Tag: ಪ್ರಣಬ್ ಮುಖರ್ಜಿ

  • ಮಧ್ಯರಾತ್ರಿ ಮಹಾ ಆರ್ಥಿಕ ಕ್ರಾಂತಿ – ಇಂದಿನಿಂದ ಒಂದು ದೇಶ, ಒಂದೇ ತೆರಿಗೆ

    ಮಧ್ಯರಾತ್ರಿ ಮಹಾ ಆರ್ಥಿಕ ಕ್ರಾಂತಿ – ಇಂದಿನಿಂದ ಒಂದು ದೇಶ, ಒಂದೇ ತೆರಿಗೆ

    ನವದೆಹಲಿ: ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ 17 ವರ್ಷಗಳ ಬಳಿಕ ಮಧ್ಯರಾತ್ರಿ ಮಹಾ ಆರ್ಥಿಕ ಕ್ರಾಂತಿಯಾಗಿದೆ. ರಾಜ್ಯ, ಕೇಂದ್ರದಲ್ಲಿದ್ದ 16 ತೆರಿಗೆ ಹಾಗೂ 23 ಸೆಸ್ ರೂಪಿಸಿ ಜಿಎಸ್‍ಟಿ ಜಿಂದಗಿ ಆರಂಭವಾಗಿದೆ.

    ಕೋಟ್ಯಾಂತರ ಗ್ರಾಹಕರು-ವ್ಯಾಪಾರಿಗಳು, ಸಾವಿರಾರು ಉದ್ದಿಮೆಗಳು, ಸೇವಾ ಸಂಸ್ಥೆಗಳು ದೇಶಾದ್ಯಂತ ಇವತ್ತಿನಿಂದ ಒಂದೇ ತೆರಿಗೆ ವ್ಯವಸ್ಥೆಗೆ ಒಳಪಡುವ ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ಸೇರ್ಪಡೆಯಾಗುತ್ತಿವೆ. ಐತಿಹಾಸಿಕ ಕ್ಷಣಕ್ಕೆ ವಿಶೇಷವಾಗಿ ಸಿಂಗಾರಗೊಂಡಿದ್ದ ಸಂಸತ್ ಸೆಂಟ್ರಲ್ ಹಾಲ್‍ನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ಮೋದಿ ಜಂಟಿಯಾಗಿ ಜಿಎಸ್‍ಟಿಗೆ ಚಾಲನೆ ನೀಡಿದ್ರು.

    ಮಧ್ಯರಾತ್ರಿ ಸಂಸತ್‍ನ ಸೆಂಟ್ರಲ್ ಹಾಲ್‍ನಲ್ಲಿ ಜಿಎಸ್‍ಟಿ ಬಗ್ಗೆ ಕೇಂದ್ರ ಹಣಕಾಸು ಸಚಿವ ಪ್ರಾಸ್ತಾವಿಕ ಭಾಷಣ ಮಾಡಿ, ಜಿಎಸ್‍ಟಿ ಪರಿಕಲ್ಪನೆ ಕೊಟ್ಟಿದ್ದು ಪಶ್ಚಿಮ ಬಂಗಾಳದ ಆಸೀಮ್ ಗುಪ್ತ ಅಂದ್ರು. ಭಾರತ ಸಂಕುಚಿತ ರಾಜಕೀಯವನ್ನು ಮೀರಿ ಬೆಳೆಯುತ್ತಿದೆ. ಒಂದು ದೇಶ, ಒಂದು ತೆರಿಗೆ, ಒಂದೇ ಮಾರುಕಟ್ಟೆಯಾಗಲಿದೆ. ಹಣದುಬ್ಬರಕ್ಕೂ ಬ್ರೇಕ್ ಬೀಳಲಿದೆ. ಹಾಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಒಗ್ಗೂಡಿ ಕೆಲಸ ಮಾಡಬೇಕಿದೆ. ಜಿಎಸ್‍ಟಿಯಿಂದಾಗಿ ನವಭಾರತದ ನಿರ್ಮಾಣವಾಗಲಿದೆ ಎಂದು ಬಣ್ಣಿಸಿದ್ರು.

    ಇದನ್ನೂ ಓದಿ: ಜಿಎಸ್‍ಟಿಯಿಂದ ಯಾವ್ಯಾವ ವಸ್ತುಗಳು ದುಬಾರಿಯಾಗಲಿವೆ? ಇಲ್ಲಿದೆ ಪೂರ್ಣ ಮಾಹಿತಿ

    ಜಿಎಸ್‍ಟಿ ಅಂದ್ರೆ ಗುಡ್ ಅಂಡ್ ಸಿಂಪಲ್ ಟ್ಯಾಕ್ಸ್ ಅಂತ ಪ್ರಧಾನಿ ಮೋದಿ ವ್ಯಾಖ್ಯಾನಿಸಿದ್ದಾರೆ. ಜಿಎಸ್‍ಟಿ ಜಾರಿಗೆ ಸಂಸತ್‍ಗಿಂತ ಪವಿತ್ರ ಸ್ಥಳ ಮತ್ತೊಂದಿಲ್ಲ. ಬಡವರ ಹಿತದ ಬಗ್ಗೆ ಜಿಎಸ್‍ಟಿಯಲ್ಲಿ ಗಮನ ಹರಿಸಲಾಗಿದೆ. ನವಭಾರತ ಕಟ್ಟುವಲ್ಲಿ ಜಿಎಸ್‍ಟಿ ರಹದಾರಿಯಾಗಲಿದೆ. ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ದೇಶದ ಏಕೀಕರಣ ಮಾಡಿದ್ರು. ಅದರಂತೆ ಜಿಎಸ್‍ಟಿ ಮೂಲಕ ದೇಶದ ಆರ್ಥಿಕ ಏಕೀಕರಣಕ್ಕೆ ನಾಂದಿ ಹಾಡಿದ್ದೇವೆ. ಲೇಹ್‍ನಿಂದ ಲಕ್ಷದ್ವೀಪದವರೆಗೆ, ಗಂಗಾನಗರದಿಂದ ಇಟಾ ನಗರದವರೆಗೆ ಒಂದೇ ತೆರಿಗೆ. ಜಿಎಸ್‍ಟಿ ಯಶಸ್ಸು ಕೇವಲ ಒಂದು ಸರ್ಕಾರಕ್ಕೆ ಸೇರಿದ್ದಲ್ಲ. ಹಿಂದಿನ ಎಲ್ಲ ಸರ್ಕಾರಗಳ ಸಾಮೂಹಿಕ ಶ್ರಮದ ಫಲವಾಗಿ ಎರಡು ದಶಕಗಳ ಕನಸು ಸಾಕಾರಗೊಂಡಿದೆ. ಭಗವದ್ಗೀತೆಯಲ್ಲಿನ 18 ಅಧ್ಯಾಯಗಳಂತೆ ಜಿಎಸ್‍ಟಿ ಮಂಡಳಿ ಸಹ 18 ಸಭೆ ನಡೆಸಿತ್ತು. ಕಪ್ಪುಹಣಕ್ಕೆ ಕಡಿವಾಣ ಬೀಳಲಿದೆ. ಟೀಂ ಇಂಡಿಯಾದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಅಂದ್ರು. ಇದೇ ವೇಳೆ ಚಾಣಾಕ್ಯನನ್ನೂ ನೆನಪಿಸಿಕೊಂಡ್ರು.

