Tag: ಪ್ರಣಾವಾನಂದ ಸ್ವಾಮೀಜಿ

  • ಬಿಲ್ಲವರಿಗೆ ಮೀಸಲಾತಿ ನೀಡಿ – ಬೃಹತ್ ಹಕ್ಕೋತ್ತಾಯ

    ಬಿಲ್ಲವರಿಗೆ ಮೀಸಲಾತಿ ನೀಡಿ – ಬೃಹತ್ ಹಕ್ಕೋತ್ತಾಯ

    ಮಂಗಳೂರು: ರಾಜ್ಯದಲ್ಲಿ ಈಗ ಮೀಸಲಾತಿ ವಿಚಾರವೇ ಹೆಚ್ಚು ಚರ್ಚೆಯಲ್ಲಿದೆ. ಇದೀಗ ಈಡಿಗ-ಬಿಲ್ಲವ (Billava) ಸಮುದಾಯವನ್ನು ಪ್ರವರ್ಗ 1ರಡಿ ಸೇರ್ಪಡೆಗೆ ಹಕ್ಕೊತ್ತಾಯ ಕೇಳಿ ಬಂದಿದೆ. ಕರಾವಳಿಯಲ್ಲಿ ನಿರ್ಣಾಯಕ ಮತದಾರರಾಗಿರುವ ಬಿಲ್ಲವ ಸಮುದಾಯ ಈ ವಿಚಾರದಲ್ಲಿ ಚುನಾವಣೆ ಹೊತ್ತಲ್ಲೇ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಈ ನಡುವೆ ಸಮುದಾಯದ ಸ್ವಾಮೀಜಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಬೃಹತ್ ಪಾದಯಾತ್ರೆಗೂ (Padayatra) ತಯಾರಿ ಮಾಡಿಕೊಂಡಿದ್ದಾರೆ.

    ಕರಾವಳಿಯಲ್ಲಿ (Karavli) ಮೀಸಲಾತಿ ಹೆಸರಲ್ಲಿ ಬಿಲ್ಲವರು ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಚುನಾವಣೆ ಹೊತ್ತಲ್ಲೇ ಬಿಜೆಪಿ (BJP) ಸರ್ಕಾರದ ವಿರುದ್ಧ ತೊಡೆ ತಟ್ಟಲು ಈಡಿಗ-ಬಿಲ್ಲವ ಸಮುದಾಯ ಸಜ್ಜಾಗಿದ್ದು ಜನವರಿ ಅಂತ್ಯದಲ್ಲಿ ಬೃಹತ್ ಸಮಾವೇಶವನ್ನು ನಡೆಸುವುದಕ್ಕೆ ನಿರ್ಧರಿಸಿದೆ. ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ಸಭೆ ಸೇರಿದ ಬಿಲ್ಲವ ಮುಖಂಡರು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ದಕ್ಷಿಣಕನ್ನಡ, ಉಡುಪಿ ಜಿಲ್ಲೆಯಲ್ಲಿ ನಿರ್ಣಾಯಕವಾಗಿರೋ ಬಿಲ್ಲವ ವೋಟ್ (Vote) ಬ್ಯಾಂಕ್ ಹಲವು ಬೇಡಿಕೆಗಳನ್ನು ಮುಂದಿಟ್ಟು ಈ ಸಮಾವೇಶ ನಡೆಸುತ್ತಿದೆ. ರಾಜ್ಯದಲ್ಲಿ ಸುಮಾರು 75 ಲಕ್ಷದಷ್ಟಿರೋ ಈಡಿಗ-ಬಿಲ್ಲವ ಸಮುದಾಯ ಸುಮಾರು 26 ಪಂಗಡಗಳನ್ನು ಹೊಂದಿದೆ. ಸದ್ಯ ಪ್ರವರ್ಗ 2ಎ (2A) ಅಡಿ ಸೇರಿರೋ ಬಿಲ್ಲವ-ಈಡಿಗ ಸಮುದಾಯ ಪ್ರವರ್ಗ 1ರಡಿ ಸೇರ್ಪಡೆಗೆ ಹಕ್ಕೊತ್ತಾಯ ಮಾಡಿದೆ. ಇದರ ಜೊತೆ ನಾರಾಯಣ ಗುರು ಅಭಿವೃದ್ದಿ ನಿಗಮ ಸ್ಥಾಪಿಸಬೇಕು, ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬ ಒತ್ತಾಯವು ಇದೆ. ಇದನ್ನೂ ಓದಿ: ಜಿಲ್ಲಾಸ್ಪತ್ರೆಯ ನಿರ್ಲಕ್ಷ್ಯ – ಪ್ರಸವದ ವೇಳೆ ಬಾಣಂತಿ, ಅವಳಿ ಶಿಶುಗಳು ಸಾವು

