Tag: ಪ್ರತಿಭಟನೆ

  • ರೈತ ಸಂಘದ ಮಧ್ಯೆ ಮಹಾ ಬಿರುಕು- ಕೋಡಿಹಳ್ಳಿ ಬೆಂಗ್ಳೂರಲ್ಲಿ ಕೂತು ರಾಜಕೀಯ ಮಾಡ್ತಿದ್ದಾರೆ ಅಂದ್ರು ರೈತರು!

    ರೈತ ಸಂಘದ ಮಧ್ಯೆ ಮಹಾ ಬಿರುಕು- ಕೋಡಿಹಳ್ಳಿ ಬೆಂಗ್ಳೂರಲ್ಲಿ ಕೂತು ರಾಜಕೀಯ ಮಾಡ್ತಿದ್ದಾರೆ ಅಂದ್ರು ರೈತರು!

    ಬೆಂಗಳೂರು: ರೈತ ಸಂಘದ ಮಧ್ಯೆ ಮಹಾ ಬಿರುಕು ಉಂಟಾಗಿದ್ದು, ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕಳಸಾ ಬಂಡೂರಿ ರೈತರು ವಾಗ್ದಾಳಿ ನಡೆಸಿದ್ದಾರೆ.

    ಹುಬ್ಬಳ್ಳಿಯಿಂದ ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಗೆ ಬಂದಿಳಿದ ಮಹದಾಯಿ, ಕಳಸಬಂಡೂರಿ ರೈತರು ಸಂಪೂರ್ಣ ಸಾಲಮನ್ನಾ ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಬೆಂಗಳೂರು ಚಲೋ ನಡೆಸಿದ್ದಾರೆ.

    ಈ ವೇಳೆ ಕೋಡಿಹಳ್ಳಿ ರೈತ ಮುಖಂಡರೇ ಅಲ್ಲ, ಕೋಡಿಹಳ್ಳಿ ಬೆಂಗಳೂರಿನಲ್ಲಿ ಕೂತು ರಾಜಕೀಯ ಮಾಡ್ತಾರೆ. ಕೋಡಿಹಳ್ಳಿ ಒಂದು ಸಂಘಟನೆ ಮಾಡಲಿ, ಅದು ಬಿಟ್ಟು ರಾಜಕೀಯ ಬಿಟ್ಟು ಬಿಡಲಿ. ಮೊನ್ನೆ ನಡೆದ ಹೋರಾಟಕ್ಕೂ ಕರೆದಿಲ್ಲ. ರಾಷ್ಟ್ರಪತಿಗಳ ಭೇಟಿ ಸಂದರ್ಭದಲ್ಲಿ ಈ ಹಿಂದೆ ರೈತರಿಂದ ದುಡ್ಡು ಕಲೆಕ್ಟ್ ಮಾಡಿದ್ರು. ಅವರ್ಯಾಕೆ ದುಡ್ಡು ವಸೂಲಿ ಮಾಡಬೇಕು? ಕೋಡಿಹಳ್ಳಿ ರಾಜಕೀಯ ಮಾಡುತ್ತಿದ್ದಾರೆ. ಇಂತಹ ಹೋರಾಟಗಾರರ ಅವಶ್ಯಕತೆ ನಮಗಿಲ್ಲ ಅಂತ ಕೋಡಿಹಳ್ಳಿ ವಿರುದ್ಧ ರೈತರು ಕಿಡಿಕಾರಿದ್ದಾರೆ.

    ಚಳಿಗಾಲ ಅಧಿವೇಶನ ಸಮಯದಲ್ಲೂ ಪ್ರತಿ ರೈತರಿಂದ ಆರುನೂರು ರೂ. ತೆಗೆದುಕೊಂಡು ಒಂದು ದಿನ ಚಳಿಗಾಲ ಅಧಿವೇಶನ ನಡೆದಾಗ ಪ್ರತಿಭಟನೆ ಮಾಡಿ ಆರೆಸ್ಟ್ ಆಗಿ ನಾಟಕ ಮಾಡ್ತಾರೆ. ಇನ್ನು 21 ರಂದು ಹಾವೇರಿಯಲ್ಲಿ ನಡೆಯುವ ಸಮಾವೇಶ ಘೇರಾವ್ ಹಾಕುವ ಎಚ್ಚರಿಕೆಯನ್ನು ರೈತ ಸಂಘ ನೀಡಿದೆ. ಒಟ್ಟಿನಲ್ಲಿ ಸಾಲಮನ್ನಾದ ಹೋರಾಟದ ಮಧ್ಯೆಯೇ ರೈತರ ಮಧ್ಯೆ ಬಿರುಕು ಮೂಡಿದ್ದು, ಕೋಡಿಹಳ್ಳಿ ವಿರುದ್ಧ ಆಕ್ರೋಶ ಸ್ಫೋಟಗೊಂಡಿರುವುದು ಅಚ್ಚರಿ ಮೂಡಿಸಿದೆ.