    ಇದನ್ನೂ ಓದಿ: ಜಿಎಸ್‍ಟಿ ಎಫೆಕ್ಟ್, ಚಿನ್ನದ ಅಂಗಡಿಗಳಿಗೆ ಮುಗಿಬಿದ್ದ ಮಹಿಳಾ ಮಣಿಗಳು

    ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಾತನಾಡಿ, ಹೊಸ ತೆರಿಗೆ ವ್ಯವಸ್ಥೆ ದೇಶದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಲಿದ್ದು, ಡಿಜಿಟಲ್ ಮತ್ತು ಮಾಹಿತಿ ತಂತ್ರಜ್ಞಾನದಿಂದಾಗಿ ಜಿಎಸ್‍ಟಿ ಜಾರಿ ಸುಲಭವಾಗಲಿದೆ. ವ್ಯಾಟ್ ಜಾರಿಯಾದ ಹೊಸದರಲ್ಲಿ ಎದುರಾದ ತೊಂದರೆಯೇ ಈಗಲೂ ಆಗಬಹುದು. ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ನಾನು ಕೂಡ ಜಿಎಸ್‍ಟಿ ಯಾತ್ರೆಯ ಭಾಗವಾಗಿದ್ದೆ. ದೇಶದ ಖ್ಯಾತ ಆರ್ಥಿಕ ತಜ್ಞರು, ಹಣಕಾಸು ಸಚಿವರ ಒಡನಾಟ ಲಭಿಸಿತು ಎಂದು ಮುಖರ್ಜಿ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

    ಇದನ್ನೂ ಓದಿ: ಜಿಎಸ್‍ಟಿ ಸೇವಾ ತೆರಿಗೆ: ಯಾವುದಕ್ಕೆ ಎಷ್ಟು? ದುಬಾರಿಯಾಗಲಿದೆ ಕನ್ನಡ ಸಿನಿಮಾ ಟಿಕೆಟ್ ದರ

  • ಸಿಎಂ ಗೈರು, ಉಡುಪಿಗೆ ರಾಷ್ಟ್ರಪತಿ ಭೇಟಿ: ಫೋಟೋಗಳಲ್ಲಿ ಐಬಿಯ 40 ಲಕ್ಷ ರೂ. ಸೂಟ್ ರೂಂ ನೋಡಿ

    ಸಿಎಂ ಗೈರು, ಉಡುಪಿಗೆ ರಾಷ್ಟ್ರಪತಿ ಭೇಟಿ: ಫೋಟೋಗಳಲ್ಲಿ ಐಬಿಯ 40 ಲಕ್ಷ ರೂ. ಸೂಟ್ ರೂಂ ನೋಡಿ

    ಉಡುಪಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತನ್ನ ಅಧಿಕಾರಾವಧಿಯ ಕರ್ನಾಟಕದ ಕೊನೆಯ ಪ್ರವಾಸ ಕೈಗೊಂಡರು. ದೇವಾಲಯಗಳ ನಗರಿಗೆ ಭೇಟಿಕೊಡುವ ಮೂಲಕ ತಾನೊಬ್ಬ ಪರಮ ದೈವಭಕ್ತ ಎಂಬೂದನ್ನು ತೋರಿಸಿದರು. ಪೇಜಾವರ ಸ್ವಾಮೀಜಿಗಳ ಐತಿಹಾಸಿಕ ಪಂಚಮ ಪರ್ಯಾಯ ಸಂದರ್ಭ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದರು. ಆದ್ರೆ ಶಿಷ್ಟಾಚಾರ ಮುರಿದ ಸಿಎಂ ಸಿದ್ದರಾಮಯ್ಯ ರಾಷ್ಟ್ರಪತಿಗಳ ಕಾರ್ಯಕ್ರಮದಿಂದ ದೂರ ಉಳಿದು ತನ್ನ ಸಿದ್ಧಾಂತವನ್ನು ಕಾಪಾಡುವುದರಲ್ಲಿ ಯಶಸ್ವಿಯಾದರು.

    ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬೆಂಗಳೂರು ಪ್ರವಾಸ ಮುಗಿಸಿ ಕರಾವಳಿ ಜಿಲ್ಲೆ ಉಡುಪಿಗೆ ಆಗಮಿಸಿದರು. ಆದ್ರೆ ದೇಶದ ಪ್ರಥಮ ಪ್ರಜೆಯ ಜೊತೆ ಸಿಎಂ ಸಿದ್ದರಾಮಯ್ಯ ಕೃಷ್ಣಮಠಕ್ಕೆ ಬರಲೇ ಇಲ್ಲ. ಹಲವು ಬಾರಿ ಆಹ್ವಾನ ನೀಡಿದ ಹೊರತಾಗಿಯೂ ಕೃಷ್ಣಮಠಕ್ಕೆ ಬಾರದ ಸಿಎಂ ಅನಿವಾರ್ಯ ಸಂದರ್ಭದಿಂದಲೂ ನುಣುಚಿಕೊಂಡರು. ಸಚಿವರಾದ ಕೆ.ಜೆ ಜಾರ್ಜ್ ಮತ್ತು ಪ್ರಮೋದ್ ಮಧ್ವರಾಜ್ ಅವರಿಗೆ ಜವಾಬ್ದಾರಿವಹಿಸಿಕೊಟ್ಟು ತಾನು ರಾಜಧಾನಿಯಲ್ಲೇ ಉಳಿದುಬಿಟ್ಟರು. ರಾಷ್ಟ್ರಪತಿಗಳ ಉಡುಪಿ ಪ್ರವಾಸದ ವೇಳೆ ಶಿಷ್ಟಾಚಾರದಂತೆ ಸಿಎಂ ಬರುತ್ತಾರೆ ಎಂದೇ ಭಾವಿಸಲಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆದರೂ, ತೆಲೆ ಕೆಡಿಸಿಕೊಳ್ಳದ ಸಿಎಂ, ರಾಷ್ಟ್ರಪತಿಗಳ ಎರಡನೇ ದಿನದ ರಾಜ್ಯಪ್ರವಾಸದಿಂದ ಸಂಪೂರ್ಣ ದೂರ ಉಳಿದರು.

    ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಬಂದ ರಾಷ್ಟ್ರಪತಿಗಳನ್ನು ಆದಿ ಉಡುಪಿ ಹೆಲಿಪ್ಯಾಡ್ ನಲ್ಲಿ ಸಚಿವ ಜಾರ್ಜ್ ಮತ್ತು ಪ್ರಮೋದ್ ಮಧ್ವರಾಜ್ ಬರಮಾಡಿಕೊಂಡರು.

    ಪೇಜಾವರ ಶ್ರೀಗಳ ಐದನೇ ಐತಿಹಾಸಿಕ ಪರ್ಯಾಯ ಅವಧಿಯಲ್ಲಿ ರಾಷ್ಟ್ರದ ಪ್ರಥಮ ಪ್ರಜೆ ಮಠಕ್ಕೆ ಭೇಟಿ ನೀಡಿದರು. ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದರ್ಶನವನ್ನು ಕೈಗೊಂಡ ರಾಷ್ಟ್ರಪತಿಗಳಿಗೆ ಅಷ್ಟಮಠಾಧೀಶರು ಸೇರಿ ಸನ್ಮಾನಿಸಿದ್ದು ವಿಶೇಷವಾಗಿತ್ತು.

    ಹಾಜಿ ಅಬ್ದುಲ್ಲಾ ಸಾಹೇಬ್ ತನ್ನ ಜಮೀನನ್ನು ಸರ್ಕಾರಕ್ಕೆ ದಾನ ಮಾಡಿದ್ದರು. ಸರ್ಕಾರ ಬಿಆರ್ ಶೆಟ್ಟರ ಸದುದ್ದೇಶದ ಆಸ್ಪತ್ರೆಗೆಂದು ಜಮೀನು ನೀಡಿದೆ. ಬಡ, ಅಶಕ್ತ ಜನರ ಸೇವೆ ಈ ಆಸ್ಪತ್ರೆಯಲ್ಲಿ ಆಗಲಿ. ಆ ಕೆಲಸವನ್ನು ಶೆಟ್ಟರ ಆಸ್ಪತ್ರೆಯ ವೈದ್ಯರು- ಆಡಳಿತವರ್ಗ- ಸಿಬ್ಬಂದಿಗಳು ಮಾಡುತ್ತಾರೆಂಬ ನಂಬಿಕೆ ನನಗೆ ಇದೆ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

