Tag: ಪ್ರಣೀತಾ ಸುಭಾಷ್

  • ರಾಮ ಈಸ್ ಜೆಂಟಲ್ ಮ್ಯಾನ್ ಅಂತಿದ್ದಾರೆ ನಟ ರಿಷಿ

    ರಾಮ ಈಸ್ ಜೆಂಟಲ್ ಮ್ಯಾನ್ ಅಂತಿದ್ದಾರೆ ನಟ ರಿಷಿ

    ಪರೇಷನ್ ಅಲಮೇಲಮ್ಮ, ಕವಲುದಾರಿ ಸಿನಿಮಾ ಖ್ಯಾತಿಯ ರಿಷಿ ನಟನೆಯ ರಾಮನ ಅವತಾರ (Ramana Avatar) ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿರುವ ರಾಮ ಈಸ್ ಜೆಂಟಲ್ ಮ್ಯಾನ್ ಎಂಬ ಸಿಂಗಿಂಗ್ ಮಸ್ತಿಗೆ ಅಭಿನಂದನ್ ಮಹಿಶಾಲೆ ಧ್ವನಿಯಾಗಿದ್ದು, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಟೈಟಲ್ ಕಂ ರೋಮ್ಯಾಂಟಿಕ್ ಹಾಡಾಗಿರುವ ರಾಮ ಈಸ್ ಜೆಂಟಲ್ ಮ್ಯಾನ್ ನಲ್ಲಿ ರಿಷಿ ತನ್ನ ಪ್ರೀತಿಯನ್ನು ನಾಯಕಿ ಶುಭ್ರಗೆ ವ್ಯಕ್ತಪಡಿಸುತ್ತಾ ಹೆಜ್ಜೆ ಹಾಕಿದ್ದಾರೆ.

    ಈ ಹಾಡಿನ ಚಿತ್ರೀಕರಣ ಸಾವನದುರ್ಗ ಮತ್ತು ಶಿವಗಂಗೆ ಸ್ಥಳಗಳಲ್ಲಿ ಮಾಡಿದ್ದು ವೆಸ್ಟೆರ್ನ್ ಶೈಲಿಯ ಸಂಗೀತಕ್ಕೆ ಪಕ್ಕಾ ದೇಸಿ ಟಚ್ ಕೊಟ್ಟಂತಿದೆ. ಸಾಹಿತ್ಯ ಕೇಳಲು ಇಂಪಾಗಿರುವದರ ಜೊತೆಗೆ ಪ್ರೇಕ್ಷರ ಮುಖದಲ್ಲಿ ನಗುವನ್ನು ತರಿಸುವುದರಲ್ಲಿ ಯಶಸ್ವಿಯಾಗಿದೆ. ತಮ್ಮದೇ ವಿಭಿನ್ನ ಶೈಲಿಯ ನಟನೆಯಿಂದ ಜನರ ಮನಸ್ಸನ್ನು ಗೆದ್ದಿರುವ ರಿಷಿ ರಾಮ ಐಸ್ ಆ ಜೆಂಟಲ್ ಮ್ಯಾನ್ ಹಾಡಿನಲ್ಲಿ ಕುಣಿದು ಜನರನ್ನು ಮನೋರಂಜಿಸಿದ್ದಾರೆ. ಈ ಹಾಡಿನ  ಮುಖಾಂತರ ಜನರ ಮನಸ್ಸನ್ನು ಮತ್ತೊಮ್ಮೆ ಗೆದ್ದಿರುವ ಚಿತ್ರತಂಡ ಚಿತ್ರದ ಉಳಿದ ಹಾಡುಗಳನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದೆ.

    ಟೀಸರ್ ಮೂಲಕ ಭರಪೂರ ಕಾಮಿಡಿ ಉಣಬಡಿಸಿದ್ದ ರಾಮನ ಅವಾತರ ಸಿನಿಮಾದಲ್ಲಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದು, ಅರುಣ್ ಸಾಗರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ತಮ್ಮದೇ ನಾಟಿ ಫ್ಯಾಕ್ಟರಿ ಯೂಟ್ಯೂಬ್ ಚಾನೆಲ್ ಮೂಲಕ ಹೆಸರು ಪಡೆದಿರುವ ವಿಕಾಸ್ ಪಂಪಾಪತಿ ರಾಮನ ಅವತಾರ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ವಿಕಾಸ್ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ:‘RRR’ ರೈಟರ್ ವಿಜೇಂದ್ರ ಪ್ರಸಾದ್‌ ಜೊತೆ ಕೇದರನಾಥ್‌ಗೆ ಕಂಗನಾ ಭೇಟಿ

    ಸ್ಟಾರ್ ಫ್ಯಾಬ್ ಪ್ರೊಡಕ್ಷನ್ ನಡಿ ಆಪರೇಷನ್ ಅಲಮೇಲಮ್ಮ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಕೈಚಳಕವಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದು, ಅಮರನಾಥ್ ಸಂಲಕನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದೆ. ರಾಮನ ಅವತಾರ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಪ್ರಚಾರ ಕಾರ್ಯಕ್ಕೆ ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.

  • ಸಾಂಪ್ರದಾಯಿಕ ಲುಕ್‌ಗೂ ಸೈ, ಮಾಡ್ರನ್ ಡ್ರೆಸ್‌ಗೂ ಜೈ- ಪ್ರಣೀತಾ ಸುಭಾಷ್

    ಸಾಂಪ್ರದಾಯಿಕ ಲುಕ್‌ಗೂ ಸೈ, ಮಾಡ್ರನ್ ಡ್ರೆಸ್‌ಗೂ ಜೈ- ಪ್ರಣೀತಾ ಸುಭಾಷ್

    ನ್ನಡದ ‘ಪೊರ್ಕಿ’ (Porki) ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಿತರಾದ ನಟಿ ಪ್ರಣೀತಾ ಸುಭಾಷ್ (Pranitha Subhash) ಅವರು ಮದುವೆ, ಮಗುವಾದ್ಮೇಲೆ ಮತ್ತೆ ನಟನೆಗೆ ಕಮ್‌ಬ್ಯಾಕ್ ಆಗಿದ್ದಾರೆ. ಸದಾ ಮಾಡ್ರನ್ ಡ್ರೆಸ್ ಮಿಂಚಿದ್ದ ನಟಿ, ಈಗ ಸೀರೆಯುಟ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