    ಮೂರು ಪಕ್ಷದ ನಾಯಕರನ್ನ ಭೇಟೆ ಮಾಡ್ತೆವೆ ನಮಗೆ ನ್ಯಾಯ ದೊರಕಿಸಿ ಕೊಡಲಿ. ಸಿಎಂ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯರನ್ನ ಭೇಟಿ ಮಾಡ್ತೆವೆ. ಕುಮಾರಸ್ವಾಮಿ ಸಂಪೂರ್ಣ ಸಾಲಮನ್ನಾ ಮಾಡ್ತೀವಿ ಅಂತಾ ಹೇಳಿದ್ರು ಅದರಂತೆ ಮಾಡಲಿ. ಸಾಲಮನ್ನಾ, ಮಹಾದಾಯಿ ಯೋಜನೆ ಜಾರಿ ಮಾಡೋವರೆಗೂ ನಮ್ಮ ಹೋರಾಟ ನಿಲ್ಲಲ್ಲ. ಕೇಂದ್ರಸರ್ಕಾರದ ಫಸಲ ಭೀಮ ಯೋಜನೆಯಿಂದ ಸರಿಯಾಗಿ ದುಡ್ಡು ಬರ್ತಿಲ್ಲ. ಹಣ ಬಂದಿದ್ದರು ಅಧಿಕಾರಿಗಳು ಹಣ ನುಂಗುತ್ತಿದ್ದಾರೆ. ನಮ್ಮ ರೈತರು ಸಾಕಷ್ಟು ಜನ ಬರುತ್ತಿದ್ದಾರೆ ನಮ್ಮ ಬೇಡಿಕೆ ಈಡೇರುವರೆಗೂ ಹೊರಾಟ ಮಾಡ್ತಿವಿ ಅಂತ ರೈತರು ಧಿಕ್ಕಾರ ಕೂಗುತ್ತಿದ್ದಾರೆ.

  • ರಾಜಧಾನಿಯಲ್ಲಿ ಕಳಸಾ ಬಂಡೂರಿ ಮಹದಾಯಿ ಕಿಚ್ಚು- ಹುಬ್ಬಳ್ಳಿಯಿಂದ ಬೆಂಗ್ಳೂರಿಗೆ ಆಗಮಿಸಿದ ಅನ್ನದಾತರು

    ರಾಜಧಾನಿಯಲ್ಲಿ ಕಳಸಾ ಬಂಡೂರಿ ಮಹದಾಯಿ ಕಿಚ್ಚು- ಹುಬ್ಬಳ್ಳಿಯಿಂದ ಬೆಂಗ್ಳೂರಿಗೆ ಆಗಮಿಸಿದ ಅನ್ನದಾತರು

    ಬೆಂಗಳೂರು: ಸಂಪೂರ್ಣ ಸಾಲ ಮನ್ನಾ ಹಾಗೂ ಮಹದಾಯಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಹುಬ್ಬಳ್ಳಿಯಿಂದ ನೂರಾರು ರೈತರು ಬೆಂಗಳೂರಿಗೆ ಆಗಮಿಸಿದ್ದಾರೆ.

    ಈಗಾಗಲೇ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣ ತಲುಪಿರುವ ರೈತರು ಫ್ರೀಡಂ ಪಾರ್ಕ್ ವರೆಗೂ ಪ್ರತಿಭಟನಾ ರ್ಯಾಲಿಯನ್ನು ನಡೆಸಲಿದ್ದಾರೆ. ಫ್ರೀಡಂ ಪಾರ್ಕ್ ತಲುಪಿದ ಬಳಿಕ ಮಹದಾಯಿ, ಕಳಸಾ ಬಂಡೂರಿ ಸಮನ್ವಯ ಸಮಿತಿ ನೇತೃತ್ವದಲ್ಲಿ ಬೆಂಗಳೂರು ಚಲೋ ಹಮ್ಮಿಕೊಂಡು ವಿಧಾನಸೌಧ ತಲುಪಲಿದ್ದಾರೆ.

    ವಿಧಾನಸೌಧದಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲಿದ್ದಾರೆ. ಮೊದಲಿಗೆ ಫ್ರೀಡಂ ಪಾರ್ಕ್ ನಲ್ಲಿಯೇ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಅನ್ನದಾತರ ಮನವಿಯನ್ನು ಸ್ವೀಕರಿಸಲಿದ್ದಾರೆ.

    ನವಲಗುಂದ, ನರಗುಂದ, ರೋಣ, ಗದಗ, ಸವದತ್ತಿ, ಹಾವೇರಿ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಮುಂಡರಗಿ, ಬದಾಮಿ ಮತ್ತು ಗಜೇಂದ್ರಘಢ ತಾಲೂಕುಗಳಿಂದ ಹೋರಾಟಗಾರರು ಬೆಂಗಳೂರು ಮಹಾನಗರಕ್ಕೆ ಆಗಮಿಸಿದ್ದಾರೆ.

  • 158 ಕಾರ್ಮಿಕರನ್ನು ತೆಗೆದು ಹೊರರಾಜ್ಯದವರಿಗೆ ದೊಡ್ಲ ಡೈರಿಯಲ್ಲಿ ಉದ್ಯೋಗ!

    158 ಕಾರ್ಮಿಕರನ್ನು ತೆಗೆದು ಹೊರರಾಜ್ಯದವರಿಗೆ ದೊಡ್ಲ ಡೈರಿಯಲ್ಲಿ ಉದ್ಯೋಗ!

