Tag: ಪ್ರಣಿತಾ ಸುಭಾಷ್

  • ಕಾನ್ ಚಿತ್ರೋತ್ಸವದಲ್ಲಿ ಪ್ರಣಿತಾ ಧರಿಸಿದ್ದ ವಾಚ್ ಬೆಲೆ ಕೇಳಿ ಫ್ಯಾನ್ಸ್ ಶಾಕ್!

    ಕಾನ್ ಚಿತ್ರೋತ್ಸವದಲ್ಲಿ ಪ್ರಣಿತಾ ಧರಿಸಿದ್ದ ವಾಚ್ ಬೆಲೆ ಕೇಳಿ ಫ್ಯಾನ್ಸ್ ಶಾಕ್!

    ಹುಭಾಷಾ ನಟಿ ಪ್ರಣಿತಾ ಸುಭಾಷ್ (Pranitha Subhash) ಅವರು ಕಾನ್ ಫಿಲ್ಮ್ ಫೆಸ್ಟಿವಲ್‌ನ (78th Cannes Film Festival) ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ನಟಿಯ ಸುಂದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಕಾನ್ ಫಿಲ್ಮ್ ಫೆಸ್ಟಿವಲ್‌ಗೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಈ ಸಿನಿಮಾ ಹಬ್ಬದಲ್ಲಿ ಕನ್ನಡದ ನಟಿ ಪ್ರಣಿತಾ ಸುಭಾಷ್ ಕೂಡ ಭಾಗಿಯಾಗಿದ್ದಾರೆ. ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಕಾನ್ ಚಲನಚಿತ್ರೋತ್ಸವದಲ್ಲಿ ಮೂರು ಬಗೆಯ ಡಿಫರೆಂಟ್ ಧಿರಿಸಿನಲ್ಲಿ ಮಿಂಚಿದ್ದಾರೆ. ಬೇಬಿ ಪಿಂಕ್ ಡ್ರೆಸ್, ರೆಡ್ ಕಲರ್ ಡ್ರೆಸ್ ಮತ್ತು ಸೀರೆಯಲ್ಲಿ ಅವರು ಕಂಗೊಳಿಸಿದ್ದಾರೆ.

    ಅದರಲ್ಲೂ ಕಾನ್‌ನಲ್ಲಿ ಪಿಂಕ್ ಡ್ರೆಸ್ ಜೊತೆ ನಟಿ ಧರಿಸಿದ್ದ ದುಬಾರಿ ವಾಚ್ ಎಲ್ಲರ ಗಮನ ಸಳೆದಿದೆ. ಆ ವಾಚ್ ಬೆಲೆ 75 ಸಾವಿರದಿಂದ 1 ಲಕ್ಷ ರೂ. ಎನ್ನಲಾಗಿದೆ. ಈ ವಾಚ್ ಬೆಲೆ ಕೇಳಿ ಫ್ಯಾನ್ಸ್ ದಂಗಾಗಿದ್ದಾರೆ. ಇದನ್ನೂ ಓದಿ:ಬಿಗ್ ಆಫರ್ ಗಿಟ್ಟಿಸಿಕೊಂಡ ಕನ್ನಡತಿ- ಪ್ರಭಾಸ್‌ಗೆ ರುಕ್ಮಿಣಿ ವಸಂತ್ ನಾಯಕಿ?

    ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ಬಗ್ಗೆ ನಟಿ ಮಾತನಾಡಿ, ಕಾನ್ ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಳ್ಳಬೇಕು ಎಂದು ಚಿಕ್ಕ ವಯಸ್ಸಿನಲ್ಲಿ ಕಾಣುತ್ತಿದ್ದ ಕನಸು ಈಗ ನನಸಾಗಿದೆ. ಆ ಮಟ್ಟಕ್ಕೆ ಭಾರತೀಯ ಸಿನಿಮಾಗಳು ಮನ್ನಣೆ ಗಳಿಸಿವೆ ಎಂದಿದ್ದಾರೆ. ಇದನ್ನೂ ಓದಿ:ಎಲ್ಲಾ ಸಂದರ್ಭಕ್ಕೂ ನಗುವೇ ಒಳ್ಳೆಯ ಉತ್ತರ – ದರ್ಶನ್ ಭೇಟಿ ಬಳಿಕ ಪವಿತ್ರಾ ಪೋಸ್ಟ್!

    78ನೇ ಕಾನ್ ಫಿಲ್ಮ್ ಫೆಸ್ಟಿವಲ್ ಮೇ 13ರಿಂದ ಆರಂಭಗೊಂಡಿದ್ದು, 24ರ ವರೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಭಾಗಿಯಾಗಲು ಫಿಲ್ಮ್ ಫೆಸ್ಟಿವಲ್ ಟೀಮ್ ಅಳೆದು ತೂಗಿ ಕೆಲವೇ ಕೆಲವು ತಾರೆಯರಿಗೆ ಮಾತ್ರ ಆಮಂತ್ರಣ ನೀಡುತ್ತಾರೆ. ದೇಶ ವಿದೇಶದ ಕಲಾವಿದರಿಗೆ ಆಹ್ವಾನಿಸುತ್ತಾರೆ. ಈ ಕಾರ್ಯಕ್ರಮಕ್ಕೆ ನಟಿ ಪ್ರಣಿತಾ ಕೂಡ ಭಾಗಿಯಾಗಿದ್ದಾರೆ.

     

    View this post on Instagram

     

    A post shared by Pranita Subhash (@pranitha.insta)

    ಈ ಸಿನಿಮಾ ಹಬ್ಬದಲ್ಲಿ ಐಶ್ವರ್ಯಾ ರೈ (Aishwarya Rai), ಜಾನ್ವಿ ಕಪೂರ್, ಆದಿತಿ ರಾವ್ ಹೈದರಿ, ಕನ್ನಡದ ನಟಿ ದಿಶಾ ಮದನ್ (Disha Madan) ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.

