾಗ ಮಾತ್ರ ತಾಯಿ ಹಾಲು ಕೊಡೋದು. ಆದರೆ ತಮಿಳುನಾಡು ಕೇಳೋದಕ್ಕೂ ಮೊದಲೇ ನೀರು ಬಿಟ್ಟಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

    ಸರ್ಕಾರ ಐಎನ್‌ಡಿಐಎ ಮೈತ್ರಿಗೋಸ್ಕರ ನೀರು ಬಿಡುತ್ತಿದೆ. ಸ್ಟಾಲಿನ್ ಸ್ನೇಹಕ್ಕೆ ಕರ್ನಾಟಕ ಬಲಿಯಾಗುತ್ತಿದೆ. ಕಾಂಗ್ರೆಸ್ ಮಂಡ್ಯ ಜನರಿಗೆ ಶಾಪವಾಗಿದ್ದು ತಮಿಳುನಾಡಿಗೆ ವರವಾಗುತ್ತಿದೆ. ನಿಮ್ಮ ಲಾಭಕ್ಕೆ ರಾಜ್ಯದ ಜನತೆಗೆ ನೀವು ಶಾಪ ಆಗಿದ್ದೀರಿ. ಸಂಕಷ್ಟದ ಸೂತ್ರ ಮರೆತು ನೀರು ಬಿಟ್ಟಿದ್ದೀರಿ. ಸಂಕಷ್ಟದ ಸೂತ್ರ ಬದಿಗೊತ್ತಿ ರಾಜಕೀಯ ಮಾಡುತ್ತಿದ್ದೀರಿ. ನಾಳೆ ಸರ್ವಪಕ್ಷಗಳ ಸಭೆ ಮಾಡುತ್ತಿದ್ದೀರಿ. ನಿಮ್ಮ ಪಾಪಕ್ಕೆ ಸೀಲ್ ಹಾಕಿಸಿಕೊಳ್ಳಲು. ಹೇಗೂ ಒಂದಷ್ಟು ಜನ ಹೊಗಳು ಭಟ್ಟರನ್ನು ಇಟ್ಟುಕೊಂಡಿದ್ದೀರಿ. ಅವರ ಬಳಿ ಸೀಲ್ ಹಾಕೊಸಿಕೊಳ್ಳೊಕೆ ಸಭೆ ಮಾಡುತ್ತಿದ್ದೀರಿ. ತಮಿಳುನಾಡಿಗೆ ಮೊದಲೇ ನೀರು ಬಿಟ್ಟು ಈಗ ಸಭೆ ಮಾಡಿದರೆ ಏನು ಪ್ರಯೋಜನ? ನೀರು ಬಿಡುವ ಮೊದಲೇ ಸಭೆ ಮಾಡಬೇಕಿತ್ತು. ಇದು ಕಾಂಗ್ರೆಸ್ ಕರ್ನಾಟಕಕ್ಕೆ ಮಾಡಿರುವ ಅನ್ಯಾಯ ಎಂದರು. ಇದನ್ನೂ ಓದಿ: ಆಪರೇಷನ್ ಹಸ್ತ ಬೆನ್ನಲ್ಲೇ ಯಶವಂತಪುರ ಕ್ಷೇತ್ರಕ್ಕೆ ಬಂಪರ್

    ರಾಜ್ಯದಲ್ಲಿ ಉತ್ತಮ ಮಳೆ ಆಗಿದ್ದರೆ ನೀರು ಬಿಡಿ. ಆದರೆ ಬರಗಾಲದಲ್ಲೂ ನೀರು ಬಿಡುವ ಅವಶ್ಯಕತೆ ಏನಿತ್ತು? ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೀರಿ. ಶಕ್ತಿ ಯೋಜನೆ, ಗೃಹಜ್ಯೋತಿಗಳನ್ನು ತಂದಿದ್ದೀರಿ. ವಾಸ್ತವವಾಗಿ ರಾಜ್ಯದಲ್ಲಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದಮೇಲೆ ರಾಜ್ಯ ಕತ್ತಲಲ್ಲಿ ಮುಳುಗಿದೆ. ರಾಜ್ಯಕ್ಕೆ 15-16 ಸಾವಿರ ಮೆಗಾ ವ್ಯಾಟ್ ಪವರ್ ಬೇಕು. ಆದರೆ ಇಲ್ಲಿ ಉತ್ಪಾದನೆಯೇ ಆಗುತ್ತಿಲ್ಲ. ಕೇವಲ 8-9 ಸಾವಿರ ಮೆಗಾವ್ಯಾಟ್ ಉತ್ಪಾದನೆ ಆಗುತ್ತಿದೆ. ರಾಜ್ಯ ಕತ್ತಲಲ್ಲಿ ಮುಳುಗಿದೆ. ಆದರೆ ಉಚಿತ ಕರೆಂಟ್ ಹಾಸ್ಯಾಸ್ಪದ. ಮೊದಲು ಉತ್ಪಾದನೆ ಮಾಡಿ, ಬಳಿಕ ಉಚಿತ ವಿದ್ಯುತ್ ಕೊಡಿ ಎಂದು ಹೇಳಿದರು.

    ಕಾಂಗ್ರೆಸ್ ಕಾಲ್ಗುಣ ರಾಜ್ಯದಲ್ಲಿ ಮಳೆ ಆಗುತ್ತಿಲ್ಲ. ಅದು ಕಾಕತಾಳೀಯವೋ ಅಥವಾ ಪ್ರಕೃತಿಯೋ ಗೊತ್ತಿಲ್ಲ. ಮೊದಲೇ ಇವಕ್ಕೆ ದೇವರ ಮೇಲೆ ನಂಬಿಕೆ ಇಲ್ಲ. ಮತ್ತೆ ದೇವರು ಹೇಗೆ ಮಳೆಬೆಳೆ ಕೊಡ್ತಾನೆ? ಅದು ನಂಬಿಕೆಯೋ ಅಥವಾ ಮೂಢನಂಬಿಕೆಯೋ ಗೊತ್ತಿಲ್ಲ. ದೇವರ ಮೇಲೆ ಭಯಭಕ್ತಿ ಇಲ್ಲದ ಇವರ ಕಾಲ್ಗುಣ ಇದು. ಕಾಂಗ್ರೆಸ್ ಸರ್ಕಾರಕ್ಕೆ ಶ್ವೇತ ಪತ್ರದ ಅವ್ಯಶ್ಯಕತೆ ಇಲ್ಲ. ಜಿಲ್ಲಾಧಿಕಾರಿ ಕಾರಿಗೆ ಡೀಸೆಲ್ ಇಲ್ಲ, ಮಕ್ಕಳಿಗೆ ಮೊಟ್ಟೆ ಇಲ್ಲ. ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಸಂಬಳವೇ ಇಲ್ಲ. ಇನ್ನೂ ಎಣ್ಣೆ ರೇಟ್ ಹೇಗಿದೆ ಅಂತ ಕುಡಿಯುವವರಿಗೆ ಗೊತ್ತು, ನನಗೆ ಗೊತ್ತಿಲ್ಲ. ಮಧ್ಯಮವರ್ಗದವರಿಗೆ ಈ ಸರ್ಕಾರ ಬರೆ ಮೇಲೆ ಬರೆ ಹಾಕ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ:  ಮಹಿಳಾ ಪ್ರಯಾಣಿಕರಿಂದ ಕೆಕೆಆರ್‌ಟಿಸಿ ಆದಾಯ ಭಾರೀ ಏರಿಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೊಲ್ಲರದೊಡ್ಡಿ ಅಪಘಾತ ಪ್ರಕರಣ – ರಸ್ತೆಗೆ ಹಂಪ್ ಹಾಕುವಂತೆ ಮಗು ಶವ ಇಟ್ಟು ಪ್ರತಿಭಟನೆ

