Tag: ಪ್ರಣಬ್ ಮುಖರ್ಜಿ

  • ಪ್ರಣಬ್ ಬಳಿಕ ಮೋಹನ್ ಭಾಗವತ್ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ ರತನ್ ಟಾಟಾ!

    ಪ್ರಣಬ್ ಬಳಿಕ ಮೋಹನ್ ಭಾಗವತ್ ಜೊತೆ ವೇದಿಕೆ ಹಂಚಿಕೊಳ್ಳಲಿದ್ದಾರೆ ರತನ್ ಟಾಟಾ!

    ಮುಂಬೈ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಂತರ ದೇಶದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರಾಗಿರುವ ರತನ್ ಟಾಟಾರವರು ಆರ್ ಎಸ್‍ಎಸ್‍ ಮುಖ್ಯಸ್ಥ ಮೋಹನ್ ಭಾಗವತ್ ಅವರ ಜತೆ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.

    ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗಸಂಸ್ಥೆಯಾಗಿರುವ `ನಾನಾ ಪಾಲ್ಕರ್ ಸಮಿತಿ’ಯು ಮುಂದಿನ ತಿಂಗಳು ಪುಣೆಯಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ರತನ್ ಟಾಟಾ ಭಾಗವಹಿಸಲಿದ್ದಾರೆ ಎಂದು ಸಂಘದ ಮೂಲಗಳು ತಿಳಿಸಿವೆ. ಆದರೆ ಈ ಕಾರ್ಯಕ್ರಮದ ಬಗ್ಗೆ ಅಧಿಕೃತ ಘೋಷಣೆಯಾಗಬೇಕಿದ್ದು, ಆಗಸ್ಟ್ 24ರಂದು ಕಾರ್ಯಕ್ರಮ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಇದನ್ನೂ ಓದಿ: #PranabAtRSS: ರಾಷ್ಟ್ರ, ರಾಷ್ಟ್ರೀಯತೆ, ರಾಷ್ಟ್ರಭಕ್ತಿ ಬಗ್ಗೆ ಮಾತನಾಡಿದರು ಪ್ರಣಬ್ ದಾದಾ!

    ಕಳೆದ ತಿಂಗಳು ನಾಗ್ಪುರದಲ್ಲಿ ನಡೆದ ಆರ್ ಎಸ್‍ಎಸ್‍ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪಾಲ್ಗೊಂಡು ದೇಶಾದ್ಯಂತ ಸಂಚಲನ ಮೂಡಿಸಿದ್ದರು. ಪ್ರಣಬ್ ಮುಖರ್ಜಿಯವರ ಭೇಟಿಯಿಂದ ಆರ್ ಎಸ್‍ಎಸ್‍ಗೆ ಸೇರ್ಪಡೆಯಾಗುವ ಕಾರ್ಯಕರ್ತರ ಸಂಖ್ಯೆ ಹೆಚ್ಚಾಗಿದೆ ಸಂಘ ತಿಳಿಸಿತ್ತು.

  • ರಾಹುಲ್ ಗಾಂಧಿ ಆಯೋಜನೆಯ ಇಫ್ತಾರ ಕೂಟದಲ್ಲಿ ಭಾಗಿಯಾದ ಪ್ರಣಬ್ ಮುಖರ್ಜಿ

    ರಾಹುಲ್ ಗಾಂಧಿ ಆಯೋಜನೆಯ ಇಫ್ತಾರ ಕೂಟದಲ್ಲಿ ಭಾಗಿಯಾದ ಪ್ರಣಬ್ ಮುಖರ್ಜಿ

    ನವದೆಹಲಿ: ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಬಳಿಕ ಆಯೋಜಿಸಿದ್ದ ಮೊದಲ ಇಫ್ತಾರ್ ಕೂಡದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

    ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಪ್ರಣಬ್ ಮುಖರ್ಜಿ ಅವರಿಗೆ ಆಹ್ವಾನ ನೀಡಿಲ್ಲ ಎಂಬ ಸುದ್ದಿಗಳು ಕೇಳಿ ಬಂದಿದ್ದವು. ಈ ಕುರಿತು ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ಪಕ್ಷ ವಕ್ತಾರರಾದ ರಣ್‍ದೀಪ್ ಸಿಂಗ್ ಸೂರಜ್‍ವಾಲಾ ಅವರು, ಪ್ರಣಬ್ ಅವರಿಗೆ ವಿಶೇಷ ಆಹ್ವಾನ ನೀಡಲಾಗಿತ್ತು. ತಮ್ಮ ಆಹ್ವಾನವನ್ನು ಮನ್ನಿಸಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಈ ಹಿಂದೆ ಕಾಂಗ್ರೆಸ್ 2015 ರಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಇಫ್ತಾರ್ ಕೂಟವನ್ನು ಏರ್ಪಡಿಸಿತ್ತು. ಆದರೆ ಇದಾದ ಬಳಿಕ ಎರಡು ವರ್ಷ ಕಾರ್ಯಕ್ರಮವನ್ನು ಏರ್ಪಡಿಸಿರಲಿಲ್ಲ. ರಾಹುಲ್ ಗಾಂಧಿ ಅವರು ಎಐಸಿಸಿ ಅಧಕ್ಷರಾದ ಬಳಿಕ ಮೊದಲ ಬಾರಿಗೆ ಇಫ್ತಾರ ಕೂಟವನ್ನು ಏರ್ಪಡಿಸಲಾಗಿದೆ.

    ಈ ಕಾರ್ಯಕ್ರಮದಲ್ಲಿ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಹಲವು ಪಕ್ಷಗಳ ಮುಖಂಡರು ಹಾಗೂ ನಾಯಕರು ಭಾಗವಹಿಸಿದ್ದರು.