  • ಪ್ರಣಿತಾ ಮಗನ ನಾಮಕರಣದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಪ್ರಣಿತಾ ಮಗನ ನಾಮಕರಣದ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

    ಸ್ಯಾಂಡಲ್‌ವುಡ್ ನಟಿ ಪ್ರಣಿತಾ ಸುಭಾಷ್ (Pranitha Subhash) ಮಗನ ನಾಮಕರಣ ಏ.20ರಂದು ಅದ್ಧೂರಿಯಾಗಿ ಜರುಗಿದೆ. ಈ ಸಮಾರಂಭಕ್ಕೆ ಮೋಹಕತಾರೆ ರಮ್ಯಾ (Ramya) ಸೇರಿದಂತೆ ಅನೇಕ ಕನ್ನಡದ ನಟ-ನಟಿಯರು ಭಾಗಿಯಾಗಿದ್ದಾರೆ.

    ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ನಟಿಯ ಮಗನ ನಾಮಕರಣ (Naming Ceremony) ನಡೆದಿದೆ. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ನಟ, ನಟಿಯರಿಗೆ ಆಹ್ವಾನ ನೀಡಲಾಗಿತ್ತು. ಅದರಂತೆ ರಮ್ಯಾ ಕೂಡ ನಾಮಕರಣ ಫಂಕ್ಷನ್‌ಗೆ ಆಗಮಿಸಿ ಪ್ರಣಿತಾ ಮಗನಿಗೆ ಶುಭಕೋರಿದರು. ಈ ಸಮಾರಂಭದಲ್ಲಿ ರಮ್ಯಾ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ.

    ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಅವರು ನಟಿಯ ಮಗನ ನಾಮಕರಣಕ್ಕೆ ಆಗಮಿಸಿದ್ದರು. ಇದನ್ನೂ ಓದಿ:ಚಂದನ್ ಶೆಟ್ಟಿ, ಸುಪ್ರೀತಾ ಸತ್ಯನಾರಾಯಣ್ ಎಂಗೇಜ್‌ಮೆಂಟ್ ಫೋಟೋಸ್

    ಡಾಲಿ ಧನಂಜಯ, ಯೋಗರಾಜ್ ಭಟ್ ಕೂಡ ಕಾರ್ಯಕ್ರಮಕ್ಕೆ ಆಗಮಿಸಿ ಪ್ರಣಿತಾ ಪುತ್ರನಿಗೆ ಶುಭಹಾರೈಸಿದರು. ಇದನ್ನೂ ಓದಿ:ನಾನು ಚಿಕ್ಕಂದಿನಿಂದ ಶಿವನ ಭಕ್ತ: ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲದಲ್ಲಿ ಯಶ್

    ‘ಮಾಕ್ಸ್’ ಚಿತ್ರದ ನಟಿ ಸಂಯುಕ್ತಾ ಹೊರನಾಡ್, ಮಾಳವಿಕಾ ಅವಿನಾಶ್, ಹಿರಿಯ ನಟಿ ಶ್ರುತಿ ಕೃಷ್ಣ, ಕೆ. ಸುಧಾಕರ್, ನಟಿ ಅಮೂಲ್ಯ, ಧನ್ಯ ರಾಮ್‌ಕುಮಾರ್ ಅನೇಕರು ಭಾಗಿಯಾಗಿದ್ದರು.

    ಈ ಸಂದರ್ಭ ಲೈಟ್ ಪಿಂಕ್ ಬಣ್ಣದ ಸೀರೆಯಲ್ಲಿ ಪತಿಯೊಂದಿಗೆ ನಿಂತು ಪ್ರಣಿತಾ ಪೋಸ್ ನೀಡಿದ್ದಾರೆ. ಟ್ರೆಡಿಷನಲ್ ಲುಕ್‌ನಲ್ಲಿ ನಟಿ ಮಿಂಚಿದ್ದಾರೆ.

    ಅಂದಹಾಗೆ, ಎರಡನೇ ಮಗು ಇಂದು (ಏ.20) ಜಯ್ ಕೃಷ್ಣ ನಿತಿನ್ ರಾಜ್ ಅನ್ನೋ ಹೆಸರಿಟ್ಟಿದ್ದಾರೆ ಪ್ರಣಿತಾ ದಂಪತಿ.

     

    View this post on Instagram

     

    A post shared by Pranita Subhash (@pranitha.insta)

    2021ರಲ್ಲಿ ನಿತಿನ್ ರಾಜ್ ಜೊತೆ ಪ್ರಣಿತಾ ಸುಭಾಷ್ ಮದುವೆಯಾದರು. ಈ ಜೋಡಿಗೆ ಇಬ್ಬರೂ ಮುದ್ದಾದ ಮಕ್ಕಳಿದ್ದಾರೆ. 2 ವರ್ಷದ ಮುದ್ದು ಮಗಳಿಗೆ ಆರ್ನಾ ಎಂದು ಹೆಸರಿಟ್ಟಿದ್ದಾರೆ.