    ಇದೇ ವೇಳೆ ಉಡುಪಿಯ ಬಹುಚರ್ಚಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರಾಜಾಂಗಣದಲ್ಲಿ ರಾಷ್ಟ್ರಪತಿಗಳು ಶಂಕುಸ್ಥಾಪನೆ ಮಾಡಿದರು. ದುಬೈನ ಉದ್ಯಮಿ ಬಿ.ಆರ್. ಶೆಟ್ಟಿ ಸಹಭಾಗಿತ್ವದಲ್ಲಿ ಕರ್ನಾಟಕ ಸರ್ಕಾರ ಈ ಮಹತ್ವಾಕಾಂಕ್ಷಿ ಯೋಜನೆ ಕೈಗೆತ್ತಿಕೊಂಡಿದೆ. ಆದರೆ ಸರ್ಕಾರಿ ಭೂಮಿಯನ್ನು ಖಾಸಗಿ ಕಂಪೆನಿಗೆ ನೀಡಿದ ಬಗ್ಗೆ ಸಾಕಷ್ಟು ಆಕ್ಷೇಪಗಳಿವೆ. ಈ ಬಗ್ಗೆ ಕಾನೂನು ಸಮರವನ್ನೂ ನಡೆಸಲಾಗುತ್ತಿದೆ. ಈ ನಡುವೆ ಇಂದು ರಾಷ್ಟ್ರಪತಿಗಳು ಈ ಆಸ್ಪತ್ರೆಗೆ ಶಂಕುಸ್ಥಾಪನೆ ಮಾಡಿರುವುದು ಹೊಸ ಚರ್ಚೆ ಹುಟ್ಟುಹಾಕಿದೆ.

    ಈ ಸಂದರ್ಭ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಾತನಾಡಿ, ರೈತರಿಗೆ ಮತ್ತು ವೈದ್ಯರಿಗೆ ಗೌರವ ಕೊಡುವುದನ್ನು ಸಮಾಜ ಕಲಿತುಕೊಳ್ಳಬೇಕು. ವೈದ್ಯರ ಮೇಲಿನ ಹಲ್ಲೆ ನಾಗರೀಕ ಸಮಾಜದ ಲಕ್ಷಣವಲ್ಲ. ತಪ್ಪುಗಳು ಎಲ್ಲರಿಂದ ಆಗುತ್ತದೆ, ಮನುಷ್ಯ ತಪ್ಪು ಮಡದೆ ಮತ್ಯಾರು ಮಾಡಲು ಸಾಧ್ಯ ಎಂದರು.

    40 ಲಕ್ಷದ ಸೂಟ್ ರೂಂ.: ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಉಡುಪಿ ಐಬಿಯ ಕೊಠಡಿಯನ್ನು ಸೂಟ್ ರೂಂ ಆಗಿ ಪರಿವರ್ತಿಸಲಾಗಿತ್ತು. ಸುಮಾರು 40 ಲಕ್ಷ ಖರ್ಚು ಮಾಡಿ ಪ್ರವಾಸಿ ಬಂಗಲೆಯನ್ನು ಪರ್ಮನೆಂಟ್ ಸಿಂಗಾರ ಮಾಡಲಾಗಿತ್ತು. ಉಡುಪಿ ಕ್ಷೇತ್ರ ಸಂದರ್ಶನದ ಬಳಿಕ ರಾಷ್ಟ್ರಪತಿಗಳು ಕೊಲ್ಲೂರು ಮುಕಾಂಬಿಕಾ ಕ್ಷೇತ್ರದ ಸಂದರ್ಶಿಸಿದರು. ರಾಷ್ಟ್ರಪತಿಯಾಗಿ ತಮ್ಮ ಅವಧಿ ಪೂರೈಸುವ ಮುನ್ನ ದಕ್ಷಿಣ ಭಾರತದ ಎರಡು ಪ್ರಸಿದ್ಧ ಕ್ಷೇತ್ರಗಳನ್ನು ಸಂದರ್ಶಿಸಿದ್ದು ವಿಶೇಷವಾಗಿತ್ತು.

     

  • ನಾಳೆಯಿಂದ ಮೊದಲ ಹಂತದ ನಮ್ಮ ಮೆಟ್ರೋ ಸೇವೆ ಸಂಪೂರ್ಣವಾಗಿ ಲಭ್ಯ- ಟಿಕೆಟ್ ದರ 10% ಹೆಚ್ಚಳ ಸಾಧ್ಯತೆ

    ನಾಳೆಯಿಂದ ಮೊದಲ ಹಂತದ ನಮ್ಮ ಮೆಟ್ರೋ ಸೇವೆ ಸಂಪೂರ್ಣವಾಗಿ ಲಭ್ಯ- ಟಿಕೆಟ್ ದರ 10% ಹೆಚ್ಚಳ ಸಾಧ್ಯತೆ

    ಬೆಂಗಳೂರು: ಶನಿವಾರದಿಂದ ಮಹಾನಗರಿ ಬೆಂಗಳೂರಿನ ಮಂದಿಗೆ ಮೊದಲ ಹಂತದ ನಮ್ಮ ಮೆಟ್ರೋ ಸೇವೆ ಸಂಪೂರ್ಣವಾಗಿ ಲಭ್ಯವಾಗಲಿದೆ.

    ಶನಿವಾರದಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಯಲೇಚನಹಳ್ಳಿ-ಸಂಪಿಗೆ ರಸ್ತೆ ಮಾರ್ಗ ಲೋಕಾರ್ಪಣೆ ಮಾಡಲಿದ್ದಾರೆ. ಇದರೊಂದಿಗೆ 42.3 ಕಿಲೋ ಮೀಟರ್ ದೂರದ ಮೊದಲ ಹಂತದ ಮೆಟ್ರೋ ಸೇವೆ ಸಂಪೂರ್ಣವಾಗಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಇಂದು ಮತ್ತು ನಾಳೆ ರಾಜಾಜಿನಗರದಿಂದ ಸಂಪಿಗೆ ರಸ್ತೆ ನಿಲ್ದಾಣವರೆಗೆ ಮೆಟ್ರೋ ಸಂಚಾರ ಇರಲ್ಲ.

    ಇದೇ ಹೊತ್ತಲ್ಲಿ ಟಿಕೆಟ್ ದರ ಶೇಕಡಾ 10ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಮೆಟ್ರೋದಿಂದ ಇದುವರೆಗೆ ಆಗಿರೋ ನಷ್ಟವನ್ನು ಸರಿದೂಗಿಸುವ ಸಲುವಾಗಿ ಪ್ರಯಾಣ ದರ ಏರಿಕೆಗೆ ನಿರ್ಧರಿಸಲಾಗಿದ್ದು, ರಾಜ್ಯ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದೆ. ಪ್ರಸ್ತುತ 2011ರಲ್ಲಿ ಅಂದರೆ 6 ವರ್ಷಗಳ ಹಿಂದೆ ನಿಗದಿಪಡಿಸಿದ ದರವೇ ಚಾಲ್ತಿಯಲ್ಲಿದೆ. ಅದ್ರೆ ನಿರ್ವಹಣಾ ವೆಚ್ಚ ಹೆಚ್ಚಾಗಿದ್ದು, ಸರ್ಕಾರಕ್ಕೆ 260 ಕೋಟಿ ರೂಪಾಯಿ ಹೊರೆಬೀಳ್ತಿದೆ ಎಂದು ಹೇಳಲಾಗಿದೆ.

    ನಾಗಸಂದ್ರದಿಂದ ಯಲೇಚನಹಳ್ಳಿಯವರೆಗೆ ಪ್ರಯಾಣ ದರ 60 ರೂಪಾಯಿಯಾಗಲಿದೆ. ಆರಂಭದ ನಿಲ್ದಾಣಗಳಲ್ಲಿ ಟಿಕೆಟ್ 2 ರಿಂದ 5 ರೂಪಾಯಿ ದುಬಾರಿಯಾಗಲಿದೆ.