    ಗೊಲ್ಲರದೊಡ್ಡಿ ಅಪಘಾತ ಪ್ರಕರಣ – ರಸ್ತೆಗೆ ಹಂಪ್ ಹಾಕುವಂತೆ ಮಗು ಶವ ಇಟ್ಟು ಪ್ರತಿಭಟನೆ

    ರಾಮನಗರ: ಟ್ಯೂಶನ್ (Tuition) ಮುಗಿಸಿ ಮನೆಗೆ ಹೋಗುತ್ತಿದ್ದ ಐವರು ಮಕ್ಕಳಿಗೆ ಗೂಡ್ಸ್ ವಾಹನ ಡಿಕ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತದಲ್ಲಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ಈ ಹಿನ್ನೆಲೆ ಸೋಮವಾರ ರಾಮನಗರ (Ramanagara) ತಾಲೂಕಿನ ಗೊಲ್ಲರದೊಡ್ಡಿ (Gollaradoddi) ಗ್ರಾಮದಲ್ಲಿ ರಸ್ತೆ ಮಧ್ಯೆ ಮಗುವಿನ ಶವ ಇಟ್ಟು, ರಸ್ತೆಗೆ ಹಂಪ್ (Humps) ಹಾಕುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ (Protest) ನಡೆಸಿದ್ದಾರೆ.

    ರಾಮನಗರ- ಮಾಗಡಿ ಮುಖ್ಯರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದು, ಟೈರ್‌ಗೆ ಬೆಂಕಿ ಹಚ್ಚಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗಸ್ಟ್ 9ರಂದು ಟ್ಯೂಶನ್ ಮುಗಿಸಿ ಬರುತ್ತಿದ್ದ ಮಕ್ಕಳಿಗೆ ಗೂಡ್ಸ್ ವಾಹನವೊಂದು ಡಿಕ್ಕಿ ಹೊಡೆದಿದ್ದು, ಘಟನೆಯ ಪರಿಣಾಮ ಮೂವರು ಮೃತಪಟ್ಟಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮತ್ತೊಂದು ಮಗು ಮೃತಪಟ್ಟ ಹಿನ್ನೆಲೆ ವಾಹನಗಳ ವೇಗಕ್ಕೆ ಕಡಿವಾಣ ಹಾಕಿ ಅಪಘಾತ ತಪ್ಪಿಸುವಂತೆ ಗ್ರಾಮಸ್ಥರು (Villagers) ಒತ್ತಾಯಿಸಿದ್ದಾರೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಮಗುವಿನ ಶವವನ್ನು ರಸ್ತೆಯಲ್ಲಿ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಓವರ್‌ಟೇಕ್ ಅವಾಂತರದಿಂದ ಬೈಕ್‍ಗೆ ಟ್ರಕ್ ಡಿಕ್ಕಿ – ಇಬ್ಬರ ದುರ್ಮರಣ

    ಪ್ರತಿಭಟನಾ ಸ್ಥಳಕ್ಕೆ ಎಸಿ ಶ್ರೀಬಿಜಾಯ್ ಭೇಟಿ ನೀಡಿ ಗ್ರಾಮಸ್ಥರ ಮನವಿಯನ್ನು ಆಲಿಸಿದ್ದು, ರಸ್ತೆಗೆ ಹಂಪ್‌ಗಳ ನಿರ್ಮಾಣಕ್ಕೆ ಕ್ರಮವಹಿಸುವ ಭರವಸೆಯನ್ನು ನೀಡಿದ್ದಾರೆ. ಅಲ್ಲದೇ ಗ್ರಾಮಸ್ಥರ ಮನವೊಲಿಸಿ ಪ್ರತಿಭಟನೆ ವಾಪಸ್ ಪಡೆದು ಮಗುವಿನ ಅಂತ್ಯಸಂಸ್ಕಾರ ನೆರವೇರಿಸುವಂತೆ ಮನವಿ ಮಾಡಿಕೊಂಡರು. ಎಸಿ ಭರವಸೆ ಹಿನ್ನೆಲೆ ಗ್ರಾಮಸ್ಥರು ಪ್ರತಿಭಟನೆ ವಾಪಸ್ ಪಡೆದಿದ್ದಾರೆ. ಇದನ್ನೂ ಓದಿ: ಕಲ್ಲು, ಚೂರಿ ಹಿಡಿದು ನಡುರಸ್ತೆಯಲ್ಲಿ ದಾಂಧಲೆ – ಸಿನಿಮೀಯ ಶೈಲಿಯಲ್ಲಿ ಲಾಕ್ ಮಾಡಿದ ಪೊಲೀಸರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟ ಉಪೇಂದ್ರ ವಿರುದ್ಧ ಬೆಂಗಳೂರು ವಿವಿಯಲ್ಲಿ ಪ್ರತಿಭಟನೆ

    ನಟ ಉಪೇಂದ್ರ ವಿರುದ್ಧ ಬೆಂಗಳೂರು ವಿವಿಯಲ್ಲಿ ಪ್ರತಿಭಟನೆ

    ಸ್ಯಾಂಡಲ್ ವುಡ್ ನಟ ಉಪೇಂದ್ರ ಅವರ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ನಟನ ಹೇಳಿಕೆಯ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನ ವಿದ್ಯಾರ್ಥಿ ಒಕ್ಕೂಟದಿಂದ ಪ್ರತಿಭಟನೆ ಹಮ್ಮಿಕೊಂಡಿದ್ದು, ಉಪೇಂದ್ರ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆಗೆ (Protest) ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

    ಈ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರುವ ನಿರೀಕ್ಷೆಯಿದ್ದು, ಒಂದು ಕಡೆ ಪೊಲೀಸರಿಂದ ಕಡೆಯಿಂದ  ಉಪೇಂದ್ರ ಗೆ  ನೋಟಿಸ್ ಮತ್ತೊಂದು ಕಡೆ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಯಲಿದೆ. ವಿವಾದಾತ್ಮಕ ಹೇಳಿಕೆಯಿಂದ ಉಪೇಂದ್ರ ಇಕ್ಕಟ್ಟಿಗೆ ಸಿಲುಕಿದ್ದಾರೆ.