  • ಪ್ಯಾರಿಸ್ ಬೀದಿಯಲ್ಲಿ ಪ್ರಣಿತಾ ಸುಭಾಷ್ ಹಾಟ್ ಪೋಸ್

    ಪ್ಯಾರಿಸ್ ಬೀದಿಯಲ್ಲಿ ಪ್ರಣಿತಾ ಸುಭಾಷ್ ಹಾಟ್ ಪೋಸ್

    ಸ್ಯಾಂಡಲ್‌ವುಡ್ ನಟಿ ಪ್ರಣಿತಾ ಸುಭಾಷ್ (Pranitha Subhash) ಪ್ಯಾರಿಸ್ (Paris) ಬೀದಿಯಲ್ಲಿ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಎರಡು ಮಕ್ಕಳ ತಾಯಿಯಾಗಿರೋ ನಟಿಯ ಬೋಲ್ಡ್ ಅವತಾರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ದರ್ಶನ್‌, ಮದರ್‌ ಇಂಡಿಯಾ ನಡುವೆ ಬಿರುಕು?- ನಿಮ್ಮನ್ನು ಅರ್ಥ ಮಾಡಿಕೊಳ್ಳುವವರ ಜೊತೆಯಿರಿ ಎಂದ ನಟಿ

    ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಗಮನ ಸೆಳೆಯೋ ಪ್ರಣಿತಾ ಇದೀಗ ಪ್ಯಾರಿಸ್‌ನಲ್ಲಿ ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಲೈಟ್ ಅರೇಂಜ್ ಧಿರಿಸಿನಲ್ಲಿ ಕಂಗೊಳಿಸಿದ್ದಾರೆ. ನಟಿಯ ಮುಖದಲ್ಲಿ ಗ್ಲೋ ಎದ್ದು ಕಾಣುತ್ತಿದೆ. ಇದನ್ನೂ ಓದಿ:ಅನುಪಮಾ ಪರಮೇಶ್ವರನ್ ಸಿನಿಮಾಗೆ ಸಮಂತಾ ಸಾಥ್

    ಮತ್ತೊಂದು ಪೋಸ್ಟ್‌ನಲ್ಲಿ ಒಳಉಡುಪು ಧರಿಸಿ, ಅದರ ಮೇಲೆ ಕೋಟ್ ಹಾಗೂ ಪ್ಯಾಂಟ್ ಧರಿಸಿದ್ದಾರೆ. ವಿವಿಧ ಭಂಗಿಯಲ್ಲಿ ಪ್ರಣಿತಾ ಪೋಸ್ ನೀಡಿದ್ದಾರೆ. ನಟಿಯ ಬೋಲ್ಡ್ ಅವತಾರಕ್ಕೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

    ಪ್ರಣಿತಾ ಸುಭಾಷ್ ತಾಯಿಯಾದ್ಮೇಲೆ ನಿಮ್ಮ ಅಂದ ಹೆಚ್ಚಾಯ್ತಾ? ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ನಟಿಯ ಫ್ಯಾಷನ್ ಸೆನ್ಸ್‌ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಸಂತೂರ್‌ ಮಮ್ಮಿ ಎಂದು ಹಾಡಿ ಹೊಗಳಿದ್ದಾರೆ.

    ಅಂದಹಾಗೆ, ಉದ್ಯಮಿ ನಿತಿನ್ ಜೊತೆ 2021ರಲ್ಲಿ ಹಸೆಮಣೆ ಏರಿದರು. ಅವರ ಸುಂದರ ದ್ಯಾಂಪತ್ಯಕ್ಕೆ ಇಬ್ಬರೂ ಮಕ್ಕಳು ಸಾಕ್ಷಿಯಾಗಿದ್ದಾರೆ.

    ಮದುವೆಯಾದ್ಮೇಲೆಯೂ ಸಿನಿಮಾಗಳಲ್ಲಿ ಪ್ರಣಿತಾ ಆ್ಯಕ್ಟೀವ್ ಆಗಿದ್ದಾರೆ. ಕಳೆದ ವರ್ಷದ ಅಂತ್ಯದಲ್ಲಿ ಮಲಯಾಳಂ ಸಿನಿಮಾದಲ್ಲಿ ನಟಿ ಅಭಿನಯಿಸಿದ್ದರು. ದಿಲೀಪ್‌ಗೆ ನಾಯಕಿಯಾಗಿ ನಟಿಸಿದರು.

    ‘ಪೋರ್ಕಿ’ ಸಿನಿಮಾದ ಮೂಲಕ ದರ್ಶನ್‌ಗೆ (Darshan) ನಾಯಕಿಯಾಗಿ ನಟಿಸಿದ್ದರು. ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಸ್ಟಾರ್ ನಟನರ ಜೊತೆ ನಟಿಸಿದ್ದಾರೆ. ಜ್ಯೂ.ಎನ್‌ಟಿಆರ್, ರಾಮ್ ಪೋತಿನೇನಿ ಸೇರಿದಂತೆ ಅನೇಕರ ಜೊತೆ ತೆರೆಹಂಚಿಕೊಂಡಿದ್ದಾರೆ.

  • ಪ್ರಣಿತಾ ಸುಭಾಷ್ ಮತ್ತೆ ಪ್ರೆಗ್ನೆಂಟ್- ಗುಡ್ ನ್ಯೂಸ್ ಹಂಚಿಕೊಂಡ ನಟಿ

    ಪ್ರಣಿತಾ ಸುಭಾಷ್ ಮತ್ತೆ ಪ್ರೆಗ್ನೆಂಟ್- ಗುಡ್ ನ್ಯೂಸ್ ಹಂಚಿಕೊಂಡ ನಟಿ

    ಹುಭಾಷಾ ನಟಿ ಪ್ರಣಿತಾ ಸುಭಾಷ್ (Pranitha Subhash) ಮತ್ತೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೊಸ ಫೋಟೋಶೂಟ್‌ವೊಂದನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಪ್ರೆಗ್ನೆನ್ಸಿ ಸುದ್ದಿಯನ್ನು ತಿಳಿಸಿದ್ದಾರೆ.