    ಕೊಪ್ಪಳ: ಕನ್ನಡಿಗರ ಮೇಲೆ ದೌರ್ಜನ್ಯ ಮತ್ತು ರಜೆ ಸೇರಿ ತಮ್ಮ ಹಕ್ಕು ಕೇಳಿದ ಕಾರ್ಮಿಕರನ್ನು ರಾತ್ರೋರಾತ್ರಿ ಕೆಲಸದಿಂದ ತೆಗೆದು ಹಾಕಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಗಂಗಾವತಿ ತಾಲೂಕಿನ ಇಂದರಗಿ ಗ್ರಾಮದ ಸಮೀಪದ ದೊಡ್ಲ ಡೈರಿಯಲ್ಲಿ ಕೆಲಸ ಮಾಡ್ತಿದ್ದ 158 ಸ್ಥಳೀಯ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಕುಂಟು ನೆಪ ಮುಂದಿಟ್ಟುಕೊಂಡು ಸ್ಥಳೀಯರನ್ನು ಕೆಲಸದಿಂದ ತೆಗೆದು ಹೊರ ರಾಜ್ಯದವರಿಗೆ ಉದ್ಯೋಗ ನೀಡಲಾಗಿದೆ.

    ದೊಡ್ಲ ಹಾಲಿನ ಡೈರಿ ಅಧಿಕಾರಿಗಳು ಕಾರ್ಮಿಕರನ್ನು ರಾತ್ರೋರಾತ್ರಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಬಿಹಾರ ಮೂಲದ ಗುತ್ತಿಗೆದಾರ ಸ್ಥಳೀಯ ಕಾರ್ಮಿಕರ ಮೇಲೆ ವಿನಾಕಾರಣ ದೌರ್ಜನ್ಯ ನಡೆಸುತ್ತಿದ್ದನು. ತಮಗೆ ಆಗುವ ಕಿರುಕುಳ ಪ್ರಶ್ನಿಸಿ ಕೆಲಸ ಕಳೆದುಕೊಂಡ ಕಾರ್ಮಿಕರು ಇದೀಗ ದೊಡ್ಲ ಡೈರಿ ಮುಂದೆ ಕಳೆದ ಆರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

    ಆದರೆ ದೊಡ್ಲ ಡೈರಿ ಹೊರ ರಾಜ್ಯದ ಸಿಬ್ಬಂದಿಯನ್ನು ಕರೆದುಕೊಂಡು ಬಂದು ಕೆಲಸ ಮಾಡುತ್ತಿದ್ದಾರೆ.

  • ಇಂದು ಮಾವಿನ ತವರು ಶ್ರೀನಿವಾಸಪುರ ತಾಲೂಕು ಬಂದ್!

    ಇಂದು ಮಾವಿನ ತವರು ಶ್ರೀನಿವಾಸಪುರ ತಾಲೂಕು ಬಂದ್!

    – ಲೋಡುಗಟ್ಟಲೆ ಮಾವು ರಸ್ತೆಗೆ ಸುರಿದು ಪ್ರತಿಭಟನೆ

    ಕೋಲಾರ: ಮಾವು ಬೆಲೆ ತೀವ್ರ ಕುಸಿತ ಹಿನ್ನೆಲೆ ಸರ್ಕಾರ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ಇಂದು ಬಂದ್ ಗೆ ಕರೆ ನೀಡಲಾಗಿದೆ.

    ಜಿಲ್ಲಾ ಮಾವು ಬೆಳೆಗಾರರ ಸಂಘದಿಂದ ಬಂದ್ ಗೆ ಕರೆ ನೀಡಲಾಗಿದೆ. ಒಂದು ಟನ್ ಮಾವಿಗೆ ಮಾರುಕಟ್ಟೆಯಲ್ಲಿ 3000-4000 ರೂಪಾಯಿಗೆ ಕುಸಿತವಾಗಿದೆ. ಒಂದು ಟನ್ ಮಾವಿಗೆ ಕನಿಷ್ಠ 5 ಸಾವಿರ ಬೆಂಬಲ ಬೆಲೆ ನೀಡಿ ಮಾವು ಬೆಳೆಗಾರರ ನೆರವಿಗೆ ಸರ್ಕಾರ ಬರಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.

    ಜಿಲ್ಲೆಯ ಸಾವಿರಾರು ಮಾವು ಬೆಳೆಗಾರರು ಬಂದ್ ನಲ್ಲಿ ಭಾಗಿಯಾಗಿದ್ದು, ಬಂದ್ ಹಿನ್ನೆಲೆ ಶ್ರೀನಿವಾಸಪುರ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್, ಬಸ್ ಸಂಚಾರ ಸ್ಥಗಿತವಾಗಿದೆ.