  • ಸಿಎಂ ಸಿದ್ದರಾಮಯ್ಯನವರಿಗೆ ಯಾಕೆ ಕೋಪ ಗೊತ್ತಿಲ್ಲ: ಪೇಜಾವರ ಶ್ರೀ

    ಸಿಎಂ ಸಿದ್ದರಾಮಯ್ಯನವರಿಗೆ ಯಾಕೆ ಕೋಪ ಗೊತ್ತಿಲ್ಲ: ಪೇಜಾವರ ಶ್ರೀ

    ಉಡುಪಿ: ನಾವು ಯಾರಿಗೂ ಕೋಪ ಬರುವ ಕೆಲಸ ಮಾಡಿಲ್ಲ. ಮುಖ್ಯಮಂತ್ರಿ ಅವರಿಗೆ ಯಾಕೆ ಕೋಪ ಇದೆ ಎನ್ನುವುದು ಗೊತ್ತಿಲ್ಲ. ಅವರು ಕೃಷ್ಣ ಮಠಕ್ಕೆ ಬರುತ್ತಾರೋ ಇಲ್ಲವೋ ಎನ್ನುವುದು ಭಾನುವಾರ ತಿಳಿಯಲಿದೆ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಹೇಳಿದ್ದಾರೆ.

    ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾನುವಾರ ಕೃಷ್ಣ ಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಗೈರಾಗುತ್ತಿದ್ದಾರೆ ಎನ್ನುವ ವರದಿಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಅವರಿಗೆ ಕೃಷ್ಣಮಠದ ಪ್ರತಿನಿಧಿಗಳ ಮೂಲಕ ಆಹ್ವಾನ ನೀಡಿದ್ದೇವೆ. ಆದರೆ ಕಾರ್ಯದರ್ಶಿಗಳು ಉಡುಪಿ ಕಾರ್ಯಕ್ರಮಕ್ಕೆ ಸಿಎಂ ಬರುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಮಠಕ್ಕೆ ಬರುತ್ತಾರೋ ಇಲ್ಲವೋ ಭಾನುವಾರ ತಿಳಿಯಲಿದೆ ಎಂದರು.

    ನನ್ನ ಪರ್ಯಾಯದ ಸಂದರ್ಭದಲ್ಲಿ ಅವರಿಗೆ ಆಹ್ವಾನ ಮಾಡಿದ್ದೆ. ಹಲವು ಬಾರೀ ಮಠಕ್ಕೆ ಆಹ್ವಾನ ನೀಡಲಾಗಿದೆ. ನಾನು ಬರುವುದಿಲ್ಲ ಎಂದು ಸಿಎಂ ಅವರು ಹೇಳಿಲ್ಲ. ಆದರೆ ಒಂದು ಬಾರಿಯೂ ಮಠಕ್ಕೆ ಬಂದಿಲ್ಲ. ಮೊನ್ನೆ ಪರ್ಯಾಯದ ನಂತರ ಕೃಷ್ಣನಿಗೆ ಕಾಣಿಕೆ ಕಳುಹಿಸಿದ್ದರು. ಸಿಎಂ ಅವರ ಶ್ರೀಮತಿ ಫೋನ್‍ನಲ್ಲಿ ಮಾತನಾಡಿದ್ದರು ಎಂದು ಪೇಜಾವರ ಶ್ರೀ ತಿಳಿಸಿದರು.

    ನಾನು ಸಿಎಂ ಅವರನ್ನು ಮಂಗಳೂರು, ಬೆಂಗಳೂರು, ಮೈಸೂರಲ್ಲಿ ಹಲವು ಬಾರಿ ಭೇಟಿಯಾಗಿದ್ದೇನೆ. ವರುಣಾ ಉಪಚುನಾವಣೆ ಸಂದರ್ಭ ಪ್ರಸಾದ ತೆಗೆದುಕೊಂಡು ಹೋಗಿದ್ದಾರೆ. ಸುತ್ತೂರು ಶ್ರೀಗಳು ಕೃಷ್ಣಮಠಕ್ಕೆ ಬರುವುದಾಗಿ ಹೇಳಿದ್ದರು. ಸಿಎಂ ಅವರನ್ನೂ ಜೊತೆ ಕರೆತರುವುದಾಗಿ ಹೇಳಿದ್ದಾರೆ ಎಂದು ಶ್ರೀಗಳು ಹೇಳಿದರು.

    ಇದನ್ನೂ ಓದಿ:  ಧರ್ಮಸಂಕಟದಲ್ಲಿ ಸಿಎಂ ಸಿದ್ದರಾಮಯ್ಯ: ಕೃಷ್ಣ ಮಠಕ್ಕೆ ಹೋಗಲು ಹಿಂದೇಟು, 3 ಸಚಿವರಿಗೆ ರಾಷ್ಟ್ರಪತಿ ಕಾರ್ಯಕ್ರಮದ ಜವಾಬ್ದಾರಿ

     

  • ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತೆ? ಮತ ಲೆಕ್ಕಾಚಾರ ಹೇಗೆ? ಎನ್‍ಡಿಎ,ಯುಪಿಎ ಬಲಾಬಲ ಹೇಗಿದೆ?

    ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತೆ? ಮತ ಲೆಕ್ಕಾಚಾರ ಹೇಗೆ? ಎನ್‍ಡಿಎ,ಯುಪಿಎ ಬಲಾಬಲ ಹೇಗಿದೆ?

    ನವದೆಹಲಿ: ದೇಶದ ಅತ್ಯುನ್ನತ ಸಂವಿಧಾನಿಕ ಹುದ್ದೆ ರಾಷ್ಟ್ರಪತಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ನಜೀಂ ಝೈದಿ 15ನೇ ರಾಷ್ಟ್ರಪತಿ ಚುನಾವಣೆಗೆ ದಿನಾಂಕ ಪ್ರಕಟಿಸಿದರು.

    ಯಾವ ದಿನ ಏನು?
    ಜೂನ್ 14: ರಾಷ್ಟ್ರಪತಿ ಚುನಾವಣೆಗಾಗಿ ಅಧಿಸೂಚನೆ
    ಜೂನ್ 28: ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನ
    ಜೂನ್ 29: ನಾಮಪತ್ರಗಳ ಪರಿಶೀಲನೆ
    ಜುಲೈ 1: ನಾಮಪತ್ರ ವಾಪಸ್ ಪಡೆಯಲು ಅವಕಾಶ
    ಜುಲೈ 17: ರಾಷ್ಟ್ರಪತಿ ಹುದ್ದೆಗೆ ಮತದಾನ
    ಜುಲೈ 20: ರಾಷ್ಟ್ರಪತಿ ಚುನಾವಣೆ ಮತ ಎಣಿಕೆ
    ಜುಲೈ 24: ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಧಿಕಾರವಧಿ ಅಂತ್ಯ
    ಜುಲೈ 25: 15ನೇ ರಾಷ್ಟ್ರಪತಿಯ ಅಧಿಕಾರಾವಧಿ ಆರಂಭ

    ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತದೆ..?
    ಸಂವಿಧಾನದ ವಿಧಿ 54ರ ಪ್ರಕಾರ ರಾಷ್ಟ್ರಪತಿ ಚುನಾವಣೆ ನಡೆಯುತ್ತದೆ. ಸಂಸತ್ತಿನ ಉಭಯ ಸದನಗಳಾದ ಲೋಕಸಭೆ, ರಾಜ್ಯಸಭೆ ಸಂಸದರು, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ವಿಧಾನಸಭೆ ಸದಸ್ಯರಿಂದ ಮತದಾನ ನಡೆಯುತ್ತದೆ. ವಿಧಾನಪರಿಷತ್ ಸದಸ್ಯರು, ನಾಮಕರಣಗೊಂಡ ಸಂಸದರು, ಶಾಸಕರಿಗೆ ಮತದಾನದ ಹಕ್ಕಿಲ್ಲ. ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಗೆ ನಾಮಪತ್ರ ಸಲ್ಲಿಕೆ ವೇಳೆ 50 ಮಂದಿ ಮತದಾರರು ಸೂಚಕರಾಗಿ, 50 ಮಂದಿ ಅನುಮೋದಕರಾಗಿ ಸಹಿ ಮಾಡಬೇಕಾಗುತ್ತದೆ.