    ಕನ್ನಡತಿ ಪ್ರಣೀತಾ, ಕನ್ನಡ, ತೆಲುಗು, ತಮಿಳು, ಬಾಲಿವುಡ್‌ನಲ್ಲೂ ನಾಯಕಿಯಾಗಿ ಶೈನ್ ಆಗಿದ್ದಾರೆ. ದಿಲೀಪ್‌ಗೆ ನಾಯಕಿಯಾಗುವ ಮೂಲಕ ಮಾಲಿವುಡ್ (Mollywood) ರಂಗಕ್ಕೂ ನಟಿ ಪ್ರಣೀತಾ ಕಾಲಿಟ್ಟಿದ್ದಾರೆ. ಕೇರಳದಲ್ಲಿ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದನ್ನೂ ಓದಿ:ಮಗಳ ಭವಿಷ್ಯಕ್ಕಾಗಿ ದೇಶ ಬಿಡಲು ಸಿದ್ಧ ಎಂದ ಪ್ರಿಯಾಂಕಾ ಚೋಪ್ರಾ

    ಕಳೆದ ಲಾಕ್‌ಡೌನ್‌ನಲ್ಲಿ ಉದ್ಯಮಿ ನಿತಿನ್ ಜೊತೆ ಪ್ರಣೀತಾ ಹಸೆಮಣೆ(Wedding)  ಏರಿದ್ದರು. ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದರು. ಇದೀಗ ಮುದ್ದಾದ ಮಗಳಿದ್ದಾಳೆ. ಸಿನಿಮಾ- ಮಗಳ ಆರೈಕೆ ಎರಡನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ಹಾಗೆಯೇ ಫಿಟ್‌ನೆಸ್ ಕಡೆ ಹೆಚ್ಚು ಗಮನ ಕೊಡ್ತಿದ್ದಾರೆ.

     

    View this post on Instagram

     

    A post shared by Pranita Subhash (@pranitha.insta)

    ಮುದ್ದಾದ ಮಗಳು ಜನಿಸಿದ ನಂತರ ಪ್ರಣೀತಾ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಆಗಾಗ ಹಾಟ್ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಕೆಡಿಸುತ್ತಿರುತ್ತಾರೆ. ಇದೀಗ ಹಳದಿ ಬಣ್ಣದ ಸೀರೆಯುಟ್ಟು ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ. ಸಾಂಪ್ರದಾಯಿಕ ಲುಕ್‌ಗೂ ಸೈ, ಮಾಡ್ರನ್ ಡ್ರೆಸ್‌ಗೂ ಜೈ ಎಂದು ಮಿಂಚಿದ್ದಾರೆ. ಪ್ರಣೀತಾ ಅವತಾರ ನೋಡಿ ಸಂತೂರ್‌ ಮಮ್ಮಿ ಅಂತಾ ಫ್ಯಾನ್ಸ್‌ ಕಾಮೆಂಟ್‌ ಮಾಡ್ತಿದ್ದಾರೆ.

  • ‘ರಾಮನ ಅವತಾರ’ ಟೀಸರ್ ರಿಲೀಸ್ : ರಿಷಿ ಸಖತ್ ಕಾಮಿಡಿ ಮಾಡ್ತಾರಪ್ಪ

    ‘ರಾಮನ ಅವತಾರ’ ಟೀಸರ್ ರಿಲೀಸ್ : ರಿಷಿ ಸಖತ್ ಕಾಮಿಡಿ ಮಾಡ್ತಾರಪ್ಪ

    ಪರೇಷನ್ ಅಲಮೇಲಮ್ಮ, ಕವಲುದಾರಿ ಸಿನಿಮಾ ಖ್ಯಾತಿಯ ರಿಷಿ ನಟನೆಯ ‘ರಾಮನ ಅವತಾರ’ (Ramana Avatar) ಸಿನಿಮಾದ ಟೀಸರ್ (Teaser) ರಿಲೀಸ್ ಆಗಿದೆ. ಟೀಸರ್ ಮೂಲಕ ನಿರ್ದೇಶಕ ವಿಕಾಸ್ ಪಂಪಾಪತಿ (Vikas Pampapathy)  ಭರಪೂರ ನಗುವಿನ ಮ್ಯಾಜಿಕ್ ಅನ್ನು ಪ್ರೇಕ್ಷಕರಿಗೆ ಉಣ ಬಡಿಸಿದ್ದಾರೆ. ರಿಷಿ (Rishi) ಪಂಚಿಂಗ್ ಸಂಭಾಷಣೆ ಮೂಲಕ ನೋಡುಗರನ್ನು‌ ನಕ್ಕು ನಲಿಸುತ್ತಾರೆ. ಇವರಿಗೆ ಜೋಡಿಯಾಗಿ ಪ್ರಣೀತಾ  ಸುಭಾಷ್  (Praneetha Subhash) ಹಾಗೂ ಶುಭ್ರ ಅಯ್ಯಪ್ಪ (Shubhra Ayyappa) ನಟಿಸಿದ್ದಾರೆ. ಅರುಣ್ ಸಾಗರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

    ಟೀಸರ್ ರಿಲೀಸ್ ಬಳಿಕ ಮಾತಾನಾಡಿದ ರಿಷಿ, ಸಾಮಾನ್ಯವಾಗಿ ಕಾಮಿಡಿ ಕಷ್ಟವಾದ ಜಾನರ್. ಅದರಲ್ಲಿ ಡಬಲ್ ಮೀನಿಂಗ್ ಮಾಡಬಹುದು. ಬೇರೆಯವರನ್ನು ನಿಂದಿಸಿ ಕಾಮಿಡಿ ಮಾಡಬಹುದು. ಡಬಲ್ ಮೀನಿಂಗ್ ಇಲ್ಲದೇ, ಯಾರಿಗೂ ನಿಂದಿಸದೆ, ಕಾಮಿಡಿ ಮಾಡಬಹುದು ಎಂಬುದಕ್ಕೆ ನಿರ್ದೇಶಕ ವಿಕಾಸ್‌ ಪಂಪಾಪತಿ ಉದಾಹರಣೆ. ನಾನು ಈ ಸಿನಿಮಾವನ್ನು ತುಂಬಾ ಮಜಾಕೊಂಡು ಮಾಡಿದ್ದೇನೆ. ನನಗೆ ಖುಷಿ ಕೊಟ್ಟ ಸಿನಿಮಾ. ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಅವರೆಲ್ಲರ ಎನರ್ಜಿ ನೋಡಿ ನನಗೆ ಖುಷಿಯಾಗಿದೆ. ಟೀಸರ್ ಚೆನ್ನಾಗಿ ಮೂಡಿಬಂದಿದೆ. ನಮ್ಮ ಸಿನಿಮಾ ಮೇಲೆ ನಿಮ್ಮ ಪ್ರೋತ್ಸಾಹ ಇರಲಿ.