    ಶ್ರೀನಿವಾಸಪುರ ಹಳೇ ಬಸ್ ನಿಲ್ದಾಣದಲ್ಲಿ ಮಾವು ಬೆಳೆಗಾರರ ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆಗೆ ಲೋಡುಗಟ್ಟಲೆ ಮಾವು ಸುರಿದು ಪ್ರತಿಭಟನೆ ಕೈಗೊಂಡಿದ್ದಾರೆ. ಮಾವು ಬೆಳೆಗಾರರಿಗೆ ರೈತ ಸಂಘದ ಮುಖಂಡರು ಬೆಂಬಲ ಸೂಚಿಸಿದ್ದಾರೆ. ಮಾವಿಗೆ ಬೆಂಬಲ ಬೆಲೆ ಘೋಷಿಸಿ ಇಲ್ಲವೇ ಫಲ್ಪ್ ಪ್ಯಾಕ್ಟರಿ ತೆರೆಯುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

  • ಮದ್ವೆಯಾಗೋದಾಗಿ ನಂಬಿಸಿ ಮಗು ಕೊಟ್ಟು ಪರಾರಿ – ನ್ಯಾಯಕ್ಕಾಗಿ ಯುವತಿ ಪ್ರತಿಭಟನೆ

    ಮದ್ವೆಯಾಗೋದಾಗಿ ನಂಬಿಸಿ ಮಗು ಕೊಟ್ಟು ಪರಾರಿ – ನ್ಯಾಯಕ್ಕಾಗಿ ಯುವತಿ ಪ್ರತಿಭಟನೆ

    ಮೈಸೂರು: ಮದುವೆಯಾಗುವುದಾಗಿ ನಂಬಿಸಿ ಪ್ರಿಯತಮೆಗೆ ಮಗು ಕರುಣಿಸಿ ಪ್ರಿಯತಮ ಪರಾರಿಯಾದ ಘಟನೆ ನಂಜನಗೂಡು ತಾಲೂಕಿನ ಅಳಗಂಚಿಪುರ ಗ್ರಾಮದಲ್ಲಿ ನಡೆದಿದೆ.

    ಅಳಗಂಚಿಪುರ ಗ್ರಾಮದ ಯುವತಿ ವಂಚನೆಗೆ ಒಳಗಾದ ಪ್ರಿಯತಮೆ. ಅದೇ ಗ್ರಾಮದ ಸಂಜಯ್ (20)ವಂಚಿಸಿ ಪರಾರಿಯಾದ ಪ್ರಿಯತಮ. ಈಗ ಯುವತಿ ನ್ಯಾಯಕ್ಕಾಗಿ ಮಗು ಸಮೇತ ಪ್ರಿಯತಮನ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಳೆ.

    ನಂಜನಗೂಡಿನ ಡಿಪ್ಲೋಮಾ ಕಾಲೇಜಿನಲ್ಲಿ ಯುವತಿ ಓದುತ್ತಿದ್ದಳು. ಆಗ ಪದವಿ ಕಾಲೇಜಿನ ವಿದ್ಯಾರ್ಥಿ ಸಂಜಯ್ ಪ್ರೀತಿಸುವ ನಾಟಕವಾಡಿ ಕಳೆದ ಒಂದು ವರ್ಷದಿಂದ ಸುತ್ತಾಡಿಸಿದ್ದನು. ಬಳಿಕ ಮದುವೆಯಾಗುವ ಭರವಸೆ ಕೊಟ್ಟು ದೈಹಿಕ ಸಂಪರ್ಕ ಬೆಳೆಸಿ ಮಗುವಿಗೆ ಕಾರಣನಾಗಿದ್ದಾನೆ. ಈಗ ಯುವತಿಗೆ ಮಗು ಹುಟ್ಟುತ್ತಿದ್ದಂತೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ.

    ಯುವತಿ ಜೊತೆ ಮನೆಯವರನ್ನೂ ನಂಬಿಸಿದ ಸಂಜಯ್ ಈಗ ಮಗುವನ್ನ ಕರುಣಿಸಿ ಎಸ್ಕೇಪ್ ಆಗಿದ್ದಾನೆ. ವಂಚನೆಗೆ ಒಳಗಾದ ಯುವತಿ ನ್ಯಾಯಕ್ಕಾಗಿ ಸಂಜಯ್ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಳೆ.

  • ಕಾಣೆಯಾದ ಟೆಕ್ಕಿಯನ್ನು ಹುಡುಕಲು ರೋಡಿಗಿಳಿದ ಬೆಂಗ್ಳೂರು ಟೆಕ್ಕಿಗಳು!

    ಕಾಣೆಯಾದ ಟೆಕ್ಕಿಯನ್ನು ಹುಡುಕಲು ರೋಡಿಗಿಳಿದ ಬೆಂಗ್ಳೂರು ಟೆಕ್ಕಿಗಳು!

    ಬೆಂಗಳೂರು: ಟೆಕ್ಕಿ ಅಜಿತಾಬ್ ಪ್ರಕರಣವನ್ನು ಪೊಲೀಸರು ಭೇದಿಸದೇ ಇರೋದನ್ನ ಖಂಡಿಸಿ ಬೆಂಗಳೂರಿನ ಟೌನ್‍ಹಾಲ್ ಮುಂದೆ ಟೆಕ್ಕಿಗಳು ಪ್ರತಿಭಟನೆ ನಡೆಸಿದರು.

    ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾದ ಬೆಂಗಳೂರು ಪೊಲೀಸರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದರು.