    ಆಕ್ಷೇಪಾರ್ಹ ಪದ ಬಳಕೆ ಮಾಡಿದ ನಟ ಉಪೇಂದ್ರ ಅವರಿಗೆ ಬೆಂಗಳೂರಿನ ಸಿ.ಕೆ. ಅಚ್ಚುಕಟ್ಟು ಪೊಲೀಸ್ ನೋಟಿಸ್ ಜಾರಿ ಮಾಡಿದ್ದಾರೆ. ತಕ್ಷಣ ವಿಚಾರಣೆಗೆ ಹಾಜರಾಗುಂತೆ ಉಪೇಂದ್ರ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಆಕ್ಷೇಪಾರ್ಹ ಪದ ಬಳಕೆ ಮಾಡಿ ಮಾತನಾಡಿದ್ದ ಆರೋಪದ‌ ಮೇಲೆ  ಉಪೇಂದ್ರ ವಿರುದ್ಧ. ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಆಗಿತ್ತು.

    ದೂರುದಾರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಧುಸೂದನ್ (Madhusudan) ಸಮ್ಮುಖದಲ್ಲಿ ಉಪೇಂದ್ರ ಮನೆ ಮಹಜರ್ ಮಾಡಲಿದ್ದು, ಇಂದು ಬೆಳಗ್ಗೆ 10 ಗಂಟೆಗೆ ಕತ್ರಿಗುಪ್ಪೆ ಮನೆಯಲ್ಲಿ ಪೊಲೀಸರು ಮಹಜರ್  ಮಾಡಲಿದ್ದಾರೆ. ಉಪೇಂದ್ರ ಕತ್ರಿಗುಪ್ಪೆ ಮನೆಯಲ್ಲಿ ಕೂತು ವಿಡಿಯೋ ಮಾಡಿರೋ ಹಿನ್ನಲೆ ಕತ್ರಿಗುಪ್ಪೆ ಮನೆ ಮಹಜರ್ ಮಾಡಲಿದ್ದಾರೆ.

    ಏನಿದು ಪ್ರಕರಣ?

    ನಿನ್ನೆಯಷ್ಟೇ ಸ್ಯಾಂಡಲ್‌ವುಡ್ (Sandalwood) ನಟ ಉಪೇಂದ್ರ (Upendra) ಮೇಲೆ ಎಫ್‌ಐಆರ್ ದಾಖಲಾಗಿತ್ತು. ಸಮುದಾಯವೊಂದನ್ನು ನಿಂದಿಸಿದ ಆರೋಪದ ಮೇಲೆ ಉಪೇಂದ್ರ ವಿರುದ್ಧ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಧುಸೂದನ್‌ ಅವರು ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR)ದಾಖಲಿಸಿದ್ದರು.

    ಇದೀಗ ಉಪೇಂದ್ರ ವಿರುದ್ಧ ಮತ್ತೊಂದು ಎಫ್ ಐ ಆರ್ ದಾಖಲಾಗಿದೆ. ರಣಧೀರ ಪಡೆ ಹರೀಶ್ ಕೊಟ್ಟ ದೂರಿನ ಆಧಾರದ ಮೇಲೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.ಇದೂವರೆಗೂ ಉಪೇಂದ್ರ ವಿರುದ್ದ ಎರಡು ಎಫ್ ಐ ಆರ್ ದಾಖಲಾಗಿದ್ದು, ವಿಚಾರಣೆ ಎದುರಿಸಬೇಕಾಗಿದೆ.

    ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಉಪೇಂದ್ರ ಮೇಲೆ ಪ್ರಕರಣ ದಾಖಲಾಗಿದ್ದು, ಎಸಿಪಿ ಮಟ್ಟದ ಅಧಿಕಾರಿಯಿಂದ ತನಿಖೆ ನಡೆಯುತ್ತಿದೆ. ಸಮುದಾಯವೊಂದನ್ನು ನಿಂದಿಸಿದ ಆರೋಪವನ್ನ ಉಪೇಂದ್ರ ಅವರು ಎದುರಿಸುತ್ತಿದ್ದಾರೆ. ಉಪೇಂದ್ರ ವಿರುದ್ಧ ಕಾನೂನು ಹೋರಾಟಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮತ್ತು ಹರೀಶ್ ಮುಂದಾಗಿದ್ದಾರೆ.

    ಲೈವ್ ವಿಡಿಯೋನಲ್ಲಿ ಮಾತನಾಡಿದ್ದ ನಟ ಉಪೇಂದ್ರ, ಮೊದಲಿಗೆ ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷಗಳನ್ನು ಹೊರತುಪಡಿಸಿ ತಮ್ಮದೇ ವಾರಗೆಯ ಇತರೆ ಕೆಲವು ರಾಜಕೀಯ ಪಕ್ಷಗಳಿಗಿಂತಲೂ ಹೆಚ್ಚು ಮತವನ್ನು ಯಾವುದೇ ಪ್ರಚಾರವಿಲ್ಲದೆ ಪಡೆದಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು. ಬಳಿಕ ಮಾತು ಮುಂದುವರೆಸಿ ಯಾವುದೋ ಮಾತಿಗೆ ಊರೆಂದರೆ ಹೊಲೆಗೇರಿ ಇದ್ದೇ ಇರುತ್ತದೆ ಎಂದು ಹೊಲೆಗೇರಿಯನ್ನು ತುಚ್ಛವಾಗಿ ಕಾಣುವ ಗಾದೆಯೊಂದನ್ನು ಹೇಳಿದ್ದರು. ಉಪೇಂದ್ರರ ಈ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟ ಅಕ್ಷಯ್ ಕುಮಾರ್ ಕೆನ್ನೆಗೆ ಬಾರಿಸಿದವರಿಗೆ 10 ಲಕ್ಷ ರೂ. ಘೋಷಣೆ

