Tag: ಪ್ರಣಬ್ ಮೊಹಂತಿ

  • ಧರ್ಮಸ್ಥಳ ಕೇಸ್‌| ದಾರಿ ಬಿಡಿ ಮುಂದಕ್ಕೆ ಹೋಗಬೇಕು: ಪ್ರಣಬ್‌ ಮೊಹಂತಿ

    ಧರ್ಮಸ್ಥಳ ಕೇಸ್‌| ದಾರಿ ಬಿಡಿ ಮುಂದಕ್ಕೆ ಹೋಗಬೇಕು: ಪ್ರಣಬ್‌ ಮೊಹಂತಿ

    ಬೆಂಗಳೂರು: ದಾರಿ ಬಿಡಿ ನಾನು ಮುಂದಕ್ಕೆ ಹೋಗಬೇಕು ಎಂದಷ್ಟೇ ಹೇಳಿ ಯಾವುದೇ ಪ್ರತಿಕ್ರಿಯೆ ನೀಡದೇ ಐಪಿಎಸ್‌ ಅಧಿಕಾರಿ ಪ್ರಣಬ್ ಮೊಹಂತಿ (Pranab Mohanty) ತೆರಳಿದರು.

    ಇಂದು ವಿಧಾನಸೌಧದಲ್ಲಿ ಮಧ್ಯಾಹ್ನ 12 ಗಂಟೆಗೆ ಗೃಹ ಸಚಿವ ಪರಮೇಶ್ವರ್‌ (Parameshwar) ನೇತೃತ್ವದಲ್ಲಿ ಫೇಕ್‌ ನ್ಯೂಸ್‌ (Fake News) ಮತ್ತು ಆನ್‌ಲೈನ್‌ ಬೆಟ್ಟಿಂಗ್‌ ವಿರುದ್ಧ ಕಾನೂನು ತರಲು ಮಹತ್ವದ ಸಭೆ ನಡೆಯಿತು.

    ಈ ಸಭೆಯಲ್ಲಿ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ, ಡಿಜಿಪಿ ಪ್ರಣಬ್ ಮೊಹಂತಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಮುರುಗನ್, ಶರತ್ ಚಂದ್ರ ಸೇರಿದಂತೆ ಹಲವು ಮಂದಿ ಭಾಗಿಯಾಗಿದ್ದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್‌| ಪ್ರಣಬ್‌ ಮೊಹಂತಿ ಕೇಂದ್ರ ಸೇವೆಗೆ ಹೋಗ್ತಾರಾ – ಸ್ಪಷ್ಟನೆ ಕೊಟ್ಟ ಪರಮೇಶ್ವರ್‌

     

    ಸಭೆಯಲ್ಲಿ ಭಾಗಿಯಾದ ನಂತರ ಪ್ರಣಬ್ ಮೊಹಂತಿ ಕೊಠಡಿಯಿಂದ ಹೊರ ಬಂದರು. ಈ ವೇಳೆ ಮಾಧ್ಯಮಗಳು ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದವು. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ – ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಮ: ಪರಮೇಶ್ವರ್‌ ಎಚ್ಚರಿಕೆ

    ಈ ಪ್ರಶ್ನೆಗೆ ಉತ್ತರ ನೀಡದ ಮೊಹಂತಿ ಮುಂದಕ್ಕೆ ಸಾಗಿದರು. ಈ ವೇಳೆ ಮಾಧ್ಯಮಗಳು ಅವರನ್ನು ಹಿಂಬಾಲಿಸಿ ಪ್ರಶ್ನೆ ಕೇಳಿದಾಗ ಮೊಹಂತಿ ದಾರಿ ಬಿಡಿ ಎಂದಷ್ಟೇ ಹೇಳಿ ಪ್ರಕರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಮುಂದಕ್ಕೆ ಸಾಗಿದರು.