    ಈ ನಡುವೆ ಈ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ ಕಲಬುರಗಿಯ ಪ್ರಣಾವಾನಂದ ಸ್ವಾಮೀಜಿ (Pranavananda Swamiji) ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಮಂಗಳೂರಿನ ಕುದ್ರೋಳಿ ದೇವಸ್ಥಾನದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ವರೆಗೆ ಸುಮಾರು 658 ಕಿ.ಮೀ ದೂರದ ಪಾದಯಾತ್ರೆಯನ್ನು ನಡೆಸಿ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ನಡೆಸಲಿದ್ದಾರೆ. ಜನವರಿ 6 ರಂದು ಈ ಪಾದಯಾತ್ರೆ ಆರಂಭವಾಗಲಿದ್ದು, ಒಟ್ಟು 35 ದಿನಗಳ ಕಾಲ ಈ ಪಾದಯಾತ್ರೆ ಸಾಗಲಿದೆ. ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ. 500 ಕೋಟಿ ರೂ. ಅನುದಾನ ಮೀಸಲಿರಿಸಿ ನಾರಾಯಣ ಗುರು ಅಭಿವೃದ್ದಿ ನಿಗಮ ಸ್ಥಾಪಿಸಬೇಕು. ಈಡಿಗ-ಬಿಲ್ಲವ ಸಮುದಾಯವನ್ನು ಪ್ರವರ್ಗ 1 ರಡಿ ಸೇರ್ಪಡೆಗೊಳಿಸಬೇಕು. ಚುನಾವಣೆ ಹೊತ್ತಲ್ಲಿ ಟಿಕೆಟ್ ನೀಡುವಲ್ಲಿ ಬಿಲ್ಲವರ ಕಡೆಗಣನೆ ಮಾಡುತಿದ್ದು ಹೀಗಾಗಿ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂಬುದು ಈ ಪಾದಯಾತ್ರೆಯ ಉದ್ದೇಶವಾಗಿದೆ ಎಂದು ಸ್ವಾಮೀಜಿ ಹೇಳಿದ್ದಾರೆ. ಇದನ್ನೂ ಓದಿ: ನನ್ನ ಮಗನಿಗೆ ಮಚ್ಚಿನಿಂದ ತಲೆ, ಬೆನ್ನಿಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ: ರೇಣುಕಾಚಾರ್ಯ

    ನಾರಾಯಣ ಗುರು ಟ್ಯಾಬ್ಲೋ, ಪಠ್ಯ ಪುಸ್ತಕ ವಿವಾದದ ಬಳಿಕ ಕರಾವಳಿಯ ಪ್ರಬಲ ಬಿಲ್ಲವ ಸಮುದಾಯದ ಆಕ್ರೋಶಕ್ಕೆ ಬಿಜೆಪಿ ತುತ್ತಾಗಿತ್ತು. ಇದೀಗ ಕಳೆದ ಆರು ವರ್ಷಗಳ ಮಹಾ ಬೇಡಿಕೆಗೆ ಚುನಾವಣೆ ಹೊತ್ತಲ್ಲೇ ಮರುಜೀವ ಬಂದಿದ್ದು, ಬಿಜೆಪಿ ಇದನ್ನು ಹೇಗೆ ನಿಭಾಯಿಸುತ್ತೆ ಎಂದು ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • SC-ST ಮೀಸಲಾತಿ ಹೆಚ್ಚಳ ಗಿಮಿಕ್ – ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಕ್ಕಲ್ಲ: ಪ್ರಣಾವಾನಂದ ಸ್ವಾಮೀಜಿ

    SC-ST ಮೀಸಲಾತಿ ಹೆಚ್ಚಳ ಗಿಮಿಕ್ – ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಕ್ಕಲ್ಲ: ಪ್ರಣಾವಾನಂದ ಸ್ವಾಮೀಜಿ

    ನವದೆಹಲಿ: SC – ST ಸಮುದಾಯಗಳಿಗೆ ಮೀಸಲಾತಿ (Reservation) ಹೆಚ್ಚಿಸುವ ಸರ್ಕಾರದ ನಿರ್ಧಾರ ಕೇವಲ ರಾಜಕೀಯ ಗಿಮಿಕ್ ಎಂದು ಪ್ರಣಾವಾನಂದ ಸ್ವಾಮೀಜಿ (Pranavananda Swamiji) ಹೇಳಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ಕಾರದ ಆದೇಶ ಸುಪ್ರೀಂಕೋರ್ಟ್ (Supreme Court) ಆದೇಶವನ್ನು ಉಲ್ಲಂಘಿಸುತ್ತದೆ ಎಂದು ಹೇಳಿದರು.