    ಕಳೆದ ಕೆಲ ದಿನಗಳ ಹಿಂದೆ ನಾಗ್ಪುರದಲ್ಲಿ ನಡೆದ ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಅವರು ಭಾಗವಹಿಸುವ ಕುರಿತು ಹಲವು ಕಾಂಗ್ರೆಸ್ ನಾಯಕರು ಅಸಮಾಧಾನವನ್ನು ಹೊರಹಾಕಿದ್ದರು. ಸ್ವತಃ ಪ್ರಣಬ್ ಅವರ ಪುತ್ರಿ ಸಹ ಈ ಕುರಿತು ಟ್ವೀಟ್ ಮಾಡಿ ಆರ್ ಎಸ್‍ಎಸ್ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದ್ದರು.

  • ಯಾವುದರ ಬಗ್ಗೆ ತಂದೆಗೆ ಎಚ್ಚರಿಕೆ ಕೊಟ್ಟಿದ್ದೆನೋ ಅದೇ ಆಗಿದೆ: ಶರ್ಮಿಷ್ಠಾ ಮುಖರ್ಜಿ

    ಯಾವುದರ ಬಗ್ಗೆ ತಂದೆಗೆ ಎಚ್ಚರಿಕೆ ಕೊಟ್ಟಿದ್ದೆನೋ ಅದೇ ಆಗಿದೆ: ಶರ್ಮಿಷ್ಠಾ ಮುಖರ್ಜಿ

    ನವದೆಹಲಿ: ರಾಷ್ಟ್ರೀಯ ಸೇವಕ ಸಂಘ (ಆರ್‍ಎಸ್‍ಎಸ್)ದ ಸಭೆಯಲ್ಲಿ ಕಾಂಗ್ರೆಸ್‍ನ ಪ್ರಣಬ್ ಮುಖರ್ಜಿಯವರು ಆರ್‍ಎಸ್‍ಎಸ್ ಮಾದರಿಯಲ್ಲೇ ವಂದನೆ ಸಲ್ಲಿಸಿದ ನಕಲಿ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ತೀವ್ರ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.

    ಗುರುವಾರ ನಾಗ್ಪುರದಲ್ಲಿ ನಡೆದ ಆರ್‍ಎಸ್‍ಎಸ್‍ನ ಮೂರನೇ ವಾರ್ಷಿಕ ಸಭೆಯಲ್ಲಿ ಕಾಂಗ್ರೆಸ್‍ನ ಹಿರಿಯ ಮುಖಂಡರಾದ ಪ್ರಣಬ್ ಮುಖರ್ಜಿಯವರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಎಲ್ಲರಿಗೂ ವಂದನೆ ಸಲ್ಲಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಇಂದು ಸಭೆಯಲ್ಲಿ ಪ್ರಣಬ್ ಮುಖರ್ಜಿಯವರು ಆರ್‍ಎಸ್‍ಎಸ್‍ನ ರೀತಿಯಲ್ಲೇ ವಂದನೆ ಸಲ್ಲಿಸಿದಂತಹ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು, ತೀವ್ರ ಚರ್ಚೆಗೆ ಗುರಿಯಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿದ ಪ್ರಣಬ್ ಮುಖರ್ಜಿಯವರ ಮಗಳು ಶರ್ಮಿಷ್ಠಾ ಮುಖರ್ಜಿ, ಇದು ಬಿಜೆಪಿ ಮತ್ತು ಆರ್‍ಎಸ್‍ಎಸ್‍ನ ಕುತಂತ್ರವಾಗಿದೆ ಎಂದು ಆರೋಪಿಸಿದ್ದಾರೆ. ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಸಭೆಯಲ್ಲಿ ತೆಗೆದ ಅಸಲಿ ಚಿತ್ರಗಳನ್ನು ಅಪ್‍ಲೋಡ್ ಮಾಡಿ ಘಟನೆ ಕುರಿತು ಸ್ಪಷ್ಟನೆ ನೀಡಿದ್ದಾರೆ.

    ಈ ಮೊದಲು ಶರ್ಮಿಷ್ಠಾ ಆರ್‍ಎಸ್‍ಎಸ್‍ನ ಭೇಟಿಯನ್ನು ತೀವ್ರವಾಗಿ ವಿರೋಧಿಸಿದ್ದರು. ಆರ್‍ಎಸ್‍ಎಸ್ ಮತ್ತು ಬಿಜೆಪಿಯ ಕುತಂತ್ರದ ಭಯದಿಂದ ತಂದೆಗೆ ಮೊದಲೇ ಎಚ್ಚರಿಸಿದ್ದೆ. ಆದರೆ ಯಾವುದು ನಡೆಯಬಾರದು ಎಂದುಕೊಂಡಿದ್ದನೋ, ಅದೇ ನಡಿದಿದೆ ಎಂದು ಹೇಳಿದ್ದಾರೆ. ಅಲ್ಲದೆ ಪ್ರಣಬ್ ಮುಖರ್ಜಿಯವರು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳನ್ನು ಈ ವೇಳೆ ಅಲ್ಲಗಳೆದಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಆರ್‍ಎಸ್‍ಎಸ್‍ನ ಮುಖಂಡರು ಈ ಫೋಟೋದ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎಂದು ಆರೋಪಿಸಿದ್ದಾರೆ.

  • #PranabAtRSS: ರಾಷ್ಟ್ರ, ರಾಷ್ಟ್ರೀಯತೆ, ರಾಷ್ಟ್ರಭಕ್ತಿ ಬಗ್ಗೆ ಮಾತನಾಡಿದರು ಪ್ರಣಬ್ ದಾದಾ!

    #PranabAtRSS: ರಾಷ್ಟ್ರ, ರಾಷ್ಟ್ರೀಯತೆ, ರಾಷ್ಟ್ರಭಕ್ತಿ ಬಗ್ಗೆ ಮಾತನಾಡಿದರು ಪ್ರಣಬ್ ದಾದಾ!