    ಲೋಕಸಭೆ, ರಾಜ್ಯಸಭೆ ಪ್ರಧಾನ ಕಾರ್ಯದರ್ಶಿಗಳು ಆವೃತ ಪದ್ಧತಿಯಡಿ ಚುನಾವಣಾಧಿಕಾರಿಗಳಾಗಿರುತ್ತಾರೆ. ಈ ಬಾರಿ ರಾಷ್ಟ್ರಪತಿ ಚುನಾವಣೆಗೆ ಲೋಕಸಭೆ ಪ್ರಧಾನ ಕಾರ್ಯದರ್ಶಿ ಚುನಾವಣಾಧಿಕಾರಿಯಾಗಿರುತ್ತಾರೆ. ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿ 15 ಸಾವಿರ ರೂಪಾಯಿ ಠೇವಣಿ ಇಡಬೇಕಾಗುತ್ತದೆ. ಮತಪತ್ರ ಮೂಲಕ ಮತದಾನ ನಡೆಯಲಿದೆ.

    ಮತ ಲೆಕ್ಕಾಚಾರ ಹೇಗೆ?
    ಪ್ರಸ್ತುತ ಈಗ ದೇಶದಲ್ಲಿ 776 ಸಂಸದರು ಮತ್ತು 4,120 ಶಾಸಕರಿದ್ದಾರೆ. 1971ರ ಜನಗಣತಿಯ ಆಧರಿಸಿ ಸಂಸದರು, ಶಾಸಕರ ಮತಮೌಲ್ಯ ನಿರ್ಧಾರ ಮಾಡಲಾಗುತ್ತದೆ. ರಾಜ್ಯದ ಜನಸಂಖ್ಯೆಯನ್ನು ಒಟ್ಟು ಶಾಸಕರ ಸಂಖ್ಯೆಯೊಂದಿಗೆ ಭಾಗಿಸಿ 1 ಸಾವಿರದೊಂದಿಗೆ ಗುಣಿಸಿದಾಗ ಶಾಸಕರ ಮತಮೌಲ್ಯ ಸಿಗುತ್ತದೆ.

    ಕರ್ನಾಟಕದ ಶಾಸಕರ ಮತ ಮೌಲ್ಯ ಎಷ್ಟು?
    1971ರ ಜನಗಣತಿಯ ಪ್ರಕಾರ ಕರ್ನಾಟಕದ ಜಸಂಖ್ಯೆ = 2,92,99,014.
    ಕರ್ನಾಟಕದ ಶಾಸಕರ ಮತಮೌಲ್ಯ = 131
    ಕರ್ನಾಟಕದ ಒಟ್ಟು ಮತ ಮೌಲ್ಯ (131*224) = 29,344

    ಬೇರೆ ರಾಜ್ಯದಲ್ಲಿ ಎಷ್ಟು?
    ಉತ್ತರ ಪ್ರದೇಶದ ಶಾಸಕರ ಮತಮೌಲ್ಯ 208 ಆಗಿದ್ದರೆ, ಗೋವಾ ಶಾಸಕರ ಮತಮೌಲ್ಯ 8 ಆಗಿದೆ.

    ಸಂಸದರ ಮತ ಮೌಲ್ಯ ಎಷ್ಟು?
    ಎಲ್ಲಾ ರಾಜ್ಯಗಳ ಶಾಸಕರ ಮತಮೌಲ್ಯವನ್ನು ಸಂಸದರ ಒಟ್ಟು ಸಂಖ್ಯೆಯಿಂದ ಭಾಗಿಸಿದಾಗ ಸಂಸದರ ಮತ ಮೌಲ್ಯ ಸಿಗುತ್ತದೆ.
    ಸಂಸದರ ಮತ ಮೌಲ್ಯ : 5,49,474/776 = 708

    ಅಭ್ಯರ್ಥಿ ಅಧಿಕೃತವಾಗಿಲ್ಲ:
    ಅತೀ ದೊಡ್ಡ ಕೂಟವಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಇನ್ನೂ ಕೂಡಾ ತನ್ನ ಅಭ್ಯರ್ಥಿಯನ್ನು ಅಧಿಕೃತಗೊಳಿಸಿಲ್ಲ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಎನ್‍ಡಿಎಯೇತರ ಪಕ್ಷಗಳ ಸಭೆ ನಡೆದಿದ್ದರೂ ಅಭ್ಯರ್ಥಿ ಅಂತಿಮವಾಗಿಲ್ಲ. ಒಂದು ವೇಳೆ ಸಹಮತದ ಅಭ್ಯರ್ಥಿಯನ್ನು ಘೋಷಿಸಿದರೆ ಎನ್‍ಡಿಎ ಬೆಂಬಲಿಸಲು ಸಿದ್ಧ ಎಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಹೇಳಿವೆಯಾದರೂ ಇದುವರೆಗೆ ಅದರ ಸೂಚನೆ ಕಂಡುಬಂದಿಲ್ಲ. ಆದರೆ ಎನ್‍ಡಿಎ ಅಭ್ಯರ್ಥಿಗೆ ಕೇವಲ 20 ಸಾವಿರ ಮತಗಳ ಕೊರತೆಯಷ್ಟೇ ಕಾಡುತ್ತಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷಗಳಿಗೆ ವಿಪ್ ನೀಡುವಂತಿಲ್ಲ.

    ಬಲಾಬಲ ಹೇಗಿದೆ?
    ರಾಷ್ಟ್ರಪತಿ ಚುನಾವಣೆಯಲ್ಲಿ ಚಲಾವಣೆಯಾಗಲಿರುವ ಮತಗಳ ಒಟ್ಟು ಮೌಲ್ಯ: 10,98,882
    ರಾಷ್ಟ್ರಪತಿಗಳ ಆಯ್ಕೆಗೆ ಅಗತ್ಯವಾಗಿರುವ ಮತಗಳ ಮೌಲ್ಯ : 5,49,442

    ಎನ್‍ಡಿಎ ಒಕ್ಕೂಟದ ಮತ ಮೌಲ್ಯ: 5,27,371 ಅಂದರೆ ಶೇಕಡಾ 48.10
    2,37,888 (ಲೋಕಸಭೆ)+ 49,560 (ರಾಜ್ಯಸಭೆ) + 2,39,923 (ವಿಧಾನಸಭೆ)

    ಯುಪಿಎ ಒಕ್ಕೂಟದ ಮತ ಮೌಲ್ಯ: 1,73,849 ಅಂದರೆ ಶೇಕಡಾ 15.90
    34,692 (ಲೋಕಸಭೆ) + 46,020 (ರಾಜ್ಯಸಭೆ) + 93,137 (ವಿಧಾನಸಭೆ)

    ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಪಕ್ಷಗಳ ಮತ ಮೌಲ್ಯ : 2,60,392 ಅಂದರೆ ಶೇಕಡಾ 23.80
    60,180 (ಲೋಕಸಭೆ)+ 47,436(ರಾಜ್ಯಸಭೆ)+ 1,52,776(ವಿಧಾನಸಭೆ)

    ಇತರೆ ವಿರೋಧ ಪಕ್ಷಗಳ ಮತ ಮೌಲ್ಯ: 1,33,907 ಅಂದರೆ ಶೇಕಡಾ 12.80
    50,268 (ಲೋಕಸಭೆ)+ 20,532 (ರಾಜ್ಯಸಭೆ)+ 63,107(ವಿಧಾನಸಭೆ)

  • ನನ್ನ ಹೆಸರಿನಲ್ಲಿ ಯಾವುದೇ ಸ್ಮಾರಕ ನಿರ್ಮಿಸಬೇಡಿ, ನಾನು ಮೃತಪಟ್ಟ ಬಳಿಕ  ಸಸಿಗಳನ್ನು ನೆಡಿ: ಅನಿಲ್ ಮಾಧವ್ ದವೆ ವಿಲ್

    ನನ್ನ ಹೆಸರಿನಲ್ಲಿ ಯಾವುದೇ ಸ್ಮಾರಕ ನಿರ್ಮಿಸಬೇಡಿ, ನಾನು ಮೃತಪಟ್ಟ ಬಳಿಕ ಸಸಿಗಳನ್ನು ನೆಡಿ: ಅನಿಲ್ ಮಾಧವ್ ದವೆ ವಿಲ್

    ನವದೆಹಲಿ: “ನಾನು ಮೃತಪಟ್ಟ ಬಳಿಕ ಸಸಿಗಳನ್ನು ನೆಡಿ, ನದಿಗಳನ್ನು ರಕ್ಷಿಸಿ ಆದರೆ ಎಲ್ಲಿಯೂ ನನ್ನ ಹೆಸರನ್ನು ಬಳಸಬೇಡಿ”

    ಇದು ಇಂದು ನಿಧನರಾದ  ಕೇಂದ್ರ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಅನಿಲ್ ಮಾಧವ್ ದವೆ ಅವರ ಬರೆದಿದ್ದ ವಿಲ್ ನಲ್ಲಿರುವ ಸಾಲುಗಳು.