    ಎಸ್ಸಿ – ಎಸ್ಟಿ ಮೀಸಲಾತಿ ಹೆಚ್ಚಳ ಸರ್ಕಾರದ ನಿರ್ಧಾರ, ಅದು ಏನೇ ಇರಲಿ ನಾವು ಅದನ್ನು ಸ್ವಾಗತಿಸುತ್ತೇವೆ. ಆದರೆ ಈ ಸಮಯದಲ್ಲಿ ಈಡೀಗ, ಬಿಲ್ಲವ ಸಮುದಾಯದ ಬಗ್ಗೆಯೂ ಸರ್ಕಾರ ಯೋಚನೆ ಮಾಡಬೇಕು. ಸರ್ಕಾರ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

    ಸಿಎಂ ಎಸ್ಟಿ ಎಸ್ಸಿಗೆ ಹೊಸ ಮೀಸಲಾತಿ ಘೋಷಣೆ ಮಾಡಿದ್ದಾರೆ. ಸಂಪುಟದಲ್ಲಿ ಅನುಮತಿಯೂ ಸಿಕ್ಕಿದೆ ಹೊಸ 7% ಮೀಸಲಾತಿ ಎಲ್ಲಿಂದ ತರುತ್ತೀರಿ. ಈ ನಿರ್ಧಾರ ಸುಪ್ರೀಂಕೋರ್ಟ್ ಆದೇಶದಂತೆ 50% ಕ್ಯಾಪ್ ಮೀರಿದೆ 2Aಯಿಂದ ಮ್ಯಾನೇಜ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಇದು ಸಾಧ್ಯವಿಲ್ಲ. ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಲಿದ್ದು, ಇದು ಚುನಾವಣೆಗಾಗಿ (Election) ಕೈಗೊಂಡ ನಿರ್ಧಾರವಾಗಿದೆ ಎಂದರು.

    ಈಡೀಗ ಸಮುದಾಯ ಮೀಸಲಾತಿಗಾಗಿ ಹೋರಾಟ ಮಾಡುತ್ತಿದೆ. ಪ್ರವರ್ಗ 1 ಸೇರಿಸಲು ಮನವಿ ಮಾಡಿದೆ. ಕುಲಕಸಬು ಮುಂದುವರಿಸಲು ಅನುಮತಿ ಕೊಡಲು ಕೇಳಿದೆ. ನಾರಾಯಣ ಗುರು ನಿಗಮ ಮಂಡಳಿ ಮಾಡಲೂ ಮನವಿ ಮಾಡಿದ್ದೇವು. ಈವರೆಗೂ ಸರ್ಕಾರ ಯಾವ ಕೆಲಸ ಮಾಡಿಲ್ಲ. ಈ ಮೂಲಕ ಸರ್ಕಾರ ನಮಗೆ ಅಪಮಾನ ಮಾಡುತ್ತಿದೆ ಎಂದು ಕಿಡಿಕಾರಿದರು.

    ಮೊನ್ನೆ ವಾಲ್ಮೀಕಿ ಜಯಂತಿ ಸರ್ಕಾರ ಮಾಡಿತು. ಯಾಕೆ ನಾರಾಯಣ ಗುರುಗಳ ಜಯಂತಿ ಮಾಡಿಲ್ಲ, ಸಚಿವ ಸುನೀಲ್ ಕುಮಾರ್, ಕೋಟಾ ಶ್ರೀನಿವಾಸ್ ಪೂಜಾರಿ ಇದಕ್ಕೆ ನೇರ ಹೊಣೆ, ಡಿ.ಕೆ ಶಿವಕುಮಾರ್ ಅವರು ಮಂಗಳೂರಿನಲ್ಲಿ ಮಾಡಿದರು. ಆದರೆ ಆ ಕಾರ್ಯಕ್ರಮಕ್ಕೆ ಡಿಸಿ ಕೂಡಾ ಬರಲಿಲ್ಲ. ನಮ್ಮ ಸಮುದಾಯದ 7 ಜನ ಶಾಸಕರು ಇದ್ದಾರೆ. ಆದರೆ ಯಾರು ಕೂಡಾ ಈ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಹೇಳಿದರು.