    ಕನ್ನಡದ ‘ಪೊರ್ಕಿ’ (Porki) ನಟಿ ಪ್ರಣಿತಾ ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ. ರೌಂಡ್ 2 ಪ್ಯಾಂಟ್‌ಗಳು ಇನ್ನೂ ಮುಂದೆ ಹೊಂದಿಕೆಯಾಗುವುದಿಲ್ಲ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರೆಗ್ನೆನ್ಸಿ ವಿಷಯ ತಿಳಿಸಿದ್ದಾರೆ. ನಟಿಯ ಪೋಸ್ಟ್‌ಗೆ ಬಗೆ ಬಗೆ ಕಾಮೆಂಟ್‌ಗಳು ಹರಿದು ಬರುತ್ತಿವೆ. ಇದನ್ನೂ ಓದಿ:ಮತ್ತೆ ಐಟಂ ಹಾಡಿಗೆ ಸೊಂಟ ಬಳುಕಿಸಿದ ‘ಕಾವಾಲಯ್ಯ’ ನಟಿ ತಮನ್ನಾ

     

    View this post on Instagram

     

    A post shared by Pranita Subhash (@pranitha.insta)

    ಅಂದಹಾಗೆ, ಲಾಕ್‌ಡೌನ್ ವೇಳೆ 2021ರಲ್ಲಿ ಉದ್ಯಮಿ ನಿತಿನ್ ರಾಜು (Nithin) ಜೊತೆ ಪ್ರಣಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2022ರ ಜೂನ್‌ನಲ್ಲಿ ಹೆಣ್ಣು ಮಗವಿಗೆ ನಟಿ ಜನ್ಮ ನೀಡಿದ್ದಾರೆ. ಈಗ 2ನೇ ಮಗುವಿನ ನಿರೀಕ್ಷೆಯಲ್ಲಿ ನಟಿ.

    ಇನ್ನೂ ಕಡೆಯದಾಗಿ ಕನ್ನಡದ ‘ರಾಮನ ಅವತಾರ’ ಎಂಬ ಸಿನಿಮಾದಲ್ಲಿ ಪ್ರಣಿತಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

  • ತಾಯಂದಿರ ದಿನ ಆಚರಿಸಿದ ಸ್ಯಾಂಡಲ್‌ವುಡ್ ಸ್ಟಾರ್ಸ್

    ತಾಯಂದಿರ ದಿನ ಆಚರಿಸಿದ ಸ್ಯಾಂಡಲ್‌ವುಡ್ ಸ್ಟಾರ್ಸ್

    ಮ್ಮನ ಪ್ರೀತಿಗೆ ಎಂದೂ ಬೆಲೆ ಕಟ್ಟಲಾಗದು, ನಿರ್ಮಲ ಪ್ರೀತಿ ಹೊಂದಿರುವ ಅದ್ಭುತ ಶಕ್ತಿ ತಾಯಿ ಋಣವನ್ನು ತೀರಿಸಲು ಸಾಧ್ಯವಿಲ್ಲ. ಹೀಗಿರುವಾಗ ವಿಶ್ವ ಅಮ್ಮಂದಿರ ದಿನದಂದು (Mother’s Day) ವಿಶೇಷವಾಗಿ ಸೆಲೆಬ್ರಿಟಿಗಳು ಶುಭಕೋರಿದ್ದಾರೆ. ರಾಧಿಕಾ ಪಂಡಿತ್, ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕರು ವಿಶ್ ಮಾಡಿದ್ದಾರೆ.

     

    View this post on Instagram

     

    A post shared by DrShivaRajkumar (@nimmashivarajkumar)

    ಅಮ್ಮ ಒಂದು ಪದವೂ ಹೌದು. ಒಂದು ಶಕ್ತಿಯೂ ಹೌದು. ಇಡೀ ಪ್ರಪಂಚವು ಹೌದು ಎಂದು ಶಿವರಾಜ್‌ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತಾಯಿ ಜೊತೆಗಿನ ಫೋಟೋ ಹಂಚಿಕೊಂಡು ಶಿವಣ್ಣ ಸ್ಮರಿಸಿದ್ದಾರೆ.

    ಕೊಡಗಿನ ಸುಂದರಿ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ತಮ್ಮ ತಾಯಿ ಸುಮನ್ ಮಂದಣ್ಣಗೆ ಶುಭಕೋರಿದ್ದಾರೆ. ಇದನ್ನೂ ಓದಿ:‘ಕರಾವಳಿ’ಯಲ್ಲಿ ಡಿಫರೆಂಟ್ ಗೆಟಪ್‌ನಲ್ಲಿ ಕಾಣಿಸಿಕೊಂಡ ನಟ ಮಿತ್ರ

    ನಿಮ್ಮ ಅಮ್ಮನ ಅಗತ್ಯವನ್ನು ನಿಲ್ಲಿಸುವ ಸಮಯ ಎಂದಿಗೂ ಬರುವುದಿಲ್ಲ.ತಾಯಂದಿರು ಮಾಂತ್ರಿಕರು. ಎಲ್ಲಾ ಪ್ರೀತಿಯ ಅಮ್ಮಂದಿರಿಗೆ ತಾಯಂದಿರ ದಿನದ ಶುಭಾಶಯಗಳು ಎಂದು ರಾಧಿಕಾ ಪಂಡಿತ್ (Radhika Pandit) ವಿಶ್ ಮಾಡಿದ್ದಾರೆ.

    ಬಹುಭಾಷಾ ನಟಿ ಪ್ರಣಿತಾ ಸುಭಾಷ್ (Pranitha Subhash) ಅವರು ತಮ್ಮ ತಾಯಿ ಮತ್ತು ಅತ್ತೆಯ ಫೋಟೋ ಹಂಚಿಕೊಂಡಿದ್ದಾರೆ. ಅಮ್ಮಂದಿರ ದಿನಾಚರಣೆಗೆ ವಿಶೇಷವಾಗಿ ಶುಭಕೋರಿದ್ದಾರೆ.

    ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ (Pragathi Rishab Shetty) ಅವರ ಪೋಸ್ಟ್ ಕೂಡ ಗಮನ ಸೆಳೆದಿದೆ. ಪ್ರೀತಿಯಲ್ಲಿ ಆಗಸ, ತಾಳ್ಮೆಯಲ್ಲಿ ಭೂಮಿ, ಮಮಕಾರದಲ್ಲಿ ಕಡಲು ಎಂದರೆ ತಾಯಿ ಎಂದು ಬಣ್ಣಿಸಿ ಅಮ್ಮನಿಗೆ ಪ್ರೀತಿಯಿಂದ ವಿಶ್ ಮಾಡಿದ್ದಾರೆ.

  • ಪ್ರಣಿತಾ ನಟನೆಯ ಮಲಯಾಳಂ ಚಿತ್ರದ ಲುಕ್ ರಿವೀಲ್

    ಪ್ರಣಿತಾ ನಟನೆಯ ಮಲಯಾಳಂ ಚಿತ್ರದ ಲುಕ್ ರಿವೀಲ್

    ನ್ನಡದ ನಟಿ ಪ್ರಣಿತಾ ಸುಭಾಷ್ (Pranitha Subhash) ಅವರು ಮದುವೆಯಾಗಿ, ಮಗು ಆದ್ಮೇಲೆ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದಾರೆ. ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡಿರುವ ಪ್ರಣಿತಾ ಮಾಲಿವುಡ್‌ಗೆ ಲಗ್ಗೆ ಇಟ್ಟಿದ್ದಾರೆ. ಮಲಯಾಳಂನ ‘ಥಂಕಮಣಿ’ ಚಿತ್ರದ ಪ್ರಣಿತಾರ ಫಸ್ಟ್ ಲುಕ್ ರಿವೀಲ್ ಆಗಿದೆ.

    ಮಾಲಿವುಡ್ (Mollywood) ನಟ ದಿಲೀಪ್‌ಗೆ ನಾಯಕಿಯಾಗಿ ಪ್ರಣಿತಾ ನಟಿಸಿದ್ದಾರೆ. ಐಪಿಎಸ್ ಅಧಿಕಾರಿಯಾಗಿ ಅರ್ಪಿತಾ ಎಂಬ ಪಾತ್ರಕ್ಕೆ ನಟಿ ಬಣ್ಣ ಹಚ್ಚಿದ್ದಾರೆ. ನಿಜ ಕಥೆ ಆಧರಿಸಿ ‘ಥಂಕಮಣಿ’ ಎಂಬ ಸಿನಿಮಾ ಮಾಡಲಾಗಿದೆ. ಇದನ್ನೂ ಓದಿ:ಗಲ್ಫ್ ರಾಷ್ಟ್ರಗಳಲ್ಲಿ ‘ಆರ್ಟಿಕಲ್ 370’ ಸಿನಿಮಾ ಬ್ಯಾನ್

    ಈ ಚಿತ್ರಕ್ಕೆ ರತೀಶ್ ನಿರ್ದೇಶನ ಮಾಡಿದ್ದಾರೆ. ಪ್ರಣಿತಾ ಜೊತೆ ನೀತಾ ಪಿಳ್ಳೈ ಕೂಡ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಜಾನ್ ವಿಜಯ್, ಸಂಪತ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

     

    View this post on Instagram

     

    A post shared by Pranita Subhash (@pranitha.insta)

    ದಿಲೀಪ್‌ಗೆ (Dileep) ಜೋಡಿಯಾಗಿ ಮೊದಲ ಬಾರಿಗೆ ಮಲಯಾಳಂ ಎಂಟ್ರಿ ಕೊಡ್ತಿರೋ ಪ್ರಣಿತಾ ಈ ಚಿತ್ರದ ಹೆಚ್ಚಿನ ನಿರೀಕ್ಷೆತಯಿದೆ. ಮಗು ಆದ್ಮೇಲೆ ಈ ಸಿನಿಮಾ ಮಾಡುತ್ತಿರುವ ಕಾರಣ, ಪ್ರಣಿತಾ ಪಾಲಿಗೆ ಇದು ವಿಶೇಷವಾದ ಪ್ರಾಜೆಕ್ಟ್ ಆಗಿದೆ. ಚಿತ್ರದಲ್ಲಿನ ಪ್ರಣಿತಾ ಲುಕ್‌ಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

    ಮಲಯಾಳಂ ಸಿನಿಮಾ ಜೊತೆ ತೆಲುಗಿನ ಶೋವೊಂದಕ್ಕೆ ಜಡ್ಜ್ ಆಗಿ ಪ್ರಣಿತಾ ಸಾಥ್ ನೀಡಿದ್ದಾರೆ. ಕನ್ನಡದ ‘ರಾಮನ ಅವತಾರ’ ಚಿತ್ರ ಸದ್ಯದಲ್ಲೇ ರಿಲೀಸ್‌ ಆಗಲಿದೆ. ಇದರ ಜೊತೆ ಕನ್ನಡ ಸಿನಿಮಾಗಳ ಕಥೆಯನ್ನು ಕೂಡ ಕೇಳ್ತಿದ್ದಾರೆ. ಇದರ ಬಗ್ಗೆ ಸದ್ಯದಲ್ಲೇ ಅಪ್‌ಡೇಟ್‌ ಸಿಗಲಿದೆ.