    ನಾಗ್ಪುರ: ಕಾಂಗ್ರೆಸ್ ಹೈಕಮಾಂಡ್ ಹಾಗೂ ನಾಯಕರ ತೀವ್ರ ವಿರೋಧದ ನಡುವೆಯೇ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇಂದು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರ್.ಎಸ್.ಎಸ್ ಮುಖ್ಯ ಕಚೇರಿಗೆ ಭೇಟಿ ನೀಡಿದರು.

    ಆರ್ ಎಸ್‍ಎಸ್‍ನ ತೃತೀಯ ವರ್ಷದ ಸಂಘ ಶಿಕ್ಷಾ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಷ್ಟ್ರ, ರಾಷ್ಟ್ರೀಯತೆ ಮತ್ತು ರಾಷ್ಟ್ರಭಕ್ತಿಯ ಅಂಶಗಳನ್ನು ಉಲ್ಲೇಖಿಸಿದರು.

    ವಸುದೈವ ಕುಟುಂಬಕಂ ಎನ್ನುವುದರಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ರಾಷ್ಟ್ರೀಯತೆ ಮತ್ತು ದೇಶಭಕ್ತಿ ಎರಡೂ ಒಂದೇ. ಸರ್ವೇ ಜನೋ, ಸುಖಿನೋ ಭವಂತು. ಇಡೀ ವಿಶ್ವವೇ ಒಂದು ಕುಟುಂಬ ಎಂಬ ಆಶಯವನ್ನು ವ್ಯಕ್ತಪಡಿಸಿದರು.

    ಇದೇ ವೇಳೆ ದೇಶದ ಭವ್ಯ ಇತಿಹಾಸದ ಕುರಿತು ಹಲವು ಘಟನೆಗಳನ್ನು ಸ್ಮರಿಸಿದ ಅವರು, ಚಾಣಕ್ಯನ ಅರ್ಥ ಶಾಸ್ತ್ರ, ಅಶೋಕ, ಮೌರ್ಯರ ಆಡಳಿತ ಸೇರಿದಂತೆ ಬ್ರಿಟಿಷ್ ಆಳ್ವಿಕೆ, ದೇಶಭಕ್ತರು, ರಾಜಕಾರಣಿಗಳು, ಸ್ವಾತಂತ್ರ್ಯ ಹೋರಾಟದ ಅಂಶಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.

    ರಾಷ್ಟ್ರೀಯತೆ ಕುರಿತು ನೆಹರೂ ಅವರ `ಡಿಸ್ಕವರಿ ಆಫ್ ಇಂಡಿಯಾ’ ಪುಸ್ತಕವನ್ನು ಪ್ರಸ್ತಾಪಿಸಿದ ಅವರು, ರಾಷ್ಟ್ರೀಯ ಎಂಬುವುದು, ಹಿಂದೂ, ಮುಸ್ಲಿಂ, ಸಿಖ್ ಹಾಗೂ ಭಾರತದ ಇತರ ಧರ್ಮಗಳ ಸೈದ್ಧಾಂತಿಕ ಸಮ್ಮಿಲನದಿಂದ ಮಾತ್ರ ಹೊರಬರಲು ಸಾಧ್ಯ ಎನ್ನುವ ಮನವರಿಕೆಯಾಗಿದೆ ಎಂಬ ಅರ್ಥ ಸಾರುವ ಸಾಲುಗಳನ್ನು ಉಲ್ಲೇಖಿಸಿದರು.

    ಇದೇ ವೇಳೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ನಮ್ಮನ್ನು ನಡೆಸುತ್ತಿದೆ. ಇವುಗಳು ನಮ್ಮ ಮಾರ್ಗದರ್ಶಿಗಳಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುವುದು ಒಂದು ಮಾರ್ಗಸೂತ್ರ. ಒಂದೇ ಸಂವಿಧಾನದ ಅಡಿ, ಒಂದಾಗಿ ಹಲವು ಭಾಷೆ, ಧರ್ಮದವರು ಗುರುತಿಸಿಕೊಳ್ಳುತ್ತಿದ್ದಾರೆ ಎಂದರು.

    ಇದಕ್ಕೂ ಮೊದಲು ಅವರು ಆರ್.ಎಸ್.ಎಸ್ ಸಂಸ್ಥಾಪಕ ಕೆ.ಬಿ. ಹೆಡಗೇವಾರ್ ಜನ್ಮಸ್ಥಳಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಇಲ್ಲಿನ ಸಂದರ್ಶಕರ ಪುಸ್ತಕದಲ್ಲಿ, ಭಾರತಮಾತೆಯ ಶ್ರೇಷ್ಟ ಪುತ್ರ ಕೆಬಿ ಹೆಡಗೇವಾರ್ ಅವರಿಗೆ ಗೌರವ ಸಲ್ಲಿಸಲು ಆಗಮಿಸಿದ್ದೇನೆ ಎಂದು ಬರೆದು ತಮ್ಮ ಹಸ್ತಾಕ್ಷರ ಮಾಡಿದರು.

    ಇದಕ್ಕೂ ಮುನ್ನ ಇಂದು ಬೆಳಗ್ಗೆಯಿಂದಲೇ ಕಾಂಗ್ರೆಸ್ ನಾಯಕರು ಪ್ರಣಬ್ ಮುಖರ್ಜಿ ಭೇಟಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯ ಸಭಾ ಸದಸ್ಯ ಹಾಗೂ ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್ ಅವರು, ಪ್ರಣಬ್ ದಾ ಇದನ್ನು ನಾವು ನಿಮ್ಮಿಂದ ನಿರೀಕ್ಷಿಸಿರಲಿಲ್ಲ ಎಂದು ಟ್ವೀಟ್ ಮಾಡಿದ್ದರು.