    ಸಿಂಗದೂರು ಚೌಡೇಶ್ವರಿ ದೇವಸ್ಥಾನದ ಮೇಲೂ ಸಾಕಷ್ಟು ಒತ್ತಡ ಹೇರಲಾಗುತ್ತಿದೆ. ಇದನ್ನು ಸಮುದಾಯ ಗಮನಿಸುತ್ತಿದೆ. ನಮ್ಮನ್ನು ಪ್ರವರ್ಗ 1 ಸೇರಬೇಕು, ಮಂಡಳಿ ಘೋಷಣೆ ಮಾಡಬೇಕು ಇಲ್ಲವಾದರೇ ಜ. 6ರಿಂದ ಕುದ್ರೊಳಿ ಗೋಕರ್ಣದಿಂದ ಬೆಂಗಳೂರುವರೆಗೂ ಪಾದಯಾತ್ರೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

    ಫೆ. 15ರಂದು ಬೃಹತ್ ಸಮಾವೇಶ ಮಾಡಲಿದ್ದೇವೆ. ಬಳಿಕ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದೇವೆ. ನಮ್ಮನ್ನು ರಾಜಕೀಯವಾಗಿ ಬಳಸಿಕೊಂಡು ಕೈಬಿಡಲಾಗುತ್ತದೆ. ಸಿಎಂ ಬೊಮ್ಮಾಯಿ, ಬಿಎಸ್‍ವೈಗೂ ಮನವಿ ಮಾಡಿದೆ. ಸಮುದಾಯದ ಏಳು ಜನ ಶಾಸಕರಿಗೂ ಎಚ್ಚರಿಕೆ ನೀಡುತ್ತಿದ್ದೇನೆ ಎಂದರು.

    ದಕ್ಷಿಣ ಕನ್ನಡ (Dakshina Kannada) ಸೇರಿ ಹಲವು ಕಡೆ ನಮ್ಮ ಸಮುದಾಯ ಹೆಚ್ಚಿದೆ. ರಾಜಕೀಯ ಪ್ರಾತಿನಿಧ್ಯ ಕೊಡದಿದ್ದರೇ ತಕ್ಕ ಪಾಠ ಕಲಿಸುತ್ತೇವೆ ಕಾಂಗ್ರೆಸ್ ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದೆ. ಇನ್ನು ಕೆಲವು ದಿನಗಳಲ್ಲಿ ಇದು ಪ್ರಣಾಳಿಕೆ ಸೇರಲಿದೆ. ಒಂದು ವೇಳೆ ಬಿಜೆಪಿ ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೇ ನಾವು ಕಾಂಗ್ರೆಸ್ (Congress) ಜೊತೆಗೆ ರಾಜಕೀಯವಾಗಿ ಕೈಜೋಡಿಸಬೇಕಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಹೆಚ್‍ಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

    Congress

    ಹಿಂದುಳಿದ ವರ್ಗಗಳಿಗೆ ಬಿಜೆಪಿ (BJP) ಸರ್ಕಾರದಲ್ಲಿ ನ್ಯಾಯ ಸಿಕ್ಕಲ್ಲ, ಚುನಾವಣೆಗೆ ಮಾತ್ರ ಹಿಂದುಳಿದ ವರ್ಗಗಳನ್ನು ಬಳಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಇಡೀ ಮೀಸಲಾತಿ ವ್ಯವಸ್ಥೆ ಪರಿಷ್ಕರಣೆಯಾಗಬೇಕು. ಎಲ್ಲ ಸಮುದಾಯ ಮುಖಂಡರ ಜೊತೆ ಮಾತನಾಡಿಕೊಂಡು ನಿರ್ಧಾರ ಮಾಡಬೇಕು. ಎಲ್ಲರಿಗೂ ನ್ಯಾಯ ಸಿಗುವ ರೀತಿಯಲ್ಲಿ ಬದಲಾವಣೆಯಾಗಬೇಕು. ಈ ಬಗ್ಗೆ ದೆಹಲಿಯಲ್ಲಿ ಕೆಲವು ನಾಯಕರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆಯೂ ಮಾಡಲಿದ್ದೇನೆ ಎಂದರು. ಇದನ್ನೂ ಓದಿ: ಸರ್ಕಾರದಿಂದಲೇ ಆ್ಯಪ್ ಮಾಡಿ ಆಟೋ ಸೇವೆಗೆ ಅವಕಾಶ: ಶ್ರೀರಾಮುಲು

    Live Tv
    [brid partner=56869869 player=32851 video=960834 autoplay=true]