    ಈ ವಿಲ್ ಇತ್ತೀಚಿಗೆ ಬರೆದಿದ್ದು ಅಲ್ಲ. ಇದು ದವೆ ಅವರು 2012ರಲ್ಲಿ ಬರೆದಿದ್ದ ವಿಲ್. ಈ ವಿಲ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರ ಸ್ನೇಹಿತ ಮಧ್ಯಪ್ರದೇಶ ಬಿಜೆಪಿಯ ಉಪಾಧ್ಯಕ್ಷ ವಿಜೇಶ್ ಲುನಾತ್, ದವೆ ಅವರು 2012ರ ಡಿಸೆಂಬರ್ ನಲ್ಲಿ ಬೈಪಾಸ್ ಸರ್ಜರಿಗೆ ಒಳಗಾಗಿದ್ದರು. ಈ ವೇಳೆ ಈ ವಿಲ್ ಅನ್ನು ಬರೆದು ಸಹಿ ಹಾಕಿದ್ದರು ಎಂದು ತಿಳಿಸಿದ್ದಾರೆ.

    ತನ್ನ ಅಂತ್ಯಸಂಸ್ಕಾರವನ್ನು ಮಧ್ಯಪ್ರದೇಶದ ಹೊಸಂಗದಬಾದ್ ಜಿಲ್ಲೆಯ ನರ್ಮದಾ ನದಿಯ ದಂಡೆಯಲ್ಲಿರುವ ಭಂದ್ರಾಭನ್‍ದಲ್ಲಿ ನಡೆಯಬೇಕೆಂದು ಎಂದು ಅನಿಲ್ ಮಾಧವ್ ಹೇಳಿಕೊಂಡಿದ್ದರು.

    ನನ್ನ ಹೆಸರಿನಲ್ಲಿ ಯಾವುದೇ ಸ್ಮಾರಕ, ಸ್ಪರ್ಧೆ, ಪ್ರತಿಮೆಗಳನ್ನು ನಿರ್ಮಿಸಬೇಡಿ. ನನ್ನ ಬಗ್ಗೆ ಯಾರದ್ರೂ ಏನಾದರೂ ಮಾಡಬೇಕು ಎಂದಿದ್ದರೆ ಸಸಿಗಳನ್ನು ನೆಡಿ, ನದಿಯನ್ನು ರಕ್ಷಿಸಿ. ಅದು ನನಗೆ ಸಂತೋಷವನ್ನು ನೀಡುತ್ತದೆ ಎಂದು ಹಿಂದಿಯಲ್ಲಿ ದವೆ ವಿಲ್ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಲ್ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

    61 ವರ್ಷದ ಅನಿಲ್ ಮಾಧವ್ ದವೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಹೃದಯಾಘಾತವಾಗಿ, ಇಂದು ಮೃತಪಟ್ಟಿದ್ದಾರೆ.

    2009ರಿಂದ ರಾಜ್ಯಸಭಾ ಸದಸ್ಯರಾಗಿರುವ ಇವರು 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಕೇಂದ್ರ ಅರಣ್ಯ ಹಾಗೂ ಪರಿಸರ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಸಚಿವರ ಅಕಾಲಿಕ ನಿಧನಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸೇರಿದಂತೆ ಗಣ್ಯಾತಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

    ಸಚಿವರ ಅಕಾಲಿಕ ನಿಧನ ನಿಜಕ್ಕೂ ಆಘಾತ ತಂದಿದೆ. ದೇವರು ಅವರ ಕುಟುಂಬಸ್ಥರಿಗೆ ದುಃಖ ಭರಿಸೋ ಶಕ್ತಿ ನೀಡಲಿ ಅಂತಾ ರಾಷ್ಟ್ರಪತಿಯವರು ಸಂತಾಪ ಸೂಚಿಸಿದ್ದಾರೆ.

    `ಗೌರವಾನ್ವಿತ ಸಹೋದ್ಯೋಗಿ, ಸ್ನೇಹಿತ, ಪರಿಸರ ಸಚಿವ ಅನಿಲ್ ಮಾಧವ್ ದವೆ ಅವರ ನಿಧನದಿಂದ ಆಘಾತವಾಗಿದೆ. ಸಂತಾಪಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

    `ದವೆ ಅವರೊಬ್ಬ ಉತ್ತಮ ಸಾರ್ವಜನಿಕ ಸೇವಕ. ಪರಿಸರ ರಕ್ಷಣೆಯ ಬಗ್ಗೆ ಅವರಿಗೆ ಅತೀವ ಕಾಳಜಿ ಇತ್ತು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

    `ನಿನ್ನೆ ಸಂಜೆಯಷ್ಟೇ ಅವರ ಬಳಿ ಪ್ರಮುಖ ವಿಷಯಗಳ ಬಗ್ಗೆ ಅವರ ಜತೆ ಮಾತುಕತೆ ನಡೆಸಿದ್ದೆ. ಅವರ ನಿಧನದಿಂದ ನನಗೆ ವೈಯಕ್ತಿಕವಾಗಿಯೂ ನಷ್ಟವಾಗಿದೆ’ ಎಂದು ಮೋದಿ ಹೇಳಿದ್ದಾರೆ.

    ಕೇಂದ್ರ ಸಚಿವ ಅನಿಲ್ ದವೆ ನಿಧನಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಸಂತಾಪ ಸೂಚಿಸಿದ್ದು, `ಅನಿಲ್ ದವೆ ನಿಧನ ಆಘಾತ ತಂದಿದೆ. ಪ್ರಬುದ್ಧ ಮಾತುಗಾರ, ಮಾನವೀಯ ವ್ಯಕ್ತಿಯಾಗಿದ್ರು ದವೆ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಅಂತಾ ಪತ್ರದ ಮೂಲಕ ತಿಳಿಸಿದ್ದಾರೆ.

    ಅನಿಲ್ ಮಾಧವ್ ದವೆ ಅವರು ಜುಲೈ 6, 1956 ರಂದು ಮಧ್ಯಪ್ರದೇಶದ ಬದ್ ನಗರ್ ನಲ್ಲಿ ಜನಿಸಿದ್ದರು.

  • ಕೇಂದ್ರ ಸಚಿವ ಅನಿಲ್ ಮಾಧವ್ ದವೆ ನಿಧನ- ಪ್ರಧಾನಿ ಮೋದಿ ಸಂತಾಪ

    ಕೇಂದ್ರ ಸಚಿವ ಅನಿಲ್ ಮಾಧವ್ ದವೆ ನಿಧನ- ಪ್ರಧಾನಿ ಮೋದಿ ಸಂತಾಪ

    ನವದೆಹಲಿ: ಕೇಂದ್ರ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಅನಿಲ್ ಮಾಧವ್ ದವೆ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ.

    61 ವರ್ಷ ವಯಸ್ಸಿನ ಸಚಿವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಹೃದಯಾಘಾತವಾಗಿ, ಇಂದು ಮೃತಪಟ್ಟಿದ್ದಾರೆ.