    ನಟ ಅಕ್ಷಯ್ ಕುಮಾರ್ ಕೆನ್ನೆಗೆ ಬಾರಿಸಿದವರಿಗೆ 10 ಲಕ್ಷ ರೂ. ಘೋಷಣೆ

    ಬಾಲಿವುಡ್ ನ ಖ್ಯಾತ ನಟ ಅಕ್ಷಯ್ ಕುಮಾರ್ (Akshay Kumar) ಕೆನ್ನೆಗೆ ಬಾರಿಸಿದವರಿಗೆ ಬರೋಬ್ಬರಿ ಹತ್ತು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಹಿಂದೂ ಸಂಘಟನೆಯ ಅಧ್ಯಕ್ಷ ಗೋವಿಂದ್ ಪರಾಶರ (Govind Parashara) ಹೇಳಿಕೆ ನೀಡಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ಓ ಮೈ ಗಾಡ್ 2 (Oh My God 2) ಸಿನಿಮಾದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಮಾಡಿದ್ದಕ್ಕೆ ಗೋವಿಂದ್ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

    ಈ ವಾರ ಅಕ್ಷಯ್ ಕುಮಾರ್ ನಟನೆಯ ಓ ಮೈ ಗಾಡ್ 2 ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಲೈಂಗಿಕತೆಯ ಬಗ್ಗೆ ಪಾಠ ಮಾಡಲಾಗಿದೆ. ಭಗವಾನ್ ಶಿವನ ಸಂದೇಶವಾಹಕನ ಪಾತ್ರದ ಮೂಲಕ ಲೈಂಗಿಕತೆಯ ಕುರಿತು ಹೇಳಿಸಲಾಗಿದೆ. ಇದು ಹಿಂದೂಗಳ ಭಾವನೆಯನ್ನು ಕೆರಳಿಸಿದೆ. ಹಾಗಾಗಿ ಸಿನಿಮಾ ರಿಲೀಸ್ ಆದ ಕೆಲವು ಕಡೆ ಪ್ರತಿಭಟನೆಯನ್ನೂ ಮಾಡಲಾಗುತ್ತಿದೆ. ಇದನ್ನೂ ಓದಿ:ಶಿವರಾಜ್ ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾದ ಶೂಟಿಂಗ್ ಮುಕ್ತಾಯ

    ಆಗ್ರಾದ ಕೆಲವು ಚಿತ್ರಮಂದಿರಗಳ ಮುಂದೆ ಅಕ್ಷಯ್ ಕುಮಾರ್ ಅವರ ಪ್ರತಿಕೃತಿ ದಹನ ಮತ್ತು ಪೋಸ್ಟರ್ ಗಳನ್ನು ಹರಿದು ಹಾಕಲಾಗಿದೆ. ಕೂಡಲೇ ಈ ಸಿನಿಮಾವನ್ನು ಹಿಂಪಡೆಯಬೇಕು ಎಂದು ಸೆನ್ಸಾರ್ ಮಂಡಳಿಗೂ ಸಂಘಟನೆಯ ಒತ್ತಾಯಿಸಿದೆ. ಈ ಹಿಂದೆ ಚಿತ್ರಕ್ಕೆ ಸೆನ್ಸಾರ್ ಸಮಸ್ಯೆ ಎದುರಾಗಿತ್ತು. ಹಲವು ಕತ್ತರಿ ಪ್ರಯೋಗಗಳ ನಂತರ ಚಿತ್ರಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿತ್ತು.

     

    ಓ ಮೈ ಗಾಡ್ 2 ಚಿತ್ರಕ್ಕೆ ಅನೇಕ ಅಡೆತಡೆಗಳು ಎದುರಾದರೂ, ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಮೊನ್ನೆಯಷ್ಟೇ ಸದ್ಗುರು ಜಗ್ಗಿವಾಸುದೇವ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಆದರೆ, ಹಿಂದೂಪರ ಸಂಘಟನೆಗಳು ಈ ಚಿತ್ರದ ಬಗ್ಗೆ ತಕರಾರು ತೆಗೆದಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಕಾಶ್ ರಾಜ್‌ ಸಂವಾದದ ಬಳಿಕ‌ ಗೋಮೂತ್ರ ಹಾಕಿ ಕಾಲೇಜಿನ ಕೊಠಡಿ ಸ್ವಚ್ಛಗೊಳಿಸಿದ ವಿದ್ಯಾರ್ಥಿಗಳು

    ಪ್ರಕಾಶ್ ರಾಜ್‌ ಸಂವಾದದ ಬಳಿಕ‌ ಗೋಮೂತ್ರ ಹಾಕಿ ಕಾಲೇಜಿನ ಕೊಠಡಿ ಸ್ವಚ್ಛಗೊಳಿಸಿದ ವಿದ್ಯಾರ್ಥಿಗಳು

    ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯ ಸರ್.ಎಂ.ವಿಶ್ವೇಶ್ವರಯ್ಯ ಕಲಾ-ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ಬೆಳಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್‌ (Prakash Raj) ಅವರ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂವಾದದ ನಂತರ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಸಂವಾದ ನಡೆದ ಕಾಲೇಜಿನ (College) ಕೊಠಡಿಗೆ ಗೋಮೂತ್ರ ಹಾಕಿ ಸ್ವಚ್ಛಗೊಳಿಸಿದ ನಾಟಕೀಯ ಬೆಳವಣಿಗೆ ನಡೆದಿದೆ.

    ನಟ ಪ್ರಕಾಶ್ ರಾಜ್‌ ಕಾರ್ಯಕ್ರಮಕ್ಕೆ ಕಾಲೇಜಿನ ಕೆಲವು ವಿದ್ಯಾರ್ಥಿಗಳು (Student) ವಿರೋಧ ವ್ಯಕ್ತಪಡಿಸಿದ್ದರು. ಸಂವಾದದ ವೇಳೆ ತುಕ್ಡೆ ಗ್ಯಾಂಗಿನ ನಾಯಕ ಪ್ರಕಾಶ್ ರೈ ಎಂಬ ಘೋಷಣೆ ‌ಕೂಗಿದ್ದಾರೆ.