    ಸಿನಿಮಾ ಬಗ್ಗೆ ಮಾತನಾಡಿದ ನಿರ್ದೇಶಕ ವಿಕಾಸ್  ಪಂಪಾಪತಿ, ‘ರಾಮನ ಅವತಾರ ಚಿತ್ರ ಕಲಿಯುಗದ ರಾಮನ ಕಥೆಯಾಗಿದ್ದು, ಸಿನಿಮಾ ನೋಡುವಾಗ ಅಲ್ಲಲ್ಲಿ ಪೌರಾಣಿಕ ರಾಮಾಯಣದ ನೆನಪು ಮಾಡಿಕೊಡುತ್ತದೆ. ಯಾವುದೇ ರೀತಿ ಕಾಂಪ್ರಮೈಸ್ ಮಾಡಿಕೊಳ್ಳದೆ ಸಿನಿಮಾವನ್ನು ಮಾಡಿದ್ದು   ಕನ್ನಡ ಸಿನಿ ರಂಗದಲ್ಲಿ ಇದೊಂದು ವಿಭಿನ್ನ ಚಿತ್ರವಾಗುವುದರಲ್ಲಿ, ಪ್ರೇಕ್ಷಕರಿಗೆ ಮನೋರಂಜನೆ ಕೊಡುವುದರಲ್ಲಿ ಸಂದೇಹವಿಲ್ಲ’ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಗಳ ಮುದ್ದಾದ ಫೋಟೋ ಹಂಚಿಕೊಂಡ ನಟಿ ಮಾನಸ ಜೋಶಿ

    ವಿಕಾಸ್‌ ಪಂಪಾಪತಿ ‘ರಾಮನ ಅವತಾರ’ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.  ಅಮರೇಜ್‌ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರೊಮ್ಯಾಂಟಿಕ್‌ ಕಾಮಿಡಿ ಜಾನರ್‌ನ ರಾಮನ ಅವತಾರ ಸಿನಿಮಾಗೆ ವಿಷ್ಣುಪ್ರಸಾದ್‌ ಹಾಗೂ ಸಮೀರ್‌ ದೇಶಪಾಂಡೆ ಛಾಯಾಗ್ರಹಣವಿದೆ.

    ಜೂಡಾ ಸ್ಯಾಂಡಿ ಸಂಗೀತ, ಅಮರನಾಥ್‌ ಸಂಕಲನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್‌ ನಡೆಸಲಾಗಿದೆ. ಟೀಸರ್ ಬಿಡುಗಡೆ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಕಿಕ್ ಸ್ಟಾರ್ಟ್ ಕೊಟ್ಟಿರುವ ಚಿತ್ರತಂಡ ಜೂನ್‌ ಮೊದಲ ವಾರ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

  • ಇಬ್ಬರು ನಾಯಕಿಯರ ಜೊತೆ ಡುಯೆಟ್ ಹಾಡಲಿದ್ದಾರೆ ರಿಷಿ

    ಇಬ್ಬರು ನಾಯಕಿಯರ ಜೊತೆ ಡುಯೆಟ್ ಹಾಡಲಿದ್ದಾರೆ ರಿಷಿ

    ನ್ನಡ ಚಿತ್ರರಂಗ ಪ್ರತಿಭಾನ್ವಿತ ನಟ ರಿಷಿ (Rishi) ವಿಭಿನ್ನ ಪಾತ್ರಗಳ ಮೂಲಕ ಸಿನಿರಸಿಕರನ್ನು ರಂಜಿಸಿಕೊಂಡು ಬರ್ತಿದ್ದಾರೆ. ಇದೀಗ ಅವರು ರಾಮನ ಅವತಾರ ಎಂಬ ಮತ್ತೊಂದು ಹೊಸ ಚಿತ್ರದಲ್ಲಿ ನಟಿಸಿದ್ದು, ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರ ಜೊತೆ ಡುಯೆಟ್ ಹಾಡಲಿದ್ದಾರೆ. ಶುಭ್ರ ಅಯ್ಯಪ್ಪ (Shubhra Ayyappa) ಹಾಗೂ ಪ್ರಣಿತಾ ಸುಭಾಷ್ (Pranitha Subhash) ಈ ಚಿತ್ರದ ನಾಯಕಿಯರು. ಅಲ್ಲದೇ ಅರುಣ್ ಸಾಗರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    ನಿರ್ದೇಶಕ ಸಿಂಪಲ್ ಸುನಿ ಕ್ಯಾಂಪಸ್‌ನಲ್ಲಿ ಸಹಾಯಕ ನಿರ್ದೇಶಕರಾಗಿ ಹಾಗೂ ಬರಹಗಾರನಾಗಿ ಕೆಲಸ ಮಾಡಿರುವ ಅನುಭವವಿರುವ, ತಮ್ಮದೇ ನಾಟಿ ಫ್ಯಾಕ್ಟರಿ ಯೂಟ್ಯೂಬ್ ಚಾನೆಲ್ ಮೂಲಕ ಹೆಸರು ಪಡೆದಿರುವ ವಿಕಾಸ್ ಪಂಪಾಪತಿ ರಾಮನ ಅವತಾರ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ವಿಕಾಸ್ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ‘ವಿಷ್ಣುಪ್ರಿಯಾ’ಗಾಗಿ ಕೇರಳದಿಂದ ಹಾರಿಬಂದ ಕಣ್ಸನ್ನೆ ಬೆಡಗಿ ಪ್ರಿಯಾ

    ಸ್ಟಾರ್ ಫ್ಯಾಬ್ ಪ್ರೊಡಕ್ಷನ್ ನಡಿ ಆಪರೇಷನ್ ಅಲಮೇಲಮ್ಮ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಕೈಚಳಕವಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದು, ಅಮರನಾಥ್ ಸಂಲಕನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದೆ. ಈಗಾಗಲೇ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಗ್ರಾಫಿಕ್ಸ್ ಹಾಗೂ ಮ್ಯೂಸಿಕ್ ಕೆಲಸಗಳು ಭರದಿಂದ ಸಾಗ್ತಿವೆ. ಜೂನ್ ಮೊದಲನೇ ವಾರದಲ್ಲಿ ರಾಮನ ಅವತಾರ ಸಿನಿಮಾವನ್ನು ತೆರೆಗೆ ತರೋದಕ್ಕೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