    ಪ್ರಣಬ್ ಮುಖರ್ಜಿ ಅವರು ಭಾಷಣ ಆರಂಭಿಸುವುದಕ್ಕೂ ಕೆಲವೇ ಗಂಟೆಗಳ ಮೊದಲು ಕಾಂಗ್ರೆಸ್ ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಆರ್.ಎಸ್.ಎಸ್ ಕೆಲಸ ಕಾರ್ಯಗಳನ್ನು ಟೀಕಿಸಿ ಟ್ವೀಟ್ ಮಾಡಲಾಗಿತ್ತು. ಇಂದಿನ ಭೇಟಿ ವೇಳೆ ಪ್ರಣಬ್ ಮುಖರ್ಜಿ ಅವರು ಏನೆಲ್ಲಾ ಮಾತನಾಡುತ್ತಾರೋ ಎಂದು ಕಾಂಗ್ರೆಸ್ ನಾಯಕರು ಆತಂಕಗೊಳಗಾಗಿದ್ದಂತೂ ಸುಳ್ಳಲ್ಲ.

    ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಪ್ರತಿವರ್ಷದಂತೆ ಈ ಬಾರಿಯೂ ನಾಗ್ಪುರದಲ್ಲಿ ಸಂಘ ಶಿಕ್ಷಾ ವರ್ಗದ ಸಮಾರೋಪ ನಡೆಯುತ್ತಿದೆ. ಪ್ರತಿಬಾರಿಯೂ ನಾವು ಈ ದೇಶಕ್ಕೆ ಸೇವೆ ಸಲ್ಲಿಸಿದ ಪ್ರಮುಖ ವ್ಯಕ್ತಿಗಳನ್ನು ಆಹ್ವಾನಿಸುತ್ತೇವೆ. ಅದರಂತೆಯೇ ನಾವು ಈ ಬಾರಿ ಪ್ರಣಬ್ ಮುಖರ್ಜಿ ಅವರನ್ನು ಆಹ್ವಾನಿಸಿದ್ದೇವೆ. ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಕ್ಷಣ ಪ್ರಣಬ್ ಬದಲಾಗಲ್ಲ. ಪ್ರಣಬ್ ಅವರು ಪ್ರಣಬ್ ಅವರಾಗಿಯೇ ಉಳಿಯುತ್ತಾರೆ.  ಆರ್ ಎಸ್‍ಎಸ್  ಆರ್ ಎಸ್‍ಎಸ್ ಆಗಿಯೇ ಉಳಿಯುತ್ತದೆ ಎಂದು ಹೇಳಿದರು.

    ವಿವಿಧತೆಯಲ್ಲಿ ಏಕತೆಯನ್ನು ನಾವು ಬಹಳ ವರ್ಷಗಳಿಂದಲೂ ಅನುಸರಿಸುತ್ತಿದ್ದೇವೆ. ನಾವು ಭಾರತೀಯರು. ದೇಶವನ್ನು ಸಂಘಟಿಸುವುದೇ ನಮ್ಮ ಗುರಿ. ಹಾಗಾಗಿ ನಾವು ದೇಶಕ್ಕಾಗಿ ಬೇರೆ ಬೇರೆ ರೀತಿಯಲ್ಲಿ ಸೇವೆ ಸಲ್ಲಿಸಿದವರನ್ನು ನಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇವೆ ಎಂದು ಸ್ಪಷ್ಟೀಕರಣ ನೀಡಿದರು.

     

  • ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಭಾಗಿ – ಅಸಮಾಧಾನ ಹೊರಹಾಕಿದ ಪುತ್ರಿ

    ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಭಾಗಿ – ಅಸಮಾಧಾನ ಹೊರಹಾಕಿದ ಪುತ್ರಿ

    ನವದೆಹಲಿ: ಮಾಜಿ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ಪುತ್ರಿ ಶರ್ಮಿಷ್ಠ ಮುಖರ್ಜಿ ಟ್ವಿಟ್ಟರ್ ನಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಣಬ್ ಮುಖರ್ಜಿ ಅವರ ಭೇಟಿಯನ್ನು ಈಗಾಗಲೇ ತಮ್ಮ ಸಿದ್ದಾಂತಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಆರ್ ಎಸ್‍ಎಸ್ ಹಾಗೂ ಸಂಘ ಪರಿವಾರ ಬಿಂಬಿಸಿದೆ. ಸಮಾರಂಭದಲ್ಲಿನ ಭಾಷಣ ಬಹುಬೇಗ ಮರೆತು ಹೋಗುತ್ತದೆ. ಆದರೆ ಈ ದೃಶ್ಯಗಳು ಮಾಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

    ಮತ್ತೊಂದು ಟ್ವೀಟ್ ನಲ್ಲಿ ನಾಗಪುರದ ಈ ಭೇಟಿ ಹಲವು ಸುಳ್ಳು, ವದಂತಿಗಳನ್ನು ಹರಡುವುದಕ್ಕೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದೆ. ಈ ನಡೆ ಹೆಚ್ಚು ಕಾಲ ಪರಿಣಾಮ ಬೀರಲಿದ್ದು, ಇದು ಆರಂಭ ಮಾತ್ರ ಎಂದು ಟ್ವೀಟ್ ಮಾಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

    ಇಂದು ನಡೆಯಲಿರುವ ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಣಬ್ ಮುಖರ್ಜಿ ಅವರು ಈಗಾಗಲೇ ನಾಗಪುರಕ್ಕೆ ಆಗಮಿಸಿದ್ದಾರೆ. ಆದರೆ ಪ್ರಣಬ್ ಅವರ ಈ ನಿರ್ಧಾರಕ್ಕೆ ಹಲವು ಕಾಂಗ್ರೆಸ್ ನಾಯಕರು ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ಹೊರಹಾಕಿದರು.