    ಸಭೆಗೆ ಮೊದಲು ಮಾತನಾಡಿದ್ದ ಪರಮೇಶ್ವರ್‌, ಪ್ರಣಬ್ ಮೊಹಂತಿ ಅವರು ರಾಜ್ಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕರಾಗಿದ್ದಾರೆ. ಫೇಕ್‌ ನ್ಯೂಸ್‌ ಮತ್ತು ಆನ್‌ಲೈನ್‌ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಕಾನೂನು ಮಾಡುವ ಸಂಬಂಧ ಇಂದು ಸಭೆ ನಡೆಯಲಿದೆ. ಈ ಸಭೆಯಲ್ಲಿ ಭಾಗಿಯಾಗಲು ಅವರು ವಿಧಾನಸೌಧಕ್ಕೆ ಬಂದಿದ್ದಾರೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ | ಪಾಯಿಂಟ್‌ ನಂ.1ರಲ್ಲಿ ಸಿಕ್ಕ ಡೆಬಿಟ್‌, ಪಾನ್ ಕಾರ್ಡ್‌ ‌ರಹಸ್ಯ ಬಯಲು; ವಾರಸುದಾರರು ಪತ್ತೆ

  • ಧರ್ಮಸ್ಥಳ ಕೇಸ್‌| ಪ್ರಣಬ್‌ ಮೊಹಂತಿ ಕೇಂದ್ರ ಸೇವೆಗೆ ಹೋಗ್ತಾರಾ – ಸ್ಪಷ್ಟನೆ ಕೊಟ್ಟ ಪರಮೇಶ್ವರ್‌

    ಧರ್ಮಸ್ಥಳ ಕೇಸ್‌| ಪ್ರಣಬ್‌ ಮೊಹಂತಿ ಕೇಂದ್ರ ಸೇವೆಗೆ ಹೋಗ್ತಾರಾ – ಸ್ಪಷ್ಟನೆ ಕೊಟ್ಟ ಪರಮೇಶ್ವರ್‌

    ಬೆಂಗಳೂರು: ಐಪಿಎಸ್‌ ಅಧಿಕಾರಿ ಪ್ರಣಬ್‌ ಮೊಹಂತಿ (Pranab Mohanty) ಕರ್ನಾಟಕದಲ್ಲಿ ಇದ್ದಾರೆ. ಅವರು ಕೇಂದ್ರಕ್ಕೆ ಹೋಗುವ ಮಾತು ಎಲ್ಲಿಂದ ಬಂತು ಎಂದು ಗೃಹ ಸಚಿವ ಪರಮೇಶ್ವರ್‌ (Parameshwar) ಪ್ರಶ್ನಿಸಿದ್ದಾರೆ.

    ಧರ್ಮಸ್ಥಳ ತಲೆ ಬುರುಡೆ ರಹಸ್ಯ ಪ್ರಕರಣಕ್ಕೆ (Dharmasthala Mass Burial Case) ಸಂಬಂಧಿಸಿದಂತೆ ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥರಾಗಿರುವ ಪ್ರಣಬ್‌ ಮೊಂಹತಿ ಅವರು ಕೇಂದ್ರ ಸೇವೆಗೆ ಹೋಗುತ್ತಾರಾ ಎಂದು ಮಾಧ್ಯಮಗಳು ಇಂದು ವಿಧಾನಸೌಧದಲ್ಲಿ ಪರಮೇಶ್ವರ್‌ ಅವರನ್ನು ಪ್ರಶ್ನಿಸಿದವು.  ಇದನ್ನೂ ಓದಿ: ಧರ್ಮಸ್ಥಳ ಕೇಸ್‌ – ಸುಳ್ಳು ಸುದ್ದಿ ಹರಡಿದವರ ವಿರುದ್ಧ ಕ್ರಮ: ಪರಮೇಶ್ವರ್‌ ಎಚ್ಚರಿಕೆ

     