  • ರಾಮನ ಅವತಾರದಲ್ಲಿ ಕವಲುದಾರಿಯ ನಾಯಕ ರಿಷಿ

    ರಾಮನ ಅವತಾರದಲ್ಲಿ ಕವಲುದಾರಿಯ ನಾಯಕ ರಿಷಿ

    ನ್ನಡ ಚಿತ್ರರಂಗ ಪ್ರತಿಭಾನ್ವಿತ ನಟ ರಿಷಿ (Rishi) ವಿಭಿನ್ನ ಪಾತ್ರಗಳ ಮೂಲಕ ಸಿನಿರಸಿಕರನ್ನು ರಂಜಿಸಿಕೊಂಡು ಬರ್ತಿದ್ದಾರೆ. ಇದೀಗ ಅವರು ರಾಮನ ಅವತಾರ (Ramana Avatara) ಎಂಬ ಮತ್ತೊಂದು ಹೊಸ ಚಿತ್ರದಲ್ಲಿ ನಟಿಸಿದ್ದು, ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಥೇಟ್ ರಾಮನ ಗೆಟಪ್ ನಲ್ಲಿಯೇ ರಿಷಿ ಕಾಣಿಸಿಕೊಂಡಿದ್ದು, ಅರುಣ್ ಸಾಗರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಶುಭ್ರ ಅಯ್ಯಪ್ಪ (Shubhra Ayyappa) ಹಾಗೂ ಪ್ರಣೀತಾ ಸುಭಾಷ್ (Praneetha Subhash) ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ.

    ನಿರ್ದೇಶಕ ಸಿಂಪಲ್ ಸುನಿ (Simple Suni) ಕ್ಯಾಂಪನ್ ನಲ್ಲಿ ಸಹಾಯಕ ನಿರ್ದೇಶಕರಾಗಿ ಹಾಗೂ ಬರಹಗಾರನಾಗಿ ಕೆಲಸ ಮಾಡಿರುವ ಅನುಭವವಿರುವ, ತಮ್ಮದೇ ನಾಟಿ ಫ್ಯಾಕ್ಟರಿ ಯೂಟ್ಯೂಬ್ ಚಾನೆಲ್ ಮೂಲಕ ಹೆಸರು ಪಡೆದಿರುವ ವಿಕಾಸ್ ಪಂಪಾಪತಿ ರಾಮನ ಅವತಾರ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ಈ ಚಿತ್ರದ ಮೂಲಕ ವಿಕಾಸ್ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ನಿಮ್ಮ ಅಭಿನಯ- ವ್ಯಕ್ತಿತ್ವ ಎರಡು ಅದ್ಭುತ: ಅನುಪಮ್ ಖೇರ್ ಹೊಗಳಿದ ಶಿವಣ್ಣ

    ಸ್ಟಾರ್ ಫ್ಯಾಬ್ ಪ್ರೊಡಕ್ಷನ್ ನಡಿ ಆಪರೇಷನ್ ಅಲಮೇಲಮ್ಮ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಚಿತ್ರ ನಿರ್ಮಾಣ ಮಾಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್ ಈ ಸಿನಿಮಾಗೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೇ ಕ್ಯಾಮೆರಾ ಕೈಚಳಕವಿದ್ದು, ಜೂಡಾ ಸ್ಯಾಂಡಿ ಟ್ಯೂನ್ ಹಾಕಿದ್ದು, ಅಮರನಾಥ್ ಸಂಲಕನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದೆ. ಈಗಾಗಲೇ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಗ್ರಾಫಿಕ್ಸ್ ಹಾಗೂ ಮ್ಯೂಸಿಕ್ ಕೆಲಸಗಳು ಭರದಿಂದ ಸಾಗ್ತಿವೆ. ಜೂನ್ ಮೊದಲನೇ ವಾರದಲ್ಲಿ ರಾಮನ ಅವತಾರ ಸಿನಿಮಾವನ್ನು ತೆರೆಗೆ ತರೋದಿಕ್ಕೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

  • ಹೆಣ್ಣು ಮಗುವಿಗೆ ತಾಯಿಯಾದ ಪ್ರಣಿತಾ ಸುಭಾಷ್

    ಹೆಣ್ಣು ಮಗುವಿಗೆ ತಾಯಿಯಾದ ಪ್ರಣಿತಾ ಸುಭಾಷ್

    ಸ್ಯಾಂಡಲ್‌ವುಡ್ ನಟಿ ಪ್ರಣಿತಾ ಸುಭಾಷ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇಂದು ಹೆಣ್ಣು ಮಗುವಿಗೆ ನಟಿ ಪ್ರಣಿತಾ ತಾಯಿಯಾಗಿದ್ದಾರೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ.

    `ಪೊರ್ಕಿ’ ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರಣಿತಾ ಸುಭಾಷ್, ಈಗ ಸಿನಿಮಾಗಳಿಂದ ಕೊಂಚ ಬ್ರೇಕ್ ತೆಗೆದುಕೊಂಡು, ತಮ್ಮ ತಾಯ್ತನದ ಖುಷಿಯಲ್ಲಿದ್ದರು. ಇದೀಗ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಇಂದು ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ನಟಿ ಪ್ರಣಿತಾ ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. ಆಸ್ಟರ್‌ ಆರ್‌ವಿ ಆಸ್ಪತ್ರೆಯಲ್ಲಿ ಪ್ರಣಿತಾ ಹೆರಿಗೆಯಾಗಿದ್ದು, ಇಬ್ಬರು ಆರೋಗ್ಯವಾಗಿದ್ದಾರೆ. ಈ ಕುರಿತು ನಟಿ ಪ್ರಣಿತಾ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಸರಕಾರಕ್ಕೆ ಟೀಸರ್ ಮೂಲಕ ಟಾಂಗ್ ಕೊಟ್ಟ ಟಾಲಿವುಡ್ ಬಾಲಕೃಷ್ಣ

    ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಪ್ರತಿಭಾವಂತ ನಟಿ ಪ್ರಣಿತಾ, ಬೇಡಿಕೆ ಇರುವಾಗಲೇ ಹಸೆಮಣೆ ಏರಿದ್ದರು. ಒಬ್ಬರನೋಬ್ಬರು ಪ್ರೀತಿಸಿ ಗುರು ಹಿರಿಯರ ಸಮ್ಮುಖದಲ್ಲಿ ಕಳೆದ ವರ್ಷ ನಿತಿನ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ತಾವು ತಾಯಿಯಾಗಿರುವ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಪ್ರಣಿತಾ ಮತ್ತು ಅವರ ಕುಟುಂಬ ಮುದ್ದು ಹೆಣ್ಣು ಮಗುವಿನ ಆಗಮನ ಖುಷಿಯಲ್ಲಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟಿಗೆ ಶುಭ ಹಾರೈಸುತ್ತಿದ್ದಾರೆ.