    ಏನಿದು ಪ್ರಕರಣ?
    ಬೆಳ್ಳಂದೂರಿನ ಬ್ರಿಟೀಷ್ ಟೆಲಿಕಾಂ ನಲ್ಲಿ ಐದು ವರ್ಷದಿಂದ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಅಜಿತಾಬ್ ತನ್ನ ಸಿಯಾಜ್ ಕಾರನ್ನು ಮಾರಾಟ ಸಂಬಂಧ ಓಎಲ್‍ಎಕ್ಸ್ ನಲ್ಲಿ ಮಾಹಿತಿ ಹಾಕಿದ್ದರು. ಒಎಲ್ ಎಕ್ಸ್ ನಲ್ಲಿ ಪ್ರಕಟಿಸಿದ ಬಳಿಕ ಕುಮಾರ್ ಅಜಿತಾಬ್ ಕರೆ ಬಂದಾಗಲೆಲ್ಲ ಕಾರು ಸಮೇತ ಹೊರ ಹೋಗಿ ಬರುತ್ತಿದ್ದರು. ಹೀಗೆ ಕಳೆದ ವರ್ಷ ಡಿಸೆಂಬರ್ 18ರಂದು ಅವರ ಮೊಬೈಲ್ ಗೆ ಕರೆ ಬಂದಿತ್ತು. ಎಂದಿನಂತೆಯೇ ಅಜಿತಾಬ್, ಕೆಎ 03 ಎನ್‍ಎ 1751 ನಂಬರಿನ ತನ್ನ ಸಿಯಾಜ್ ಕಾರಿನಲ್ಲಿ ಹೊರ ಹೋಗಿದ್ದರು. ಹೊರ ಹೋದವರು ಇದೂವರೆಗೂ ಎಲ್ಲಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.

    ವೈಟ್ ಫಿಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಜಿತಾಬ್ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿತ್ತು. ನಂತರ ಪೋಷಕರ ಒತ್ತಡ ಹೆಚ್ಚಾಗುತ್ತಿದ್ದಂತೆ ಈ ಕೇಸನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಈಗ ನಾಪತ್ತೆಯಾಗಿ 200 ದಿನ ಕಳೆದರೂ ಅಜಿತಾಬ್ ಸುಳಿವು ಸಿಕ್ಕಿಲ್ಲ.

    ಒಎಲ್ ಎಕ್ಸ್ ಜಾಹೀರಾತು ನೋಡಿ ಅಜಿತಾಬ್ ಅವರನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ಕುಟುಂಬದವರು ಸಂಶಯ ವ್ಯಕ್ತಪಡಿಸಿದ್ದರು. ಆಗ ಪೊಲೀಸರು ಈ ಪ್ರಕರಣವನ್ನು ಸವಲಾಗಿ ತೆಗೆದುಕೊಂಡು ಡ್ರೋಣ್ ಕ್ಯಾಮೆರಾ ಬಳಸಿ ಕಾರ್ಯಾಚರಣೆ ನಡೆಸಿದ್ದರು. ಕೊನೆಯ ಬಾರಿ ಅಜಿತಾಬ್ ಮೊಬೈಲ್ ಸಿಗ್ನಲ್ ಆಫ್ ಆದ ಸ್ಥಳವಾದ ವರ್ತೂರು ಸಮೀಪದ ಗುಂಜೂರು ಸಮೀಪ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದರು. 8 ತಂಡಗಳನ್ನು ರಚಿಸಿಕೊಂಡಿದ್ದು ಒಂದು ತಂಡ ಗುಂಜೂರು ಸುತ್ತಮುತ್ತಲಿನ ಪ್ರದೇಶಗಳು, ವರ್ತೂರು ಕೆರೆ, ಕೈಕೊಂಡ್ರಹಳ್ಳಿ ಕೆರೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಡ್ರೋಣ್ ಕ್ಯಾಮೆರಾ ಬಳಸಿ ಹುಡುಕಾಟ ನಡೆಸಿದ್ದರು. ಇನ್ನು 7 ತಂಡಗಳು ಬೇರೆ ರೀತಿಯಲ್ಲಿ ಹುಡುಕಾಟ ನಡೆಸಿದ್ದರು.

  • ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರ ದರ್ಪ – ಬಸ್ ಕೆಳಗೆ ತೂರಿದ ವಿದ್ಯಾರ್ಥಿ

    ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರ ದರ್ಪ – ಬಸ್ ಕೆಳಗೆ ತೂರಿದ ವಿದ್ಯಾರ್ಥಿ

    ತುಮಕೂರು: ಉಚಿತ ಬಸ್ ಪಾಸ್ ಗಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ ದರ್ಪ ಮೆರೆದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ತುಮಕೂರು ಶಿವಕುಮಾರ ಸ್ವಾಮೀಜಿ ಸರ್ಕಲ್‍ನಲ್ಲಿ ಈ ಘಟನೆ ನಡೆದಿದ್ದು, ಸರ್ಕಲ್‍ನಲ್ಲಿ ಉಚಿತ ಬಸ್ ಪಾಸ್ ಗಾಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಏಕಾಏಕಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ.

    ಎಬಿವಿಪಿ ಸಂಘಟನೆಯೊಂದಿಗೆ ವಿದ್ಯಾರ್ಥಿಗಳು ತೆರಳಿದ್ದು, ಈ ವೇಳೆ ಪೊಲೀಸರು ಹಾಗೂ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪೊಲೀಸರ ನಡೆಯನ್ನು ಖಂಡಿಸಿ ವಿದ್ಯಾರ್ಥಿಗಳು ರಸ್ತೆಗಳಿದರು, ಅಲ್ಲದೇ ದಿಢೀರ್ ಎಂದು ರಸ್ತೆ ತಡೆಗೆ ಮುಂದಾಗಿದ್ದರು. ಇದನ್ನು ತಡೆಯಲು ಯತ್ನಿಸಿದ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ.

