Tag: ಪ್ರತಿಜ್ಞೆ

  • Bigg Boss Kannada: ಬಿಗ್ ಬಾಸ್ ಮನೆಯಲ್ಲಿ ತುಕಾಲಿ ಸಂತು ಕಠೋರ ಶಪಥ

    Bigg Boss Kannada: ಬಿಗ್ ಬಾಸ್ ಮನೆಯಲ್ಲಿ ತುಕಾಲಿ ಸಂತು ಕಠೋರ ಶಪಥ

    ‘ಬಿಗ್‌ಬಾಸ್‌ (Bigg Boss Kannada) ಮನೆಯೊಳಗಿನ ಹೆಣ್ಣುಮಕ್ಕಳಿಗೆ ಅಣ್ಣ ಆಗುವ ಬದಲಿಗೆ ವಾರಪೂರ್ತಿ ಪಾತ್ರೆ ತೊಳಿತೀನಿ’ ಎಂದು ತಮಾಷೆಯಾಗಿ ಹೇಳಿದ್ದ ತುಕಾಲಿ ಸಂತೋಷ್ (Tukali Santu) ಅವರ ಮಾತನ್ನು ಸುದೀಪ್ ನಿಜವಾಗಿಸಿಬಿಟ್ಟಿದ್ದು ಎಲ್ಲರಿಗೂ ಗೊತ್ತೇ ಇದೆ. ನಂತರ ಮನೆಯೊಳಗೆ ಸಂತೋಷ್ ಪರಿಸ್ಥಿತಿ ಏನಾಯ್ತು? ಪಾತ್ರೆಗಳನ್ನು ಅವರೊಬ್ಬರೇ ತೊಳೆದ್ರಾ? ಅಥವಾ ಸೋತುಹೋದ್ರಾ? ಇಂತಹ ಪ್ರಶ್ನೆಗಳು ನೋಡುಗರಲ್ಲಿ ಮೂಡಿವೆ.

    ಮನೆಯೊಳಗಿದ್ದಾಗ ತುಕಾಲಿ ಸಂತೋಷ್‌ಗೆ ಎದುರಾದ ಈ ಪರಿಸ್ಥಿತಿಯ ಬಗ್ಗೆ ನಮ್ರತಾ, ಸ್ನೇಹಿತ್ ಅವರು ತುಕಾಲಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಆಗ ಹೆಣ್ಣುಮಕ್ಕಳಿಂದ ರಾಖಿ ಕಟ್ಟಿಸಿಕೊಂಡು ಅಣ್ಣನಾಗುವ ಮಾತು ಬಂದಿದೆ. ಅದಕ್ಕೆ ಸಂತೋಷ್‌ ರೊಚ್ಚಿಗೆದ್ದು ನೇರವಾಗಿ ಬಿಗ್‌ಬಾಸ್‌ಗೇ ಸವಾಲು ಹಾಕಿದ್ದಾರೆ.

    ಮೊದ ಮೊದಲು ಪಾತ್ರೆಗಳ ರಾಶಿ ನೋಡಿದಾಗ, ’ಅಯ್ಯೋ ಈ ಹುಡುಗಿಯರ ಸಹವಾಸವೂ ಬೇಡ. ಈ ಪಾತ್ರೆ ತೊಳೆಯುವುದೂ ಬೇಡ’ ಅನ್ನಿಸಿಬಿಟ್ಟಿತ್ತಂತೆ. ಆದರೆ ಎರಡು ಮೂರು ಸಲ ತೊಳೆದು ರೂಢಿ ಆದಮೇಲೆ ಅವರಿಗೆ ಮತ್ತೆ ಛಲ ಉಕ್ಕಿದೆ. ನಾನು ಎಂದಿಗೂ ಈ ಮನೆಯೊಳಗಿನ ಹೆಣ್ಮಕ್ಳಿಗೆ ಅಣ್ಣನಾಗಲಾರೆ ಎಂದು ಅವರು ನಿರ್ಧರಿಸಿಬಿಟ್ಟಿದ್ದಾರೆ.