    ಜೊತೆಗೆ ಕಾಲೇಜು ಎದುರೇ ಪ್ರತಿಭಟನೆ (Protest) ನಡೆಸಿದ್ದಾರೆ. ವಿದ್ಯಾರ್ಥಿಗಳಿಗೆ ತಾಲೂಕು ಬಿಜೆಪಿ ಅಧ್ಯಕ್ಷ ಧರ್ಮಪ್ರಸಾದ್ ಸಾಥ್ ಕೊಟ್ಟಿದ್ದಾರೆ. ಜೊತೆಗೆ ಪ್ರಕಾಶ್ ರಾಜ್‌ ಸಂವಾದದಿಂದ ವಿದ್ಯಾರ್ಥಿಗಳು ಕಲಿಯುವುದು ಏನಿದೆ? ಎಂದು ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಫ್ಲೆಕ್ಸ್‌, ಬ್ಯಾನರ್‌ ಸಂಪೂರ್ಣ ಬ್ಯಾನ್;‌ ಯಾರ ಹೆಸರಿರುತ್ತೋ ಅವರಿಗೂ 50,000 ರೂ. ದಂಡ: ಡಿಕೆಶಿ ಎಚ್ಚರಿಕೆ

    ಇದೀಗ ಸಂವಾದ ಕಾರ್ಯಕ್ರಮ ಮುಗಿದ ನಂತರ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕೊಠಡಿಯನ್ನ ಗೋಮೂತ್ರ ಹಾಕಿ ಶುದ್ದೀಕರಿಸಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಪಾಕಿಸ್ತಾನ ತಂಡದಲ್ಲಿ ಎಲ್ಲರೂ ಉತ್ತಮ ಬೌಲರ್‌ಗಳೇ – ರೋಹಿತ್‌ ಶರ್ಮಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಜನಿಯ ‘ಜೈಲರ್’ ಸಿನಿಮಾ ವಿರುದ್ಧ ನಿರ್ದೇಶಕ ಸಕ್ಕಿರ್ ಪ್ರತಿಭಟನೆ

    ರಜನಿಯ ‘ಜೈಲರ್’ ಸಿನಿಮಾ ವಿರುದ್ಧ ನಿರ್ದೇಶಕ ಸಕ್ಕಿರ್ ಪ್ರತಿಭಟನೆ

    ಮೂರು ಭಾಷೆಗಳಲ್ಲಿ ತಯಾರಾಗಿ ಮುಂದಿನ ವಾರದಲ್ಲಿ ಬಿಡುಗಡೆ ಆಗಲಿರುವ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಂಬಿನೇಷನ್ ನ ಜೈಲರ್ ಸಿನಿಮಾದ ವಿರುದ್ಧ ಮಲಯಾಳಂ (Malayalam) ನಿರ್ದೇಶಕರೊಬ್ಬರು ಬೀದಿಗೆ ಇಳಿದು ಪ್ರತಿಭಟನೆ (Protest) ಮಾಡುತ್ತಿದ್ದಾರೆ. ಜೈಲರ್ ಸಿನಿಮಾವನ್ನು ಕೇರಳದಲ್ಲಿ ಬಿಡುಗಡೆ ಮಾಡಿದರೆ, ಆ ಟೈಟಲ್ ಅನ್ನು ಬದಲಾಯಿಸಿ ಎಂದು ಅವರು ಒತ್ತಾಯ ಮಾಡಿದ್ದಾರೆ.

    ಮಲಯಾಳಂನಲ್ಲಿ ಈಗಾಗಲೇ ನಿರ್ದೇಶಕ ಸಕ್ಕಿರ್ ಮಡತ್ತಿಲ್ಲ (Sakkir Madattilla) ‘ಜೈಲರ್’ ಹೆಸರಿನಲ್ಲಿ ಸಿನಿಮಾ ಮಾಡಿದ್ದಾರೆ. ಅದು ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಮಲಯಾಳಂನಲ್ಲಿ ರಜನಿ ಜೈಲರ್ ಸಿನಿಮಾ ಕೂಡ ಬಿಡುಗಡೆ ಆಗುತ್ತಿರುವುದರಿಂದ, ಮಲಯಾಳಂನಲ್ಲಿ ಟೈಟಲ್ ಬದಲಾಯಿಸಿ ರಿಲೀಸ್ ಮಾಡುವಂತೆ ಅವರು ಮನವಿ ಮಾಡಿಕೊಂಡಿದ್ದರು. ಆದರೆ, ಅದು ಆಗುವುದಿಲ್ಲ ಎಂದು ಸನ್ ಪಿಕ್ಚರ್ ನಿರ್ಮಾಣ ಸಂಸ್ಥೆ ಉತ್ತರ ಬರೆದಿತ್ತು. ಇದನ್ನೂ ಓದಿ:ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ನಿರ್ಮಾಪಕ ಅನುರಾಗ್ ಕಶ್ಯಪ್ ಪುತ್ರಿ ಆಲಿಯಾ

    ನಂತರ ಸಕ್ಕಿರ್ ಮಡತ್ತಿಲ್ಲ ತಮಿಳಿನ ಜೈಲರ್ ಸಿನಿಮಾದ ವಿರುದ್ಧ ಕೋರ್ಟ್ ಮೆಟ್ಟಿಲು ಏರಿದ್ದರು. ಜೊತೆ ಜೊತೆಗೆ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ರಿಲೀಸ್ ದಿನವೇ ಮಲಯಾಳಂನಲ್ಲಿ ತಮ್ಮ ಜೈಲರ್ ಚಿತ್ರವನ್ನು ರಿಲೀಸ್ ಮಾಡುವುದಾಗಿ ಘೋಷಿಸಿದ್ದರು. ಆದರೆ, ಇದೀಗ ಮಲಯಾಳಂ ಫಿಲ್ಮ್ ಚೇಂಬರ್ ವಿರುದ್ಧ ಪ್ರತಿಭಟನೆಗೆ ಕೂತಿದ್ದಾರೆ.