  • ಪತಿ ಹುಟ್ಟುಹಬ್ಬಕ್ಕೆ ಪ್ರಣೀತಾ ಗುಡ್‍ನ್ಯೂಸ್- ಫೋಟೋಶೂಟ್ ಜೊತೆ ಪ್ರೆಗ್ನೆನ್ಸಿ ರಿಪೋರ್ಟ್

    ಪತಿ ಹುಟ್ಟುಹಬ್ಬಕ್ಕೆ ಪ್ರಣೀತಾ ಗುಡ್‍ನ್ಯೂಸ್- ಫೋಟೋಶೂಟ್ ಜೊತೆ ಪ್ರೆಗ್ನೆನ್ಸಿ ರಿಪೋರ್ಟ್

    ಹುಭಾಷಾ ನಟಿ ಪ್ರಣೀತಾ ಸುಭಾಷ್ 2021ರ ಮೇ 30ರಂದು ಅತ್ಯಾಪ್ತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದರು. ಈ ಸಂತಸದ ವಿಚಾರವನ್ನು ಕೊರೊನಾ ಕಾರಣದಿಂದ ಅಭಿಮಾನಿಗಳಿಗೆ ತಡವಾಗಿ ತಿಳಿಸಿದ್ದರು. ಈಗ ತಾವು ಗರ್ಭಿಣಿಯಾಗುತ್ತಿರುವ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.

    ಈ ಕುರಿತು ಪ್ರಣೀತಾ ಇನ್‍ಸ್ಟಾಗ್ರಾಮ್‍ನಲ್ಲಿ, ನನ್ನ ಪತಿಯ 34ನೇ ಹುಟ್ಟುಹಬ್ಬದಂದು ಒಂದು ವಿಶೇಷ ಸುದ್ದಿಯನ್ನು ಹೇಳುತ್ತಿದ್ದೇನೆ. ನಮ್ಮ ಮನೆಗೆ ಏಂಜಲ್ಸ್ ಬರುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‍ನಲ್ಲಿ ಪ್ರಣೀತಾ ಅವರು ತಮ್ಮ ಪತಿ ನಿತಿನ್ ರಾಜ್ ಜೊತೆ ಕುಳಿತುಕೊಂಡು ನಮ್ಮ ಪ್ರೆಗ್ನೆನ್ಸಿ ರಿಪೋರ್ಟ್ ತೋರಿಸಿದ್ದಾರೆ. ಈ ಫೋಟೋದಲ್ಲಿ ಪ್ರಣೀತಾ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. ಇದನ್ನೂ ಓದಿ: ಆಲಿಯಾ, ರಣಬೀರ್ ಮದುವೆ: 200 ಬೌನ್ಸರ್ ನೇಮಕ, ಹೊಸ ಮನೆ ಸೇರಿ RK ಸ್ಟುಡಿಯೋ ಫುಲ್ ಲಕಲಕ

    ಈ ಹಿಂದೆ ಪ್ರಣೀತಾ ತಮ್ಮ ಮದುವೆ ವಿಷಯವನ್ನು ತಡವಾಗಿ ತಿಳಿಸಿದ್ದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದ ಈ ನಟಿ, ಕೊರೊನಾ ವೈರಸ್ ಎಂಬ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮದುವೆಗೆ ಯಾರನ್ನು ಆಮಂತ್ರಿಸಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಕ್ಷಮೆ ಇರಲಿ. ಅಲ್ಲದೆ ಮದುವೆಗೆ ಒಂದು ದಿನ ಮುಂಚೆಯಷ್ಟೇ ದಿನ ನಿಗದಿ ಮಾಡಿರುವುದಾಗಿತ್ತು ಎಂದು ಬರೆದು ಮದುವೆ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.

    ಈ ಫೋಟೋ ನೋಡಿದ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ನಡುವೆ ಕೆಲವು ಅಭಿಮಾನಿಗಳು ಪ್ರಣೀತಾಗೆ ಟಿಪ್ಸ್‌ಗಳನ್ನು ಕೊಡುತ್ತಿದ್ದಾರೆ. ಇದನ್ನೂ ಓದಿ:  ಅಪ್ಪು ಮನೆಗೆ ಭೇಟಿ ಕೊಟ್ಟ ಟಾಲಿವುಡ್ ಕಾಮಿಡಿ ಸ್ಟಾರ್ ಬ್ರಹ್ಮಾನಂದಂ, ಅಲಿ 

  • ಪ್ರಣೀತಾ ಮದುವೆಗೆ ವಿಶ್ ಮಾಡಿದ ರಮ್ಯಾಗೆ ಅಭಿಮಾನಿಗಳ ಪ್ರಶ್ನೆ ನಿಮ್ದು ಯಾವಾಗ..?

    ಪ್ರಣೀತಾ ಮದುವೆಗೆ ವಿಶ್ ಮಾಡಿದ ರಮ್ಯಾಗೆ ಅಭಿಮಾನಿಗಳ ಪ್ರಶ್ನೆ ನಿಮ್ದು ಯಾವಾಗ..?

    ಬೆಂಗಳೂರು: ಗುಟ್ಟಾಗಿ ಮದುವೆಯಾಗಿ ಫೋಟೋ ವೈರಲ್ ಆಗುತ್ತಿದ್ದಂತೆಯೇ ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಅವರು ಕೊನೆಗೂ ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ನಟಿ ಅಪ್ಲೋಡ್ ಮಾಡಿದ ಪೋಸ್ಟ್ ಗೆ ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಕೂಡ ವಿಶ್ ಮಾಡಿದ್ದಾರೆ.