    ಈ ಪ್ರಶ್ನೆಗೆ, ಮಾಧ್ಯಮಗಳಿಂದ ಈ ಗೊಂದಲ ಸೃಷ್ಟಿಯಾಗಿದೆ. ಕೇಂದ್ರ ಸೇವೆಗೆ ಅರ್ಹತೆ ಪಡೆದ ಡಿಜಿಪಿಗಳ ಅಧಿಕಾರಿಗಳ ಪಟ್ಟಿಯಲ್ಲಿ ಪ್ರಣಬ್‌ ಮೊಹಂತಿ ಅರ್ಹತೆ ಪಡೆದಿರುವುದು ಕರ್ನಾಟಕಕ್ಕೆ (Karnataka) ಹೆಮ್ಮೆ. ಕೇಂದ್ರ ಸರ್ಕಾರ ಕೇಂದ್ರ ಸೇವೆಗೆ ಅರ್ಹತೆ ಪಡೆಯುವ ಐಪಿಎಸ್‌ ಅಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಹಿರಿತನ, ತನಿಖಾ ಸಾಮರ್ಥ್ಯ, ಅನುಭವಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಈ ಪಟ್ಟಿಗೆ ಇಡೀ ದೇಶದ ಐಪಿಎಸ್‌ ಅಧಿಕಾರಿಗಳ ಹೆಸರನ್ನು ಸೇರಿಸಿ ಬಿಡುಗಡೆ ಮಾಡುತ್ತದೆ ಎಂದರು.

    ಈ ಪಟ್ಟಿಯಲ್ಲಿ ಬಂದಿದೆ ಎಂಬ ಕಾರಣಕ್ಕೆ ತಕ್ಷಣವೇ ಕೇಂದ್ರ ಸರ್ಕಾರ ಹುದ್ದೆ ನೀಡುವುದಿಲ್ಲ. ಕೇಂದ್ರ ಸರ್ಕಾರ ಪ್ರಣಬ್‌ ಮೊಹಂತಿ ಅವರನ್ನು ಕೇಂದ್ರ ಸೇವೆಗೆ ಕಳುಹಿಸಿಕೊಡಿ ಎಂದು ನಮಗೆ ಪತ್ರ ಬರೆಯಬೇಕು. ಅವರನ್ನು ಕಳುಹಿಸುವುದು ಬಿಡುವುದು ನಮ್ಮ ಆಯ್ಕೆ. ಪಟ್ಟಿಯಲ್ಲಿ ಹೆಸರು ಬಂದ ಮಾತ್ರಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ | ಪಾಯಿಂಟ್‌ ನಂ.1ರಲ್ಲಿ ಸಿಕ್ಕ ಡೆಬಿಟ್‌, ಪಾನ್ ಕಾರ್ಡ್‌ ‌ರಹಸ್ಯ ಬಯಲು; ವಾರಸುದಾರರು ಪತ್ತೆ

    ಪ್ರಣಬ್ ಮೊಹಾಂತಿ ಅವರು ರಾಜ್ಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕರಾಗಿದ್ದಾರೆ. ಫೇಕ್‌ ನ್ಯೂಸ್‌ ಮತ್ತು ಆನ್‌ಲೈನ್‌ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಕಾನೂನು ಮಾಡುವ ಸಂಬಂಧ ಇಂದು ಸಭೆ ನಡೆಯಲಿದೆ. ಈ ಸಭೆಯಲ್ಲಿ ಭಾಗಿಯಾಗಲು ಅವರು ವಿಧಾನಸೌಧಕ್ಕೆ ಬಂದಿದ್ದಾರೆ ಎಂದು ತಿಳಿಸಿದರು.

    ಕೇಂದ್ರ ಸರ್ಕಾರದ ನೇಮಕಾತಿಗಳ ಸಂಪುಟ ಸಮಿತಿ ಸಭೆ ನಡೆಸಿ ವಿವಿಧ ರಾಜ್ಯಗಳಲ್ಲಿ ಕರ್ತವ್ಯದಲ್ಲಿರುವ ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಸೇವೆಯ ಅರ್ಹರ ಪಟ್ಟಿಗೆ ಆಯ್ಕೆ ಮಾಡಿತ್ತು. ಎನ್‌ಎಐ, ಸಿಬಿಐ ಸೇರಿ ಕೇಂದ್ರ ಸರ್ಕಾರದ ವಿವಿಧ ತನಿಖಾ ಸಂಸ್ಥೆಗಳ ಮಹಾನಿರ್ದೇಶಕ ಹುದ್ದೆಗೆ ಈ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬಹುದಾಗಿದೆ. ನೇಮಕಾತಿಗಳ ಸಂಪುಟ ಸಮಿತಿ ಬಿಡುಗಡೆ ಮಾಡಿದ ಒಟ್ಟು 35 ಅಧಿಕಾರಿಗಳ ಪಟ್ಟಿಯಲ್ಲಿ ಕರ್ನಾಟಕದಿಂದ ಮೊಹಾಂತಿ ಮಾತ್ರ ಆಯ್ಕೆಯಾಗಿರುವುದು ವಿಶೇಷ.

  • ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ಹೋದ್ರೆ ಎಸ್‌ಐಟಿ ಮುಖ್ಯಸ್ಥರ ಬದಲಾವಣೆ – ಸಿಎಂ

    ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ಹೋದ್ರೆ ಎಸ್‌ಐಟಿ ಮುಖ್ಯಸ್ಥರ ಬದಲಾವಣೆ – ಸಿಎಂ

    ಬೆಂಗಳೂರು: ಧರ್ಮಸ್ಥಳ (Dharmasthala) ನೂರಾರು ಶವಗಳ ಹೂತಿಟ್ಟ ಕೇಸ್‌ಲ್ಲಿ ತನಿಖೆ ನಡೆಸುತ್ತಿರುವ ಎಸ್‌ಐಟಿ (SIT) ಮುಖ್ಯಸ್ಥ ಬದಲಾವಣೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪರೋಕ್ಷ ಸುಳಿವು ನೀಡಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸೇವೆಗೆ ತೆರಳುವ ಪಟ್ಟಿಯಲ್ಲಿ ಎಸ್‌ಐಟಿ ಮುಖ್ಯಸ್ಥರಾಗಿರುವ ಪ್ರಣಬ್ ಮೊಹಂತಿ ಅವರ ಹೆಸರಿದೆ. ಈ ಹಿನ್ನೆಲೆ ಎಸ್‌ಐಟಿ ಮುಖ್ಯಸ್ಥರ ಬದಲಾವಣೆ ಆಗುತ್ತಾ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೊಹಂತಿ ಅವರು ಕೇಂದ್ರ ಸೇವೆಗೆ ಹೋದರೆ ಮುಖ್ಯಸ್ಥರ ಬದಲಾವಣೆ ಆಗುತ್ತೆ ಎನ್ನುವ ಅರ್ಥದಲ್ಲಿ ಹೇಳಿದರು.ಇದನ್ನೂ ಓದಿ: ಆಗಸ್ಟ್ 1ರಿಂದ ಆಟೋ ಪ್ರಯಾಣ ದರ ಏರಿಕೆ

    ಇನ್ನೂ ಧರ್ಮಸ್ಥಳದಲ್ಲಿ ಉತ್ಖನನ ಪ್ರಕ್ರಿಯೆ ಮುಂದುವರೆದಿದ್ದು, ಮೂರು ಪಾಯಿಂಟ್‌ಗಳಲ್ಲಿ ಅಗೆಯುವ ಕಾರ್ಯ ಆರಂಭವಾಗಿದೆ. ಇಂದು ಕೂಡ ಉತ್ಖನನದ ಸ್ಥಳಕ್ಕೆ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿಯವರು ಭೇಟಿ ನೀಡುವ ಸಾಧ್ಯತೆಯಿದೆ. ಜೊತೆಗೆ ಎಸ್‌ಐಟಿ ಕರ್ನಾಟಕದ ಪ್ರತಿ ಪೊಲೀಸ್ ಠಾಣೆಯಿಂದ ಮಾಹಿತಿ ಕೇಳಿದ್ದು, 1995ರಿಂದ 2005 ಹಾಗೂ 2005ರಿಂದ 2015ವರೆಗೆ ಪತ್ತೆಯಾಗದ ನಾಪತ್ತೆ, ಕೊಲೆ-ಅತ್ಯಾಚಾರ ಪ್ರಕರಣದ ಮಾಹಿತಿ ಒದಗಿಸಲು ತಿಳಿಸಿದೆ.