  • Nagara Panchami: ನಾಗರ ಪಂಚಮಿ ಹಬ್ಬದ ಸಂಭ್ರಮದಲ್ಲಿ ಪ್ರಣೀತಾ ಸುಭಾಷ್

    Nagara Panchami: ನಾಗರ ಪಂಚಮಿ ಹಬ್ಬದ ಸಂಭ್ರಮದಲ್ಲಿ ಪ್ರಣೀತಾ ಸುಭಾಷ್

    ಜಿಲ್ಲೆಯ ವಿವಿಧ ಕಡೆಯಲ್ಲಿ ಇಂದು (ಆಗಸ್ಟ್ 21) ನಾಗರ ಪಂಚಮಿ ಹಬ್ಬವನ್ನ (Nagara Panchami) ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದೀಗ ಸ್ಯಾಂಡಲ್‌ವುಡ್ ನಟಿ ಪ್ರಣೀತಾ ಸುಭಾಷ್ (Pranitha Subhash) ಕೂಡ ನಾಗರಪಂಚಮಿ ಹಬ್ಬವನ್ನು ಆಚರಿಸಿದ್ದಾರೆ. ನಾಗದೇವರ ಆಚರಣೆಯ ಫೋಟೋಗಳನ್ನ ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ನಟಿ ಪ್ರಣೀತಾಗೆ ಹಿಂದೂ ಸಂಪ್ರದಾಯ ಮತ್ತು ಹಬ್ಬಗಳ ಬಗ್ಗೆ ವಿಶೇಷ ಒಲವಿದೆ. ಇದೀಗ ನಾಗರಪಂಚಮಿ ಹಬ್ಬವನ್ನ ಕುಟುಂಬದ ಜೊತೆ ಆಚರಿಸಿದ್ದಾರೆ. ನಾಗದೇವರಿಗೆ ವಿಶೇಷ ಪೂಜೆಯನ್ನ ಸಲ್ಲಿಸಿದ್ದಾರೆ. ಅತ್ತೆಯೊಂದಿಗೆ ಪ್ರಣೀತಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.

    ಮದುವೆಯಾದ ಮೇಲೆ ನಟಿ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಮಾಲಿವುಡ್ ಸಿನಿಮಾ ಮೂಲಕ ನಟಿ ಕಮ್ ಬ್ಯಾಕ್ ಆಗಿದ್ದಾರೆ. ನಟ ದಿಲೀಪ್‌ಗೆ ಪ್ರಣೀತಾ ನಾಯಕಿಯಾಗಿದ್ದಾರೆ. ತಮ್ಮ ಭಾಗದ ಚಿತ್ರೀಕರಣವನ್ನ ನಟಿ ಕೇರಳದಲ್ಲಿ ಮುಗಿಸಿಕೊಟ್ಟಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಸಿನಿಮಾ ತೆರೆಗೆ ಬರಲಿದೆ. ಇದನ್ನೂ ಓದಿ:ನ್ಯೂಯಾರ್ಕ್ ವೆಕೇಷನ್ ಮೂಡ್‌ನಲ್ಲಿದ್ದಾರೆ ಸಮಂತಾ

    ಲಾಕ್‌ಡೌನ್‌ನಲ್ಲಿ ಉದ್ಯಮಿ ನಿತಿನ್ ರಾಜು (Nithin Raju) ಜೊತೆ ಹಸೆಮಣೆ ಏರಿದ್ದ ಚೆಲುವೆ ಪ್ರಣಿತಾ ಈಗ ಮಗಳ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಸಿನಿಮಾ ಕೂಡ ಮಾಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿಟ್ಟೆಯಂತೆ ಮಿಂಚಿದ ಸಂತೂರ್‌ ಮಮ್ಮಿ ಪ್ರಣಿತಾ ಸುಭಾಷ್

    ಚಿಟ್ಟೆಯಂತೆ ಮಿಂಚಿದ ಸಂತೂರ್‌ ಮಮ್ಮಿ ಪ್ರಣಿತಾ ಸುಭಾಷ್

    ನ್ನಡತಿ, ಬಹುಭಾಷಾ ನಟಿ ಪ್ರಣಿತಾ ಸುಭಾಷ್ (Pranitha Subhash) ಅವರು ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಸದ್ದು ಮಾಡುತ್ತಲೇ ಇರುತ್ತಾರೆ. ಸದ್ಯ ಹಸಿರು ಬಣ್ಣದ ಗೌನ್ ಧರಿಸಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಚಿಟ್ಟೆಯಂತೆ ಪೊರ್ಕಿ ನಟಿ ಕಂಗೊಳಿಸಿದ್ದಾರೆ. ಇದನ್ನೂ ಓದಿ:‘ಭೀಮ’ನಾದ ಗೋಪಿಚಂದ್: ಎ.ಹರ್ಷ ನಿರ್ದೇಶನದ ತೆಲುಗು ಚಿತ್ರ

    ಎಂ.ಡಿ ಶ್ರೀಧರ್ ನಿರ್ದೇಶನದ ‘ಪೊರ್ಕಿ’ (Porki) ಸಿನಿಮಾ ಮೂಲಕ ಪ್ರಣಿತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ಬ್ಯಾಕ್ ಟು ಬ್ಯಾಕ್ ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ಸೈ ಎನಿಸಿಕೊಂಡರು. ಇದಾದ ಬಳಿಕ ಟಾಲಿವುಡ್‌ಗೆ ಹಾರಿದ್ರು. ತೆಲುಗು ಸೇರಿದಂತೆ ಹಿಂದಿ ಚಿತ್ರದಲ್ಲೂ ನಟಿಸಿ ಬಂದರು. ಎಂದೂ ಕನ್ನಡದ ಮೇಲೆ ಕನ್ನಡ ಸಿನಿಮಾದ ಮೇಲಿನ ಪ್ರೀತಿ ಪ್ರಣಿತಾಗೆ ಕಮ್ಮಿಯಾಗಿಲ್ಲ.