    ಹೌದು. ಪ್ರಣೀತಾ ಅವರು ತಾವು ಮದುವೆಯಾಗಿರುವ ಕುರಿತು ಸ್ಪಷ್ಟನೆ ನೀಡಿ ಕ್ಷಮೆ ಕೇಳಿ ಒಂದು ಲೆಟರ್ ಅನ್ನು ಇನ್ ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಗೆ ನಟಿ ರಮ್ಯಾ ಕಂಗ್ರಾಟ್ಸ್ ಪ್ರಣೀತಾ ಎಂದು ವಿಶ್ ಮಾಡಿದ್ದಾರೆ. ರಮ್ಯಾ ಕಾಮೆಂಟ್ ಹಾಕುತ್ತಿದ್ದಂತೆಯೇ ಅಭಿಮಾನಿಗಳು ಅವರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ.

    ಕೆಲವರು ನಿಮ್ಮ ಮದುವೆ ಯಾವಾಗ ಎಂದು ಕೇಳಿದರೆ ಒಬ್ಬರು, ಮೇಡಂ ನಿಮಗೆ ವಯಸ್ಸಾಗುತ್ತಿದೆ, ಆದಷ್ಟು ಬೇಗ ಮದುವೆ ಆಗಿಬಿಡಿ ಎಂದು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಪ್ರಣೀತಾ ಮದುವೆಗೆ ವಿಶ್ ಮಾಡಲು ಹೋಗಿ ರಮ್ಯಾ ಅವರು ಅಭಿಮಾನಿಗಳಿಗೆ ತಾವು ಉತ್ತರಿಸಬೇಕಾದ ಪರಿಸ್ಥಿತಿ ಎದುರಾಯಿತು. ಆದರೆ ಅಭಿಮಾನಿಗಳ ಪ್ರಶ್ನೆಗೆ ರಮ್ಯಾ ಯಾವುದೇ ಉತ್ತರ ನೀಡದೆ ಮೌನಕ್ಕೆ ಶರಣಾಗಿದ್ದಾರೆ.

    ಸದ್ದಿಲ್ಲದೆ ಹಸಮಣೆಯೇರಿದ ಪ್ರಣೀತಾ..!
    ಬುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ಪ್ರಣೀತಾ ಸುಭಾಷ್ ಅವರು ಭಾನುವಾರ ನಿತಿನ್ ರಾಜ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂಬ ಸುದ್ದಿ ಸ್ಯಾಂಡಲ್‍ವುಡ್ ಅಂಗಳದಲ್ಲಿ ಹರಿದಾಡಿತ್ತು. ಆದರೆ ಈ ಬಗ್ಗೆ ನಟಿ ಎಲ್ಲಿಯೂ ಬಾಯಿ ಬಿಟ್ಟಿರಲಿಲ್ಲ. ಅಲ್ಲದೆ ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಕೂಡ ಮಾತನಾಡಿದ್ದ ನಟಿ, ಮದುವೆ ವಿಚಾರ ಸುಳ್ಳು ಎಂದು ನುಣುಚಿಕೊಂಡಿದ್ದರು.

    ಇತ್ತ ಪ್ರಣೀತಾ- ನಿತಿನ್ ಮದುವೆಗೆ ತೆರಳಿದ್ದ ಅವರ ಸ್ನೇಹಿತರೊಬ್ಬರು ವಧು-ವರರ ಜೊತೆಗೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಮೂಲಕ ಥಳುಕು ಹಾಕಿಸಿದ್ದರು. ಈ ಫೋಟೋ ಸಾಕಷ್ಟು ವೈರಲ್ ಆಗಿದ್ದು, ಕೊರೊನಾ ಹಿನ್ನೆಲೆಯಲ್ಲಿ ಕೇವಲ ಆಪ್ತರ ಸಮ್ಮುಖದಲ್ಲಿ ಕನಕಪುರ ರಸ್ತೆಯಲ್ಲಿರುವ ರೆಸಾರ್ಟ್ ಒಂದರಲ್ಲಿ ಸಪ್ತಪದಿ ತುಳಿದಿರುವ ಮಾಹಿತಿಯೂ ಸಿಕ್ಕಿತ್ತು.

    ಇಷ್ಟೆಲ್ಲಾ ಆದ ನಂತರ ಸ್ವತಃ ನಟಿಯೇ ಇಮ್ಮ ಇನ್ ಸ್ಟಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಮೇ 30ರಂದು ನಿತಿನ್ ಜೊತೆ ಮದುವೆಯಾಗಿದ್ದೇನೆ. ತುರ್ತಾಗಿ ಮದುವೆ ದಿನಾಂಕವನ್ನು ನಿಗದಿ ಮಾಡಲಾಗಿತ್ತು. ಅಲ್ಲದೆ ಕೊರೊನಾ ವೈರಸ್ ಭೀತಿಂಯಿಂದ ಮದುವೆಗೆ ಯಾರನ್ನೂ ಆಮಂತ್ರಿಸಲು ಸಾಧ್ಯವಾಗಲಿಲ್ಲ. ದಯವಿಟ್ಟು ಕ್ಷಮಿಸಿಬಿಟಿ ಎಂದು ಹೇಳುವ ಮೂಲಕ ಕೊನೆಗೂ ಮದುವೆಯಾಗಿರುವ ಸತ್ಯ ಬಿಚ್ಚಿಡುವ ಮೂಲಕ ಫುಲ್ ಸ್ಟಾಪ್ ಹಾಕಿದರು.

  • ಮದುವೆಯಾದ ಕುರಿತು ಸ್ಪಷ್ಟನೆ ನೀಡಿ ಕ್ಷಮೆ ಕೇಳಿದ ಪ್ರಣೀತಾ..!

    ಮದುವೆಯಾದ ಕುರಿತು ಸ್ಪಷ್ಟನೆ ನೀಡಿ ಕ್ಷಮೆ ಕೇಳಿದ ಪ್ರಣೀತಾ..!

    ಬೆಂಗಳೂರು: ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಮದುವೆ ವಿಚಾರ ಸಂಬಂಧ ಕೊನೆಗೂ ಸ್ಪಷ್ಟನೆ ಸಿಕ್ಕಿದೆ. ಈ ಸಂಬಂಧ ಸ್ವತಃ ನಟಿಯೇ ಪೋಸ್ಟ್ ಹಾಕುವ ಮೂಲಕ ಮದುವೆಯಾಗಿರುವ ಸತ್ಯವನ್ನು ಬಹಿರಂಗಪಡಿಸಿದ್ದಾರೆ.