    ಪೊಲೀಸರ ಲಾಠಿ ಚಾರ್ಜ್ ಗೆ ಬೆದರಿದ ವಿದ್ಯಾರ್ಥಿಗಳು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಕೆಲವರಂತೂ ಬಸ್ ನಡಿ ತೂರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ಘಟನೆ ಹೊಸಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಬಜೆಟ್‍ನಲ್ಲಿ ಕರಾವಳಿಗಿಲ್ಲ ಬಿಡಿಗಾಸು – ದೋಸ್ತಿ ಸರ್ಕಾರದ ವಿರುದ್ಧ 3 ಜಿಲ್ಲೆಯ ಶಾಸಕರು ಗರಂ

    ಬಜೆಟ್‍ನಲ್ಲಿ ಕರಾವಳಿಗಿಲ್ಲ ಬಿಡಿಗಾಸು – ದೋಸ್ತಿ ಸರ್ಕಾರದ ವಿರುದ್ಧ 3 ಜಿಲ್ಲೆಯ ಶಾಸಕರು ಗರಂ

    ಬೆಂಗಳೂರು: ಸಮ್ಮಿಶ್ರ ಸರ್ಕಾರದ ರಾಜ್ಯ ಬಜೆಟ್ ಗುರುವಾರ ಮಂಡನೆಯಾಗಿದ್ದು, ಎಚ್‍ಡಿಕೆ ಬಜೆಟ್‍ನಲ್ಲಿ ಪ್ರಾದೇಶಿಕ ಅಸಮತೋಲನ ಹಾಗೂ ಕರಾವಳಿಗೆ ಬಿಡಿಗಾಸು ನೀಡದಿದ್ದರಿಂದ ಕರಾವಳಿ ಭಾಗದ ಬಿಜೆಪಿ ಶಾಸಕರು ಸಿಡಿದೆದ್ದಿದ್ದಾರೆ.

    ವಿಧಾನಸೌಧದ ಮುಂಭಾಗ ಗಾಂಧಿ ಪ್ರತಿಮೆ ಬಳಿ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಬಿಜೆಪಿ ಶಾಸಕರು ಕಪ್ಪುಪಟ್ಟಿ ಧರಿಸಿ ದೋಸ್ತಿ ಸರ್ಕಾರದ ಬಜೆಟ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ.

    ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದ್ದು, ತಾಯಿ ಸ್ಥಾನದಲ್ಲಿ ಇರುವಂತೆ ಸರ್ಕಾರ ಇದೆ ಅಂತ ಸಿಎಂ ಕುಮಾರಸ್ವಾಮಿ ಹೇಳಿದ್ರು. ಆದ್ರೆ ಕರಾವಳಿ ಕರ್ನಾಟಕವನ್ನ ನಿರ್ಲಕ್ಷ್ಯ ಮಾಡಿದ್ರು. ಮೀನುಗಾರರ ರಕ್ಷಣೆಗೆ ಸರ್ಕಾರ ಅನುದಾನ ನೀಡಿಲ್ಲ. ವರಹಾ ಯೋಜನೆಗೆ ಹಣ ನೀಡಿಲ್ಲ. ಪಶ್ಚಿಮ ವಾಹಿನಿ ಯೋಜನೆಗೆ ಅನುದಾನ ನೀಡಿಲ್ಲ. ವಿದ್ಯುತ್, ಪೆಟ್ರೋಲ್ ದರ ಏರಿಸಿದ್ರು. ಸಿಎಂ ಕುಮಾರಸ್ವಾಮಿ ಕೇವಲ 37 ಶಾಸಕರಿಗೆ ಮಾತ್ರ ಬಜೆಟ್ ನೀಡಿದ್ದಾರೆ ಅಂತ ಕೋಟಾ ಗರಂ ಆದ್ರು.

    ಬಜೆಟ್ ಉತ್ತರ ವೇಳೆ ಕರಾವಳಿ ಕರ್ನಾಟಕ ಭಾಗಕ್ಕೆ ಅನುದಾನ ನೀಡಲೇಬೇಕು. ಇಲ್ಲದಿದ್ದಲ್ಲಿ ಸದನದ ಒಳಗೆ- ಹೊರಗೆ ಹಾಗೂ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡುತ್ತೇವೆ ಅಂತ ಅವರು ತಮ್ಮ ಆಕ್ರೋಶ ಹೊರಹಾಕಿ ಎಚ್ಚರಿಸಿದ್ದಾರೆ.