    2009ರಿಂದ ರಾಜ್ಯಸಭಾ ಸದಸ್ಯರಾಗಿರುವ ಇವರು 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಕೇಂದ್ರ ಅರಣ್ಯ ಹಾಗೂ ಪರಿಸರ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಸಚಿವರ ಅಕಾಲಿಕ ನಿಧನಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸೇರಿದಂತೆ ಗಣ್ಯಾತಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

    ಸಚಿವರ ಅಕಾಲಿಕ ನಿಧನ ನಿಜಕ್ಕೂ ಆಘಾತ ತಂದಿದೆ. ದೇವರು ಅವರ ಕುಟುಂಬಸ್ಥರಿಗೆ ದುಃಖ ಭರಿಸೋ ಶಕ್ತಿ ನೀಡಲಿ ಅಂತಾ ರಾಷ್ಟ್ರಪತಿಯವರು ಸಂತಾಪ ಸೂಚಿಸಿದ್ದಾರೆ.

    `ಗೌರವಾನ್ವಿತ ಸಹೋದ್ಯೋಗಿ, ಸ್ನೇಹಿತ, ಪರಿಸರ ಸಚಿವ ಅನಿಲ್ ಮಾಧವ್ ದವೆ ಅವರ ನಿಧನದಿಂದ ಆಘಾತವಾಗಿದೆ. ಸಂತಾಪಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

    `ದವೆ ಅವರೊಬ್ಬ ಉತ್ತಮ ಸಾರ್ವಜನಿಕ ಸೇವಕ. ಪರಿಸರ ರಕ್ಷಣೆಯ ಬಗ್ಗೆ ಅವರಿಗೆ ಅತೀವ ಕಾಳಜಿ ಇತ್ತು’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

    `ನಿನ್ನೆ ಸಂಜೆಯಷ್ಟೇ ಅವರ ಬಳಿ ಪ್ರಮುಖ ವಿಷಯಗಳ ಬಗ್ಗೆ ಅವರ ಜತೆ ಮಾತುಕತೆ ನಡೆಸಿದ್ದೆ. ಅವರ ನಿಧನದಿಂದ ನನಗೆ ವೈಯಕ್ತಿಕವಾಗಿಯೂ ನಷ್ಟವಾಗಿದೆ’ ಎಂದು ಮೋದಿ ಹೇಳಿದ್ದಾರೆ.

    ಕೇಂದ್ರ ಸಚಿವ ಅನಿಲ್ ದವೆ ನಿಧನಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಸಂತಾಪ ಸೂಚಿಸಿದ್ದು, `ಅನಿಲ್ ದವೆ ನಿಧನ ಆಘಾತ ತಂದಿದೆ. ಪ್ರಬುದ್ಧ ಮಾತುಗಾರ, ಮಾನವೀಯ ವ್ಯಕ್ತಿಯಾಗಿದ್ರು ದವೆ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಅಂತಾ ಪತ್ರದ ಮೂಲಕ ತಿಳಿಸಿದ್ದಾರೆ.

    ಅನಿಲ್ ಮಾಧವ್ ದವೆ ಅವರು ಜುಲೈ 6, 1956 ರಂದು ಮಧ್ಯಪ್ರದೇಶದ ಬದ್ ನಗರ್ ನಲ್ಲಿ ಜನಿಸಿದ್ದರು.

  • ರಾಷ್ಟ್ರಪತಿ ರೇಸಲ್ಲಿ ಮಣ್ಣಿನ ಮಗ ದೇವೇಗೌಡ್ರ ಹೆಸರು- ಗೌಡ್ರಿಗೆ ಒಲಿಯುತ್ತಾ ಪ್ರಥಮ ಪ್ರಜೆ ಪಟ್ಟ?

    ರಾಷ್ಟ್ರಪತಿ ರೇಸಲ್ಲಿ ಮಣ್ಣಿನ ಮಗ ದೇವೇಗೌಡ್ರ ಹೆಸರು- ಗೌಡ್ರಿಗೆ ಒಲಿಯುತ್ತಾ ಪ್ರಥಮ ಪ್ರಜೆ ಪಟ್ಟ?

    ಬೆಂಗಳೂರು: ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರಿಗೆ ರಾಷ್ಟ್ರಪತಿ ಹುದ್ದೆ ಒಲಿದು ಬರುತ್ತಾ? ಇಂತಹ ಒಂದು ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ. ಎನ್‍ಡಿಎ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ಬೆಂಬಲದೊಂದಿಗೆ ದೇವೇಗೌಡರನ್ನ ಸರ್ವಸಮ್ಮತ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿದೆ ಎಂಬ ಸುದ್ದಿ ದೆಹಲಿ ಮಟ್ಟದಲ್ಲಿ ವ್ಯಾಪಕವಾಗಿದೆ.

    ಇಂತಹ ಒಂದು ಸುದ್ದಿ ಹಿಂದೊಮ್ಮೆ ಬಂದಾಗ ದೇವೇಗೌಡರು ರಾಷ್ಟ್ರಪತಿ ಅಭ್ಯರ್ಥಿ ಆಗುವ ಸಾಧ್ಯತೆಯನ್ನ ಸಾರಾಸಗಟಾಗಿ ತಳ್ಳಿಹಾಕಿದ್ರು. ಹಾಗಿದ್ದರೂ ಕೂಡ ದೇವೇಗೌಡರನ್ನ ಎನ್‍ಡಿಎ ವಿರುದ್ಧ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಆಶಯವನ್ನ ಬಿಜೆಪಿ ವಿರೋಧಿ ಗುಂಪು ರಾಷ್ಟ್ರಮಟ್ಟದಲ್ಲಿ ವ್ಯಕ್ತಪಡಿಸುತ್ತಿದೆ. ದೇವೇಗೌಡರು ಒಪ್ಪದಿದ್ದರೆ ಜೆಡಿಯು ಮುಖಂಡ ಶರದ್ ಯಾದವ್‍ರನ್ನ ಕಣಕ್ಕಿಳಿಸುವ ಸಾಧ್ಯತೆಯಿದೆ.

    ಈ ಬಗ್ಗೆ ಈಗಾಗಲೇ ಎಡರಂಗ ಹಾಗೂ ಜನತಾ ಪರಿವಾರದ ಮುಖಂಡರು ಸೋನಿಯಾ ಗಾಂಧಿ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮತ್ತೊಮ್ಮೆ ಕಣಕ್ಕಿಳಿಯಲು ಒಪ್ಪಿದ್ರೆ ಅವರನ್ನೇ ಅಭ್ಯರ್ಥಿಯಾಗಿ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.

  • ಆರ್‍ಎಸ್‍ಎಸ್‍ಗಾಗಿ ದುಡಿಯುತ್ತೇನೆ, ರಾಷ್ಟ್ರಪತಿ ಪಟ್ಟ ಬೇಡ: ಮೋಹನ್ ಭಾಗವತ್

    ಆರ್‍ಎಸ್‍ಎಸ್‍ಗಾಗಿ ದುಡಿಯುತ್ತೇನೆ, ರಾಷ್ಟ್ರಪತಿ ಪಟ್ಟ ಬೇಡ: ಮೋಹನ್ ಭಾಗವತ್

    ನವದೆಹಲಿ: ನಾನು ಆರ್‍ಎಸ್‍ಎಸ್ ಸಂಘಟನೆಗೆ ದುಡಿಯುತ್ತೇನೆ. ನನಗೆ ರಾಷ್ಟ್ರಪತಿ ಹುದ್ದೆ ಬೇಡ ಅಂತಾ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಸ್ಪಷ್ಟಪಡಿಸಿದ್ದಾರೆ.

    ಕಳೆದ ಹಲವು ದಿನಗಳಿಂದ ಭಾರತದ ರಾಷ್ಟ್ರಪತಿ ಹುದ್ದೆಗೆ ಹೆಸರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಸ್ಪಷ್ಟನೆ ನೀಡಿದ ಅವರು, ನಾನು ರಾಷ್ಟ್ರಪತಿ ಭವನಕ್ಕೆ ಹೋಗಲು ಇಚ್ಚಿಸುವುದಿಲ್ಲ. ಒಂದು ವೇಳೆ ರಾಷ್ಟ್ರಪತಿ ಹುದ್ದೆ ನೀಡುತ್ತೇವೆ ಅಂದ್ರೂ ನಾನು ಆ ಹುದ್ದೆಯನ್ನು ಸ್ವೀಕರಿಸಲ್ಲ. ನಾನು ಯಾವತ್ತೂ ಸಂಘಕ್ಕಾಗಿ ಕೆಲಸ ಮಾಡುತ್ತೇನೆ ಎಂದ ಅವರು, ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವ ವಿಷಯಗಳೆಲ್ಲವೂ ನಡೆಯಲ್ಲ ಅಂತಾ ಹೇಳಿದ್ದಾರೆ.