    10 ವರ್ಷಗಳಂತೆ ಎರಡು ಪಟ್ಟಿಯಲ್ಲಿ ಒಟ್ಟು 20 ವರ್ಷದ ದಾಖಲೆ ನೀಡಲು ಎಸ್‌ಐಟಿ ಅಧಿಕಾರಿಗಳು ಪತ್ರದ ಮೂಲಕ ತಿಳಿಸಿದ್ದಾರೆ.ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರಳಿದ ಸಾರಿಗೆ ಬಸ್ – ಪ್ರಯಾಣಿಕರು ಸೇಫ್

  • ವಿಕ್ರಂಗೌಡ ಎನ್‍ಕೌಂಟರ್ ಯಾವುದೇ ಪ್ಲ್ಯಾನ್ ಮಾಡಿ ಮಾಡಿಲ್ಲ, ಇದು ಪರ್ಫೆಕ್ಟ್‌: ಡಿಜಿಪಿ

    ವಿಕ್ರಂಗೌಡ ಎನ್‍ಕೌಂಟರ್ ಯಾವುದೇ ಪ್ಲ್ಯಾನ್ ಮಾಡಿ ಮಾಡಿಲ್ಲ, ಇದು ಪರ್ಫೆಕ್ಟ್‌: ಡಿಜಿಪಿ

    – ಎನ್‍ಕೌಂಟರ್ ಅಲ್ಲ, ಶರಣಾಗತಿ ನಮ್ಮ ಮೂಲ ಉದ್ದೇಶ
    – ವಿಕ್ರಂ ಬಳಿ ಒಂದು ಬಾರಿ ಟ್ರಿಗರ್ ಮಾಡಿದ್ರೆ 50- 60 ಬುಲೆಟ್ ಸಿಡಿಯುವ ಗನ್!

    ಉಡುಪಿ: ನಕ್ಸಲ್ ವಿಕ್ರಂಗೌಡ (Vikram Gowda) ಎನ್‍ಕೌಂಟರ್ (Encounter) ಬಗ್ಗೆ ಯಾವುದೇ ಅನುಮಾನ ಬೇಡ. ಎನ್‍ಕೌಂಟರ್‌ನ್ನು ಪ್ಲ್ಯಾನ್ ಮಾಡಿ ಮಾಡಿಲ್ಲ, ಇದು ಪರ್ಫೆಕ್ಟ್ ಎನ್‍ಕೌಂಟರ್ ಎಂದು ಕೂಂಬಿಂಗ್ ಆಪರೇಷನ್‍ನಲ್ಲಿ ಭಾಗಿಯಾಗಿದ್ದ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ (Pronab Mohanty) ಹೇಳಿದ್ದಾರೆ.

    ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವೇಳೆ ಸೋಮವಾರ ಸಂಜೆ 6ಕ್ಕೆ ಗುಂಡಿನ ಚಕಮಕಿ ನಡೆದಿದೆ. ಕಾಡಿನ ಪ್ರದೇಶದಲ್ಲಿ ಎರಡು ಮೂರು ಮನೆ ಇತ್ತು. ಇಲ್ಲಿ ನಕ್ಸಲ್ ಹಾಗೂ ಪೊಲೀಸ್ ಮುಖಾಮುಖಿ ಆಗಿ ಎನ್‌ಕೌಂಟರ್ ಆಗಿದೆ. ಈ ಎನ್‌ಕೌಂಟರ್‌ನಲ್ಲಿ ಯಾವುದೇ ಸಂಶಯ ಬೇಡ. ಮನೆಗಳನ್ನು ಖಾಲಿ ಮಾಡೋದು ಕಳುಹಿಸೋದು ನಮ್ಮ ಕೆಲಸ ಅಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

    ಎನ್‍ಕೌಂಟರ್ ವೇಳೆ ಸಾಧಾರಣ ಕತ್ತಲಾಗಿರುವ ವಾತಾವರಣ ಆಗಿತ್ತು. ಎಷ್ಟು ಜನ ಇದ್ದರು ಎಂದು ಎಎನ್‍ಎಫ್‍ಗೆ ಮಾಹಿತಿ ಇಲ್ಲ. ಆತ ದಿನಸಿಗೆ ಬಂದಿದ್ದನೋ, ಯಾಕೆ ಬಂದಿದ್ದ ನಮಗೆ ಗೊತ್ತಿಲ್ಲ. ಎಷ್ಟು ಗುಂಡು ಬಿದ್ದಿವೆ ಎಂಬುದು ಗೊತ್ತಿಲ್ಲ, ಮರಣೋತ್ತರ ಪರೀಕ್ಷೆಯ ವರದಿ ಬರಬೇಕಿದೆ. ಇನ್ನೂ ಸಹ ಕಾಡು ಹಾಗೂ ಗ್ರಾಮದ ಸುತ್ತಮುತ್ತ ಕೂಂಬಿಂಗ್ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