    ಸೌತ್‌ನಲ್ಲಿ ಮಹೇಶ್ ಬಾಬು, ಸೂರ್ಯ, ಕಾರ್ತಿ, ಸಿದ್ಧಾರ್ಥ್, ಜ್ಯೂ.ಎನ್‌ಟಿಆರ್ ಜೊತೆ ಪ್ರಣಿತಾ ತೆರೆಹಂಚಿಕೊಂಡರು. ಬಾಲಿವುಡ್‌ನಲ್ಲಿ ಶಿಲ್ಪಾ ಶೆಟ್ಟಿ ಜೊತೆ ಪ್ರಣಿತಾ ಮುಖ್ಯಭೂಮಿಕೆಯಲ್ಲಿ ನಟಿಸಿದರು. ಮದುವೆಯ ಬಳಿಕ ನಟನೆಗೆ ವಿರಾಮ ಹೇಳಿದ್ದ ನಟಿ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ.

    2021ರಲ್ಲಿ ಉದ್ಯಮಿ ನಿತಿನ್(Nithin)  ಜೊತೆ ಪ್ರಣಿತಾ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು. ಕಳೆದ ವರ್ಷ ಮುದ್ದಾದ ಹೆಣ್ಣು ಮಗುವಿಗೆ ನಟಿ ಜನ್ಮ ನೀಡಿದ್ರು. ಪುತ್ರಿ ಅರ್ನಾ (Arna) ಪಾಲನೆಯಲ್ಲಿ ಬ್ಯುಸಿಯಾದರು. ನಟನೆಯಿಂದ ಅಂತರ ಕಾಯ್ದುಕೊಂಡರು. ಈಗ ಸಿನಿಮಾ- ವೈಯಕ್ತಿಕ ಜೀವನ ಎರಡನ್ನ ನಟಿ ಬ್ಯಾಲೆನ್ಸ್ ಮಾಡ್ತಿದ್ದಾರೆ.

    ಮಲಯಾಳಂ ಖ್ಯಾತ ನಟ ದಿಲೀಪ್‌ಗೆ (Dileep) ನಾಯಕಿಯಾಗಿ ಪ್ರಣಿತಾ ಮಾಲಿವುಡ್‌ಗೆ (Mollywood) ಲಗ್ಗೆ ಇಟ್ಟಿದ್ದಾರೆ. ದಿಲೀಪ್‌ಗೆ ಪ್ರಣಿತಾ- ತಮನ್ನಾ ಭಾಟಿಯಾ ಜೊತೆಯಾಗಿದ್ದಾರೆ. ಈಗಾಗಲೇ ಕೇರಳದಲ್ಲಿ ಪ್ರಣಿತಾ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಈ ವರ್ಷ ಕೊನೆಯಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಇನ್ನೂ ಮದುವೆಯಾಗಿ ಮಕ್ಕಳಾದ್ಮೇಲೆ ಸಿನಿಮಾರಂಗಲ್ಲಿ ನಾಯಕಿಯರು ಆಕ್ಟೀವ್ ಆಗೋದು ತುಂಬಾ ಕಮ್ಮಿ. ಆದರೆ ಪ್ರಣಿತಾ ಮಗುವಾದ್ಮೇಲೆ ಮತ್ತಷ್ಟು ಬೋಲ್ಡ್ & ಹಾಟ್ ಆಗಿದ್ದಾರೆ. ಫಿಟ್‌ನೆಸ್ ಕಡೆ ಗ್ಲಾಮರ್ ಕಡೆ ಮತ್ತಷ್ಟು ಗಮನ ವಹಿಸುತ್ತಿದ್ದಾರೆ. ಮಗಳ ಆರೈಕೆ, ಸಿನಿಮಾ ಕೆಲಸ ನಡುವೆ ನಟಿ ಪ್ರಣಿತಾ ನ್ಯೂ ಫೋಟೋಶೂಟ್ ಮಾಡಿಸಿದ್ದಾರೆ. ಹಸಿರು ಬಣ್ಣದ ಡ್ರೆಸ್ ಧರಿಸಿ, ಚಿಟ್ಟೆಯಂತೆ ಮಿಂಚಿದ್ದಾರೆ. ಈ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ.

  • ಪ್ರಣಿತಾ ಹಾಟ್‌ನೆಸ್‌ಗೆ ಸಂತೂರ್ ಮಮ್ಮಿ ಎಂದ ನೆಟ್ಟಿಗರು

    ಪ್ರಣಿತಾ ಹಾಟ್‌ನೆಸ್‌ಗೆ ಸಂತೂರ್ ಮಮ್ಮಿ ಎಂದ ನೆಟ್ಟಿಗರು

    ‘ಪೊರ್ಕಿ’ (Porki) ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ (Sandalwood) ಲಗ್ಗೆಯಿಟ್ಟ ನಟಿ ಪ್ರಣಿತಾ, ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೆ ನಯಾ ಫೋಟೋಶೂಟ್‌ನಿಂದ ಪ್ರಣಿತಾ ಗಮನ ಸೆಳೆದಿದ್ದಾರೆ.

    ಬಹುಭಾಷಾ ನಟಿ ಪ್ರಣಿತಾ (Pranitha Subhash) ಅವರು ಲಾಕ್‌ಡೌನ್‌ನಲ್ಲಿ ಉದ್ಯಮಿ ನಿತಿನ್ ಜೊತೆ ಹಸೆಮಣೆ ಏರಿದ್ದರು. ಪೀಕ್‌ನಲ್ಲಿರುವಾಗಲೇ ಬಹುಕಾಲದ ಗೆಳೆಯನ ಜೊತೆ ಪ್ರಣಿತಾ ಮದುವೆಯಾಯಿತು. ಈಗ ಮುದ್ದಾದ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ.