    ಈ ಸಂಬಂಧ ಇನ್ ಸ್ಟಾದಲ್ಲಿ ಸುದೀರ್ಘ ಪತ್ರ ಬರೆದಿರುವ ಪೋಸ್ಟ್ ನ್ನು ನಟಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅಲ್ಲದೆ ಮೇ 30ರಂದು ಮದುವೆಯಾಗಿರುವ ವಿಚಾರವನ್ನು ಈ ಸಂದರ್ಭದಲ್ಲಿ ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಆದರೆ ಮದುವೆಗೆ ನಿಮ್ಮನ್ನು ಆಮಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಬರೆದುಕೊಳ್ಳುವ ಮೂಲಕ ಪ್ರಣೀತಾ ಕ್ಷಮೆ ಕೇಳಿದ್ದಾರೆ.

    ಪೋಸ್ಟ್ ನಲ್ಲೇನಿದೆ..?
    2021ರ ಮೇ 30ರಂದು ಅತ್ಯಾಪ್ತರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದೇವೆ. ಈ ಸಂತಸದ ವಿಚಾರವನ್ನು ಇದೀಗ ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಕೊರೊನಾ ವೈರಸ್ ಎಂಬ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಮದುವೆಗೆ ಯಾರನ್ನು ಆಮಂತ್ರಿಸಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಕ್ಷಮೆ ಇರಲಿ. ಅಲ್ಲದೆ ಮದುವೆಗೆ ಒಂದು ದಿನ ಮುಂಚೆಯಷ್ಟೇ ದಿನ ನಿಗದಿ ಮಾಡಿರುವುದಾಗಿದೆ.

    ಕೊರೊನಾ ವೈರಸ್ ನಿಂದಾಗಿ ಕೆಲವೊಂದು ನಿಯಮಗಳನ್ನು ಕೂಡ ನಾವು ಫಾಲೋ ಮಾಡಬೇಕಾಗುತ್ತದೆ. ಮದುವೆಯ ದಿನಾಂಕ ಕೂಡ ಅರ್ಜೆಂಟಾಗಿ ನಿಗದಿಯಾಗಿದ್ದರಿಂದ ನಿಮ್ಮನ್ನು ಮದುವೆಗೆ ಕರೆಯಲು ಸಾಧ್ಯವಾಗಿಲ್ಲ. ದಯವಿಟ್ಟು ನಮ್ಮನ್ನು ಕ್ಷಮಿಸಿ ಬಿಡಿ ಎಂದು ಪ್ರಣೀತಾ ಬರೆದುಕೊಂಡಿದ್ದಾರೆ.

    ವೈರಲಾದ ಮದಯವೆ ವಿಚಾರ:
    ಪ್ರಣೀತಾ ಸುಭಾಷ್ ಅವರು ನಿತಿನ್ ರಾಜು ಜೊತೆ ಭಾನುವಾರ ಸಪ್ತಪದಿ ತುಳಿದಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದುವೆ ತುಂಬಾ ಸರಳವಾಗಿ ನಡೆದಿದ್ದು, ಕಾರ್ಯಕ್ರಮಕ್ಕೆ ವಧು-ವರರ ಕುಟುಂಬಸ್ಥರನ್ನು ಮಾತ್ರ ಆಹ್ವಾನಿಸಲಾಗಿತ್ತು. ಸ್ನೇಹಿತರೊಬ್ಬರು ನೂತನ ವಧು-ವರರ ಜೊತೆ ನಿಂತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದರಿಂದ ಪ್ರಣೀತಾ ಮದುವೆಯಾಗಿರುವ ಸುದ್ದಿ ಬೆಳಕಿಗೆ ಬಂದಿತ್ತು. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನಟಿ ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ. ಮೂಲತಃ ಬೆಂಗಳೂರು ನಿವಾಸಿಯಾಗಿರುವ ಪ್ರಣೀತಾ ಪತಿ ನಿತಿನ್, ಮಾಲ್‍ವೊಂದರ ಓನರ್ ಎಂಬುದು ಸದ್ಯದ ಮಾಹಿತಿ.

    ಮೂಲಗಳ ಪ್ರಕಾರ ನಟಿ ಮದುವೆಯಲ್ಲಿ ತುಂಬಾ ಹತ್ತಿರದ ಸಂಬಂಧಿಕರು ಹಾಗೂ ಸ್ನೇಹಿತರು ಮಾತ್ರ ಭಾಗಿಯಾಗಿದ್ದರು ಎನ್ನಲಾಗಿದೆ. ಅಲ್ಲದೆ ಪ್ರಣೀತಾ ದಂಪತಿ ತಮ್ಮ ಮದುವೆಯನ್ನು ಅದ್ಧೂರಿಯಾಗಿ ಮಾಡಲು ನಿರ್ಧರಿಸಿದ್ದರು. ಆದರೆ ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಲಾಗಿದ್ದು, ಮದುವೆ ಸಮಾರಂಭಗಳಿಗೆ ಇಂತಿಷ್ಟೇ ಜನ ಸೇರಬೇಕೆಂಬ ನಿಯಮ ತರಲಾಗಿದೆ. ಹೀಗಾಗಿ ಅತ್ಯಾಪ್ತರ ಸಮ್ಮುಖದಲ್ಲಿ ಸರಳವಾಗಿ ಪ್ರಣೀತಾ ಮದುವೆ ನಡೆದಿದೆ ಎಂಬ ಮಾಹಿತಿ ಲಭಿಸಿತ್ತು.