    ಹಿಂದೂ ರಾಷ್ಟ್ರದ ಕನಸನ್ನು ಸಾಕಾರಗೊಳಿಸಲು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ರಾಷ್ಟ್ರಪತಿಯಾಗಿಸಬೇಕು ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.

    ಇದುವರೆಗೆ ಬಿಜೆಪಿಯಿಂದ ಸುಷ್ಮಾ ಸ್ವರಾಜ್, ಸುಮಿತ್ರಾ ಮಹಾಜನ್ ಹಾಗೂ ಎಲ್‍ಕೆ ಅಡ್ವಾಣಿ ಅವರ ಹೆಸರುಗಳು ರಾಷ್ಟ್ರಪತಿ ಹುದ್ದೆಗೆ ಕೇಳಿಬಂದಿದ್ದವು. ಬಳಿಕ ಶಿವಸೇನೆ ಮೋಹನ್ ಭಾಗವತ್ ಅವರ ಹೆಸರನ್ನು ಪ್ರಸ್ತಾಪಿಸಿತ್ತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಧಿಕಾರವಧಿಯು ಜುಲೈ 24ರಂದು ಅಂತ್ಯಗೊಳ್ಳಲಿದೆ.

  • ಬಿಜೆಪಿ ಅಭ್ಯರ್ಥಿಯೇ ರಾಷ್ಟ್ರಪತಿ ಆಗ್ತಾರಾ? ಎಷ್ಟು ಮತ ಬೇಕು? ಈಗ ಎಷ್ಟು ಮತ ಇದೆ?

    ಬಿಜೆಪಿ ಅಭ್ಯರ್ಥಿಯೇ ರಾಷ್ಟ್ರಪತಿ ಆಗ್ತಾರಾ? ಎಷ್ಟು ಮತ ಬೇಕು? ಈಗ ಎಷ್ಟು ಮತ ಇದೆ?

    ನವದೆಹಲಿ: ಉತ್ತರಪ್ರದೇಶದಲ್ಲಿ ಭಾರೀ ಬಹುಮತದೊಂದಿಗೆ ಗೆದ್ದಿರುವ ಬಿಜೆಪಿ ವಿಧಾನಸಭೆಯಲ್ಲಿ ಪಕ್ಷದ ಸ್ಥಾನಗಳನ್ನಷ್ಟೇ ಹೆಚ್ಚಿಕೊಂಡಿಲ್ಲ. ಬದಲಾಗಿ ಮುಂಬರುವ ರಾಷ್ಟ್ರಪತಿ ಚುನಾವಣೆಯ ಮೇಲೂ ಬಿಜೆಪಿಯ ಈ ಗೆಲುವು ಭಾರೀ ಪ್ರಭಾವ ಬೀರಲಿದೆ.

    ಉತ್ತರಪ್ರದೇಶದಲ್ಲಿ 325 ಸ್ಥಾನ, ಉತ್ತರಾಖಂಡ್‍ನಲ್ಲಿ 56 ಸ್ಥಾನ, ಮಣಿಪುರದಲ್ಲಿ 21, ಪಂಜಾಬ್‍ನಲ್ಲಿ 18 ಹಾಗೂ ಗೋವಾದಲ್ಲಿ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್‍ಡಿಎ ರಾಷ್ಟಪತಿ ಚುನಾವಣೆಗೆ ಹಾದಿ ಸುಗಮಗೊಳಿಸಿಕೊಂಡಿದೆ. ರಾಷ್ಟ್ರಪತಿ ಆಯ್ಕೆಗೆ ಮೋದಿ ಪಡೆ ಬಹುಮತದ ಸನಿಹದಲ್ಲಿ ಬಂದು ನಿಂತಿದೆ. ಜುಲೈಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವಧಿ ಅಂತ್ಯವಾಗುತ್ತಿರುವ ಹನ್ನೆಲೆಯಲ್ಲಿ ರಾಷ್ಟ್ರಪತಿ ಆಯ್ಕೆಯ ಲೆಕ್ಕಾಚಾರ ಗರಿಗೆದರಿದೆ.

    ಎಷ್ಟು ಮತ ಬೇಕು?
    ದೇಶದ ರಾಷ್ಟ್ರಪತಿಯನ್ನು 29 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶ ಪುದುಚೆರಿ ಹಾಗೂ ರಾಜಧಾನಿ ದೆಹಲಿಯ ಎಲ್ಲಾ ಸಂಸದರು ಹಾಗೂ ಶಾಸಕರನ್ನೊಳಗೊಂಡ ಎಲೆಕ್ಟೋರಲ್ ಕಾಲೇಜ್ ಆಯ್ಕೆ ಮಾಡುತ್ತದೆ. ಎಲೆಕ್ಟೋರಲ್ ಕಾಲೇಜ್‍ನ ಒಟ್ಟು ಮತಗಳ ಸಂಖ್ಯೆ 10,98,882. ಇದರಲ್ಲಿ ರಾಷ್ಟಪತಿ ಆಯ್ಕೆಗೆ ಬೇಕಿರುವುದು 5,49,442 ಮತಗಳು.

    ಎನ್‍ಡಿಎ ಬಳಿ ಎಷ್ಟಿದೆ?
    ಪ್ರಸ್ತುತ ಈಗ ದೇಶದಲ್ಲಿ 776 ಸಂಸದರು ಮತ್ತು 4,120 ಶಾಸಕರಿದ್ದಾರೆ. ಇವರ ಎಲ್ಲ ಮತಗಳು ಸೇರಿದರೆ 10,98,882 ಮತಗಳು ಆಗುತ್ತದೆ. ಹೀಗಾಗಿ ರಾಷ್ಟ್ರಪತಿ ಅಭ್ಯರ್ಥಿ ವಿಜಯಿ ಆಗಲು ಒಟ್ಟು ಮತದ ಅರ್ಧಭಾಗಕ್ಕಿಂತ ಹೆಚ್ಚು ಅಂದರೆ 5,49,442 ಮತಗಳ ಅವಶ್ಯಕತೆಯಿದೆ.

    ಉತ್ತರಪ್ರದೇಶದ ಗೆಲುವಿನಿಂದ ಎಲೆಕ್ಟೋರಲ್ ಕಾಲೇಜ್‍ನಲ್ಲಿ ರಾಜ್ಯದ ಬಿಜೆಪಿ ಮತಗಳ ಸಂಖ್ಯೆ 67,600ಕ್ಕೆ ಏರಿದೆ. ಹೀಗಾಗಿ ಸದ್ಯ ಎನ್‍ಡಿಎ ಬಳಿ ಒಟ್ಟು 5,24,920 ಮತಗಳಿವೆ. ರಾಷ್ಟ್ರಪತಿ ಆಯ್ಕೆಗೆ ಎನ್‍ಡಿಎಗೆ ಕೇವಲ 24,522 ಮತಗಳು ಕಡಿಮೆ ಬೀಳಲಿದೆ.

    ಒಂದು ವೇಳೆ ಬಿಜು ಜನತಾ ದಳ ಹಾಗೂ ಎಐಎಡಿಎಂಕೆ ಪಕ್ಷಗಳು ಬೆಂಬಲ ನೀಡಿದರೆ ಎನ್‍ಡಿಎ ಅಭ್ಯರ್ಥಿಯೇ ರಾಷ್ಟ್ರಪತಿಯಾಗಿ ಆಯ್ಕೆಯಾಗೋದು ಬಹುತೇಕ ಖಚಿತವಾಗಲಿದೆ.

    ಇದನ್ನೂ ಓದಿ:ರಾಷ್ಟ್ರಪತಿ ರೇಸ್‍ನಲ್ಲಿ ಇನ್ಫಿ ನಾರಾಯಣಮೂರ್ತಿ!