    ಪ್ರಣಬ್ ಅವರ ನಿರ್ಧಾರ ಕುರಿತು ಸೋನಿಯಾ ಅವರ ಆಪ್ತ ವಲಯದಲ್ಲಿ ಗುರುತಿಸಿ ಕೊಂಡಿದ್ದ ಕಾಂಗ್ರೆಸ್ ಮುಖಂಡ ಅಹಮದ್ ಪಟೇಲ್ ಸಹ ಟ್ವೀಟ್ ಮಾಡಿ ಪ್ರಣಬ್ ದಾ ಅವರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ. ಇವೆಲ್ಲವುಗಳ ನಡುವೆಯೂ ಮಾಜಿ ರಾಷ್ಟ್ರಪತಿಗಳು ಕಾರ್ಯಕ್ರಮದಲ್ಲಿ ಭಾವಹಿಸುತ್ತಿದ್ದು, ಸಮಾರಂಭದಲ್ಲಿ ಅವರು ಮಾಡುವ ಭಾಷಣ ಕುತೂಹಲಕ್ಕೆ ಕಾರಣವಾಗಿದೆ.

    ಕಥಕ್ ನೃತ್ಯಪಟು ಆಗಿರುವ ಶರ್ಮಿಷ್ಠಾ ಮುಖರ್ಜಿ 2014ರಲ್ಲಿ ಕಾಂಗ್ರೆಸ್ ಸೇರಿದ್ದು, 2015ರಲ್ಲಿ ದೆಹಲಿಯ ಗ್ರೇಟರ್ ಕೈಲಾಸ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಆಪ್ ಅಭ್ಯರ್ಥಿ ವಿರುದ್ಧ ಸೋತು ಮೂರನೇ ಸ್ಥಾನ ಪಡೆದಿದ್ದರು. ಪ್ರಸ್ತುತ ದೆಹಲಿಯ ಕಾಂಗ್ರೆಸ್ಸಿನ ವಕ್ತಾರೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಪ್ರಧಾನ ಕಚೇರಿ ನಾಗ್ಪುರದಲ್ಲಿ ಸ್ವಯಂಸೇವಕರಿಗೆ ನಡೆಸುವ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಪ್ರಣಬ್ ಮುಖರ್ಜಿ ಅವರನ್ನು ಆರ್ ಎಸ್‍ಎಸ್ ಆಹ್ವಾನಿಸಿದೆ. 25 ದಿನಗಳ ಶಿಕ್ಷಾ ವರ್ಗ ಜೂನ್ 7ರಂದು ಮುಕ್ತಾಯವಾಗಲಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಣಬ್ ಮುಖರ್ಜಿ ಒಪ್ಪಿಗೆ ನೀಡಿರುವುದು ಎಲ್ಲರ ಹುಬ್ಬೇರಿಸಿದೆ.

     

  • ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗಿ: ಕೊನೆಗೂ ಮೌನ ಮುರಿದ ಪ್ರಣಬ್ ಮುಖರ್ಜಿ

    ಆರ್ ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗಿ: ಕೊನೆಗೂ ಮೌನ ಮುರಿದ ಪ್ರಣಬ್ ಮುಖರ್ಜಿ

    ನವದೆಹಲಿ: ಜೂನ್ 7 ರಂದು ನಾಗ್ಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಹೇಳಿದ್ದಾರೆ.

    ಕಾರ್ಯಕ್ರಮಕ್ಕೆ ಹೋಗದಂತೆ ಹಲವಾರು ಕಾಂಗ್ರೆಸ್ ನಾಯಕರುಗಳಿಂದ ಪತ್ರಗಳು ಫೋನ್ ಕರೆಗಳು ಬಂದಿದೆ ಎಂದು ತಿಳಿಸಿದ ಅವರು ನಾಗ್ಪುರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಏನು ಹೇಳಬೇಕೋ ಅದನ್ನು ಅಲ್ಲೇ ಹೇಳುತ್ತೇನೆ ಖಡಕ್ ಆಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಹಿಂದೂ ರಾಷ್ಟ್ರವನ್ನು ನಿರ್ಮಾಣ ಮಾಡಲು ಹೊರಟಿರುವ ಆರ್‍ಎಸ್‍ಎಸ್ ಸಿದ್ದಾಂತ ಬೇರೆ ಕಾಂಗ್ರೆಸ್ ಸಿದ್ದಾಂತ ಬೇರೆ ಎಂದು ಕೇರಳ ವಿರೋಧ ಪಕ್ಷದ ಕಾಂಗ್ರೆಸ್ ನಾಯಕ ಚೆನ್ನಿತ್ತಲ ಅವರು ಪ್ರಣಬ್ ಮುಖರ್ಜಿ ಭಾಗವಹಿಸುವುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜೀವನ ಪೂರ್ತಿ ನಮಗೆ ಮಾರ್ಗದರ್ಶಕರಾಗಿದ್ದ ಪ್ರಣಬ್ ಮುಖರ್ಜಿ ಅವರು ಈಗ ಯಾಕೆ ಆರ್‍ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈ ರಾಮ್ ರಮೇಶ್ ಪ್ರಶ್ನೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಆರ್‍ಎಸ್‍ಎಸ್ ಸಿದ್ದಾಂತದಲ್ಲಿರುವ ತಪ್ಪುಗಳನ್ನು ಮಾತನಾಡಬೇಕು ಎಂದು ಪಿ ಚಿದಂಬರಂ ಹೇಳಿದ್ದಾರೆ.

    ಕೈ ನಾಯಕರ ಟೀಕೆಗೆ ಆರ್‍ಎಸ್‍ಎಸ್ ಒಂದು ರಾಷ್ಟ್ರೀಯವಾದಿಗಳ ಸಂಘವೇ ಹೊರತು ಐಎಸ್‍ಐ ಅಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರತಿಕ್ರಿಯಿಸಿದ್ದಾರೆ.

    ಪ್ರಣಬ್ ಅವರು ಆರ್‍ಎಸ್‍ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ, ಮುಖರ್ಜಿ ಅವರು ಕಾಂಗ್ರೆಸ್ ಪದವಿ ಬಳಿಕ ರಾಜಕೀಯ ತೊರೆದಿದ್ದಾರೆ. ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅವರ ವೈಯಕ್ತಿಕ ನಂಬಿಕೆ, ನಿಲುವಿಗೆ ಸಂಬಂಧಿಸಿದೆ. ಅವರು ಕಳೆದ 50 ವರ್ಷಗಳಿಂದ ತಮ್ಮ ರಾಜಕೀಯ ಜೀವನದ ತತ್ವ ಸಿದ್ಧಾಂತಗಳು ಹಾಗೂ ಸದ್ಯದ ಹೇಳಿಕೆಗಳಿಗೂ ಹೋಲಿಕೆ ಮಾಡಬಹುದು ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಭಾಗಿ – ಯಾರು, ಏನು ಹೇಳಿದ್ರು?