     

    ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ನಟನೆಯ ‘ಜೈಲರ್’ (Jailer) ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ತಲೈವ ವೃತ್ತಿ ಬದುಕಿನ ವಿಶೇಷ ಚಿತ್ರ‌ ಇದಾಗಿದ್ದು, ದಕ್ಷಿಣ ಭಾರತ ಹಾಗೂ ಬಾಲಿವುಡ್‌ ದಿಗ್ಗಜರು‌ ಜೈಲರ್ ಸಿನಿಮಾದ ಭಾಗವಾಗಿದ್ದಾರೆ. ಸದ್ಯ ಕಾವಾಲಾಯ್ಯ ಹಾಡಿನ ಮೂಲಕ ಭಾರೀ ಸೆನ್ಸೇಷನ್ ಸೃಷ್ಟಿಸುತ್ತಿರುವ ಈ ಚಿತ್ರ ಆಗಸ್ಟ್ 10ಕ್ಕೆ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರತಿಭಟನಾ ಸಭೆಯ ವೇದಿಕೆ ಹತ್ತಲು ಯತ್ನಿಸಿದ ಸೌಜನ್ಯ ತಾಯಿಯನ್ನು ತಡೆದ ಪೊಲೀಸರು

    ಪ್ರತಿಭಟನಾ ಸಭೆಯ ವೇದಿಕೆ ಹತ್ತಲು ಯತ್ನಿಸಿದ ಸೌಜನ್ಯ ತಾಯಿಯನ್ನು ತಡೆದ ಪೊಲೀಸರು

    ಮಂಗಳೂರು: ಧರ್ಮಸ್ಥಳದ (Dharamsthala) ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ (Sowjanya Case) ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅವಹೇಳನ ಮಾಡಲಾಗುತ್ತಿರುವ ವಿಚಾರದ ಹಿನ್ನೆಲೆ ಪ್ರತಿಭಟನಾ ಸಮಾವೇಶ ಇಂದು ನಡೆಯಿತು. ಈ ಪ್ರತಿಭಟನಾ ಸಭೆಯಲ್ಲಿ ವೇದಿಕೆ ಹತ್ತಲು ಪ್ರಯತ್ನಿಸಿದ ಸೌಜನ್ಯ ತಾಯಿ ಕುಸುಮಾವತಿಯನ್ನು ಪೊಲೀಸರು ತಡೆದಿದ್ದಾರೆ.

    ಉಜಿರೆಯಲ್ಲಿ (Ujire) ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತ ವೃಂದದಿಂದ ಶ್ರೀ ಜನಾರ್ದನ ಸ್ವಾಮಿ ದೇವಾಲಯದ ಮುಂಭಾಗದ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಪ್ರತಿಭಟನಾ ಸಮಾವೇಶಕ್ಕೆ ಭಕ್ತರು ಆಗಮಿಸಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಜೈಕಾರ ಕೂಗಿದ್ದಾರೆ.

    ಈ ವೇಳೆ ಸೌಜನ್ಯ ತಾಯಿ ಕುಸುಮಾವತಿ ಜಸ್ಟೀಸ್ ಫಾಸ್ ಸೌಜನ್ಯ ಎಂದು ಭಿತ್ತಿಪತ್ರವನ್ನು ಹಿಡಿದು ತಮ್ಮ ಮಗಳ ಸಾವಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿ ವೇದಿಕೆ ಹತ್ತಲು ಪ್ರಯತ್ನಿಸಿದ್ದಾರೆ. ಆದರೆ ಈ ವೇಳೆ ಪೊಲೀಸರು ಅವರನ್ನು ತಡೆದಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ ಎಸ್ಸಿ – ಎಸ್ಟಿ ಅನುದಾನ ಬಳಕೆ; ಸಂಸತ್‌ನಲ್ಲಿ ಬಿಜೆಪಿ ದಲಿತ ಸಂಸದರ ಪ್ರತಿಭಟನೆ

    ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕುಸುಮಾವತಿ, ನಾವು ಒಂದು ನ್ಯಾಯ ಕೇಳೋದಕ್ಕಾಗಿ ಬಂದಿದ್ದೆವು. ಮಗಳ ಸಾವಿಗೆ ಸಂಬಂಧಿಸಿದಂತೆ ಹೋರಾಟ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಬಂದಿದ್ದೆವು. ಆದರೆ ನಮ್ಮನ್ನು ಸ್ಟೇಜ್ ಹತ್ತಲು ಬಿಡಲಿಲ್ಲ. ಮಾತ್ರವಲ್ಲದೇ ನನ್ನ ಮಗನ ಕಾಲರ್ ಅನ್ನು ಹಿಡಿದು ಇಳಿಸಿದರು. ಇದು ಧರ್ಮಸ್ಥಳದ ಧರ್ಮನಾ ಎಂದು ಪ್ರಶ್ನಿಸಿದರು.

    ಸೌಜನ್ಯ ಪರವಾಗಿ ಅವರು ಹೋರಾಟ ಮಾಡುತ್ತಿಲ್ಲ. ಇದೆಲ್ಲಾ ನೆಪವಷ್ಟೇ. ನನ್ನ ಮಗಳ ಹೆಸರನ್ನು ಬಳಸಿ ಹೋರಾಟ ಮಾಡುತ್ತಿದ್ದಾರೆ ಹೊರತು ನನ್ನ ಮಗಳ ಪರವಾಗಿ ಅಲ್ಲ. ನಾವು ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರುತನಿಖೆ ಆಗಲೇ ಬೇಕು. ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಆಗಬೇಕು ಎಂದು ಕುಸುಮಾವತಿ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಅಣ್ಣ ಹೇಳಿದ್ದಾರೆ ತಮ್ಮ ಕೇಳುತ್ತಿರಬೇಕು: ಹೆಚ್‌ಡಿಕೆಗೆ ಡಿಕೆಶಿ ಟಾಂಗ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಶ್ವ ಹಿಂದೂ ಪರಿಷತ್‌ ಮೆರವಣಿಗೆ ಮೇಲೆ ಕಲ್ಲು ತೂರಾಟ – ಹರಿಯಾಣದಲ್ಲಿ ಹಿಂಸಾಚಾರ, ಇಬ್ಬರು ಸಾವು

    ವಿಶ್ವ ಹಿಂದೂ ಪರಿಷತ್‌ ಮೆರವಣಿಗೆ ಮೇಲೆ ಕಲ್ಲು ತೂರಾಟ – ಹರಿಯಾಣದಲ್ಲಿ ಹಿಂಸಾಚಾರ, ಇಬ್ಬರು ಸಾವು

    ಚಂಡೀಗಢ: ಹರಿಯಾಣದ (Haryana) ಮೇವತ್‌ ಪ್ರದೇಶದ ನಂದ್‌ಗ್ರಾಮ್‌ನಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್‌ ವತಿಯಿಂದ ಆಯೋಜಿಸಲಾಗಿದ್ದ ಮೆರವಣಿಗೆ (Religious Procession) ಮೇಲೆ ಕಲ್ಲು ತೂರಾಟ ನಡೆದಿದ್ದು, ಗಲಭೆ ತೀವ್ರ ಸ್ವರೂಪ ಪಡೆದು ಹಿಂಸಾಚಾರಕ್ಕೆ ತಿರುಗಿದೆ.