    ಎನ್‍ಕೌಂಟರ್ ಅಲ್ಲ, ಶರಣಾಗತಿ ನಮ್ಮ ಮೂಲ ಉದ್ದೇಶ. ಶರಣಾಗತಿಗೆ ನೂರಾರು ದಾರಿಗಳು ಇವೆ. ಶರಣಾಗತಿ ಪ್ಯಾಕೇಜ್, ಪುನರ್ವಸತಿ ಪ್ಯಾಕೇಜ್ ಇವೆ ಬಳಸಿಕೊಳ್ಳಬಹುದು. ವಿಕ್ರಂಗೌಡ ಶರಣಾಗತಿಗೆ ಯಾವುದೇ ಪತ್ರ ವ್ಯವಹಾರ ಮಾಡಿರಲಿಲ್ಲ. ವಿಕ್ರಂಗೌಡ ಎಂಬ ಪ್ರಶ್ನೆಯಲ್ಲ, ಇದು ಫೇಕ್ ಎನ್‍ಕೌಂಟರ್ ಅಲ್ಲ. ನಮ್ಮ ಜೊತೆ ವಿಕ್ರಂಗೌಡನ ಇತ್ತೀಚಿನ ಫೋಟೋ ಇದೆ. ಎಎನ್‍ಎಫ್ ಬಳಿ ಎಲ್ಲಾ ದಾಖಲೆ ಇರುತ್ತವೆ. ಎಲ್ಲರ ಹೊಸ ದಾಖಲೆಗಳು ಇವೆ. ವಿಕ್ರಂ ಮೇಲೆ ಹಲವಾರು ಕೇಸುಗಳಿದ್ದವು. ಆತ ಮೋಸ್ಟ್ ವಾಂಟೆಡ್ ನಾಯಕನಾಗಿದ್ದ ಎಂದು ಅವರು ಹೇಳಿದ್ದಾರೆ.

    ಬೇರೆ ಬೇರೆ ಕಡೆ ಕೂಂಬಿಂಗ್ ಮಾಡಿದ್ದೇವೆ. ನಮ್ಮ ತಂಡ ನಿರಂತರ ಕೂಂಬಿಂಗ್ ಆಪರೇಷನ್ ಮಾಡುತ್ತಲೇ ಇದೆ. ಜನ ಭಯ ಪಡಬೇಕಾದ ಅವಶ್ಯಕತೆ ಇಲ್ಲ. ನಾವು ಜನರ ರಕ್ಷಣೆಗಾಗಿ ಇದ್ದೇವೆ. ನಕ್ಸಲ್ ಚಟುವಟಿಕೆ ಬಗ್ಗೆ ಯಾವುದೇ ಭಯ ಬೇಡ ಎಂದು ಅವರು ಭರವಸೆ ನೀಡಿದ್ದಾರೆ.

    ವಿಕ್ರಂ ಬಳಿ ಮೂರು ಆಯುಧ ಇತ್ತು. ಗನ್ ಒಂದು ಬಾರಿ ಟ್ರಿಗರ್ ಮಾಡಿದ್ರೆ 50- 60 ಬುಲೆಟ್ ಸಿಡಿಯುವ ಗನ್ ಅದು. 3 ಎಂಎಂ ಪಿಸ್ತೂಲ್, ಚಾಕು ಸಿಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ.

    ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಕೇರಳ ನಡುವೆ ನಕ್ಸಲ್ ಚಳುವಳಿ ಇದೆ. ನಕ್ಸಲ್ ಪ್ರತಿದಾಳಿ ಬಗ್ಗೆ ಅಲರ್ಟ್ ಆಗಿ ಇದ್ದೇವೆ. ಕೇರಳ ಜೊತೆ ಸಂಪರ್ಕ ಹಾಗೂ ಸಂಬಂಧ ಚೆನ್ನಾಗಿದೆ ಎಂದು ತಿಳಿಸಿದ್ದಾರೆ.