    ಈ ಕುರಿತು ಪ್ರಣಬ್ ಅವರಿಗೆ ಪಾತ್ರ ಬರೆದಿರುವ ಕಾಂಗ್ರೆಸ್ ಹಿರಿಯ ನಾಯಕ ಸಿಕೆ ಜಾಫರ್ ಷರೀಫ್ ಅವರು, ದಶಕಗಳ ಕಾಲದ ಜಾತ್ಯತೀತ ರಾಜಕಾರಣ ಬಳಿಕ ತಾವು ತೆಗೆದುಕೊಂಡಿರುವ ನಿರ್ಧಾರ ಅಚ್ಚರಿಯನ್ನು ಉಂಟು ಮಾಡಿದ್ದು, ಲೋಕಸಭಾ ಚುನಾವಣೆ ವೇಳೆಯಲ್ಲಿ ಆರ್‍ಎಸ್‍ಎಸ್ ಆಹ್ವಾನ ಮನ್ನಿಸಿರುವುದು ಉತ್ತಮ ಎನಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

    ಜೂನ್ 7ರಂದು ಪ್ರಧಾನ ಕಚೇರಿ ನಾಗ್ಪುರದಲ್ಲಿ ಸ್ವಯಂಸೇವಕರಿಗೆ ನಡೆಸುವ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಪ್ರಣಬ್ ಮುಖರ್ಜಿ ಅವರನ್ನು ಆರ್‍ಎಸ್‍ಎಸ್ ಆಹ್ವಾನಿಸಿದೆ. 25 ದಿನಗಳ ಶಿಕ್ಷಾ ವರ್ಗ ಜೂನ್ 7ರಂದು ಮುಕ್ತಾಯವಾಗಲಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಣಬ್ ಮುಖರ್ಜಿ ಒಪ್ಪಿಗೆ ನೀಡಿರುವುದು ಎಲ್ಲರ ಹುಬ್ಬೇರಿಸಿದೆ.

  • ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಭಾಗಿ – ಯಾರು, ಏನು ಹೇಳಿದ್ರು?

    ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಭಾಗಿ – ಯಾರು, ಏನು ಹೇಳಿದ್ರು?

    ನವದೆಹಲಿ: ಮಾಜಿ ರಾಷ್ಟಪತಿ ಪ್ರಣಬ್ ಮುಖರ್ಜಿ ಅವರು ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡಲಿದ್ದು, ಆದರೆ ಈ ಕುರಿತು ರಾಷ್ಟ್ರ ನಾಯಕರು ತಮ್ಮದೇ ಹೇಳಿಕೆ ನೀಡಿದ್ದಾರೆ.

    ಜೂನ್ 7ರಂದು ಪ್ರಧಾನ ಕಚೇರಿ ನಾಗ್ಪುರದಲ್ಲಿ ಸ್ವಯಂಸೇವಕರಿಗೆ ನಡೆಸುವ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಪ್ರಣಬ್ ಮುಖರ್ಜಿ ಅವರನ್ನು ಆರ್‌ಎಸ್‌ಎಸ್‌ ಆಹ್ವಾನಿಸಿದೆ. 25 ದಿನಗಳ ಶಿಕ್ಷಾ ವರ್ಗ ಜೂನ್ 7ರಂದು ಮುಕ್ತಾಯವಾಗಲಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಣಬ್ ಮುಖರ್ಜಿ ಒಪ್ಪಿಗೆ ನೀಡಿರುವುದು ಎಲ್ಲರ ಹುಬ್ಬೇರಿಸಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ಟಾಮ್ ವಡಕ್ಕನ್ ಕಾಂಗ್ರೆಸ್ ಹಾಗೂ ಆರ್ ಎಸ್‍ಎಸ್ ಸಿದ್ಧಾಂತಗಳಿಗೆ ಭಾರೀ ವ್ಯತ್ಯಾಸವಿದ್ದು, ಈ ಕುರಿತು ಸದ್ಯ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

    ಪ್ರಣಬ್ ಅವರು ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ, ಮುಖರ್ಜಿ ಅವರು ಕಾಂಗ್ರೆಸ್ ಪದವಿ ಬಳಿಕ ರಾಜಕೀಯ ತೊರೆದಿದ್ದಾರೆ. ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅವರ ವಯಕ್ತಿಕ ನಂಬಿಕೆ, ನಿಲುವಿಗೆ ಸಂಬಂಧಿಸಿದೆ. ಅವರು ಕಳೆದ 50 ವರ್ಷಗಳಿಂದ ತಮ್ಮ ರಾಜಕೀಯ ಜೀವನದ ತತ್ವ ಸಿದ್ಧಾಂತಗಳು ಹಾಗೂ ಸದ್ಯದ ಹೇಳಿಕೆಗಳಿಗೂ ಹೋಲಿಕೆ ಮಾಡಬಹುದು ಎಂದು ತಿಳಿಸಿದ್ದಾರೆ.