    ಈ ವೇಳೆ ಕಲ್ಲು ಎಸೆದು ಕಾರುಗಳಿಗೆ ಬೆಂಕಿ ಹಚ್ಚಿದ ಗುಂಪೊಂದು ಗುಂಡು ಹಾರಿಸಿ ಇಬ್ಬರು ಹೋಮ್‌ ಗಾರ್ಡ್‌ಗಳನ್ನ ಹತ್ಯೆ ಮಾಡಿದ್ದಾರೆ. ಅಲ್ಲದೇ 7 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಕಿಡಿಗೇಡಿಗಳು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪೊಲೀಸರು (Police) ಅಶ್ರುವಾಯು ಪ್ರಯೋಗಿಸಿದ್ದಾರೆ. ಇದನ್ನೂ ಓದಿ: ಲೇಡಿ ಬೌನ್ಸರ್ ಆಗಿದ್ದ ಮುಸ್ಲಿಂ ಮಹಿಳೆ ಈಗ ಶ್ರೀಕೃಷ್ಣನ ಭಕ್ತಿಯಲ್ಲಿ ಲೀನ!

    ವಿಶ್ವ ಹಿಂದೂ ಪರಿಷತ್‌ (Vishwa Hindu Parishad) ಮತ್ತು ಭಜರಂಗದಳದ ಕಾರ್ಯಕರ್ತರು ಗುರುಗ್ರಾಮದಿಂದ ಶೋಭಾಯಾತ್ರೆಯನ್ನ ಆರಂಭಿಸಿದ್ದರು. ಮೆರವಣಿಗೆ ನಂದ್‌ಗ್ರಾಮ ಸಮೀಪಿಸುತ್ತಿದ್ದಂತೆ ಅನ್ಯಕೋಮಿನ ಕೆಲವರು ಯಾತ್ರೆಯನ್ನ ತಡೆದು ಕಲ್ಲು ತೂರಾಟ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಸಂಘರ್ಷ ಏರ್ಪಟ್ಟಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಭಾರೀ ಹಿಂಸಾಚಾರ ಏರ್ಪಟ್ಟಿರುವುದರಿಂದ ಸುಮಾರು 2,500 ಪುರುಷರು, ಮಹಿಳೆಯರು ಮತ್ತು ಮಕ್ಕಳು ಗುರುಗ್ರಾಮ್ ಬಳಿಯ ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದಾರೆ. ಇದನ್ನೂ ಓದಿ: ಉಡುಪಿ ಕೇಸಲ್ಲಿ ಸಂತ್ರಸ್ತೆ, ಆರೋಪಿಗಳ ವಿಚಾರಣೆ- ಪ್ರಕರಣಕ್ಕೆ ಕೇರಳ ಲಿಂಕ್ ಕೊಟ್ಟು ಬಿಜೆಪಿ ಪ್ರತಿಭಟನೆ

    ಭಿವಾನಿ ಹತ್ಯೆ ಪ್ರಕರಣದ ಆರೋಪಿ ಮೋನು ಮನೇಸರ್‌ ಎಂಬಾತ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿಯೇ ಸಮುದಾಯ ಆಕ್ರೋಶ ವ್ಯಕ್ತಪಡಿಸಿ, ಕಲ್ಲುತೂರಾಟಕ್ಕೆ ಮುಂದಾಗಿದೆ ಎನ್ನಲಾಗಿದೆ. ಮತ್ತೊಂದೆಡೆ ಬಜರಂಗದಳದ ಕಾರ್ಯಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ವೀಡಿಯೋ ಪೋಸ್ಟ್‌ ಮಾಡಿದ್ದಕ್ಕೆ ಸಂಬಂಧಿಸಿದಂತೆ ಗಲಭೆ ನಡೆದಿದೆ ಎಂದೂ ಹೇಳಲಾಗುತ್ತಿದೆ.

    ಇಂಟರ್ನೆಟ್‌ ಬಂದ್‌, 144 ನಿಷೇಧಾಜ್ಞೆ ಜಾರಿ:
    ಗಲಭೆಯ ವಿಡಿಯೊ ಜಾಲತಾಣಗಳಲ್ಲೂ ಹರಿದಾಡುತ್ತಿದ್ದು ಸಂಘರ್ಷ ಮತ್ತಷ್ಟು ವಿಕೋಪಕ್ಕೆ ಹೋಗುವುದನ್ನು ತಡೆಯಲು ಆಗಸ್ಟ್‌ 2ರವರೆಗೆ ಹರ್ಯಾಣದ ನಹ್‌ ಜಿಲ್ಲೆಯಲ್ಲಿ ಅಂಜರ್ತಾಲ ಸೇವೆ ಸ್ಥಗಿತಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸೆಕ್ಷನ್‌ 144 ನಿಷೇಧಾಜ್ಞೆ ಜಾರಿಗೊಳಿಸಿದ್ದು, ಸಾರ್ವಜನಿಕರು ಪೊಲೀಸರು ಘಟನೆ ಹತ್ತಿಕ್ಕಲು ಶತಪ್ರಯತ್ನ ನಡೆಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉಡುಪಿ ಕೇಸಲ್ಲಿ ಸಂತ್ರಸ್ತೆ, ಆರೋಪಿಗಳ ವಿಚಾರಣೆ- ಪ್ರಕರಣಕ್ಕೆ ಕೇರಳ ಲಿಂಕ್ ಕೊಟ್ಟು ಬಿಜೆಪಿ ಪ್ರತಿಭಟನೆ

    ಉಡುಪಿ ಕೇಸಲ್ಲಿ ಸಂತ್ರಸ್ತೆ, ಆರೋಪಿಗಳ ವಿಚಾರಣೆ- ಪ್ರಕರಣಕ್ಕೆ ಕೇರಳ ಲಿಂಕ್ ಕೊಟ್ಟು ಬಿಜೆಪಿ ಪ್ರತಿಭಟನೆ

    ಉಡುಪಿ: ಇಲ್ಲಿನ ಖಾಸಗಿ ಕಾಲೇಜಿನಲ್ಲಿ ವೀಡಿಯೋ ಚಿತ್ರೀಕರಣ ಕೇಸ್ (Udupi College Video) ತನಿಖೆ ಚುರುಕುಗೊಂಡಿದೆ. 6 ತಿಂಗಳ ಡಿವಿಆರ್ ವಶಕ್ಕೆ ಪಡೆದು ಪರಿಶೀಲನೆ ನಡೆಸಲು ಮುಂದಾಗಿರುವ ತನಿಖಾ ತಂಡ (Investigation Team) ಕಾಲೇಜು ಪರಿಸರದಲ್ಲಿ ಆಪರೇಟ್ ಆದ ಅನುಮಾನಾಸ್ಪದ ಮೊಬೈಲ್‌ಗಳ ಬೆನ್ನು ಬಿದ್ದಿದೆ.

