Tag: ಪ್ರತಿಭಟನಕಾರರು

  • ಗೋ ಬ್ಯಾಕ್ ಅಮಿತ್ ಶಾ – ಸಿಎಎ, ಎನ್​ಆರ್​ಸಿ ವಿರೋಧಿಗಳಿಂದ ಕಪ್ಪು ಬಲೂನ್ ಹಾರಾಟ

    ಗೋ ಬ್ಯಾಕ್ ಅಮಿತ್ ಶಾ – ಸಿಎಎ, ಎನ್​ಆರ್​ಸಿ ವಿರೋಧಿಗಳಿಂದ ಕಪ್ಪು ಬಲೂನ್ ಹಾರಾಟ

    ಹುಬ್ಬಳ್ಳಿ: ಇಂದು ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಹುಬ್ಬಳ್ಳಿಯಲ್ಲಿ ಸಿಎಎ ಮತ್ತು ಎನ್​ಆರ್​ಸಿ ವಿರೋಧಿಗಳಿಂದ ಕಪ್ಪು ಬಲೂನ್ ಹಾರಾಟ ಮಾಡಿ ಗೋ ಬ್ಯಾಕ್ ಅಮಿತ್ ಶಾ ಎಂದು ಘೋಷಣೆ ಕೂಗಿದ್ದಾರೆ.

    ಇಂದು ಪೌರತ್ವ ಕಾಯ್ದೆ ಕುರಿತು ಜನಜಾಗೃತಿ ಸಮಾವೇಶದ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ಹುಬ್ಬಳ್ಳಿಗೆ ತೆರಳಲಿದ್ದು, ನಗರದ ನೆಹರು ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಆದರೆ ಈ ಸಮಾವೇಶಕ್ಕೆ ಅಮಿತ್ ಶಾ ಅವರು ಬರುವುದಕ್ಕೂ ಮುನ್ನವೇ ಸಿಎಎ, ಎನ್​ಆರ್​ಸಿ ವಿರೋಧಿಗಳು ಅಮಿತ್ ಶಾ ವಿರುದ್ಧ ಗೋ ಬ್ಯಾಕ್ ಅಮಿತ್ ಶಾ ಎಂದು ಘೋಷಣೆ ಕೂಗಿದ್ದಾರೆ.

    ಜನಜಾಗೃತಿ ಸಮಾವೇಶ ನಡೆಯುವ ನೆಹರು ಮೈದಾನದ ಮೇಲೆ ನೋ ಸಿಎಎ, ನೋ ಎನ್.ಆರ್.ಸಿ, ಅಮಿತ್ ಶಾ ಗೋ ಬ್ಯಾಕ್ ಎಂದು ಬರೆದ ಫಲಕದೊಂದಿಗೆ ಗ್ಯಾಸ್ ತುಂಬಿದ ಕಪ್ಪು ಬಲೂನ್‍ಗಳನ್ನು ಮೇಲಕ್ಕೆ ಹಾರಿ ಬಿಟ್ಟಿದ್ದಾರೆ. ಇದರ ಜೊತೆಗೆ ಕಪ್ಪು ಬಣ್ಣದ ಬಟ್ಟೆ ತೊಟ್ಟು ಕೆಲ ಪ್ರತಿಭಟನಾಕಾರರು ಗೋಬ್ಯಾಕ್ ಅಮಿತ್ ಶಾ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಕೆಲ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.