    ಈ ಕುರಿತು ಪ್ರಣಬ್ ಅವರಿಗೆ ಪಾತ್ರ ಬರೆದಿರುವ ಕಾಂಗ್ರೆಸ್ ಹಿರಿಯ ನಾಯಕ ಸಿಕೆ ಜಾಫರ್ ಷರೀಫ್ ಅವರು, ದಶಕಗಳ ಕಾಲದ ಜಾತ್ಯತೀತ ರಾಜಕಾರಣ ಬಳಿಕ ತಾವು ತೆಗೆದುಕೊಂಡಿರುವ ನಿರ್ಧಾರ ಅಚ್ಚರಿಯನ್ನು ಉಂಟು ಮಾಡಿದ್ದು, ಲೋಕಸಭಾ ಚುನಾವಣೆ ವೇಳೆಯಲ್ಲಿ ಆರ್‌ಎಸ್‌ಎಸ್‌ ಆಹ್ವಾನ ಮನ್ನಿಸಿರುವುದು ಉತ್ತಮ ಎನಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

    ಮತ್ತೊಂದೆಡೆ ಮಾಜಿ ರಾಷ್ಟ್ರಪತಿಗಳ ನಿರ್ಧಾರವನ್ನು ಸಮರ್ಥಿಸಿರುವ ಹಿರಿಯ ನಾಯಕ ಎಚ್ ಆರ್ ಭಾರದ್ವಾಜ್ ಪ್ರಣಬ್‍ರ ತೀರ್ಮಾವನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಪ್ರಣಬ್ ಅವರ ನಡೆ ಉತ್ತಮ ರಾಜಕೀಯ ಬೆಳವಣಿಗೆಗೆ ಕಾರಣವಾಗಿದ್ದು, ರಾಜಕೀಯ ಅಸ್ಪೃಶ್ಯತೆ ಸದ್ಯದ ಸ್ಥಿತಿಯಲ್ಲಿ ಅಪ್ರಸ್ತುತ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

  • 14ನೇ ರಾಷ್ಟ್ರಪತಿಯಾಗಿ  ಪ್ರಮಾಣವಚನ ಸ್ವೀಕರಿಸಿದ ರಾಮನಾಥ್ ಕೋವಿಂದ್

    14ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ರಾಮನಾಥ್ ಕೋವಿಂದ್

    ನವದೆಹಲಿ: 14ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈಶ್ವರನ ಹೆಸರಿನಲ್ಲಿ ಸಂವಿಧಾನ ಬದ್ಧವಾಗಿ, ನಿಷ್ಪಕ್ಷಪಾತವಾಗಿ ಅಧಿಕಾರವನ್ನು ನಿರ್ವಹಣೆ ಮಾಡುತ್ತೇನೆ ಎಂದು ಕೋವಿಂದ್ ಪ್ರಮಾಣ ವಚನ ಸ್ವೀಕರಿಸಿದರು.

    ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಜೊತೆ ಸೆಂಟ್ರಲ್ ಭವನಕ್ಕೆ ಆಗಮಿಸಿದ ಕೋವಿಂದ್ ಅವರಿಗೆ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಜಿಎಸ್. ಖೇಹರ್ ಪ್ರಮಾಣವಚನ ಬೋಧಿಸಿದರು.

    ಪ್ರಮಾಣವಚನ ಸ್ವೀಕಾರದ ಬಳಿಕ ಸಂಸತ್ ಆವರಣದ ಹೊರಗೆ ರಕ್ಷಣಾ ಸಿಬ್ಬಂದಿ 21 ಸುತ್ತು ಕುಶಾಲು ತೋಪು ಸಿಡಿಸಿ ಮೂಲಕ ನೂತನ ರಾಷ್ಟ್ರಪತಿಗಳಿಗೆ ಗೌರವ ಸಲ್ಲಿಕೆ ಮಾಡಿದರು.

    ತಮ್ಮ ಭಾಷಣದಲ್ಲಿ ಕೋವಿಂದ್, ರಾಷ್ಟ್ರಪತಿಯಂತಹ ಹುದ್ದೆಯನ್ನು ನೀಡಿದ್ದಕ್ಕೆ ಎಲ್ಲರಿಗೂ ಧನ್ಯವಾದ. ರಾಜೇಂದ್ರ ಸಿಂಗ್ ಬಾಬು ಅವರಿಂದ ಹಿಡಿದು ಪ್ರಣಬ್ ಮುಖರ್ಜಿಯಂತದ ದೊಡ್ಡ ನಾಯಕರು ಈ ಹುದ್ದೆಯನ್ನು ಏರಿದ್ದಾರೆ. 125 ಕೋಟಿ ಜನರ ಪ್ರತಿನಿಧಿಯಾಗಿರುವ ನನಗೆ ಈ ಹುದ್ದೆಯ ಮಹತ್ವ ತಿಳಿದಿದೆ ಎಂದು ಹೇಳಿದರು.

    ಈ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಹಮಿದ್ ಅನ್ಸಾರಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಕೇಂದ್ರ ಸಚಿವರು, ರಾಜ್ಯಪಾಲರು, ರಾಯಭಾರಿಗಳು, ಸಂಸದರು ಮತ್ತು ಹಿರಿಯ ನಾಗರಿಕ ಮತ್ತು ಮಿಲಿಟರಿ ಅಧಿಕಾರಿಗಳು ಉಪಸ್ಥಿತರಿದ್ದರು.

     

     

  • ಭಾರತದ 14ನೇ ರಾಷ್ಟ್ರಪತಿ ಯಾರಾಗ್ತಾರೆ – ಸಂಜೆ ವೇಳೆಗೆ ಸಿಗಲಿದೆ ಮತ ಎಣಿಕೆಯ ಉತ್ತರ

    ಭಾರತದ 14ನೇ ರಾಷ್ಟ್ರಪತಿ ಯಾರಾಗ್ತಾರೆ – ಸಂಜೆ ವೇಳೆಗೆ ಸಿಗಲಿದೆ ಮತ ಎಣಿಕೆಯ ಉತ್ತರ

    ಬೆಂಗಳೂರು: ಭಾರತದ 14ನೇ ರಾಷ್ಟ್ರಪತಿ ಆಯ್ಕೆಯ ಮತ ಎಣಿಕೆ ಇಂದು ನಡೆಯಲಿದ್ದು, ಸಂಜೆ ವೇಳೆಗೆ ರಾಷ್ಟ್ರಪತಿ ಯಾರು ಅನ್ನೋ ಕುತೂಹಲಕ್ಕೆ ತೆರೆ ಬೀಳಲಿದೆ.