  • ಪ್ರಣೀತಾ ಮಾಲ್ಡಿವ್ಸ್ ಡೇಸ್- ಮೊದಲ ಬಾರಿಗೆ ಸಮುದ್ರ ಆಳದಲ್ಲಿ ಈಜಿದ ನಟಿ

    ಪ್ರಣೀತಾ ಮಾಲ್ಡಿವ್ಸ್ ಡೇಸ್- ಮೊದಲ ಬಾರಿಗೆ ಸಮುದ್ರ ಆಳದಲ್ಲಿ ಈಜಿದ ನಟಿ

    ಬೆಂಗಳೂರು: ನಟಿ ಪ್ರಣೀತಾ ಸುಭಾಷ್ ಸಖತ್ ಬ್ಯುಸಿಯಾಗಿದ್ದು, ಬಹುಭಾಷಾ ನಟಿಯಾಗಿ ಬೆಳೆದಿದ್ದಾರೆ. ಸ್ಯಾಂಡಲ್‍ವುಡ್‍ನಿಂದ ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಸಹ ಮಿಂಚುತ್ತಿದ್ದಾರೆ. ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಬಿಡುವು ಮಾಡಿಕೊಂಡು ಮಾಲ್ಡಿವ್ಸ್ ಪ್ರವಾಸಕ್ಕೆ ತೆರಳಿದ್ದು ಎಂಜಾಯ್ ಮಾಡುತ್ತಿದ್ದಾರೆ.

    ಲಾಕ್‍ಡೌನ್ ಬಳಿಕ ಪ್ರಣಿತಾ ಶೂಟಿಂಗ್‍ನಲ್ಲಿ ಭಾಗವಹಿಸಿದ್ದರು. ಬಾಲಿವುಡ್ ಸಿನಿಮಾ ಹಂಗಾಮಾ-2 ಚಿತ್ರೀಕರಣದ ಬಳಿ ಬ್ರೇಕ್ ಪಡೆದಿರುವ ಅವರು ಮಾಲ್ಡಿವ್ಸ್ ಪ್ರವಾಸ ಕೈಗೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ತಮ್ಮ ಮಾಲ್ಡಿವ್ಸ್ ಡೇಸ್ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದು, ಡೈವಿಂಗ್ ವಿಡಿಯೋಗಳನ್ನು ಸಹ ಶೇರ್ ಮಾಡುತ್ತಿದ್ದಾರೆ. ಅವರ ಅಭಿಮಾನಿಗಳು ಸಹ ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಲಾಕ್‍ಡೌನ್ ದಿನಗಳಲ್ಲಿ ಬಡವರಿಗೆ ಸಹಾಯ ಮಾಡುವುದರಲ್ಲೇ ಕಾಲ ಕಳೆದಿದ್ದ ಪ್ರಣಿತಾ, ಮನೆಯಲ್ಲಿ ಸಖತ್ ಬೋರ್ ಎನ್ನುತ್ತಿದ್ದರು. ಇದೀಗ ವಿದೇಶ ಪ್ರವಾಸ ಕೈಗೊಂಡು ಎಂಜಾಯ್ ಮಾಡುತ್ತಿದ್ದಾರೆ. ರೆಸ್ಟೋರೆಂಟ್ ಬಳಿ ಸೈಕ್ಲಿಂಗ್ ಮಾಡಿರುವುದು, ಡೈವಿಂಗ್ ಮಾಡುತ್ತಿರುವುದು ಸೇರಿದಂತೆ ವಿವಿಧ ಬಗೆ ವಿಡಿಯೋ ಹಾಗೂ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಫೇಸ್ಬುಕ್‍ನಲ್ಲಿ ಸ್ಕೂಬಾ ಸ್ಕೂಟರ್ ಡೈವಿಂಗ್ ವಿಡಿಯೋ ಪೋಸ್ಟ್ ಮಾಡಿದ್ದು, ಮೊದಲ ಬಾರಿ ಸೀ ಬಿಓಬಿ ಮಾಡಿದ್ದೇನೆ, ನಿಮಗೆ ಏನನ್ನಿಸಿತು? ಸಮುದ್ರದಲ್ಲಿ ನಿಂತ ವಿಮಾನ ಹಾಗೂ ಮೇಲೆ ತೇಲುವ ಕಪ್ಪು ಮೋಡಗಳು ಭಾವನೆಯನ್ನು ಹೆಚ್ಚಿಸುತ್ತವೆ ಎಂದು ಬರೆದಿದ್ದಾರೆ.

    ಇದಕ್ಕೂ ಮುನ್ನ ರೆಸಾರ್ಟ್‍ವೊಂದರ ಬಳಿ ಸೈಕಲ್ ಓಡಿಸುತ್ತಿರುವ ಫೋಟೋ ಹಂಚಿಕೊಂಡಿದ್ದ ಪ್ರಣಿತಾ ದಿ ರೆಸಾರ್ಟ್ ಲೈಫ್ ಎಂದು ಬರೆದಿದ್ದರು. ಅಲ್ಲದೆ ಸ್ವಿಮ್ಮಿಂಗ್ ಮಾಡುವ ವಿಡಿಯೋ ಸಹ ಪೋಸ್ಟ್ ಮಾಡಿದ್ದರು. ಹೀಗೆ ಮಾಲ್ಡಿವ್ಸ್‍ನಲ್ಲಿ ಎಂಜಾಯ್ ಮಾಡುತ್ತಿರುವ ಕುರಿತು ಪ್ರಣಿತಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಅವರ ಅಭಿಮಾನಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದಾರೆ.

    ಲಾಕ್‍ಡೌನ್ ಸಡಿಲಗೊಳಿಸಿದ ಬಳಿಕ ಹೇರ್ ಕಟಿಂಗ್ ಮಾಡಿಸಿ ಶೂಟಿಂಗ್‍ಗೆ ತಯಾರಾಗುತ್ತಿರುವ ಕುರಿತು ತಿಳಿಸಿದ್ದರು. ಹೇರ್ ಕಟಿಂಗ್ ಬಳಿಕ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದೀಗ ಚಿತ್ರೀಕರಣವನ್ನೂ ಮುಗಿಸಿ ಕೆಲ ದಿನಗಳ ಬಿಡುವು ಮಾಡಿಕೊಂಡು ಪ್ರವಾಸ ಹೋಗಿದ್ದಾರೆ.

    ಸದ್ಯ ಕನ್ನಡದಲ್ಲಿ ಒಂದು, ಹಿಂದಿಯ ಎರಡು ಸಿನಿಮಾಗಳಲ್ಲಿ ಪ್ರಣೀತಾ ಬ್ಯುಸಿಯಾಗಿದ್ದು, ಸ್ಯಾಂಡಲ್‍ವುಡ್‍ನಲ್ಲಿ ರಾಮನ ಅವತಾರ, ಬಾಲಿವುಡ್‍ನಲ್ಲಿ ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಹಾಗೂ ಹಂಗಾಮಾ-2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.