    ಎಫ್‌ಐಆರ್ ಆದ ನಾಲ್ಕು ದಿನಗಳ ಬಳಿಕ ಆರೋಪಿ ವಿದ್ಯಾರ್ಥಿನಿಯರ (Udupi Students) ಹೇಳಿಕೆಗಳನ್ನ DYSP ಬೆಳ್ಳಿಯಪ್ಪ ದಾಖಲಿಸಿದ್ದಾರೆ. ಸಂತ್ರಸ್ತೆಯರಿಂದಲೂ ಮಾಹಿತಿ ಪಡೆದಿದ್ದಾರೆ. ಇದೇ ವೇಳೆ, ಕಾಲೇಜಿನ ಸಮಸ್ಯೆಗಳ ಬಗ್ಗೆ ಮಾತನಾಡಿದ್ದ ವಿದ್ಯಾರ್ಥಿನಿಯರನ್ನ ವಿಚಾರಣೆಗೆ ಒಳಪಡಿಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಉಡುಪಿ ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್‌, ಬೆದರಿಕೆ

    FSL (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿ ಬಳಿಕ ತನಿಖೆ ಇನ್ನಷ್ಟು ಚುರುಕು ಪಡೆಯುವ ಸಂಭವ ಇದೆ. ಇನ್ನೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿಗೆ ಅಶ್ಲೀಲ, ಕೆಟ್ಟ ಮತ್ತು ಬೆದರಿಕೆ ಸಂದೇಶ ಕಳಿಸಿದ್ದ ಜಿಗರ್ ಕೋಬ್ರಾ ಹೆಸರಿನ ಇನ್‌ಸ್ಟಾಗ್ರಾಂ ಖಾತೆ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಈ ಖಾತೆ ಯಾರದ್ದು? ಎಲ್ಲಿಂದ ಅಶ್ಲೀಲ ಸಂದೇಶ ಕಳಿಸಲಾಗಿದೆ? ಎಂಬುದನ್ನ ಪತ್ತೆ ಹಚ್ಚುವ ಕೆಲಸ ಮಾಡ್ತಿದ್ದಾರೆ. ಇದನ್ನೂ ಓದಿ: Udupi College Video Row – ತನಿಖೆ ಶುರು ಮಾಡಿದ ಕುಂದಾಪುರ ಡಿವೈಎಸ್ಪಿ

    ಈ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಉಡುಪಿ ಎಸ್‌ಪಿ ಗಮನಕ್ಕೆ ತಂದಿದ್ದಾರೆ. ಈ ಮಧ್ಯೆ, ರಾಜಕೀಯವೂ ಮುಂದುವರಿದಿದೆ. ಮಂಗಳೂರಿನಲ್ಲಿ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿದೆ. ಸಿಎಂ ಉಗ್ರರ ಪರ ಇದ್ದಾರೆ ಅಂತ ಆರೋಪ ಮಾಡಿದ್ದಾರೆ. ಉಡುಪಿ ಪ್ರಕರಣವನ್ನ ಕೇರಳ ಫೈಲ್ಸ್ಗೆ ಹೋಲಿಕೆ ಮಾಡಿದ್ದಾರೆ. ಪ್ರಕರಣಕ್ಕೆ ಕೇರಳ ಲಿಂಕ್ ನೀಡಿದ್ದಾರೆ. ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬುಧವಾರದಿಂದ ರಾಜ್ಯಾದ್ಯಂತ ಡಯಾಲಿಸಿಸ್ ಸೇವೆ ಬಂದ್

    ಬುಧವಾರದಿಂದ ರಾಜ್ಯಾದ್ಯಂತ ಡಯಾಲಿಸಿಸ್ ಸೇವೆ ಬಂದ್

    ಬೆಂಗಳೂರು: ಬುಧವಾರದಿಂದ ರಾಜ್ಯಾದ್ಯಂತ ಡಯಾಲಿಸಿಸ್ (Dialysis) ಸೇವೆ ಬಂದ್ ಮಾಡಲು ರಾಜ್ಯ ಡಯಾಲಿಸಿಸ್ ನೌಕರರ ಸಂಘ ನಿರ್ಧರಿಸಿದೆ. ಇದರಿಂದಾಗಿ ಡಯಾಲಿಸಿಸ್ ರೋಗಿಗಳಿಗೆ ಆಪತ್ತು ಉಂಟಾಗುವ ಆತಂಕ ಶುರುವಾಗಿದೆ.

    ಕಳೆದ ಎರಡು ವರ್ಷಗಳಿಂದ ಸರಿಯಾದ ವೇತನ ನೀಡದಿರುವುದು ಹಾಗೂ ಕೆಲ ಸೌಲಭ್ಯಗಳನ್ನು ನೀಡದ ಹಿನ್ನೆಲೆ, ರಾಜ್ಯಾದ್ಯಂತ ಡಯಾಲಿಸಿಸ್ ವಿಭಾಗಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಬೆಂಗಳೂರಿನ (Bengaluru) ಫ್ರೀಡಂ ಪಾರ್ಕ್‌ನಲ್ಲಿ (Freedom Park) ಅನಿರ್ಧಿಷ್ಟಾವಧಿ ಪ್ರತಿಭಟನೆ (Protest) ಮಾಡಲು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ: ಉಡುಪಿ ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್‌, ಬೆದರಿಕೆ

    ರಾಜ್ಯದ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಒಟ್ಟು 167 ಡಯಾಲಿಸಿಸ್ ಕೇಂದ್ರಗಳಿದ್ದು, 1 ಸಾವಿರಕ್ಕೂ ಅಧಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊರ ಗುತ್ತಿಗೆ ಆಧಾರದ ಮೇಲೆ ಡಯಾಲಿಸಿಸ್ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿಆರ್‌ಎಸ್ ಮತ್ತು ಸಂಜೀವಿನಿ ಸಂಸ್ಥೆಗಳ ಅಡಿಯಲ್ಲಿ ಕೆಲಸ ಮಾಡುತ್ತಿರುವ ಡಯಾಲಿಸಿಸ್ ನೌಕರರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆದಿದ್ದರು. ಇದನ್ನೂ ಓದಿ: ಆಗಸ್ಟ್ 1ರಿಂದ ಎಕ್ಸ್‌ಪ್ರೆಸ್ ಹೈವೇಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳ ನಿಷೇಧ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]