    ರಾಷ್ಟ್ರಪತಿಯಾಗಿ ಎನ್‍ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಆಯ್ಕೆ ಬಹುತೇಕ ಖಚಿತವಾಗಿದ್ದು, ವಿರೋಧ ಪಕ್ಷಗಳ ಅಭ್ಯರ್ಥಿ ಮೀರಾಕುಮಾರ್ ಅಚ್ಚರಿ ರೀತಿಯಲ್ಲಿ ಗೆದ್ದು ಬರ್ತಾರ ಅನ್ನೋ ಕುತೂಹಲವೂ ಇದೆ. ಜುಲೈ 17ರಂದು ಮತದಾನ ನಡೆದಿದ್ದು ಸಂಸತ್ ಸೇರಿ ಒಟ್ಟು 32 ಮತಕೇಂದ್ರಗಳ ಸ್ಥಾಪನೆ ಮಾಡಲಾಗಿತ್ತು.

    ಶೇಕಡ 99ರಷ್ಟು ಮತದಾನ ನಡೆದಿತ್ತು. ಒಟ್ಟು 4,896 ಮತ ಚಲಾವಣೆಯಾಗಿದ್ದು, 4,120 ಶಾಸಕರು ಹಾಗೂ 776 ಸಂಸದರು ಮತ ಚಲಾಯಿಸಿದ್ದಾರೆ. ಪ್ರತಿ ಸಂಸದರ ಮತಮೌಲ್ಯ 708 ಆಗಿದ್ದು, ಒಟ್ಟು ಮತಗಳ ಮೌಲ್ಯ 5 ಲಕ್ಷದ 49 ಸಾವಿರದ 408 ಆಗಿದೆ. 4,120 ಶಾಸಕರ ಮತಗಳ ಮೌಲ್ಯ ಒಗ್ಗೂಡಿಸಿದಾಗ ಒಟ್ಟು 5 ಲಕ್ಷದ 49 ಸಾವಿರದ 474 ಆಗುತ್ತದೆ.

    ಬೆಳಗ್ಗೆ 11 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು ಆಲ್ಫಬೆಟ್ ಪ್ರಕಾರ ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಪ್ರಕ್ರಿಯೆ 4 ಹಂತದಲ್ಲಿ 8 ರೌಂಡ್‍ಗಳಲ್ಲಿ ನಡೆಯಲಿದೆ. ಗೆದ್ದ ಪ್ರಥಮ ಪ್ರಜೆ ಸೋಮವಾರ ಅಂದ್ರೆ 24ರಂದು ಅಧಿಕಾರಕ್ಕೆ ಏರಲಿದ್ದಾರೆ. ಈಗಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ದೆಹಲಿಯ 10 ರಾಜಾಜಿ ಮಾರ್ಗ್‍ನಲ್ಲಿ ಇನ್ಮುಂದೆ ವಾಸ್ತವ್ಯ ಹೂಡಲಿದ್ದಾರೆ.

     

     

  • ಕಂಬಳ ಕ್ರೀಡೆಗೆ ಗ್ರೀನ್ ಸಿಗ್ನಲ್: ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಸಹಿ

    ಕಂಬಳ ಕ್ರೀಡೆಗೆ ಗ್ರೀನ್ ಸಿಗ್ನಲ್: ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಸಹಿ

     

    ನವದೆಹಲಿ: ಕರಾವಳಿ ಕ್ರೀಡೆ ಕಂಬಳಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ರಾಜ್ಯ ಸರ್ಕಾರ ಕಳುಹಿಸಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಹಿ‌ಹಾಕಿದ್ದಾರೆ.

    ಸಹಿ ಬಿದ್ದ ಕಾರಣ ಕಂಬಳವನ್ನು ಯಥಾ ಪ್ರಕಾರ ಮುಂದು ವರಿಸುವ ರಾಜ್ಯ ಸರಕಾರದ “ಕಂಬಳ ತಿದ್ದುಪಡಿ ಮಸೂದೆ’ಗೆ ಎದುರಾಗಿದ್ದ ಎಲ್ಲ ಕಾನೂನು ಅಡೆತಡೆಗಳು ದೂರವಾಗಿದೆ.

    ಪ್ರಾಣಿ ಹಿಂಸೆ ತಡೆ (ಕರ್ನಾಟಕ ತಿದ್ದುಪಡಿ)ಮಸೂದೆ-2017 ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದು ಫೆ.7ರಂದು ರಾಜ್ಯಪಾಲರ ಒಪ್ಪಿಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ಅದನ್ನು ಫೆ.23ರಂದು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದರು. ಪ್ರಾಣಿ ಹಿಂಸೆ ವಿಚಾರವಾಗಿ ಮಸೂದೆಯಲ್ಲಿ ಬಳಸಿದ ಪದವೊಂದು ಸೂಕ್ತವಲ್ಲದ ಕಾರಣ ಕಾನೂನು ಸಚಿವಾಲಯ ವಿಧೇಯಕಕ್ಕೆ ತನ್ನ ಒಪ್ಪಿಗೆ ನೀಡಿರಲಿಲ್ಲ.

    ಈ ಮಸೂದೆಯನ್ನು ಪುನರ್ ಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರ ಮತ್ತೆ ರಾಜ್ಯ ಸರ್ಕಾರಕ್ಕೆ ಕಳುಹಿಸಿತ್ತು. ರಾಜ್ಯ ಸರ್ಕಾರ ಕೆಲ ಮಾರ್ಪಾಡುಗಳನ್ನು ಮಾಡಿ ಕಳುಹಿಸಿದ್ದ ಮಸೂದೆಗೆ ಗೃಹಸಚಿವ ರಾಜನಾಥ್ ಸಿಂಗ್ ಜೂನ್ 29ರಂದು ಸಹಿ ಹಾಕಿದ್ದರು.

    https://youtu.be/Klbxs_37mBI