    ಇದೇ ವೇಳೆ ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಸಿಎಂ ನಿನ್ನೆ ನೀಡಿದ ಬಜೆಟ್ ಕೇವಲ ರಾಮನಗರ, ಹಾಸನದ ಜಿಲ್ಲಾ ಪಂಚಾಯ್ತಿ ಬಜೆಟ್. ಉಡುಪಿ, ದಕ್ಷಿಣ ಕನ್ನಡದ ಜನತೆಯ ಹಿತವನ್ನು ಸರ್ಕಾರ ಕಾಯಲಿಲ್ಲ. ನಮ್ಮ ಜಿಲ್ಲೆಗಳಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಮೆಡಿಕಲ್ ಕಾಲೇಜ್ ನೀಡುವಂತೆ ಮನವಿ ಮಾಡಿದ್ವಿ. ಆದ್ರೆ ಕರಾವಳಿ ಜನರಿಗೆ ಅನ್ಯಾಯ ಮಾಡಿದ್ದಾರೆ. ಮತ ನೀಡಿಲ್ಲ ಅಂತ ಬಜೆಟ್ ನಲ್ಲಿ ಸೇಡು ತೀರಿಸಿಕೊಂಡಿದ್ದಾರೆ. ಅನ್ಯಾಯದ ವಿರುದ್ಧ ನಮ್ಮ ಹೋರಾಟ ಬಿಡೋದಿಲ್ಲ. ಈ ಬಜೆಟ್ ನಾವು ಒಪ್ಪಲು ರೆಡಿ ಇಲ್ಲ ಅಂತ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.

    ನಮ್ಮ ದೇವಸ್ಥಾನ ಕೇವಲ ಅಡ್ಡ ಬೀಳಲು ಇರೋದಲ್ಲ. ನಿಮಗೆ ನಮಸ್ಯೆ ಆದಾಗ ದೇವರ ದರ್ಶನಕ್ಕೆ ನಮ್ಮ ಜಿಲ್ಲೆಗೆ ಬರ್ತಿರಾ. ಆದ್ರೆ ಅಭಿವೃದ್ಧಿಗೆ ಅನುದಾನ ನೀಡಲು ಯಾಕೆ ಹಿಂದೇಟು ಹಾಕಿದ್ದೀರಾ. ಸರ್ಕಾರ ಬಜೆಟ್ ಉತ್ತರದಲ್ಲಿ ಕರಾವಳಿ ಭಾಗಕ್ಕೆ ಒತ್ತು ನೀಡಬೇಕು. ನಮ್ಮ ಬೇಡಿಕೆ ಈಡೇರಿಸದೇ ಇದ್ರೆ ಕರಾವಳಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡ್ತೀವಿ ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

  • ಎಚ್‍ಡಿಕೆ ವಿರುದ್ಧ ಎತ್ತಿನಗಾಡಿ ಪ್ರತಿಭಟನೆ ಯಾವಾಗ: ರಾಹುಲ್ ಗಾಂಧಿಗೆ ಪ್ರಶ್ನೆ

    ಎಚ್‍ಡಿಕೆ ವಿರುದ್ಧ ಎತ್ತಿನಗಾಡಿ ಪ್ರತಿಭಟನೆ ಯಾವಾಗ: ರಾಹುಲ್ ಗಾಂಧಿಗೆ ಪ್ರಶ್ನೆ

    ಬೆಂಗಳೂರು: ಟ್ವಿಟ್ಟರ್ ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕನ್ನಡಿಗರು ಲೆಫ್ಟು ರೈಟು ತೆಗೆದುಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿಯವರು ಪೆಟ್ರೋಲ್, ಡೀಸೆಲ್ ಮೇಲೆ ಸೆಸ್ ಮೇಲೆ ಹಾಕಿದ್ದನ್ನು ವಿರೋಧಿಸಿ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರುತ್ತಿದ್ದಾರೆ.

    ಪೆಟ್ರೋಲ್, ಡೀಸೆಲ್ ದರ ಏರಿಕೆಯಾದಾಗ ಮೋದಿ ಸರ್ಕಾರದ ವಿರುದ್ಧ ಸೈಕಲ್ ತುಳಿದು ಪ್ರತಿಭಟನೆ ಮಾಡುವ ನೀವು ಈಗ ಕರ್ನಾಟಕಕ್ಕೆ ಬಂದು ಪ್ರತಿಭಟಿಸಿ ಎಂದು ಬರೆದು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ನಿಮ್ಮದೆ ಸಮ್ಮಿಶ್ರ ಸರ್ಕಾರದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದ್ದು ಸರಿಯೇ ಎಂದು ಪ್ರಶ್ನಿಸಿ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕರ ವಿರುದ್ಧ ವಿರುದ್ಧ ಸರಣಿ ಟ್ವೀಟ್ ಮಾಡಿ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

    https://twitter.com/RKDubey7878/status/1014802700792287232

    ಪೆಟ್ರೋಲ್ ಮೇಲಿದ್ದ ಸೆಸ್ ಶೇ.30 ರಿಂದ ಶೇ.32 ಮತ್ತು ಡೀಸೆಲ್ ಸೆಸ್ ಪ್ರಸ್ತುತ ಶೇ.19ರಿಂದ 21ಕ್ಕೆ ಏರಿಗೆ ಮಾಡಲಾಗಿದೆ. ಸೆಸ್ ಏರಿಕೆಯಾದ ಪರಿಣಾಮ ಒಟ್ಟಾರೆಯಾಗಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 1.14 ರೂ. ಮತ್ತು ಪ್ರತಿ ಲೀಟರ್ ಡೀಸೆಲ್ ಬೆಲೆ 1.12 ರೂ. ಏರಿಕೆಯಾಗಲಿದೆ.

    ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತೈಲ ಬೆಲೆ ಏರಿಕೆಯನ್ನು ಖಂಡಿಸಿ ರಾಹುಲ್ ಗಾಂಧಿ ಕೋಲಾರದಲ್ಲಿ ಸೈಕಲ್ ತುಳಿಯುವ ಮೂಲಕ ಕೇಂದ್ರದ ವಿರುದ್ಧ ಪ್ರತಿಭಟಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಫಿಟ್ನೆಸ್ ಚಾಲೆಂಜ್ ಟ್ರೆಂಡ್ ಇದ್ದಾಗ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರಿಗೆ ತೈಲ ಬೆಲೆಯನ್ನು ಇಳಿಸಿ ಇಲ್ಲದೇ ಇದ್ದರೆ ದೇಶವ್ಯಾಪಿ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಬರೆದು ಟ್ವೀಟ್ ಮಾಡಿದ್ದರು.

    https://twitter.com/Jaiku12/status/1014843204867198976

    https://twitter.com/AkshayVandure1/status/1014797860523556864

     

  • ಬೆಂಗ್ಳೂರು ಶೋರೂಂ ಗೆ ಅಡ್ಡಲಾಗಿ ಕಾರು ನಿಲ್ಲಿಸಿ ಪ್ರತಿಭಟನೆ!

    ಬೆಂಗ್ಳೂರು ಶೋರೂಂ ಗೆ ಅಡ್ಡಲಾಗಿ ಕಾರು ನಿಲ್ಲಿಸಿ ಪ್ರತಿಭಟನೆ!

    ಬೆಂಗಳೂರು: ಕಾರಿನ ಎಂಜಿನ್‍ನಿಂದ ಇಂಧನ ಸೋರಿಕೆ ಆಗುತ್ತಿದೆ. ಹೀಗಾಗಿ ಕಾರನ್ನು ಬದಲಾಯಿಸಿ ಕೊಡುವಂತೆ ಗ್ರಾಹಕರೊಬ್ಬರು ಮಲ್ಲೇಶ್ವರಂದ ವರುಣ್ ಮೋಟರ್ಸ್ ಶೋರೂಂ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ.

    ಏಪ್ರಿಲ್ 17 ರಂದು ನಾಗರಬಾವಿ ನಿವಾಸಿ ನಾಗರಾಜ್ ಅವರು ವರುಣ್ ಮೋಟರ್ಸ್ ಶೋ ರೂಂನಲ್ಲಿ ವಿಟರಾ ಬ್ರೆಜಾ ಕಾರನ್ನು ಖರೀದಿಸಿದ್ದರು. ಸುಮಾರು ದಿನಗಳಿಂದ ಎಂಜಿನ್ ನಿಂದ ಇಂಧನ ಸೋರಿಕೆ ಆಗುತ್ತಿದೆ ಅಂತಾ ಪರೀಕ್ಷೆ ಮಾಡಿಸಲು ಶೋರೂಂಗೆ ಹೋಗಿದ್ದರು.

    ಈ ವೇಳೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿ ಶೋರೂಂ ಸಿಬ್ಬಂದಿ ಕಾರನ್ನು ಕೊಟ್ಟಿದ್ದಾರೆ.ಆದರೆ ಸಂದೇಹ ವ್ಯಕ್ತವಾಗಿದ್ದರಿಂದ ನಾಗರಾಜ್ ಅವರು ನಾಗದೇವನಹಳ್ಳಿಯ ಕಲ್ಯಾಣಿ ಮೋಟಾರ್ಸ್ಗೆ ಹೋಗಿ ಕಾರನ್ನು ಪರೀಕ್ಷೆಗೆ ಒಳಪಡಿಸಿದ್ದರು. ಈ ವೇಳೆ ಪರೀಕ್ಷಿಸಿದ ಕಲ್ಯಾಣಿ ಮೋಟಾರ್ಸ್ ಅವರು ಎಂಜಿನ್‍ನಿಂದ ಇಂಧನ ಸೋರಿಕೆ ಆಗುತ್ತಿರುವುದನ್ನು ದೃಢಪಡಿಸಿದ್ದರು.

    ನಾಗರಾಜ್ ಅವರು ವರುಣ್ ಮೋಟಾರ್ಸ್ ಮರಳಿ ಬಂದು, ರಿಪೇರಿ ಮಾಡಿಸಿಕೊಂಡು ಹೋಗಿದ್ದರು. ಆದರೆ, ರೀಪೆರಿ ಆಗಿ ಮೂರು ದಿನಕ್ಕೆ ಮತ್ತೇ ಅದೇ ಸಮಸ್ಯೆ ಉಂಟಾಗಿದ್ದರಿಂದ ವರುಣ್ ಮೋಟಾರ್ಸ್ ಅವರಿಗೆ ಸುಮಾರು 70 ರಿಂದ 80 ಇಮೇಲ್ ಕಳಿಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡದೇ ಶೋರೂಂ ಸಿಬ್ಬಂದಿ ಸತಾಯಿಸಿದ್ದರು. ಇದರಿಂದ ಕೋಪಗೊಂಡ ನಾಗರಾಜ್ ಅವರು ಶೋರೂಂ ಎದುರು ಕಾರು ನಿಲ್ಲಿಸಿ, ಕಾರನ್ನು ಬದಲಾಯಿಸುವಂತೆ ಪ್ರತಿಭಟನೆ ನಡೆಸಿದ್ದಾರೆ.