     

    View this post on Instagram

     

    A post shared by Pranita Subhash (@pranitha.insta)

    ಕಪ್ಪು ಬಣ್ಣದ ಸೀರೆಯುಟ್ಟು ಸಖತ್ ಹಾಟ್ ಆಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಒಂದು ಮಗುವಿನ ತಾಯಿಯಾಗಿರುವ ಪ್ರಣಿತಾ ಹಾಟ್‌ನೆಸ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬ್ಲ್ಯಾಕ್ ಕಲರ್ ಸೀರೆಯಲ್ಲಿ ನಟಿ ಮಿರ ಮಿರ ಅಂತಾ ಮಿಂಚಿದ್ದಾರೆ. ಪ್ರಣಿತಾ ಹೊಸ ಫೋಟೋಸ್‌ಗೆ ಸಂತೂರ್ ಮಮ್ಮಿ (Santoor Mummy) ಅಂತಾ ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ.‌ ಇದನ್ನೂ ಓದಿ:ಹುಟ್ಟುಹಬ್ಬದಂದು ನಟಿ ಭಾವನಾ ಮೆನನ್ 86ನೇ ಸಿನಿಮಾ ಅನೌನ್ಸ್

    ಮಲಯಾಳಂ ನಟ ದಿಲೀಪ್ (Dileep) ನಾಯಕಿಯಾಗಿ ಪ್ರಣಿತಾ ನಟಿಸುತ್ತಿದ್ದಾರೆ. ಮಾಲಿವುಡ್ (Mollywood) ಚಿತ್ರದ ಮೂಲಕ ನಟಿ ಕಮ್‌ಬ್ಯಾಕ್ ಆಗಿದ್ದಾರೆ. ಎಂದೂ ಕಾಣಿಸಿಕೊಂಡಿರದ ಭಿನ್ನ ಪಾತ್ರದಲ್ಲಿ ನಟಿ ಪ್ರಣಿತಾ ಅಭಿನಯಿಸಿದ್ದಾರೆ.

  • ಮಗುವಾದ ಬಳಿಕ ಮಾಲಿವುಡ್‌ನತ್ತ ಪ್ರಣಿತಾ ಸುಭಾಷ್

    ಮಗುವಾದ ಬಳಿಕ ಮಾಲಿವುಡ್‌ನತ್ತ ಪ್ರಣಿತಾ ಸುಭಾಷ್

    ಹುಭಾಷಾ ನಟಿ ಪ್ರಣಿತಾ ಸುಭಾಷ್ (Pranitha Subhash) ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗಿದ್ದಾರೆ. ಮದುವೆ, ಸಂಸಾರ, ತಾಯ್ತನ ಅಂತಾ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಿದ್ದ ನಟಿ ಮತ್ತೆ ಚಿತ್ರರಂಗದತ್ತ (Films) ಮುಖ ಮಾಡಿದ್ದಾರೆ.

    ಮುದ್ದು ಮಗಳು ಆರ್ನಾ ಆರೈಕೆಯಲ್ಲಿ ಬ್ಯುಸಿಯಿದ್ದ ನಟಿ ಪ್ರಣಿತಾ ಸದ್ಯ ಮಲಯಾಳಂ (Malyalam) ಚಿತ್ರರಂಗದತ್ತ ನಟಿ ಆಕ್ಟೀವ್ ಆಗಿದ್ದಾರೆ. ಮಾಲಿವುಡ್ (Mollywood) ಸೂಪರ್ ಸ್ಟಾರ್ ದಿಲೀಪ್‌ಗೆ (Dilip)  ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ `ಪೊರ್ಕಿ’ ಚಿತ್ರದ ನಟಿ ಕೂಡ ಮೇಜರ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಸಾನಿಯಾ ಅಯ್ಯರ್ ಕೈ ಹಿಡಿದು ಎಳೆದು, ಧರ್ಮದೇಟು ತಿಂದ ಅಭಿಮಾನಿ

    ಮಾಲಿವುಡ್ ನಟ ದಿಲೀಪ್ ಅವರ ಮುಂದಿನ ಚಿತ್ರ ನೈಜ ಘಟನೆಗಳನ್ನು ಆಧರಿಸಿ ನಿರ್ದೇಶನ ಮಾಡಲಾಗುತ್ತಿದೆ. ಸದ್ಯಕ್ಕೆ ಸಿನಿಮಾಗೆ `ಡಿ 148′ ಎಂದು ಹೆಸರಿಡಲಾಗಿದೆ. `ಡಿ 148′ ಸಿನಿಮಾವನ್ನು ರತೀಶ್ ರಘುನಂದನ್ (Ratheesh Raghunandan) ಅವರು ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಣಿತಾ, ನೀತಾ ಪಿಳ್ಳೈ ಸೇರಿದಂತೆ ಇತರ ಪ್ರಮುಖ ಪಾತ್ರಗಳು ಇರಲಿವೆ.

     

    View this post on Instagram

     

    A post shared by Pranita Subhash (@pranitha.insta)

    ಕನ್ನಡ, ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಈಗಾಗಲೇ ನಟಿಸಿರುವ ಪ್ರಣಿತಾ, ಇದೀಗ ಮೊದಲ ಬಾರಿಗೆ ಮಲಯಾಳಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಗುವಾದ ಬಳಿಕ ಮತ್ತೆ ಸಿನಿಮಾ ಮಾಡಲು ನಟಿ ರೆಡಿಯಾಗಿದ್ದಾರೆ. ಎಂದೂ ಮಾಡಿರದ ಪಾತ್ರದಲ್ಲಿ ಪ್ರಣಿತಾ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಣಿತಾ ಅವರ ಪಾತ್ರದ ಶೂಟಿಂಗ್ 2 ವಾರಗಳ ಕಾಲ ಕೇರಳದಲ್ಲಿ ನಡೆಯಲಿದೆ. ಈಗಾಗಲೇ `ಡಿ 148′ ಶೂಟಿಂಗ್ ಶುರುವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k