    ಸ್ವಿಮ್ಮಿಂಗ್ ಫೂಲ್‌ ಬಳಿ ನಿಂತಿದ್ದಾಗ ನಮ್ರತಾ (Namrata Gowda), ‘ಅಣ್ಣನಾಗಬೇಕಾಗತ್ತೆ ಎಂಬ ಕಾರಣಕ್ಕೆ ಇರೋ ಬರೋ ಪಾತ್ರೆಯೆಲ್ಲ ತೊಳಿತಿದ್ದೀರಲ್ಲಾ ನೀವು’ ಎಂದು ತುಕಾಲಿ ಅವರ ಕಾಲೆಳೆದಿದ್ದಾರೆ. ಸ್ನೇಹಿತ್, ‘ರಾಖಿ ತರಿಸಿಕೊಡ್ತೀನಿ ಬನ್ನಿ’ ಎಂದು ತಮಾಷೆ ಮಾಡಿದ್ದಾರೆ.

    ನೇರವಾಗಿ ಕ್ಯಾಮೆರಾ ಎದುರಿಗೆ ಬಂದು ನಿಂತ ತುಕಾಲಿ ಅವರು, ‘ನಾನ್ಯಾಕೆ ರಾಖಿ ಕಟ್ಟಿಸ್ಕೋಬೇಕು? ಇನ್ನೂ ಬೇಕಾದ್ರೆ ಬಿಗ್‌ಬಾಸ್‌ ಮನೆಯೊಳಗೆ ಇರೋವರೆಗೂ ಪಾತ್ರೆ ತೊಳಿತೀನಿ ಬೇಕಾದ್ರೆ. ಆದ್ರೆ ರಾಖಿ ಮಾತ್ರ ಕಟ್ಟಿಸ್ಕೊಳ್ಳಲ್ಲ. ನಾನು ಎಲ್ಲಿಯವರೆಗೂ ಬಿಗ್‌ಬಾಸ್‌ ಮನೆಯೊಳಗೆ ಇರ್ತಿನೋ ಅಲ್ಲಿಯವರೆಗೂ ಇರೋವರೆಗೂ ಬ್ಯಾಚುಲರ್‍ರೇ’ ಎಂದು ಶಪಥ ಮಾಡಿದ್ದಾರೆ.

     

    ಅವರ ಶಪಥವನ್ನು ಕೇಳಿದ ಸ್ನೇಹಿತ್‌, ತುಕಾಲಿ ಅವರ ಹೆಂಡತಿಗೆ ಅಲ್ಲಿಂದಲೇ ‘ಚಿನ್ನಿ ಅವರೇ, ಈ ಎಲ್ಲ ಮಾತು ಕೇಳಿಸಿಕೊಂಡಮೇಲೆ ನೀವೇ ಏನಾದ್ರೂ ಮಾಡಬೇಕು. ಮೇನ್‌ಡೋರ್‍‌ನಿಂದ ಬಂದು ಏನಾದ್ರೂ ಮಾಡಿ’ ಎಂದು ವಿನಂತಿಸಿಕೊಂಡಿದ್ದಾರೆ. ಇಂತಹ ರಸವತ್ತಾದ ಅನೇಕ ದೃಶ್ಯಗಳನ್ನು Jiocinemaದ Unseen ಕಥೆಗಳಲ್ಲೂ ಕಾಣಬಹುದಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೀಪಾವಳಿಯಂದು ಪಟಾಕಿ ಸಿಡಿಸಲ್ಲ- ಮಕ್ಕಳಿಂದ ಪ್ರತಿಜ್ಞೆ

    ದೀಪಾವಳಿಯಂದು ಪಟಾಕಿ ಸಿಡಿಸಲ್ಲ- ಮಕ್ಕಳಿಂದ ಪ್ರತಿಜ್ಞೆ

    ಚಾಮರಾಜನಗರ: ಪರಿಸರ ರಕ್ಷಣೆಗಾಗಿ ದೀಪಾವಳಿ ಹಬ್ಬದ ದಿನ ಪಟಾಕಿ ಸಿಡಿಸಲ್ಲ ಎಂದು ಚಾಮರಾಜನಗರದ ಸರ್ಕಾರಿ ಶಾಲೆಯೊಂದರ ಮಕ್ಕಳು ಪ್ರತಿಜ್ಞೆ ಮಾಡಿದ್ದಾರೆ.

    ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹೊಂಗಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳು ದೀಪಾವಳಿ ಹಬ್ಬದ ಪಟಾಕಿ ಸಂಭ್ರಮಕ್ಕೆ ಬ್ರೇಕ್ ಹಾಕಿದ್ದಾರೆ. ಹಬ್ಬದಂದು ಪಟಾಕಿ ಸಿಡಿಸುವುದರ ಬದಲು ಪರಿಸರ ಉಳಿಸಲು ಗಿಡ ನೆಡಲು ಮನಸ್ಸು ಮಾಡಿದ್ದಾರೆ.

    ಈ ನಿಟ್ಟಿನಲ್ಲಿ ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸದೆ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಾಡುತ್ತೇವೆ ಎಂದು ಪುಟಾಣಿಗಳು ಪ್ರತಿಜ್ಞೆ ಮಾಡಿದ್ದಾರೆ. ಶಾಲಾ ಮಕ್ಕಳ ಈ ನಡೆಗೆ ಪರಿಸರ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಶಿಕ್ಷಣ ಮುಗಿಯುವವರೆಗೂ ಸಾಮಾಜಿಕ ಜಾಲತಾಣವನ್ನ ಬಳಸಲ್ಲ – ವಿದ್ಯಾರ್ಥಿಗಳಿಂದ ಪೋಷಕರ ಮೇಲೆ ಪ್ರತಿಜ್ಞೆ

    ಶಿಕ್ಷಣ ಮುಗಿಯುವವರೆಗೂ ಸಾಮಾಜಿಕ ಜಾಲತಾಣವನ್ನ ಬಳಸಲ್ಲ – ವಿದ್ಯಾರ್ಥಿಗಳಿಂದ ಪೋಷಕರ ಮೇಲೆ ಪ್ರತಿಜ್ಞೆ

    ಮಂಗಳೂರು: ನನ್ನ ಪದವಿ ಪೂರ್ವ ಶಿಕ್ಷಣ ಮುಗಿಯುವವರೆಗೂ ಸಾಮಾಜಿಕ ಜಾಲತಾಣವನ್ನು ಬಳಸೋದಿಲ್ಲ ಅಂತಾ ವಿದ್ಯಾರ್ಥಿಗಳು ತಂದೆ -ತಾಯಿಯ ಮೇಲೆ ಪ್ರಮಾಣ ಮಾಡಿರುವ ವಿಶೇಷ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

    ಪುತ್ತೂರಿನ ಅಂಬಿಕಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಪ್ರಮಾಣ ಮಾಡಿದ್ದು, ಜೀವನದ ಗುರಿ ತಲುಪುವವರೆಗೆ ಸಾಮಾಜಿಕ ಜಾಲತಾಣವಾದ ವಾಟ್ಸಪ್, ಫೇಸ್ ಬುಕ್ ಬಳಸಲ್ಲ ಅಂತಾ ತಂದೆ-ತಾಯಿಯ ಮೇಲೆ ಪ್ರತಿಜ್ಞೆ ಕೈಗೊಂಡಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸಿ ಪರಿಚಯ ಮಾಡಿಕೊಂಡು ದುರುಪಯೋಗ ಮಾಡುವ ಹಲವು ಘಟನೆಗಳನ್ನು ಕೇಳಿದ್ದೇವೆ, ನೋಡಿದ್ದೇವೆ. ಇತ್ತೀಚೆಗೆ ಗಡಿಭಾಗದ ಕೇರಳದಲ್ಲಿ ಲವ್ ಜಿಹಾದ್ ಪ್ರಕರಣಗಳು ಆಗಿವೆ. ಇದು ನಾನು ಪರೋಕ್ಷವಾಗಿ ಭಯೋತ್ಪಾದನೆಗೆ ಮತ್ತು ಹಲವಾರು ಘಟನೆಗಳಿಗೆ ಸಾಮಾಜಿಕ ಜಾಲತಾಣಗಳೇ ಕಾರಣವಾಗಿದೆ. ಆದ್ದರಿಂದ ನಮ್ಮನ್ನು ಹೆತ್ತುಹೊತ್ತ ತಂದೆ-ತಾಯಿಗಳಿಗೆ ನಾವು ಸಿಗಬೇಕು. ನಮ್ಮ ಸಮಯವನ್ನು, ಜೀವನವನ್ನು ತಿನ್ನುವ ಸಾಮಾಜಿಕ ಜಾಲತಾಣಗಳಿಂದ ಹೊರಬರಬೇಕೆಂದು ನಾವು ಸ್ವ- ತೀರ್ಮಾನ ತೆಗೊಂಡು ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.